Drona Parva: Chapter 146

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೪೬

ಸಾತ್ಯಕಿಯ ಪರಾಕ್ರಮ, ದುರ್ಯೋಧನನ ಪರಾಜಯ (೧-೨೪). ಶಕುನಿ-ಅರ್ಜುನರ ಯುದ್ಧ; ಕೌರವ ಸೇನೆಯ ಪರಾಭವ (೨೫-೪೧). ದ್ರೋಣ-ಧೃಷ್ಟದ್ಯುಮ್ನರ ಯುದ್ಧ; ಧೃಷ್ಟದ್ಯುಮ್ನನ ಪರಾಕ್ರಮ (೪೨-೫೧).

07146001 ಸಂಜಯ ಉವಾಚ|

07146001a ತತಸ್ತೇ ಪ್ರಾದ್ರವನ್ಸರ್ವೇ ತ್ವರಿತಾ ಯುದ್ಧದುರ್ಮದಾಃ|

07146001c ಅಮೃಷ್ಯಮಾಣಾಃ ಸಂರಬ್ಧಾ ಯುಯುಧಾನರಥಂ ಪ್ರತಿ||

ಸಂಜಯನು ಹೇಳಿದನು: “ಆಗ ನಿನ್ನವರಾದ ಯುದ್ಧದುರ್ಮದರೆಲ್ಲರೂ ರೋಷಗೊಂಡು ಸಂರಬ್ಧರಾಗಿ ಯುಯುಧಾನನ ರಥದ ಬಳಿಗೆ ಧಾವಿಸಿದರು.

07146002a ತೇ ರಥೈಃ ಕಲ್ಪಿತೈ ರಾಜನ್ ಹೇಮರೂಪ್ಯವಿಭೂಷಿತೈಃ|

07146002c ಸಾದಿಭಿಶ್ಚ ಗಜೈಶ್ಚೈವ ಪರಿವವ್ರುಃ ಸ್ಮ ಸಾತ್ವತಂ||

ರಾಜನ್! ಚಿನ್ನ-ಬೆಳ್ಳಿಗಳಿಂದ ಅಲಂಕರಿಸಲ್ಪಟ್ಟ ರಥಗಳ ಮೇಲೆ, ಕುದುರೆ-ಆನೆಗಳ ಮೇಲೆ ಕುಳಿತು ಅವರು ಸಾತ್ವತನನ್ನು ಸುತ್ತುವರೆದರು.

07146003a ಅಥೈನಂ ಕೋಷ್ಠಕೀಕೃತ್ಯ ಸರ್ವತಸ್ತೇ ಮಹಾರಥಾಃ|

07146003c ಸಿಂಹನಾದಾಂಸ್ತದಾ ಚಕ್ರುಸ್ತರ್ಜಯಂತಃ ಸ್ಮ ಸಾತ್ಯಕಿಂ||

ಆ ಮಹಾರಥರೆಲ್ಲರೂ ಕೋಟೆಯಾಕಾರವನ್ನು ಮಾಡಿಕೊಂಡು ಸಿಂಹನಾದಗೈಯುತ್ತಾ ಸಾತ್ಯಕಿಯನ್ನು ಹೆದರಿಸುತ್ತಿದ್ದರು.

07146004a ತೇಽಭ್ಯವರ್ಷಂ ಶರೈಸ್ತೀಕ್ಷ್ಣೈಃ ಸಾತ್ಯಕಿಂ ಸತ್ಯವಿಕ್ರಮಂ|

07146004c ತ್ವರಮಾಣಾ ಮಹಾವೀರ್ಯಾ ಮಾಧವಸ್ಯ ವಧೈಷಿಣಃ||

ಮಾಧವನ ವಧೆಯನ್ನು ಬಯಸಿದ ಅವರು ಮಹಾವೀರ್ಯದಿಂದ ತೀಕ್ಷ್ಣ ಶರಗಳನ್ನು ಸತ್ಯವಿಕ್ರಮ ಸಾತ್ಯಕಿಯ ಮೇಲೆ ಸುರಿಸಿದರು.

07146005a ತಾನ್ದೃಷ್ಟ್ವಾ ಪತತಸ್ತೂರ್ಣಂ ಶೈನೇಯಃ ಪರವೀರಹಾ|

07146005c ಪ್ರತ್ಯಗೃಹ್ಣಾನ್ಮಹಾಬಾಹುಃ ಪ್ರಮುಂಚನ್ವಿಶಿಖಾನ್ಬಹೂನ್||

ಅವರು ಮೇಲೆ ಬೀಳುತ್ತಿದ್ದನ್ನು ನೋಡಿ ತಕ್ಷಣವೇ ಪರವೀರಹ ಮಹಾಬಾಹು ಶೈನೇಯನು ಅನೇಕ ವಿಶಿಖಗಳನ್ನು ತೆಗೆದುಕೊಂಡು ಅವರ ಮೇಲೆ ಪ್ರಯೋಗಿಸಿದನು.

07146006a ತತ್ರ ವೀರೋ ಮಹೇಷ್ವಾಸಃ ಸಾತ್ಯಕಿರ್ಯುದ್ಧದುರ್ಮದಃ|

07146006c ನಿಚಕರ್ತ ಶಿರಾಂಸ್ಯುಗ್ರೈಃ ಶರೈಃ ಸಮ್ನತಪರ್ವಭಿಃ||

ಅಲ್ಲಿ ವೀರ ಮಹೇಷ್ವಾಸ ಯುದ್ಧದುರ್ಮದ ಸಾತ್ಯಕಿಯು ಉಗ್ರ ಸನ್ನತಪರ್ವ ಶರಗಳಿಂದ ಅವರ ಶಿರಗಳನ್ನು ತುಂಡರಿಸಿದನು.

07146007a ಹಸ್ತಿಹಸ್ತಾನ್ ಹಯಗ್ರೀವಾನ್ಬಾಹೂನಪಿ ಚ ಸಾಯುಧಾನ್|

07146007c ಕ್ಷುರಪ್ರೈಃ ಪಾತಯಾಮಾಸ ತಾವಕಾನಾಂ ಸ ಮಾಧವಃ||

ಆ ಮಾಧವನು ನಿನ್ನವರ ಆನೆಗಳ ಸೊಂಡಿಲುಗಳನ್ನೂ, ಕುದುರೆಗಳ ಕುತ್ತಿಗೆಗಳನ್ನೂ, ಆಯುಧಧಾರಿಗಳ ಬಾಹುಗಳನ್ನೂ ಕ್ಷುರಪ್ರಗಳಿಂದ ಬೀಳಿಸಿದನು.

07146008a ಪತಿತೈಶ್ಚಾಮರೈಶ್ಚೈವ ಶ್ವೇತಚ್ಚತ್ರೈಶ್ಚ ಭಾರತ|

07146008c ಬಭೂವ ಧರಣೀ ಪೂರ್ಣಾ ನಕ್ಷತ್ರೈರ್ದ್ಯೌರಿವ ಪ್ರಭೋ||

ಭಾರತ! ಪ್ರಭೋ! ಬೀಳುತ್ತಿರುವ ಚಾಮರಗಳಿಂದ, ಶ್ವೇತಚತ್ರಗಳಿಂದ ಧರಣಿಯು ನಕ್ಷತ್ರಗಳಿಂದ ತುಂಬಿದ ಆಕಾಶದಂತಾಯಿತು.

07146009a ತೇಷಾಂ ತು ಯುಯುಧಾನೇನ ಯುಧ್ಯತಾಂ ಯುಧಿ ಭಾರತ|

07146009c ಬಭೂವ ತುಮುಲಃ ಶಬ್ದಃ ಪ್ರೇತಾನಾಮಿವ ಕ್ರಂದತಾಂ||

ಭಾರತ! ಯುದ್ಧದಲ್ಲಿ ಯುಯುಧಾನನೊಂದಿಗೆ ಯುದ್ಧಮಾಡುತ್ತಿರುವಾಗ ನಡೆದ ತುಮುಲ ಶಬ್ಧವು ಪ್ರೇತಗಳ ಆಕ್ರಂದನದಂತೆ ಕೇಳಿಬರುತ್ತಿತ್ತು.

07146010a ತೇನ ಶಬ್ದೇನ ಮಹತಾ ಪೂರಿತಾಸೀದ್ವಸುಂಧರಾ|

07146010c ರಾತ್ರಿಃ ಸಮಭವಚ್ಚೈವ ತೀವ್ರರೂಪಾ ಭಯಾವಹಾ||

ಆ ಮಹಾಶಬ್ಧದಿಂದ ವಸುಂಧರೆಯು ತುಂಬಿಹೋಯಿತು. ರಾತ್ರಿಯೂ ಕೂಡ ಭಯವನ್ನುಂಟುಮಾಡುವ ತೀವ್ರರೂಪವನ್ನು ತಾಳಿತು.

07146011a ದೀರ್ಯಮಾಣಂ ಬಲಂ ದೃಷ್ಟ್ವಾ ಯುಯುಧಾನಶರಾಹತಂ|

07146011c ಶ್ರುತ್ವಾ ಚ ವಿಪುಲಂ ನಾದಂ ನಿಶೀಥೇ ಲೋಮಹರ್ಷಣ||

07146012a ಸುತಸ್ತವಾಬ್ರವೀದ್ರಾಜನ್ಸಾರಥಿಂ ರಥಿನಾಂ ವರಃ|

07146012c ಯತ್ರೈಷ ಶಬ್ದಸ್ತತ್ರಾಶ್ವಾಂಶ್ಚೋದಯೇತಿ ಪುನಃ ಪುನಃ||

ರಾಜನ್! ಯುಯುಧಾನನ ಶರಗಳ ಹೊಡೆತಕ್ಕೆ ಸಿಲುಕಿ ತನ್ನ ಬಲವು ಧ್ವಂಸವಾಗುತ್ತಿರುವುದನ್ನು ನೋಡಿ ಮತ್ತು ನಿಶಿಯಲ್ಲಿ ಕೇಳಿಬರುತ್ತಿದ್ದ ರೋಮಹರ್ಷಣ ವಿಪುಲ ನಾದವನ್ನು ಕೇಳಿ ನಿನ್ನ ಮಗ ರಥಿಗಳಲ್ಲಿ ಶ್ರೇಷ್ಠನು ಸಾರಥಿಗೆ “ಎಲ್ಲಿಂದ ಈ ಶಬ್ಧವು ಕೇಳಿಬರುತ್ತಿದೆಯೋ ಅಲ್ಲಿಗೆ ಕುದುರೆಗಳನ್ನು ಪ್ರಚೋದಿಸು!” ಎಂದು ಪುನಃ ಪುನಃ ಹೇಳಿದನು.

07146013a ತೇನ ಸಂಚೋದ್ಯಮಾನಸ್ತು ತತಸ್ತಾಂಸ್ತುರಗೋತ್ತಮಾನ್|

07146013c ಸೂತಃ ಸಂಚೋದಯಾಮಾಸ ಯುಯುಧಾನರಥಂ ಪ್ರತಿ||

ಅವನಿಂದ ಪ್ರಚೋದನೆಗೊಂಡು ಸೂತನು ಆ ಉತ್ತಮ ತುರುಗಗಳನ್ನು ಯುಯುಧಾನನ ರಥದ ಕಡೆ ಪ್ರಚೋದಿಸಿದನು.

07146014a ತತೋ ದುರ್ಯೋಧನಃ ಕ್ರುದ್ಧೋ ದೃಢಧನ್ವಾ ಜಿತಕ್ಲಮಃ|

07146014c ಶೀಘ್ರಹಸ್ತಶ್ಚಿತ್ರಯೋಧೀ ಯುಯುಧಾನಮುಪಾದ್ರವತ್||

ಆಗ ಕ್ರುದ್ಧ ದೃಢಧನ್ವಿ ಜಿತಕ್ಲಮ ಶೀಘ್ರಹಸ್ತ ಚಿತ್ರಯೋಧೀ ದುರ್ಯೋಧನನು ಯುಯುಧಾನನ ಮೇಲೆ ಧಾಳಿಮಾಡಿದನು.

07146015a ತತಃ ಪೂರ್ಣಾಯತೋತ್ಸೃಷ್ಟೈರ್ಮಾಂಸಶೋಣಿತಭೋಜನೈಃ|

07146015c ದುರ್ಯೋಧನಂ ದ್ವಾದಶಭಿರ್ಮಾಧವಃ ಪ್ರತ್ಯವಿಧ್ಯತ||

ಆಗ ಪೂರ್ಣವಾಗಿ ಸೆಳೆದು ಬಿಟ್ಟ ಮಾಂಸ-ರಕ್ತಗಳೇ ಭೋಜನವಾಗಿರುವ ಹನ್ನೆರಡು ಬಾಣಗಳಿಂದ ಮಾಧವನು ದುರ್ಯೋಧನನನ್ನು ಗಾಯಗೊಳಿಸಿದನು.

07146016a ದುರ್ಯೋಧನಸ್ತೇನ ತಥಾ ಪೂರ್ವಂ ಏವಾರ್ದಿತಃ ಶರೈಃ|

07146016c ಶೈನೇಯಂ ದಶಭಿರ್ಬಾಣೈಃ ಪ್ರತ್ಯವಿಧ್ಯದಮರ್ಷಿತಃ||

ತಾನು ಬಾಣಗಳನ್ನು ಬಿಡುವ ಮೊದಲೇ ಗಾಯಗೊಳಿಸಿದ ಶೈನೇಯನನ್ನು ಕೋಪಗೊಂಡ ದುರ್ಯೋಧನನು ಹತ್ತು ಬಾಣಗಳಿಂದ ಪ್ರತಿಯಾಗಿ ಗಾಯಗೊಳಿಸಿದನು.

07146017a ತತಃ ಸಮಭವದ್ಯುದ್ಧಮಾಕುಲಂ ಭರತರ್ಷಭ|

07146017c ಪಾಂಚಾಲಾನಾಂ ಚ ಸರ್ವೇಷಾಂ ಭಾರತಾನಾಂ ಚ ದಾರುಣಂ||

ಭರತರ್ಷಭ! ಆಗ ಪಾಂಚಾಲರೆಲ್ಲರ ಮತ್ತು ಭಾರತರ ದಾರುಣ ಸಂಕುಲ ಯುದ್ಧವು ಪ್ರಾರಂಭವಾಯಿತು.

07146018a ಶೈನೇಯಸ್ತು ರಣೇ ಕ್ರುದ್ಧಸ್ತವ ಪುತ್ರಂ ಮಹಾರಥಂ|

07146018c ಸಾಯಕಾನಾಮಶೀತ್ಯಾ ತು ವಿವ್ಯಾಧೋರಸಿ ಭಾರತ||

ಭಾರತ! ರಣದಲ್ಲಿ ಕ್ರುದ್ಧ ಶೈನೇಯನಾದರೋ ನಿನ್ನ ಪುತ್ರ ಮಹಾರಥನ ಎದೆಗೆ ಹರಿತ ಸಾಯಕಗಳಿಂದ ಹೊಡೆದು ಗಾಯಗೊಳಿಸಿದನು.

07146019a ತತೋಽಸ್ಯ ವಾಹಾನ್ಸಮರೇ ಶರೈರ್ನಿನ್ಯೇ ಯಮಕ್ಷಯಂ|

07146019c ಸಾರಥಿಂ ಚ ರಥಾತ್ತೂರ್ಣಂ ಪಾತಯಾಮಾಸ ಪತ್ರಿಣಾ||

ಅಗ ಅವನು ಸಮರದಲ್ಲಿ ಕುದುರೆಗಳನ್ನು ಶರಗಳಿಂದ ಯಮಕ್ಷಯಕ್ಕೆ ಕಳುಹಿಸಿದನು. ಮತ್ತು ತಕ್ಷಣವೇ ಪತ್ರಿಗಳಿಂದ ಸಾರಥಿಯನ್ನು ರಥದಿಂದ ಕೆಡವಿದನು.

07146020a ಹತಾಶ್ವೇ ತು ರಥೇ ತಿಷ್ಠನ್ಪುತ್ರಸ್ತವ ವಿಶಾಂ ಪತೇ|

07146020c ಮುಮೋಚ ನಿಶಿತಾನ್ಬಾಣಾಂ ಶೈನೇಯಸ್ಯ ರಥಂ ಪ್ರತಿ||

ವಿಶಾಂಪತೇ! ಕುದುರೆಗಳು ಹತರಾದ ರಥದ ಮೇಲೆಯೇ ನಿಂತುಕೊಂಡು ನಿನ್ನ ಮಗನು ಶೈನೇಯನ ರಥದ ಕಡೆ ನಿಶಿತ ಬಾಣಗಳನ್ನು ಪ್ರಯೋಗಿಸಿದನು.

07146021a ಶರಾನ್ಪಂಚಾಶತಸ್ತಾಂಸ್ತು ಶೈನೇಯಃ ಕೃತಹಸ್ತವತ್|

07146021c ಚಿಚ್ಚೇದ ಸಮರೇ ರಾಜನ್ಪ್ರೇಷಿತಾಂಸ್ತನಯೇನ ತೇ||

ರಾಜನ್! ನಿನ್ನ ಮಗನು ಕಳುಹಿಸಿದ ಆ ಐವತ್ತು ಶರಗಳನ್ನು ಕೃತಹಸ್ತ ಶೈನೇಯನು ಸಮರದಲ್ಲಿ ಕತ್ತರಿಸಿದನು.

07146022a ಅಥಾಪರೇಣ ಭಲ್ಲೇನ ಮುಷ್ಟಿದೇಶೇ ಮಹದ್ಧನುಃ|

07146022c ಚಿಚ್ಚೇದ ರಭಸೋ ಯುದ್ಧೇ ತವ ಪುತ್ರಸ್ಯ ಮಾರಿಷ||

ಮಾರಿಷ! ಅಷ್ಟರಲ್ಲಿಯೇ ಇನ್ನೊಂದು ಭಲ್ಲದಿಂದ ರಭಸವಾಗಿ ಯುದ್ಧದಲ್ಲಿ ನಿನ್ನ ಮಗನ ಮಹಾಧನುಸ್ಸನ್ನು ಮುಷ್ಟಿದೇಶದಲ್ಲಿ ತುಂಡರಿಸಿದನು.

07146023a ವಿರಥೋ ವಿಧನುಷ್ಕಶ್ಚ ಸರ್ವಲೋಕೇಶ್ವರಃ ಪ್ರಭುಃ|

07146023c ಆರುರೋಹ ರಥಂ ತೂರ್ಣಂ ಭಾಸ್ವರಂ ಕೃತವರ್ಮಣಃ||

ವಿರಥನಾದ, ಧನುಸ್ಸನ್ನೂ ಕಳೆದುಕೊಂಡ ಸರ್ವಲೋಕೇಶ್ವರ ಪ್ರಭುವು ತಕ್ಷಣವೇ ಕೃತವರ್ಮನ ಹೊಳೆಯುತ್ತಿದ್ದ ರಥವನ್ನು ಏರಿಕೊಂಡನು.

07146024a ದುರ್ಯೋಧನೇ ಪರಾವೃತ್ತೇ ಶೈನೇಯಸ್ತವ ವಾಹಿನೀಂ|

07146024c ದ್ರಾವಯಾಮಾಸ ವಿಶಿಖೈರ್ನಿಶಾಮಧ್ಯೇ ವಿಶಾಂ ಪತೇ||

ವಿಶಾಂಪತೇ! ದುರ್ಯೋಧನನು ಪರಾಜಿತನಾಗಲು ಶೈನೇಯನು ನಿನ್ನ ಸೇನೆಯನ್ನು ಆ ರಾತ್ರಿಮಧ್ಯದಲ್ಲಿ ವಿಶಿಖಗಳಿಂದ ಪಲಾಯನಗೊಳಿಸಿದನು.

07146025a ಶಕುನಿಶ್ಚಾರ್ಜುನಂ ರಾಜನ್ಪರಿವಾರ್ಯ ಸಮಂತತಃ|

07146025c ರಥೈರನೇಕಸಾಹಸ್ರೈರ್ಗಜೈಶ್ಚೈವ ಸಹಸ್ರಶಃ|

07146025e ತಥಾ ಹಯಸಹಸ್ರೈಶ್ಚ ತುಮುಲಂ ಸರ್ವತೋಽಕರೋತ್||

ರಾಜನ್! ಶಕುನಿಯು ಅರ್ಜುನನನ್ನು ಎಲ್ಲಕಡೆಗಳಿಂದ ಸುತ್ತುವರೆದನು. ಅನೇಕ ಸಹಸ್ರ ರಥಗಳಿಂದ, ಸಹಸ್ರಾರು ಆನೆಗಳಿಂದ ಮತ್ತು ಹಾಗೆಯೇ ಸಹಸ್ರಾರು ಕುದುರೆಗಳಿಂದ ಕೂಡಿದವನಾಗಿ ಎಲ್ಲಕಡೆಗಳಿಂದ ತುಮುಲ ಯುದ್ಧವನ್ನು ನಡೆಸಿದನು.

07146026a ತೇ ಮಹಾಸ್ತ್ರಾಣಿ ದಿವ್ಯಾನಿ ವಿಕಿರಂತೋಽರ್ಜುನಂ ಪ್ರತಿ|

07146026c ಅರ್ಜುನಂ ಯೋಧಯಂತಿ ಸ್ಮ ಕ್ಷತ್ರಿಯಾಃ ಕಾಲಚೋದಿತಾಃ||

ಕಾಲಚೋದಿತ ಆ ಕ್ಷತ್ರಿಯರು ಅರ್ಜುನನ ಮೇಲೆ ದಿವ್ಯ ಮಹಾಸ್ತ್ರಗಳನ್ನು ಎರಚುತ್ತಾ ಅರ್ಜುನನೊಂದಿಗೆ ಯುದ್ಧಮಾಡುತ್ತಿದ್ದರು.

07146027a ತಾನ್ಯರ್ಜುನಃ ಸಹಸ್ರಾಣಿ ರಥವಾರಣವಾಜಿನಾಂ|

07146027c ಪ್ರತ್ಯವಾರಯದಾಯಸ್ತಃ ಪ್ರಕುರ್ವನ್ವಿಪುಲಂ ಕ್ಷಯಂ||

ಬಳಲಿದ್ದರೂ ಅರ್ಜುನನು ವಿಪುಲ ಕ್ಷಯವನ್ನುಂಟುಮಾಡುತ್ತಾ ಆ ಸಹಸ್ರಾರು ರಥ-ಆನೆ-ಕುದುರೆಗಳನ್ನು ತಡೆದು ನಿಲ್ಲಿಸಿದನು.

07146028a ತತಸ್ತು ಸಮರೇ ಶೂರಃ ಶಕುನಿಃ ಸೌಬಲಸ್ತದಾ|

07146028c ವಿವ್ಯಾಧ ನಿಶಿತೈರ್ಬಾಣೈರರ್ಜುನಂ ಪ್ರಹಸನ್ನಿವ||

ಆಗ ಸಮರದಲ್ಲಿ ಶೂರ ಶಕುನಿ ಸೌಬಲನು ನಸುನಗುತ್ತಾ ಅರ್ಜುನನನ್ನು ನಿಶಿತ ಬಾಣಗಳಿಂದ ಗಾಯಗೊಳಿಸಿದನು.

07146029a ಪುನಶ್ಚೈವ ಶತೇನಾಸ್ಯ ಸಂರುರೋಧ ಮಹಾರಥಂ|

07146029c ತಮರ್ಜುನಸ್ತು ವಿಂಶತ್ಯಾ ವಿವ್ಯಾಧ ಯುಧಿ ಭಾರತ||

ವಿಶಾಂಪತೇ! ಪುನಃ ನೂರು ಬಾಣಗಳಿಂದ ಆ ಮಹಾರಥನನ್ನು ಮುಂದೆಹೋಗದಂತೆ ತಡೆದನು. ಅರ್ಜುನನಾದರೋ ಯುದ್ಧದಲ್ಲಿ ಅವನನ್ನು ಇಪ್ಪತ್ತು ಬಾಣಗಳಿಂದ ಹೊಡೆದನು.

07146030a ಅಥೇತರಾನ್ಮಹೇಷ್ವಾಸಾಂಸ್ತ್ರಿಭಿಸ್ತ್ರಿಭಿರವಿಧ್ಯತ|

07146030c ಸಂವಾರ್ಯ ತಾನ್ಬಾಣಗಣೈರ್ಯುಧಿ ರಾಜನ್ಧನಂಜಯಃ|

07146030e ಅವಧೀತ್ತಾವಕಾನ್ಯೋಧಾನ್ವಜ್ರಪಾಣಿರಿವಾಸುರಾನ್||

ಇತರ ಮಹೇಷ್ವಾಸರನ್ನೂ ಅವನು ಮೂರು ಮೂರು ಬಾಣಗಳಿಂದ ಹೊಡೆದನು. ರಾಜನ್! ಅವರನ್ನು ಯುದ್ಧದಲ್ಲಿ ಬಾಣಗಣಗಳಿಂದ ತಡೆಯುತ್ತಾ ಧನಂಜಯನು ವಜ್ರಪಾಣಿಯು ಅಸುರರನ್ನು ಹೇಗೋ ಹಾಗೆ ನಿನ್ನಕಡೆಯ ಯೋಧರನ್ನು ಗಾಯಗೊಳಿಸಿದನು.

07146031a ಭುಜೈಶ್ಚಿನ್ನೈರ್ಮಹಾರಾಜ ಶರೀರೈಶ್ಚ ಸಹಸ್ರಶಃ|

07146031c ಸಮಾಸ್ತೀರ್ಣಾ ಧರಾ ತತ್ರ ಬಭೌ ಪುಷ್ಪೈರಿವಾಚಿತಾ||

ಮಹಾರಾಜ! ಕತ್ತರಿಸಲ್ಪಟ್ಟು ಹರಡಿಹೋಗಿದ್ದ ಸಹಸ್ರಾರು ಭುಜಗಳಿಂದ ಮತ್ತು ಶರೀರಗಳಿಂದ ರಣಭೂಮಿಯು ಪುಷ್ಪಗಳಿಂದ ವ್ಯಾಪ್ತವಾಗಿರುವಂತೆ ತೋರುತ್ತಿತ್ತು.

07146032a ಸ ವಿದ್ಧ್ವಾ ಶಕುನಿಂ ಭೂಯಃ ಪಂಚಭಿರ್ನತಪರ್ವಭಿಃ|

07146032c ಉಲೂಕಂ ತ್ರಿಭಿರಾಜಘ್ನೇ ತ್ರಿಭಿರೇವ ಮಹಾಯಸೈಃ||

ಶಕುನಿಯನ್ನು ಪುನಃ ಐದು ನತಪರ್ವಗಳಿಂದ ಹೊಡೆದು ಅವನು ಉಲೂಕನನ್ನು ಮೂರು ಮೂರು ಮಹಾಯಸಗಳಿಂದ ಹೊಡೆದನು.

07146033a ತಮುಲೂಕಸ್ತಥಾ ವಿದ್ಧ್ವಾ ವಾಸುದೇವಮತಾಡಯತ್|

07146033c ನನಾದ ಚ ಮಹಾನಾದಂ ಪೂರಯನ್ವಸುಧಾತಲಂ||

ಆಗ ಉಲೂಕನು ವಾಸುದೇವನನನ್ನು ಹೊಡೆದನು ಮತ್ತು ವಸುಧಾತಲವನ್ನು ತುಂಬಿಬಿಡುವಂತೆ ಮಹಾನಾದಗೈದನು.

07146034a ಅರ್ಜುನಸ್ತು ದ್ರುತಂ ಗತ್ವಾ ಶಕುನೇರ್ಧನುರಾಚ್ಚಿನತ್|

07146034c ನಿನ್ಯೇ ಚ ಚತುರೋ ವಾಹಾನ್ಯಮಸ್ಯ ಸದನಂ ಪ್ರತಿ||

ಅರ್ಜುನನಾದರೋ ಮುಂದುವರೆದು ಶಕುನಿಯ ಧನುಸ್ಸನ್ನು ಕತ್ತರಿಸಿದನು ಮತ್ತು ಅವನ ನಾಲ್ಕು ಕುದುರೆಗಳನ್ನು ಯಮಸದನದ ಕಡೆ ಕಳುಹಿಸಿದನು.

07146035a ತತೋ ರಥಾದವಪ್ಲುತ್ಯ ಸೌಬಲೋ ಭರತರ್ಷಭ|

07146035c ಉಲೂಕಸ್ಯ ರಥಂ ತೂರ್ಣಮಾರುರೋಹ ವಿಶಾಂ ಪತೇ||

ವಿಶಾಂಪತೇ! ಭರತರ್ಷಭ! ಆಗ ರಥದಿಂದ ಹಾರಿ ಸೌಬಲನು ಬೇಗನೇ ಉಲೂಕನ ರಥವನ್ನೇರಿದನು.

07146036a ತಾವೇಕರಥಮಾರೂಢೌ ಪಿತಾಪುತ್ರೌ ಮಹಾರಥೌ|

07146036c ಪಾರ್ಥಂ ಸಿಷಿಚತುರ್ಬಾಣೈರ್ಗಿರಿಂ ಮೇಘಾವಿವೋತ್ಥಿತೌ||

ಅವರಿಬ್ಬರು ಪಿತಾ-ಪುತ್ರ ಮಹಾರಥರೂ ಒಂದೇ ರಥವನ್ನೇರಿ ಮೇಲೆದ್ದ ಮೋಡಗಳು ಗಿರಿಯಮೇಲೆ ಹೇಗೋ ಹಾಗೆ ಪಾರ್ಥನ ಮೇಲೆ ಬಾಣಗಳ ಮಳೆಗರೆದರು.

07146037a ತೌ ತು ವಿದ್ಧ್ವಾ ಮಹಾರಾಜ ಪಾಂಡವೋ ನಿಶಿತೈಃ ಶರೈಃ|

07146037c ವಿದ್ರಾವಯಂಸ್ತವ ಚಮೂಂ ಶತಶೋ ವ್ಯಧಮಚ್ಚರೈಃ||

ಮಹಾರಾಜ! ಪಾಂಡವನು ಅವರಿಬ್ಬರನ್ನೂ ನಿಶಿತ ಶರಗಳಿಂದ ಹೊಡೆದು ನಿನ್ನ ಸೇನೆಯನ್ನು ನೂರಾರು ಶರಗಳಿಂದ ಹೊಡೆದು ಓಡಿಸಿದನು.

07146038a ಅನಿಲೇನ ಯಥಾಭ್ರಾಣಿ ವಿಚ್ಚಿನ್ನಾನಿ ಸಮಂತತಃ|

07146038c ವಿಚ್ಚಿನ್ನಾನಿ ತಥಾ ರಾಜನ್ಬಲಾನ್ಯಾಸನ್ವಿಶಾಂ ಪತೇ||

ರಾಜನ್! ವಿಶಾಂಪತೇ! ಗಾಳಿಯಿಂದ ಮೋಡಗಳು ಹೇಗೆ ಎಲ್ಲ ಕಡೆ ಚದುರಿ ಹೋಗುವವೋ ಹಾಗೆ ನಿನ್ನ ಸೇನೆಯು ಛಿದ್ರಛಿದ್ರವಾಗಿ ಒಡೆದುಹೋಯಿತು.

07146039a ತದ್ಬಲಂ ಭರತಶ್ರೇಷ್ಠ ವಧ್ಯಮಾನಂ ತಥಾ ನಿಶಿ|

07146039c ಪ್ರದುದ್ರಾವ ದಿಶಃ ಸರ್ವಾ ವೀಕ್ಷಮಾಣಂ ಭಯಾರ್ದಿತಂ||

ಭರತಶ್ರೇಷ್ಠ! ರಾತ್ರಿಯಲ್ಲಿ ಹಾಗೆ ವಧಿಸಲ್ಪಡುತ್ತಿದ್ದ ಆ ಸೇನೆಯು ಭಯಾರ್ದಿತಗೊಂಡು ದಿಕ್ಕುಗಳನ್ನು ನೋಡುತ್ತಾ ಓಡಿಹೋಯಿತು.

07146040a ಉತ್ಸೃಜ್ಯ ವಾಹಾನ್ಸಮರೇ ಚೋದಯಂತಸ್ತಥಾಪರೇ|

07146040c ಸಂಭ್ರಾಂತಾಃ ಪರ್ಯಧಾವಂತ ತಸ್ಮಿಂಸ್ತಮಸಿ ದಾರುಣೇ||

ಆ ದಾರುಣ ಕತ್ತಲೆಯ ಸಮರದಲ್ಲಿ ಕೆಲವರು ಸಂಭ್ರಾಂತರಾಗಿ ವಾಹನಗಳನ್ನೇ ಬಿಟ್ಟು ಓಡಿಹೋಗುತ್ತಿದ್ದರು.

07146041a ವಿಜಿತ್ಯ ಸಮರೇ ಯೋಧಾಂಸ್ತಾವಕಾನ್ಭರತರ್ಷಭ|

07146041c ದಧ್ಮತುರ್ಮುದಿತೌ ಶಂಖೌ ವಾಸುದೇವಧನಂಜಯೌ||

ಭರತರ್ಷಭ! ಸಮರದಲ್ಲಿ ನಿನ್ನಕಡೆಯ ಯೋಧರನ್ನು ಸೋಲಿಸಿ ಮುದಿತರಾದ ವಾಸುದೇವ-ಧನಂಜಯರು ಶಂಖಗಳನ್ನು ಮೊಳಗಿಸಿದರು.

07146042a ಧೃಷ್ಟದ್ಯುಮ್ನೋ ಮಹಾರಾಜ ದ್ರೋಣಂ ವಿದ್ಧ್ವಾ ತ್ರಿಭಿಃ ಶರೈಃ|

07146042c ಚಿಚ್ಚೇದ ಧನುಷಸ್ತೂರ್ಣಂ ಜ್ಯಾಂ ಶರೇಣ ಶಿತೇನ ಹ||

ಮಹಾರಾಜ! ಧೃಷ್ಟದ್ಯುಮ್ನನು ದ್ರೋಣನನ್ನು ಮೂರು ಶರಗಳಿಂದ ಹೊಡೆದು ತಕ್ಷಣವೇ ನಿಶಿತ ಶರದಿಂದ ಅವನ ಧನುಸ್ಸಿನ ಮೌರ್ವಿಯನ್ನು ಕತ್ತರಿಸಿದನು.

07146043a ತನ್ನಿಧಾಯ ಧನುರ್ನೀಡೇ ದ್ರೋಣಃ ಕ್ಷತ್ರಿಯಮರ್ದನಃ|

07146043c ಆದದೇಽನ್ಯದ್ಧನುಃ ಶೂರೋ ವೇಗವತ್ಸಾರವತ್ತರಂ||

ಕ್ಷತ್ರಿಯಮರ್ದನ ಶೂರ ದ್ರೋಣನು ಆ ಧನುಸ್ಸನ್ನು ಕೆಳಗಿಟ್ಟು ಇನ್ನೊಂದು ವೇಗಶಾಲಿ ಭಾರ ಧನುಸ್ಸನ್ನು ಎತ್ತಿಕೊಂಡನು.

07146044a ಧೃಷ್ಟದ್ಯುಮ್ನಂ ತತೋ ದ್ರೋಣೋ ವಿದ್ಧ್ವಾ ಸಪ್ತಭಿರಾಶುಗೈಃ|

07146044c ಸಾರಥಿಂ ಪಂಚಭಿರ್ಬಾಣೈ ರಾಜನ್ವಿವ್ಯಾಧ ಸಮ್ಯುಗೇ||

ರಾಜನ್! ಆಗ ದ್ರೋಣನು ಧೃಷ್ಟದ್ಯುಮ್ನನನ್ನು ಏಳು ಆಶುಗಗಳಿಂದ ಹೊಡೆದು ಸಂಯುಗದಲ್ಲಿ ಐದು ಬಾಣಗಳಿಂದ ಅವನ ಸಾರಥಿಯನ್ನೂ ಹೊಡೆದನು.

07146045a ತಂ ನಿವಾರ್ಯ ಶರೈಸ್ತೂರ್ಣಂ ಧೃಷ್ಟದ್ಯುಮ್ನೋ ಮಹಾರಥಃ|

07146045c ವ್ಯಧಮತ್ಕೌರವೀಂ ಸೇನಾಂ ಶತಶೋಽಥ ಸಹಸ್ರಶಃ||

ಅವನನ್ನು ತಡೆಹಿಡಿದು ಮಹಾರಥ ಧೃಷ್ಟದ್ಯುಮ್ನನು ತಕ್ಷಣವೇ ನೂರಾರು ಸಾವಿರಾರು ಕೌರವೀ ಸೇನೆಯನ್ನು ವಧಿಸಿದನು.

07146046a ವಧ್ಯಮಾನೇ ಬಲೇ ತಸ್ಮಿಂಸ್ತವ ಪುತ್ರಸ್ಯ ಮಾರಿಷ|

07146046c ಪ್ರಾವರ್ತತ ನದೀ ಘೋರಾ ಶೋಣಿತೌಘತರಂಗಿಣೀ||

ಮಾರಿಷ! ನಿನ್ನ ಮಗನ ಸೇನೆಯು ಹಾಗೆ ವಧಿಸಲ್ಪಡುತ್ತಿರುವಾಗ ಘೋರ ರಕ್ತದ ಅಲೆಗಳುಳ್ಳ ನದಿಯೇ ಹರಿಯತೊಡಗಿತು.

07146047a ಉಭಯೋಃ ಸೇನಯೋರ್ಮಧ್ಯೇ ನರಾಶ್ವದ್ವಿಪವಾಹಿನೀ|

07146047c ಯಥಾ ವೈತರಣೀ ರಾಜನ್ಯಮರಾಷ್ಟ್ರಪುರಂ ಪ್ರತಿ||

ರಾಜನ್! ಯಮರಾಷ್ಟ್ರಪುರದ ಬಳಿ ವೈತರಣಿಯು ಹೇಗೋ ಹಾಗೆ ಎರಡೂ ಸೇನೆಗಳ ಮಧ್ಯೆ ನರ-ಅಶ್ವ-ಗಜಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ಆ ನದಿಯು ಹರಿಯುತ್ತಿತ್ತು.

07146048a ದ್ರಾವಯಿತ್ವಾ ತು ತತ್ಸೈನ್ಯಂ ಧೃಷ್ಟದ್ಯುಮ್ನಃ ಪ್ರತಾಪವಾನ್|

07146048c ಅತ್ಯರಾಜತ ತೇಜಸ್ವೀ ಶಕ್ರೋ ದೇವಗಣೇಷ್ವಿವ||

ಆ ಸೇನೆಯನ್ನು ಓಡಿಸಿದ ಪ್ರತಾಪವಾನ್ ತೇಜಸ್ವೀ ಧೃಷ್ಟದ್ಯುಮ್ನನು ದೇವಗಣಗಳ ಮಧ್ಯೆ ಶಕ್ರನಂತೆ ಅತಿಯಾಗಿ ರಾರಾಜಿಸಿದನು.

07146049a ಅಥ ದಧ್ಮುರ್ಮಹಾಶಂಖಾನ್ಧೃಷ್ಟದ್ಯುಮ್ನಶಿಖಂಡಿನೌ|

07146049c ಯಮೌ ಚ ಯುಯುಧಾನಶ್ಚ ಪಾಂಡವಶ್ಚ ವೃಕೋದರಃ||

ಆಗ ಧೃಷ್ಟದ್ಯುಮ್ನ-ಶಿಖಂಡಿಯರು, ಯಮಳರಿಬ್ಬರು, ಯುಯುಧಾನ ಮಾತು ಪಾಂಡವ ವೃಕೋದರರು ಮಹಾಶಂಖಗಳನ್ನೂದಿದರು.

07146050a ಜಿತ್ವಾ ರಥಸಹಸ್ರಾಣಿ ತಾವಕಾನಾಂ ಮಹಾರಥಾಃ|

07146050c ಸಿಂಹನಾದರವಾಂಶ್ಚಕ್ರುಃ ಪಾಂಡವಾ ಜಿತಕಾಶಿನಃ||

ನಿನ್ನಕಡೆಯ ಸಹಸ್ರಾರು ರಥಗಳನ್ನು ಗೆದ್ದು ವಿಜಯೋತ್ಸಾಹದಿಂದ ಮಹಾರಥ ಪಾಂಡವರು ಮಹಾಧ್ವನಿಯ ಸಿಂಹನಾದಗೈದರು.

07146051a ಪಶ್ಯತಸ್ತವ ಪುತ್ರಸ್ಯ ಕರ್ಣಸ್ಯ ಚ ಮದೋತ್ಕಟಾಃ|

07146051c ತಥಾ ದ್ರೋಣಸ್ಯ ಶೂರಸ್ಯ ದ್ರೌಣೇಶ್ಚೈವ ವಿಶಾಂ ಪತೇ||

ವಿಶಾಂಪತೇ! ನಿನ್ನ ಪುತ್ರ, ಕರ್ಣ, ಹಾಗೆಯೇ ದ್ರೋಣ ಮತ್ತು ಶೂರ ದ್ರೌಣಿಯರು ಆ ಮದೋತ್ಕಟರನ್ನು ನೋಡುತ್ತಲೇ ಇದ್ದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಸಂಕುಲಯುದ್ಧೇ ಷಟ್ಚತ್ವಾರಿಂಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಸಂಕುಲಯುದ್ಧ ಎನ್ನುವ ನೂರಾನಲ್ವತ್ತಾರನೇ ಅಧ್ಯಾಯವು.

Image result for flowers against white background

Comments are closed.