Bhishma Parva: Chapter 10

ಭೀಷ್ಮ ಪರ್ವ: ಜಂಬೂಖಂಡವಿನಿರ್ಮಾಣ ಪರ್ವ

೧೦

ಭಾರತದ ನದೀ-ದೇಶಗಳ ವರ್ಣನೆ (೧-೭೪).

Image result for mahabharata06010001 ಧೃತರಾಷ್ಟ್ರ ಉವಾಚ|

06010001a ಯದಿದಂ ಭಾರತಂ ವರ್ಷಂ ಯತ್ರೇದಂ ಮೂರ್ಚಿತಂ ಬಲಂ|

06010001c ಯತ್ರಾತಿಮಾತ್ರಂ ಲುಬ್ಧೋಽಯಂ ಪುತ್ರೋ ದುರ್ಯೋಧನೋ ಮಮ||

06010002a ಯತ್ರ ಗೃದ್ಧಾಃ ಪಾಂಡುಸುತಾ ಯತ್ರ ಮೇ ಸಜ್ಜತೇ ಮನಃ|

06010002c ಏತನ್ಮೇ ತತ್ತ್ವಮಾಚಕ್ಷ್ವ ಕುಶಲೋ ಹ್ಯಸಿ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಎಲ್ಲಿ ಈ ಬುದ್ಧಿಯಿಲ್ಲದ ಬಲವು ಸೇರಿದೆಯೋ, ಯಾವುದರ ಆಸೆಯಿಂದ ನನ್ನ ಮಗ ದುರ್ಯೋಧನನು ಪ್ರಯತ್ನಿಸುತ್ತಿದ್ದಾನೋ, ಯಾವುದನ್ನು ಪಡೆಯಲು ಪಾಂಡುಸುತರು ಆಸೆಪಡುತ್ತಿದ್ದಾರೋ, ಎಲ್ಲಿ ನನ್ನ ಮನಸ್ಸು ಕುಸಿಯುತ್ತದೋ ಈ ಭಾರತ ವರ್ಷದ ಕುರಿತು ನನಗೆ ಹೇಳು. ಇದರಲ್ಲಿ ನೀನು ಕುಶಲನಾಗಿದ್ದೀಯೆ.”

06010003 ಸಂಜಯ ಉವಾಚ|

06010003a ನ ತತ್ರ ಪಾಂಡವಾ ಗೃದ್ಧಾಃ ಶೃಣು ರಾಜನ್ವಚೋ ಮಮ|

06010003c ಗೃದ್ಧೋ ದುರ್ಯೋಧನಸ್ತತ್ರ ಶಕುನಿಶ್ಚಾಪಿ ಸೌಬಲಃ||

ಸಂಜಯನು ಹೇಳಿದನು[1]: “ರಾಜನ್! ಇದರಲ್ಲಿ ಪಾಂಡವರು ಆಸೆಪಡುತ್ತಿಲ್ಲ. ನನ್ನ ಮಾತನ್ನು ಕೇಳು. ಇದರಲ್ಲಿ ಸೌಬಲ ಶಕುನಿ ಮತ್ತು ದುರ್ಯೋಧನರು ಆಸೆಪಡುತ್ತಿದ್ದಾರೆ.

06010004a ಅಪರೇ ಕ್ಷತ್ರಿಯಾಶ್ಚಾಪಿ ನಾನಾಜನಪದೇಶ್ವರಾಃ|

06010004c ಯೇ ಗೃದ್ಧಾ ಭಾರತೇ ವರ್ಷೇ ನ ಮೃಷ್ಯಂತಿ ಪರಸ್ಪರಂ||

ಇತರ ನಾನಾ ಜಪದೇಶ್ವರ ಕ್ಷತ್ರಿಯರೂ ಕೂಡ ಭಾರತವರ್ಷವನ್ನು ಬಯಸಿ ಪರಸ್ಪರರನ್ನು ದ್ವೇಷಿಸುತ್ತಾರೆ.

06010005a ಅತ್ರ ತೇ ವರ್ಣಯಿಷ್ಯಾಮಿ ವರ್ಷಂ ಭಾರತ ಭಾರತಂ|

06010005c ಪ್ರಿಯಂ ಇಂದ್ರಸ್ಯ ದೇವಸ್ಯ ಮನೋರ್ವೈವಸ್ವತಸ್ಯ ಚ||

06010006a ಪೃಥೋಶ್ಚ ರಾಜನ್ವೈನ್ಯಸ್ಯ ತಥೇಕ್ಷ್ವಾಕೋರ್ಮಹಾತ್ಮನಃ|

06010006c ಯಯಾತೇರಂಬರೀಷಸ್ಯ ಮಾಂಧಾತುರ್ನಹುಷಸ್ಯ ಚ||

06010007a ತಥೈವ ಮುಚುಕುಂದಸ್ಯ ಶಿಬೇರೌಶೀನರಸ್ಯ ಚ|

06010007c ಋಷಭಸ್ಯ ತಥೈಲಸ್ಯ ನೃಗಸ್ಯ ನೃಪತೇಸ್ತಥಾ||

ಭಾರತ! ರಾಜನ್! ಈಗ ನಾನು ನಿನಗೆ ಭಾರತ ವರ್ಷವನ್ನು ವರ್ಣಿಸುತ್ತೇನೆ. ಇದು ದೇವ ಇಂದ್ರನಿಗೆ, ವೈವಸ್ವತ ಮನುವಿಗೆ, ವೈನ್ಯನ ಮಗ ಪೃಥುವಿಗೆ, ಮಹಾತ್ಮ ಇಕ್ಷ್ವಾಕುವಿಗೆ, ಯಯಾತಿಗೆ, ಅಂಬರೀಷನಿಗೆ, ಮಾಂಧಾತನಿಗೆ, ನಹುಷನಿಗೆ, ಹಾಗೆಯೇ ಮುಚುಕುಂದನಿಗೆ, ಶಿಬಿ ಔಶೀನರನಿಗೆ, ಋಷಭನಿಗೆ, ಇಲನಿಗೆ, ಮತ್ತು ನೃಪತಿ ನೃಗನಿಗೆ ಪ್ರಿಯವಾದುದು.

06010008a ಅನ್ಯೇಷಾಂ ಚ ಮಹಾರಾಜ ಕ್ಷತ್ರಿಯಾಣಾಂ ಬಲೀಯಸಾಂ|

06010008c ಸರ್ವೇಷಾಮೇವ ರಾಜೇಂದ್ರ ಪ್ರಿಯಂ ಭಾರತ ಭಾರತಂ||

ಮಹಾರಾಜ! ರಾಜೇಂದ್ರ! ಭಾರತ! ಇನ್ನೂ ಇತರ ಬಲಶಾಲಿ ಕ್ಷತ್ರಿಯರೆಲ್ಲರಿಗೂ ಭಾರತವು ಪ್ರಿಯವಾದುದು.

06010009a ತತ್ತೇ ವರ್ಷಂ ಪ್ರವಕ್ಷ್ಯಾಮಿ ಯಥಾಶ್ರುತಮರಿಂದಮ|

06010009c ಶೃಣು ಮೇ ಗದತೋ ರಾಜನ್ಯನ್ಮಾಂ ತ್ವಂ ಪರಿಪೃಚ್ಛಸಿ||

ರಾಜನ್! ಅರಿಂದಮ! ಆ ವರ್ಷದ ಕುರಿತು ಕೇಳಿದಹಾಗೆ ನಿನಗೆ ಹೇಳುತ್ತೇನೆ. ನೀನು ಕೇಳಿದುದಕ್ಕೆ ನಾನು ಏನು ಹೇಳುತ್ತೀನೋ ಅದನ್ನು ಕೇಳು.

06010010a ಮಹೇಂದ್ರೋ ಮಲಯಃ ಸಹ್ಯಃ ಶುಕ್ತಿಮಾನೃಕ್ಷವಾನಪಿ|

06010010c ವಿಂಧ್ಯಶ್ಚ ಪಾರಿಯಾತ್ರಶ್ಚ ಸಪ್ತೈತೇ ಕುಲಪರ್ವತಾಃ||

ಮಹೇಂದ್ರ, ಮಲಯ, ಸಹ್ಯ, ಶುಕ್ತಿಮಾನ, ಋಕ್ಷವಾನ್, ವಿಂಧ್ಯ, ಪಾರಿಯಾತ್ರ ಈ ಏಳು ಕುಲಪರ್ವತಗಳು.

06010011a ತೇಷಾಂ ಸಹಸ್ರಶೋ ರಾಜನ್ಪರ್ವತಾಸ್ತು ಸಮೀಪತಃ|

06010011c ಅಭಿಜ್ಞಾತಾಃ ಸಾರವಂತೋ ವಿಪುಲಾಶ್ಚಿತ್ರಸಾನವಃ||

ರಾಜನ್! ಅವುಗಳ ಸಮೀಪದಲ್ಲಿ ಸಹಸ್ರಾರು ತಿಳಿಯದೇ ಇರುವ, ಸಾರವಂತ, ವಿಪುಲ ಚಿತ್ರ ಕಣಿವೆಗಳುಳ್ಳ ಪರ್ವತಗಳಿವೆ.

06010012a ಅನ್ಯೇ ತತೋಽಪರಿಜ್ಞಾತಾ ಹ್ರಸ್ವಾ ಹ್ರಸ್ವೋಪಜೀವಿನಃ|

06010012c ಆರ್ಯಾ ಮ್ಲೇಚ್ಛಾಶ್ಚ ಕೌರವ್ಯ ತೈರ್ಮಿಶ್ರಾಃ ಪುರುಷಾ ವಿಭೋ||

ಕೌರವ್ಯ! ವಿಭೋ! ಇನ್ನೂ ಇತರ ಸಣ್ಣ ಪರ್ವತಗಳಿವೆ - ಇವುಗಳ ಮೇಲೆ ಸಣ್ಣ ಮನುಷ್ಯರು ವಾಸಿಸುತ್ತಾರೆ. ಭಾರತವರ್ಷದಲ್ಲಿ ಆರ್ಯರು, ಮ್ಲೇಚ್ಛರು, ಮತ್ತು ಅವರಿಬ್ಬರ ಸಂಪರ್ಕದಿಂದ ಹುಟ್ಟಿದ ಮಿಶ್ರ ಜನರು ಕೂಡ ಇದ್ದಾರೆ.

06010013a ನದೀಃ ಪಿಬಂತಿ ಬಹುಲಾ ಗಂಗಾಂ ಸಿಂಧುಂ ಸರಸ್ವತೀಂ|

06010013c ಗೋದಾವರೀಂ ನರ್ಮದಾಂ ಚ ಬಾಹುದಾಂ ಚ ಮಹಾನದೀಂ||

06010014a ಶತದ್ರುಂ ಚಂದ್ರಭಾಗಾಂ ಚ ಯಮುನಾಂ ಚ ಮಹಾನದೀಂ|

06010014c ದೃಷದ್ವತೀಂ ವಿಪಾಶಾಂ ಚ ವಿಪಾಪಾಂ ಸ್ಥೂಲವಾಲುಕಾಂ||

06010015a ನದೀಂ ವೇತ್ರವತೀಂ ಚೈವ ಕೃಷ್ಣವೇಣಾಂ ಚ ನಿಮ್ನಗಾಂ|

06010015c ಇರಾವತೀಂ ವಿತಸ್ತಾಂ ಚ ಪಯೋಷ್ಣೀಂ ದೇವಿಕಾಮಪಿ||

06010016a ವೇದಸ್ಮೃತಿಂ ವೇತಸಿನೀಂ ತ್ರಿದಿವಾಂ ಇಷ್ಕುಮಾಲಿನೀಂ|

06010016c ಕರೀಷಿಣೀಂ ಚಿತ್ರವಹಾಂ ಚಿತ್ರಸೇನಾಂ ಚ ನಿಮ್ನಗಾಂ||

06010017a ಗೋಮತೀಂ ಧೂತಪಾಪಾಂ ಚ ವಂದನಾಂ ಚ ಮಹಾನದೀಂ|

06010017c ಕೌಶಿಕೀಂ ತ್ರಿದಿವಾಂ ಕೃತ್ಯಾಂ ವಿಚಿತ್ರಾಂ ಲೋಹತಾರಿಣೀಂ||

06010018a ರಥಸ್ಥಾಂ ಶತಕುಂಭಾಂ ಚ ಸರಯೂಂ ಚ ನರೇಶ್ವರ|

06010018c ಚರ್ಮಣ್ವತೀಂ ವೇತ್ರವತೀಂ ಹಸ್ತಿಸೋಮಾಂ ದಿಶಂ ತಥಾ||

06010019a ಶತಾವರೀಂ ಪಯೋಷ್ಣೀಂ ಚ ಪರಾಂ ಭೈಮರಥೀಂ ತಥಾ|

06010019c ಕಾವೇರೀಂ ಚುಲುಕಾಂ ಚಾಪಿ ವಾಪೀಂ ಶತಬಲಾಮಪಿ||

06010020a ನಿಚೀರಾಂ ಮಹಿತಾಂ ಚಾಪಿ ಸುಪ್ರಯೋಗಾಂ ನರಾಧಿಪ|

06010020c ಪವಿತ್ರಾಂ ಕುಂಡಲಾಂ ಸಿಂಧುಂ ವಾಜಿನೀಂ ಪುರಮಾಲಿನೀಂ||

06010021a ಪೂರ್ವಾಭಿರಾಮಾಂ ವೀರಾಂ ಚ ಭೀಮಾಂ ಓಘವತೀಂ ತಥಾ|

06010021c ಪಲಾಶಿನೀಂ ಪಾಪಹರಾಂ ಮಹೇಂದ್ರಾಂ ಪಿಪ್ಪಲಾವತೀಂ||

06010022a ಪಾರಿಷೇಣಾಮಸಿಕ್ನೀಂ ಚ ಸರಲಾಂ ಭಾರಮರ್ದಿನೀಂ|

06010022c ಪುರುಹೀಂ ಪ್ರವರಾಂ ಮೇನಾಂ ಮೋಘಾಂ ಘೃತವತೀಂ ತಥಾ||

06010023a ಧೂಮತ್ಯಾಮತಿಕೃಷ್ಣಾಂ ಚ ಸೂಚೀಂ ಚಾವೀಂ ಚ ಕೌರವ|

06010023c ಸದಾನೀರಾಮಧೃಷ್ಯಾಂ ಚ ಕುಶಧಾರಾಂ ಮಹಾನದೀಂ||

06010024a ಶಶಿಕಾಂತಾಂ ಶಿವಾಂ ಚೈವ ತಥಾ ವೀರವತೀಮಪಿ|

06010024c ವಾಸ್ತುಂ ಸುವಾಸ್ತುಂ ಗೌರೀಂ ಚ ಕಂಪನಾಂ ಸಹಿರಣ್ವತೀಂ||

06010025a ಹಿರಣ್ವತೀಂ ಚಿತ್ರವತೀಂ ಚಿತ್ರಸೇನಾಂ ಚ ನಿಮ್ನಗಾಂ|

06010025c ರಥಚಿತ್ರಾಂ ಜ್ಯೋತಿರಥಾಂ ವಿಶ್ವಾಮಿತ್ರಾಂ ಕಪಿಂಜಲಾಂ||

06010026a ಉಪೇಂದ್ರಾಂ ಬಹುಲಾಂ ಚೈವ ಕುಚರಾಮಂಬುವಾಹಿನೀಂ|

06010026c ವೈನಂದೀಂ ಪಿಂಜಲಾಂ ವೇಣ್ಣಾಂ ತುಂಗವೇಣಾಂ ಮಹಾನದೀಂ||

06010027a ವಿದಿಶಾಂ ಕೃಷ್ಣವೇಣ್ಣಾಂ ಚ ತಾಮ್ರಾಂ ಚ ಕಪಿಲಾಮಪಿ|

06010027c ಶಲುಂ ಸುವಾಮಾಂ ವೇದಾಶ್ವಾಂ ಹರಿಸ್ರಾವಾಂ ಮಹಾಪಗಾಂ||

06010028a ಶೀಘ್ರಾಂ ಚ ಪಿಚ್ಛಿಲಾಂ ಚೈವ ಭಾರದ್ವಾಜೀಂ ಚ ನಿಮ್ನಗಾಂ|

06010028c ಕೌಶಿಕೀಂ ನಿಮ್ನಗಾಂ ಶೋಣಾಂ ಬಾಹುದಾಮಥ ಚಂದನಾಂ||

06010029a ದುರ್ಗಾಮಂತಃಶಿಲಾಂ ಚೈವ ಬ್ರಹ್ಮಮೇಧ್ಯಾಂ ಬೃಹದ್ವತೀಂ|

06010029c ಚರಕ್ಷಾಂ ಮಹಿರೋಹೀಂ ಚ ತಥಾ ಜಂಬುನದೀಮಪಿ||

06010030a ಸುನಸಾಂ ತಮಸಾಂ ದಾಸೀಂ ತ್ರಸಾಮನ್ಯಾಂ ವರಾಣಸೀಂ|

06010030c ಲೋಲೋದ್ಧೃತಕರಾಂ ಚೈವ ಪೂರ್ಣಾಶಾಂ ಚ ಮಹಾನದೀಂ||

06010031a ಮಾನವೀಂ ವೃಷಭಾಂ ಚೈವ ಮಹಾನದ್ಯೋ ಜನಾಧಿಪ|

06010031c ಸದಾನಿರಾಮಯಾಂ ವೃತ್ಯಾಂ ಮಂದಗಾಂ ಮಂದವಾಹಿನೀಂ||

06010032a ಬ್ರಹ್ಮಾಣೀಂ ಚ ಮಹಾಗೌರೀಂ ದುರ್ಗಾಮಪಿ ಚ ಭಾರತ|

06010032c ಚಿತ್ರೋಪಲಾಂ ಚಿತ್ರಬರ್ಹಾಂ ಮಂಜುಂ ಮಕರವಾಹಿನೀಂ||

06010033a ಮಂದಾಕಿನೀಂ ವೈತರಣೀಂ ಕೋಕಾಂ ಚೈವ ಮಹಾನದೀಂ|

06010033c ಶುಕ್ತಿಮತೀಮರಣ್ಯಾಂ ಚ ಪುಷ್ಪವೇಣ್ಯುತ್ಪಲಾವತೀಂ||

06010034a ಲೋಹಿತ್ಯಾಂ ಕರತೋಯಾಂ ಚ ತಥೈವ ವೃಷಭಂಗಿನೀಂ|

06010034c ಕುಮಾರೀಂ ಋಷಿಕುಲ್ಯಾಂ ಚ ಬ್ರಹ್ಮಕುಲ್ಯಾಂ ಚ ಭಾರತ||

06010035a ಸರಸ್ವತೀಃ ಸುಪುಣ್ಯಾಶ್ಚ ಸರ್ವಾ ಗಂಗಾಶ್ಚ ಮಾರಿಷ|

06010035c ವಿಶ್ವಸ್ಯ ಮಾತರಃ ಸರ್ವಾಃ ಸರ್ವಾಶ್ಚೈವ ಮಹಾಬಲಾಃ||

ಇಲ್ಲಿಯವರು ಬಹಳಷ್ಟು ನದಿಗಳ ನೀರನ್ನು ಕುಡಿಯುತ್ತಾರೆ - ಗಂಗಾ, ಸಿಂಧು, ಸರಸ್ವತೀ, ಗೋದಾವರೀ, ನರ್ಮದಾ, ಬಾಹುದಾ, ಮಹಾನದೀ, ಶತದ್ರು, ಚಂದ್ರಭಾಗಾ, ಮಹಾನದೀ ಯಮುನಾ, ದೃಷಧ್ವತೀ, ವಿಪಾಶಾ, ವಿಪಾಪಾ, ಸ್ಥೂಲವಾಲುಕಾ, ನದೀ ವೇತ್ರವತೀ, ಕೃಷ್ಣವೇಣಾ, ಇರಾವತೀ, ವಿತಸ್ತಾ, ಪಯೋಷ್ಣೀ, ದೇವಿಕಾ, ವೇದಸ್ಮೃತಿ, ವೇತಸಿನಿ, ತ್ರಿದಿವಾ, ಇಷ್ಕುಮಾಲಿನೀ, ಕರೀಷಿಣೀ, ಚಿತ್ರವಹಾ, ಚಿತ್ರಸೇನಾ, ಗೋಮತೀ, ಧೂತಪಾಪಾ, ವಂದನಾ, ಮಹಾನದೀ ಕೌಶಿಕೀ, ತ್ರಿದಿವಾ, ಕೃತ್ಯಾ, ವಿಚಿತಾ, ಲೋಹತಾರಿಣೀ, ರಥಸ್ಥಾ, ಶತಕುಂಭಾ, ಸರಯೂ, ಚರ್ಮಣ್ವತೀ, ವೇತ್ರವತೀ, ಹಸ್ತಿಸೋಮಾ, ದಿಶ, ಶತಾವರೀ, ಪಯೋಷ್ಣೀ, ಪರಾ, ಭೈಮರಥೀ, ಕಾವೇರೀ, ಚುಲುಕಾ, ವಾಪೀ, ಶತಬಲಾ, ನಿಚೀರಾ, ಮಹಿತಾ, ಸುಪ್ರಯೋಗಾ, ಪವಿತ್ರಾ, ಕುಂಡಲಾ, ಸಿಂಧು, ವಾಜಿನೀ, ಪುರಮಾಲಿನೀ, ಪೂರಾಭಿರಾಮಾ, ವೀರಾ, ಭೀಮಾ, ಓಘವತೀ, ಪಲಾಶಿನೀ, ಪಾಪಹರಾ, ಮಹೇಂದ್ರಾ, ಪಿಪ್ಪಲಾವತೀ, ಪಾರಿಷೇಣ, ಅಸಿಕ್ನೀ, ಸರಲಾ, ಭಾರಮರ್ದಿನೀ, ಪುರುಹೀ, ಪ್ರವರಾ, ಮೇನಾ, ಮೋಘಾ, ಘೃತವತೀ, ಧೂಪತ್ಯಾಮತಿ, ಕೃಷ್ಣಾ, ಸೂಚೀ, ಚಾವೀ, ಸದಾನೀ, ರಾಮಧೃಷ್ಯಾಂ, ಕುಶಧಾರಾಂ, ಮಹಾನದೀ ಶಶಿಕಾಂತಾ, ಶಿವಾ, ವೀರವತೀ, ವಾಸ್ತು, ಸುವಾಸ್ತು, ಗೌರೀ, ಕಂಪನಾ, ಹಿರಣ್ವತೀ, ಚಿತ್ರವತೀ, ಚಿತ್ರಸೇನಾ, ರಥಚಿತ್ರಾ, ಜ್ಯೋತಿರಥಾ, ವಿಶ್ವಾಮಿತ್ರಾ, ಕಪಿಂಜಲಾ, ಉಪೇಂದ್ರಾ, ಬಹುಲಾ, ಕುಚರಾ, ಅಂಬುವಾಹಿನೀ, ವೈನಂದೀ, ಪಿಂಜಲಾ, ವೇಣ್ಣಾ, ತಾಮ್ರಾ, ಕಪಿಲಾ, ಶಲು, ಸುವಾಮ, ವೇದಾಶ್ವಾ, ಹರಿಸ್ರಾವಾ, ಮಹಾಪಗಾ, ಶೀಘ್ರಾ, ಪಿಚ್ಛಿಲಾ, ಭಾರದ್ವಾಜೀ, ಕೌಶಿಕೀ, ಶೋಣಾ, ಬಾಹುದಾ, ಚಂದನಾ, ದುರ್ಗಾ, ಅಂತಃಶಿಲಾ, ಬ್ರಹ್ಮಮೇಧ್ಯಾ, ಬೃಹದ್ವತೀ, ಚರಕ್ಷಾ, ಮಹಿರೋಹೀ, ಜಂಬುನದೀ, ಸುನಸಾ, ತಪಸಾ, ದಾಸೀ, ತ್ರಸಾಮನ್ಯಾ, ವರಾಣಸೀ, ಲೋಲೋಧೃತಕರಾ, ಪೂರ್ಣಾಶಾ, ಮಹಾನದೀ ಮಾನವೀ, ವೃಷಭಾ, ಮಹಾನದೀ ಸದಾನಿರಾಮಯಾ, ವೃತ್ಯಾ, ಮಂದಗಾ, ಮಂದವಾಹಿನೀ, ಬ್ರಹ್ಮಾಣೀ, ಮಹಾಗೌರೀ, ದುರ್ಗಾ, ಚಿತ್ರೋಪಲಾ, ಚಿತ್ರಬರ್ಹಾ, ಮಂಜು, ಮಕರವಾಹಿನೀ, ಮಂದಾಕಿನೀ, ವೈತರಣೀ, ಕೋಕಾ, ಮಹಾನದೀ, ಶುಕ್ತಿಮತೀ, ಅರಣ್ಯಾ, ಪುಷ್ಪವೇಣೀ, ಉತ್ಪಲಾವತೀ, ಲೋಹಿತಾ, ಕರತೋಯಾ, ವೃಷಭಂಗಿನೀ, ಕುಮಾರೀ, ಋಷಿಕುಲ್ಯಾ, ಬ್ರಹ್ಮಕುಲ್ಯಾ, ಸರಸ್ವತೀ, ಸುಪುಣ್ಯಾ, ಸರ್ವಾ, ಮತ್ತು ವಿಶ್ವ ಮಾತರ, ಗಂಗಾ - ಎಲ್ಲದಕ್ಕೆ ಎಲ್ಲವೂ ಮಹಾಬಲ ನದಿಗಳು.

06010036a ತಥಾ ನದ್ಯಸ್ತ್ವಪ್ರಕಾಶಾಃ ಶತಶೋಽಥ ಸಹಸ್ರಶಃ|

06010036c ಇತ್ಯೇತಾಃ ಸರಿತೋ ರಾಜನ್ಸಮಾಖ್ಯಾತಾ ಯಥಾಸ್ಮೃತಿ||

ರಾಜನ್! ಇನ್ನೂ ನೂರಾರು ಸಹಸ್ರಾರು ನದಿಗಳು ಕಾಣಿಸಿಕೊಳ್ಳುತ್ತವೆ. ಈ ನದಿಗಳು ಸ್ಮೃತಿಗಳಲ್ಲಿ ಹೇಳಿರುವಂತೆ ಮುಖ್ಯವಾದವುಗಳು.

06010037a ಅತ ಊರ್ಧ್ವಂ ಜನಪದಾನ್ನಿಬೋಧ ಗದತೋ ಮಮ|

06010037c ತತ್ರೇಮೇ ಕುರುಪಾಂಚಾಲಾಃ ಶಾಲ್ವಮಾದ್ರೇಯಜಾಂಗಲಾಃ||

06010038a ಶೂರಸೇನಾಃ ಕಲಿಂಗಾಶ್ಚ ಬೋಧಾ ಮೌಕಾಸ್ತಥೈವ ಚ|

06010038c ಮತ್ಸ್ಯಾಃ ಸುಕುಟ್ಯಃ ಸೌಬಲ್ಯಾಃ ಕುಂತಲಾಃ ಕಾಶಿಕೋಶಲಾಃ||

06010039a ಚೇದಿವತ್ಸಾಃ ಕರೂಷಾಶ್ಚ ಭೋಜಾಃ ಸಿಂಧುಪುಲಿಂದಕಾಃ|

06010039c ಉತ್ತಮೌಜಾ ದಶಾರ್ಣಾಶ್ಚ ಮೇಕಲಾಶ್ಚೋತ್ಕಲೈಃ ಸಹ||

06010040a ಪಾಂಚಾಲಾಃ ಕೌಶಿಜಾಶ್ಚೈವ ಏಕಪೃಷ್ಠಾ ಯುಗಂಧರಾಃ|

06010040c ಸೌಧಾ ಮದ್ರಾ ಭುಜಿಂಗಾಶ್ಚ ಕಾಶಯೋಽಪರಕಾಶಯಃ||

06010041a ಜಠರಾಃ ಕುಕ್ಕುಶಾಶ್ಚೈವ ಸುದಾಶಾರ್ಣಾಶ್ಚ ಭಾರತ|

06010041c ಕುಂತಯೋಽವಂತಯಶ್ಚೈವ ತಥೈವಾಪರಕುಂತಯಃ||

06010042a ಗೋವಿಂದಾ ಮಂದಕಾಃ ಷಂಡಾ ವಿದರ್ಭಾನೂಪವಾಸಿಕಾಃ|

06010042c ಅಶ್ಮಕಾಃ ಪಾಂಸುರಾಷ್ಟ್ರಾಶ್ಚ ಗೋಪರಾಷ್ಟ್ರಾಃ ಪನೀತಕಾಃ||

06010043a ಆದಿರಾಷ್ಟ್ರಾಃ ಸುಕುಟ್ಟಾಶ್ಚ ಬಲಿರಾಷ್ಟ್ರಂ ಚ ಕೇವಲಂ|

06010043c ವಾನರಾಸ್ಯಾಃ ಪ್ರವಾಹಾಶ್ಚ ವಕ್ರಾ ವಕ್ರಭಯಾಃ ಶಕಾಃ||

06010044a ವಿದೇಹಕಾ ಮಾಗಧಾಶ್ಚ ಸುಃಮಾಶ್ಚ ವಿಜಯಾಸ್ತಥಾ|

06010044c ಅಂಗಾ ವಂಗಾಃ ಕಲಿಂಗಾಶ್ಚ ಯಕೃಲ್ಲೋಮಾನ ಏವ ಚ||

06010045a ಮಲ್ಲಾಃ ಸುದೇಷ್ಣಾಃ ಪ್ರಾಹೂತಾಸ್ತಥಾ ಮಾಹಿಷಕಾರ್ಷಿಕಾಃ|

06010045c ವಾಹೀಕಾ ವಾಟಧಾನಾಶ್ಚ ಆಭೀರಾಃ ಕಾಲತೋಯಕಾಃ||

06010046a ಅಪರಂಧ್ರಾಶ್ಚ ಶೂದ್ರಾಶ್ಚ ಪಹ್ಲವಾಶ್ಚರ್ಮಖಂಡಿಕಾಃ|

06010046c ಅಟವೀಶಬರಾಶ್ಚೈವ ಮರುಭೌಮಾಶ್ಚ ಮಾರಿಷ||

06010047a ಉಪಾವೃಶ್ಚಾನುಪಾವೃಶ್ಚಸುರಾಷ್ಟ್ರಾಃ ಕೇಕಯಾಸ್ತಥಾ|

06010047c ಕುಟ್ಟಾಪರಾಂತಾ ದ್ವೈಧೇಯಾಃ ಕಾಕ್ಷಾಃ ಸಾಮುದ್ರನಿಷ್ಕುಟಾಃ||

06010048a ಅಂಧ್ರಾಶ್ಚ ಬಹವೋ ರಾಜನ್ನಂತರ್ಗಿರ್ಯಾಸ್ತಥೈವ ಚ|

06010048c ಬಹಿರ್ಗಿರ್ಯಾಂಗಮಲದಾ ಮಾಗಧಾ ಮಾನವರ್ಜಕಾಃ||

06010049a ಮಹ್ಯುತ್ತರಾಃ ಪ್ರಾವೃಷೇಯಾ ಭಾರ್ಗವಾಶ್ಚ ಜನಾಧಿಪ|

06010049c ಪುಂಡ್ರಾ ಭಾರ್ಗಾಃ ಕಿರಾತಾಶ್ಚ ಸುದೋಷ್ಣಾಃ ಪ್ರಮುದಾಸ್ತಥಾ||

06010050a ಶಕಾ ನಿಷಾದಾ ನಿಷಧಾಸ್ತಥೈವಾನರ್ತನೈರೃತಾಃ|

06010050c ದುಗೂಲಾಃ ಪ್ರತಿಮತ್ಸ್ಯಾಶ್ಚ ಕುಶಲಾಃ ಕುನಟಾಸ್ತಥಾ||

06010051a ತೀರಗ್ರಾಹಾಸ್ತರತೋಯಾ ರಾಜಿಕಾ ರಸ್ಯಕಾಗಣಾಃ|

06010051c ತಿಲಕಾಃ ಪಾರಸೀಕಾಶ್ಚ ಮಧುಮಂತಃ ಪ್ರಕುತ್ಸಕಾಃ||

06010052a ಕಾಶ್ಮೀರಾಃ ಸಿಂಧುಸೌವೀರಾ ಗಾಂಧಾರಾ ದರ್ಶಕಾಸ್ತಥಾ|

06010052c ಅಭೀಸಾರಾ ಕುಲೂತಾಶ್ಚ ಶೈವಲಾ ಬಾಹ್ಲಿಕಾಸ್ತಥಾ||

06010053a ದರ್ವೀಕಾಃ ಸಕಚಾ ದರ್ವಾ ವಾತಜಾಮರಥೋರಗಾಃ|

06010053c ಬಹುವಾದ್ಯಾಶ್ಚ ಕೌರವ್ಯ ಸುದಾಮಾನಃ ಸುಮಲ್ಲಿಕಾಃ||

06010054a ವಧ್ರಾಃ ಕರೀಷಕಾಶ್ಚಾಪಿ ಕುಲಿಂದೋಪತ್ಯಕಾಸ್ತಥಾ|

06010054c ವನಾಯವೋ ದಶಾಪಾರ್ಶ್ವಾ ರೋಮಾಣಃ ಕುಶಬಿಂದವಃ||

06010055a ಕಚ್ಛಾ ಗೋಪಾಲಕಚ್ಛಾಶ್ಚ ಲಾಂಗಲಾಃ ಪರವಲ್ಲಕಾಃ|

06010055c ಕಿರಾತಾ ಬರ್ಬರಾಃ ಸಿದ್ಧಾ ವಿದೇಹಾಸ್ತಾಮ್ರಲಿಂಗಕಾಃ||

06010056a ಓಷ್ಟ್ರಾಃ ಪುಂಡ್ರಾಃ ಸಸೈರಂಧ್ರಾಃ ಪಾರ್ವತೀಯಾಶ್ಚ ಮಾರಿಷ|

06010056c ಅಥಾಪರೇ ಜನಪದಾ ದಕ್ಷಿಣಾ ಭರತರ್ಷಭ||

06010057a ದ್ರವಿಡಾಃ ಕೇರಲಾಃ ಪ್ರಾಚ್ಯಾ ಭೂಷಿಕಾ ವನವಾಸಿನಃ|

06010057c ಉನ್ನತ್ಯಕಾ ಮಾಹಿಷಕಾ ವಿಕಲ್ಪಾ ಮೂಷಕಾಸ್ತಥಾ||

06010058a ಕರ್ಣಿಕಾಃ ಕುಂತಿಕಾಶ್ಚೈವ ಸೌದ್ಭಿದಾ ನಲಕಾಲಕಾಃ|

06010058c ಕೌಕುಟ್ಟಕಾಸ್ತಥಾ ಚೋಲಾಃ ಕೋಂಕಣಾ ಮಾಲವಾಣಕಾಃ||

06010059a ಸಮಂಗಾಃ ಕೋಪನಾಶ್ಚೈವ ಕುಕುರಾಂಗದಮಾರಿಷಾಃ|

06010059c ಧ್ವಜಿನ್ಯುತ್ಸವಸಂಕೇತಾಸ್ತ್ರಿಗರ್ತಾಃ ಸರ್ವಸೇನಯಃ||

06010060a ತ್ರ್ಯಂಗಾಃ ಕೇಕರಕಾಃ ಪ್ರೋಷ್ಠಾಃ ಪರಸಂಚರಕಾಸ್ತಥಾ|

06010060c ತಥೈವ ವಿಂಧ್ಯಪುಲಕಾಃ ಪುಲಿಂದಾಃ ಕಲ್ಕಲೈಃ ಸಹ||

06010061a ಮಾಲಕಾ ಮಲ್ಲಕಾಶ್ಚೈವ ತಥೈವಾಪರವರ್ತಕಾಃ|

06010061c ಕುಲಿಂದಾಃ ಕುಲಕಾಶ್ಚೈವ ಕರಂಠಾಃ ಕುರಕಾಸ್ತಥಾ||

06010062a ಮೂಷಕಾ ಸ್ತನಬಾಲಾಶ್ಚ ಸತಿಯಃ ಪತ್ತಿಪಂಜಕಾಃ|

06010062c ಆದಿದಾಯಾಃ ಸಿರಾಲಾಶ್ಚ ಸ್ತೂಬಕಾ ಸ್ತನಪಾಸ್ತಥಾ||

06010063a ಹೃಷೀವಿದರ್ಭಾಃ ಕಾಂತೀಕಾಸ್ತಂಗಣಾಃ ಪರತಂಗಣಾಃ|

06010063c ಉತ್ತರಾಶ್ಚಾಪರೇ ಮ್ಲೇಚ್ಛಾ ಜನಾ ಭರತಸತ್ತಮ||

06010064a ಯವನಾಶ್ಚ ಸಕಾಂಬೋಜಾ ದಾರುಣಾ ಮ್ಲೇಚ್ಛಜಾತಯಃ|

06010064c ಸಕ್ಷದ್ದ್ರುಹಃ ಕುಂತಲಾಶ್ಚ ಹೂಣಾಃ ಪಾರತಕೈಃ ಸಹ||

06010065a ತಥೈವ ಮರಧಾಶ್ಚೀನಾಸ್ತಥೈವ ದಶಮಾಲಿಕಾಃ|

ಈಗ ಅಲ್ಲಿರುವ ಜನಪದಗಳನ್ನು ಹೇಳುತ್ತೇನೆ. ಕೇಳು. ಅಲ್ಲಿವೆ - ಕುರು, ಪಾಂಚಾಲ, ಶಾಲ್ವ, ಮಾದ್ರೇಯ ಜಾಂಗಲಗಳು, ಶೂರಸೇನರು, ಕಲಿಂಗರು, ಬೋಧಾ-ಮೌಕರು, ಮತ್ಯರು, ಸುಕುಟ್ಟರು, ಸೌಬಲರು, ಕುಂತಲರು, ಕಾಶಿ-ಕೋಶಲರು, ಚೇದಿವತ್ಸರು, ಕರೂಷರು, ಭೋಜರು, ಸಿಂಧು-ಪುಲಿಂದಕರು, ಉತ್ತಮೌಜಸರು, ದಶಾರ್ಣರು, ಮೇಕಲ-ಉತ್ಕಲರು, ಪಾಂಚಾಲರು, ಕೌಶಿಜರು, ಏಕಪೃಷ್ಠರು, ಯುಗಂಧರರು, ಸೌಧರು, ಮದ್ರರು, ಭುಜಿಂಗರು, ಕಾಶಯರು, ಅಪರಕಾಶಯರು, ಜಠರರು, ಕುಕ್ಕುಶರು, ಸುದಾಶಾರ್ಣರು, ಕುಂತಯರು, ಅವಂತಯರು, ಅಪರಕುಂತಯರು, ಗೋವಿಂದರು, ಮಂದಕರು, ಷಂಡರು, ವಿದರ್ಭರು, ಅನೂಪವಾಸಿಕರು, ಅಶ್ಮಕರು, ಪಾಂಸುರಾಷ್ಟ್ರರು, ಗೋಪರಾಷ್ಟ್ರರು, ಪನೀತಕರು, ಆದಿರಾಷ್ಟ್ರರು, ಸುಕುಟ್ಟರು, ಬಲಿರಾಷ್ಟ್ರರು, ಕೇವಲರು, ವಾನರಾಸ್ಯರು, ಪ್ರವಾಹರು, ವಕ್ರರು, ವಕ್ರಭಯರು, ಶಕರು, ವಿದೇಹಕರು, ಮಾಗಧರು, ಸುಹ್ಮಾರು, ವಿಜಯರು, ಅಂಗರು, ವಂಗರು, ಕಲಿಂಗರು, ಯಕೃಲ್ಲೋಮರು, ಮಲ್ಲರು, ಸುದೇಷ್ಣರು, ಪ್ರಾಹೂತರು, ಮಾಹಿಷಕಾರ್ಷಿಕರು, ವಾಹೀಕರು, ವಾಟಧಾನರು, ಆಭೀರರು, ಕಾಲತೋಯಕರು, ಅಪರಂಧ್ರಾರು, ಶೂದ್ರರು, ಪಹ್ಲವರು, ಚರ್ಮಖಂಡಿಕರು, ಅಟವೀಶಬರರು, ಮರುಭೌಮರು, ಉಪವೃಶರು, ಅನುಪಾವೃಶರು, ಸುರಾಷ್ಟ್ರರು, ಕೇಕಯರು, ಕುಟ್ಟಾಪಪರಾಂತರು, ದ್ವೈಧೇಯರು, ಕಾಕ್ಷರು, ಸಾಮುದ್ರನಿಷ್ಕುಟರು, ಆಂಧ್ರರು, ಮತ್ತು ಬಹಳ ಅಂತರ್ಗಿಯರು, ಬಹಿರ್ಗಿಯರು, ಅಂಗಮಲದರು, ಮಾಗಧರು, ಮಾನವರ್ಜಕರು, ಮಹ್ಯುತ್ತರರು, ಪ್ರಾವೃಷೇಯರು, ಭಾರ್ಗವರು, ಪುಂಡ್ರರು, ಭಾರ್ಗರು, ಕಿರಾತರು, ಸುದೋಷ್ಣರು, ಪ್ರಮುದರು, ಶಕರು, ನಿಷಾದರು, ನಿಷಧರು, ಆನರ್ತರು, ನೈರೃತರು, ದುಗೂಲರು, ಪ್ರತಿಮತ್ಸ್ಯರು, ಕುಶಲರು, ಕುನಟರು, ತೀರಗ್ರಾಹರು, ತರತೋಯರು, ರಾಜಿಕರು, ರಸ್ಯಕಾಗಣರು, ತಿಲಕರು, ಪಾರಸೀಕರು, ಮಧುಮಂತ, ಪ್ರಕುತ್ಸಕಾ, ಕಾಶ್ಮೀರರು, ಸಿಂಧುಸೌವೀರರು, ಗಾಂಧಾರರು, ದರ್ಶಕರು, ಅಭೀಸಾರರು, ಕುಲೂತರು, ಶೈವಲರು, ಬಾಹ್ಲಿಕರು, ದರ್ವೀಕರು, ಸಕಚರು, ದರ್ವಾರು, ವಾತಜಾಮರು, ಉರಗರು, ಬಹುವಾದ್ಯಾಶ್ಚ, ಸುದಾಮಾನರು, ಸುಮಲ್ಲಿಕರು, ವಧ್ರರು, ಕುಲಿಂದರು, ಕರೀಷಕರು, ಪತ್ಯಕರು, ವನಾಯವರು, ದಶಾಪಾರ್ಶ್ವರು, ರೋಮಾಣರು, ಕುಶಬಿಂದವರು, ಕಚ್ಛರು, ಗೋಪಲಕಚ್ಛರು, ಲಾಂಗಲರು, ಪರವಲ್ಲಕರು, ಕಿರಾತರು, ಬರ್ಬರರು, ಸಿದ್ಧರು, ವಿದೇಹರು, ತಾಮ್ರಲಿಂಗಕರು, ಓಷ್ಟ್ರರು, ಪುಂಡ್ರರು, ಸೈರಂಧ್ರರು, ಪಾರ್ವತೀಯರು, ಇನ್ನೂ ಇತರ ದಕ್ಷಿಣ ಜನಪದಗಳಾದ ದ್ರವಿಡರು, ಕೇರಲರು, ಪ್ರಾಚ್ಯರು, ಭೂಷಿಕರು, ವನವಾಸಿಗಳು, ಉನ್ನತ್ಯಕರು, ಮಾಹೀಷಕರು, ವಿಕಲ್ಪರು, ಮೂಷಕರು, ಕರ್ಣಿಕರು, ಕುಂತಿಕರು, ಸೌದ್ಭಿದರು, ನಲಕಾಲಕರು, ಕೌಕುಟ್ಟಕರು, ಚೋಲರು, ಕೋಂಕಣರು, ಮಾಲವಾಣಕರು, ಸಮಂಗರು, ಕೋಪನರು, ಕುಕುರಾಂಗದರು, ಧ್ವಜಿಗಳು, ಉತ್ಸವಸಂಕೇತರು, ತ್ರಿಗರ್ತರು, ಸರ್ವಸೇನರು, ತ್ರ್ಯಂಗರು, ಕೇಕರಕರು, ಪ್ರೋಷ್ಠರು, ಪರಸಂಚರಕರು, ವಿಂಧ್ಯಪುಲಕರು, ಪುಲಿಂದರು, ಕಲ್ಕಲರು, ಮಾಲಕರು, ಮಲ್ಲಕರು, ವರ್ತಕರು, ಕುಲಿಂದರು, ಕುಲಕರು, ಕರಣ್ಯರು, ಕುರಕರು, ಮೂಷಕರು, ಸ್ತನಬಾಲರು, ಸತಿಯರು, ಪತ್ತಿಪಂಜಕರು, ಆದಿದಾಯಾರು, ಸಿರಾಲರು, ಸ್ತೂಬಕರು, ಸ್ತನಪಾರು, ಹೃಷೀವಿದರ್ಭರು, ಕಾಂತೀಕಾಸ್ತರು, ಪರತಂಗಣರು, ಮತ್ತು ಉತ್ತರದ ಇತರ ಜನರಾದ ಮ್ಲೇಚ್ಛರು, ಯವನರು, ಕಂಬೋಜರು, ದಾರುಣ ಮ್ಲೇಚ್ಛಜಾತೀಯರು, ಕ್ಷದ್ದ್ರುಹರು, ಕುಂತಲರು, ಹೂಣರು, ಪಾರತಕರು, ಹಾಗೆಯೇ ಮರಧರು, ಚೀನರು, ದಶಮಾಲಿಕರು.

06010065c ಕ್ಷತ್ರಿಯೋಪನಿವೇಶಾಶ್ಚ ವೈಶ್ಯಶೂದ್ರಕುಲಾನಿ ಚ||

06010066a ಶೂದ್ರಾಭೀರಾಥ ದರದಾಃ ಕಾಶ್ಮೀರಾಃ ಪಶುಭಿಃ ಸಹ|

06010066c ಖಶಿಕಾಶ್ಚ ತುಖಾರಾಶ್ಚ ಪಲ್ಲವಾ ಗಿರಿಗಹ್ವರಾಃ||

06010067a ಆತ್ರೇಯಾಃ ಸಭರದ್ವಾಜಾಸ್ತಥೈವ ಸ್ತನಯೋಷಿಕಾಃ|

06010067c ಔಪಕಾಶ್ಚ ಕಲಿಂಗಾಶ್ಚ ಕಿರಾತಾನಾಂ ಚ ಜಾತಯಃ||

06010068a ತಾಮರಾ ಹಂಸಮಾರ್ಗಾಶ್ಚ ತಥೈವ ಕರಭಂಜಕಾಃ|

ಇಲ್ಲಿ ಕ್ಷತ್ರಿಯ, ವೈಶ್ಯ, ಶೂದ್ರ ಕುಲಗಳೂ, ಶೂದ್ರರಾದ ಅಭೀರರು, ದರದರು, ಕಾಶ್ಮೀರರು ಪಶುಗಳೊಂದಿಗೆ ವಾಸಿಸುತ್ತಾರೆ. ಖಶಿಕರೂ, ತುಖರರು, ಪಲ್ಲವರೂ, ಗಿರಿಗಹ್ವರೂ, ಆತ್ರೇಯರು, ಭರದ್ವಾಜರೂ, ಸ್ತನಯೋಷಿಕರೂ, ಔಪಕರೂ, ಕಲಿಂಗರೂ, ಕಿರಾತರ ಜಾತಿಯವರೂ, ತಾಮರರೂ, ಹಂಸಮಾರ್ಗರೂ, ಹಾಗೆಯೇ ಕರಭಂಜಕರೂ ವಾಸಿಸುತ್ತಾರೆ.

06010068c ಉದ್ದೇಶಮಾತ್ರೇಣ ಮಯಾ ದೇಶಾಃ ಸಂಕೀರ್ತಿತಾಃ ಪ್ರಭೋ||

06010069a ಯಥಾಗುಣಬಲಂ ಚಾಪಿ ತ್ರಿವರ್ಗಸ್ಯ ಮಹಾಫಲಂ|

06010069c ದುಃಯೇದ್ಧೇನುಃ ಕಾಮಧುಕ್ಚ ಭೂಮಿಃ ಸಮ್ಯಗನುಷ್ಠಿತಾ||

ಪ್ರಭೋ! ಈ ದೇಶಗಳ ಕುರಿತು ನಾನು ನಿನಗೆ ವರ್ಣಿಸಿದ್ದೇನೆ. ಅದರ ಗುಣ ಮತ್ತು ಬಲಗಳಂತೆ ಸರಿಯಾಗಿ ಅಭಿವೃದ್ಧಿಗೊಳಿಸಿದರೆ ಈ ಭೂಮಿಯು ಕಾಮಧೇನುವನ್ನು ಹಾಲುಕರೆದರೆ ಹೇಗೋ ಹಾಗೆ ತ್ರಿವರ್ಗದ ಮಹಾಫಲವನ್ನು ಕೊಡುತ್ತದೆ.

06010070a ತಸ್ಯಾಂ ಗೃಧ್ಯಂತಿ ರಾಜಾನಃ ಶೂರಾ ಧರ್ಮಾರ್ಥಕೋವಿದಾಃ|

06010070c ತೇ ತ್ಯಜಂತ್ಯಾಹವೇ ಪ್ರಾಣಾನ್ರಸಾಗೃದ್ಧಾಸ್ತರಸ್ವಿನಃ||

ಅವಳನ್ನು ಧರ್ಮಾರ್ಥಕೋವಿದರಾದ ಶೂರ ರಾಜರು ಬಯಸುತ್ತಿದ್ದಾರೆ. ಅದರ ರಸವನ್ನು ಆಶಿಸಿ ಆ ತರಸ್ವಿಗಳು ರಣದಲ್ಲಿ ಪ್ರಾಣಗಳನ್ನು ತ್ಯಜಿಸುತ್ತಾರೆ.

06010071a ದೇವಮಾನುಷಕಾಯಾನಾಂ ಕಾಮಂ ಭೂಮಿಃ ಪರಾಯಣಂ|

06010071c ಅನ್ಯೋನ್ಯಸ್ಯಾವಲುಂಪಂತಿ ಸಾರಮೇಯಾ ಇವಾಮಿಷಂ||

06010072a ರಾಜಾನೋ ಭರತಶ್ರೇಷ್ಠ ಭೋಕ್ತುಕಾಮಾ ವಸುಂಧರಾಂ|

06010072c ನ ಚಾಪಿ ತೃಪ್ತಿಃ ಕಾಮಾನಾಂ ವಿದ್ಯತೇ ಚೇಹ ಕಸ್ಯ ಚಿತ್||

ಭೂಮಿಯು ದೇವ-ಮನುಷ್ಯ ಕಾಯದಲ್ಲಿರುವವರ ಬಯಕೆ ಮತ್ತು ಪರಾಯಣ[2]. ಭರತಶ್ರೇಷ್ಠ!  ವಸುಂಧರೆಯನ್ನು ಭೋಗಿಸಲು ಬಯಸಿ ರಾಜರು ಆಮಿಷಕ್ಕೆ ಹೊಡೆದಾಡುವ ನಾಯಿಗಳಂತೆ ಅನ್ಯೋನ್ಯರಲ್ಲಿ ಕಚ್ಚಾಡುತ್ತಿದ್ದಾರೆ. ಅವರ ಆಸೆಗಳಿಗೆ ತೃಪ್ತಿಯೆಂಬುದೇ ಇಲ್ಲ.

06010073a ತಸ್ಮಾತ್ಪರಿಗ್ರಹೇ ಭೂಮೇರ್ಯತಂತೇ ಕುರುಪಾಂಡವಾಃ|

06010073c ಸಾಮ್ನಾ ದಾನೇನ ಭೇದೇನ ದಂಡೇನೈವ ಚ ಪಾರ್ಥಿವ||

ಪಾರ್ಥಿವ! ಆದುದರಿಂದ ಕುರು-ಪಾಂಡವರು ಈ ಭೂಮಿಯನ್ನು ಪಡೆಯಲು ಸಾಮ, ದಾನ, ಭೇದ ಮತ್ತು ದಂಡಗಳನ್ನು ಬಳಸಿ ಪ್ರಯತ್ನಿಸುತ್ತಿದ್ದಾರೆ.

06010074a ಪಿತಾ ಮಾತಾ ಚ ಪುತ್ರಶ್ಚ ಖಂ ದ್ಯೌಶ್ಚ ನರಪುಂಗವ|

06010074c ಭೂಮಿರ್ಭವತಿ ಭೂತಾನಾಂ ಸಮ್ಯಗಚ್ಛಿದ್ರದರ್ಶಿನೀ||

ನರಪುಂಗವ! ಸಂಪೂರ್ಣವಾಗಿ ಮತ್ತು ಚೆನ್ನಾಗಿ ಪರಿಪಾಲಿಸಲ್ಪಟ್ಟರೆ[3] ಭೂಮಿಯು ಇರುವವುಗಳ ತಂದೆ, ತಾಯಿ, ಪುತ್ರ, ಆಕಾಶ ಮತ್ತು ಸ್ವರ್ಗವಾಗುತ್ತದೆ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಭಾರತೀಯನದೀದೇಶಾನಿನಾಮಕಥನೇ ದಶಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಭಾರತೀಯನದೀದೇಶಾನಿನಾಮಕಥನ ಎನ್ನುವ ಹತ್ತನೇ ಅಧ್ಯಾಯವು.

Image result for indian motifs earth

[1] “ಯತ್ರ ಗೃದ್ಧಾಃ ಪಾಂಡುಸುತಾ” - ಯಾವುದರಲ್ಲಿ ಪಾಂಡವರು ಆಸೆಯನ್ನಿಟ್ಟಿದ್ದಾರೋ ಎಂಬ ಧೃತರಾಷ್ಟ್ರನ ಮಾತು ಸಂಜಯನಿಗೆ ಹಿಡಿಸಲಿಲ್ಲ. ಅದನ್ನು ಅಲ್ಲಗಳೆದು ಹೇಳುತ್ತಾನೆ.

[2] ದೇವ-ಮಾನವರಿಬ್ಬರಿಗೂ ವಿಶೇಷವಾಗಿ ಈ ಭೂಮಿಯೇ ಆಶ್ರಯಸ್ಥಾನವಾಗಿದೆ. ಹವಿರ್ಭುಜರಾದ ದೇವತೆಗಳು ಭೂಮಿಯಲ್ಲಿ ನಡೆಯುವ ಯಜ್ಞ-ಯಾಗಾದಿಗಳಿಂದ ಹವಿಸ್ಸನ್ನು ಪಡೆಯುತ್ತಾರೆ.

[3] “ಸಮ್ಯಗಚ್ಛಿದ್ರದರ್ಶಿನೀ” ಎನ್ನುವುದಕ್ಕೆ “ಭೂಮಿಯ ನಿಜಸ್ವರೂಪವೇನೆಂದು ಏಕಾಗ್ರತೆಯಿಂದ ಪರಿಶೀಲಿಸಿದರೆ” ಎಂದೂ ಅರ್ಥೈಸಿದ್ದಾರೆ [ಭಾರತ ದರ್ಶನ, ಸಂ. ೧೨, ಪು.೮೮]

Comments are closed.