Anushasana Parva: Chapter 58

ಅನುಶಾಸನ ಪರ್ವ: ದಾನಧರ್ಮ ಪರ್ವ

೫೮

ಉತ್ತಮ ದಾನ ಮತ್ತು ಉತ್ತಮ ಬ್ರಾಹ್ಮಣರ ಪ್ರಶಂಸೆ (೧-೪೦).

[1]13058001 ಯುಧಿಷ್ಠಿರ ಉವಾಚ|

13058001a ಯಾನೀಮಾನಿ ಬಹಿರ್ವೇದ್ಯಾಂ ದಾನಾನಿ ಪರಿಚಕ್ಷತೇ|

13058001c ತೇಭ್ಯೋ ವಿಶಿಷ್ಟಂ ಕಿಂ ದಾನಂ ಮತಂ ತೇ ಕುರುಪುಂಗವ||

ಯುಧಿಷ್ಠಿರನು ಹೇಳಿದನು: “ಕುರುಪುಂಗವ! ವೇದಿಯ ಹೊರಗೆ ಯಾವ ದಾನಗಳ ಕುರಿತು ಹೇಳಳಾಗಿದೆಯೋ ಅವುಗಳಲ್ಲೆಲ್ಲಾ ನಿನ್ನ ಮತದಲ್ಲಿ ಯಾವ ದಾನವು ಶ್ರೇಷ್ಠವಾದುದು?

13058002a ಕೌತೂಹಲಂ ಹಿ ಪರಮಂ ತತ್ರ ಮೇ ವರ್ತತೇ ಪ್ರಭೋ|

13058002c ದಾತಾರಂ ದತ್ತಮನ್ವೇತಿ ಯದ್ದಾನಂ ತತ್ಪ್ರಚಕ್ಷ್ವ ಮೇ||

ಪ್ರಭೋ! ಅದರ ಕುರಿತು ನನ್ನಲ್ಲಿ ಪರಮ ಕುತೂಹಲವಿದೆ. ಯಾವ ದಾನದ ಪುಣ್ಯವು ದಾತನನ್ನು ಹೇಗೆ ಅನುಸರಿಸುತ್ತದೆ ಎನ್ನುವುದನ್ನು ನನಗೆ ಹೇಳು.”

13058003 ಭೀಷ್ಮ ಉವಾಚ|

13058003a ಅಭಯಂ ಸರ್ವಭೂತೇಭ್ಯೋ ವ್ಯಸನೇ ಚಾಪ್ಯನುಗ್ರಹಮ್|

13058003c ಯಚ್ಚಾಭಿಲಷಿತಂ ದದ್ಯಾತ್ತೃಷಿತಾಯಾಭಿಯಾಚತೇ||

13058004a ದತ್ತಂ ಮನ್ಯೇತ ಯದ್ದತ್ತ್ವಾ ತದ್ದಾನಂ ಶ್ರೇಷ್ಠಮುಚ್ಯತೇ|

13058004c ದತ್ತಂ ದಾತಾರಮನ್ವೇತಿ ಯದ್ದಾನಂ ಭರತರ್ಷಭ||

ಭೀಷ್ಮನು ಹೇಳಿದನು: “ಭರತರ್ಷಭ! ಸರ್ವಭೂತಗಳಿಗೂ ಅಭಯವನ್ನು ನೀಡುವುದು, ಸಂಕಟಸಮಯದಲ್ಲಿ ಅವುಗಳಿಗೆ ಅನುಗ್ರಹಿಸುವುದು, ಯಾಚಕನಿಗೆ ಅವನು ಕೇಳಿದ ವಸ್ತುವನ್ನು ನೀಡುವುದು, ಮತ್ತು ಬಾಯಾರಿ ನೀರನ್ನು ಕೇಳುವವನಿಗೆ ನೀರನ್ನು ಕುಡಿಸುವುದು ಇವು ಉತ್ತಮ ದಾನಗಳೆಂದು ಹೇಳುತ್ತಾರೆ. ಇವುಗಳ ದಾನದಿಂದ ಕೊಟ್ಟಿದ್ದುದು ಕೊಟ್ಟವನನ್ನು ಅನುಸರಿಸಿ ಬರುತ್ತವೆ ಎಂದು ಹೇಳುತ್ತಾರೆ.

13058005a ಹಿರಣ್ಯದಾನಂ ಗೋದಾನಂ ಪೃಥಿವೀದಾನಮೇವ ಚ|

13058005c ಏತಾನಿ ವೈ ಪವಿತ್ರಾಣಿ ತಾರಯಂತ್ಯಪಿ ದುಷ್ಕೃತಮ್||

ಹಿರಣ್ಯದಾನ, ಗೋದಾನ, ಭೂಮಿದಾನ ಇವು ಪಾಪಿಯನ್ನೂ ಉದ್ಧರಿಸಬಹುದಾದ ಪವಿತ್ರ ದಾನಗಳು.

13058006a ಏತಾನಿ ಪುರುಷವ್ಯಾಘ್ರ ಸಾಧುಭ್ಯೋ ದೇಹಿ ನಿತ್ಯದಾ|

13058006c ದಾನಾನಿ ಹಿ ನರಂ ಪಾಪಾನ್ಮೋಕ್ಷಯಂತಿ ನ ಸಂಶಯಃ||

ಪುರುಷವ್ಯಾಘ್ರ! ಈ ಪವಿತ್ರ ದಾನಗಳನ್ನು ನಿತ್ಯವೂ ನೀನು ಸಾಧುಗಳಿಗೇ ನೀಡು. ಈ ದಾನಗಳು ನರನನ್ನು ಪಾಪಗಳಿಂದ ಮುಕ್ತಗೊಳಿಸುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.

13058007a ಯದ್ಯದಿಷ್ಟತಮಂ ಲೋಕೇ ಯಚ್ಚಾಸ್ಯ ದಯಿತಂ ಗೃಹೇ|

13058007c ತತ್ತದ್ಗುಣವತೇ ದೇಯಂ ತದೇವಾಕ್ಷಯಮಿಚ್ಚತಾ||

ಲೋಕದಲ್ಲಿ ಅತ್ಯಂತ ಇಷ್ಟವಾದವುಗಳು ಯಾವುದಿದೆಯೋ ಮತ್ತು ಮನೆಯಲ್ಲಿ ಅತ್ಯಂತ ಪ್ರಿಯವಾದುದು ಏನಿದೆಯೋ ಅದನ್ನು ಗುಣವಂತನಿಗೆ ಕೊಡಬೇಕು. ತನ್ನ ದಾನವನ್ನು ಅಕ್ಷಯವಾಗಿಸಲು ಬಯಸುವವನು ಹೀಗೆಯೇ ಮಾಡಬೇಕು.

13058008a ಪ್ರಿಯಾಣಿ ಲಭತೇ ಲೋಕೇ ಪ್ರಿಯದಃ ಪ್ರಿಯಕೃತ್ತಥಾ|

13058008c ಪ್ರಿಯೋ ಭವತಿ ಭೂತಾನಾಮಿಹ ಚೈವ ಪರತ್ರ ಚ||

ಲೋಕದಲ್ಲಿ ಇತರರಿಗೆ ಪ್ರಿಯವಾದುದನ್ನು ಒದಗಿಸಿಕೊಡುವವನು ಸದಾ ಪ್ರಿಯವಾದುದನ್ನೇ ಪಡೆದುಕೊಳ್ಳುತ್ತಾನೆ ಮತ್ತು ಇತರರಿಗೆ ಪ್ರಿಯವಾದುದನ್ನು ಮಾಡುವವನು ಸದಾ ಇಲ್ಲಿ ಮತ್ತು ಪರಲೋಕದಲ್ಲಿ ಸರ್ವಭೂತಗಳ ಪ್ರೀತಿಪಾತ್ರನಾಗುತ್ತಾನೆ.

13058009a ಯಾಚಮಾನಮಭೀಮಾನಾದಾಶಾವಂತಮಕಿಂಚನಮ್|

13058009c ಯೋ ನಾರ್ಚತಿ ಯಥಾಶಕ್ತಿ ಸ ನೃಶಂಸೋ ಯುಧಿಷ್ಠಿರ||

ಯುಧಿಷ್ಠಿರ! ಆಶಾವಂತನಾಗಿ ಯಾಚಿಸುವವನನ್ನು ಅಭಿಮಾನದಿಂದ ಯಥಾಶಕ್ತಿ ಅರ್ಚಿಸದಿರುವವನು ಕ್ರೂರಿಯೇ ಸರಿ.

13058010a ಅಮಿತ್ರಮಪಿ ಚೇದ್ದೀನಂ ಶರಣೈಷಿಣಮಾಗತಮ್|

13058010c ವ್ಯಸನೇ ಯೋಽನುಗೃಹ್ಣಾತಿ ಸ ವೈ ಪುರುಷಸತ್ತಮಃ||

ಶತ್ರುವಾಗಿದ್ದರೂ, ವ್ಯಸನದಲ್ಲಿ ದೀನನಾಗಿ ಶರಣುಬಂದಿರುವವನನ್ನು ಯಾರು ಅನುಗ್ರಹಿಸುವನೋ ಅವನೇ ಪುರುಷಸತ್ತಮನು.

13058011a ಕೃಶಾಯ ಹ್ರೀಮತೇ[2] ತಾತ ವೃತ್ತಿಕ್ಷೀಣಾಯ ಸೀದತೇ|

13058011c ಅಪಹನ್ಯಾತ್ಕ್ಷುಧಂ ಯಸ್ತು ನ ತೇನ ಪುರುಷಃ ಸಮಃ||

ಅಯ್ಯಾ! ವಿದ್ವಾಂಸನಾಗಿದ್ದರೂ ವೃತ್ತಿಯನ್ನು ಕಳೆದುಕೊಂಡಿರುವ ದೀನ ದುರ್ಬಲ ಮತ್ತು ದುಃಖಿಯ ಹಸಿವೆಯನ್ನು ಇಂಗಿಸುವವನಿಗೆ ಸಮನಾದ ಪುಣ್ಯಾತ್ಮ ಪುರುಷನು ಇನ್ನಿಲ್ಲ.

13058012a ಹ್ರಿಯಾ ತು ನಿಯತಾನ್ಸಾ[3]ಧೂನ್ಪುತ್ರದಾರೈಶ್ಚ ಕರ್ಶಿತಾನ್|

13058012c ಅಯಾಚಮಾನಾನ್ಕೌಂತೇಯ ಸರ್ವೋಪಾಯೈರ್ನಿಮಂತ್ರಯ||

ಕೌಂತೇಯ! ಪತ್ನಿ-ಪುತ್ರರನ್ನು ಪಾಲಿಸಲಾಗದೇ ಕಷ್ಟಪಡುತ್ತಿರುವ ಆದರೆ ನಾಚಿಕೆಯಿಂದ ಇನ್ನೊಬ್ಬರನ್ನು ಕೇಳದೇ ಇರುವ ಸಾಧುಪುರುಷರನ್ನು ಸರ್ವೋಪಾಯಗಳಿಂದ ಆಮಂತ್ರಿಸಿ ಸಹಾಯಮಾಡು.

13058013a ಆಶಿಷಂ ಯೇ ನ ದೇವೇಷು ನ ಮರ್ತ್ಯೇಷು ಚ ಕುರ್ವತೇ|

13058013c ಅರ್ಹಂತೋ ನಿತ್ಯಸತ್ತ್ವಸ್ಥಾ ಯಥಾಲಬ್ಧೋಪಜೀವಿನಃ||

13058014a ಆಶೀವಿಷಸಮೇಭ್ಯಶ್ಚ ತೇಭ್ಯೋ ರಕ್ಷಸ್ವ ಭಾರತ|

13058014c ತಾನ್ಯುಕ್ತೈರುಪಜಿಜ್ಞಾಸ್ಯ ತಥಾ ದ್ವಿಜವರೋತ್ತಮಾನ್||

13058015a ಕೃತೈರಾವಸಥೈರ್ನಿತ್ಯಂ ಸಪ್ರೇಷ್ಯೈಃ ಸಪರಿಚ್ಚದೈಃ|

13058015c ನಿಮಂತ್ರಯೇಥಾಃ ಕೌರವ್ಯ ಸರ್ವಕಾಮಸುಖಾವಹೈಃ||

ಭಾರತ! ಕೌರವ್ಯ! ದೇವತೆಗಳ ಅಥವಾ ಮನುಷ್ಯರ ಯಾವ ವಸ್ತುವಿನಲ್ಲಿಯೂ ಆಸೆಯನ್ನಿಟ್ಟುಕೊಂಡಿರದ, ಸದಾ ಸಂತುಷ್ಟರಾಗಿ, ದೊರೆಯುವುದರಲ್ಲಿಯೇ ಜೀವನ ನಡೆಸಿಕೊಂಡು ಹೋಗುವ, ನಿತ್ಯವೂ ಸತ್ತ್ವಸ್ಥರಾಗಿರುವ ಅರ್ಹ ದ್ವಿಜೋತ್ತಮರನ್ನು ದೂತರ ಮೂಲಕ ಹುಡುಕು ಮತ್ತು ಅವರನ್ನು ನಿಮಂತ್ರಿಸು. ಅವರು ದುಃಖಿಗಳಾದರೆ ವಿಷಧರ ಸರ್ಪದ ಸಮಾನ ಭಯಂಕರರಾಗುತ್ತಾರೆ. ಅವರಿಂದ ನಿನ್ನ ರಕ್ಷಣೆಯನ್ನು ಮಾಡಿಕೋ. ಸೇವಕರು ಮತ್ತು ಅವಶ್ಯಕ ಸಾಮಗ್ರಿಗಳೊಂದಿಗೆ ಮತ್ತು ಸಂಪೂರ್ಣ ಕಾಮನೆಗಳನ್ನು ಪ್ರಾಪ್ತಗೊಳ್ಳಲು ಬೇಕಾಗುವ ಸುಖ ಗೃಹವನ್ನು ನಿವೇದಿಸಿ ಅವರ ಪೂರ್ಣಸತ್ಕಾರವನ್ನು ನಿತ್ಯವೂ ಮಾಡುತ್ತಿರು.

13058016a ಯದಿ ತೇ ಪ್ರತಿಗೃಹ್ಣೀಯುಃ ಶ್ರದ್ಧಾಪೂತಂ ಯುಧಿಷ್ಠಿರ|

13058016c ಕಾರ್ಯಮಿತ್ಯೇವ ಮನ್ವಾನಾ ಧಾರ್ಮಿಕಾಃ ಪುಣ್ಯಕರ್ಮಿಣಃ||

ಯುಧಿಷ್ಠಿರ! ಒಂದು ವೇಳೆ ನಿನ್ನ ದಾನವು ಶ್ರದ್ಧಾಯುಕ್ತವಾಗಿಯೂ ಪವಿತ್ರವಾಗಿಯೂ ಮತ್ತು ಕರ್ತ್ಯವ್ಯ-ಬುದ್ಧಿಯಿಂದ ಮಾಡಿದುದೂ ಹೌದೆಂದು ಪುಣ್ಯಕರ್ಮಗಳನ್ನು ಗುರುತಿಸಬಲ್ಲ ಆ ಧರ್ಮಾತ್ರ ಪುರುಷರು ಉತ್ತಮವೆಂದು ತಿಳಿದು ಸ್ವೀಕರಿಸಲೂ ಬಹುದು.

13058017a ವಿದ್ಯಾಸ್ನಾತಾ ವ್ರತಸ್ನಾತಾ ಯೇ ವ್ಯಪಾಶ್ರಿತ್ಯಜೀವಿನಃ|

13058017c ಗೂಢಸ್ವಾಧ್ಯಾಯತಪಸೋ ಬ್ರಾಹ್ಮಣಾಃ ಸಂಶಿತವ್ರತಾಃ||

13058018a ತೇಷು ಶುದ್ಧೇಷು ದಾಂತೇಷು ಸ್ವದಾರನಿರತೇಷು ಚ|

13058018c ಯತ್ಕರಿಷ್ಯಸಿ ಕಲ್ಯಾಣಂ ತತ್ತ್ವಾ ಲೋಕೇಷು ಧಾಸ್ಯತಿ||

ವಿದ್ಯಾವಂತನೂ, ವ್ರತನಿರತನೂ, ಇನ್ನೊಬ್ಬರನ್ನು ಆಶ್ರಯಿಸಿ ಜೀವಿಸದವನೂ, ಸ್ವಾಧ್ಯಾಯ-ತಪಸ್ಸುಗಳನ್ನು ಗೂಢವಾಗಿ ಇಟ್ಟಿರುವವನೂ, ಸ್ವ-ಪತ್ನಿಯಲ್ಲಿಯೇ ಸಂತುಷ್ಟನಾಗಿರುವ ಶುದ್ಧ ದಾಂತ ಸಂಶಿತವ್ರತಬ್ರಾಹ್ಮಣರಿಗೆ ನೀನು ಏನನ್ನೂ ಮಾಡಿದರೂ ಅದು ನಿನಗೆ ಲೋಕಗಳಲ್ಲಿ ಕಲ್ಯಾಣವನ್ನುಂಟುಮಾಡುತ್ತದೆ.

13058019a ಯಥಾಗ್ನಿಹೋತ್ರಂ ಸುಹುತಂ ಸಾಯಂ ಪ್ರಾತರ್ದ್ವಿಜಾತಿನಾ|

13058019c ತಥಾ ಭವತಿ ದತ್ತಂ ವೈ ದ್ವಿಜೇಭ್ಯೋಽಥ ಕೃತಾತ್ಮನಾ||

ದ್ವಿಜನು ಪ್ರಾತಃ-ಸಂಧ್ಯಾಕಾಲ ವಿಧಿಪೂರ್ವಕವಾಗಿ ಮಾಡುವ ಅಗ್ನಿಹೋತ್ರವು ಯಾವ ಫಲವನ್ನು ನೀಡುತ್ತದೆಯೋ ಅದೇ ಫಲವನ್ನು ಕೃತಾತ್ಮ ದ್ವಿಜನಿಗೆ ದಾನಮಾಡುವವನಿಗೆ ದೊರೆಯುತ್ತದೆ.

13058020a ಏಷ ತೇ ವಿತತೋ ಯಜ್ಞಃ ಶ್ರದ್ಧಾಪೂತಃ ಸದಕ್ಷಿಣಃ|

13058020c ವಿಶಿಷ್ಟಃ ಸರ್ವಯಜ್ಞೇಭ್ಯೋ ದದತಸ್ತಾತ ವರ್ತತಾಮ್||

ಇದು ನೀನು ಮಾಡಬೇಕಾದ ಶ್ರದ್ಧಾಪೂತ ದಕ್ಷಿಣಾಯುಕ್ತ ಯಜ್ಞ. ಮಗೂ! ನೀನು ದಾನಮಾಡುವುದೆಲ್ಲವೂ ವಿಶಿಷ್ಠ ಯಜ್ಞವಾಗಿ ಪರಿಣಮಿಸುತ್ತದೆ.

13058021a ನಿವಾಪೋ ದಾನಸದೃಶಸ್ತಾದೃಶೇಷು ಯುಧಿಷ್ಠಿರ|

13058021c ನಿವಪನ್ಪೂಜಯಂಶ್ಚೈವ ತೇಷ್ವಾನೃಣ್ಯಂ ನಿಗಚ್ಚತಿ||

ಯುಧಿಷ್ಠಿರ! ಬಾಯಾರಿದವನಿಗೆ ನೀರುಕುಡಿಸುವುದರ ಸದೃಶ ದಾನವಿಲ್ಲ. ಬಾಯಾರಿದವನನ್ನು ಪೂಜಿಸುವುದರಿಂದ ಮನುಷ್ಯ-ದೇವತೆ-ಪಿತೃಗಳ ಋಣವನ್ನು ತೀರಿಸುತ್ತೀಯೆ.

13058022a ಯ ಏವ ನೋ ನ ಕುಪ್ಯಂತಿ ನ ಲುಭ್ಯಂತಿ ತೃಣೇಷ್ವಪಿ|

13058022c ತ ಏವ ನಃ ಪೂಜ್ಯತಮಾ ಯೇ ಚಾನ್ಯೇ ಪ್ರಿಯವಾದಿನಃ||

ಯಾರಿಗೆ ಕೋಪವೆಂಬುದೇ ಇಲ್ಲವೋ, ಯಾರಲ್ಲಿ ಎಳ್ಳಿನಷ್ಟೂ ಲೋಭವಿಲ್ಲವೋ ಮತ್ತು ಅನ್ಯರೊಂದಿಗೆ ಪ್ರಿಯವಾದುದನ್ನೇ ಮಾತನಾಡುವವರಿಗೆ ನಮಗೆ ಎಲ್ಲರಿಗಿಂತ ಪೂಜನೀಯರು.

13058023a ಯೇ ನೋ ನ ಬಹು ಮನ್ಯಂತೇ ನ ಪ್ರವರ್ತಂತಿ ಚಾಪರೇ|

13058023c ಪುತ್ರವತ್ಪರಿಪಾಲ್ಯಾಸ್ತೇ ನಮಸ್ತೇಭ್ಯಸ್ತಥಾಭಯಮ್||

ಯಾರು ನಮ್ಮನ್ನು ಹೆಚ್ಚಿನವರೆಂದು ತಿಳಿಯುವುದಿಲ್ಲವೋ ಮತ್ತು ಇತರರಂತೆ ಧನವನ್ನು ಗಳಿಸಲು ತೊಡಗಿರುವುದಿಲ್ಲವೋ ಅವರನ್ನು ಪುತ್ರರಂತೆ ಪರಿಪಾಲಿಸಬೇಕು, ನಮಸ್ಕರಿಸ ಬೇಕು ಮತ್ತು ಅಭಯವನ್ನು ನೀಡಬೇಕು.

13058024a ಋತ್ವಿಕ್ಪುರೋಹಿತಾಚಾರ್ಯಾ ಮೃದುಬ್ರಹ್ಮಧರಾ ಹಿ ತೇ|

13058024c ಕ್ಷತ್ರೇಣಾಪಿ ಹಿ ಸಂಸೃಷ್ಟಂ ತೇಜಃ ಶಾಮ್ಯತಿ ವೈ ದ್ವಿಜೇ||

ಋತ್ವಿಕ, ಪುರೋಹಿತ ಮತ್ತು ಆಚಾರ್ಯ ಇವರು ಮೃದುಸ್ವಭಾವದವರೂ ಬ್ರಹ್ಮವನ್ನು ಧರಿಸಿರುವವರೂ ಆಗಿರುತ್ತಾರೆ. ಇಂಥಹ ದ್ವಿಜರ ಸಂಗದಲ್ಲಿ ಹೋದೊಡನೆಯೇ ಕ್ಷತ್ರಿಯರ ತೇಜಸ್ಸು ಶಾಂತವಾಗಿಬಿಡುತ್ತದೆ.

13058025a ಅಸ್ತಿ ಮೇ ಬಲವಾನಸ್ಮಿ ರಾಜಾಸ್ಮೀತಿ ಯುಧಿಷ್ಠಿರ|

13058025c ಬ್ರಾಹ್ಮಣಾನ್ಮಾ ಸ್ಮ ಪರ್ಯಶ್ನೀರ್ವಾಸೋಭಿರಶನೇನ ಚ||

ಯುಧಿಷ್ಠಿರ! “ನನ್ನಲ್ಲಿ ಬಲವಿದೆ! ನಾನು ರಾಜನಾಗಿದ್ದೇನೆ!” ಎಂದು ಬ್ರಾಹ್ಮಣರನ್ನು ನಿರ್ಲಕ್ಷಿಸಿ ಸ್ವಯಂ ನೀನೇ ಎಲ್ಲ ಅನ್ನ ಮತ್ತು ವಸ್ತ್ರಗಳನ್ನು ಭೋಗಿಸಿಬಿಡಬೇಡ!

13058026a ಯಚ್ಚೋಭಾರ್ಥಂ ಬಲಾರ್ಥಂ ವಾ ವಿತ್ತಮಸ್ತಿ ತವಾನಘ|

13058026c ತೇನ ತೇ ಬ್ರಾಹ್ಮಣಾಃ ಪೂಜ್ಯಾಃ ಸ್ವಧರ್ಮಮನುತಿಷ್ಠತಾ||

ಅನಘ! ಶೋಭೆಗಾಗಿ, ಬಲಕ್ಕಾಗಿ ಅಥವಾ ವಿತ್ತವಿದೆ ಎನ್ನುವುದಕ್ಕಾಗಲೀ ನೀನು ಬ್ರಾಹ್ಮಣರನ್ನು ಪೂಜಿಸಿ ಸ್ವಧರ್ಮದಲ್ಲಿ ನೆಲೆಸಿರು.

13058027a ನಮಸ್ಕಾರ್ಯಾಸ್ತ್ವಯಾ ವಿಪ್ರಾ ವರ್ತಮಾನಾ ಯಥಾತಥಮ್|

13058027c ಯಥಾಸುಖಂ ವ್ಯಥೋತ್ಸಾಹಂ ಲಲಂತು ತ್ವಯಿ ಪುತ್ರವತ್||

ಅವರು ಹೇಗೆಯೇ ನಡೆದುಕೊಂಡಿರಲಿ, ವಿಪ್ರರು ಸದಾ ನಿನಗೆ ನಮಸ್ಕಾರ್ಯರಾಗಿರುತ್ತಾರೆ. ಅವರು ಯಥಾಸುಖವಾಗಿ ಮತ್ತು ಯಥೋತ್ಸಾಹವಾಗಿ ನಿನ್ನ ಪುತ್ರರಂತೆ ನಲಿದಾಡುತ್ತಿರಬೇಕು.

13058028a ಕೋ ಹ್ಯನ್ಯಃ ಸುಪ್ರಸಾದಾನಾಂ ಸುಹೃದಾಮಲ್ಪತೋಷಿಣಾಮ್|

13058028c ವೃತ್ತಿಮರ್ಹತ್ಯುಪಕ್ಷೇಪ್ತುಂ ತ್ವದನ್ಯಃ ಕುರುಸತ್ತಮ||

ಕುರುಸತ್ತಮ! ಸುಪ್ರಸನ್ನರಾಗಿರುವ, ಸುಹೃದರಾಗಿರುವ ಮತ್ತು ಸ್ವಲ್ಪದರಲ್ಲಿಯೇ ತೃಪ್ತಿ ಹೊಂದುವ ಅವರಿಗೆ ನೀನಲ್ಲದೇ ಬೇರೆ ಯಾರುತಾನೇ ಅವರಿಗೆ ತಕ್ಕುದಾದ ವೃತ್ತಿಯನ್ನು ಒದಗಿಸಿಕೊಡಬಲ್ಲರು?

13058029a ಯಥಾ ಪತ್ಯಾಶ್ರಯೋ ಧರ್ಮಃ ಸ್ತ್ರೀಣಾಂ ಲೋಕೇ ಸನಾತನಃ|

13058029c ಸ ದೇವಃ ಸಾ ಗತಿರ್ನಾನ್ಯಾ ತಥಾಸ್ಮಾಕಂ ದ್ವಿಜಾತಯಃ||

ಸ್ತ್ರೀಗೆ ಪತಿಯೇ ಆಶ್ರಯ ಸನಾತದ ಧರ್ಮವು ಈ ಲೋಕದಲ್ಲಿ ಇರುವಂತೆ ಬ್ರಾಹ್ಮಣರಿಗೆ ನಮ್ಮಂಥರ ದೇವರು ಮತ್ತು ಗತಿಯು ಬೇರೆ ಯಾರೂ ಇಲ್ಲ.

13058030a ಯದಿ ನೋ ಬ್ರಾಹ್ಮಣಾಸ್ತಾತ ಸಂತ್ಯಜೇಯುರಪೂಜಿತಾಃ|

13058030c ಪಶ್ಯಂತೋ ದಾರುಣಂ ಕರ್ಮ ಸತತಂ ಕ್ಷತ್ರಿಯೇ ಸ್ಥಿತಮ್||

13058031a ಅವೇದಾನಾಮಕೀರ್ತೀನಾಮಲೋಕಾನಾಮಯಜ್ವನಾಮ್|

13058031c ಕೋಽಸ್ಮಾಕಂ ಜೀವಿತೇನಾರ್ಥಸ್ತದ್ಧಿ ನೋ ಬ್ರಾಹ್ಮಣಾಶ್ರಯಮ್||

ಮಗೂ! ಒಂದು ವೇಳೆ ಬ್ರಾಹ್ಮಣರಿಂದ ನಾವು ತ್ಯಜಿಸಲ್ಪಟ್ಟರೆ ಅಥವಾ ಬ್ರಾಹ್ಮಣರನ್ನು ನಾವು ಪೂಜಿಸದಿದ್ದರೆ ಕ್ಷತ್ರಿಯನಾಗಿರುವವನು ಸತತವೂ ಆವೇದನಾಯುಕ್ತ, ಅಕೀರ್ತಿಕರ, ಲೋಕದಲ್ಲಿ ಹೆಸರಿಲ್ಲದೇ ಯಜ್ಞಗಳನ್ನು ಮಾಡಿಸದೇ ಇದ್ದು ಪರಮ ದಾರುಣ ಕರ್ಮಗಳನ್ನು ಮಾಡಬೇಕಾಗುತ್ತದೆ. ನಾವು ಜೀವಿತವಾಗಿರುವಾಗಲೇ ಬ್ರಾಹ್ಮಣರು ಏಕೆ ಅನ್ಯರ ಅಶ್ರಯದಲ್ಲಿರಬೇಕು?

13058032a ಅತ್ರ ತೇ ವರ್ತಯಿಷ್ಯಾಮಿ ಯಥಾ ಧರ್ಮಃ ಸನಾತನಃ|

13058032c ರಾಜನ್ಯೋ ಬ್ರಾಹ್ಮಣಂ ರಾಜನ್ಪುರಾ ಪರಿಚಚಾರ ಹ|

13058032e ವೈಶ್ಯೋ ರಾಜನ್ಯಮಿತ್ಯೇವ ಶೂದ್ರೋ ವೈಶ್ಯಮಿತಿ ಶ್ರುತಿಃ||

ರಾಜನ್! ಈಗ ನಾನು ಸನಾತನ ಧರ್ಮವು ಹೇಗಿತ್ತು ಎಂದು ಹೇಳುತ್ತೇನೆ. ಹಿಂದೆ ರಾಜರು ಬ್ರಾಹ್ಮಣರ, ವೈಶ್ಯರು ರಾಜರ ಮತ್ತು ಶೂದ್ರರು ವೈಶ್ಯರ ಸೇವೆಮಾಡುತ್ತಿದ್ದರು.

13058033a ದೂರಾಚ್ಚೂದ್ರೇಣೋಪಚರ್ಯೋ ಬ್ರಾಹ್ಮಣೋಽಗ್ನಿರಿವ ಜ್ವಲನ್|

13058033c ಸಂಸ್ಪರ್ಶಪರಿಚರ್ಯಸ್ತು ವೈಶ್ಯೇನ ಕ್ಷತ್ರಿಯೇಣ ಚ||

ಅಗ್ನಿಯಂತೆ ಪ್ರಜ್ವಲಿಸುತ್ತಿದ್ದ ಬ್ರಾಹ್ಮಣರನ್ನು ಶೂದ್ರರು ದೂರದಿಂದಲೇ ಸೇವೆಗೈಯುತ್ತಿದ್ದರು. ಬ್ರಾಹ್ಮಣರ ಮೈಮುಟ್ಟಿ ಸೇವೆಮಾಡುತ್ತಿದ್ದವರು ವೈಶ್ಯರು ಮತ್ತು ಕ್ಷತ್ರಿಯರು ಮಾತ್ರ.

13058034a ಮೃದುಭಾವಾನ್ಸತ್ಯಶೀಲಾನ್ಸತ್ಯಧರ್ಮಾನುಪಾಲಕಾನ್|

13058034c ಆಶೀವಿಷಾನಿವ ಕ್ರುದ್ಧಾಂಸ್ತಾನುಪಾಚರತ ದ್ವಿಜಾನ್||

ಮೃದುಭಾವದವರೂ, ಸತ್ಯಶೀಲರೂ, ಸತ್ಯ-ಧರ್ಮಗಳನ್ನು ಪರಿಪಾಲಿಸುವವರೂ ಆಗಿರುವ ಅವರು ಕುಪಿತರಾದರೆ ಸರ್ಪದ ವಿಷದಂತೆ. ಆದುದರಿಂದ ಬ್ರಾಹ್ಮಣರನ್ನು ಉಪಚರಿಸು.

13058035a ಅಪರೇಷಾಂ ಪರೇಷಾಂ ಚ ಪರೇಭ್ಯಶ್ಚೈವ ಯೇ ಪರೇ|

13058035c ಕ್ಷತ್ರಿಯಾಣಾಂ ಪ್ರತಪತಾಂ ತೇಜಸಾ ಚ ಬಲೇನ ಚ|

13058035e ಬ್ರಾಹ್ಮಣೇಷ್ವೇವ ಶಾಮ್ಯಂತಿ ತೇಜಾಂಸಿ ಚ ತಪಾಂಸಿ ಚ||

ಕ್ಷತ್ರಿಯರು ಯಾವ ಸಣ್ಣ-ದೊಡ್ಡ, ದೊಡ್ಡದರಲ್ಲಿಯೂ ದೊಡ್ಡ ತೇಜಸ್ಸು ಮತ್ತು ಬಲಗಳಿಂದ ಉರಿಯುತ್ತಿದ್ದೇವೋ ಆ ತೇಜಸ್ಸು ಮತ್ತು ಉರಿಗಳು ಬ್ರಾಹ್ಮಣನ ಹತ್ತಿರ ಹೋಗುತ್ತಿದ್ದಂತೆಯೇ ಶಾಂತವಾಗಿ ಬಿಡುತ್ತವೆ.

13058036a ನ ಮೇ ಪಿತಾ ಪ್ರಿಯತರೋ ನ ತ್ವಂ ತಾತ ತಥಾ ಪ್ರಿಯಃ|

13058036c ನ ಮೇ ಪಿತುಃ ಪಿತಾ ರಾಜನ್ನ ಚಾತ್ಮಾ ನ ಚ ಜೀವಿತಮ್||

ಮಗೂ! ರಾಜನ್! ನನಗೆ ಬ್ರಾಹ್ಮಣರು ಎಷ್ಟು ಪ್ರಿಯರೋ ಅಷ್ಟು ನನಗೆ ನನ್ನ ತಂದೆ, ನೀನು, ನನ್ನ ಅಜ್ಜ, ನನ್ನ ಈ ಶರೀರ ಮತ್ತು ಜೀವವೂ ಪ್ರಿಯರಲ್ಲ.

13058037a ತ್ವತ್ತಶ್ಚ ಮೇ ಪ್ರಿಯತರಃ ಪೃಥಿವ್ಯಾಂ ನಾಸ್ತಿ ಕಶ್ಚನ|

13058037c ತ್ವತ್ತೋಽಪಿ ಮೇ ಪ್ರಿಯತರಾ ಬ್ರಾಹ್ಮಣಾ ಭರತರ್ಷಭ||

ಭರತರ್ಷಭ! ಈ ಪೃಥ್ವಿಯಲ್ಲಿ ನನ್ನಗೆ ನಿನ್ನಷ್ಟು ಪ್ರಿಯರಾಗಿರುವವರು ಬೇರೆ ಯಾರೂ ಇಲ್ಲ. ಆದರೆ ಬ್ರಾಹ್ಮಣರು ನನಗೆ ನಿನಗಿಂತಲೂ ಹೆಚ್ಚು ಪ್ರಿಯರು.

13058038a ಬ್ರವೀಮಿ ಸತ್ಯಮೇತಚ್ಚ ಯಥಾಹಂ ಪಾಂಡುನಂದನ|

13058038c ತೇನ ಸತ್ಯೇನ ಗಚ್ಚೇಯಂ ಲೋಕಾನ್ಯತ್ರ ಸ ಶಂತನುಃ||

ಪಾಂಡುನಂದನ! ನಾನು ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಆ ಸತ್ಯದಿಂದ ನಾನು ಶಂತನುವಿನ ಲೋಕಕ್ಕೇ ಹೋಗುತ್ತೇನೆ.

13058039a ಪಶ್ಯೇಯಂ ಚ ಸತಾಂ ಲೋಕಾನ್ಶುಚೀನ್ಬ್ರಹ್ಮಪುರಸ್ಕೃತಾನ್|

13058039c ತತ್ರ ಮೇ ತಾತ ಗಂತವ್ಯಮಹ್ನಾಯ ಚ ಚಿರಾಯ ಚ||

ಈ ಸತ್ಯದಿಂದಲೇ ನಾನು ಬ್ರಹ್ಮನ ನಾಯಕತ್ವದಲ್ಲಿರುವ ಸತ್ಯವಂತರ ಶುಚೀ ಲೋಕಗಳನ್ನು ಕಾಣುತ್ತಿದ್ದೇನೆ. ಮಗೂ! ಸ್ವಲ್ಪವೇ ಸಮಯದಲ್ಲಿ ನೀನೂ ಕೂಡ ಅಲ್ಲಿಗೇ ಹೋಗುತ್ತೀಯೆ.

13058040a ಸೋಽಹಮೇತಾದೃಶಾಽಲ್ಲೋಕಾನ್ದೃಷ್ಟ್ವಾ ಭರತಸತ್ತಮ|

13058040c ಯನ್ಮೇ ಕೃತಂ ಬ್ರಾಹ್ಮಣೇಷು ನ ತಪ್ಯೇ ತೇನ ಪಾರ್ಥಿವ||

ಭರತಸತ್ತಮ! ಪಾರ್ಥಿವ! ಇಂಥಹ ಲೋಕಗಳನ್ನು ನೋಡಿ ಬ್ರಾಹ್ಮಣರ ಸಂಬಂಧೀ ನಾನು ಮಾಡಿದ ಕರ್ಮಗಳ ಕುರಿತು ಪರಿತಪಿಸುತ್ತಿಲ್ಲ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಅಷ್ಟಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಐವತ್ತೆಂಟನೇ ಅಧ್ಯಾಯವು.

Image result for trees against white background

[1] ಗೋರಖಪುರ ಸಂಪುಟದಲ್ಲಿ ಈ ಅಧ್ಯಾಯಕ್ಕೆ ಮೊದಲು ಸರೋವರ-ಉದ್ಯಾನವನಗಳನ್ನು ಮಾಡುವುದರ ಫಲಗಳ ಕುರಿತಾದ ೩೩ ಶ್ಲೋಕಗಳ ಒಂದು ಅಧ್ಯಾಯವಿದೆ. ಇದನ್ನು ಅನುಬಂಧದಲ್ಲಿ ನೀಡಲಾಗಿದೆ.

[2] ಕೃತವಿದ್ಯಾಯ ಎಂಬ ಪಾಠಾಂತರವಿದೆ.

[3][3] ಕ್ರಿಯಾನಿಯಮಿತಾನ್ ಎಂಬ ಪಾಠಾಂತರವಿದೆ.

Comments are closed.