Anushasana Parva: Chapter 141

ಅನುಶಾಸನ ಪರ್ವ: ದಾನಧರ್ಮ ಪರ್ವ

೧೪೧

ಅತ್ರಿಯ ಮಹಾತ್ಮ್ಯೆ (1-14). ಚ್ಯವನನ ಮಹಾತ್ಮ್ಯೆ (15-30).

13141001 ಭೀಷ್ಮ ಉವಾಚ|

13141001a ಇತ್ಯುಕ್ತಸ್ತ್ವರ್ಜುನಸ್ತೂಷ್ಣೀಮಭೂದ್ವಾಯುಸ್ತಮಬ್ರವೀತ್|

13141001c ಶೃಣು ಮೇ ಹೈಹಯಶ್ರೇಷ್ಠ ಕರ್ಮಾತ್ರೇಃ ಸುಮಹಾತ್ಮನಃ||

ಭೀಷ್ಮನು ಹೇಳಿದನು: “ವಾಯುವು ಹೀಗೆ ಹೇಳಲು ಅರ್ಜುನನು ಸುಮ್ಮನಾದನು. ನಂತರ ವಾಯುವು ಮುಂದುವರಿಸಿ ಹೇಳಿದನು: “ಹೈಹಯಶ್ರೇಷ್ಠ! ಸುಮಹಾತ್ಮ ಅತ್ರಿಯ ಕರ್ಮಗಳನ್ನು ಕೇಳು.

13141002a ಘೋರೇ ತಮಸ್ಯಯುಧ್ಯಂತ ಸಹಿತಾ ದೇವದಾನವಾಃ|

13141002c ಅವಿಧ್ಯತ ಶರೈಸ್ತತ್ರ ಸ್ವರ್ಭಾನುಃ ಸೋಮಭಾಸ್ಕರೌ||

ರಾಹುವು ಸೋಮ-ಭಾಸ್ಕರರನ್ನು ಶರಗಳಿಂದ ಗಾಯಗೊಳಿಸಿದುದರಿಂದ ದೇವ-ದಾನವರು ಘೋರ ಅಂಧಕಾರದಲ್ಲಿಯೇ ಯುದ್ಧಮಾಡಬೇಕಾಯಿತು.

13141003a ಅಥ ತೇ ತಮಸಾ ಗ್ರಸ್ತಾ ನಿಹನ್ಯಂತೇ ಸ್ಮ ದಾನವೈಃ|

13141003c ದೇವಾ ನೃಪತಿಶಾರ್ದೂಲ ಸಹೈವ ಬಲಿಭಿಸ್ತದಾ||

ನೃಪತಿಶಾರ್ದೂಲ! ಆಗ ತಮಸ್ಸಿನಿಂದ ಗ್ರಸ್ತರಾಗಿದ್ದ ದೇವತೆಗಳನ್ನು ಬಲಿಯೊಂದಿಗಿದ್ದ ದಾನವರು ಸಂಹರಿಸುತ್ತಿದ್ದರು.

13141004a ಅಸುರೈರ್ವಧ್ಯಮಾನಾಸ್ತೇ ಕ್ಷೀಣಪ್ರಾಣಾ ದಿವೌಕಸಃ|

13141004c ಅಪಶ್ಯಂತ ತಪಸ್ಯಂತಮತ್ರಿಂ ವಿಪ್ರಂ ಮಹಾವನೇ||

ಅಸುರರಿಂದ ವಧಿಸಲ್ಪಟ್ಟು ಕ್ಷೀಣಪ್ರಾಣರಾದ ದಿವೌಕಸರು ಮಹಾವನದಲ್ಲಿ ತಪಸ್ಸನ್ನಾಚರಿಸುತ್ತಿದ್ದ ವಿಪ್ರ ಅತ್ರಿಯನ್ನು ನೋಡಿದರು.

13141005a ಅಥೈನಮಬ್ರುವನ್ದೇವಾಃ ಶಾಂತಕ್ರೋಧಂ ಜಿತೇಂದ್ರಿಯಮ್|

13141005c ಅಸುರೈರಿಷುಭಿರ್ವಿದ್ಧೌ ಚಂದ್ರಾದಿತ್ಯಾವಿಮಾವುಭೌ||

ಶಾಂತಕ್ರೋಧಿ[1] ಜಿತೇಂದ್ರಿಯ ಅತ್ರಿಗೆ ದೇವತೆಗಳು ಹೇಳಿದರು: “ಚಂದ್ರಾದಿತ್ಯರಿಬ್ಬರನ್ನೂ ಅಸುರರು ಬಾಣಗಳಿಂದ ಹೊಡೆದು ಗಾಯಗೊಳಿಸಿದ್ದಾರೆ.

13141006a ವಯಂ ವಧ್ಯಾಮಹೇ ಚಾಪಿ ಶತ್ರುಭಿಸ್ತಮಸಾವೃತೇ|

13141006c ನಾಧಿಗಚ್ಚಾಮ ಶಾಂತಿಂ ಚ ಭಯಾತ್ತ್ರಾಯಸ್ವ ನಃ ಪ್ರಭೋ||

ಪ್ರಭೋ! ತಮಸ್ಸಿನಿಂದ ಆವೃತರಾಗಿರುವ ನಮ್ಮನ್ನೂ ಕೂಡ ಶತ್ರುಗಳು ವಧಿಸುತ್ತಿದ್ದಾರೆ. ನಮಗೆ ಶಾಂತಿಯೆಂಬುದೇ ಇಲ್ಲದಾಗಿದೆ. ಈ ಭಯದಿಂದ ನಮ್ಮನ್ನು ಕಾಪಾಡು!”

13141007a ಕಥಂ ರಕ್ಷಾಮಿ ಭವತಸ್ತೇಽಬ್ರುವಂಶ್ಚಂದ್ರಮಾ ಭವ|

13141007c ತಿಮಿರಘ್ನಶ್ಚ ಸವಿತಾ ದಸ್ಯುಹಾ ಚೈವ ನೋ ಭವ||

“ನಿಮ್ಮನ್ನು ನಾನು ಹೇಗೆ ರಕ್ಷಿಸಬೇಕು?” ಎಂದು ಅತ್ರಿಯು ಕೇಳಲು  ದೇವತೆಗಳು “ಕತ್ತಲೆಯನ್ನು ಹೋಗಲಾಡಿಸುವ ಚಂದ್ರನಾಗು. ಸೂರ್ಯನಾಗು. ಮತ್ತು ನಮ್ಮ ಶತ್ರುಗಳನ್ನು ಕೊಲ್ಲುವವನಾಗು!” ಎಂದರು.

13141008a ಏವಮುಕ್ತಸ್ತದಾತ್ರಿಸ್ತು ತಮೋನುದಭವಚ್ಚಶೀ|

13141008c ಅಪಶ್ಯತ್ಸೌಮ್ಯಭಾವಂ ಚ ಸೂರ್ಯಸ್ಯ ಪ್ರತಿದರ್ಶನಮ್[2]||

ಇದನ್ನು ಕೇಳಿ ಅತ್ರಿಯಾದರೋ ಸೂರ್ಯನ ಸೌಮ್ಯಭಾವವನ್ನು ನೋಡಿ ಅವನನ್ನೇ ಪ್ರತಿಬಿಂಬಿಸುವ ಕತ್ತಲೆಯನ್ನು ಹೋಗಲಾಡಿಸುವ ಶಶಿಯಾದನು.

13141009a ದೃಷ್ಟ್ವಾ ನಾತಿಪ್ರಭಂ ಸೋಮಂ ತಥಾ ಸೂರ್ಯಂ ಚ ಪಾರ್ಥಿವ|

13141009c ಪ್ರಕಾಶಮಕರೋದತ್ರಿಸ್ತಪಸಾ ಸ್ವೇನ ಸಂಯುಗೇ||

ಪಾರ್ಥಿವ! ಸೋಮ ಮತ್ತು ಸೂರ್ಯರು ಪ್ರಭೆಯಿಂದ ಇಲ್ಲದಿರುವುದನ್ನು ನೋಡಿ ಅತ್ರಿಯು ತನ್ನ ತಪಸ್ಸಿನಿಂದ ಯುದ್ಧದಲ್ಲಿ ಪ್ರಕಾಶವನ್ನಿತ್ತನು.

13141010a ಜಗದ್ವಿತಿಮಿರಂ ಚಾಪಿ ಪ್ರದೀಪ್ತಮಕರೋತ್ತದಾ|

13141010c ವ್ಯಜಯಚ್ಚತ್ರುಸಂಘಾಂಶ್ಚ ದೇವಾನಾಂ ಸ್ವೇನ ತೇಜಸಾ||

ಜಗತ್ತಿನ ಕತ್ತಲೆಯನ್ನು ಹೋಗಲಾಡಿಸಿ ಎಲ್ಲವನ್ನೂ ಬೆಳಗಿಸಿದನು. ತನ್ನ ತೇಜಸ್ಸಿನಿಂದ ಅವನು ದೇವತೆಗಳ ಶತ್ರುಸಂಘಗಳನ್ನೂ ಸೋಲಿಸಿದನು.

13141011a ಅತ್ರಿಣಾ ದಹ್ಯಮಾನಾಂಸ್ತಾನ್ ದೃಷ್ಟ್ವಾ ದೇವಾ ಮಹಾಸುರಾನ್|

13141011c ಪರಾಕ್ರಮೈಸ್ತೇಽಪಿ ತದಾ ವ್ಯತ್ಯಘ್ನನ್ನತ್ರಿರಕ್ಷಿತಾಃ||

ಅತ್ರಿಯು ದಹಿಸುತ್ತಿದ್ದ ಆ ಮಹಾಸುರರನ್ನು ನೋಡಿ, ಅತ್ರಿರಕ್ಷಿತರಾದ ದೇವತೆಗಳು ಪರಾಕ್ರಮದಿಂದ ಅವರನ್ನು ಸಂಹರಿಸಿದರು.

13141012a ಉದ್ಭಾಸಿತಶ್ಚ ಸವಿತಾ ದೇವಾಸ್ತ್ರಾತಾ ಹತಾಸುರಾಃ|

13141012c ಅತ್ರಿಣಾ ತ್ವಥ ಸೋಮತ್ವಂ[3] ಕೃತಮುತ್ತಮತೇಜಸಾ||

ಅವನು ಸೂರ್ಯನನ್ನು ಬೆಳಗುವಂತೆ ಮಾಡಿದನು. ದೇವತೆಗಳನ್ನು ರಕ್ಷಿಸಿದನು ಮತ್ತು ಅಸುರರನ್ನು ಸಂಹರಿಸಿದನು. ಅತ್ರಿಯು ತನ್ನ ಉತ್ತಮ ತೇಜಸ್ಸಿನಿಂದ ಸೋಮತ್ವವನ್ನು ಪಡೆದುಕೊಂಡನು.

13141013a ಅದ್ವಿತೀಯೇನ ಮುನಿನಾ ಜಪತಾ ಚರ್ಮವಾಸಸಾ|

13141013c ಫಲಭಕ್ಷೇಣ ರಾಜರ್ಷೇ ಪಶ್ಯ ಕರ್ಮಾತ್ರಿಣಾ ಕೃತಮ್||

ರಾಜರ್ಷೇ! ಕೃಷ್ಣಾಜಿನವನ್ನು ಉಟ್ಟುಕೊಂಡು ಫಲಗಳನ್ನೇ ತಿನ್ನುತ್ತಾ ಜಪಮಾಡುವ ಆ ಅದ್ವಿತೀಯ ಮುನಿ ಅತ್ರಿಯು ಮಾಡಿದ ಕರ್ಮವನ್ನಾದರೂ ನೋಡು!

13141014a ತಸ್ಯಾಪಿ ವಿಸ್ತರೇಣೋಕ್ತಂ ಕರ್ಮಾತ್ರೇಃ ಸುಮಹಾತ್ಮನಃ|

13141014c ಬ್ರವೀಮ್ಯಹಂ ಬ್ರೂಹಿ ವಾ ತ್ವಮತ್ರಿತಃ ಕ್ಷತ್ರಿಯಂ ವರಮ್||

ಸುಮಹಾತ್ಮಾ ಅತ್ರಿಯ ಕರ್ಮಗಳನ್ನೂ ವಿಸ್ತಾರವಾಗಿ ಹೇಳಿದ್ದೇನೆ. ಅತ್ರಿಗಿಂತಲೂ ಶ್ರೇಷ್ಠನಾದ ಕ್ಷತ್ರಿಯನಿದ್ದರೆ ಹೇಳು ಅಥವಾ ನಾನು ಮುಂದುವರಿಸಿ ಹೇಳುತ್ತೇನೆ.”

13141015a ಇತ್ಯುಕ್ತಸ್ತ್ವರ್ಜುನಸ್ತೂಷ್ಣೀಮಭೂದ್ವಾಯುಸ್ತಮಬ್ರವೀತ್|

13141015c ಶೃಣು ರಾಜನ್ಮಹತ್ಕರ್ಮ ಚ್ಯವನಸ್ಯ ಮಹಾತ್ಮನಃ||

ವಾಯುವು ಹೀಗೆ ಹೇಳಲು ಅರ್ಜುನನು ಸುಮ್ಮನಿದ್ದನು. ಅನಂತರ ವಾಯುವು ಪುನಃ ಹೇಳಿದನು: “ರಾಜನ್! ಮಹಾತ್ಮ ಚ್ಯವನನ ಕರ್ಮವನ್ನು ಕೇಳು.

13141016a ಅಶ್ವಿನೋಃ ಪ್ರತಿಸಂಶ್ರುತ್ಯ ಚ್ಯವನಃ ಪಾಕಶಾಸನಮ್|

13141016c ಪ್ರೋವಾಚ ಸಹಿತಂ ದೇವೈಃ ಸೋಮಪಾವಶ್ವಿನೌ ಕುರು||

ಅಶ್ವಿನಿಯರನ್ನು ಕೇಳಿದ ಚ್ಯವನನು ಪಾಕಶಾಸನನಿಗೆ “ದೇವತೆಗಳೊಂದಿಗೆ ಅಶ್ವಿನಿಯರನ್ನೂ ಸೋಮಪರನ್ನಾಗಿ ಮಾಡು!” ಎಂದನು.

13141017 ಇಂದ್ರ ಉವಾಚ|

13141017a ಅಸ್ಮಾಭಿರ್ವರ್ಜಿತಾವೇತೌ ಭವೇತಾಂ ಸೋಮಪೌ ಕಥಮ್|

13141017c ದೇವೈರ್ನ ಸಂಮಿತಾವೇತೌ ತಸ್ಮಾನ್ಮೈವಂ ವದಸ್ವ ನಃ||

ಇಂದ್ರನು ಹೇಳಿದನು: “ನಮ್ಮಿಂದ ವರ್ಜಿತರಾದ ಇವರು ಹೇಗೆ ತಾನೆ ಸೋಮಪರಾಗಬಲ್ಲರು? ಇವರು ದೇವತೆಗಳೊಂದಿಗೆ ಸಮಾನರಾಗಿ ಬೆರೆಯಲಾರರು. ಆದುದರಿಂದ ಇದನ್ನು ನನಗೆ ಹೇಳಬೇಡ!

13141018a ಅಶ್ವಿಭ್ಯಾಂ ಸಹ ನೇಚ್ಚಾಮಃ ಪಾತುಂ ಸೋಮಂ ಮಹಾವ್ರತ[4]|

13141018c ಪಿಬಂತ್ವನ್ಯೇ ಯಥಾಕಾಮಂ ನಾಹಂ ಪಾತುಮಿಹೋತ್ಸಹೇ||

ಮಹಾವ್ರತ! ಅಶ್ವಿನಿಯರೊಂದಿಗೆ ನಾವು ಸೋಮವನ್ನು ಕುಡಿಯಲು ಬಯಸುವುದಿಲ್ಲ. ಅನ್ಯರು ಬಯಸಿದರೆ ಅವರೊಂದಿಗೆ ಬೇಕಾದರೆ ಸೋಮಪಾನವನ್ನು ಮಾಡಲಿ. ಆದರೆ ನಾನು ಮಾತ್ರ ಇವರೊಂದಿಗೆ ಸೋಮಪಾನವನ್ನು ಮಾಡುವುದಿಲ್ಲ.”

13141019 ಚ್ಯವನ ಉವಾಚ|

13141019a ನ ಚೇತ್ಕರಿಷ್ಯಸಿ ವಚೋ ಮಯೋಕ್ತಂ ಬಲಸೂದನ|

13141019c ಮಯಾ ಪ್ರಮಥಿತಃ ಸದ್ಯಃ ಸೋಮಂ ಪಾಸ್ಯಸಿ ವೈ ಮಖೇ||

ಚ್ಯವನನು ಹೇಳಿದನು: “ಬಲಸೂದನ! ನನ್ನ ವಚನದಂತೆ ಮಾಡದೇ ಇದ್ದರೆ ಯಜ್ಞದಲ್ಲಿ ನನ್ನ ಪೀಡೆಗೊಳಗಾಗಿ ಒಡನೆಯೇ ಇವರೊಂದಿಗೆ ಸೋಮವನ್ನು ಕುಡಿಯುತ್ತೀಯೆ!”

13141020a ತತಃ ಕರ್ಮ ಸಮಾರಬ್ಧಂ ಹಿತಾಯ ಸಹಸಾಶ್ವಿನೋಃ|

13141020c ಚ್ಯವನೇನ ತತೋ ಮಂತ್ರೈರಭಿಭೂತಾಃ ಸುರಾಭವನ್||

ಅನಂತರ ಅಶ್ವಿನಿಯರ ಹಿತಾರ್ಥವಾಗಿ ಚ್ಯವನನು ಯಜ್ಞಕರ್ಮವನ್ನು ಪ್ರಾರಂಭಿಸಿದನು. ಅವನ ಮಂತ್ರಗಳಿಂದ ಸುರರು ಅವಶರಾಗಿಬಿಟ್ಟರು.

13141021a ತತ್ತು ಕರ್ಮ ಸಮಾರಬ್ಧಂ ದೃಷ್ಟ್ವೇಂದ್ರಃ ಕ್ರೋಧಮೂರ್ಚಿತಃ|

13141021c ಉದ್ಯಮ್ಯ ವಿಪುಲಂ ಶೈಲಂ ಚ್ಯವನಂ ಸಮುಪಾದ್ರವತ್|

13141021e ತಥಾ ವಜ್ರೇಣ ಭಗವಾನಮರ್ಷಾಕುಲಲೋಚನಃ||

ಇಂತಹ ಯಜ್ಞವನ್ನು ಪ್ರಾರಂಭಿಸಿದುದನ್ನು ನೋಡಿ ಭಗವಾನ್ ಇಂದ್ರನು ಕ್ರೋಧಮೂರ್ಛಿತನಾಗಿ ಸಿಟ್ಟಿನಿಂದ ಭುಗಿಲೆದ್ದ ಕಣ್ಣುಗಳಿಂದ ದೊಡ್ಡ ಪರ್ವತ ಮತ್ತು ವರ್ಜವನ್ನು ಎತ್ತಿ ಹಿಡಿದು ಚ್ಯವನನನ್ನು ಆಕ್ರಮಣಿಸಿದನು.

13141022a ತಮಾಪತಂತಂ ದೃಷ್ಟ್ವೈವ ಚ್ಯವನಸ್ತಪಸಾನ್ವಿತಃ|

13141022c ಅದ್ಭಿಃ ಸಿಕ್ತ್ವಾಸ್ತಂಭಯತ್ತಂ ಸವಜ್ರಂ ಸಹಪರ್ವತಮ್||

ತನ್ನ ಮೇಲೆ ಆಕ್ರಮಣಿಸುತ್ತಿದ್ದ ಅವನನ್ನು ನೋಡುತ್ತಲೇ ತಪಸಾನ್ವಿತ ಚ್ಯವನನು ನೀರನ್ನು ಸಿಂಪಡಿಸಿ ವಜ್ರ ಮತ್ತು ಪರ್ವತ ಸಮೇತ ಇಂದ್ರನನ್ನು ಸ್ತಂಭಗೊಳಿಸಿದನು.

13141023a ಅಥೇಂದ್ರಸ್ಯ ಮಹಾಘೋರಂ ಸೋಽಸೃಜಚ್ಚತ್ರುಮೇವ ಹ|

13141023c ಮದಂ ಮಂತ್ರಾಹುತಿಮಯಂ ವ್ಯಾದಿತಾಸ್ಯಂ ಮಹಾಮುನಿಃ||

ಕೂಡಲೇ ಆ ಮಹಾಮುನಿಯು ಮಂತ್ರಾಹುತಿಮಯನಾದ ಮಹಾಘೋರನಾದ ಬಾಯಿಯನ್ನು ಕಳೆದಿದ್ದ ಮದನೆಂಬ ಇಂದ್ರಶತ್ರುವನ್ನೂ ಸೃಷ್ಟಿಸಿದನು.

13141024a ತಸ್ಯ ದಂತಸಹಸ್ರಂ ತು ಬಭೂವ ಶತಯೋಜನಮ್|

13141024c ದ್ವಿಯೋಜನಶತಾಸ್ತಸ್ಯ ದಂಷ್ಟ್ರಾಃ ಪರಮದಾರುಣಾಃ|

13141024e ಹನುಸ್ತಸ್ಯಾಭವದ್ ಭೂಮಾವೇಕಶ್ಚಾಸ್ಯಾಸ್ಪೃಶದ್ದಿವಮ್||

ಅವನ ಸಹಸ್ರಾರು ದಂತಗಳು ನೂರು ಯೋಜನ ವಿಸ್ತೀರ್ಣವಾಗಿದ್ದವು. ಅವನ ಪರಮ ದಾರುಣ ಕೋರೆದಾಡೆಗಳು ಇನ್ನೂರು ಯೋಜನಗಳಷ್ಟು ಉದ್ದವಾಗಿದ್ದವು. ಅವನ ದವಡೆಗಳು ಭೂಮಿ-ಆಕಾಶಗಳನ್ನು ಸ್ಪರ್ಶಿಸುತ್ತಿದವು.

13141025a ಜಿಹ್ವಾಮೂಲೇ ಸ್ಥಿತಾಸ್ತಸ್ಯ ಸರ್ವೇ ದೇವಾಃ ಸವಾಸವಾಃ|

13141025c ತಿಮೇರಾಸ್ಯಮನುಪ್ರಾಪ್ತಾ ಯಥಾ ಮತ್ಸ್ಯಾ ಮಹಾರ್ಣವೇ||

ಮಹಾಸಮುದ್ರದಲ್ಲಿ ಮೀನುಗಳು ತಿಮಿಂಗಿಲದ ಬಾಯಿಯನ್ನು ಸೇರುವಂತೆ ಇಂದ್ರನೊಂದಿಗೆ ದೇವತೆಗಳೆಲ್ಲರೂ ಅವನ ನಾಲಿಗೆಯ ತುದಿಯಲ್ಲಿ ನಿಂತಿದ್ದರು.

13141026a ತೇ ಸಂಮಂತ್ರ್ಯ ತತೋ ದೇವಾ ಮದಸ್ಯಾಸ್ಯಗತಾಸ್ತದಾ|

13141026c ಅಬ್ರುವನ್ಸಹಿತಾಃ ಶಕ್ರಂ ಪ್ರಣಮಾಸ್ಮೈ ದ್ವಿಜಾತಯೇ|

13141026e ಅಶ್ವಿಭ್ಯಾಂ ಸಹ ಸೋಮಂ ಚ ಪಿಬಾಮೋ ವಿಗತಜ್ವರಾಃ||

ಮದನ ಬಾಯಿಯ ಬಳಿ ಬಂದಿದ್ದ ದೇವತೆಗಳು ಸಮಾಲೋಚಿಸಿ ಒಟ್ಟಾಗಿ ಶಕ್ರನಿಗೆ ಹೇಳಿದರು: “ಈ ಬ್ರಾಹ್ಮಣನನ್ನು ಪ್ರಸನ್ನಗೊಳಿಸು! ವಿಗತಜ್ವರರಾಗಿ ಅಶ್ವಿನಿಯರೊಂದಿಗೆ ಸೋಮವನ್ನು ಕುಡಿಯೋಣ!”

13141027a ತತಃ ಸ ಪ್ರಣತಃ ಶಕ್ರಶ್ಚಕಾರ ಚ್ಯವನಸ್ಯ ತತ್|

13141027c ಚ್ಯವನಃ ಕೃತವಾಂಸ್ತೌ ಚಾಪ್ಯಶ್ವಿನೌ ಸೋಮಪೀಥಿನೌ||

ಅನಂತರ ಶಕ್ರನು ಚ್ಯವನನನ್ನು ನಮಸ್ಕರಿಸಿದನು. ಚ್ಯವನನೂ ಕೂಡ ಆ ಅಶ್ವಿನಿಯರನ್ನು ಸೋಮಪರನ್ನಾಗಿ ಮಾಡಿದನು.

13141028a ತತಃ ಪ್ರತ್ಯಾಹರತ್ಕರ್ಮ ಮದಂ ಚ ವ್ಯಭಜನ್ಮುನಿಃ|

13141028c ಅಕ್ಷೇಷು ಮೃಗಯಾಯಾಂ ಚ ಪಾನೇ ಸ್ತ್ರೀಷು ಚ ವೀರ್ಯವಾನ್||

ಅನಂತರ ಆ ವೀರ್ಯವಾನ್ ಮುನಿಯು ಮದನನ್ನು ವಿಭಜಿಸಿ ಜೂಜು, ಬೇಟೆ, ಮದ್ಯಪಾನ ಮತ್ತು ಸ್ತ್ರೀಯರಲ್ಲಿ ಹಂಚಿದನು.

13141029a ಏತೈರ್ದೋಷೈರ್ನರೋ ರಾಜನ್ ಕ್ಷಯಂ ಯಾತಿ ನ ಸಂಶಯಃ|

13141029c ತಸ್ಮಾದೇತಾನ್ನರೋ ನಿತ್ಯಂ ದೂರತಃ ಪರಿವರ್ಜಯೇತ್||

ರಾಜನ್! ನರರು ಇವುಗಳಿಂದ ದೂಷಿತರಾಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಆದುದರಿಂದ ನಿತ್ಯವೂ ನರರು ಇವುಗಳನ್ನು ದೂರದಿಂದಲೇ ವರ್ಜಿಸಬೇಕು.

13141030a ಏತತ್ತೇ ಚ್ಯವನಸ್ಯಾಪಿ ಕರ್ಮ ರಾಜನ್ ಪ್ರಕೀರ್ತಿತಮ್|

13141030c ಬ್ರವೀಮ್ಯಹಂ ಬ್ರೂಹಿ ವಾ ತ್ವಂ ಚ್ಯವನಾತ್ಕ್ಷತ್ರಿಯಂ ವರಮ್||

ರಾಜನ್! ಹೀಗೆ ಚ್ಯವನನ ಕರ್ಮವನ್ನೂ ನಾನು ವರ್ಣಿಸಿದ್ದೇನೆ. ಚ್ಯವನನಿಗಿಂತಲೂ ಶ್ರೇಷ್ಠನಾದ ಕ್ಷತ್ರಿಯನ್ಯಾರಾದರೂ ಇದ್ದರೆ ಹೇಳು. ಇಲ್ಲದಿದ್ದರೆ ನಾನು ಮುಂದುವರಿಸಿ ಹೇಳುತ್ತೇನೆ.””

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಪವನಾರ್ಜುನಸಂವಾದೇ ಏಕಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಪವನಾರ್ಜುನಸಂವಾದ ಎನ್ನುವ ನೂರಾನಲ್ವತ್ತೊಂದನೇ ಅಧ್ಯಾಯವು.

[1] ಅತ್ರಿಯ ಕ್ರೋಧವೂ ಶಾಂತವಾಗಿತ್ತು.

[2] ಅಪಶ್ಯತ್ಸೌಮ್ಯಭಾವಾಚ್ಚ ಸೋಮವತ್ಪ್ರಿಯದರ್ಶನಃ|| (ಗೀತಾ ಪ್ರೆಸ್).

[3] ಸಾಮಾರ್ಥ್ಯಂ (ಭಾರತ ದರ್ಶನ)

[4] ಅಶ್ವಿಭ್ಯಾಂ ಸಹ ಸೋಮಂ ವೈ ನ ಪಾಸ್ಯಾಮಿ ದ್ವಿಜೋತ್ತಮ| (ಭಾರತ ದರ್ಶನ/ಗೀತಾ ಪ್ರೆಸ್).

Comments are closed.