Udyoga Parva: Chapter 194

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೯೪

ಭೀಷ್ಮಾದಿಗಳ ಶಕ್ತಿಯ ಕುರಿತ ಚರ್ಚೆ

ಪಾಂಡವರ ಸೇನೆಯನ್ನು ಎಷ್ಟು ದಿನದಲ್ಲಿ ನಾಶಪಡಿಸಬಲ್ಲರೆಂದು ದುರ್ಯೋಧನನು ಕೇಳಲು ಭೀಷ್ಮನು ಒಂದು ತಿಂಗಳೆಂದೂ (೧-೧೪), ದ್ರೋಣನು ಒಂದು ತಿಂಗಳೆಂದೂ, ಕೃಪನು ಎರಡು ತಿಂಗಳೆಂದೂ, ಅಶ್ವತ್ಥಾಮನು ಹತ್ತು ರಾತ್ರಿಗಳೆಂದೂ, ಕರ್ಣನು ಐದು ರಾತ್ರಿಗಳೆಂದೂ ಹೇಳಿದುದು (೧೫-೨೨).

05194001 ಸಂಜಯ ಉವಾಚ|

05194001a ಪ್ರಭಾತಾಯಾಂ ತು ಶರ್ವರ್ಯಾಂ ಪುನರೇವ ಸುತಸ್ತವ|

05194001c ಮಧ್ಯೇ ಸರ್ವಸ್ಯ ಸೈನ್ಯಸ್ಯ ಪಿತಾಮಹಮಪೃಚ್ಚತ||

ಸಂಜಯನು ಹೇಳಿದನು: “ರಾತ್ರಿಯು ಕಳೆದು ಬೆಳಗಾಗಲು ನಿನ್ನ ಮಗನು ಪುನಃ ಸರ್ವ ಸೇನೆಯ ಮಧ್ಯೆ ಪಿತಾಮಹನನ್ನು ಕೇಳಿದನು:

05194002a ಪಾಂಡವೇಯಸ್ಯ ಗಾಂಗೇಯ ಯದೇತತ್ಸೈನ್ಯಮುತ್ತಮಂ|

05194002c ಪ್ರಭೂತನರನಾಗಾಶ್ವಂ ಮಹಾರಥಸಮಾಕುಲಂ||

05194003a ಭೀಮಾರ್ಜುನಪ್ರಭೃತಿಭಿರ್ಮಹೇಷ್ವಾಸೈರ್ಮಹಾಬಲೈಃ|

05194003c ಲೋಕಪಾಲೋಪಮೈರ್ಗುಪ್ತಂ ಧೃಷ್ಟದ್ಯುಮ್ನಪುರೋಗಮೈಃ||

05194004a ಅಪ್ರಧೃಷ್ಯಮನಾವಾರ್ಯಮುದ್ವೃತ್ತಮಿವ ಸಾಗರಂ|

05194004c ಸೇನಾಸಾಗರಮಕ್ಷೋಭ್ಯಮಪಿ ದೇವೈರ್ಮಹಾಹವೇ||

05194005a ಕೇನ ಕಾಲೇನ ಗಾಂಗೇಯ ಕ್ಷಪಯೇಥಾ ಮಹಾದ್ಯುತೇ|

05194005c ಆಚಾರ್ಯೋ ವಾ ಮಹೇಷ್ವಾಸಃ ಕೃಪೋ ವಾ ಸುಮಹಾಬಲಃ||

05194006a ಕರ್ಣೋ ವಾ ಸಮರಶ್ಲಾಘೀ ದ್ರೌಣಿರ್ವಾ ದ್ವಿಜಸತ್ತಮಃ|

05194006c ದಿವ್ಯಾಸ್ತ್ರವಿದುಷಃ ಸರ್ವೇ ಭವಂತೋ ಹಿ ಬಲೇ ಮಮ||

“ಗಾಂಗೇಯ! ಪಾಂಡವನ ಈ ಉತ್ತಮ ಸೈನ್ಯವನ್ನು, ನರ-ನಾಗ-ಅಶ್ವ ಮತ್ತು ಮಹಾರಥಗಳ ಸಂಕುಲದಿಂದ ಕೂಡಿದ, ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ಲೋಕಪಾಲಕರಂತಿರುವ ಭೀಮಾರ್ಜುನರೇ ಮೊದಲಾದವರ ರಕ್ಷಣೆಯಲ್ಲಿರುವ, ಗೆಲ್ಲಲಸಾಧ್ಯವಾದ, ತಡೆಯಲಸಾಧ್ಯವಾದ ಸಾಗರದಂತೆ ಉಕ್ಕಿ ಬರುತ್ತಿರುವ, ದೇವತೆಗಳಿಂದಲೂ ಅಲುಗಾಡಿಸಲಸಾಧ್ಯವಾದ ಈ ಸೇನಾ ಸಾಗರವನ್ನು ಗಾಂಗೇಯ! ನೀನಾಗಲೀ, ಅಥವಾ ಮಹೇಷ್ವಾಸ ಆಚಾರ್ಯನಾಗಲೀ, ಅಥವಾ ಮಹಾಬಲಿ ಕೃಪನಾಗಲೀ, ಅಥವಾ ಸಮರಶ್ಲಾಘೀ ಕರ್ಣನಾಗಲೀ ಅಥವಾ ದ್ವಿಜಸತ್ತಮ ದ್ರೌಣಿಯಾಗಲೀ ಎಷ್ಟುಸಮಯದಲ್ಲಿ ಮುಗಿಸಬಲ್ಲರು? ಏಕೆಂದರೆ ನನ್ನ ಬಲದಲ್ಲಿರುವ ನೀವೆಲ್ಲರೂ ದಿವ್ಯಾಸ್ತ್ರವಿದುಷರು.

05194007a ಏತದಿಚ್ಚಾಮ್ಯಹಂ ಜ್ಞಾತುಂ ಪರಂ ಕೌತೂಹಲಂ ಹಿ ಮೇ|

05194007c ಹೃದಿ ನಿತ್ಯಂ ಮಹಾಬಾಹೋ ವಕ್ತುಮರ್ಹಸಿ ತನ್ ಮಮ||

ಮಹಾಬಾಹೋ! ಇದನ್ನು ತಿಳಿಯಲು ನಾನು ಇಚ್ಛಿಸುತ್ತೇನೆ. ನಿತ್ಯವೂ ಇದರ ಕುರಿತು ನನ್ನ ಹೃದಯದಲ್ಲಿ ಪರಮ ಕುತೂಹಲವಿದೆ. ಅದನ್ನು ನನಗೆ ಹೇಳಬೇಕು.”

05194008 ಭೀಷ್ಮ ಉವಾಚ|

05194008a ಅನುರೂಪಂ ಕುರುಶ್ರೇಷ್ಠ ತ್ವಯ್ಯೇತತ್ಪೃಥಿವೀಪತೇ|

05194008c ಬಲಾಬಲಮಮಿತ್ರಾಣಾಂ ಸ್ವೇಷಾಂ ಚ ಯದಿ ಪೃಚ್ಚಸಿ||

ಭೀಷ್ಮನು ಹೇಳಿದನು: ಪೃಥಿವೀಪತೇ! ಕುರುಶ್ರೇಷ್ಠ! ಅಮಿತ್ರರ ಮತ್ತು ನಮ್ಮವರ ಬಲಾಬಲಗಳ ಕುರಿತು ನೀನು ಕೇಳಿರುವ ಇದು ನಿನಗೆ ಅನುರೂಪವಾದುದು.

05194009a ಶೃಣು ರಾಜನ್ಮಮ ರಣೇ ಯಾ ಶಕ್ತಿಃ ಪರಮಾ ಭವೇತ್|

05194009c ಅಸ್ತ್ರವೀರ್ಯಂ ರಣೇ ಯಚ್ಚ ಭುಜಯೋಶ್ಚ ಮಹಾಭುಜ||

ರಾಜನ್! ಮಹಾಭುಜ! ರಣದಲ್ಲಿ ನನ್ನ ಶಕ್ತಿಯ ಗಡಿಯೇನೆನ್ನುವುದನ್ನು, ರಣದಲ್ಲಿ ನನ್ನ ಭುಜಗಳ ಅಸ್ತ್ರವೀರ್ಯವನ್ನು ಕೇಳು.

05194010a ಆರ್ಜವೇನೈವ ಯುದ್ಧೇನ ಯೋದ್ಧವ್ಯ ಇತರೋ ಜನಃ|

05194010c ಮಾಯಾಯುದ್ಧೇನ ಮಾಯಾವೀ ಇತ್ಯೇತದ್ಧರ್ಮನಿಶ್ಚಯಃ||

ಸಾಮಾನ್ಯ ಜನರು ಯುದ್ಧಮಾಡುವಾಗ ಆರ್ಜವದಿಂದಲೇ ಯುದ್ಧ ಮಾಡಬೇಕು. ಮಾಯಾವಿಯೊಂದಿಗೆ ಮಾಯಾಯುದ್ಧವನ್ನು ಮಾಡಬೇಕು. ಇದು ಧರ್ಮನಿಶ್ಚಯ.

05194011a ಹನ್ಯಾಮಹಂ ಮಹಾಬಾಹೋ ಪಾಂಡವಾನಾಮನೀಕಿನೀಂ|

05194011c ದಿವಸೇ ದಿವಸೇ ಕೃತ್ವಾ ಭಾಗಂ ಪ್ರಾಗಾಹ್ನಿಕಂ ಮಮ||

ಮಹಾಬಾಹೋ! ಪಾಂಡವರ ಸೇನೆಯನ್ನು ದಿನ ದಿನವೂ ಮಧ್ಯಾಹ್ನದ ಮೊದಲ ಭಾಗವನ್ನಾಗಿಸಿ ನಾನು ಕೊಲ್ಲಬಲ್ಲೆ.

05194012a ಯೋಧಾನಾಂ ದಶಸಾಹಸ್ರಂ ಕೃತ್ವಾ ಭಾಗಂ ಮಹಾದ್ಯುತೇ|

05194012c ಸಹಸ್ರಂ ರಥಿನಾಮೇಕಮೇಷ ಭಾಗೋ ಮತೋ ಮಮ||

ಮಹಾದ್ಯುತೇ! ಹತ್ತುಸಾವಿರ ಯೋಧರನ್ನು ಒಂದು ಭಾಗವನ್ನಾಗಿ ಮಾಡಿಕೊಂಡು ಒಂದು ಸಾವಿರ ರಥಿಕರು ಒಂದು ಭಾಗವಾಗುತ್ತಾರೆ ಎಂದು ನನ್ನ ಮತ.

05194013a ಅನೇನಾಹಂ ವಿಧಾನೇನ ಸಮ್ನದ್ಧಃ ಸತತೋತ್ಥಿತಃ|

05194013c ಕ್ಷಪಯೇಯಂ ಮಹತ್ಸೈನ್ಯಂ ಕಾಲೇನಾನೇನ ಭಾರತ||

ಈ ರೀತಿಯ ವಿಧಾನದಿಂದ ಸದಾ ಸನ್ನದ್ಧನಾಗಿ ಮೇಲೆ ನಿಂತಿದ್ದರೆ ಭಾರತ! ನಾನು ಈ ಸೇನೆಯನ್ನು ಸಮಯದಲ್ಲಿ ಕೊನೆಗಾಣಿಸಬಹುದು.

05194014a ಯದಿ ತ್ವಸ್ತ್ರಾಣಿ ಮುಂಚೇಯಂ ಮಹಾಂತಿ ಸಮರೇ ಸ್ಥಿತಃ|

05194014c ಶತಸಾಹಸ್ರಘಾತೀನಿ ಹನ್ಯಾಂ ಮಾಸೇನ ಭಾರತ||

ಭಾರತ! ಒಂದುವೇಳೆ ನೂರುಸಾವಿರರನ್ನು ಸಂಹರಿಸುವ ಮಹಾ ಅಸ್ತ್ರಗಳನ್ನು ಪ್ರಯೋಗಿಸಿದರೆ ಸಮರದಲ್ಲಿ ನಿಂತು ಒಂದು ತಿಂಗಳಲ್ಲಿ ಕೊಲ್ಲಬಹುದು.””

05194015 ಸಂಜಯ ಉವಾಚ|

05194015a ಶ್ರುತ್ವಾ ಭೀಷ್ಮಸ್ಯ ತದ್ವಾಕ್ಯಂ ರಾಜಾ ದುರ್ಯೋಧನಸ್ತದಾ|

05194015c ಪರ್ಯಪೃಚ್ಚತ ರಾಜೇಂದ್ರ ದ್ರೋಣಮಂಗಿರಸಾಂ ವರಂ||

ಸಂಜಯನು ಹೇಳಿದನು: “ರಾಜೇಂದ್ರ! ಭೀಷ್ಮನ ಆ ಮಾತುಗಳನ್ನು ಕೇಳಿ ರಾಜಾ ದುರ್ಯೋಧನನು ಅಂಗಿರಸರಲ್ಲಿ ಶ್ರೇಷ್ಠನಾದ ದ್ರೋಣನನ್ನು ಪ್ರಶ್ನಿಸಿದನು.

05194016a ಆಚಾರ್ಯ ಕೇನ ಕಾಲೇನ ಪಾಂಡುಪುತ್ರಸ್ಯ ಸೈನಿಕಾನ್|

05194016c ನಿಹನ್ಯಾ ಇತಿ ತಂ ದ್ರೋಣಃ ಪ್ರತ್ಯುವಾಚ ಹಸನ್ನಿವ||

“ಆಚಾರ್ಯ! ಪಾಂಡುಪುತ್ರರ ಸೈನಿಕರನ್ನು ಎಷ್ಟು ಸಮಯದಲ್ಲಿ ಕೊಲ್ಲಬಲ್ಲಿರಿ?” ಇದಕ್ಕೆ ದ್ರೋಣನು ನಗುತ್ತಾ ಉತ್ತರಿಸಿದನು.

05194017a ಸ್ಥವಿರೋಽಸ್ಮಿ ಕುರುಶ್ರೇಷ್ಠ ಮಂದಪ್ರಾಣವಿಚೇಷ್ಟಿತಃ|

05194017c ಅಸ್ತ್ರಾಗ್ನಿನಾ ನಿರ್ದಹೇಯಂ ಪಾಂಡವಾನಾಮನೀಕಿನೀಂ||

05194018a ಯಥಾ ಭೀಷ್ಮಃ ಶಾಂತನವೋ ಮಾಸೇನೇತಿ ಮತಿರ್ಮಮ|

05194018c ಏಷಾ ಮೇ ಪರಮಾ ಶಕ್ತಿರೇತನ್ ಮೇ ಪರಮಂ ಬಲಂ||

“ಕುರುಶ್ರೇಷ್ಠ! ಮುದುಕನಾಗಿದ್ದೇನೆ. ಪ್ರಾಣವು ಮಂದವಾಗಿ ನಡೆದುಕೊಳ್ಳುತ್ತಿದೆ. ಶಾಂತನವ ಭೀಷ್ಮನಂತೆ ನಾನೂ ಕೂಡ ಅಸ್ತ್ರಾಗ್ನಿಯಿಂದ ಪಾಂಡವರ ಸೇನೆಯನ್ನು ಒಂದು ತಿಂಗಳಲ್ಲಿ ಸುಡಬಲ್ಲೆನೆಂದೆನಿಸುತ್ತದೆ. ಇದು ನನ್ನ ಶಕ್ತಿಯ ಮಿತಿ. ಮತ್ತು ಇದು ನನ್ನ ಬಲದ ಮಿತಿ.”

05194019a ದ್ವಾಭ್ಯಾಮೇವ ತು ಮಾಸಾಭ್ಯಾಂ ಕೃಪಃ ಶಾರದ್ವತೋಽಬ್ರವೀತ್|

05194019c ದ್ರೌಣಿಸ್ತು ದಶರಾತ್ರೇಣ ಪ್ರತಿಜಜ್ಞೇ ಬಲಕ್ಷಯಂ|

05194019e ಕರ್ಣಸ್ತು ಪಂಚರಾತ್ರೇಣ ಪ್ರತಿಜಜ್ಞೇ ಮಹಾಸ್ತ್ರವಿತ್||

ಎರಡೇ ತಿಂಗಳುಗಳು ಸಾಕೆಂದು ಶಾರದ್ವತ ಕೃಪನು ಹೇಳಿದನು. ದ್ರೌಣಿಯಾದರೋ ಹತ್ತು ರಾತ್ರಿಗಳಲ್ಲಿ ಬಲಕ್ಷಯಮಾಡುತ್ತೇನೆಂದು ಪ್ರತಿಜ್ಞೆಮಾಡಿದನು. ಮಹಾಸ್ತ್ರಗಳನ್ನು ತಿಳಿದಿದ್ದ ಕರ್ಣನು ಐದು ರಾತ್ರಿಗಳಲ್ಲೆಂದು ಪ್ರತಿಜ್ಞೆ ಮಾಡಿದನು.

05194020a ತಚ್ಚ್ರುತ್ವಾ ಸೂತಪುತ್ರಸ್ಯ ವಾಕ್ಯಂ ಸಾಗರಗಾಸುತಃ|

05194020c ಜಹಾಸ ಸಸ್ವನಂ ಹಾಸಂ ವಾಕ್ಯಂ ಚೇದಮುವಾಚ ಹ||

ಸೂತಪುತ್ರನ ಆ ಮಾತುಗಳನ್ನು ಕೇಳಿ ಸಾಗರಗೆಯ ಸುತನು ಜೋರಾಗಿ ನಕ್ಕು ಹಾಸ್ಯದ ಈ ಮಾತುಗಳನ್ನಾಡಿದನು:

05194021a ನ ಹಿ ತಾವದ್ರಣೇ ಪಾರ್ಥಂ ಬಾಣಖಡ್ಗಧನುರ್ಧರಂ|

05194021c ವಾಸುದೇವಸಮಾಯುಕ್ತಂ ರಥೇನೋದ್ಯಂತಮಚ್ಯುತಂ||

05194022a ಸಮಾಗಚ್ಚಸಿ ರಾಧೇಯ ತೇನೈವಮಭಿಮನ್ಯಸೇ|

05194022c ಶಕ್ಯಮೇವಂ ಚ ಭೂಯಶ್ಚ ತ್ವಯಾ ವಕ್ತುಂ ಯಥೇಷ್ಟತಃ||

“ರಾಧೇಯ! ರಣದಲ್ಲಿ ನೀನು ಎಲ್ಲಿಯವರೆಗೆ ಬಾಣಖಡ್ಗಧನುರ್ಧರನಾದ ಪಾರ್ಥನನ್ನು, ಜೊತೆಯಲ್ಲಿ ರಥವನ್ನೋಡಿಸುವ ಅಚ್ಯುತ ವಾಸುದೇವನನ್ನು ಎದುರಿಸುವುದಿಲ್ಲವೋ ಅಲ್ಲಿಯ ವರೆಗೆ ನಿನಗಿಷ್ಟ ಬಂದುದನ್ನು ಹೇಳಬಹುದು. ನಂತರವೂ ನಿನಗಿಷ್ಟವಾದಂತೆ ಹೇಳಿಕೊಳ್ಳಬಹುದು!”””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಭೀಷ್ಮಾದಿಶಕ್ತಿಕಥನೇ ಚತುರ್ನವತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಭೀಷ್ಮಾದಿಶಕ್ತಿಕಥನದಲ್ಲಿ ನೂರಾತೊಂಭತ್ನಾಲ್ಕನೆಯ ಅಧ್ಯಾಯವು.

Image result for indian motifs"

Comments are closed.