Anushasana Parva: Chapter 59

ಅನುಶಾಸನ ಪರ್ವ: ದಾನಧರ್ಮ ಪರ್ವ

೫೯

ಅಯಾಚಕ ಧರ್ಮಾತ್ಮಾ ನಿರ್ಧನ ಮತ್ತು ಗುಣವಂತನಿಗೆ ದಾನಮಾಡುವುದರ ವಿಶೇಷ ಫಲ (೧-೧೯).

13059001 ಯುಧಿಷ್ಠಿರ ಉವಾಚ|

13059001a ಯೌ ತು ಸ್ಯಾತಾಂ ಚರಣೇನೋಪಪನ್ನೌ

ಯೌ ವಿದ್ಯಯಾ ಸದೃಶೌ ಜನ್ಮನಾ ಚ|

13059001c ತಾಭ್ಯಾಂ ದಾನಂ ಕತರಸ್ಮೈ ವಿಶಿಷ್ಟಮ್

ಅಯಾಚಮಾನಾಯ ಚ ಯಾಚತೇ ಚ||

ಯುಧಿಷ್ಠಿರನು ಹೇಳಿದನು: “ಉತ್ತಮ ಆಚರಣೆ, ವಿದ್ಯೆ ಮತ್ತು ಕುಲದಲ್ಲಿ ಒಂದೇ ಸಮಾನರಾಗಿರುವ ಇಬ್ಬರು ದ್ವಿಜರಲ್ಲಿ ಒಬ್ಬನು ಯಾಚಕ ಮತ್ತು ಇನ್ನೊಬ್ಬನು ಯಾಚಕನಲ್ಲದಿದ್ದರೆ, ಅವರಿಬ್ಬರಲ್ಲಿ ಯಾರಿಗೆ ದಾನ ಮಾಡುವುದರಿಂದ ವಿಶಿಷ್ಟ ಫಲವು ಪ್ರಾಪ್ತವಾಗುತ್ತದೆ?”

13059002 ಭೀಷ್ಮ ಉವಾಚ|

13059002a ಶ್ರೇಯೋ ವೈ ಯಾಚತಃ ಪಾರ್ಥ ದತ್ತಮಾಹುರಯಾಚತೇ|

13059002c ಅರ್ಹತ್ತಮೋ ವೈ ಧೃತಿಮಾನ್ಕೃಪಣಾದಧೃತಾತ್ಮನಃ||

ಭೀಷ್ಮನು ಹೇಳಿದನು: “ಪಾರ್ಥ! ಯಾಚಕನಿಗಿಂತ ಯಾಚಕನಲ್ಲದವಿಗೆ ಕೊಡುವ ದಾನವೇ ಶ್ರೇಷ್ಠ ಮತ್ತು ಕಲ್ಯಾಣಕಾರೀ ಎಂದು ಹೇಳುತ್ತಾರೆ. ಹಾಗೆಯೇ ಅಧೀರ ಹೃದಯಿ ಕೃಪಣನ ಕುರಿತು ಧೈರ್ಯತಾಳುವವನೇ ವಿಶೇಷ ಸಮ್ಮಾನದ ಪಾತ್ರನಾಗುತ್ತಾನೆ.

13059003a ಕ್ಷತ್ರಿಯೋ ರಕ್ಷಣಧೃತಿರ್ಬ್ರಾಹ್ಮಣೋಽನರ್ಥನಾಧೃತಿಃ|

13059003c ಬ್ರಾಹ್ಮಣೋ ಧೃತಿಮಾನ್ವಿದ್ವಾನ್ದೇವಾನ್ಪ್ರೀಣಾತಿ ತುಷ್ಟಿಮಾನ್||

ರಕ್ಷಣಾ ಕಾರ್ಯದಲ್ಲಿ ಧೈರ್ಯವನ್ನು ತಾಳುವ ಕ್ಷತ್ರಿಯ ಮತ್ತು ಯಾಚನೆಯಲ್ಲಿ ದೃಢತೆಯನ್ನು ತಾಳುವ ಬ್ರಾಹ್ಮಣರು ಶ್ರೇಷ್ಠರು. ಯಾವ ಬ್ರಾಹ್ಮಣನು ಧೀರ, ವಿದ್ವಾನ್ ಮತ್ತು ಸಂತೋಷಿಯಾಗಿರುತ್ತಾನೋ ಅವನು ತನ್ನ ವ್ಯವಹಾರಗಳಿಂದ ದೇವತೆಗಳನ್ನು ಸಂತುಷ್ಟಗೊಳಿಸಿರುತ್ತಾನೆ.

13059004a ಯಾಚ್ಛಾಮಾಹುರನೀಶಸ್ಯ ಅಭಿಹಾರಂ ಚ ಭಾರತ|

13059004c ಉದ್ವೇಜಯತಿ ಯಾಚನ್ ಹಿ ಸದಾ ಭೂತಾನಿ ದಸ್ಯುವತ್||

ಭಾರತ! ದರಿದ್ರನ ಯಾಚನೆಯು ಅವನಿಗೆ ಅವನ ಮೇಲಿನ ತಿರಸ್ಕಾರ ಭಾವನೆಯ ಕಾರಣದಿಂದ ಎಂಬ ಅಭಿಪ್ರಾಯವಿದೆ. ಏಕೆಂದರೆ ಯಾಚಕನು ದಸ್ಯುಗಳಂತೆ ಸದಾ ಜನರನ್ನು ಉದ್ವಿಗ್ನರನ್ನಾಗಿಸುತ್ತಾರೆ.

13059005a ಮ್ರಿಯತೇ ಯಾಚಮಾನೋ ವೈ ತಮನು ಮ್ರಿಯತೇ ದದತ್|

13059005c ದದತ್ಸಂಜೀವಯತ್ಯೇನಮಾತ್ಮಾನಂ ಚ ಯುಧಿಷ್ಠಿರ||

ಯುಧಿಷ್ಠಿರ! ಯಾಚನು ಸತ್ತುಹೋಗುತ್ತಾನೆ. ಆದರೆ ದಾನಿಯು ಎಂದೂ ಸಾಯುವುದಿಲ್ಲ. ದಾನಿಯು ಆ ಯಾಚಕನನ್ನೂ ಮತ್ತು ತನ್ನನ್ನೂ ಜೀವಿತರನ್ನಾಗಿರಿಸುತ್ತಾನೆ.

13059006a ಆನೃಶಂಸ್ಯಂ ಪರೋ ಧರ್ಮೋ ಯಾಚತೇ ಯತ್ಪ್ರದೀಯತೇ|

13059006c ಅಯಾಚತಃ ಸೀದಮಾನಾನ್ಸರ್ವೋಪಾಯೈರ್ನಿಮಂತ್ರಯ||

ಯಾಚಕನೆಗೆ ದಾನಮಾಡುವುದು ದಯಾರೂಪದ ಪರಮ ಧರ್ಮವು. ಆದರೆ ಕ್ಲೇಶಗಳನ್ನು ಅನುಭವಿಸಿಯೂ ಯಾಚನೆ ಮಾಡದವರನ್ನು ಪತ್ಯೇಕ ಉಪಾಯಗಳಿಂದ ತಮ್ಮ ಬಳಿ ಕರೆಯಿಸಿಕೊಂಡು ದಾನಮಾಡಬೇಕು.

13059007a ಯದಿ ವೈ ತಾದೃಶಾ ರಾಷ್ಟ್ರೇ ವಸೇಯುಸ್ತೇ ದ್ವಿಜೋತ್ತಮಾಃ|

13059007c ಭಸ್ಮಚ್ಚನ್ನಾನಿವಾಗ್ನೀಂಸ್ತಾನ್ಬುಧ್ಯೇಥಾಸ್ತ್ವಂ ಪ್ರಯತ್ನತಃ||

ಇಂತಹ ಬ್ರಾಹ್ಮಣೋತ್ತಮರು ನಿನ್ನ ರಾಷ್ಟ್ರದಲ್ಲಿ ವಾಸಿಸುತ್ತಿದ್ದರೆ ಅವರು ಬೂದಿಮುಚ್ಚಿದ ಅಗ್ನಿಯಂತಿರುತ್ತಾರೆ. ಪ್ರಯತ್ನಪೂರ್ವಕ ಅಂಥವರನ್ನು ನೀನು ಪತ್ತೇ ಹಚ್ಚಬೇಕು.

13059008a ತಪಸಾ ದೀಪ್ಯಮಾನಾಸ್ತೇ ದಹೇಯುಃ ಪೃಥಿವೀಮಪಿ|

13059008c ಪೂಜ್ಯಾ ಹಿ ಜ್ಞಾನವಿಜ್ಞಾನತಪೋಯೋಗಸಮನ್ವಿತಾಃ||

ತಪಸ್ಸಿನಿಂದ ಬೆಳಗುತ್ತಿರುವ ಅವರು ಪೃಥ್ವಿಯನ್ನೇ ಸುಟ್ಟುಬಿಡಬಲ್ಲರು. ಏಕೆಂದರೆ ಜ್ಞಾನ-ವಿಜ್ಞಾನ-ತಪೋಯೋಗಸಮನ್ವಿತರಾದ ಅವರು ಪೂಜನೀಯರು.

13059009a ತೇಭ್ಯಃ ಪೂಜಾಂ ಪ್ರಯುಂಜೀಥಾ ಬ್ರಾಹ್ಮಣೇಭ್ಯಃ ಪರಂತಪ|

13059009c ದದದ್ಬಹುವಿಧಾನ್ದಾಯಾನುಪಚ್ಚಂದಾನಯಾಚತಾಮ್||

ಪರಂತಪ! ಅಂಥಹ ಬ್ರಾಹ್ಮಣರನ್ನು ನೀನು ನಿತ್ಯವೂ ಪೂಜಿಸಬೇಕು. ಯಾಚಿಸದೇ ಇರುವವರ ಬಳಿ ನೀನೇ ಹೋಗಿ ನಾನಾ ವಿಧದ ಪದಾರ್ಥಗಳನ್ನು ಕೊಡಬೇಕು.

13059010a ಯದಗ್ನಿಹೋತ್ರೇ ಸುಹುತೇ ಸಾಯಂಪ್ರಾತರ್ಭವೇತ್ಫಲಮ್|

13059010c ವಿದ್ಯಾವೇದವ್ರತವತಿ ತದ್ದಾನಫಲಮುಚ್ಯತೇ||

ಸಾಯಂಕಾಲ-ಪ್ರಾತಃಕಾಲಗಳಲ್ಲಿ ಅಗ್ನಿಹೋತ್ರಗಳನ್ನು ಮಾಡುವುದರಿಂದ ಯಾವ ಫಲವು ದೊರೆಯುತ್ತದೆಯೋ ಅದೇ ಫಲವು ವೀದ್ಯಾ-ವೇದ-ವ್ರತನಿರತ ಬ್ರಾಹ್ಮಣನಿಗೆ ದಾನಮಾಡುವುದರಿಂದ ದೊರೆಯುತ್ತದೆ.

13059011a ವಿದ್ಯಾವೇದವ್ರತಸ್ನಾತಾನವ್ಯಪಾಶ್ರಯಜೀವಿನಃ|

13059011c ಗೂಢಸ್ವಾಧ್ಯಾಯತಪಸೋ ಬ್ರಾಹ್ಮಣಾನ್ಸಂಶಿತವ್ರತಾನ್||

13059012a ಕೃತೈರಾವಸಥೈರ್ಹೃದ್ಯೈಃ ಸಪ್ರೇಷ್ಯೈಃ ಸಪರಿಚ್ಚದೈಃ|

13059012c ನಿಮಂತ್ರಯೇಥಾಃ ಕೌಂತೇಯ ಕಾಮೈಶ್ಚಾನ್ಯೈರ್ದ್ವಿಜೋತ್ತಮಾನ್||

ಕೌಂತೇಯ! ವೇದವಿದ್ಯಾಪಾರಂಗತರೂ, ವ್ರತಪಾಲಕರೂ, ಗೂಢವಾಗಿ ಸ್ವಾಧ್ಯಾಯ-ತಪಸ್ಸುಗಳಲ್ಲಿ ನಿರತರಾಗಿರುವ ಸಂಶಿತವ್ರತ ಬ್ರಾಹ್ಮಣರನ್ನು ನೀನು ನಿನ್ನಬಳಿ ನಿಮಂತ್ರಿಸು. ಮತ್ತು ಅವರಿಗೆ ಸೇವಕರು, ಆವಶ್ಯಕ ಸಾಮಾಗ್ರಿ, ಹಾಗೂ ಬೇರೆ ಬೇರೆ ಉಪಭೋಗಕ ವಸ್ತುಗಳಿಂದ ಸಂಪನ್ನವಾಗಿರುವ ಗೃಹಗಳನ್ನು ಮಾಡಿಸಿ ಕೊಡು.

13059013a ಅಪಿ ತೇ ಪ್ರತಿಗೃಹ್ಣೀಯುಃ ಶ್ರದ್ಧಾಪೂತಂ ಯುಧಿಷ್ಠಿರ|

13059013c ಕಾರ್ಯಮಿತ್ಯೇವ ಮನ್ವಾನಾ ಧರ್ಮಜ್ಞಾಃ ಸೂಕ್ಷ್ಮದರ್ಶಿನಃ||

ಯುಧಿಷ್ಠಿರ! ಆ ಧರ್ಮಜ್ಞ ಸೂಕ್ಷ್ಮದರ್ಶಿಗಳು ನಿನ್ನ ಕರ್ತವ್ಯವನ್ನು ಮಾಡಿದ್ದೀಯೆ ಎಂದು ಶ್ರದ್ಧೆಯಿಂದ ಪವಿತ್ರವಾದ ಆ ದಾನವನ್ನು ಸ್ವೀಕರಿಸಬಹುದು.

13059014a ಅಪಿ ತೇ ಬ್ರಾಹ್ಮಣಾ ಭುಕ್ತ್ವಾ ಗತಾಃ ಸೋದ್ಧರಣಾನ್ಗೃಹಾನ್|

13059014c ಯೇಷಾಂ ದಾರಾಃ ಪ್ರತೀಕ್ಷಂತೇ ಪರ್ಜನ್ಯಮಿವ ಕರ್ಷಕಾಃ||

ಕೃಷಿಕರು ಮಳೆಯನ್ನು ಹೇಗೋ ಹಾಗೆ ಯಾರನ್ನು ಅವರ ಪತ್ನಿಯರು ಪ್ರತೀಕ್ಷೆಮಾಡುತ್ತಿರುತ್ತಾರೋ ಅಂತಹ ಬ್ರಾಹ್ಮಣರು ನಿನ್ನ ಮನೆಯಲ್ಲಿ ಭೋಜನ ಮಾಡಿ ತಮ್ಮ ಮನೆಗಳಲ್ಲಿರುವವರನ್ನು ಉದ್ಧರಿಸಲು ಹೋಗಿದ್ದಾರೆಯೇ?

13059015a ಅನ್ನಾನಿ ಪ್ರಾತಃಸವನೇ ನಿಯತಾ ಬ್ರಹ್ಮಚಾರಿಣಃ|

13059015c ಬ್ರಾಹ್ಮಣಾಸ್ತಾತ ಭುಂಜಾನಾಸ್ತ್ರೇತಾಗ್ನೀನ್ಪ್ರೀಣಯಂತು ತೇ||

ಮಗೂ! ಪ್ರಾತಃ ಕಾಲದಲ್ಲಿ ನಿಯತ ಬ್ರಹ್ಮಚಾರೀ ಬ್ರಾಹ್ಮಣರು ಅನ್ನವನ್ನು ತಿಂದರೆ ಅದರಿಂದಾಗಿ ಮೂರೂ ಅಗ್ನಿಗಳೂ ಶಾಂತವಾಗುತ್ತವೆ.

13059016a ಮಾಧ್ಯಂದಿನಂ ತೇ ಸವನಂ ದದತಸ್ತಾತ ವರ್ತತಾಮ್|

13059016c ಗಾ ಹಿರಣ್ಯಾನಿ ವಾಸಾಂಸಿ ತೇನೇಂದ್ರಃ ಪ್ರೀಯತಾಂ ತವ||

ಮಧ್ಯಾಹ್ನದ ಸಮಯದಲ್ಲಿ ನೀನು ಭೋಜನ, ಗೋವು, ಹಿರಣ್ಯಗಳು ಮತ್ತು ವಸ್ತ್ರಗಳನ್ನು ಅಂಥಹ ಬ್ರಾಹ್ಮಣರಿಗಿತ್ತರೆ ಅದರಿಂದ ನಿನ್ನಮೇಲೆ ಇಂದ್ರನು ಪ್ರೀತನಾಗುತ್ತಾನೆ.

13059017a ತೃತೀಯಂ ಸವನಂ ತತ್ತೇ ವೈಶ್ವದೇವಂ ಯುಧಿಷ್ಠಿರ|

13059017c ಯದ್ದೇವೇಭ್ಯಃ ಪಿತೃಭ್ಯಶ್ಚ ವಿಪ್ರೇಭ್ಯಶ್ಚ ಪ್ರಯಚ್ಚಸಿ||

ಯುಧಿಷ್ಠಿರ! ಮೂರನೇ ಸಮಯದಲ್ಲಿ ನೀನು ದೇವತೆಗಳು, ಪಿತೃಗಳು ಮತ್ತು ಮಾತು ಬ್ರಾಹ್ಮಣರಿಗೋಸ್ಕರ ಏನು ದಾನಮಾಡುತ್ತೀಯೋ ಅದು ವೈಶ್ವದೇವನನ್ನು ಸಂತುಷ್ಟಗೊಳಿಸುತ್ತವೆ.

13059018a ಅಹಿಂಸಾ ಸರ್ವಭೂತೇಭ್ಯಃ ಸಂವಿಭಾಗಶ್ಚ ಸರ್ವಶಃ|

13059018c ದಮಸ್ತ್ಯಾಗೋ ಧೃತಿಃ ಸತ್ಯಂ ಭವತ್ವವಭೃಥಾಯ ತೇ||

ಎಲ್ಲ ಜೀವಿಗಳೊಂದಿಗೂ ಅಹಿಂಸಾಭಾವದಿಂದಿರುವುದು, ಸರ್ವರಿಗೂ ಸರ್ವರ ಯಥಾಯೋಗ್ಯ ಭಾಗಗಳನ್ನು ನೀಡುವುದು, ಇಂದ್ರಿಯ ಸಂಯಮ, ತ್ಯಾಗ, ಧೈರ್ಯ ಮತ್ತು ಸತ್ಯ ಇವೆಲ್ಲವೂ ನಿನಗೆ ಯಜ್ಞಾಂತದಲ್ಲಿ ಮಾಡುವ ಅವಭೃತಸ್ನಾನದ ಫಲವನ್ನು ನೀಡುತ್ತವೆ.

13059019a ಏಷ ತೇ ವಿತತೋ ಯಜ್ಞಃ ಶ್ರದ್ಧಾಪೂತಃ ಸದಕ್ಷಿಣಃ|

13059019c ವಿಶಿಷ್ಟಃ ಸರ್ವಯಜ್ಞೇಭ್ಯೋ ನಿತ್ಯಂ ತಾತ ಪ್ರವರ್ತತಾಮ್||

ಈ ಪ್ರಕಾರವಾಗಿ ವಿಸ್ತಾರವಾಗುತ್ತಿರುವ ನಿನ್ನ ಈ ಶ್ರದ್ಧಾಪೂತ ಮತ್ತು ದಕ್ಷಿಣಾಯುಕ್ತ ಯಜ್ಞವು ಸರ್ವಯಜ್ಞಗಳಿಗಿಂತಲೂ ವಿಶಿಷ್ಟವಾದುದು ಮತ್ತು ಮಗೂ! ಇದು ನಿತ್ಯವೂ ನಡೆಯುತ್ತಿರಬೇಕು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಏಕೋನಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಐವತ್ತೊಂಭತ್ತನೇ ಅಧ್ಯಾಯವು.

Image result for trees against white background

Comments are closed.