Drona Parva: Chapter 56

ದ್ರೋಣ ಪರ್ವ: ಪ್ರತಿಜ್ಞಾ ಪರ್ವ

೫೬

ಪಾಂಡವ ಯೋಧರು ಚಿಂತೆಯಲ್ಲಿಯೇ ರಾತ್ರಿಯನ್ನು ಕಳೆದುದು (೧-೧೬). ಕೃಷ್ಣನು ಆಯುಧಗಳೊಂದಿಗೆ ತನ್ನ ರಥವನ್ನು ಸಿದ್ಧಪಡಿಸಿ ಇಟ್ಟಿರಬೇಕೆಂದು ಸಾರಥಿ ದಾರುಕನಿಗೆ ಹೇಳಿದುದು (೧೭-೪೧).

07056001 ಸಂಜಯ ಉವಾಚ|

07056001a ತತೋಽರ್ಜುನಸ್ಯ ಭವನಂ ಪ್ರವಿಶ್ಯಾಪ್ರತಿಮಂ ವಿಭುಃ|

07056001c ಸ್ಪೃಷ್ಟ್ವಾಂಭಃ ಪುಂಡರೀಕಾಕ್ಷಃ ಸ್ಥಂಡಿಲೇ ಶುಭಲಕ್ಷಣೇ|

07056001e ಸಂತಸ್ತಾರ ಶುಭಾಂ ಶಯ್ಯಾಂ ದರ್ಭೈರ್ವೈಡೂರ್ಯಸನ್ನಿಭೈಃ||

ಸಂಜಯನು ಹೇಳಿದನು: “ಅನಂತರ ವಿಭು ಪುಂಡರೀಕಾಕ್ಷನು ಅರ್ಜುನನ ಅಪ್ರತಿಮ ಭವನವನ್ನು ಪ್ರವೇಶಿಸಿ ಆಚಮನ ಮಾಡಿ ಶುಭಲಕ್ಷಣ ವೇದಿಯ ಮೇಲೆ ವೈಡೂರ್ಯಸನ್ನಿಭ ಶುಭ ದರ್ಭೆಗಳನ್ನು ಹಾಸಿದನು.

07056002a ತತೋ ಮಾಲ್ಯೇನ ವಿಧಿವಲ್ಲಾಜೈರ್ಗಂಧೈಃ ಸುಮಂಗಲೈಃ|

07056002c ಅಲಂಚಕಾರ ತಾಂ ಶಯ್ಯಾಂ ಪರಿವಾರ್ಯಾಯುಧೋತ್ತಮೈಃ||

ಅನಂತರ ಮಾಲೆಗಳಿಂದ, ಸುಮಂಗಲ ಅರಳು ಮತ್ತು ಗಂಧಗಳಿಂದ ಆ ದರ್ಭೆಯ ಹಾಸಿಗೆಯನ್ನು ವಿಧಿವತ್ತಾಗಿ ಅಲಂಕರಿಸಿ, ಸುತ್ತಲೂ ಉತ್ತಮ ಆಯುಧಗಳನ್ನಿಟ್ಟನು.

07056003a ತತಃ ಸ್ಪೃಷ್ಟೋದಕಂ ಪಾರ್ಥಂ ವಿನೀತಾಃ ಪರಿಚಾರಕಾಃ|

07056003c ದರ್ಶಯಾಂ ನೈತ್ಯಕಂ ಚಕ್ರುರ್ನೈಶಂ ತ್ರೈಯಂಬಕಂ ಬಲಿಂ||

ಅನಂತರ ಆಚಮನ ಮಾಡಿದ ಪಾರ್ಥನಿಗೆ ವಿನೀತರಾದ ಪರಿಚಾರಕರು ಅದರ ಬಳಿಯೇ ರಾತ್ರಿ ತ್ರ್ಯಂಬಕನಿಗೆ ಬಲಿಯನ್ನು ಕೊಡುವುದರ ಕುರಿತು ಮಾಡಿ ತೋರಿಸಿಕೊಟ್ಟರು.

07056004a ತತಃ ಪ್ರೀತಮನಾಃ ಪಾರ್ಥೋ ಗಂಧೈರ್ಮಾಲ್ಯೈಶ್ಚ ಮಾಧವಂ|

07056004c ಅಲಂಕೃತ್ಯೋಪಹಾರಂ ತಂ ನೈಶಮಸ್ಮೈ ನ್ಯವೇದಯತ್||

ಆಗ ಪ್ರೀತಮನಸ್ಕ ಪಾರ್ಥನು ಗಂಧಮಾಲೆಗಳಿಂದ ಮಾಧವನನ್ನು ಅಲಂಕರಿಸಿ ರಾತ್ರಿಯ ಉಪಹಾರವನ್ನು ಅವನಿಗೆ ನಿವೇದಿಸಿದನು.

07056005a ಸ್ಮಯಮಾನಸ್ತು ಗೋವಿಂದಃ ಫಲ್ಗುನಂ ಪ್ರತ್ಯಭಾಷತ|

07056005c ಸುಪ್ಯತಾಂ ಪಾರ್ಥ ಭದ್ರಂ ತೇ ಕಲ್ಯಾಣಾಯ ವ್ರಜಾಮ್ಯಹಂ||

ನಸುನಗುತ್ತಾ ಗೋವಿಂದನು ಫಲ್ಗುನನಿಗೆ ಉತ್ತರಿಸಿದನು: “ಪಾರ್ಥ! ಮಲಗಿಕೋ! ನಿನಗೆ ಮಂಗಳವಾಗಲಿ. ನಿನ್ನ ಕಲ್ಯಾಣಕ್ಕೆ ನಾನೂ ತೆರಳುತ್ತೇನೆ.”

07056006a ಸ್ಥಾಪಯಿತ್ವಾ ತತೋ ದ್ವಾಃಸ್ಥಾನ್ಗೋಪ್ತುಂ ಚಾತ್ತಾಯುಧಾನ್ನರಾನ್|

07056006c ದಾರುಕಾನುಗತಃ ಶ್ರೀಮಾನ್ವಿವೇಶ ಶಿಬಿರಂ ಸ್ವಕಂ|

07056006e ಶಿಶ್ಯೇ ಚ ಶಯನೇ ಶುಭ್ರೇ ಬಹುಕೃತ್ಯಂ ವಿಚಿಂತಯನ್||

ಆಗ ಶ್ರೀಮಾನನು ದ್ವಾರದಲ್ಲಿ ಆಯುಧಪಾಣಿ ಅಂಗರಕ್ಷಕರನ್ನು ನಿಲ್ಲಿಸಿ, ದಾರುಕನೊಂದಿಗೆ ತನ್ನ ಶಿಬಿರವನ್ನು ಪ್ರವೇಶಿಸಿದನು. ಬಹಳಷ್ಟು ಚಿಂತಿಸುತ್ತಾ ಅವನು ಶುಭ್ರ ಹಾಸಿಗೆಯ ಮೇಲೆ ಪವಡಿಸಿದನು.

07056007a ನ ಪಾಂಡವಾನಾಂ ಶಿಬಿರೇ ಕಶ್ಚಿತ್ಸುಷ್ವಾಪ ತಾಂ ನಿಶಾಂ|

07056007c ಪ್ರಜಾಗರಃ ಸರ್ವಜನಮಾವಿವೇಶ ವಿಶಾಂ ಪತೇ||

ಆ ರಾತ್ರಿ ಪಾಂಡವರ ಶಿಬಿರದಲ್ಲಿ ಯಾರೂ ನಿದ್ರಿಸಲಿಲ್ಲ. ವಿಶಾಂಪತೇ! ಎಲ್ಲರನ್ನೂ ಜಾಗರಣೆಯೇ ಆವರಿಸಿಬಿಟ್ಟಿತ್ತು.

07056008a ಪುತ್ರಶೋಕಾಭಿಭೂತೇನ ಪ್ರತಿಜ್ಞಾತೋ ಮಹಾತ್ಮನಾ|

07056008c ಸಹಸಾ ಸಿಂಧುರಾಜಸ್ಯ ವಧೋ ಗಾಂಡೀವಧನ್ವನಾ||

07056009a ತತ್ಕಥಂ ನು ಮಹಾಬಾಹುರ್ವಾಸವಿಃ ಪರವೀರಹಾ|

07056009c ಪ್ರತಿಜ್ಞಾಂ ಸಫಲಾಂ ಕುರ್ಯಾದಿತಿ ತೇ ಸಮಚಿಂತಯನ್||

“ಪುತ್ರಶೋಕದಿಂದ ಆವೇಶಗೊಂಡು ಮಹಾತ್ಮ ಗಾಂಡೀವಧನ್ವಿಯು ದುಡುಕಿ ಸಿಂಧುರಾಜನ ವಧೆಯ ಪ್ರತಿಜ್ಞೆಯನ್ನು ಮಾಡಿಬಿಟ್ಟನು! ಆದರೆ ಮಹಾಬಾಹು, ವಾಸವಿ ಪರವೀರಹನು ತನ್ನ ಪ್ರತಿಜ್ಞೆಯನ್ನು ಹೇಗೆ ಸಫಲಗೊಳಿಸಬಲ್ಲನು?” ಎಂದು ಅವರು ತುಂಬಾ ಚಿಂತಿಸಿದರು.

07056010a ಕಷ್ಟಂ ಹೀದಂ ವ್ಯವಸಿತಂ ಪಾಂಡವೇನ ಮಹಾತ್ಮನಾ|

07056010c ಪುತ್ರಶೋಕಾಭಿತಪ್ತೇನ ಪ್ರತಿಜ್ಞಾ ಮಹತೀ ಕೃತಾ||

“ಮಹಾತ್ಮ ಪಾಂಡವನು ಪುತ್ರಶೋಕದಿಂದ ತಪ್ತನಾಗಿ ಮಹಾ ಪ್ರತಿಜ್ಞೆಯನ್ನು ಮಾಡಿ ಅತಿದೊಡ್ಡ ಕಷ್ಟದ ಕೆಲಸವನ್ನೇ ಕೈಗೊಂಡಿದ್ದಾನೆ.

07056011a ಭ್ರಾತರಶ್ಚಾಪಿ ವಿಕ್ರಾಂತಾ ಬಹುಲಾನಿ ಬಲಾನಿ ಚ|

07056011c ಧೃತರಾಷ್ಟ್ರಸ್ಯ ಪುತ್ರೇಣ ಸರ್ವಂ ತಸ್ಮೈ ನಿವೇದಿತಂ||

ಸೈಂಧವನ ಸಹೋದರರೂ ವಿಕ್ರಾಂತರು. ಮತ್ತು ಧೃತರಾಷ್ಟ್ರನ ಮಗನು ಬಹಳ ಸೇನೆ ಸರ್ವವನ್ನೂ ಅವನ ರಕ್ಷಣೆಗಾಗಿ ನಿಯೋಜಿಸಿದ್ದಾನೆ.

07056012a ಸ ಹತ್ವಾ ಸೈಂಧವಂ ಸಂಖ್ಯೇ ಪುನರೇತು ಧನಂಜಯಃ|

07056012c ಜಿತ್ವಾ ರಿಪುಗಣಾಂಶ್ಚೈವ ಪಾರಯತ್ವರ್ಜುನೋ ವ್ರತಂ||

ಯುದ್ಧದಲ್ಲಿ ಸೈಂಧವನನ್ನು ಸಂಹರಿಸಿ ಧನಂಜಯನು ಹಿಂದಿರುಗುವಂತಾಗಲಿ. ಶತ್ರುಗಣಗಳನ್ನು ಗೆದ್ದು ಅರ್ಜುನನು ತನ್ನ ಪ್ರತಿಜ್ಞೆಯನ್ನು ಪೂರೈಸಲಿ.

07056013a ಅಹತ್ವಾ ಸಿಂಧುರಾಜಂ ಹಿ ಧೂಮಕೇತುಂ ಪ್ರವೇಕ್ಷ್ಯತಿ|

07056013c ನ ಹ್ಯೇತದನೃತಂ ಕರ್ತುಮರ್ಹಃ ಪಾರ್ಥೋ ಧನಂಜಯಃ||

ಸಿಂಧುರಾಜನನ್ನು ಸಂಹರಿಸದೇ ಇದ್ದರೆ ಅವನು ಅಗ್ನಿಯನ್ನು ಪ್ರವೇಶಿಸುತ್ತಾನೆ. ಏಕೆಂದರೆ ಪಾರ್ಥ ಧನಂಜಯನು ಯಾವುದೇ ಕಾರಣದಿಂದ ತನ್ನ ಮಾತನ್ನು ಸುಳ್ಳಾಗಿಸುವುದಿಲ್ಲ.

07056014a ಧರ್ಮಪುತ್ರಃ ಕಥಂ ರಾಜಾ ಭವಿಷ್ಯತಿ ಮೃತೇಽರ್ಜುನೇ|

07056014c ತಸ್ಮಿನ್ ಹಿ ವಿಜಯಃ ಕೃತ್ಸ್ನಃ ಪಾಂಡವೇನ ಸಮಾಹಿತಃ||

ಅರ್ಜುನನು ಮೃತನಾಗಲು ಧರ್ಮಪುತ್ರನು ಹೇಗೆ ರಾಜನಾಗುತ್ತಾನೆ? ಏಕೆಂದರೆ ಅವನು ವಿಜಯವನ್ನು ಸಂಪೂರ್ಣವಾಗಿ ಪಾಂಡವ ಅರ್ಜುನನಿಗೆ ಹೊರಿಸಿಬಿಟ್ಟಿದ್ದಾನೆ.

07056015a ಯದಿ ನಃ ಸುಕೃತಂ ಕಿಂ ಚಿದ್ಯದಿ ದತ್ತಂ ಹುತಂ ಯದಿ|

07056015c ಫಲೇನ ತಸ್ಯ ಸರ್ವಸ್ಯ ಸವ್ಯಸಾಚೀ ಜಯತ್ವರೀನ್||

ಒಂದುವೇಳೆ ನಾವು ಏನಾದರೂ ಒಳ್ಳೆಯದನ್ನು ಮಾಡಿದ್ದರೆ, ದಾನಮಾಡಿದ್ದರೆ ಮತ್ತು ಆಹುತಿಗಳನ್ನಿತ್ತಿದ್ದರೆ ಅವುಗಳೆಲ್ಲವುಗಳ ಫಲದಿಂದ ಸವ್ಯಸಾಚಿಯು ಅರಿಗಳನ್ನು ಜಯಿಸುವಂಥವನಾಗಲಿ!”

07056016a ಏವಂ ಕಥಯತಾಂ ತೇಷಾಂ ಜಯಮಾಶಂಸತಾಂ ಪ್ರಭೋ|

07056016c ಕೃಚ್ಚ್ರೇಣ ಮಹತಾ ರಾಜನ್ರಜನೀ ವ್ಯತ್ಯವರ್ತತ||

ಪ್ರಭೋ! ರಾಜನ್! ಹೀಗೆ ಪರಸ್ಪರರಲ್ಲಿ ಮಾತನಾಡಿಕೊಳ್ಳುತ್ತಾ, ಅವನಿಗೆ ಜಯವನ್ನು ಆಶಿಸುತ್ತಾ ಮಹಾ ಕಷ್ಟದಿಂದ ಅವರು ರಾತ್ರಿಯನ್ನು ಕಳೆದರು.

07056017a ತಸ್ಯಾಂ ರಜನ್ಯಾಂ ಮಧ್ಯೇ ತು ಪ್ರತಿಬುದ್ಧೋ ಜನಾರ್ದನಃ|

07056017c ಸ್ಮೃತ್ವಾ ಪ್ರತಿಜ್ಞಾಂ ಪಾರ್ಥಸ್ಯ ದಾರುಕಂ ಪ್ರತ್ಯಭಾಷತ||

ಆ ರಾತ್ರಿಯ ಮಧ್ಯೆ ಎಚ್ಚೆತ್ತಿದ್ದ ಜನಾರ್ದನನು ಪಾರ್ಥನ ಪ್ರತಿಜ್ಞೆಯನ್ನು ಸ್ಮರಿಸಿಕೊಂಡು ದಾರುಕನಿಗೆ ಹೇಳಿದನು:

07056018a ಅರ್ಜುನೇನ ಪ್ರತಿಜ್ಞಾತಮಾರ್ತೇನ ಹತಬಂಧುನಾ|

07056018c ಜಯದ್ರಥಂ ಹನಿಷ್ಯಾಮಿ ಶ್ವೋಭೂತ ಇತಿ ದಾರುಕ||

“ದಾರುಕ! ಬಂಧುವು ಹತನಾದುದರಿಂದ ದುಃಖಿತನಾಗಿ ಅರ್ಜುನನು ನಾಳೆ ಜಯದ್ರಥನನ್ನು ಸಂಹರಿಸುತ್ತೇನೆ ಎಂದು ಪ್ರತಿಜ್ಞೆಯನ್ನು ಮಾಡಿಬಿಟ್ಟಿದ್ದಾನೆ.

07056019a ತತ್ತು ದುರ್ಯೋಧನಃ ಶ್ರುತ್ವಾ ಮಂತ್ರಿಭಿರ್ಮಂತ್ರಯಿಷ್ಯತಿ|

07056019c ಯಥಾ ಜಯದ್ರಥಂ ಪಾರ್ಥೋ ನ ಹನ್ಯಾದಿತಿ ಸಂಯುಗೇ||

ಅತ್ತ ದುರ್ಯೋಧನನು ಇದನ್ನು ಕೇಳಿ ಸಂಯುಗದಲ್ಲಿ ಪಾರ್ಥನು ಜಯದ್ರಥನನ್ನು ಸಂಹರಿಸಬಾರದ ಹಾಗೆ ಮಂತ್ರಾಲೋಚನೆಯನ್ನು ನಡೆಸಿರುವನು.

07056020a ಅಕ್ಷೌಹಿಣ್ಯೋ ಹಿ ತಾಃ ಸರ್ವಾ ರಕ್ಷಿಷ್ಯಂತಿ ಜಯದ್ರಥಂ|

07056020c ದ್ರೋಣಶ್ಚ ಸಹ ಪುತ್ರೇಣ ಸರ್ವಾಸ್ತ್ರವಿಧಿಪಾರಗಃ||

ಅವನ ಎಲ್ಲ ಅಕ್ಷೌಹಿಣಿಗಳೂ, ಸರ್ವಾಸ್ತ್ರವಿಧಿಪಾರಂಗತ ದ್ರೋಣನೂ ಮಗನೊಂದಿಗೆ ಜಯದ್ರಥನನ್ನು ರಕ್ಷಿಸಲಿದ್ದಾರೆ.

07056021a ಏಕೋ ವೀರಃ ಸಹಸ್ರಾಕ್ಷೋ ದೈತ್ಯದಾನವಮರ್ದಿತಾ|

07056021c ಸೋಽಪಿ ತಂ ನೋತ್ಸಹೇತಾಜೌ ಹಂತುಂ ದ್ರೋಣೇನ ರಕ್ಷಿತಂ||

ಏಕಮಾತ್ರ ವೀರನಾದ, ದೈತ್ಯದಾನವರ ದರ್ಪವನ್ನಡಗಿಸಿದ ಸಹಸ್ರಾಕ್ಷನೂ ಕೂಡ ದ್ರೋಣನಿಂದ ರಕ್ಷಿತನಾದವನನ್ನು ಸಂಹರಿಸಲು ಉತ್ಸಾಹಿತನಾಗುವುದಿಲ್ಲ.

07056022a ಸೋಽಹಂ ಶ್ವಸ್ತತ್ಕರಿಷ್ಯಾಮಿ ಯಥಾ ಕುಂತೀಸುತೋಽರ್ಜುನಃ|

07056022c ಅಪ್ರಾಪ್ತೇಽಸ್ತಂ ದಿನಕರೇ ಹನಿಷ್ಯತಿ ಜಯದ್ರಥಂ||

ನಾಳೆ ನಾನು ಸೂರ್ಯನು ಅಸ್ತನಾಗುವ ಮೊದಲೇ ಕುಂತೀಸುತ ಅರ್ಜುನನು ಜಯದ್ರಥನನ್ನು ಕೊಲ್ಲುವ ಹಾಗೆ ಮಾಡುತ್ತೇನೆ.

07056023a ನ ಹಿ ದಾರಾ ನ ಮಿತ್ರಾಣಿ ಜ್ಞಾತಯೋ ನ ಚ ಬಾಂಧವಾಃ|

07056023c ಕಶ್ಚಿನ್ನಾನ್ಯಃ ಪ್ರಿಯತರಃ ಕುಂತೀಪುತ್ರಾನ್ಮಮಾರ್ಜುನಾತ್||

ಪತ್ನಿಯರಾಗಲೀ ಮಿತ್ರರಾಗಲೀ ಜ್ಞಾತಿ-ಬಾಂಧವರಾಗಲೀ ಕುಂತೀಪುತ್ರ ಅರ್ಜುನನಿಗಿಂತ ಹೆಚ್ಚು ಪ್ರಿಯರು ನನಗೆ ಬೇರೆ ಯಾರೂ ಇಲ್ಲ.

07056024a ಅನರ್ಜುನಮಿಮಂ ಲೋಕಂ ಮುಹೂರ್ತಮಪಿ ದಾರುಕ|

07056024c ಉದೀಕ್ಷಿತುಂ ನ ಶಕ್ತೋಽಹಂ ಭವಿತಾ ನ ಚ ತತ್ತಥಾ||

ದಾರುಕ! ಅರ್ಜುನನಿಲ್ಲದ ಈ ಲೋಕವನ್ನು ಮುಹೂರ್ತಕಾಲವೂ ನೋಡಲು ನಾನು ಶಕ್ಯನಿಲ್ಲ. ಆದರೆ ಹಾಗೆ ಆಗುವುದಿಲ್ಲ.

07056025a ಅಹಂ ಧ್ವಜಿನ್ಯಃ ಶತ್ರೂಣಾಂ ಸಹಯಾಃ ಸರಥದ್ವಿಪಾಃ|

07056025c ಅರ್ಜುನಾರ್ಥೇ ಹನಿಷ್ಯಾಮಿ ಸಕರ್ಣಾಃ ಸಸುಯೋಧನಾಃ||

ಅರ್ಜುನನಿಗಾಗಿ ನಾನು ನಾಳೆ ರಥ-ಆನೆಗಳೊಂದಿಗೆ ಧ್ವಜಿಗಳಾದ ಶತ್ರುಗಳನ್ನು ಕರ್ಣ-ಸುಯೋಧನರೊಡನೆ, ಸಂಹರಿಸುತ್ತೇನೆ.

07056026a ಶ್ವೋ ನಿರೀಕ್ಷಂತು ಮೇ ವೀರ್ಯಂ ತ್ರಯೋ ಲೋಕಾ ಮಹಾಹವೇ|

07056026c ಧನಂಜಯಾರ್ಥಂ ಸಮರೇ ಪರಾಕ್ರಾಂತಸ್ಯ ದಾರುಕ||

ದಾರುಕ! ನಾಳಿನ ಮಹಾಯುದ್ಧದಲ್ಲಿ ಧನಂಜಯನಿಗಾಗಿ ನಾನು ತೋರಿಸುವ ಪರಾಕ್ರಮವನ್ನೂ ವೀರ್ಯವನ್ನೂ ಮೂರು ಲೋಕಗಳೂ ನೋಡಲಿ!

07056027a ಶ್ವೋ ನರೇಂದ್ರಸಹಸ್ರಾಣಿ ರಾಜಪುತ್ರಶತಾನಿ ಚ|

07056027c ಸಾಶ್ವದ್ವಿಪರಥಾನ್ಯಾಜೌ ವಿದ್ರವಿಷ್ಯಂತಿ ದಾರುಕ||

ದಾರುಕ! ನಾಳೆ ಸಹಸ್ರಾರು ನರೇಂದ್ರರೂ, ನೂರಾರು ರಾಜಪುತ್ರರೂ ಗಜ-ಅಶ್ವ-ರಥ-ಪದಾತಿ ಸೈನ್ಯಗಳೊಂದಿಗೆ ಓಡಿ ಹೋಗುವಂತೆ ಮಾಡುತ್ತೇನೆ.

07056028a ಶ್ವಸ್ತಾಂ ಚಕ್ರಪ್ರಮಥಿತಾಂ ದ್ರಕ್ಷ್ಯಸೇ ನೃಪವಾಹಿನೀಂ|

07056028c ಮಯಾ ಕ್ರುದ್ಧೇನ ಸಮರೇ ಪಾಂಡವಾರ್ಥೇ ನಿಪಾತಿತಾಂ||

ನಾಳೆ ನಾನು ಸಮರದಲ್ಲಿ ಪಾಂಡವನಿಗಾಗಿ ಕ್ರುದ್ಧನಾಗಿ ಚಕ್ರದಿಂದ ನೃಪವಾಹಿನಿಯನ್ನು ಕತ್ತರಿಸಿ ಬೀಳಿಸುವುದನ್ನು ನೀನು ನೋಡುವೆ!

07056029a ಶ್ವಃ ಸದೇವಾಃ ಸಗಂಧರ್ವಾಃ ಪಿಶಾಚೋರಗರಾಕ್ಷಸಾಃ|

07056029c ಜ್ಞಾಸ್ಯಂತಿ ಲೋಕಾಃ ಸರ್ವೇ ಮಾಂ ಸುಹೃದಂ ಸವ್ಯಸಾಚಿನಃ||

ನಾಳೆ ದೇವ-ಗಂಧರ್ವ-ಪಿಶಾಚ-ಉರಗ-ರಾಕ್ಷಸ ಲೋಕಗಳೆಲ್ಲವೂ ನಾನು ಸವ್ಯಸಾಚಿಯ ಸುಹೃದನೆನ್ನುವುದನ್ನು ಅರ್ಥಮಾಡಿಕೊಳ್ಳುತ್ತವೆ.

07056030a ಯಸ್ತಂ ದ್ವೇಷ್ಟಿ ಸ ಮಾಂ ದ್ವೇಷ್ಟಿ ಯಸ್ತಮನು ಸ ಮಾಮನು|

07056030c ಇತಿ ಸಂಕಲ್ಪ್ಯತಾಂ ಬುದ್ಧ್ಯಾ ಶರೀರಾರ್ಧಂ ಮಮಾರ್ಜುನಃ||

ಅವನನ್ನು ಯಾರು ದ್ವೇಷಿಸುತ್ತಾರೋ ಅವರು ನನ್ನನ್ನೂ ದ್ವೇಷಿಸುತ್ತಾರೆ. ಅವನನ್ನು ಯಾರು ಅನುಸರಿಸುತ್ತಾರೋ ಅವರು ನನ್ನನ್ನೂ ಅನುಸರಿಸುತ್ತಾರೆ. ಅರ್ಜುನನು ನನ್ನ ಶರೀರದ ಅರ್ಧಭಾಗವೆಂದೇ ನೀನು ಯೋಚಿಸಿ ತಿಳಿದುಕೋ.

07056031a ಯಥಾ ತ್ವಮಪ್ರಭಾತಾಯಾಮಸ್ಯಾಂ ನಿಶಿ ರಥೋತ್ತಮಂ|

07056031c ಕಲ್ಪಯಿತ್ವಾ ಯಥಾಶಾಸ್ತ್ರಮಾದಾಯ ವ್ರತಸಮ್ಯತಃ||

ನೀನು ಈ ರಾತ್ರಿ ಕಳೆದು ಬೆಳಗಾಗುವುದರೊಳಗೆ ನನ್ನ ಉತ್ತಮ ರಥವನ್ನು ಯಥಾಶಾಸ್ತ್ರವಾಗಿ ವ್ರತಸಮ್ಯತನಾಗಿ ಸಿದ್ಧಗೊಳಿಸು.

07056032a ಗದಾಂ ಕೌಮೋದಕೀಂ ದಿವ್ಯಾಂ ಶಕ್ತಿಂ ಚಕ್ರಂ ಧನುಃ ಶರಾನ್|

07056032c ಆರೋಪ್ಯ ವೈ ರಥೇ ಸೂತ ಸರ್ವೋಪಕರಣಾನಿ ಚ||

07056033a ಸ್ಥಾನಂ ಹಿ ಕಲ್ಪಯಿತ್ವಾ ಚ ರಥೋಪಸ್ಥೇ ಧ್ವಜಸ್ಯ ಮೇ|

07056033c ವೈನತೇಯಸ್ಯ ವೀರಸ್ಯ ಸಮರೇ ರಥಶೋಭಿನಃ||

ಸೂತ! ಕೌಮೋದಕೀ ಗದೆಯನ್ನೂ, ದಿವ್ಯ ಶಕ್ತಿ, ಚಕ್ರ, ಧನುಸ್ಸು, ಶರಗಳನ್ನೂ ಸರ್ವ ಉಪಕರಣಗಳನ್ನು ರಥದಲ್ಲಿ ಏರಿಸಿ, ರಥದಲ್ಲಿರುವ ನನ್ನ ಧ್ವಜದಲ್ಲಿ ಸಮರದಲ್ಲಿ ರಥಶೋಭಿನಿಯಾದ ವೀರ ವೈನತೇಯನಿಗೆ ಸ್ಥಳವನ್ನು ಕಲ್ಪಿಸು.

07056034a ಚತ್ರಂ ಜಾಂಬೂನದೈರ್ಜಾಲೈರರ್ಕಜ್ವಲನಸನ್ನಿಭೈಃ|

07056034c ವಿಶ್ವಕರ್ಮಕೃತೈರ್ದಿವ್ಯೈರಶ್ವಾನಪಿ ಚ ಭೂಷಿತಾನ್||

07056035a ಬಲಾಹಕಂ ಮೇಘಪುಷ್ಪಂ ಸೈನ್ಯಂ ಸುಗ್ರೀವಮೇವ ಚ|

07056035c ಯುಕ್ತ್ವಾ ವಾಜಿವರಾನ್ಯತ್ತಃ ಕವಚೀ ತಿಷ್ಠ ದಾರುಕ||

ದಾರುಕ! ಚತ್ರವನ್ನೂ, ಬಂಗಾರದ ಜಾಲಗಳಿಂದ ಕೂಡಿದ ಸೂರ್ಯನ ಜ್ವಲನದಂತಿರುವ ವಿಶ್ವಕರ್ಮನಿಂದ ನಿರ್ಮಿತ ಭೂಷಣಗಳಿಂದ ಅಲಂಕೃತವಾದ ಬಲಾಹಕ, ಮೇಘಪುಷ್ಪ, ಸೈನ್ಯ ಮತ್ತು ಸುಗ್ರೀವಗಳೆಂಬ ದಿವ್ಯ ಶ್ರೇಷ್ಠ ಅಶ್ವಗಳನ್ನು ಕಟ್ಟಿ ಕವಚವನ್ನು ಧರಿಸಿ ನಿಂತಿರು.

07056036a ಪಾಂಚಜನ್ಯಸ್ಯ ನಿರ್ಘೋಷಮಾರ್ಷಭೇಣೈವ ಪೂರಿತಂ|

07056036c ಶ್ರುತ್ವಾ ತು ಭೈರವಂ ನಾದಮುಪಯಾಯಾ ಜವೇನ ಮಾಂ||

ಋಷಭಸ್ವರದಿಂದಲೇ ಊದಲ್ಪಡುವ ಪಾಂಚಜನ್ಯದ ನಿರ್ಘೋಷವನ್ನೂ ಭೈರವ ನಾದವನ್ನೂ ಕೇಳಿದೊಡನೆಯೇ ನೀನು ವೇಗದಿಂದ ನನ್ನ ಬಳಿ ಬರಬೇಕು.

07056037a ಏಕಾಹ್ನಾಹಮಮರ್ಷಂ ಚ ಸರ್ವದುಃಖಾನಿ ಚೈವ ಹ|

07056037c ಭ್ರಾತುಃ ಪಿತೃಷ್ವಸೇಯಸ್ಯ ವ್ಯಪನೇಷ್ಯಾಮಿ ದಾರುಕ||

ದಾರುಕ! ತಂದೆಯ ತಂಗಿಯ ಮಗನ ತಮ್ಮನಾದ ಅವನ ಸರ್ವದುಃಖಗಳನ್ನೂ ಒಂದೇ ದಿನದಲ್ಲಿ ಕೋಪಗೊಂಡು ಕಳೆದುಬಿಡುತ್ತೇನೆ.

07056038a ಸರ್ವೋಪಾಯೈರ್ಯತಿಷ್ಯಾಮಿ ಯಥಾ ಬೀಭತ್ಸುರಾಹವೇ|

07056038c ಪಶ್ಯತಾಂ ಧಾರ್ತರಾಷ್ಟ್ರಾಣಾಂ ಹನಿಷ್ಯತಿ ಜಯದ್ರಥಂ||

ಆಹವದಲ್ಲಿ ಧಾರ್ತರಾಷ್ಟ್ರರು ನೋಡುತ್ತಿರುವಂತೆಯೇ ಬೀಭತ್ಸುವು ಜಯದ್ರಥನನ್ನು ಕೊಲ್ಲುವಂತೆ ಸರ್ವ ಉಪಾಯಗಳಿಂದಲೂ ಪ್ರಯತ್ನಿಸುತ್ತೇನೆ.

07056039a ಯಸ್ಯ ಯಸ್ಯ ಚ ಬೀಭತ್ಸುರ್ವಧೇ ಯತ್ನಂ ಕರಿಷ್ಯತಿ|

07056039c ಆಶಂಸೇ ಸಾರಥೇ ತತ್ರ ಭವಿತಾಸ್ಯ ಧ್ರುವೋ ಜಯಃ||

ಸಾರಥೇ! ಬೀಭತ್ಸುವು ಯಾರ್ಯಾರನ್ನು ವಧಿಸಲು ಪ್ರಯತ್ನಿಸುತ್ತಾನೋ ಅಲ್ಲಿ ಅವನಿಗೆ ನಿಶ್ಚಯವಾದ ಜಯವುಂಟಾಗಬೇಕೆಂದು ಆಶಿಸುತ್ತೇನೆ.”

07056040 ದಾರುಕ ಉವಾಚ|

07056040a ಜಯ ಏವ ಧ್ರುವಸ್ತಸ್ಯ ಕುತ ಏವ ಪರಾಜಯಃ|

07056040c ಯಸ್ಯ ತ್ವಂ ಪುರುಷವ್ಯಾಘ್ರ ಸಾರಥ್ಯಮುಪಜಗ್ಮಿವಾನ್||

ದಾರುಕನು ಹೇಳಿದನು: ಪುರುಷವ್ಯಾಘ್ರ! ನೀನು ಯಾರ ಸಾರಥ್ಯವನ್ನು ವಹಿಸಿಕೊಂಡಿರುವೆಯೋ ಅವನ ಜಯವು ನಿಶ್ಚಿತವಾದುದು. ಎಲ್ಲಿಯ ಪರಾಜಯ?

07056041a ಏವಂ ಚೈತತ್ ಕರಿಷ್ಯಾಮಿ ಯಥಾ ಮಾಮನುಶಾಸಸಿ|

07056041c ಸುಪ್ರಭಾತಾಮಿಮಾಂ ರಾತ್ರಿಂ ಜಯಾಯ ವಿಜಯಸ್ಯ ಹಿ||

ನೀನು ನನಗೆ ಆಜ್ಞೆಯಿತ್ತಿರುವಂತೆಯೇ ವಿಜಯನ ಜಯಕ್ಕಾಗಿ ಈ ರಾತ್ರಿ ಬೆಳಗಾಗುವುದರೊಳಗೆ ಎಲ್ಲವನ್ನೂ ಮಾಡುತ್ತೇನೆ.””

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಕೃಷ್ಣದಾರುಕಸಂಭಾಷಣೇ ಷಟ್ಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಕೃಷ್ಣದಾರುಕಸಂಭಾಷಣೆ ಎನ್ನುವ ಐವತ್ತಾರನೇ ಅಧ್ಯಾಯವು.

Image result for night against white background

Comments are closed.