Bhishma Parva: Chapter 77

ಭೀಷ್ಮ ಪರ್ವ: ಭೀಷ್ಮವಧ ಪರ್ವ

೭೭

ಏಳನೇ ದಿನದ ಯುದ್ಧ

ಭೀಷ್ಮನು ದುರ್ಯೋಧನನಿಗೆ ವಿಶಲ್ಯೀಕರಣ ಔಷಧವನ್ನು ಕೊಟ್ಟಿದುದು (೧-೧೦). ಭೀಷ್ಮನು ಕೌರವ ಸೇನೆಯನ್ನು ಮಂಡಲ ವ್ಯೂಹದಲ್ಲಿ ರಚಿಸಿದುದು (೧೧-೨೦). ಪಾಂಡವ ಸೇನೆಯ ವಜ್ರವ್ಯೂಹ ರಚನೆ (೨೧-೨೩). ದ್ವಂದ್ವಯುದ್ಧಗಳು (೨೪-೩೧). ಅರ್ಜುನನಿಂದ ಐಂದ್ರಾಸ್ತ್ರ ಪ್ರಯೋಗ (೩೨-೪೪).

06077001 ಸಂಜಯ ಉವಾಚ|

06077001a ಅಥಾತ್ಮಜಂ ತವ ಪುನರ್ಗಾಂಗೇಯೋ ಧ್ಯಾನಮಾಸ್ಥಿತಂ|

06077001c ಅಬ್ರವೀದ್ಭರತಶ್ರೇಷ್ಠಃ ಸಂಪ್ರಹರ್ಷಕರಂ ವಚಃ||

ಸಂಜಯನು ಹೇಳಿದನು: “ಆಗ ಚಿಂತಾಮಗ್ನನಾಗಿದ್ದ ನಿನ್ನ ಮಗನಿಗೆ ಪುನಃ ಭರತಶ್ರೇಷ್ಠ ಗಾಂಗೇಯನು ಹರ್ಷವನ್ನುಂಟುಮಾಡುವ ಈ ಮಾತುಗಳನ್ನಾಡಿದನು:

06077002a ಅಹಂ ದ್ರೋಣಶ್ಚ ಶಲ್ಯಶ್ಚ ಕೃತವರ್ಮಾ ಚ ಸಾತ್ವತಃ|

06077002c ಅಶ್ವತ್ಥಾಮಾ ವಿಕರ್ಣಶ್ಚ ಸೋಮದತ್ತೋಽಥ ಸೈಂಧವಃ||

06077003a ವಿಂದಾನುವಿಂದಾವಾವಂತ್ಯೌ ಬಾಹ್ಲಿಕಃ ಸಹ ಬಾಹ್ಲಿಕೈಃ|

06077003c ತ್ರಿಗರ್ತರಾಜಶ್ಚ ಬಲೀ ಮಾಗಧಶ್ಚ ಸುದುರ್ಜಯಃ||

06077004a ಬೃಹದ್ಬಲಶ್ಚ ಕೌಸಲ್ಯಶ್ಚಿತ್ರಸೇನೋ ವಿವಿಂಶತಿಃ|

06077004c ರಥಾಶ್ಚ ಬಹುಸಾಹಸ್ರಾಃ ಶೋಭಮಾನಾ ಮಹಾಧ್ವಜಾಃ||

06077005a ದೇಶಜಾಶ್ಚ ಹಯಾ ರಾಜನ್ಸ್ವಾರೂಢಾ ಹಯಸಾದಿಭಿಃ|

06077005c ಗಜೇಂದ್ರಾಶ್ಚ ಮದೋದ್ವೃತ್ತಾಃ ಪ್ರಭಿನ್ನಕರಟಾಮುಖಾಃ||

06077006a ಪದಾತಾಶ್ಚ ತಥಾ ಶೂರಾ ನಾನಾಪ್ರಹರಣಾಯುಧಾಃ|

06077006c ನಾನಾದೇಶಸಮುತ್ಪನ್ನಾಸ್ತ್ವದರ್ಥೇ ಯೋದ್ಧುಮುದ್ಯತಾಃ||

“ರಾಜನ್! ನಾನು, ದ್ರೋಣ, ಶಲ್ಯ, ಸಾತ್ವತ ಕೃತವರ್ಮ, ಅಶ್ವತ್ಥಾಮ, ವಿಕರ್ಣ, ಸೋಮದತ್ತ, ಸೈಂಧವ, ಅವಂತಿಯ ವಿಂದಾನುವಿದರು, ಬಾಹ್ಲಿಕರೊಂದಿಗೆ ಬಾಹ್ಲಿಕ, ಬಲಶಾಲೀ ತ್ರಿಗರ್ತರಾಜ, ಸುದುರ್ಜಯ ಮಾಗಧ, ಕೌಸಲ್ಯ ಬೃಹದ್ಬಲ, ಚಿತ್ರಸೇನ, ವಿವಿಂಶತಿ, ಮಹಾಧ್ವಜಗಳಿಂದ ಶೋಭಿಸುವ ಅನೇಕ ಸಹಸ್ರ ರಥಗಳು, ಕುದುರೆ ಸವಾರರಿಂದ ಯುಕ್ತವಾದ ದೇಶೀಯ ಕುದುರೆಗಳು, ಗಂಡಸ್ಥಲದಿಂದ ಮದೋದಕವನ್ನು ಸುರಿಸುತ್ತಿರುವ ಮದೋನ್ಮತ್ತ ಗಜೇಂದ್ರರು, ನಾನಾ ಪ್ರಹರಣಾಯುಧಗಳನ್ನು ಹಿಡಿದಿರುವ ನಾನಾದೇಶಗಳಿಂದ ಬಂದಿರುವ ಶೂರ ಪದಾತಿಗಳು - ಇವರೆಲ್ಲರೂ ನಿನ್ನ ಸಲುವಾಗಿಯೇ ಯುದ್ಧಮಾಡಲು ಸಿದ್ಧರಾಗಿದ್ದಾರೆ.

06077007a ಏತೇ ಚಾನ್ಯೇ ಚ ಬಹವಸ್ತ್ವದರ್ಥೇ ತ್ಯಕ್ತಜೀವಿತಾಃ|

06077007c ದೇವಾನಪಿ ರಣೇ ಜೇತುಂ ಸಮರ್ಥಾ ಇತಿ ಮೇ ಮತಿಃ||

ಇವರಲ್ಲದೇ ಇನ್ನೂ ಅನ್ಯ ಅನೇಕರು ನಿನಗೋಸ್ಕರ ಜೀವವನ್ನು ಬಿಡಲು ಸಿದ್ಧರಾಗಿದ್ದಾರೆ. ಇವರು ರಣದಲ್ಲಿ ದೇವತೆಗಳನ್ನೂ ಗೆಲ್ಲಲು ಸಮರ್ಥರು ಎಂದು ನನ್ನ ಅಭಿಪ್ರಾಯ.

06077008a ಅವಶ್ಯಂ ತು ಮಯಾ ರಾಜಂಸ್ತವ ವಾಚ್ಯಂ ಹಿತಂ ಸದಾ|

06077008c ಅಶಕ್ಯಾಃ ಪಾಂಡವಾ ಜೇತುಂ ದೇವೈರಪಿ ಸವಾಸವೈಃ|

06077008e ವಾಸುದೇವಸಹಾಯಾಶ್ಚ ಮಹೇಂದ್ರಸಮವಿಕ್ರಮಾಃ||

ರಾಜನ್! ಆದರೆ ನಾನು ನಿನಗೆ ಹಿತ ವಚನಗಳನ್ನು ಸದಾ ಹೇಳುವುದು ಅವಶ್ಯಕ. ವಾಸುದೇವನ ಸಹಾಯವನ್ನು ಪಡೆದಿರುವ ಮತ್ತು ವಿಕ್ರಮದಲ್ಲಿ ಮಹೇಂದ್ರನ ಸಮನಾಗಿರುವ ಪಾಂಡವರನ್ನು ಗೆಲ್ಲಲು ವಾಸವನೊಂದಿಗೆ ದೇವತೆಗಳೂ ಕೂಡ ಅಶಕ್ಯರು.

06077009a ಸರ್ವಥಾಹಂ ತು ರಾಜೇಂದ್ರ ಕರಿಷ್ಯೇ ವಚನಂ ತವ|

06077009c ಪಾಂಡವಾನ್ವಾ ರಣೇ ಜೇಷ್ಯೇ ಮಾಂ ವಾ ಜೇಷ್ಯಂತಿ ಪಾಂಡವಾಃ||

ರಾಜೇಂದ್ರ! ಆದರೆ ಸರ್ವಪ್ರಯತ್ನದಿಂದಲೂ ನಿನ್ನ ಮಾತನ್ನು ನಾನು ಮಾಡುತ್ತೇನೆ. ರಣದಲ್ಲಿ ಪಾಂಡವರನ್ನು ನಾನು ಗೆಲ್ಲುತ್ತೇನೆ. ಅಥವಾ ಪಾಂಡವರು ನನ್ನನ್ನು ಗೆಲ್ಲುತ್ತಾರೆ.”

06077010a ಏವಮುಕ್ತ್ವಾ ದದೌ ಚಾಸ್ಮೈ ವಿಶಲ್ಯಕರಣೀಂ ಶುಭಾಂ|

06077010c ಓಷಧೀಂ ವೀರ್ಯಸಂಪನ್ನಾಂ ವಿಶಲ್ಯಶ್ಚಾಭವತ್ತದಾ||

ಹೀಗೆ ಹೇಳಿ ಅವನಿಗೆ ಶುಭ ವಿಶಲ್ಯಕರಣೀ ಔಷಧಿಯನ್ನು ಕೊಟ್ಟನು. ಅದರಿಂದ ಅವನು ವಿಶಲ್ಯನಾಗಿ[1] ವೀರ್ಯಸಂಪನ್ನನಾದನು.

06077011a ತತಃ ಪ್ರಭಾತೇ ವಿಮಲೇ ಸ್ವೇನಾನೀಕೇನ ವೀರ್ಯವಾನ್|

06077011c ಅವ್ಯೂಹತ ಸ್ವಯಂ ವ್ಯೂಹಂ ಭೀಷ್ಮೋ ವ್ಯೂಹವಿಶಾರದಃ||

06077012a ಮಂಡಲಂ ಮನುಜಶ್ರೇಷ್ಠ ನಾನಾಶಸ್ತ್ರಸಮಾಕುಲಂ|

06077012c ಸಂಪೂರ್ಣಂ ಯೋಧಮುಖ್ಯೈಶ್ಚ ತಥಾ ದಂತಿಪದಾತಿಭಿಃ||

06077013a ರಥೈರನೇಕಸಾಹಸ್ರೈಃ ಸಮಂತಾತ್ಪರಿವಾರಿತಂ|

06077013c ಅಶ್ವವೃಂದೈರ್ಮಹದ್ಭಿಶ್ಚ ಋಷ್ಟಿತೋಮರಧಾರಿಭಿಃ||

ಮನುಜಶ್ರೇಷ್ಠ! ವಿಮಲ ಪ್ರಭಾತದಲ್ಲಿ ವ್ಯೂಹವಿಶಾರದ ವೀರ್ಯವಾನ್ ಭೀಷ್ಮನು ತನ್ನ ಸೇನೆಗಳನ್ನು ತಾನೇ ಮಂಡಲ ವ್ಯೂಹದಲ್ಲಿ ರಚಿಸಿದನು. ಆ ವ್ಯೂಹವು ನಾನಾಶಸ್ತ್ರಸಮಾಕುಲವಾಗಿತ್ತು. ಯೋಧಮುಖ್ಯರಿಂದ, ಆನೆ-ಪದಾತಿಗಳಿಂದ, ಅನೇಕ ಸಹಸ್ರ ರಥಗಳಿಂದ, ಅನೇಕ ಅಶ್ವವೃಂದಗಳಿಂದ, ಋಷ್ಟಿ-ತೋಮರ ಧಾರಿಗಳಿಂದ ಎಲ್ಲಕಡೆಗಳಿಂದಲೂ ಪರಿವೃತವಾಗಿ ಸಂಪೂರ್ಣವಾಗಿತ್ತು.

06077014a ನಾಗೇ ನಾಗೇ ರಥಾಃ ಸಪ್ತ ಸಪ್ತ ಚಾಶ್ವಾ ರಥೇ ರಥೇ|

06077014c ಅನ್ವಶ್ವಂ ದಶ ಧಾನುಷ್ಕಾ ಧಾನುಷ್ಕೇ ಸಪ್ತ ಚರ್ಮಿಣಃ||

ಆನೆ ಆನೆಗೂ ಏಳು ರಥಗಳಿದ್ದವು. ರಥ ರಥಗಳಿಗೂ ಏಳು ಅಶ್ವಗಳಿದ್ದವು. ಪ್ರತಿ ಅಶ್ವಕ್ಕೂ ಹತ್ತು ಬಿಲ್ಗಾರರಿದ್ದರು. ಪ್ರತಿ ಬಿಲ್ಗಾರರಿಗೂ ಏಳು ಕವಚಧಾರಿಗಳಿದ್ದರು.

06077015a ಏವಂವ್ಯೂಹಂ ಮಹಾರಾಜ ತವ ಸೈನ್ಯಂ ಮಹಾರಥೈಃ|

06077015c ಸ್ಥಿತಂ ರಣಾಯ ಮಹತೇ ಭೀಷ್ಮೇಣ ಯುಧಿ ಪಾಲಿತಂ||

ಮಹಾರಾಜ! ಹೀಗೆ ಮಹಾರಥರ ನಿನ್ನ ಮಹಾ ಸೈನ್ಯವನ್ನು ವ್ಯೂಹವನ್ನಾಗಿ ರಚಿಸಿ ರಣದಲ್ಲಿ ಯುದ್ಧದಲ್ಲಿ ಅದನ್ನು ಪಾಲಿಸಲು ಭೀಷ್ಮನು ನಿಂತನು.

06077016a ದಶಾಶ್ವಾನಾಂ ಸಹಸ್ರಾಣಿ ದಂತಿನಾಂ ಚ ತಥೈವ ಚ|

06077016c ರಥಾನಾಮಯುತಂ ಚಾಪಿ ಪುತ್ರಾಶ್ಚ ತವ ದಂಶಿತಾಃ|

06077016e ಚಿತ್ರಸೇನಾದಯಃ ಶೂರಾ ಅಭ್ಯರಕ್ಷನ್ ಪಿತಾಮಹಂ||

ಹತ್ತುಸಾವಿರ ಕುದುರೆಗಳು, ಅಷ್ಟೇ ಸಂಖ್ಯೆಯ ಆನೆಗಳು, ಹತ್ತು ಸಾವಿರ ರಥಗಳು, ಮತ್ತು ಚಿತ್ರಸೇನನೇ ಮೊದಲಾದ ಕವಚ ಧರಿಸಿದ ನಿನ್ನ ಮಕ್ಕಳು ಪಿತಾಮಹನ ರಕ್ಷಣೆಗಿದ್ದರು.

06077017a ರಕ್ಷ್ಯಮಾಣಶ್ಚ ತೈಃ ಶೂರೈರ್ಗೋಪ್ಯಮಾನಾಶ್ಚ ತೇನ ತೇ|

06077017c ಸನ್ನದ್ಧಾಃ ಸಮದೃಶ್ಯಂತ ರಾಜಾನಶ್ಚ ಮಹಾಬಲಾಃ||

ಆ ಶೂರರಿಂದ ರಕ್ಷಿಸಲ್ಪಟ್ಟು ಮತ್ತು ಅವರನ್ನು ರಕ್ಷಿಸುತ್ತಾ ಆ ಮಹಾಬಲ ರಾಜರು ಯುದ್ಧ ಸನ್ನದ್ಧರಾದುದು ಕಾಣುತ್ತಿತ್ತು.

06077018a ದುರ್ಯೋಧನಸ್ತು ಸಮರೇ ದಂಶಿತೋ ರಥಮಾಸ್ಥಿತಃ|

06077018c ವ್ಯಭ್ರಾಜತ ಶ್ರಿಯಾ ಜುಷ್ಟೋ ಯಥಾ ಶಕ್ರಸ್ತ್ರಿವಿಷ್ಟಪೇ||

ದುರ್ಯೋಧನನಾದರೋ ಸಮರದಲ್ಲಿ ಕವಚಧಾರಿಯಾಗಿ ರಥದಲ್ಲಿ ಕುಳಿತು ತ್ರಿವಿಷ್ಟಪರೊಂದಿಗೆ ಶಕ್ರನಂತೆ ಶ್ರೀಯಿಂದ ತುಂಬಿ ಬೆಳಗುತ್ತಿದ್ದನು.

06077019a ತತಃ ಶಬ್ದೋ ಮಹಾನಾಸೀತ್ಪುತ್ರಾಣಾಂ ತವ ಭಾರತ|

06077019c ರಥಘೋಷಶ್ಚ ತುಮುಲೋ ವಾದಿತ್ರಾಣಾಂ ಚ ನಿಸ್ವನಃ||

ಭಾರತ! ಆಗ ನಿನ್ನ ಪುತ್ರರ ಮಹಾ ಶಬ್ಧವು ಕೇಳಿಬಂದಿತು. ರಥಘೋಷ ಮತ್ತು ವಾದ್ಯಗಳು ಮೊಳಗುವ ತುಮುಲವಾಯಿತು.

06077020a ಭೀಷ್ಮೇಣ ಧಾರ್ತರಾಷ್ಟ್ರಾಣಾಂ ವ್ಯೂಢಃ ಪ್ರತ್ಯಙ್ಮುಖೋ ಯುಧಿ|

06077020c ಮಂಡಲಃ ಸುಮಹಾವ್ಯೂಹೋ ದುರ್ಭೇದ್ಯೋಽಮಿತ್ರಘಾತಿನಾಂ|

06077020e ಸರ್ವತಃ ಶುಶುಭೇ ರಾಜನ್ರಣೇಽರೀಣಾಂ ದುರಾಸದಃ||

ಭೀಷ್ಮನಿಂದ ಮಂಡಲಾಕಾರದಲ್ಲಿ ರಚಿಸಲ್ಪಟ್ಟಿದ್ದ ಅಮಿತ್ರಘಾತೀ ಧಾರ್ತರಾಷ್ಟ್ರರ ಆ ದುರ್ಭೇದ್ಯ ಮಹಾಸೇನೆಯು ಯುದ್ದಕ್ಕೆ ಪಶ್ಚಿಮಾಭಿಮುಖವಾಗಿ ಹೊರಟಿತು. ರಾಜನ್! ರಣದಲ್ಲಿ ಅರಿಗಳಿಗೆ ದುರಾಸದವಾದ ಆ ಸೇನೆಯು ಎಲ್ಲಕಡೆಯೂ ಸುಂದರವಾಗಿ ಕಾಣುತ್ತಿತ್ತು.

06077021a ಮಂಡಲಂ ತು ಸಮಾಲೋಕ್ಯ ವ್ಯೂಹಂ ಪರಮದಾರುಣಂ|

06077021c ಸ್ವಯಂ ಯುಧಿಷ್ಠಿರೋ ರಾಜಾ ವ್ಯೂಹಂ ವಜ್ರಮಥಾಕರೋತ್||

ಪರಮದಾರುಣವಾದ ಆ ಮಂಡಲವ್ಯೂಹವನ್ನು ನೋಡಿ ರಾಜಾ ಯುಧಿಷ್ಠಿರನು ಸ್ವಯಂ ತಾನೇ ವಜ್ರವ್ಯೂಹವನ್ನು ರಚಿಸಿದನು.

06077022a ತಥಾ ವ್ಯೂಢೇಷ್ವನೀಕೇಷು ಯಥಾಸ್ಥಾನಮವಸ್ಥಿತಾಃ|

06077022c ರಥಿನಃ ಸಾದಿನಶ್ಚೈವ ಸಿಂಹನಾದಮಥಾನದನ್||

ಹಾಗೆ ಸೈನ್ಯದ ವ್ಯೂಹದಲ್ಲಿ ಯಥಾಸ್ಥಾನಗಳಲ್ಲಿ ವ್ಯವಸ್ಥಿತರಾಗಿದ್ದ ರಥಿಗಳು ಮತ್ತು ಸಾದಿನರು ಸಿಂಹನಾದಗೈದರು.

06077023a ಬಿಭಿತ್ಸವಸ್ತತೋ ವ್ಯೂಹಂ ನಿರ್ಯಯುರ್ಯುದ್ಧಕಾಂಕ್ಷಿಣಃ|

06077023c ಇತರೇತರತಃ ಶೂರಾಃ ಸಹಸೈನ್ಯಾಃ ಪ್ರಹಾರಿಣಃ||

ಪ್ರಹಾರಿ ಶೂರರು ವ್ಯೂಹವನ್ನು ಭೇದಿಸಲು ಬಯಸಿ ಯುದ್ಧಮಾಡಲು ಬಯಸಿ ಇತರೇತರರ ಸೈನ್ಯದೊಂದಿಗೆ ಹೊರಟರು.

06077024a ಭಾರದ್ವಾಜೋ ಯಯೌ ಮತ್ಸ್ಯಂ ದ್ರೌಣಿಶ್ಚಾಪಿ ಶಿಖಂಡಿನಂ|

06077024c ಸ್ವಯಂ ದುರ್ಯೋಧನೋ ರಾಜಾ ಪಾರ್ಷತಂ ಸಮುಪಾದ್ರವತ್||

ಭಾರದ್ವಾಜನು ಮತ್ಸ್ಯನನ್ನೂ, ದ್ರೌಣಿಯು ಶಿಖಂಡಿಯನ್ನೂ, ಸ್ವಯಂ ರಾಜಾ ದುರ್ಯೋಧನನು ಪಾರ್ಷತನನ್ನೂ ಆಕ್ರಮಣಿಸಿದರು.

06077025a ನಕುಲಃ ಸಹದೇವಶ್ಚ ರಾಜನ್ಮದ್ರೇಶಮೀಯತುಃ|

06077025c ವಿಂದಾನುವಿಂದಾವಾವಂತ್ಯಾವಿರಾವಂತಮಭಿದ್ರುತೌ||

ರಾಜನ್! ನಕುಲ ಸಹದೇವರು ಮದ್ರೇಶನನ್ನು ಎದುರಿಸಿದರು. ಅವಂತಿಯ ವಿಂದಾನುವಿಂದರು ಇರಾವಂತನನ್ನು ಎದುರಿಸಿದರು.

06077026a ಸರ್ವೇ ನೃಪಾಸ್ತು ಸಮರೇ ಧನಂಜಯಮಯೋಧಯನ್|

06077026c ಭೀಮಸೇನೋ ರಣೇ ಯತ್ತೋ ಹಾರ್ದಿಕ್ಯಂ ಸಮವಾರಯತ್||

ಸಮರದಲ್ಲಿ ಎಲ್ಲ ನೃಪರೂ ಧನಂಜಯನೊಡನೆ ಯುದ್ಧಮಾಡಿದರು. ರಣದಲ್ಲಿ ಭೀಮಸೇನನು ಹಾರ್ದಿಕ್ಯನನ್ನು ಆಕ್ರಮಣಿಸಿದನು.

06077027a ಚಿತ್ರಸೇನಂ ವಿಕರ್ಣಂ ಚ ತಥಾ ದುರ್ಮರ್ಷಣಂ ವಿಭೋ|

06077027c ಆರ್ಜುನಿಃ ಸಮರೇ ರಾಜಂಸ್ತವ ಪುತ್ರಾನಯೋಧಯತ್||

ವಿಭೋ! ರಾಜನ್! ನಿನ್ನ ಪುತ್ರರಾದ ಚಿತ್ರಸೇನ, ವಿಕರ್ಣ ಮತ್ತು ಹಾಗೆಯೇ ದುರ್ಮರ್ಷಣನನ್ನು ಆರ್ಜುನಿಯು ಎದುರಿಸಿ ಯುದ್ಧಮಾಡಿದನು.

06077028a ಪ್ರಾಗ್ಜ್ಯೋತಿಷಂ ಮಹೇಷ್ವಾಸಂ ಹೈಡಿಂಬೋ ರಾಕ್ಷಸೋತ್ತಮಃ|

06077028c ಅಭಿದುದ್ರಾವ ವೇಗೇನ ಮತ್ತೋ ಮತ್ತಮಿವ ದ್ವಿಪಂ||

ಮದಿಸಿದ ಆನೆಯು ಮದಿಸಿದುದನ್ನು ಹೇಗೋ ಹಾಗೆ ರಾಕ್ಷಸೋತ್ತಮ ಹೈಡಿಂಬಿಯು ಪ್ರಾಗ್ಜ್ಯೋತಿಷದ ಮಹೇಷ್ವಾಸನನ್ನು ವೇಗದಿಂದ ಆಕ್ರಮಣಿಸಿದನು.

06077029a ಅಲಂಬುಸಸ್ತತೋ ರಾಜನ್ಸಾತ್ಯಕಿಂ ಯುದ್ಧದುರ್ಮದಂ|

06077029c ಸಸೈನ್ಯಂ ಸಮರೇ ಕ್ರುದ್ಧೋ ರಾಕ್ಷಸಃ ಸಮಭಿದ್ರವತ್||

ರಾಜನ್! ರಾಕ್ಷಸ ಅಲಂಬುಸನು ತನ್ನ ಸೈನ್ಯದೊಂದಿಗೆ ಕ್ರುದ್ಧನಾಗಿ ಸಮರದಲ್ಲಿ ಯುದ್ಧದುರ್ಮದ ಸಾತ್ಯಕಿಯನ್ನು ಎದುರಿಸಿದನು.

06077030a ಭೂರಿಶ್ರವಾ ರಣೇ ಯತ್ತೋ ಧೃಷ್ಟಕೇತುಮಯೋಧಯತ್|

06077030c ಶ್ರುತಾಯುಷಂ ತು ರಾಜಾನಂ ಧರ್ಮಪುತ್ರೋ ಯುಧಿಷ್ಠಿರಃ||

ರಣದಲ್ಲಿ ಭೂರಿಶ್ರವನು ಧೃಷ್ಟಕೇತುವೊಂದಿಗೆ ಮತ್ತು ಶ್ರುತಾಯುಷನು ರಾಜ ಧರ್ಮಪುತ್ರ ಯುಧಿಷ್ಠಿರನೊಂದಿಗೆ ಹೋರಾಡಿದನು.

06077031a ಚೇಕಿತಾನಸ್ತು ಸಮರೇ ಕೃಪಮೇವಾನ್ವಯೋಧಯತ್|

06077031c ಶೇಷಾಃ ಪ್ರತಿಯಯುರ್ಯತ್ತಾ ಭೀಮಮೇವ ಮಹಾರಥಂ||

ಸಮರದಲ್ಲಿ ಚೇಕಿತಾನನು ಕೃಪನನ್ನು ಎದುರಿಸಿದನು. ಉಳಿದವರು ಮಹಾರಥ ಭೀಮನನ್ನೇ ಎದುರಿಸಿ ಹೋರಾಡಿದರು.

06077032a ತತೋ ರಾಜಸಹಸ್ರಾಣಿ ಪರಿವವ್ರುರ್ಧನಂಜಯಂ|

06077032c ಶಕ್ತಿತೋಮರನಾರಾಚಗದಾಪರಿಘಪಾಣಯಃ||

ಆಗ ಶಕ್ತಿ-ತೋಮರ-ನಾರಾಚ-ಗದ-ಪರಿಘಗಳನ್ನು ಹಿಡಿದು ಸಹಸ್ರಾರು ರಾಜರು ಧನಂಜಯನನ್ನು ಸುತ್ತುವರೆದರು.

06077033a ಅರ್ಜುನೋಽಥ ಭೃಶಂ ಕ್ರುದ್ಧೋ ವಾರ್ಷ್ಣೇಯಮಿದಮಬ್ರವೀತ್|

06077033c ಪಶ್ಯ ಮಾಧವ ಸೈನ್ಯಾನಿ ಧಾರ್ತರಾಷ್ಟ್ರಸ್ಯ ಸಂಯುಗೇ|

06077033e ವ್ಯೂಢಾನಿ ವ್ಯೂಹವಿದುಷಾ ಗಾಂಗೇಯೇನ ಮಹಾತ್ಮನಾ||

ಆಗ ಅರ್ಜುನನು ತುಂಬಾ ಕ್ರುದ್ಧನಾಗಿ ವಾರ್ಷ್ಣೇಯನಿಗೆ ಇದನ್ನು ಹೇಳಿದನು: “ಮಾಧವ! ಸಂಯುಗದಲ್ಲಿ ವ್ಯೂಹವಿದುಷ ಮಹಾತ್ಮ ಗಾಂಗೇಯನಿಂದ ವ್ಯೂಹಗೊಂಡಿರುವ ಧಾರ್ತರಾಷ್ಟ್ರನ ಸೈನ್ಯಗಳನ್ನು ನೋಡು!

06077034a ಯುದ್ಧಾಭಿಕಾಮಾನ್ ಶೂರಾಂಶ್ಚ ಪಶ್ಯ ಮಾಧವ ದಂಶಿತಾನ್|

06077034c ತ್ರಿಗರ್ತರಾಜಂ ಸಹಿತಂ ಭ್ರಾತೃಭಿಃ ಪಶ್ಯ ಕೇಶವ||

ಮಾಧವ! ಕೇಶವ! ಯುದ್ಧ ಮಾಡಲು ಬಯಸಿರುವ ಕವಚಧಾರಿಗಳಾದ ಶೂರರನ್ನು ನೋಡು! ಸಹೋದರರೊಂದಿಗೆ ತ್ರಿಗರ್ತರಾಜನನ್ನು ನೋಡು!

06077035a ಅದ್ಯೈತಾನ್ಪಾತಯಿಷ್ಯಾಮಿ ಪಶ್ಯತಸ್ತೇ ಜನಾರ್ದನ|

06077035c ಯ ಇಮೇ ಮಾಂ ಯದುಶ್ರೇಷ್ಠ ಯೋದ್ಧುಕಾಮಾ ರಣಾಜಿರೇ||

ಜನಾರ್ದನ! ಯದುಶ್ರೇಷ್ಠ! ಇಂದು ನೀನು ನೋಡುತ್ತಿರುವಂತೆ ಈ ಯುದ್ಧಕಾಮಿಗಳನ್ನು ರಣರಂಗದಲ್ಲಿ ಸಂಹರಿಸುತ್ತೇನೆ.”

06077036a ಏವಮುಕ್ತ್ವಾ ತು ಕೌಂತೇಯೋ ಧನುರ್ಜ್ಯಾಮವಮೃಜ್ಯ ಚ|

06077036c ವವರ್ಷ ಶರವರ್ಷಾಣಿ ನರಾಧಿಪಗಣಾನ್ಪ್ರತಿ||

ಹೀಗೆ ಹೇಳಿ ಕೌಂತೇಯನು ಧನುಸ್ಸನ್ನು ಟೇಂಕರಿಸಿ ನರಾಧಿಪತಿಗಣಗಳ ಮೇಲೆ ಶರವರ್ಷಗಳನ್ನು ಸುರಿಸಿದನು.

06077037a ತೇಽಪಿ ತಂ ಪರಮೇಷ್ವಾಸಾಃ ಶರವರ್ಷೈರಪೂರಯನ್|

06077037c ತಡಾಗಮಿವ ಧಾರಾಭಿರ್ಯಥಾ ಪ್ರಾವೃಷಿ ತೋಯದಾ||

ಆ ಪರಮೇಷ್ವಾಸರೂ ಕೂಡ ಮೋಡಗಳು ಮಳೆಯಿಂದ ಸರೋವರವನ್ನು ತುಂಬುವಂತೆ ಶರವರ್ಷಗಳಿಂದ ಅವನನ್ನು ತುಂಬಿದರು.

06077038a ಹಾಹಾಕಾರೋ ಮಹಾನಾಸೀತ್ತವ ಸೈನ್ಯೇ ವಿಶಾಂ ಪತೇ|

06077038c ಚಾದ್ಯಮಾನೌ ಭೃಶಂ ಕೃಷ್ಣೌ ಶರೈರ್ದೃಷ್ಟ್ವಾ ಮಹಾರಣೇ||

ವಿಶಾಂಪತೇ! ಆಗ ಆ ಇಬ್ಬರೂ ಕೃಷ್ಣರೂ ಮಹಾರಣದಲ್ಲಿ ಶರಗಳಿಂದ ಮುಚ್ಚಿಹೋಗಿದುದನ್ನು ನೋಡಿ ನಿನ್ನ ಸೈನ್ಯದಲ್ಲಿ ದೊಡ್ಡ ಹಾಹಾಕಾರವುಂಟಾಯಿತು.

06077039a ದೇವಾ ದೇವರ್ಷಯಶ್ಚೈವ ಗಂಧರ್ವಾಶ್ಚ ಮಹೋರಗಾಃ|

06077039c ವಿಸ್ಮಯಂ ಪರಮಂ ಜಗ್ಮುರ್ದೃಷ್ಟ್ವಾ ಕೃಷ್ಣೌ ತಥಾಗತೌ||

ಹಾಗಾದ ಕೃಷ್ಣರಿಬ್ಬರನ್ನು ನೋಡಿ ದೇವತೆಗಳೂ, ದೇವರ್ಷಿಗಳೂ, ಗಂಧರ್ವರೂ, ಮಹೋರಗರೂ ಪರಮ ವಿಸ್ಮಿತರಾದರು.

06077040a ತತಃ ಕ್ರುದ್ಧೋಽರ್ಜುನೋ ರಾಜನ್ನೈಂದ್ರಮಸ್ತ್ರಮುದೀರಯತ್|

06077040c ತತ್ರಾದ್ಭುತಮಪಶ್ಯಾಮ ವಿಜಯಸ್ಯ ಪರಾಕ್ರಮಂ||

ರಾಜನ್! ಆಗ ಕ್ರುದ್ಧನಾದ ಅರ್ಜುನನು ಐಂದ್ರಾಸ್ತ್ರವನ್ನು ಪ್ರಯೋಗಿಸಿದನು. ಅಲ್ಲಿ ವಿಜಯನ ಅದ್ಭುತ ಪರಾಕ್ರಮವನ್ನು ನೋಡಿದೆವು.

06077041a ಶಸ್ತ್ರವೃಷ್ಟಿಂ ಪರೈರ್ಮುಕ್ತಾಂ ಶರೌಘೈರ್ಯದವಾರಯತ್|

06077041c ನ ಚ ತತ್ರಾಪ್ಯನಿರ್ಭಿನ್ನಃ ಕಶ್ಚಿದಾಸೀದ್ವಿಶಾಂ ಪತೇ||

ವಿಶಾಂಪತೇ! ಅದು ಶತ್ರುಗಳು ಬಿಟ್ಟ ಶರವೃಷ್ಟಿಯನ್ನೂ ಶರಗುಂಪುಗಳನ್ನೂ ನಿರಸನಗೊಳಿಸಿತಲ್ಲದೇ ಅದರಿಂದ ಗಾಯಗೊಳ್ಳದೇ ಇದ್ದ ಯಾರೂ ಅಲ್ಲಿರಲಿಲ್ಲ.

06077042a ತೇಷಾಂ ರಾಜಸಹಸ್ರಾಣಾಂ ಹಯಾನಾಂ ದಂತಿನಾಂ ತಥಾ|

06077042c ದ್ವಾಭ್ಯಾಂ ತ್ರಿಭಿಃ ಶರೈಶ್ಚಾನ್ಯಾನ್ಪಾರ್ಥೋ ವಿವ್ಯಾಧ ಮಾರಿಷ||

ಮಾರಿಷ! ಪಾರ್ಥನು ಅವರ ಸಹಸ್ರಾರು ರಾಜರು, ಕುದುರೆಗಳು ಮತ್ತು ಆನೆಗಳನ್ನು ಮತ್ತು ಅನ್ಯರನ್ನು ಎರಡೆರರು ಅಥವಾ ಮೂರು ಮೂರು ಶರಗಳಿಂದ ಹೊಡೆದನು.

06077043a ತೇ ಹನ್ಯಮಾನಾಃ ಪಾರ್ಥೇನ ಭೀಷ್ಮಂ ಶಾಂತನವಂ ಯಯುಃ|

06077043c ಅಗಾಧೇ ಮಜ್ಜಮಾನಾನಾಂ ಭೀಷ್ಮಸ್ತ್ರಾತಾಭವತ್ತದಾ||

ಪಾರ್ಥನಿಂದ ಪೀಡಿಸಲ್ಪಟ್ಟ ಅವರು ಭೀಷ್ಮ ಶಾಂತನವನಲ್ಲಿಗೆ ಹೋದರು. ಅಗಾಧ ಆಳದಲ್ಲಿ ಮುಳುಗುತ್ತಿದ್ದ ಅವರಿಗೆ ಆಗ ಭೀಷ್ಮನೇ ತ್ರಾತನಾಗಿದ್ದನು.

06077044a ಆಪತದ್ಭಿಸ್ತು ತೈಸ್ತತ್ರ ಪ್ರಭಗ್ನಂ ತಾವಕಂ ಬಲಂ|

06077044c ಸಂಚುಕ್ಷುಭೇ ಮಹಾರಾಜ ವಾತೈರಿವ ಮಹಾರ್ಣವಃ||

ಮಹಾರಾಜ! ಭಿರುಗಾಳಿಯಿಂದ ಮಹಾಸಾಗರವು ಅಲ್ಲೋಲಕಲ್ಲೋಲವಾಗುವಂತೆ ನಿನ್ನ ಸೇನೆಯು ಅಲ್ಲಿ ಅವರಿಂದ ಪೀಡಿತವಾಗಿ ಭಗ್ನವಾಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಪ್ತಮಯುದ್ಧದಿವಸೇ ಸಪ್ತಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಪ್ತಮಯುದ್ಧದಿವಸ ಎನ್ನುವ ಎಪ್ಪತ್ತೇಳನೇ ಅಧ್ಯಾಯವು.

Image result for horses against white background

[1] ಅಂಗಾಂಗಗಳಿಗೆ ಚುಚ್ಚಿಕೊಂಡಿದ್ದ ಬಾಣಗಳು ಸುಲಭವಾಗಿ ಹೊರಬಿದ್ದವು ಮತ್ತು ವೇದನೆಯು ಹೊರಟುಹೋದವು.

Comments are closed.