Drona Parva: Chapter 142

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೪೨

ಕರ್ಣನಿಂದ ಸಹದೇವನ ಪರಾಜಯ, ಕುಂತಿಯ ಮಾತನ್ನು ಸ್ಮರಿಸಿ ಕರ್ಣನು ಸಹದೇವನನ್ನು ಅಪಮಾನಿಸಿ ಜೀವಸಹಿತ ಬಿಟ್ಟಿದುದು (೧-೧೯). ಶಲ್ಯನಿಂದ ವಿರಾಟನ ತಮ್ಮ ಶತಾನೀಕನ ವಧೆ (೨೦-೩೨). ಅರ್ಜುನನಿಂದ ಅಲಂಬುಸನ ಪರಾಜಯ (೩೩-೪೪).

07142001 ಸಂಜಯ ಉವಾಚ|

07142001a ಸಹದೇವಮಥಾಯಾಂತಂ ದ್ರೋಣಪ್ರೇಪ್ಸುಂ ವಿಶಾಂ ಪತೇ|

07142001c ಕರ್ಣೋ ವೈಕರ್ತನೋ ಯುದ್ಧೇ ವಾರಯಾಮಾಸ ಭಾರತ||

ಸಂಜಯನು ಹೇಳಿದನು: “ವಿಶಾಂಪತೇ! ಭಾರತ! ದ್ರೋಣನ ಬಳಿ ಬರುತ್ತಿದ್ದ ಸಹದೇವನನ್ನು ವೈಕರ್ತನ ಕರ್ಣನು ಯುದ್ಧದಲ್ಲಿ ತಡೆದನು.

07142002a ಸಹದೇವಸ್ತು ರಾಧೇಯಂ ವಿದ್ಧ್ವಾ ನವಭಿರಾಶುಗೈಃ|

07142002c ಪುನರ್ವಿವ್ಯಾಧ ದಶಭಿರ್ನಿಶಿತೈರ್ನತಪರ್ವಭಿಃ||

ಸಹದೇವನಾದರೋ ರಾಧೇಯನನ್ನು ಒಂಭತ್ತು ಆಶುಗಗಳಿಂದ ಹೊಡೆದು ಪುನಃ ಹತ್ತು ನಿಶಿತ ನತಪರ್ವಗಳಿಂದ ಹೊಡೆದನು.

07142003a ತಂ ಕರ್ಣಃ ಪ್ರತಿವಿವ್ಯಾಧ ಶತೇನ ನತಪರ್ವಣಾಂ|

07142003c ಸಜ್ಯಂ ಚಾಸ್ಯ ಧನುಃ ಶೀಘ್ರಂ ಚಿಚ್ಚೇದ ಲಘುಹಸ್ತವತ್||

ಅವನನ್ನು ಕರ್ಣನು ಪ್ರತಿಯಾಗಿ ನೂರು ನತಪರ್ವಗಳಿಂದ ಹೊಡೆದನು. ಮತ್ತು ಶೀಘ್ರವಾಗಿ ಕೈಚಳಕದಿಂದ ಮೌರ್ವಿಯೊಡನೆ ಅವನ ಧನುಸ್ಸನ್ನು ಕತ್ತರಿಸಿದನು.

07142004a ತತೋಽನ್ಯದ್ಧನುರಾದಾಯ ಮಾದ್ರೀಪುತ್ರಃ ಪ್ರತಾಪವಾನ್|

07142004c ಕರ್ಣಂ ವಿವ್ಯಾಧ ವಿಂಶತ್ಯಾ ತದದ್ಭುತಮಿವಾಭವತ್||

ಆಗ ಪ್ರತಾಪವಾನ್ ಮಾದ್ರೀಪುತ್ರನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಕರ್ಣನನ್ನು ಇಪ್ಪತ್ತು ಬಾಣಗಳಿಂದ ಹೊಡೆದನು. ಅದೊಂದು ಅದ್ಭುತವಾಗಿತ್ತು.

07142005a ತಸ್ಯ ಕರ್ಣೋ ಹಯಾನ್ ಹತ್ವಾ ಶರೈಃ ಸನ್ನತಪರ್ವಭಿಃ|

07142005c ಸಾರಥಿಂ ಚಾಸ್ಯ ಭಲ್ಲೇನ ದ್ರುತಂ ನಿನ್ಯೇ ಯಮಕ್ಷಯಂ||

ಕರ್ಣನು ಅವನ ಕುದುರೆಗಳನ್ನು ಸನ್ನತಪರ್ವ ಶರಗಳಿಂದ ಕೊಂದು ತಕ್ಷಣವೇ ಸಾರಥಿಯನ್ನು ಕೂಡ ಭಲ್ಲದಿಂದ ಹೊಡೆದು ಯಮಕ್ಷಯಕ್ಕೆ ಕಳುಹಿಸಿದನು.

07142006a ವಿರಥಃ ಸಹದೇವಸ್ತು ಖಡ್ಗಂ ಚರ್ಮ ಸಮಾದದೇ|

07142006c ತದಪ್ಯಸ್ಯ ಶರೈಃ ಕರ್ಣೋ ವ್ಯಧಮತ್ಪ್ರಹಸನ್ನಿವ||

ರಥವನ್ನು ಕಳೆದುಕೊಂಡ ಸಹದೇವನು ಖಡ್ಗ ಮತ್ತು ಗುರಾಣಿಗಳನ್ನು ಕೈಗೆತ್ತಿಕೊಂಡನು. ಅವುಗಳನ್ನೂ ಸಹ ಕರ್ಣನು ನಸುನಗುತ್ತಾ ಶರಗಳಿಂದ ನಾಶಗೊಳಿಸಿದನು.

07142007a ತತೋ ಗುರ್ವೀಂ ಮಹಾಘೋರಾಂ ಹೇಮಚಿತ್ರಾಂ ಮಹಾಗದಾಂ|

07142007c ಪ್ರೇಷಯಾಮಾಸ ಸಮರೇ ವೈಕರ್ತನರಥಂ ಪ್ರತಿ||

ಆಗ ಸಹದೇವನು ಬಂಗಾರದ ಚಿತ್ರಗಳುಳ್ಳ ಮಹಾಘೋರ ಮಹಾಗದೆಯನ್ನು ಸಮರದಲ್ಲಿ ವೈಕರ್ತನನ ರಥದ ಮೇಲೆ ಪ್ರಯೋಗಿಸಿದನು.

07142008a ತಾಮಾಪತಂತೀಂ ಸಹಸಾ ಸಹದೇವಪ್ರವೇರಿತಾಂ|

07142008c ವ್ಯಷ್ಟಂಭಯಚ್ಚರೈಃ ಕರ್ಣೋ ಭೂಮೌ ಚೈನಾಮಪಾತಯತ್||

ಸಹದೇವನು ಪ್ರಯೋಗಿಸಿದ ಆ ಗದೆಯನ್ನು ತನ್ನ ಮೇಲೆ ಒಮ್ಮೆಲೇ ಬೀಳುವವರೊಳಗೆ ಕರ್ಣನು ಬಾಣಗಳಿಂದ ಸ್ತಂಭನಗೊಳಿಸಿ, ಭೂಮಿಯ ಮೇಲೆ ಬೀಳುವಂತೆ ಮಾಡಿದನು.

07142009a ಗದಾಂ ವಿನಿಹತಾಂ ದೃಷ್ಟ್ವಾ ಸಹದೇವಸ್ತ್ವರಾನ್ವಿತಃ|

07142009c ಶಕ್ತಿಂ ಚಿಕ್ಷೇಪ ಕರ್ಣಾಯ ತಾಮಪ್ಯಸ್ಯಾಚ್ಚಿನಚ್ಚರೈಃ||

ಆ ಗದೆಯೂ ನಿರರ್ಥಕವಾದುದನ್ನು ಕಂಡು ಸಹದೇವನು ತ್ವರೆಮಾಡಿ ಕರ್ಣನ ಮೇಲೆ ಶಕ್ತಿಯನ್ನು ಎಸೆದನು. ಅದನ್ನೂ ಕೂಡ ಕರ್ಣನು ಶರಗಳಿಂದ ಕತ್ತರಿಸಿದನು.

07142010a ಸಸಂಭ್ರಮಸ್ತತಸ್ತೂರ್ಣಮವಪ್ಲುತ್ಯ ರಥೋತ್ತಮಾತ್|

07142010c ಸಹದೇವೋ ಮಹಾರಾಜ ದೃಷ್ಟ್ವಾ ಕರ್ಣಂ ವ್ಯವಸ್ಥಿತಂ|

07142010e ರಥಚಕ್ರಂ ತತೋ ಗೃಹ್ಯ ಮುಮೋಚಾಧಿರಥಿಂ ಪ್ರತಿ||

ಮಹಾರಾಜ! ಆಗ ಸಹದೇವನು ಸಂಭ್ರಮದಿಂದ ತನ್ನ ಶ್ರೇಷ್ಠ ರಥದಿಂದ ಧುಮುಕಿ ಕರ್ಣನು ವ್ಯವಸ್ಥಿತನಾಗಿ ನಿಂತಿರುವುದನ್ನು ನೋಡಿ ರಥದ ಚಕ್ರವನ್ನು ಹಿಡಿದು ಆಧಿರಥಿಯೆಡೆಗೆ ರಭಸದಿಂದ ಎಸೆದನು.

07142011a ತಮಾಪತಂತಂ ಸಹಸಾ ಕಾಲಚಕ್ರಮಿವೋದ್ಯತಂ|

07142011c ಶರೈರನೇಕಸಾಹಸ್ರೈರಚ್ಚಿನತ್ ಸೂತನಂದನಃ||

ಒಮ್ಮೆಲೇ ತನ್ನ ಮೇಲೆ ಬೀಳುತ್ತಿದ್ದ ಕಾಲಚಕ್ರದಂತಿದ್ದ ಆ ಚಕ್ರವನ್ನು ಸೂತನಂದನನು ಶರಗಳಿಂದ ಅನೇಕ ಸಹಸ್ರ ಚೂರುಗಳನ್ನಾಗಿ ತುಂಡರಿಸಿದನು.

07142012a ತಸ್ಮಿಂಸ್ತು ವಿತಥೇ ಚಕ್ರೇ ಕೃತೇ ತೇನ ಮಹಾತ್ಮನಾ|

07142012c ವಾರ್ಯಮಾಣಶ್ಚ ವಿಶಿಖೈಃ ಸಹದೇವೋ ರಣಂ ಜಹೌ||

ಆ ಮಹಾತ್ಮನಿಂದ ತನ್ನ ರಥಚಕ್ರವೂ ಧ್ವಂಸಗೊಳ್ಳಲು ವಿಶಿಖಗಳಿಂದ ತಡೆಯಲ್ಪಟ್ಟು ಸಹದೇವನು ರಣರಂಗವನ್ನು ಬಿಟ್ಟು ಹೊರಟು ಹೋದನು.

07142013a ತಮಭಿದ್ರುತ್ಯ ರಾಧೇಯೋ ಮುಹೂರ್ತಾದ್ಭರತರ್ಷಭ|

07142013c ಅಬ್ರವೀತ್ಪ್ರಹಸನ್ವಾಕ್ಯಂ ಸಹದೇವಂ ವಿಶಾಂ ಪತೇ||

ಭರತರ್ಷಭ! ವಿಶಾಂಪತೇ! ಸ್ವಲ್ಪ ಸಮಯ ಅವನನ್ನು ಅಟ್ಟಿಕೊಂಡು ಹೋಗುತ್ತಾ ರಾಧೇಯನು ನಗುತ್ತಾ ಸಹದೇವನಿಗೆ ಈ ಮಾತುಗಳನ್ನಾಡಿದನು:

07142014a ಮಾ ಯುಧ್ಯಸ್ವ ರಣೇ ವೀರ ವಿಶಿಷ್ಟೈ ರಥಿಭಿಃ ಸಹ|

07142014c ಸದೃಶೈರ್ಯುಧ್ಯ ಮಾದ್ರೇಯ ವಚೋ ಮೇ ಮಾ ವಿಶಂಕಿಥಾಃ||

“ವೀರ! ರಣದಲ್ಲಿ ನಿನಗಿಂತಲೂ ವಿಶಿಷ್ಟ ರಥಿಗಳೊಂದಿಗೆ ಯುದ್ಧಮಾಡಬೇಡ! ಮಾದ್ರೇಯ! ನಿನಗೆ ಸಮಾನರಾದವರೊಡನೆ ಮಾತ್ರ ಯುದ್ಧಮಾಡು. ಈ ನನ್ನ ಮಾತನ್ನು ಶಂಕಿಸಬೇಡ!”

07142015a ಅಥೈನಂ ಧನುಷೋಽಗ್ರೇಣ ತುದನ್ಭೂಯೋಽಬ್ರವೀದ್ವಚಃ|

07142015c ಏಷೋಽರ್ಜುನೋ ರಣೇ ಯತ್ತೋ ಯುಧ್ಯತೇ ಕುರುಭಿಃ ಸಹ|

07142015e ತತ್ರ ಗಚ್ಚಸ್ವ ಮಾದ್ರೇಯ ಗೃಹಂ ವಾ ಯದಿ ಮನ್ಯಸೇ||

ಅನಂತರ ಕರ್ಣನು ತನ್ನ ಧನುಸ್ಸಿನ ಅಗ್ರಭಾಗದಿಂದ ಸಹದೇವನನ್ನು ತಿವಿಯುತ್ತಾ ಪುನಃ ಹೇಳಿದನು: “ಮಾದ್ರೇಯ! ಎಲ್ಲಿ ಅರ್ಜುನನು ರಣದಲ್ಲಿ ಕುರುಗಳೊಂದಿಗೆ ಯುದ್ಧಮಾಡುತ್ತಿರುವನೋ ಅಲ್ಲಿಗೆ ಹೋಗು. ಅಥವಾ ನಿನಗೆ ಇಷ್ಟವಾದರೆ ಮನೆಗೆ ಹೊರಟು ಹೋಗು!”

07142016a ಏವಮುಕ್ತ್ವಾ ತು ತಂ ಕರ್ಣೋ ರಥೇನ ರಥಿನಾಂ ವರಃ|

07142016c ಪ್ರಾಯಾತ್ಪಾಂಚಾಲಪಾಂಡೂನಾಂ ಸೈನ್ಯಾನಿ ಪ್ರಹಸನ್ನಿವ||

ಹೀಗೆ ಹೇಳಿ ರಥಿಗಳಲ್ಲಿ ಶ್ರೇಷ್ಠ ಕರ್ಣನು ನಗುತ್ತಾ ರಥದಲ್ಲಿ ಕುಳಿತು ಪಾಂಚಾಲ-ಪಾಂಡುಪುತ್ರರ ಸೇನೆಗಳಿರುವಲ್ಲಿಗೆ ನಡೆದನು.

07142017a ವಧಪ್ರಾಪ್ತಂ ತು ಮಾದ್ರೇಯಂ ನಾವಧೀತ್ಸಮರೇಽರಿಹಾ|

07142017c ಕುಂತ್ಯಾಃ ಸ್ಮೃತ್ವಾ ವಚೋ ರಾಜನ್ಸತ್ಯಸಂಧೋ ಮಹಾರಥಃ||

ರಾಜನ್! ಕುಂತಿಗೆ ಕೊಟ್ಟಿದ್ದ ವಚನವನ್ನು ಸ್ಮರಿಸಿಕೊಂಡು ಸತ್ಯಸಂಧ, ಮಹಾರಥ ಆ ಅರಿಹನು ಸಮರದಲ್ಲಿ ವಧೆಗೆ ಸಿಕ್ಕಿದ್ದರೂ ಮಾದ್ರೇಯನನ್ನು ವಧಿಸಲಿಲ್ಲ.

07142018a ಸಹದೇವಸ್ತತೋ ರಾಜನ್ವಿಮನಾಃ ಶರಪೀಡಿತಃ|

07142018c ಕರ್ಣವಾಕ್ಶಲ್ಯತಪ್ತಶ್ಚ ಜೀವಿತಾನ್ನಿರವಿದ್ಯತ||

ರಾಜನ್! ಸಹದೇವನಾದರೋ ವಿಮನಸ್ಕನಾಗಿ, ಶರಪೀಡಿತನಾಗಿ, ಕರ್ಣನ ಮಾತಿನ ಬಾಣಗಳಿಂದ ಪರಿತಪಿಸಿ, ಜೀವನದಲ್ಲಿಯೇ ವಿರಕ್ತಿಯನ್ನು ಹೊಂದಿದನು.

07142019a ಆರುರೋಹ ರಥಂ ಚಾಪಿ ಪಾಂಚಾಲ್ಯಸ್ಯ ಮಹಾತ್ಮನಃ|

07142019c ಜನಮೇಜಯಸ್ಯ ಸಮರೇ ತ್ವರಾಯುಕ್ತೋ ಮಹಾರಥಃ||

ಸಮರದಲ್ಲಿ ಆ ಮಹಾತ್ಮ ಮಹಾರಥನು ಪಾಂಚಾಲ್ಯ ಜನಮೇಜಯನ ರಥವನ್ನು ಅವಸರದಲ್ಲಿ ಏರಿದನು.

07142020a ವಿರಾಟಂ ಸಹಸೇನಂ ತು ದ್ರೋಣಾರ್ಥೇ ದ್ರುತಮಾಗತಂ|

07142020c ಮದ್ರರಾಜಃ ಶರೌಘೇಣ ಚಾದಯಾಮಾಸ ಧನ್ವಿನಂ||

ದ್ರೋಣನಿಗಾಗಿ ಧಾವಿಸಿ ಸೇನೆಯೊಂದಿಗೆ ಬರುತ್ತಿದ್ದ ಧನ್ವಿ ವಿರಾಟನನ್ನು ಮದ್ರರಾಜನು ಶರೌಘಗಳಿಂದ ಮುಚ್ಚಿದನು.

07142021a ತಯೋಃ ಸಮಭವದ್ಯುದ್ಧಂ ಸಮರೇ ದೃಢಧನ್ವಿನೋಃ|

07142021c ಯಾದೃಶಂ ಹ್ಯಭವದ್ರಾಜಂ ಜಂಭವಾಸವಯೋಃ ಪುರಾ||

ಹಿಂದೆ ಜಂಭಾಸುರ-ವಾಸವರೊಡನೆ ಹೇಗೆ ನಡೆಯಿತೋ ಹಾಗೆ ಸಮರದಲ್ಲಿ ಆ ಇಬ್ಬರು ದೃಢಧನ್ವಿಗಳ ನಡುವೆ ಯುದ್ಧವು ನಡೆಯಿತು.

07142022a ಮದ್ರರಾಜೋ ಮಹಾರಾಜ ವಿರಾಟಂ ವಾಹಿನೀಪತಿಂ|

07142022c ಆಜಘ್ನೇ ತ್ವರಿತಂ ತೀಕ್ಷ್ಣೈಃ ಶತೇನ ನತಪರ್ವಣಾಂ||

ಮಹಾರಾಜ! ವಾಹಿನೀಪತಿ ವಿರಾಟನನ್ನು ಮದ್ರರಾಜನು ತ್ವರೆಮಾಡಿ ನೂರು ತೀಕ್ಷ್ಣ ನತಪರ್ವಗಳಿಂದ ಹೊಡೆದನು.

07142023a ಪ್ರತಿವಿವ್ಯಾಧ ತಂ ರಾಜಾ ನವಭಿರ್ನಿಶಿತೈಃ ಶರೈಃ|

07142023c ಪುನಶ್ಚೈವ ತ್ರಿಸಪ್ತತ್ಯಾ ಭೂಯಶ್ಚೈವ ಶತೇನ ಹ||

ಪ್ರತಿಯಾಗಿ ರಾಜಾ ವಿರಾಟನು ಶಲ್ಯನನ್ನು ಒಂಭತ್ತು ನಿಶಿತ ಶರಗಳಿಂದ ಹೊಡೆದು, ಪುನಃ ಮೂವತ್ತರಿಂದ ಮತ್ತು ಇನ್ನೂ ನೂರರಿಂದ ಹೊಡೆದನು.

07142024a ತಸ್ಯ ಮದ್ರಾಧಿಪೋ ಹತ್ವಾ ಚತುರೋ ರಥವಾಜಿನಃ|

07142024c ಸೂತಂ ಧ್ವಜಂ ಚ ಸಮರೇ ರಥೋಪಸ್ಥಾದಪಾತಯತ್||

ಮದ್ರಾಧಿಪನು ಅವನ ನಾಲ್ಕು ರಥಕುದುರೆಗಳನ್ನು ಸಂಹರಿಸಿ, ಸಮರದಲ್ಲಿ ಸಾರಥಿ ಮತ್ತು ಧ್ವಜವನ್ನು ರಥದಿಂದ ಕೆಳಕ್ಕೆ ಬೀಳಿಸಿದನು.

07142025a ಹತಾಶ್ವಾತ್ತು ರಥಾತ್ತೂರ್ಣಮವಪ್ಲುತ್ಯ ಮಹಾರಥಃ|

07142025c ತಸ್ಥೌ ವಿಸ್ಫಾರಯಂಶ್ಚಾಪಂ ವಿಮುಂಚಂಶ್ಚ ಶಿತಾಂ ಶರಾನ್||

ಕುದುರೆಗಳು ಹತವಾಗಲು, ತಕ್ಷಣವೇ ರಥದಿಂದ ಕೆಳಗೆ ಹಾರಿ ಮಹಾರಥ ವಿರಾಟನು ಧನುಸ್ಸನ್ನು ಟೇಂಕರಿಸಿ ನಿಶಿತ ಶರಗಳನ್ನು ಪ್ರಯೋಗಿಸತೊಡಗಿದನು.

07142026a ಶತಾನೀಕಸ್ತತೋ ದೃಷ್ಟ್ವಾ ಭ್ರಾತರಂ ಹತವಾಹನಂ|

07142026c ರಥೇನಾಭ್ಯಪತತ್ತೂರ್ಣಂ ಸರ್ವಲೋಕಸ್ಯ ಪಶ್ಯತಃ||

ಹತವಾಹನನಾದ ಭ್ರಾತರನನ್ನು ನೋಡಿದ ಶತಾನೀಕನು ಸರ್ವಲೋಕಗಳೂ ನೋಡುತ್ತಿದ್ದಂತೆಯೇ ಬೇಗನೇ ರಥದಿಂದ ಅಲ್ಲಿಗೆ ಧಾವಿಸಿದನು.

07142027a ಶತಾನೀಕಮಥಾಯಾಂತಂ ಮದ್ರರಾಜೋ ಮಹಾಮೃಧೇ|

07142027c ವಿಶಿಖೈರ್ಬಹುಭಿರ್ವಿದ್ಧ್ವಾ ತತೋ ನಿನ್ಯೇ ಯಮಕ್ಷಯಂ||

ಮಹಾಯುದ್ಧದಲ್ಲಿ ಹಾಗೆ ಮುಂದುವರೆದು ಬರುತ್ತಿದ್ದ ಶತಾನೀಕನನ್ನು ಮದ್ರರಾಜನು ಅನೇಕ ವಿಶಿಖಗಳಿಂದ ಗಾಯಗೊಳಿಸಿ ಯಮಕ್ಷಯಕ್ಕೆ ಕಳುಹಿಸಿದನು.

07142028a ತಸ್ಮಿಂಸ್ತು ನಿಹತೇ ವೀರೇ ವಿರಾಟೋ ರಥಸತ್ತಮಃ|

07142028c ಆರುರೋಹ ರಥಂ ತೂರ್ಣಂ ತಮೇವ ಧ್ವಜಮಾಲಿನಂ||

ಆ ವೀರನು ಹತನಾಗಲು ರಥಸತ್ತಮ ವಿರಾಟನು ಬೇಗನೆ ಅದೇ ಧ್ವಜ-ಮಾಲೆಗಳಿಂದ ಅಲಂಕೃತ ರಥವನ್ನು ಏರಿದನು.

07142029a ತತೋ ವಿಸ್ಫಾರ್ಯ ನಯನೇ ಕ್ರೋಧಾದ್ದ್ವಿಗುಣವಿಕ್ರಮಃ|

07142029c ಮದ್ರರಾಜರಥಂ ತೂರ್ಣಂ ಚಾದಯಾಮಾಸ ಪತ್ರಿಭಿಃ||

ಆಗ ಕ್ರೋಧದಿಂದ ಕಣ್ಣುಗಳನ್ನು ಅರಳಿಸಿ ಆ ದ್ವಿಗುಣವಿಕ್ರಮನು ಕೂಡಲೇ ಮದ್ರರಾಜನ ರಥವನ್ನು ಪತ್ರಿಗಳಿಂದ ಮುಚ್ಚಿಬಿಟ್ಟನು.

07142030a ತತೋ ಮದ್ರಾಧಿಪಃ ಕ್ರುದ್ಧಃ ಶತೇನ ನತಪರ್ವಣಾಂ|

07142030c ಆಜಘಾನೋರಸಿ ದೃಢಂ ವಿರಾಟಂ ವಾಹಿನೀಪತಿಂ||

ಆಗ ಕ್ರುದ್ಧ ಮದ್ರಾಧಿಪನು ನೂರು ನತಪರ್ವಗಳಿಂದ ವಾಹಿನೀಪತಿ ದೃಢ ವಿರಾಟನ ಎದೆಗೆ ಹೊಡೆದನು.

07142031a ಸೋಽತಿವಿದ್ಧೋ ಮಹಾರಾಜ ರಥೋಪಸ್ಥ ಉಪಾವಿಶತ್|

07142031c ಕಶ್ಮಲಂ ಚಾವಿಶತ್ತೀವ್ರಂ ವಿರಾಟೋ ಭರತರ್ಷಭ|

07142031e ಸಾರಥಿಸ್ತಮಪೋವಾಹ ಸಮರೇ ಶರವಿಕ್ಷತಂ||

ಭರತರ್ಷಭ! ಮಹಾರಾಜ! ಹಾಗೆ ಅತಿಯಾಗಿ ಗಾಯಗೊಂಡ ವಿರಾಟನು ಅತಿ ತೀವ್ರವಾಗಿ ಬಳಲಿ ರಥದಲ್ಲಿಯೇ ಕುಸಿದನು. ಬಾಣಗಳಿಂದ ಗಾಯಗೊಂಡಿದ್ದ ಅವನನ್ನು ಅವನ ಸಾರಥಿಯು ಸಮರದಿಂದ ದೂರಕ್ಕೆ ಕೊಂಡೊಯ್ದನು.

07142032a ತತಃ ಸಾ ಮಹತೀ ಸೇನಾ ಪ್ರಾದ್ರವನ್ನಿಶಿ ಭಾರತ|

07142032c ವಧ್ಯಮಾನಾ ಶರಶತೈಃ ಶಲ್ಯೇನಾಹವಶೋಭಿನಾ||

ಭಾರತ! ಯುದ್ಧಶೋಭೀ ಶಲ್ಯನ ನೂರಾರು ಬಾಣಗಳಿಂದ ವಧಿಸಲ್ಪಡುತ್ತಿದ್ದ ಆ ಮಹಾಸೇನೆಯು ಆ ರಾತ್ರಿ ಪಲಾಯನಮಾಡತೊಡಗಿತು.

07142033a ತಾಂ ದೃಷ್ಟ್ವಾ ವಿದ್ರುತಾಂ ಸೇನಾಂ ವಾಸುದೇವಧನಂಜಯೌ|

07142033c ಪ್ರಾಯಾತಾಂ ತತ್ರ ರಾಜೇಂದ್ರ ಯತ್ರ ಶಲ್ಯೋ ವ್ಯವಸ್ಥಿತಃ||

ರಾಜೇಂದ್ರ! ಸೇನೆಯು ಹಾಗೆ ಓಡಿಹೋಗುತ್ತಿರುವುದನ್ನು ನೋಡಿ ವಾಸುದೇವ-ಧನಂಜಯರು ಎಲ್ಲಿ ಶಲ್ಯನಿದ್ದನೋ ಅಲ್ಲಿಗೆ ಬಂದರು.

07142034a ತೌ ತು ಪ್ರತ್ಯುದ್ಯಯೌ ರಾಜನ್ರಾಕ್ಷಸೇಂದ್ರೋ ಹ್ಯಲಂಬುಸಃ|

07142034c ಅಷ್ಟಚಕ್ರಸಮಾಯುಕ್ತಮಾಸ್ಥಾಯ ಪ್ರವರಂ ರಥಂ||

ಅವರಿಬ್ಬರೊಡನೆ ಎಂಟು ಚಕ್ರಗಳುಳ್ಳ ಶ್ರೇಷ್ಠ ರಥದಲ್ಲಿ ಕುಳಿತಿದ್ದ ರಾಕ್ಷಸೇಂದ್ರ ಅಲಂಬುಸನು ಪ್ರತಿಯಾಗಿ ಯುದ್ಧಮಾಡತೊಡಗಿದನು.

07142035a ತುರಂಗಮಮುಖೈರ್ಯುಕ್ತಂ ಪಿಶಾಚೈರ್ಘೋರದರ್ಶನೈಃ|

07142035c ಲೋಹಿತಾರ್ದ್ರಪತಾಕಂ ತಂ ರಕ್ತಮಾಲ್ಯವಿಭೂಷಿತಂ|

07142035e ಕಾರ್ಷ್ಣಾಯಸಮಯಂ ಘೋರಂ ಋಕ್ಷಚರ್ಮಾವೃತಂ ಮಹತ್||

07142036a ರೌದ್ರೇಣ ಚಿತ್ರಪಕ್ಷೇಣ ವಿವೃತಾಕ್ಷೇಣ ಕೂಜತಾ|

07142036c ಧ್ವಜೇನೋಚ್ಚ್ರಿತತುಂಡೇನ ಗೃಧ್ರರಾಜೇನ ರಾಜತಾ||

07142037a ಸ ಬಭೌ ರಾಕ್ಷಸೋ ರಾಜನ್ಭಿನ್ನಾಂಜನಚಯೋಪಮಃ|

ಕುದುರೆಗಳ ಮುಖಗಳನ್ನೇ ಹೊಂದಿದ್ದ ಘೋರ ಪಿಶಾಚಿಗಳಿಂದ ಎಳೆಯಲ್ಪಡುತ್ತಿದ್ದ ಆ ರಥವು ರಕ್ತದಲ್ಲಿ ತೋಯ್ದ ಪತಾಕೆಯನ್ನು ಹೊಂದಿತ್ತು ಮತ್ತು ಕೆಂಪು ಮಾಲೆಗಳಿಂದ ವಿಭೂಷಿತವಾಗಿತ್ತು. ಸಂಪೂರ್ಣವಾಗಿ ಕಬ್ಬಿಣದಿಂದ ನಿರ್ಮಿತವಾಗಿತ್ತು. ಘೋರವಾದ ಆ ಮಹಾರಥವು ಕರಡಿಯ ಚರ್ಮದಿಂದ ಹೊದಿಸಲ್ಪಟ್ಟಿತ್ತು. ಆ ರಥ ಧ್ವಜದ ತುದಿಯಲ್ಲಿ ರೌದ್ರರೂಪದ, ಬಣ್ಣದ ರೆಕ್ಕೆಗಳುಳ್ಳ, ಕಣ್ಣುಗಳನ್ನು ಅಗಲ ತೆರೆದುಕೊಂಡಿರುವ ಹದ್ದಿನ ರಾಜನ ಚಿತ್ರವಿತ್ತು. ಆ ರಾಕ್ಷಸನು ಕಲ್ಲಿದ್ದಿನ ರಾಶಿಯಂತೆಯೇ ಕಾಣುತ್ತಿದ್ದನು.

07142037c ರುರೋಧಾರ್ಜುನಮಾಯಾಂತಂ ಪ್ರಭಂಜನಮಿವಾದ್ರಿರಾಟ್|

07142037e ಕಿರನ್ ಬಾಣಗಣಾನ್ ರಾಜಂ ಶತಶೋಽರ್ಜುನಮೂರ್ಧನಿ||

ರಾಜನ್! ಚಂಡಮಾರುತವನ್ನು ಪರ್ವತವು ಹೇಗೋ ಹಾಗೆ ಮುಂದೆಬರುತ್ತಿದ್ದ ಅರ್ಜುನನನ್ನು ಅಲಂಬುಸನು ನೂರಾರು ಬಾಣಗಣಗಳನ್ನು ಅವನ ತಲೆಯ ಮೇಲೆ ಎರಚಿ ತಡೆದನು.

07142038a ಅತಿತೀವ್ರಮಭೂದ್ಯುದ್ಧಂ ನರರಾಕ್ಷಸಯೋರ್ಮೃಧೇ|

07142038c ದ್ರಷ್ಟೄಣಾಂ ಪ್ರೀತಿಜನನಂ ಸರ್ವೇಷಾಂ ಭರತರ್ಷಭ||

ಆಗ ರಣಾಂಗಣದಲ್ಲಿ ಆ ನರ-ರಾಕ್ಷಸರ ನಡುವೆ ನೋಡುವವರೆಲ್ಲರಿಗೆ ಸಂತೋಷವನ್ನು ನೀಡುವ ಅತಿ ತೀವ್ರ ಯುದ್ಧವು ನಡೆಯಿತು.

07142039a ತಮರ್ಜುನಃ ಶತೇನೈವ ಪತ್ರಿಣಾಮಭ್ಯತಾಡಯತ್|

07142039c ನವಭಿಶ್ಚ ಶಿತೈರ್ಬಾಣೈಶ್ಚಿಚ್ಚೇದ ಧ್ವಜಮುಚ್ಚ್ರಿತಂ||

ಅರ್ಜುನನು ಅವನನ್ನು ನೂರು ಪತ್ರಿಗಳಿಂದ ಹೊಡೆದನು. ಮತ್ತು ಎತ್ತರ ಹಾರಾಡುತ್ತಿದ್ದ ಅವನ ಧ್ವಜವನ್ನು ಒಂಭತ್ತು ನಿಶಿತ ಬಾಣಗಳಿಂದ ತುಂಡರಿಸಿದನು.

07142040a ಸಾರಥಿಂ ಚ ತ್ರಿಭಿರ್ಬಾಣೈಸ್ತ್ರಿಭಿರೇವ ತ್ರಿವೇಣುಕಂ|

07142040c ಧನುರೇಕೇನ ಚಿಚ್ಚೇದ ಚತುರ್ಭಿಶ್ಚತುರೋ ಹಯಾನ್|

07142040e ವಿರಥಸ್ಯೋದ್ಯತಂ ಖಡ್ಗಂ ಶರೇಣಾಸ್ಯ ದ್ವಿಧಾಚ್ಚಿನತ್||

ಅವನ ಸಾರಥಿಯನ್ನು ಮೂರು ಬಾಣಗಳಿಂದಲೂ, ಇನ್ನೂ ಮೂರು ಬಾಣಗಳಿಂದ ರಥದ ಮೂಕಿಯನ್ನೂ, ಒಂದರಿಂದ ಧನುಸ್ಸನ್ನು ತುಂಡರಿಸಿ ನಾಲ್ಕು ಬಾಣಗಳಿಂದ ನಾಲ್ಕು ಕುದುರೆಗಳನ್ನು ಸಂಹರಿಸಿದನು. ಮತ್ತು ವಿರಥನಾಗಿ ಮೇಲೆತ್ತಿದ್ದ ಅವನ ಖಡ್ಗವನ್ನು ಶರದಿಂದ ಎರಡಾಗಿ ತುಂಡರಿಸಿದನು.

07142041a ಅಥೈನಂ ನಿಶಿತೈರ್ಬಾಣೈಶ್ಚತುರ್ಭಿರ್ಭರತರ್ಷಭ|

07142041c ಪಾರ್ಥೋಽರ್ದಯದ್ರಾಕ್ಷಸೇಂದ್ರಂ ಸ ವಿದ್ಧಃ ಪ್ರಾದ್ರವದ್ಭಯಾತ್||

ಭರತರ್ಷಭ! ಆಗ ಪಾರ್ಥನ ನಾಲ್ಕು ನಿಶಿತ ಬಾಣಗಳಿಂದ ಅತಿಯಾಗಿ ಗಾಯಗೊಂಡ ರಾಕ್ಷಸೇಂದ್ರನು ಭಯಗೊಂಡು ರಣಾಂಗಣವನ್ನೇ ಬಿಟ್ಟು ಓಡಿಹೋದನು.

07142042a ತಂ ವಿಜಿತ್ಯಾರ್ಜುನಸ್ತೂರ್ಣಂ ದ್ರೋಣಾಂತಿಕಮುಪಾಯಯೌ|

07142042c ಕಿರಂ ಶರಗಣಾನ್ರಾಜನ್ನರವಾರಣವಾಜಿಷು||

ರಾಜನ್! ಅವನನ್ನು ಸೋಲಿಸಿ ಬೇಗನೆ ಅರ್ಜುನನು ನರ-ವಾರಣ-ವಾಜಿಗಳನ್ನು ಶರಗಣಗಳಿಂದ ಮುಚ್ಚುತ್ತಾ ದ್ರೋಣನ ಬಳಿ ಆಗಮಿಸಿದನು.

07142043a ವಧ್ಯಮಾನಾ ಮಹಾರಾಜ ಪಾಂಡವೇನ ಯಶಸ್ವಿನಾ|

07142043c ಸೈನಿಕಾ ನ್ಯಪತನ್ನುರ್ವ್ಯಾಂ ವಾತನುನ್ನಾ ಇವ ದ್ರುಮಾಃ||

ಮಹಾರಾಜ! ಯಶಸ್ವಿ ಪಾಂಡವನಿಂದ ವಧಿಸಲ್ಪಡುತ್ತಿದ್ದ ಸೈನಿಕರು ಚಂಡಮಾರುತಕ್ಕೆ ಸಿಲುಕಿದ ವೃಕ್ಷಗಳಂತೆ ಭೂಮಿಯಮೇಲೆ ಉರುಳಿ ಬಿದ್ದರು.

07142044a ತೇಷು ತೂತ್ಸಾದ್ಯಮಾನೇಷು ಫಲ್ಗುನೇನ ಮಹಾತ್ಮನಾ|

07142044c ಸಂಪ್ರಾದ್ರವದ್ಬಲಂ ಸರ್ವಂ ಪುತ್ರಾಣಾಂ ತೇ ವಿಶಾಂ ಪತೇ||

ವಿಶಾಂಪತೇ! ಹೀಗೆ ಮಹಾತ್ಮ ಫಲ್ಗುನನಿಂದ ಧ್ವಂಸಗೊಳ್ಳುತ್ತಿದ್ದ ನಿನ್ನ ಮಗನ ಸೇನೆಯಲ್ಲಿ ಅಳಿದುಳಿದವರು ಪಲಾಯನಮಾಡಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಅಲಂಬುಷಪರಾಭವೇ ದ್ವಾಚತ್ವಾರಿಂಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಅಲಂಬುಷಪರಾಜಯ ಎನ್ನುವ ನೂರಾನಲ್ವತ್ತೆರಡನೇ ಅಧ್ಯಾಯವು.

Related image

Comments are closed.