Drona Parva: Chapter 63

ದ್ರೋಣ ಪರ್ವ: ಜಯದ್ರಥವಧ ಪರ್ವ

೬೩

ಹದಿನಾಲ್ಕನೆಯ ದಿನ ದ್ರೋಣನು ಕೌರವ ಸೇನೆಯನ್ನು ಚಕ್ರಶಕಟವ್ಯೂಹದಲ್ಲಿ ರಚಿಸಿದುದು (೧-೩೩).

07063001 ಸಂಜಯ ಉವಾಚ|

07063001a ತಸ್ಯಾಂ ನಿಶಾಯಾಂ ವ್ಯುಷ್ಟಾಯಾಂ ದ್ರೋಣಃ ಶಸ್ತ್ರಭೃತಾಂ ವರಃ|

07063001c ಸ್ವಾನ್ಯನೀಕಾನಿ ಸರ್ವಾಣಿ ಪ್ರಾಕ್ರಾಮದ್ವ್ಯೂಹಿತುಂ ತತಃ||

ಸಂಜಯನು ಹೇಳಿದನು: “ಆ ರಾತ್ರಿಯು ಕಳೆಯಲು ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣನು ತನ್ನ ಸೇನೆಗಳೆಲ್ಲವನ್ನೂ ವ್ಯೂಹದಲ್ಲಿರಿಸಲು ಪ್ರಾರಂಭಿಸಿದನು.

07063002a ಶೂರಾಣಾಂ ಗರ್ಜತಾಂ ರಾಜನ್ಸಂಕ್ರುದ್ಧಾನಾಮಮರ್ಷಿಣಾಂ|

07063002c ಶ್ರೂಯಂತೇ ಸ್ಮ ಗಿರಶ್ಚಿತ್ರಾಃ ಪರಸ್ಪರವಧೈಷಿಣಾಂ||

ರಾಜನ್! ಅಲ್ಲಿ ಪರಸ್ಪರರನ್ನು ವಧಿಸಲು ಬಯಸಿದ್ದ ಸಂಕ್ರುದ್ಧರಾಗಿದ್ದ ಅಸಹನಶೀರ ಶೂರರು ವಿಚಿತ್ರ ಧ್ವನಿಯಲ್ಲಿ ಗರ್ಜಿಸುತ್ತಿರುವುದು ಕೇಳಿ ಬರುತ್ತಿತ್ತು.

07063003a ವಿಸ್ಫಾರ್ಯ ಚ ಧನೂಂಷ್ಯಾಜೌ ಜ್ಯಾಃ ಕರೈಃ ಪರಿಮೃಜ್ಯ ಚ|

07063003c ವಿನಿಃಶ್ವಸಂತಃ ಪ್ರಾಕ್ರೋಶನ್ಕ್ವೇದಾನೀಂ ಸ ಧನಂಜಯಃ||

ಕೆಲವರು ಧನುಸ್ಸನ್ನು ಟೇಂಕರಿಸುತ್ತಿದ್ದರು. ಕೆಲವರು ಶಿಂಜನಿಯನ್ನು ಕೈಗಳಿಂದ ತೀಡುತ್ತಿದ್ದರು. ಕೆಲವರು ನಿಟ್ಟುಸಿರುಬಿಡುತ್ತಾ “ಈಗ ಆ ಧನಂಜಯನೆಲ್ಲಿ?” ಎಂದು ಗಟ್ಟಿಯಾಗಿ ಕೂಗುತ್ತಿದ್ದರು.

07063004a ವಿಕೋಶಾನ್ಸುತ್ಸರೂನನ್ಯೇ ಕೃತಧಾರಾನ್ಸಮಾಹಿತಾನ್|

07063004c ಪೀತಾನಾಕಾಶಸಂಕಾಶಾನಸೀನ್ಕೇ ಚಿಚ್ಚ ಚಿಕ್ಷಿಪುಃ||

ಕೆಲವರು ಆಕಾಶದಂತೆ ನಿರ್ಮಲವಾಗಿದ್ದ, ಹೊಂಬಣ್ಣದ, ಹರಿತವಾದ, ಸುಂದರ ಹಿಡಿಯಲ್ಲಿದ್ದ ಖಡ್ಗಗಳನ್ನು ಒರೆಯಿಂದ ತೆಗೆದು ತಿರುಗಿಸತೊಡಗಿದರು.

07063005a ಚರಂತಸ್ತ್ವಸಿಮಾರ್ಗಾಂಶ್ಚ ಧನುರ್ಮಾರ್ಗಾಂಶ್ಚ ಶಿಕ್ಷಯಾ|

07063005c ಸಂಗ್ರಾಮಮನಸಃ ಶೂರಾ ದೃಶ್ಯಂತೇ ಸ್ಮ ಸಹಸ್ರಶಃ||

ಸಹಸ್ರಾರು ಸಂಗ್ರಾಮ ಮನಸ್ಕರಾದ ಶೂರರು ತಮ್ಮ ಶಿಕ್ಷಣಕ್ಕೆ ಅನುಗುಣವಾಗಿ ಖಡ್ಗ ವರಸೆಗಳನ್ನೂ ಧನುಷ್ಠೇಂಕಾರವನ್ನೂ ಮಾಡುತ್ತಿದ್ದರು.

07063006a ಸಘಂಟಾಶ್ಚಂದನಾದಿಗ್ಧಾಃ ಸ್ವರ್ಣವಜ್ರವಿಭೂಷಿತಾಃ|

07063006c ಸಮುತ್ಕ್ಷಿಪ್ಯ ಗದಾಶ್ಚಾನ್ಯೇ ಪರ್ಯಪೃಚ್ಚಂತ ಪಾಂಡವಂ||

ಕೆಲವು ಯೋಧರು ಘಂಟೆ-ಚಂದನಗಳನ್ನುಳ್ಳ, ಚಿನ್ನ-ವಜ್ರಗಳಿಂದ ವಿಭೂಷಿತವಾದ ಗದೆಗಳನ್ನು ಮೇಲಕ್ಕೆತ್ತಿ ಪಾಂಡವನೆಲ್ಲಿ? ಎಂದು ಕೇಳುತ್ತಿದ್ದರು.

07063007a ಅನ್ಯೇ ಬಲಮದೋನ್ಮತ್ತಾಃ ಪರಿಘೈರ್ಬಾಹುಶಾಲಿನಃ|

07063007c ಚಕ್ರುಃ ಸಂಬಾಧಮಾಕಾಶಮುಚ್ಚ್ರಿತೇಂದ್ರಧ್ವಜೋಪಮೈಃ||

ಬಲಮದದಿಂದ ಹುಚ್ಚರಾಗಿದ್ದ ಇನ್ನು ಕೆಲವರು ಇಂದ್ರಧ್ವಜಗಳಂತಿರುವ ಪರಿಘಗಳನ್ನು ಕೈಗಳಲ್ಲಿ ಹಿಡಿದು ಆಕಾಶವನ್ನೇ ಸಂಪೂರ್ಣವಾಗಿ ಮುಚ್ಚಿ ಬಿಟ್ಟಿದ್ದರು.

07063008a ನಾನಾಪ್ರಹರಣೈಶ್ಚಾನ್ಯೇ ವಿಚಿತ್ರಸ್ರಗಲಂಕೃತಾಃ|

07063008c ಸಂಗ್ರಾಮಮನಸಃ ಶೂರಾಸ್ತತ್ರ ತತ್ರ ವ್ಯವಸ್ಥಿತಾಃ||

ಇತರ ಸಂಗ್ರಾಮಮನಸ್ಕರಾದ ಶೂರರು ನಾನಾ ಪ್ರಹರಣಗಳನ್ನು ಹಿಡಿದು, ವಿಚಿತ್ರ ಮಾಲೆಗಳಿಂದ ಅಲಂಕೃತರಾಗಿ ಅಲ್ಲಿ ನಿಂತಿದ್ದರು.

07063009a ಕ್ವಾರ್ಜುನಃ ಕ್ವ ಚ ಗೋವಿಂದಃ ಕ್ವ ಚ ಮಾನೀ ವೃಕೋದರಃ|

07063009c ಕ್ವ ಚ ತೇ ಸುಹೃದಸ್ತೇಷಾಮಾಹ್ವಯಂತೋ ರಣೇ ತದಾ||

“ಅರ್ಜುನನೆಲ್ಲಿ? ಗೋವಿಂದನೆಲ್ಲಿ? ಸೊಕ್ಕಿನ ವೃಕೋದರನೆಲ್ಲಿ? ಅವರ ಸುಹೃದರೆಲ್ಲೆ?” ಎಂದು ರಣದಲ್ಲಿ ಅವರನ್ನು ಕೂಗಿ ಕರೆಯುತ್ತಿದ್ದರು.

07063010a ತತಃ ಶಂಖಮುಪಾಧ್ಮಾಯ ತ್ವರಯನ್ವಾಜಿನಃ ಸ್ವಯಂ|

07063010c ಇತಸ್ತತಸ್ತಾನ್ರಚಯನ್ದ್ರೋಣಶ್ಚರತಿ ವೇಗಿತಃ||

ಆಗ ಶಂಖವನ್ನೂದಿ ದ್ರೋಣನು ಸ್ವಯಂ ತಾನೇ ಕುದುರೆಗಳನ್ನು ನಿಯಂತ್ರಿಸುತ್ತಾ ವ್ಯೂಹದಲ್ಲಿ ರಚಿಸುತ್ತಾ ವೇಗದಿಂದ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದನು.

07063011a ತೇಷ್ವನೀಕೇಷು ಸರ್ವೇಷು ಸ್ಥಿತೇಷ್ವಾಹವನಂದಿಷು|

07063011c ಭಾರದ್ವಾಜೋ ಮಹಾರಾಜ ಜಯದ್ರಥಮಥಾಬ್ರವೀತ್||

ಮಹಾರಾಜ! ಯುದ್ಧದಲ್ಲಿ ಆನಂದವನ್ನಿಟ್ಟಿದ್ದ ಆ ಸೇನೆಗಳೆಲ್ಲವನ್ನೂ ನಿಲ್ಲಿಸಿ ಭಾರದ್ವಾಜನು ಜಯದ್ರಥನಿಗೆ ಹೇಳಿದನು:

07063012a ತ್ವಂ ಚೈವ ಸೌಮದತ್ತಿಶ್ಚ ಕರ್ಣಶ್ಚೈವ ಮಹಾರಥಃ|

07063012c ಅಶ್ವತ್ಥಾಮಾ ಚ ಶಲ್ಯಶ್ಚ ವೃಷಸೇನಃ ಕೃಪಸ್ತಥಾ||

07063013a ಶತಂ ಚಾಶ್ವಸಹಸ್ರಾಣಾಂ ರಥಾನಾಮಯುತಾನಿ ಷಟ್|

07063013c ದ್ವಿರದಾನಾಂ ಪ್ರಭಿನ್ನಾನಾಂ ಸಹಸ್ರಾಣಿ ಚತುರ್ದಶ||

07063014a ಪದಾತೀನಾಂ ಸಹಸ್ರಾಣಿ ದಂಶಿತಾನ್ಯೇಕವಿಂಶತಿಃ|

07063014c ಗವ್ಯೂತಿಷು ತ್ರಿಮಾತ್ರೇಷು ಮಾಮನಾಸಾದ್ಯ ತಿಷ್ಠತ||

“ಸೌಮದತ್ತಿ ಭೂರಿಶ್ರವ, ಮಹಾರಥ ಕರ್ಣ, ಅಶ್ವತ್ಥಾಮ, ಶಲ್ಯ, ವೃಷಸೇನ, ಕೃಪ, ಮತ್ತು ನೂರು ಸಾವಿರ ಕುದುರೆಸವಾರರೂ, ಅರವತ್ತು ಸಾವಿರ ರಥಗಳೂ, ಹದಿನಾಲ್ಕು ಸಾವಿರ ಮದೋದಕವನ್ನು ಸುರಿಸುತ್ತಿರುವ ಆನೆಗಳೂ, ಕವಚಧಾರಿಗಳಾದ ಇಪ್ಪತ್ತೊಂದು ಸಾವಿರ ಪದಾತಿಗಳನ್ನೂ ಕರೆದುಕೊಂಡು ನೀನು ನನ್ನಿಂದ ಮೂರು ಗವ್ಯೂತಿಗಳ ದೂರಹೋಗಿ ನಿಲ್ಲು!

07063015a ತತ್ರಸ್ಥಂ ತ್ವಾಂ ನ ಸಂಸೋಢುಂ ಶಕ್ತಾ ದೇವಾಃ ಸವಾಸವಾಃ|

07063015c ಕಿಂ ಪುನಃ ಪಾಂಡವಾಃ ಸರ್ವೇ ಸಮಾಶ್ವಸಿಹಿ ಸೈಂಧವ||

ಸೈಂಧವ! ಅಲ್ಲಿ ನೀನಿರುವಾಗ ವಾಸವನೊಂದಿಗೆ ದೇವತೆಗಳೂ ಕೂಡ ನಿನ್ನನ್ನು ಎದುರಿಸಿ ಯುದ್ಧಮಾಡಲಾರರು. ಇನ್ನು ಪಾಂಡವರೆಲ್ಲರೂ ಸೇರಿ ಬಂದರೂ ಏನು? ನೀನು ಸಮಾಧಾನದಿಂದಿರು!”

07063016a ಏವಮುಕ್ತಃ ಸಮಾಶ್ವಸ್ತಃ ಸಿಂಧುರಾಜೋ ಜಯದ್ರಥಃ|

07063016c ಸಂಪ್ರಾಯಾತ್ಸಹ ಗಾಂಧಾರೈರ್ವೃತಸ್ತೈಶ್ಚ ಮಹಾರಥೈಃ|

07063016e ವರ್ಮಿಭಿಃ ಸಾದಿಭಿರ್ಯತ್ತೈಃ ಪ್ರಾಸಪಾಣಿಭಿರಾಸ್ಥಿತೈಃ||

ಹೀಗೆ ಹೇಳಲು ಸಿಂಧುರಾಜ ಜಯದ್ರಥನು ಸಮಾಧಾನಗೊಂಡು ಅವನು ಹೇಳಿದಲ್ಲಿಗೆ ಕವಚಧಾರಿ, ಪ್ರಾಸಗಳನ್ನು ಹಿಡಿದು ನಿಂತಿರುವ ಅಶ್ವಾರೋಹೀ ಮಹಾರಥ ಗಾಂಧಾರರಿಂದ ಸುತ್ತುವರೆಯಲ್ಪಟ್ಟು ಹೋಗಿ ನಿಂತನು.

07063017a ಚಾಮರಾಪೀಡಿನಃ ಸರ್ವೇ ಜಾಂಬೂನದವಿಭೂಷಿತಾಃ|

07063017c ಜಯದ್ರಥಸ್ಯ ರಾಜೇಂದ್ರ ಹಯಾಃ ಸಾಧುಪ್ರವಾಹಿನಃ|

07063017e ತೇ ಚೈವ ಸಪ್ತಸಾಹಸ್ರಾ ದ್ವಿಸಾಹಸ್ರಾಶ್ಚ ಸೈಂಧವಾಃ||

ರಾಜೇಂದ್ರ! ಜಯದ್ರಥನ ಅಶ್ವಗಳೆಲ್ಲವೂ ಚಾಮರಗಳಿಂದ ಮತ್ತು ಬಂಗಾರದಿಂದ ವಿಭೂಷಿತವಾಗಿದ್ದು ಭಾರವನ್ನು ಹೊರಬಲ್ಲವುಗಳಾಗಿದ್ದವು. ಅಂತಹ ಏಳುಸಾವಿರ ಮತ್ತು ಎರಡು ಸಾವಿರ ಕುದುರೆಗಳು ಸೈಂಧವನದಾಗಿದ್ದವು.

07063018a ಮತ್ತಾನಾಮಧಿರೂಢಾನಾಂ ಹಸ್ತ್ಯಾರೋಹೈರ್ವಿಶಾರದೈಃ|

07063018c ನಾಗಾನಾಂ ಭೀಮರೂಪಾಣಾಂ ವರ್ಮಿಣಾಂ ರೌದ್ರಕರ್ಮಿಣಾಂ||

07063019a ಅಧ್ಯರ್ಧೇನ ಸಹಸ್ರೇಣ ಪುತ್ರೋ ದುರ್ಮರ್ಷಣಸ್ತವ|

07063019c ಅಗ್ರತಃ ಸರ್ವಸೈನ್ಯಾನಾಂ ಯೋತ್ಸ್ಯಮಾನೋ ವ್ಯವಸ್ಥಿತಃ||

ಕವಚಗಳನ್ನು ಧರಿಸಿದ್ದ, ಭೀಮರೂಪದ, ರೌದ್ರಕರ್ಮಿ ಮದಿಸಿದ ಐನೂರು ಆನೆಗಳನ್ನು ಏರಿದ್ದ ವಿಶಾರದ ಗಜಾರೋಹಿಗಳಿಂದ ಕೂಡಿ ಸರ್ವಸೇನೆಗಳ ಮುಂದೆ ನಿನ್ನ ಮಗ ದುರ್ಮರ್ಷಣನು ಯುದ್ಧಮಾಡಲು ನಿಂತಿದ್ದನು.

07063020a ತತೋ ದುಃಶಾಸನಶ್ಚೈವ ವಿಕರ್ಣಶ್ಚ ತವಾತ್ಮಜೌ|

07063020c ಸಿಂಧುರಾಜಾರ್ಥಸಿದ್ಧ್ಯರ್ಥಮಗ್ರಾನೀಕೇ ವ್ಯವಸ್ಥಿತೌ||

ಆಗ ನಿನ್ನ ಮಕ್ಕಳಾದ ದುಃಶಾಸನ-ವಿಕರ್ಣರೂ ಕೂಡ ಸಿಂಧುರಾಜನ ಸಿದ್ಧಿಗೋಸ್ಕರ ಸೇನೆಯ ಮುಂದೆ ನಿಂತಿದ್ದರು.

07063021a ದೀರ್ಘೋ ದ್ವಾದಶಗವ್ಯೂತಿಃ ಪಶ್ಚಾರ್ಧೇ ಪಂಚ ವಿಸ್ತೃತಃ|

07063021c ವ್ಯೂಹಃ ಸ ಚಕ್ರಶಕಟೋ ಭಾರದ್ವಾಜೇನ ನಿರ್ಮಿತಃ||

ಭಾರದ್ವಾಜನು ನಿರ್ಮಿಸಿದ ಚಕ್ರಶಕಟವ್ಯೂಹವು ಹನ್ನೆರಡು ಗವ್ಯೂತಿ ಉದ್ದವಾಗಿತ್ತು ಮತ್ತು ಐದೂವರೆ ಗವ್ಯೂತಿ ಅಗಲವಾಗಿತ್ತು.

07063022a ನಾನಾನೃಪತಿಭಿರ್ವೀರೈಸ್ತತ್ರ ತತ್ರ ವ್ಯವಸ್ಥಿತೈಃ|

07063022c ರಥಾಶ್ವಗಜಪತ್ತ್ಯೋಘೈರ್ದ್ರೋಣೇನ ವಿಹಿತಃ ಸ್ವಯಂ||

ನಾನಾ ನೃಪತಿ ವೀರರನ್ನು ಮತ್ತು ರಥ-ಅಶ್ವ-ಗಜ-ಪದಾತಿಗಣಗಳನ್ನು ಸ್ವಯಂ ದ್ರೋಣನು ಅಲ್ಲಲ್ಲಿ ನಿಲ್ಲಿಸಿದನು.

07063023a ಪಶ್ಚಾರ್ಧೇ ತಸ್ಯ ಪದ್ಮಸ್ತು ಗರ್ಭವ್ಯೂಹಃ ಸುದುರ್ಭಿದಃ|

07063023c ಸೂಚೀ ಪದ್ಮಸ್ಯ ಮಧ್ಯಸ್ಥೋ ಗೂಢೋ ವ್ಯೂಹಃ ಪುನಃ ಕೃತಃ||

ಅದರ ಹಿಂಭಾಗದಲ್ಲಿ ಭೇದಿಸಲಸಾದ್ಯವಾದ ಪದ್ಮಗರ್ಭ ವ್ಯೂಹವಿತ್ತು. ಆ ಪದ್ಮದ ಮಧ್ಯದಲ್ಲಿ ಸೂಜಿಯಂತೆ ಇನ್ನೊಂದು ಗೂಢ ವ್ಯೂಹವನ್ನು ರಚಿಸಲಾಗಿತ್ತು.

07063024a ಏವಮೇತಂ ಮಹಾವ್ಯೂಹಂ ವ್ಯೂಹ್ಯ ದ್ರೋಣೋ ವ್ಯವಸ್ಥಿತಃ|

07063024c ಸೂಚೀಮುಖೇ ಮಹೇಷ್ವಾಸಃ ಕೃತವರ್ಮಾ ವ್ಯವಸ್ಥಿತಃ||

ಈ ರೀತಿಯ ಮಹಾವ್ಯೂಹವನ್ನು ರಚಿಸಿ ದ್ರೋಣನು ನಿಂತುಕೊಂಡನು. ಆ ಸೂಜಿಯ ಮುಖದಲ್ಲಿ ಮಹೇಷ್ವಾಸ ಕೃತವರ್ಮನು ನಿಂತಿದ್ದನು.

07063025a ಅನಂತರಂ ಚ ಕಾಂಬೋಜೋ ಜಲಸಂಧಶ್ಚ ಮಾರಿಷ|

07063025c ದುರ್ಯೋಧನಃ ಸಹಾಮಾತ್ಯಸ್ತದನಂತರಮೇವ ಚ||

ಮಾರಿಷ! ಅನಂತರ ಕಾಂಬೋಜದ ಜಲಸಂಧನೂ, ಅವನ ಅನಂತರ ಅಮಾತ್ಯರೊಂದಿಗೆ ದುರ್ಯೋಧನನೂ ಇದ್ದರು.

07063026a ತತಃ ಶತಸಹಸ್ರಾಣಿ ಯೋಧಾನಾಮನಿವರ್ತಿನಾಂ|

07063026c ವ್ಯವಸ್ಥಿತಾನಿ ಸರ್ವಾಣಿ ಶಕಟೇ ಸೂಚಿರಕ್ಷಿಣಃ||

ಅನಂತರ ಪಲಾಯನಮಾಡದಿರುವ ಒಂದು ಲಕ್ಷ ಯೋಧರು ಎಲ್ಲರೂ ಸೂಜಿಯನ್ನು ರಕ್ಷಿಸುತ್ತಾ ಶಕಟವ್ಯೂಹದಲ್ಲಿ ನಿಂತಿದ್ದರು.

07063027a ತೇಷಾಂ ಚ ಪೃಷ್ಠತೋ ರಾಜ ಬಲೇನ ಮಹತಾ ವೃತಃ|

07063027c ಜಯದ್ರಥಸ್ತತೋ ರಾಜನ್ಸೂಚಿಪಾಶೇ ವ್ಯವಸ್ಥಿತಃ||

ರಾಜನ್! ಎದಿರು ನಿಂತಿರುವ ಆ ಮಹಾ ಬಲದಿಂದ ಆವೃತನಾಗಿ ಸೂಜಿಯ ಬುಡದಲ್ಲಿ ರಾಜಾ ಜಯದ್ರಥನು ವ್ಯವಸ್ಥಿತನಾಗಿದ್ದನು.

07063028a ಶಕಟಸ್ಯ ತು ರಾಜೇಂದ್ರ ಭಾರದ್ವಾಜೋ ಮುಖೇ ಸ್ಥಿತಃ|

07063028c ಅನು ತಸ್ಯಾಭವದ್ಭೋಜೋ ಜುಗೋಪೈನಂ ತತಃ ಸ್ವಯಂ||

ರಾಜೇಂದ್ರ! ಶಕಟದ ಮುಂದೆ ಭಾರದ್ವಾಜನು ನಿಂತಿದ್ದನು. ಅವನ ಹಿಂದೆ ಅವನನ್ನು ರಕ್ಷಿಸುತ್ತಾ ಸ್ವಯಂ ಭೋಜನಿದ್ದನು.

07063029a ಶ್ವೇತವರ್ಮಾಂಬರೋಷ್ಣೀಷೋ ವ್ಯೂಢೋರಸ್ಕೋ ಮಹಾಭುಜಃ|

07063029c ಧನುರ್ವಿಸ್ಫಾರಯನ್ದ್ರೋಣಸ್ತಸ್ಥೌ ಕ್ರುದ್ಧ ಇವಾಂತಕಃ||

ಬಿಳಿಯ ವಸ್ತ್ರ ಮತ್ತು ಮುಂಡಾಸನ್ನು ಧರಿಸಿ ಆ ವಿಶಾಲ‌ಎದೆಯ ಮಹಾಭುಜ ದ್ರೋಣನು ಧನುಸ್ಸನ್ನು ಟೇಂಕರಿಸಿ ಅಂತಕನಂತೆ ಕ್ರುದ್ಧನಾಗಿ ನಿಂತಿದ್ದನು.

07063030a ಪತಾಕಿನಂ ಶೋಣಹಯಂ ವೇದೀಕೃಷ್ಣಾಜಿನಧ್ವಜಂ|

07063030c ದ್ರೋಣಸ್ಯ ರಥಮಾಲೋಕ್ಯ ಪ್ರಹೃಷ್ಟಾಃ ಕುರವೋಽಭವನ್||

ವೇದಿಯ ಆ ಪತಾಕೆಯನ್ನು, ಕೃಷ್ಣಾಜಿನದ ಧ್ವಜವನ್ನು ಮತ್ತು ಕೆಂಪು ಕುದುರೆಗಳು ದ್ರೋಣನ ಆ ರಥವನ್ನು ನೋಡಿ ಕುರುಗಳು ಪ್ರಹೃಷ್ಟರಾದರು.

07063031a ಸಿದ್ಧಚಾರಣಸಂಘಾನಾಂ ವಿಸ್ಮಯಃ ಸುಮಹಾನಭೂತ್|

07063031c ದ್ರೋಣೇನ ವಿಹಿತಂ ದೃಷ್ಟ್ವಾ ವ್ಯೂಹಂ ಕ್ಷುಬ್ಧಾರ್ಣವೋಪಮಂ||

ಅಲ್ಲೋಲಕಲ್ಲೋಲಗೊಂಡಿರುವ ಸಮುದ್ರದಂತಿರುವ ದ್ರೋಣರಚಿತ ವ್ಯೂಹವನ್ನು ಕಂಡು ಸಿದ್ಧಚಾರಣಗಣಗಳು ತುಂಬಾ ವಿಸ್ಮಿತರಾದರು.

07063032a ಸಶೈಲಸಾಗರವನಾಂ ನಾನಾಜನಪದಾಕುಲಾಂ|

07063032c ಗ್ರಸೇದ್ವ್ಯೂಹಃ ಕ್ಷಿತಿಂ ಸರ್ವಾಮಿತಿ ಭೂತಾನಿ ಮೇನಿರೇ||

ಆ ವ್ಯೂಹವು ಶೈಲ-ಸಾಗರ-ವನಗಳು ಮತ್ತು ನಾನಾ ಜನಪದಕುಲಗಳೊಂದಿಗೆ ಇಡೀ ಭೂಮಿಯನ್ನೇ ನುಂಗಿಬಿಡುವುದೋ ಏನೋ ಎಂದು ಎಲ್ಲ ಭೂತಗಳೂ ಅಂದುಕೊಂಡವು.

07063033a ಬಹುರಥಮನುಜಾಶ್ವಪತ್ತಿನಾಗಂ

         ಪ್ರತಿಭಯನಿಸ್ವನಮದ್ಭುತಾಭರೂಪಂ|

07063033c ಅಹಿತಹೃದಯಭೇದನಂ ಮಹದ್ವೈ

         ಶಕಟಮವೇಕ್ಷ್ಯ ಕೃತಂ ನನಂದ ರಾಜಾ||

ಭಯವನ್ನುಂಟುಮಾಡುವ ಶಬ್ಧಗಳೊಂದಿಗೆ ಅದ್ಭುತವಾಗಿ ಕಾಣುತ್ತಿದ್ದ, ಹೃದಯವನ್ನು ಅಹಿತವಾಗಿ ಭೇದಿಸುತ್ತಿದ್ದ ಆ ಶಕಟರೂಪದಲ್ಲಿರುವ ಬಹಳಷ್ಟು ರಥ-ಮನುಷ್ಯ-ಕುದುರೆ-ಆನೆಗಳನ್ನು ನೋಡಿ ರಾಜನು ಆನಂದಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಕೌರವವ್ಯೂಹನಿರ್ಮಾಣೇ ತ್ರಿಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಕೌರವವ್ಯೂಹನಿರ್ಮಾಣ ಎನ್ನುವ ಅರವತ್ಮೂರನೇ ಅಧ್ಯಾಯವು.

Related image

Comments are closed.