Anushasana Parva: Chapter 134

ಅನುಶಾಸನ ಪರ್ವ: ದಾನಧರ್ಮ ಪರ್ವ

೧೩೪

ಪಾರ್ವತಿಯು ಸ್ತ್ರೀಧರ್ಮಗಳನ್ನು ವರ್ಣಿಸಿದುದು (1-57).

[1]13134001 ಮಹೇಶ್ವರ ಉವಾಚ|

13134001a ಪರಾವರಜ್ಞೇ ಧರ್ಮಜ್ಞೇ ತಪೋವನನಿವಾಸಿನಿ|

13134001c ಸಾಧ್ವಿ ಸುಭ್ರು ಸುಕೇಶಾಂತೇ ಹಿಮವತ್ಪರ್ವತಾತ್ಮಜೇ||

13134002a ದಕ್ಷೇ ಶಮದಮೋಪೇತೇ ನಿರ್ಮಮೇ ಧರ್ಮಚಾರಿಣಿ|

13134002c ಪೃಚ್ಚಾಮಿ ತ್ವಾಂ ವರಾರೋಹೇ ಪೃಷ್ಟಾ ವದ ಮಮೇಪ್ಸಿತಮ್||

ಮಹೇಶ್ವರನು ಹೇಳಿದನು: “ಪರಾವರಜ್ಞೇ! ಧರ್ಮಜ್ಞೇ! ತಪೋವನನಿವಾಸಿನಿ! ಸಾಧ್ವಿ! ಸುಭ್ರು! ಸುಂದರ ಕೇಶವುಳ್ಳವಳೇ! ಹಿಮವತ್ಪರ್ವತಾತ್ಮಜೇ! ದಕ್ಷೇ! ಇಂದ್ರಿಯನಿಗ್ರಹ-ಮನೋನಿಗ್ರಹವುಳ್ಳವಳೇ! ನಿರ್ಮಮೇ! ಧರ್ಮಚಾರಿಣಿ! ವರಾರೋಹೇ! ನಾನೂ ನಿನ್ನನ್ನು ಕೇಳುತ್ತೇನೆ. ನನಗೆ ಹೇಳು.

13134003a ಸಾವಿತ್ರೀ ಬ್ರಹ್ಮಣಃ ಸಾಧ್ವೀ ಕೌಶಿಕಸ್ಯ ಶಚೀ ಸತೀ|

13134003c ಮಾರ್ತಂಡಜಸ್ಯ[2] ಧೂಮೋರ್ಣಾ ಋದ್ಧಿರ್ವೈಶ್ರವಣಸ್ಯ ಚ||

13134004a ವರುಣಸ್ಯ ತತೋ ಗೌರೀ ಸೂರ್ಯಸ್ಯ ಚ ಸುವರ್ಚಲಾ|

13134004c ರೋಹಿಣೀ ಶಶಿನಃ ಸಾಧ್ವೀ ಸ್ವಾಹಾ ಚೈವ ವಿಭಾವಸೋಃ||

13134005a ಅದಿತಿಃ ಕಶ್ಯಪಸ್ಯಾಥ ಸರ್ವಾಸ್ತಾಃ ಪತಿದೇವತಾಃ|

ಬ್ರಹ್ಮನ ಪತ್ನಿ ಸಾವಿತ್ರೀ, ಕೌಶಿಕ ಇಂದ್ರನ ಸತಿ ಶಚೀ, ಮಾರ್ತಂಡಜನ ಪತ್ನಿ ಧೂಮೋರ್ಣಾ, ವೈಶ್ರವಣ ಕುಬೇರನ ಪತ್ನಿ ಋದ್ಧಿ, ವರುಣನ ಪತ್ನಿ ಗೌರೀ, ಸೂರ್ಯನ ಪತ್ನಿ ಸುವರ್ಚಲಾ, ಶಶಿಯ ಪತ್ನಿ ರೋಹಿಣೀ, ವಿಭಾವಸು ಅಗ್ನಿಯ ಪತ್ನಿ ಸ್ವಾಹಾ, ಕಶ್ಯಪನ ಪತ್ನಿ ಅದಿತಿ, - ಇವರೆಲ್ಲರೂ ಪತಿಯೇ ದೇವರೆಂದು ತಿಳಿದಿರುವವರು.

13134005c ಪೃಷ್ಟಾಶ್ಚೋಪಾಸಿತಾಶ್ಚೈವ ತಾಸ್ತ್ವಯಾ ದೇವಿ ನಿತ್ಯಶಃ||

13134006a ತೇನ ತ್ವಾಂ ಪರಿಪೃಚ್ಚಾಮಿ ಧರ್ಮಜ್ಞೇ ಧರ್ಮವಾದಿನಿ|

13134006c ಸ್ತ್ರೀಧರ್ಮಂ ಶ್ರೋತುಮಿಚ್ಚಾಮಿ ತ್ವಯೋದಾಹೃತಮಾದಿತಃ||

ದೇವಿ! ಇವರನ್ನು ನೀನು ನಿತ್ಯವೂ ಪೂಜಿಸುತ್ತೀಯೆ. ಧರ್ಮದ ವಿಷಯವಾಗಿ ಇವರನ್ನು ನೀನು ಕೇಳಿರುವೆ ಕೂಡ. ಧರ್ಮಜ್ಞೇ! ಧರ್ಮವಾದಿನಿ! ಈ ಕಾರಣದಿಂದ ನಿನ್ನನ್ನು ನಾನು ಪ್ರಶ್ನಿಸುತ್ತಿದ್ದೇನೆ. ಸ್ತ್ರೀಧರ್ಮವನ್ನು ಸಂಪೂರ್ಣವಾಗಿ ಕೇಳಬಯಸುತ್ತೇನೆ.

13134007a ಸಹಧರ್ಮಚರೀ ಮೇ ತ್ವಂ ಸಮಶೀಲಾ ಸಮವ್ರತಾ|

13134007c ಸಮಾನಸಾರವೀರ್ಯಾ ಚ ತಪಸ್ತೀವ್ರಂ ಕೃತಂ ಚ ತೇ|

13134007e ತ್ವಯಾ ಹ್ಯುಕ್ತೋ ವಿಶೇಷೇಣ ಪ್ರಮಾಣತ್ವಮುಪೈಷ್ಯತಿ||

ನೀನು ನನ್ನ ಸಹಧರ್ಮಚಾರಿಣಿಯಾಗಿರುವೆ. ನೀನು ನನ್ನ ಸಮಶೀಲಳೂ ಸಮವ್ರತಳೂ ಆಗಿರುವೆ. ಸಾರ-ವೀರ್ಯಗಳಲ್ಲಿ ನೀನು ನನ್ನ ಸಮಳಾಗಿರುವೆ ಮತ್ತು ನೀನು ತೀವ್ರ ತಪಸ್ಸನ್ನು ಆಚರಿಸಿದ್ದೀಯೆ ಕೂಡ.

13134008a ಸ್ತ್ರಿಯಶ್ಚೈವ ವಿಶೇಷೇಣ ಸ್ತ್ರೀಜನಸ್ಯ ಗತಿಃ ಸದಾ|

13134008c ಗೌರ್ಗಾಂ[3] ಗಚ್ಚತಿ ಸುಶ್ರೋಣಿ ಲೋಕೇಷ್ವೇಷಾ ಸ್ಥಿತಿಃ ಸದಾ||

ಸ್ತ್ರೀಯರೇ ವಿಶೇಷವಾಗಿ ಸ್ತ್ರೀಜನರಿಗೆ ಸದಾ ಪರಮಗತಿಯಾಗಿದ್ದಾರೆ. ಸುಶ್ರೋಣಿ! ಗೋವುಗಳು ಗೋವುಗಳನ್ನೇ ಅನುಸರಿಸುವ ಇದೇ ಸದಾ ಲೋಕಸ್ಥಿತಿಯಾಗಿದೆ.

13134009a ಮಮ ಚಾರ್ಧಂ ಶರೀರಸ್ಯ ಮಮ ಚಾರ್ಧಾದ್ವಿನಿಃಸೃತಾ[4]|

13134009c ಸುರಕಾರ್ಯಕರೀ ಚ ತ್ವಂ ಲೋಕಸಂತಾನಕಾರಿಣೀ||

ನನ್ನ ಅರ್ಧ ಶರೀರವನ್ನು ಧರಿಸಿರುವೆ. ನನ್ನ ಶರೀರಾರ್ಧದಿಂದ ಹೊರಹೊಮ್ಮಿರುವೆ. ಸುರರ ಕಾರ್ಯವನ್ನು ಮಾಡುತ್ತಿರುವೆ ಮತ್ತು ನೀನೇ ಲೋಕಸಂತಾನಕಾರಿಣಿಯಾಗಿರುವೆ.

13134010a ತವ ಸರ್ವಃ ಸುವಿದಿತಃ ಸ್ತ್ರೀಧರ್ಮಃ ಶಾಶ್ವತಃ ಶುಭೇ|

13134010c ತಸ್ಮಾದಶೇಷತೋ ಬ್ರೂಹಿ ಸ್ತ್ರೀಧರ್ಮಂ ವಿಸ್ತರೇಣ ಮೇ||

ಶುಭೇ! ಶಾಶ್ವತ ಸ್ತ್ರೀಧರ್ಮವೆಲ್ಲವೂ ನಿನಗೆ ಚೆನ್ನಾಗಿ ತಿಳಿದಿವೆ. ಆದುದರಿಂದ ಸ್ತ್ರೀಧರ್ಮವನ್ನು ವಿಸ್ತಾರವಾಗಿ ಏನನ್ನೂ ಬಿಡದೇ ನನಗೆ ಹೇಳು.”

13134011 ಉಮೋವಾಚ|

13134011a ಭಗವನ್ಸರ್ವಭೂತೇಶ ಭೂತಭವ್ಯಭವೋದ್ಭವ|

13134011c ತ್ವತ್ಪ್ರಭಾವಾದಿಯಂ ದೇವ ವಾಕ್ಚೈವ ಪ್ರತಿಭಾತಿ ಮೇ||

ಉಮೆಯು ಹೇಳಿದಳು: “ಭಗವನ್! ಸರ್ವಭೂತೇಶ! ಭೂತಭವ್ಯಭವೋದ್ಭವ! ದೇವ! ನಿನ್ನ ಪ್ರಭಾವದಿಂದಲೇ ನನಗೆ ಮಾತುಗಳು ಹೊಳೆಯುತ್ತವೆ.

13134012a ಇಮಾಸ್ತು ನದ್ಯೋ ದೇವೇಶ ಸರ್ವತೀರ್ಥೋದಕೈರ್ಯುತಾಃ|

13134012c ಉಪಸ್ಪರ್ಶನಹೇತೋಸ್ತ್ವಾ ಸಮೀಪಸ್ಥಾ ಉಪಾಸತೇ||

ಆದರೆ ದೇವೇಶ! ಈ ನದಿಗಳು ನಿನ್ನ ಸ್ನಾನ-ಆಚಮನಗಳಿಗಾಗಿ ಮತ್ತು ನಿನ್ನ ಪಾದಗಳನ್ನು ಸ್ಪರ್ಶಿಸುವ ಸಲುವಾಗಿ ನಿನ್ನ ಸಮೀಪ ಆಗಮಿಸಿವೆ.

13134013a ಏತಾಭಿಃ ಸಹ ಸಂಮಂತ್ರ್ಯ ಪ್ರವಕ್ಷ್ಯಾಮ್ಯನುಪೂರ್ವಶಃ|

13134013c ಪ್ರಭವನ್ಯೋಽನಹಂವಾದೀ ಸ ವೈ ಪುರುಷ ಉಚ್ಯತೇ||

ಇವುಗಳೊಂದಿಗೆ ಸಮಾಲೋಚಿಸಿ ನಾನು ನಿನಗೆ ಸ್ತ್ರೀಧರ್ಮವನ್ನು ಪ್ರಾರಂಭದಿಂದ ಹೇಳುತ್ತೇನೆ. ಎಷ್ಟೇ ಸಮರ್ಥನಾಗಿದ್ದರೂ ಅಹಂಕಾರವಿಲ್ಲದವನನ್ನೇ ಪುರುಷ ಎನ್ನುತ್ತಾರೆ.

13134014a ಸ್ತ್ರೀ ಚ ಭೂತೇಶ ಸತತಂ ಸ್ತ್ರಿಯಮೇವಾನುಧಾವತಿ|

13134014c ಮಯಾ ಸಂಮಾನಿತಾಶ್ಚೈವ ಭವಿಷ್ಯಂತಿ ಸರಿದ್ವರಾಃ||

ಭೂತೇಶ! ಸ್ತ್ರೀಯು ಸತತವೂ ಸ್ತ್ರೀಯನ್ನೇ ಅನುಸರಣೆ ಮಾಡುತ್ತಾಳೆ. ಈ ಸರಿದ್ವರೆಯರೂ ಕೂಡ ನನ್ನಿಂದ ಸಮ್ಮಾನಿತರಾಗಿದ್ದಾರೆ.

13134015a ಏಷಾ ಸರಸ್ವತೀ ಪುಣ್ಯಾ ನದೀನಾಮುತ್ತಮಾ ನದೀ|

13134015c ಪ್ರಥಮಾ ಸರ್ವಸರಿತಾಂ ನದೀ ಸಾಗರಗಾಮಿನೀ||

ನದಿಗಳಲ್ಲಿಯೇ ಉತ್ತಮ ನದಿಯಾದ ಇದು ಪುಣ್ಯೆ ಸರಸ್ವತೀ ನದಿ. ಸಾಗರಗಾಮಿನೀ ಈ ನದಿಯು ಸರ್ವಸರಿತ್ತುಗಳಲ್ಲಿ ಪ್ರಥಮವಾದುದು.

13134016a ವಿಪಾಶಾ ಚ ವಿತಸ್ತಾ ಚ ಚಂದ್ರಭಾಗಾ ಇರಾವತೀ|

13134016c ಶತದ್ರುರ್ದೇವಿಕಾ ಸಿಂಧುಃ ಕೌಶಿಕೀ ಗೋಮತೀ ತಥಾ||

13134017a ತಥಾ ದೇವನದೀ ಚೇಯಂ ಸರ್ವತೀರ್ಥಾಭಿಸಂವೃತಾ|

13134017c ಗಗನಾದ್ಗಾಂ ಗತಾ ದೇವೀ ಗಂಗಾ ಸರ್ವಸರಿದ್ವರಾ||

ವಿಪಾಶಾ, ವಿತಸ್ತಾ, ಚಂದ್ರಭಾಗಾ, ಇರಾವತೀ, ಶತದ್ರು, ದೇವಿಕಾ, ಸಿಂಧು, ಕೌಶಿಕೀ, ಮತ್ತು ಗೋಮತೀ ಈ ಪುಣ್ಯ ನದಿಗಳೂ ಇಲ್ಲಿವೆ. ಹಾಗೆಯೇ ಸರ್ವತೀರ್ಥಗಳೂ ಸೇವಿಸುವ, ಎಲ್ಲ ನದಿಗಳಲ್ಲಿಯೇ ಶ್ರೇಷ್ಠಳಾದ, ಆಕಾಶದಿಂದ ಭೂಮಿಗೆ ಇಳಿದು ಬಂದಿರುವ, ದೇವನದಿ ಗಂಗೆಯೂ ಇಲ್ಲಿ ಉಪಸ್ಥಿತಳಾಗಿದ್ದಾಳೆ.”

13134018a ಇತ್ಯುಕ್ತ್ವಾ ದೇವದೇವಸ್ಯ ಪತ್ನೀ ಧರ್ಮಭೃತಾಂ ವರಾ|

13134018c ಸ್ಮಿತಪೂರ್ವಮಿವಾಭಾಷ್ಯ ಸರ್ವಾಸ್ತಾಃ ಸರಿತಸ್ತದಾ||

13134019a ಅಪೃಚ್ಚದ್ದೇವಮಹಿಷೀ ಸ್ತ್ರೀಧರ್ಮಂ ಧರ್ಮವತ್ಸಲಾ|

13134019c ಸ್ತ್ರೀಧರ್ಮಕುಶಲಾಸ್ತಾ ವೈ ಗಂಗಾದ್ಯಾಃ ಸರಿತಾಂ ವರಾಃ||

ಹೀಗೆ ಹೇಳಿ ದೇವದೇವನ ಪತ್ನಿ, ಧರ್ಮಭೃತರಲ್ಲಿ ಶ್ರೇಷ್ಠೆ, ದೇವಮಹಿಷಿ, ಧರ್ಮವತ್ಸಲೆಯು ಸ್ತ್ರೀಧರ್ಮದಲ್ಲಿ ಕುಶಲರಾಗಿದ್ದ ಗಂಗೆಯೇ ಮೊದಲಾದ ಶ್ರೇಷ್ಠ ನದಿಗಳನ್ನು ಮಂದಹಾಸಪೂರ್ವಕವಾಗಿ ಸ್ತ್ರೀಧರ್ಮದ ವಿಷಯದಲ್ಲಿ ಪ್ರಶ್ನಿಸಿದಳು:

13134020a ಅಯಂ ಭಗವತಾ ದತ್ತಃ ಪ್ರಶ್ನಃ ಸ್ತ್ರೀಧರ್ಮಸಂಶ್ರಿತಃ|

13134020c ತಂ ತು ಸಂಮಂತ್ರ್ಯ ಯುಷ್ಮಾಭಿರ್ವಕ್ತುಮಿಚ್ಚಾಮಿ ಶಂಕರೇ||

“ಭಗವಾನನು ಸ್ತ್ರೀಧರ್ಮದ ಕುರಿತಾದ ಈ ಪ್ರಶ್ನೆಯನ್ನು ನೀಡಿರುವನು. ನಿಮ್ಮೊಂದಿಗೆ ಸಮಾಲೋಚಿಸಿ ಶಂಕರನಿಗೆ ಉತ್ತರಿಸ ಬಯಸುತ್ತೇನೆ.

13134021a ನ ಚೈಕಸಾಧ್ಯಂ ಪಶ್ಯಾಮಿ ವಿಜ್ಞಾನಂ ಭುವಿ ಕಸ್ಯ ಚಿತ್|

13134021c ದಿವಿ ವಾ ಸಾಗರಗಮಾಸ್ತೇನ ವೋ ಮಾನಯಾಮ್ಯಹಮ್||

ಸಾಗರಗಾಮಿ ನದಿಗಳೇ! ಸ್ವರ್ಗದಲ್ಲಿಯಾಗಲೀ ಭೂಮಿಯಲ್ಲಿಯಾಗಲೀ ವಿಜ್ಞಾನವೆಲ್ಲವೂ ಒಬ್ಬನಿಗೇ ತಿಳಿದಿರುವುದು ಅಸಾಧ್ಯ ಎಂದು ನಾನು ಕಂಡಿದ್ದೇನೆ. ಆದುದರಿಂದ ನಿಮ್ಮ ಮತಗಳನ್ನು ನಾನು ಮನ್ನಿಸುತ್ತೇನೆ.””

13134022 ಭೀಷ್ಮ ಉವಾಚ|

13134022a ಏವಂ ಸರ್ವಾಃ ಸರಿಚ್ಚ್ರೇಷ್ಠಾಃ ಪೃಷ್ಟಾಃ ಪುಣ್ಯತಮಾಃ ಶಿವಾಃ|

13134022c ತತೋ ದೇವನದೀ ಗಂಗಾ ನಿಯುಕ್ತಾ ಪ್ರತಿಪೂಜ್ಯ ತಾಮ್||

ಭೀಷ್ಮನು ಹೇಳಿದನು: “ಹೀಗೆ ಅವಳು ಆ ಎಲ್ಲ ಪುಣ್ಯತಮೆ ಮಂಗಳಕರ ನದಿಶ್ರೇಷ್ಠರನ್ನು ಕೇಳಲು ಪಾರ್ವತಿಗೆ ಉತ್ತರಕೊಡಲು ಅವರು ದೇವನದೀ ಗಂಗೆಯನ್ನು ಗೌರವಿಸಿ ನಿಯೋಜಿಸಿದರು.

13134023a ಬಹ್ವೀಭಿರ್ಬುದ್ಧಿಭಿಃ ಸ್ಫೀತಾ ಸ್ತ್ರೀಧರ್ಮಜ್ಞಾ ಶುಚಿಸ್ಮಿತಾ|

13134023c ಶೈಲರಾಜಸುತಾಂ ದೇವೀಂ ಪುಣ್ಯಾ ಪಾಪಾಪಹಾಂ ಶಿವಾಮ್||

13134024a ಬುದ್ಧ್ಯಾ ವಿನಯಸಂಪನ್ನಾ ಸರ್ವಜ್ಞಾನವಿಶಾರದಾ|

13134024c ಸಸ್ಮಿತಂ ಬಹುಬುದ್ಧ್ಯಾಢ್ಯಾ ಗಂಗಾ ವಚನಮಬ್ರವೀತ್||

ಆಗ ನಾನಾವಿಷಯಗಳ ಪರಿಜ್ಞಾನವಿದ್ದ, ಸ್ತ್ರೀಧರ್ಮವನ್ನು ತಿಳಿದ, ಶುಚಿಸ್ಮಿತೆ, ಬುದ್ಧಿ-ವಿನಯ ಸಂಪನ್ನೆ ಸರ್ವಜ್ಞಾನವಿಶಾರದೆ ಬಹುಬುದ್ಧ್ಯಾಢ್ಯೆ ಗಂಗೆಯು ನಸುನಗುತ್ತಾ ಶೈಲರಾಜಸುತೆ ಪುಣ್ಯೆ ಪಾಪನಾಶಿನೀ ಶಿವೆ ದೇವಿಗೆ ಹೇಳಿದಳು:

13134025a ಧನ್ಯಾಃ ಸ್ಮೋಽನುಗೃಹೀತಾಃ ಸ್ಮೋ ದೇವಿ ಧರ್ಮಪರಾಯಣಾ|

13134025c ಯಾ ತ್ವಂ ಸರ್ವಜಗನ್ಮಾನ್ಯಾ ನದೀರ್ಮಾನಯಸೇಽನಘೇ||

“ಅನಘೇ! ದೇವಿ! ಧರ್ಮಪರಾಯಣೇ! ನಾನು ಧನ್ಯಳಾಗಿದ್ದೇನೆ. ಅನುಗೃಹೀತಳಾಗಿದ್ದೇನೆ. ಸರ್ವಜಗತ್ತಿಗೂ ಮಾನ್ಯಳಾಗಿರುವ ನೀನು ನದಿಯಾದ ನನ್ನನ್ನು ಗೌರವಿಸುತ್ತಿರುವೆಯಲ್ಲವೇ?

13134026a ಪ್ರಭವನ್ ಪೃಚ್ಚತೇ ಯೋ ಹಿ ಸಂಮಾನಯತಿ ವಾ ಪುನಃ|

13134026c ನೂನಂ ಜನಮದುಷ್ಟಾತ್ಮಾ ಪಂಡಿತಾಖ್ಯಾಂ ಸ ಗಚ್ಚತಿ||

ಸಮರ್ಥನಾಗಿದ್ದರೂ, ಯಾವುದೇ ದುಷ್ಟಭಾವವಿಲ್ಲದೇ ಇನ್ನೊಬ್ಬರನ್ನು ಸಮ್ಮಾನಿಸಿ ಕೇಳುವವರು ಪಂಡಿತರೆಂಬ ಖ್ಯಾತಿಯನ್ನು ಪಡೆಯುತ್ತಾರೆ.

13134027a ಜ್ಞಾನವಿಜ್ಞಾನಸಂಪನ್ನಾನೂಹಾಪೋಹವಿಶಾರದಾನ್|

13134027c ಪ್ರವಕ್ತೄನ್ ಪೃಚ್ಚತೇ ಯೋಽನ್ಯಾನ್ಸ ವೈ ನಾ ಪದಮರ್ಚ್ಚತಿ||

ಸಂಶಯವಿದ್ದ ವಿಷಯದ ಕುರಿತು ಜ್ಞಾನ-ವಿಜ್ಞಾನಸಂಪನ್ನರನ್ನು ಮತ್ತು ಊಹಾಪೋಹವಿಶಾರದರನ್ನು ಕೇಳುವವನು ಆಪತ್ತಿನಲ್ಲಿ ಬೀಳುವುದಿಲ್ಲ.

13134028a ಅನ್ಯಥಾ ಬಹುಬುದ್ಧ್ಯಾಢ್ಯೋ ವಾಕ್ಯಂ ವದತಿ ಸಂಸದಿ|

13134028c ಅನ್ಯಥೈವ ಹ್ಯಹಂಮಾನೀ ದುರ್ಬಲಂ ವದತೇ ವಚಃ||

ಬಹುಬುದ್ಧ್ಯಾಢ್ಯನು ಸಂಸದಿಯಲ್ಲಿ ಬೇರೆ ರೀತಿಯಲ್ಲಿ ಮಾತನಾಡುತ್ತಾನೆ. ಮತ್ತು ಅಹಂಕಾರಿ ದುರ್ಬಲನು ಬೇರೆಯೇ ರೀತಿಯಲ್ಲಿ ಮಾತನಾಡುತ್ತಾನೆ.

13134029a ದಿವ್ಯಜ್ಞಾನೇ ದಿವಿ ಶ್ರೇಷ್ಠೇ ದಿವ್ಯಪುಣ್ಯೇ ಸದೋತ್ಥಿತೇ|

13134029c ತ್ವಮೇವಾರ್ಹಸಿ ನೋ ದೇವಿ ಸ್ತ್ರೀಧರ್ಮಮನುಶಾಸಿತುಮ್||

ದಿವ್ಯಜ್ಞಾನಿ! ದಿವಿಯಲ್ಲಿ ಶ್ರೇಷ್ಠಳೇ! ದಿವ್ಯಪುಣ್ಯೇ! ಸದಾ ಉತ್ಸಾಹಶೀಲಳೇ! ದೇವಿ! ಸ್ತ್ರೀಧರ್ಮದ ಕುರಿತಾಗಿ ನಮ್ಮೆಲ್ಲರಿಗೆ ಉಪದೇಶಿಸಲು ನೀನೇ ಅರ್ಹಳಾಗಿರುವೆ.””

13134030 ಭೀಷ್ಮ ಉವಾಚ|

13134030a ತತಃ ಸಾರಾಧಿತಾ ದೇವೀ ಗಂಗಯಾ ಬಹುಭಿರ್ಗುಣೈಃ|

13134030c ಪ್ರಾಹ ಸರ್ವಮಶೇಷೇಣ ಸ್ತ್ರೀಧರ್ಮಂ ಸುರಸುಂದರೀ||

ಭೀಷ್ಮನು ಹೇಳಿದನು: “ಹೀಗೆ ಗಂಗೆಯು ಬಹುಗುಣಗಳಿಂದ ದೇವಿಯನ್ನು ಆರಾಧಿಸಲು ಸುರಸುಂದರೀ ಉಮೆಯು ಸ್ತ್ರೀಧರ್ಮವನ್ನು ಸಮಗ್ರವಾಗಿ ಹೇಳಿದಳು:

13134031a ಸ್ತ್ರೀಧರ್ಮೋ ಮಾಂ ಪ್ರತಿ ಯಥಾ ಪ್ರತಿಭಾತಿ ಯಥಾವಿಧಿ|

13134031c ತಮಹಂ ಕೀರ್ತಯಿಷ್ಯಾಮಿ ತಥೈವ ಪ್ರಥಿತೋ ಭವೇತ್||

“ನನ್ನ ಬುದ್ಧಿಗೆ ಹೊಳೆಯುವಂತೆ ಯಥಾವಿಧಿಯಾಗಿ ನಾನು ನಿನಗೆ ಸ್ತ್ರೀಧರ್ಮವನ್ನು ಹೇಳುತ್ತೇನೆ. ಹೀಗೆಯೇ ಇದು ಲೋಕಪ್ರಥಿತವಾಗಲಿ.

13134032a ಸ್ತ್ರೀಧರ್ಮಃ ಪೂರ್ವ ಏವಾಯಂ ವಿವಾಹೇ ಬಂಧುಭಿಃ ಕೃತಃ|

13134032c ಸಹಧರ್ಮಚರೀ ಭರ್ತುರ್ಭವತ್ಯಗ್ನಿಸಮೀಪತಃ||

ಮೊದಲು ವಿವಾಹಸಮಯದಲ್ಲಿಯೇ ಬಂಧುಗಳು ಸ್ತ್ರೀಧರ್ಮವನ್ನು ಉಪದೇಶಿಸುತ್ತಾರೆ. ಅಗ್ನಿಸಮೀಪದಲ್ಲಿಯೇ ಅವಳು ಪತಿಯ ಸಹಧರ್ಮಚಾರಿಣಿಯಾಗುತ್ತಾಳೆ.

13134033a ಸುಸ್ವಭಾವಾ ಸುವಚನಾ ಸುವೃತ್ತಾ ಸುಖದರ್ಶನಾ|

13134033c ಅನನ್ಯಚಿತ್ತಾ ಸುಮುಖೀ ಭರ್ತುಃ ಸಾ ಧರ್ಮಚಾರಿಣೀ||

ಒಳ್ಳೆಯ ಸ್ವಭಾವವಿರುವ, ಒಳ್ಳೆಯ ಮಾತನ್ನಾಡುವ, ಒಳ್ಳೆಯ ನಡತೆಗಳಿರುವ, ನೋಡಿದರೆ ಸುಖವನ್ನೀಡುವ, ಅನ್ಯರ ಕುರಿತು ಮನಸ್ಸನ್ನು ಹರಿಸದ, ಪತಿಯ ಸಮ್ಮುಖದಲ್ಲಿ ನಗುಮುಖದಿಂದಿರುವವಳು ಸ್ತ್ರೀಧರ್ಮಚಾರಿಣಿಯು.

13134034a ಸಾ ಭವೇದ್ಧರ್ಮಪರಮಾ ಸಾ ಭವೇದ್ಧರ್ಮಭಾಗಿನೀ|

13134034c ದೇವವತ್ಸತತಂ ಸಾಧ್ವೀ ಯಾ ಭರ್ತಾರಂ ಪ್ರಪಶ್ಯತಿ||

ಸತತವೂ ಪತಿಯನ್ನು ದೇವತೆಯಂತೆ ಕಾಣುವವಳೇ ಪರಮ ಧರ್ಮಿಷ್ಠಳು. ಅವಳೇ ಧರ್ಮಫಲಕ್ಕೆ ಭಾಗಿಯಾಗುತ್ತಾಳೆ.

13134035a ಶುಶ್ರೂಷಾಂ ಪರಿಚಾರಂ ಚ ದೇವವದ್ಯಾ ಕರೋತಿ ಚ|

13134035c ನಾನ್ಯಭಾವಾ ಹ್ಯವಿಮನಾಃ ಸುವ್ರತಾ ಸುಖದರ್ಶನಾ||

13134036a ಪುತ್ರವಕ್ತ್ರಮಿವಾಭೀಕ್ಷ್ಣಂ ಭರ್ತುರ್ವದನಮೀಕ್ಷತೇ|

13134036c ಯಾ ಸಾಧ್ವೀ ನಿಯತಾಚಾರಾ ಸಾ ಭವೇದ್ಧರ್ಮಚಾರಿಣೀ||

ದೇವನೆಂದು ತಿಳಿದು ಪತಿಯ ಶುಶ್ರೂಷೆ ಪರಿಚಾರಗಳನ್ನು ಮಾಡುವ, ಅನ್ಯರಲ್ಲಿ ಪ್ರೇಮಭಾವವನ್ನಿಟ್ಟಿರದ, ಮಗನ ಮುಖವನ್ನು ನೋಡುವಂತೆ ಪತಿಯ ಮುಖವನ್ನೂ ನೋಡುವ, ವಿಮನಸ್ಕಳಾಗಿರದ, ಸುವ್ರತೆ, ಸುಖದರ್ಶನೆ, ಸಾಧ್ವೀ, ನಿಯಮಗಳನ್ನು ಆಚರಿಸುವವಳು ಧರ್ಮಚಾರಿಣಿಯು.

13134037a ಶ್ರುತ್ವಾ ದಂಪತಿಧರ್ಮಂ ವೈ ಸಹಧರ್ಮಕೃತಂ ಶುಭಮ್|

13134037c ಅನನ್ಯಚಿತ್ತಾ ಸುಮುಖೀ ಭರ್ತುಃ ಸಾ ಧರ್ಮಚಾರಿಣೀ||

ದಂಪತಿಧರ್ಮವನ್ನು ಕೇಳಿ ಸಹಧರ್ಮಿಗಳಾಗಿಯೇ ಶುಭಕರ್ಮಗಳನ್ನು ಮಾಡುತ್ತಾ ಅನನ್ಯಚಿತ್ತಳಾಗಿ ಪತಿಗೆ ಸುಮುಖಿಯಾಗಿರುವವಳು ಧರ್ಮಚಾರಿಣಿಯು.

13134038a ಪರುಷಾಣ್ಯಪಿ ಚೋಕ್ತಾ ಯಾ ದೃಷ್ಟಾ ವಾ ಕ್ರೂರಚಕ್ಷುಷಾ[5]|

13134038c ಸುಪ್ರಸನ್ನಮುಖೀ ಭರ್ತುರ್ಯಾ ನಾರೀ ಸಾ ಪತಿವ್ರತಾ||

ಪತಿಯು ಕಠೋರವಾಗಿ ಮಾತನಾಡಿದರೂ ಅಥವಾ ಕ್ರೂರ ದೃಷ್ಟಿಯಿಂದ ನೋಡಿದರೂ ಪತಿಯ ಎದಿರು ಸುಪ್ರಸನ್ನಮುಖಿಯಾಗಿಯೇ ಇರುವ ನಾರಿಯು ಪತಿವ್ರತೆಯು.

13134039a ನ ಚಂದ್ರಸೂರ್ಯೌ ನ ತರುಂ ಪುಂನಾಮ್ನೋ ಯಾ ನಿರೀಕ್ಷತೇ|

13134039c ಭರ್ತೃವರ್ಜಂ ವರಾರೋಹಾ ಸಾ ಭವೇದ್ಧರ್ಮಚಾರಿಣೀ||

ಪತಿಯನ್ನು ಬಿಟ್ಟು ಸೂರ್ಯನನ್ನಾಗಲೀ, ಚಂದ್ರನನ್ನಾಗಲೀ, ಅಥವಾ ವೃಕ್ಷವನ್ನಾಗಲೀ ಪುರುಷನೆಂಬ ಭಾವನೆಯಿಂದ ನೋಡದಿರುವ ವರಾರೋಹೆಯು ಧರ್ಮಚಾರಿಣಿಯು.

13134040a ದರಿದ್ರಂ ವ್ಯಾಧಿತಂ ದೀನಮಧ್ವನಾ ಪರಿಕರ್ಶಿತಮ್|

13134040c ಪತಿಂ ಪುತ್ರಮಿವೋಪಾಸ್ತೇ ಸಾ ನಾರೀ ಧರ್ಮಭಾಗಿನೀ||

ಪತಿಯು ದರಿದ್ರನಾಗಿರಲಿ, ವ್ಯಾಧಿತನಾಗಿರಲಿ, ಅಥವಾ ನಡೆದು ದಣಿದಿರಲಿ, ಅವನನ್ನು ಪುತ್ರನಂತೆ ಉಪಚರಿಸುವ ನಾರಿಯು ಧರ್ಮಭಾಗಿನಿಯಾಗುತ್ತಾಳೆ[6].

13134041a ಯಾ ನಾರೀ ಪ್ರಯತಾ ದಕ್ಷಾ ಯಾ ನಾರೀ ಪುತ್ರಿಣೀ ಭವೇತ್|

13134041c ಪತಿಪ್ರಿಯಾ ಪತಿಪ್ರಾಣಾ ಸಾ ನಾರೀ ಧರ್ಮಭಾಗಿನೀ||

ಪರಿಶುದ್ಧ ಅಂತಃಕರಣದ ನಾರಿ, ದಕ್ಷನಾರಿ, ಪುತ್ರರನ್ನು ಪಡೆದ, ಪತಿಗೆ ಪ್ರಿಯಳಾದ ಮತ್ತು ಪತಿಯನ್ನೇ ಪ್ರಾಣವೆಂದು ತಿಳಿದ ನಾರಿಯು ಧರ್ಮಭಾಗಿನಿಯಾಗುತ್ತಾಳೆ.

13134042a ಶುಶ್ರೂಷಾಂ ಪರಿಚರ್ಯಾಂ ಚ ಕರೋತ್ಯವಿಮನಾಃ ಸದಾ|

13134042c ಸುಪ್ರತೀತಾ ವಿನೀತಾ ಚ ಸಾ ನಾರೀ ಧರ್ಮಭಾಗಿನೀ||

ಪತಿಯ ಮೇಲಿನ ವಿಶ್ವಾಸದೊಂದಿಗೆ ಪ್ರಸನ್ನ ಮನಸ್ಸಿನಿಂದ, ವಿನೀತಳಾಗಿ ಸದಾ ಶುಶ್ರೂಷೆ-ಪರಿಚರ್ಯಗಳನ್ನು ಮಾಡುವ ನಾರಿಯು ಧರ್ಮಭಾಗಿನಿಯಾಗುತ್ತಾಳೆ.

13134043a ನ ಕಾಮೇಷು ನ ಭೋಗೇಷು ನೈಶ್ವರ್ಯೇ ನ ಸುಖೇ ತಥಾ|

13134043c ಸ್ಪೃಹಾ ಯಸ್ಯಾ ಯಥಾ ಪತ್ಯೌ ಸಾ ನಾರೀ ಧರ್ಮಭಾಗಿನೀ||

ಪತಿಯಲ್ಲಿರುವಷ್ಟು ಪ್ರೀತಿಯು ಕಾಮಗಳಲ್ಲಾಗಲೀ, ಭೋಗಗಳಲ್ಲಾಗಲೀ, ಐಶ್ವರ್ಯದಲ್ಲಾಗಲೀ, ಸುಖದಲ್ಲಾಗಲೀ ಇಲ್ಲದಿರುವ ನಾರಿಯು ಧರ್ಮಭಾಗಿನಿಯಾಗುತ್ತಾಳೆ.

13134044a ಕಲ್ಯೋತ್ಥಾನರತಾ ನಿತ್ಯಂ ಗುರು[7]ಶುಶ್ರೂಷಣೇ ರತಾ|

13134044c ಸುಸಂಮೃಷ್ಟಕ್ಷಯಾ ಚೈವ ಗೋಶಕೃತ್ಕೃತಲೇಪನಾ||

13134045a ಅಗ್ನಿಕಾರ್ಯಪರಾ ನಿತ್ಯಂ ಸದಾ ಪುಷ್ಪಬಲಿಪ್ರದಾ|

13134045c ದೇವತಾತಿಥಿಭೃತ್ಯಾನಾಂ ನಿರುಪ್ಯ ಪತಿನಾ ಸಹ||

13134046a ಶೇಷಾನ್ನಮುಪಭುಂಜಾನಾ ಯಥಾನ್ಯಾಯಂ ಯಥಾವಿಧಿ|

13134046c ತುಷ್ಟಪುಷ್ಟಜನಾ ನಿತ್ಯಂ ನಾರೀ ಧರ್ಮೇಣ ಯುಜ್ಯತೇ||

ಬೆಳಿಗ್ಗೆ ಬೇಗ ಏಳುವ, ನಿತ್ಯವೂ ಗುರುಶುಶ್ರೂಷಣೆಯಲ್ಲಿ ನಿರತಳಾದ, ಗುಡಿಸಿ ಗೋಮಯದಿಂದ ಸಾರಿಸಿ ಮನೆಯನ್ನು ಚೊಕ್ಕವಾಗಿ ಇಟ್ಟುಕೊಳ್ಳುವ, ನಿತ್ಯವೂ ಅಗ್ನಿಕಾರ್ಯಮಾಡುವ, ಸದಾ ಪುಷ್ಪಬಲಿಯನ್ನು ನೀಡುವ, ದೇವತೆ-ಅತಿಥಿಗಳು-ಭೃತ್ಯರ ಭೋಜನವಾದ ನಂತರ ಶೇಷಾನ್ನವನ್ನು ಪತಿಯೊಂದಿಗೆ ಯಥಾನ್ಯಾಯವಾಗಿ ಯಥಾವಿಧಿಯಾಗಿ ಉಣ್ಣುವ, ಮನೆಯ ಜನರು ನಿತ್ಯವೂ ತುಷ್ಟಪುಷ್ಟರಾಗಿರುವಂತೆ ನೋಡಿಕೊಳ್ಳುವ ನಾರಿಯು ಧರ್ಮದಿಂದಿರುವವಳು.

13134047a ಶ್ವಶ್ರೂಶ್ವಶುರಯೋಃ ಪಾದೌ ತೋಷಯಂತೀ ಗುಣಾನ್ವಿತಾ|

13134047c ಮಾತಾಪಿತೃಪರಾ ನಿತ್ಯಂ ಯಾ ನಾರೀ ಸಾ ತಪೋಧನಾ||

ಅತ್ತೆ-ಮಾವರ ಪಾದಸೇವೆಯಲ್ಲಿ ನಿರತಳಾಗಿರುವ ಮತ್ತು ನಿತ್ಯವೂ ಮಾತಾಪಿತೃಪರಳಾಗಿರುವ ಗುಣಾನ್ವಿತೆ ನಾರಿಯು ತಪೋಧನಳು.

13134048a ಬ್ರಾಹ್ಮಣಾನ್ದುರ್ಬಲಾನಾಥಾನ್ದೀನಾಂಧಕೃಪಣಾಂಸ್ತಥಾ|

13134048c ಬಿಭರ್ತ್ಯನ್ನೇನ ಯಾ ನಾರೀ ಸಾ ಪತಿವ್ರತಭಾಗಿನೀ||

ಬ್ರಾಹ್ಮಣರನ್ನೂ, ದುರ್ಬಲರನ್ನೂ, ಅನಾಥರನ್ನೂ, ದೀನರನ್ನೂ, ಅಂಧ-ಕೃಪಣರನ್ನೂ ಅನ್ನವನ್ನಿತ್ತು ಪೋಷಿಸುವ ನಾರಿಯು ಪತಿವ್ರತಪುಣ್ಯದ ಭಾಗಿಯಾಗುತ್ತಾಳೆ.

13134049a ವ್ರತಂ ಚರತಿ ಯಾ ನಿತ್ಯಂ ದುಶ್ಚರಂ ಲಘುಸತ್ತ್ವಯಾ|

13134049c ಪತಿಚಿತ್ತಾ ಪತಿಹಿತಾ ಸಾ ಪತಿವ್ರತಭಾಗಿನೀ||

ದುಶ್ಚರ ವ್ರತವನ್ನೂ ನಿತ್ಯವೂ ಸರಾಳವಾಗಿ ಮಾಡುವ, ಪತಿಯಲ್ಲಿಯೇ ಚಿತ್ತವನ್ನಿಟ್ಟಿರುವ, ಪತಿಯಹಿತದಲ್ಲಿಯೇ ಇರುವವಳು ಪತಿವ್ರತಪುಣ್ಯದ ಭಾಗಿಯಾಗುತ್ತಾಳೆ.

13134050a ಪುಣ್ಯಮೇತತ್ತಪಶ್ಚೈವ ಸ್ವರ್ಗಶ್ಚೈಷ ಸನಾತನಃ|

13134050c ಯಾ ನಾರೀ ಭರ್ತೃಪರಮಾ ಭವೇದ್ಭರ್ತೃವ್ರತಾ ಶಿವಾ||

ಪತಿಯನ್ನೇ ಪರಮ ದೈವವೆಂದು ತಿಳಿದು ಪತಿವ್ರತಳಾಗಿರುವ ಕಲ್ಯಾಣೀ ನಾರಿಗೆ ಅದೇ ತಪಸ್ಸಿನ ಪುಣ್ಯವನ್ನು ನೀಡುತ್ತದೆ ಮತ್ತು ಅದೇ ಸನಾತನ ಸ್ವರ್ಗವನ್ನೂ ದೊರಕಿಸುತ್ತದೆ.

13134051a ಪತಿರ್ಹಿ ದೇವೋ ನಾರೀಣಾಂ ಪತಿರ್ಬಂಧುಃ[8] ಪತಿರ್ಗತಿಃ|

13134051c ಪತ್ಯಾ ಸಮಾ ಗತಿರ್ನಾಸ್ತಿ ದೈವತಂ ವಾ ಯಥಾ ಪತಿಃ||

ನಾರಿಯರಿಗೆ ಪತಿಯೇ ದೇವನು. ಪತಿಯೇ ಬಂಧುವು. ಪತಿಯೇ ಗತಿ. ಪತಿಯ ಸಮನಾದ ಗತಿಯಿಲ್ಲ ಮತ್ತು ಪತಿಯಂಥಹ ದೇವತೆಯಿಲ್ಲ.

13134052a ಪತಿಪ್ರಸಾದಃ ಸ್ವರ್ಗೋ ವಾ ತುಲ್ಯೋ ನಾರ್ಯಾ ನ ವಾ ಭವೇತ್|

13134052c ಅಹಂ ಸ್ವರ್ಗಂ ನ ಹೀಚ್ಚೇಯಂ ತ್ವಯ್ಯಪ್ರೀತೇ ಮಹೇಶ್ವರ||

ಪತಿಯ ಅನುಗ್ರಹ ಮತ್ತು ಸ್ವರ್ಗ ಇವೆರಡು ನಾರಿಗೆ ಸಮನಾಗಿರಬಹುದು ಅಥವಾ ಇಲ್ಲದೇ ಇರಬಹುದು. ಮಹೇಶ್ವರ! ನೀನು ಅಪ್ರೀತನಾದರೆ ನಾನು ಮಾತ್ರ ಸ್ವರ್ಗವನ್ನೂ ಬಯಸುವುದಿಲ್ಲ.

13134053a ಯದ್ಯಕಾರ್ಯಮಧರ್ಮಂ ವಾ ಯದಿ ವಾ ಪ್ರಾಣನಾಶನಮ್|

13134053c ಪತಿರ್ಬ್ರೂಯಾದ್ದರಿದ್ರೋ ವಾ ವ್ಯಾಧಿತೋ ವಾ ಕಥಂ ಚನ||

13134054a ಆಪನ್ನೋ ರಿಪುಸಂಸ್ಥೋ ವಾ ಬ್ರಹ್ಮಶಾಪಾರ್ದಿತೋಽಪಿ ವಾ|

13134054c ಆಪದ್ಧರ್ಮಾನನುಪ್ರೇಕ್ಷ್ಯ ತತ್ಕಾರ್ಯಮವಿಶಂಕಯಾ||

ಪತಿಯು ದರಿದ್ರನಾಗಿರಲಿ, ವ್ಯಾಧಿತನಾಗಿರಲಿ, ಆಪತ್ತಿನಲ್ಲಿರಲಿ, ಶತ್ರುಗಳ ಮಧ್ಯೆ ಇರಲಿ, ಬ್ರಹ್ಮಶಾಪದಿಂದ ಪೀಡಿತನಾಗಿರಲಿ – ನಾರಿಯು ಅವನು ಹೇಳುವುದನ್ನು – ಅದು ಅಕಾರ್ಯವಾಗಿರಲಿ, ಅಧರ್ಮವಾಗಿರಲಿ, ಅಥವಾ ಪ್ರಾಣನಾಶಕವಾಗಿರಲಿ – ಆಪದ್ಧರ್ಮವೆಂದು ತಿಳಿದು ಮಾಡಬೇಕು.

13134055a ಏಷ ದೇವ ಮಯಾ ಪ್ರೋಕ್ತಃ ಸ್ತ್ರೀಧರ್ಮೋ ವಚನಾತ್ತವ|

13134055c ಯಾ ತ್ವೇವಂಭಾವಿನೀ ನಾರೀ ಸಾ ಭವೇದ್ಧರ್ಮಭಾಗಿನೀ||

ದೇವ! ನಿನ್ನ ಮಾತಿನಂತೆ ನಾನು ಸ್ತ್ರೀಧರ್ಮವನ್ನು ಹೇಳಿದ್ದೇನೆ. ಹೀಗಿರುವ ನಾರಿಯು ಧರ್ಮಭಾಗಿನಿಯಾಗುತ್ತಾಳೆ.””

13134056 ಭೀಷ್ಮ ಉವಾಚ|

13134056a ಇತ್ಯುಕ್ತಃ ಸ ತು ದೇವೇಶಃ ಪ್ರತಿಪೂಜ್ಯ ಗಿರೇಃ ಸುತಾಮ್|

13134056c ಲೋಕಾನ್ವಿಸರ್ಜಯಾಮಾಸ ಸರ್ವೈರನುಚರೈಃ ಸಹ||

ಭೀಷ್ಮನು ಹೇಳಿದನು: “ಅವಳು ಹೀಗೆ ಹೇಳಲು ದೇವೇಶನು ಗಿರಿಸುತೆಯನ್ನು ಪ್ರತಿಪೂಜಿಸಿ ಸರ್ವ ಅನುಚರರೊಂದಿಗೆ ಅಲ್ಲಿದ್ದ ಎಲ್ಲರನ್ನೂ ಬೀಳ್ಕೊಟ್ಟನು.

13134057a ತತೋ ಯಯುರ್ಭೂತಗಣಾಃ ಸರಿತಶ್ಚ ಯಥಾಗತಮ್|

13134057c ಗಂಧರ್ವಾಪ್ಸರಸಶ್ಚೈವ ಪ್ರಣಮ್ಯ ಶಿರಸಾ ಭವಮ್||

ಅನಂತರ ಭವನನ್ನು ಶಿರಸಾ ನಮಸ್ಕರಿಸಿ ಭೂತಗಣಗಳು, ನದಿಗಳು, ಗಂಧರ್ವ-ಅಪ್ಸರೆಯರು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ಹೊರಟು ಹೋದರು.””

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಉಮಾಮಹೇಶ್ವರಸಂವಾದೇ ಸ್ತ್ರೀಧರ್ಮಕಥನೇ ಚತುಸ್ತ್ರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಉಮಾಮಹೇಶ್ವರಸಂವಾದೇ ಸ್ತ್ರೀಧರ್ಮಕಥನ ಎನ್ನುವ ನೂರಾಮೂವತ್ನಾಲ್ಕನೇ ಅಧ್ಯಾಯವು.

[1] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ನಾರದ ಉವಾಚ| ಏವಮುಕ್ತ್ವಾ ಮಹಾದೇವಃ ಶ್ರೋತುಕಾಮಃ ಸ್ವಯಂ ಪ್ರಭುಃ| ಅನುಕೂಲಾಂ ಪ್ರಿಯಾಂ ಭಾರ್ಯಾಂ ಪಾರ್ಶ್ವಸ್ಥಾಂ ಸಮಭಾಷತ|| (ಭಾರತ ದರ್ಶನ).

[2] ಮಾರ್ಕಂಡೇಯಸ್ಯ (ಭಾರತ ದರ್ಶನ).

[3] ಗೌರ್ಯಾಂ (ಭಾರತ ದರ್ಶನ).

[4] ತವ ಚಾರ್ಧೇನ ನಿರ್ಮಿತಮ್| (ಭಾರತ ದರ್ಶನ).

[5] ದೃಷ್ಟಾ ದುಷ್ಟೇನ ಚಕ್ಷುಷಾ| (ಭಾರತ ದರ್ಶನ).

[6] ಸ್ತ್ರೀಧರ್ಮದ ಫಲವನ್ನು ಪಡೆಯುತ್ತಾಳೆ (ಭಾರತ ದರ್ಶನ).

[7] ಗೃಹ (ಭಾರತ ದರ್ಶನ).

[8] ಪತಿರ್ಬಂಧಃ (ಭಾರತ ದರ್ಶನ).

Comments are closed.