Aranyaka Parva: Chapter 160

ಆರಣ್ಯಕ ಪರ್ವ: ಯಕ್ಷಯುದ್ಧ ಪರ್ವ

೧೬೦

ಮಂದರ-ಮೇರು ದರ್ಶನ

ಧೌಮ್ಯನು ಯುಧಿಷ್ಠಿರನಿಗೆ ಮಂದರ, ಮೇರು ಪರ್ವತಗಳನ್ನು ತೋರಿಸಿ ವಿವರಿಸುವುದು (೧-೩೭).

03160001 ವೈಶಂಪಾಯನ ಉವಾಚ|

03160001a ತತಃ ಸೂರ್ಯೋದಯೇ ಧೌಮ್ಯಃ ಕೃತ್ವಾಹ್ನಿಕಮರಿಂದಮ|

03160001c ಆರ್ಷ್ಟಿಷೇಣೇನ ಸಹಿತಃ ಪಾಂಡವಾನಭ್ಯವರ್ತತ||

ವೈಶಂಪಾಯನನು ಹೇಳಿದನು: “ಅರಿಂದಮ! ಅನಂತರ ಸೂರ್ಯೋದಯದಲ್ಲಿ ಆಹ್ನೀಕವನ್ನು ಪೂರೈಸಿ ಧೌಮ್ಯನು ಆರ್ಷ್ಟಿಷೇಣನೊಂದಿಗೆ ಪಾಂಡವರಲ್ಲಿಗೆ ಬಂದನು.

03160002a ತೇಽಭಿವಾದ್ಯಾರ್ಷ್ಟಿಷೇಣಸ್ಯ ಪಾದೌ ಧೌಮ್ಯಸ್ಯ ಚೈವ ಹ|

03160002c ತತಃ ಪ್ರಾಂಜಲಯಃ ಸರ್ವೇ ಬ್ರಾಹ್ಮಣಾಂಸ್ತಾನಪೂಜಯನ್||

ಅವರು ಆರ್ಷ್ಟಿಷೇಣನ ಮತ್ತು ಧೌಮ್ಯನ ಪಾದಗಳಿಗೆ ವಂದಿಸಿ, ಕೈಜೋಡಿಸಿ ಅಲ್ಲಿದ್ದ ಬ್ರಾಹ್ಮಣರೆಲ್ಲರಿಗೂ ನಮಸ್ಕರಿಸಿದರು.

03160003a ತತೋ ಯುಧಿಷ್ಠಿರಂ ಧೌಮ್ಯೋ ಗೃಹೀತ್ವಾ ದಕ್ಷಿಣೇ ಕರೇ|

03160003c ಪ್ರಾಚೀಂ ದಿಶಮಭಿಪ್ರೇಕ್ಷ್ಯ ಮಹರ್ಷಿರಿದಮಬ್ರವೀತ್||

ಆಗ ಮಹರ್ಷಿ ಧೌಮ್ಯನು ಯುಧಿಷ್ಠಿರನ ಬಲಗೈಯನ್ನು ಹಿಡಿದು ಪೂರ್ವದಿಕ್ಕನ್ನು ನೋಡುತ್ತಾ ಹೇಳಿದನು:

03160004a ಅಸೌ ಸಾಗರಪರ್ಯಂತಾಂ ಭೂಮಿಮಾವೃತ್ಯ ತಿಷ್ಠತಿ|

03160004c ಶೈಲರಾಜೋ ಮಹಾರಾಜ ಮಂದರೋಽಭಿವಿರಾಜತೇ||

“ಮಹಾರಾಜ! ಅದು ಸಾಗರಪರ್ಯಂತದ ಭೂಮಿಯನ್ನು ಆವರಿಸಿ ವಿರಾಜಿಸಿ ನಿಂತಿರುವ ಶೈಲರಾಜ ಮಂದರ!

03160005a ಇಂದ್ರವೈಶ್ರವಣಾವೇತಾಂ ದಿಶಂ ಪಾಂಡವ ರಕ್ಷತಃ|

03160005c ಪರ್ವತೈಶ್ಚ ವನಾಂತೈಶ್ಚ ಕಾನನೈಶ್ಚೋಪಶೋಭಿತಾಂ||

ಪಾಂಡವ! ಇಂದ್ರ ಮತ್ತು ವೈಶ್ರವಣರು ಪರ್ವತ, ವನ ಕಾನನಗಳಿಂದ ಶೋಭಿತ ಈ ದಿಕ್ಕನ್ನು ರಕ್ಷಿಸುತ್ತಾರೆ.

03160006a ಏತದಾಹುರ್ಮಹೇಂದ್ರಸ್ಯ ರಾಜ್ಞೋ ವೈಶ್ರವಣಸ್ಯ ಚ|

03160006c ಋಷಯಃ ಸರ್ವಧರ್ಮಜ್ಞಾಃ ಸದ್ಮ ತಾತ ಮನೀಷಿಣಃ||

ಮಗೂ! ಇದು ಮಹೇಂದ್ರ ಮತ್ತು ರಾಜ ವೈಶ್ರವಣನ ಪೀಠವೆಂದು ಸರ್ವಧರ್ಮಗಳನ್ನು ತಿಳಿದ ಬುದ್ಧಿವಂತ ಋಷಿಗಳು ಹೇಳಿದ್ದಾರೆ.

03160007a ಅತಶ್ಚೋದ್ಯಂತಮಾದಿತ್ಯಮುಪತಿಷ್ಠಂತಿ ವೈ ಪ್ರಜಾಃ|

03160007c ಋಷಯಶ್ಚಾಪಿ ಧರ್ಮಜ್ಞಾಃ ಸಿದ್ಧಾಃ ಸಾಧ್ಯಾಶ್ಚ ದೇವತಾಃ||

ಇಲ್ಲಿಂದ ಉದಯಿಸುವ ಆದಿತ್ಯನನ್ನು ಪ್ರಜೆಗಳು, ಋಷಿಗಳು, ಧರ್ಮಜ್ಞರು, ಸಿದ್ಧರು, ಸಾಧ್ಯರು ಮತ್ತು ದೇವತೆಗಳೂ ಕೂಡ ಪೂಜಿಸುತ್ತಾರೆ.

03160008a ಯಮಸ್ತು ರಾಜಾ ಧರ್ಮಾತ್ಮಾ ಸರ್ವಪ್ರಾಣಭೃತಾಂ ಪ್ರಭುಃ|

03160008c ಪ್ರೇತಸತ್ತ್ವಗತೀಮೇತಾಂ ದಕ್ಷಿಣಾಮಾಶ್ರಿತೋ ದಿಶಂ||

ಎಲ್ಲ ಜೀವಿಗಳ ಪ್ರಭು, ಧರ್ಮಾತ್ಮ ಯಮರಾಜನು ಪ್ರೇತಸತ್ವಗಳ ದಾರಿಯಾದ ಈ ದಕ್ಷಿಣ ದಿಕ್ಕನ್ನು ಪಾಲಿಸುತ್ತಾನೆ.

03160009a ಏತತ್ಸಮ್ಯಮನಂ ಪುಣ್ಯಮತೀವಾದ್ಭುತದರ್ಶನಂ|

03160009c ಪ್ರೇತರಾಜಸ್ಯ ಭವನಮೃದ್ಧ್ಯಾ ಪರಮಯಾ ಯುತಂ||

ಇದು ಪುಣ್ಯ, ಅತೀವ ಅದ್ಭುತವಾಗಿ ಕಾಣುವ, ಪರಮ ಐಶ್ವರ್ಯದಿಂದ ಕೂಡಿದ ಪ್ರೇತರಾಜನ ಭವನ ಸಂಯಮನ.

03160010a ಯಂ ಪ್ರಾಪ್ಯ ಸವಿತಾ ರಾಜನ್ಸತ್ಯೇನ ಪ್ರತಿತಿಷ್ಠತಿ|

03160010c ಅಸ್ತಂ ಪರ್ವತರಾಜಾನಮೇತಮಾಹುರ್ಮನೀಷಿಣಃ||

ರಾಜನ್! ಸೂರ್ಯನು ತಲುಪಿ ಸತ್ಯದಲ್ಲಿ ನೆಲೆಗೊಳ್ಳುವ ಇದನ್ನು ಅಸ್ತಪರ್ವತರಾಜನೆಂದು ತಿಳಿದವರು ಹೇಳುತ್ತಾರೆ.

03160011a ಏತಂ ಪರ್ವತರಾಜಾನಂ ಸಮುದ್ರಂ ಚ ಮಹೋದಧಿಂ|

03160011c ಆವಸನ್ವರುಣೋ ರಾಜಾ ಭೂತಾನಿ ಪರಿರಕ್ಷತಿ||

ಈ ಪರ್ವತರಾಜ ಮತ್ತು ಮಹೋದಧಿ ಸಮುದ್ರದಲ್ಲಿಯೂ ನೆಲೆಗೊಂಡು ರಾಜ ವರುಣನು ಇರುವವನ್ನು ರಕ್ಷಿಸುತ್ತಾನೆ.

03160012a ಉದೀಚೀಂ ದೀಪಯನ್ನೇಷ ದಿಶಂ ತಿಷ್ಠತಿ ಕೀರ್ತಿಮಾನ್|

03160012c ಮಹಾಮೇರುರ್ಮಹಾಭಾಗ ಶಿವೋ ಬ್ರಹ್ಮವಿದಾಂ ಗತಿಃ||

ಮಹಾಭಾಗ! ಉತ್ತರ ದಿಕ್ಕಿನಲ್ಲಿ ಬ್ರಹ್ಮವಿದರ ದಾರಿಯಾದ ಪ್ರಸಿದ್ಧ ಮಂಗಳಕರ ಮಹಾಮೇರುವು ಬೆಳಗುತ್ತ ನಿಂತಿದೆ.

03160013a ಯಸ್ಮಿನ್ಬ್ರಹ್ಮಸದಶ್ಚೈವ ತಿಷ್ಠತೇ ಚ ಪ್ರಜಾಪತಿಃ|

03160013c ಭೂತಾತ್ಮಾ ವಿಸೃಜನ್ಸರ್ವಂ ಯತ್ಕಿಂ ಚಿಜ್ಜಂಗಮಾಗಮಂ||

ಅದರ ಮೇಲೆ ಪ್ರಜಾಪತಿ ಬ್ರಹ್ಮನ ಸದನವು ನಿಂತಿದೆ. ಅಲ್ಲಿ ಪ್ರಜಾಪತಿ, ಭೂತಾತ್ಮನು ಚಲಿಸುವ ಮತ್ತು ನಿಂತಿರುವ ಎಲ್ಲವನ್ನೂ ಸೃಷ್ಟಿಸುತ್ತಾ ಇರುವನು.

03160014a ಯಾನಾಹುರ್ಬ್ರಹ್ಮಣಃ ಪುತ್ರಾನ್ಮಾನಸಾನ್ದಕ್ಷಸಪ್ತಮಾನ್|

03160014c ತೇಷಾಮಪಿ ಮಹಾಮೇರುಃ ಸ್ಥಾನಂ ಶಿವಮನಾಮಯಂ||

ಅಲ್ಲಿಯೇ ಬ್ರಹ್ಮನ ಮಾನಸಪುತ್ರರಲ್ಲಿ ಏಳನೆಯವನಾದ ದಕ್ಷನ ಯಾನ, ಮಂಗಳವೂ ಅನಾಮಯವೂ ಆದ ಮಹಾಮೇರುವಿನ ಸ್ಥಾನವಿದೆ.

03160015a ಅತ್ರೈವ ಪ್ರತಿತಿಷ್ಠಂತಿ ಪುನರತ್ರೋದಯಂತಿ ಚ|

03160015c ಸಪ್ತ ದೇವರ್ಷಯಸ್ತಾತ ವಸಿಷ್ಠಪ್ರಮುಖಾಃ ಸದಾ||

ಮಗೂ! ಅಲ್ಲಿಯೇ ಅತ್ರಿಯೇ ಮೊದಲಾದ ಸಪ್ತದೇವರ್ಷಿಗಳೂ, ಮಸಿಷ್ಠ ಪ್ರಮುಖರೂ ಸದಾ ಪ್ರತಿಷ್ಠಿತರಾಗಿರುತ್ತಾರೆ.

03160016a ದೇಶಂ ವಿರಜಸಂ ಪಶ್ಯ ಮೇರೋಃ ಶಿಖರಮುತ್ತಮಂ|

03160016c ಯತ್ರಾತ್ಮತೃಪ್ತೈರಧ್ಯಾಸ್ತೇ ದೇವೈಃ ಸಹ ಪಿತಾಮಹಃ||

ಆತ್ಮತೃಪ್ತರಾದ ದೇವತೆಗಳೊಂದಿಗೆ ಪಿತಾಮಹನಿರುವ, ವಿರಾಜಿಸುತ್ತಿರುವ ಉತ್ತಮ ಮೇರು ಶಿಖರವನ್ನು ನೋಡು.

03160017a ಯಂ ಆಹುಃ ಸರ್ವಭೂತಾನಾಂ ಪ್ರಕೃತೇಃ ಪ್ರಕೃತಿಂ ಧ್ರುವಂ|

03160017c ಅನಾದಿನಿಧನಂ ದೇವಂ ಪ್ರಭುಂ ನಾರಾಯಣಂ ಪರಂ||

03160018a ಬ್ರಹ್ಮಣಃ ಸದನಾತ್ತಸ್ಯ ಪರಂ ಸ್ಥಾನಂ ಪ್ರಕಾಶತೇ|

03160018c ದೇವಾಶ್ಚ ಯತ್ನಾತ್ಪಶ್ಯಂತಿ ದಿವ್ಯಂ ತೇಜೋಮಯಂ ಶಿವಂ||

ಬ್ರಹ್ಮನ ಸದನದ ನಂತರ ಪ್ರಕಾಶಿಸುವ ಸ್ಥಾನವು ಪ್ರಕೃತಿಯ ಸರ್ವಭೂತಗಳ ಅಂತಿಮ ಕಾರಣನಾದ ಅನಾದಿನಿಧನ, ದೇವ, ಪ್ರಭೂ ನಾರಾಯಣನ ಪರಮ ಸ್ಥಾನ. ಆ ತೇಜೋಮಯವಾದ ಮಂಗಳಕರ ದಿವ್ಯ ಸ್ಥಾನವನ್ನು ನೋಡಲು ದೇವತೆಗಳೂ ಪ್ರಯತ್ನಪಡಬೇಕಾಗುತ್ತದೆ.

03160019a ಅತ್ಯರ್ಕಾನಲದೀಪ್ತಂ ತತ್ಸ್ಥಾನಂ ವಿಷ್ಣೋರ್ಮಹಾತ್ಮನಃ|

03160019c ಸ್ವಯೈವ ಪ್ರಭಯಾ ರಾಜನ್ದುಷ್ಪ್ರೇಕ್ಷ್ಯಂ ದೇವದಾನವೈಃ||

ರಾಜನ್! ಸೂರ್ಯ ಮತ್ತು ಅಗ್ನಿಗಳಿಗಿಂತಲೂ ಹೆಚ್ಚಾಗಿ ಬೆಳಗುವ ಆ ಮಹಾತ್ಮ ವಿಷ್ಣುವಿನ ಸ್ಥಾನವನ್ನು ಅದರ ಪ್ರಭೆಯ ಕಾರಣದಿಂದಲೇ ದೇವದಾನವರಿಗೂ ನೋಡಲು ಕಷ್ಟವಾಗುತ್ತದೆ.

03160020a ತದ್ವೈ ಜ್ಯೋತೀಂಷಿ ಸರ್ವಾಣಿ ಪ್ರಾಪ್ಯ ಭಾಸಂತಿ ನೋಽಪಿ ಚ|

03160020c ಸ್ವಯಂ ವಿಭುರದೀನಾತ್ಮಾ ತತ್ರ ಹ್ಯಭಿವಿರಾಜತೇ||

ಅಲ್ಲಿಗೆ ತಲುಪಿದಾಗ ಪ್ರಭಾಯುಕ್ತ ದೇವತೆಗಳೆಲ್ಲರೂ ಹೊಳೆಯುವುದಿಲ್ಲ. ಏಕೆಂದರೆ ಎಲ್ಲರಿಗಿಂತ ಹೆಚ್ಚಾಗಿ ಅವನೇ ಹೊಳೆದು ವಿರಾಜಿಸುತ್ತಿರುತ್ತಾನೆ.

03160021a ಯತಯಸ್ತತ್ರ ಗಚ್ಚಂತಿ ಭಕ್ತ್ಯಾ ನಾರಾಯಣಂ ಹರಿಂ|

03160021c ಪರೇಣ ತಪಸಾ ಯುಕ್ತಾ ಭಾವಿತಾಃ ಕರ್ಮಭಿಃ ಶುಭೈಃ||

ಯತಿಗಳು ಪರಮ ತಪಸ್ಸಿನ ಫಲಗಳೊಂದಿಗೆ ಮತ್ತು ಶುಭ ಕರ್ಮಗಳ ಭಾವಗಳೊಂದಿಗೆ ಭಕ್ತಿಯಿಂದ ಹರಿ ನಾರಾಯಣನಲ್ಲಿಗೆ ಹೋಗುತ್ತಾರೆ.

03160022a ಯೋಗಸಿದ್ಧಾ ಮಹಾತ್ಮಾನಸ್ತಮೋಮೋಹವಿವರ್ಜಿತಾಃ|

03160022c ತತ್ರ ಗತ್ವಾ ಪುನರ್ನೇಮಂ ಲೋಕಮಾಯಾಂತಿ ಭಾರತ||

ಭಾರತ! ಯೋಗಸಿದ್ಧರು ತಮೋಮೋಹವಿವರ್ಜಿತ ಮಹಾತ್ಮರು ಅಲ್ಲಿಗೆ ಹೋಗಿ ಪುನಃ ಈ ಲೋಕಕ್ಕೆ ಹಿಂದಿರುಗುವುದಿಲ್ಲ.

03160023a ಸ್ಥಾನಮೇತನ್ಮಹಾಭಾಗ ಧ್ರುವಮಕ್ಷಯಮವ್ಯಯಂ|

03160023c ಈಶ್ವರಸ್ಯ ಸದಾ ಹ್ಯೇತತ್ಪ್ರಣಮಾತ್ರ ಯುಧಿಷ್ಠಿರ||

ಮಹಾಭಾಗ ಯುಧಿಷ್ಠಿರ! ಈಶ್ವರನ ಈ ಸ್ಥಳವು ಅಕ್ಷಯವೂ ಅವ್ಯವವೂ ಆದುದು. ಆದುದರಿಂದ ಇದಕ್ಕೆ ಸದಾ ಪ್ರಣಾಮಮಾಡು.

03160024a ಏತಂ ಜ್ಯೋತೀಂಷಿ ಸರ್ವಾಣಿ ಪ್ರಕರ್ಷನ್ಭಗವಾನಪಿ|

03160024c ಕುರುತೇ ವಿತಮಸ್ಕರ್ಮಾ ಆದಿತ್ಯೋಽಭಿಪ್ರದಕ್ಷಿಣಂ||

ಕತ್ತಲೆಯನ್ನು ದೂರಮಾಡುವ ಭಗವಾನ್ ಆದಿತ್ಯನೂ ಕೂಡ ಎಲ್ಲ ರಾಶಿಗಳೊಡಗೂಡಿ ಇದರ ಪ್ರದಕ್ಷಿಣೆ ಮಾಡುತ್ತಾನೆ.

03160025a ಅಸ್ತಂ ಪ್ರಾಪ್ಯ ತತಃ ಸಂಧ್ಯಾಮತಿಕ್ರಮ್ಯ ದಿವಾಕರಃ|

03160025c ಉದೀಚೀಂ ಭಜತೇ ಕಾಷ್ಠಾಂ ದಿಶಮೇಷ ವಿಭಾವಸುಃ||

ವಿಭಾವಸು ದಿವಾಕರನು ಅಸ್ತವನ್ನು ತಲುಪಿ ಸಂಧ್ಯೆಯನ್ನು ದಾಟಿ ಉತ್ತರ ದಿಶೆಯಲ್ಲಿ ಪ್ರಯಾಣಿಸುತ್ತಾನೆ.

03160026a ಸ ಮೇರುಮನುವೃತ್ತಃ ಸನ್ಪುನರ್ಗಚ್ಚತಿ ಪಾಂಡವ|

03160026c ಪ್ರಾಙ್ಮುಖಃ ಸವಿತಾ ದೇವಃ ಸರ್ವಭೂತಹಿತೇ ರತಃ||

ಪಾಂಡವ! ಸರ್ವ ಭೂತಹಿತ ರತನಾದ ಆ ಸವಿತಾ ದೇವನು ಮೇರುವನ್ನು ಸುತ್ತುವರೆದು ಪುನಃ ಪೂರ್ವಮುಖನಾಗುತ್ತಾನೆ.

03160027a ಸ ಮಾಸಂ ವಿಭಜನ್ಕಾಲಂ ಬಹುಧಾ ಪರ್ವಸಂಧಿಷು|

03160027c ತಥೈವ ಭಗವಾನ್ಸೋಮೋ ನಕ್ಷತ್ರೈಃ ಸಹ ಗಚ್ಚತಿ||

ಇದೇ ರೀತಿ ಭಗವಾನ್ ಸೋಮನೂ ಕೂಡ ನಕ್ಷತ್ರಗಳೊಡನೆ ಕಾಲವನ್ನು ಮಾಸವಾಗಿಯೂ, ಮಾಸವನ್ನು ಪರ್ವಗಳಾಗಿಯೂ ವಿಂಗಡಿಸುತ್ತಾ ಹೋಗುತ್ತಾನೆ.

03160028a ಏವಮೇಷ ಪರಿಕ್ರಮ್ಯ ಮಹಾಮೇರುಮತಂದ್ರಿತಃ|

03160028c ಭಾವಯನ್ಸರ್ವಭೂತಾನಿ ಪುನರ್ಗಚ್ಚತಿ ಮಂದರಂ||

ಹೀಗೆ ಮಹಾಮೇರುವನ್ನು ಸುತ್ತುವರೆದು ಸೂರ್ಯನು ಸರ್ವಭೂತಗಳಿಗೆ ಒಳಿತನ್ನು ಮಾಡಲು ಮಂದರಕ್ಕೆ ಪುನಃ ಹೋಗುತ್ತಾನೆ.

03160029a ತಥಾ ತಮಿಸ್ರಹಾ ದೇವೋ ಮಯೂಖೈರ್ಭಾವಯಂ ಜಗತ್|

03160029c ಮಾರ್ಗಮೇತದಸಂಬಾಧಮಾದಿತ್ಯಃ ಪರಿವರ್ತತೇ||

ಹೀಗೆ ತನ್ನ ಕಿರಣಗಳಿಂದ ಜಗತ್ತಿನ ಕತ್ತಲೆಯನ್ನು ಕಳೆದು ಒಳಿತನ್ನು ಮಾಡುವ ದೇವ ಆದಿತ್ಯನು ಬೇರೆ ಯಾರೂ ಪ್ರಯಾಣಿಸದ ಅದೇ ದಾರಿಯಲ್ಲಿ ಸುತ್ತುವರೆಯುತ್ತಾನೆ.

03160030a ಸಿಸೃಕ್ಷುಃ ಶಿಶಿರಾಣ್ಯೇಷ ದಕ್ಷಿಣಾಂ ಭಜತೇ ದಿಶಂ|

03160030c ತತಃ ಸರ್ವಾಣಿ ಭೂತಾನಿ ಕಾಲಃ ಶಿಶಿರಮೃಚ್ಚತಿ||

ಛಳಿಗಾಲವನ್ನುಂಟುಮಾಡಲು ಅವನು ದಕ್ಷಿಣಪಥವನ್ನು ಹಿಡಿಯುತ್ತಾನೆ. ಆ ಕಾಲವನ್ನು ಎಲ್ಲರೂ ಶಿಶಿರವೆಂದು ಕರೆಯುತ್ತಾರೆ.

03160031a ಸ್ಥಾವರಾಣಾಂ ಚ ಭೂತಾನಾಂ ಜಂಗಮಾನಾಂ ಚ ತೇಜಸಾ|

03160031c ತೇಜಾಂಸಿ ಸಮುಪಾದತ್ತೇ ನಿವೃತ್ತಃ ಸನ್ವಿಭಾವಸುಃ||

ಹಿಂದುರಿಗಿದಾಗ ಆ ವಿಭಾವಸುವು ತನ್ನ ತೇಜಸ್ಸನ್ನು ಪುನಃ ಪಡೆದುಕೊಂಡು ಎಲ್ಲ ಸ್ಥಾವರ ಜಂಗಮಗಳನ್ನು ಸುಡುತ್ತಾನೆ.

03160032a ತತಃ ಸ್ವೇದಃ ಕ್ಲಮಸ್ತಂದ್ರೀ ಗ್ಲಾನಿಶ್ಚ ಭಜತೇ ನರಾನ್|

03160032c ಪ್ರಾಣಿಭಿಃ ಸತತಂ ಸ್ವಪ್ನೋ ಹ್ಯಭೀಕ್ಷ್ಣಂ ಚ ನಿಷೇವ್ಯತೇ||

ಆಗ ನರರು ಮತ್ತು ಇತರ ಪ್ರಾಣಿಗಳು ಬೆವರು, ಬಳಲಿಕೆ, ಸೋಮಾರಿತನ ಮತ್ತು ಸುಸ್ತನ್ನು ಅನುಭವಿಸಿ ಸತತವೂ ನಿದ್ದೆಯನ್ನು ಬಯಸುತ್ತಾರೆ.

03160033a ಏವಮೇತದನಿರ್ದೇಶ್ಯಂ ಮಾರ್ಗಮಾವೃತ್ಯ ಭಾನುಮಾನ್|

03160033c ಪುನಃ ಸೃಜತಿ ವರ್ಷಾಣಿ ಭಗವಾನ್ಭಾವಯನ್ಪ್ರಜಾಃ||

ಹೀಗೆ ಭಗವಾನ್ ಸೂರ್ಯನು ವರ್ಣಿಸಲಸಾಧ್ಯವಾದ ದಾರಿಯನ್ನು ಪ್ರಯಾಣಿಸಿ, ಪುನಃ ಮಳೆಯನ್ನು ಸುರಿಸಿ, ಎಲ್ಲ ಪ್ರಜೆಗಳಿಗೂ ಒಳಿತುಮಾಡುತ್ತಾನೆ.

03160034a ವೃಷ್ಟಿಮಾರುತಸಂತಾಪೈಃ ಸುಖೈಃ ಸ್ಥಾವರಜಂಗಮಾನ್|

03160034c ವರ್ಧಯನ್ಸುಮಹಾತೇಜಾಃ ಪುನಃ ಪ್ರತಿನಿವರ್ತತೇ||

ಮಳೆ-ಗಾಳಿಗಳನ್ನು ಸುರಿಸಿ ಸ್ಥಾವರ ಜಂಗಮಗಳ ಸುಖವನ್ನು ಹೆಚ್ಚಿಸಿ ಆ ಸುಮಹಾತೇಜಸ್ವಿಯು ಪುನಃ ತಿರುಗುತ್ತಾನೆ.

03160035a ಏವಮೇಷ ಚರನ್ಪಾರ್ಥ ಕಾಲಚಕ್ರಮತಂದ್ರಿತಃ|

03160035c ಪ್ರಕರ್ಷನ್ಸರ್ವಭೂತಾನಿ ಸವಿತಾ ಪರಿವರ್ತತೇ||

03160036a ಸಂತತಾ ಗತಿರೇತಸ್ಯ ನೈಷ ತಿಷ್ಠತಿ ಪಾಂಡವ|

03160036c ಆದಾಯೈವ ತು ಭೂತಾನಾಂ ತೇಜೋ ವಿಸೃಜತೇ ಪುನಃ||

ಪಾರ್ಥ! ಪಾಂಡವ! ಹೀಗೆ ಸ್ವಲ್ಪವೂ ಆಯಾಸಗೊಳ್ಳದೇ ಈ ಕಾಲಚಕ್ರದ ದಾರಿಯನ್ನು ಹಿಡಿದು ಸರ್ವಭೂತಗಳನ್ನೂ ತನ್ನೊಂದಿಗೆ ಎಳೆದುಕೊಂಡು ಸೂರ್ಯನು ಸಂಚರಿಸುತ್ತಾನೆ. ಇವನು ಒಮ್ಮೆಯೂ ಸ್ಥಿರವಾಗಿ ನಿಲ್ಲದೇ ಎಲ್ಲರಿಗೂ ತೇಜಸ್ಸನ್ನು ನೀಡುತ್ತಾ ಪುನಃ ಹಿಂದೆ ತೆಗೆದುಕೊಳ್ಳುತ್ತಾ ಸತತವಾಗಿ ಸಂಚರಿಸುತ್ತಿರುತ್ತಾನೆ.

03160037a ವಿಭಜನ್ಸರ್ವಭೂತಾನಾಮಾಯುಃ ಕರ್ಮ ಚ ಭಾರತ|

03160037c ಅಹೋರಾತ್ರಾನ್ಕಲಾಃ ಕಾಷ್ಠಾಃ ಸೃಜತ್ಯೇಷ ಸದಾ ವಿಭುಃ||

ಭಾರತ! ಸರ್ವಭೂತಗಳ ಆಯಸ್ಸು ಮತ್ತು ಕರ್ಮಗಳನ್ನು ಅಳೆಯುತ್ತಾ ಸೂರ್ಯದೇವನು ಸದಾ ಹಗಲು-ರಾತ್ರಿಗಳನ್ನು ಋತುಗಳನ್ನೂ ಸೃಷ್ಟಿಸುತ್ತಿರುತ್ತಾನೆ.””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ಮೇರುದರ್ಶನೇ ಷಷ್ಟ್ಯಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ಮೇರುದರ್ಶನದಲ್ಲಿ ನೂರಾಅರವತ್ತನೆಯ ಅಧ್ಯಾಯವು.

Related image

Comments are closed.