Bhishma Parva: Chapter 78

ಭೀಷ್ಮ ಪರ್ವ: ಭೀಷ್ಮವಧ ಪರ್ವ

೭೮

ಭೀಷ್ಮನು ಅರ್ಜುನನನ್ನು ಎದುರಿಸಿ ಹೋದುದು (೧-೧೩). ದ್ರೋಣ-ವಿರಾಟರ ಯುದ್ಧ; ವಿರಾಟನ ಮಗ ಶಂಖನ ವಧೆ (೧೪-೨೪). ಶಿಖಂಡಿ-ಅಶ್ವತ್ಥಾಮರ ಯುದ್ಧ; ಶಿಖಂಡಿಯ ಪರಾಭವ (೨೫-೩೫). ಸಾತ್ಯಕಿ-ಅಲಂಬುಸರ ಯುದ್ಧ; ಸಾತ್ಯಕಿಯು ಐಂದ್ರಾಸ್ತ್ರವನ್ನು ಪ್ರಯೋಗಿಸಿದುದು (೩೬-೪೩). ಧೃಷ್ಟದ್ಯುಮ್ನ-ದುರ್ಯೋಧನರ ಯುದ್ಧ (೪೪-೫೦). ಕೃತವರ್ಮ-ಭೀಮಸೇನರ ಯುದ್ಧ (೫೧-೫೭).

06078001 ಸಂಜಯ ಉವಾಚ|

06078001a ತಥಾ ಪ್ರವೃತ್ತೇ ಸಂಗ್ರಾಮೇ ನಿವೃತ್ತೇ ಚ ಸುಶರ್ಮಣಿ|

06078001c ಪ್ರಭಗ್ನೇಷು ಚ ವೀರೇಷು ಪಾಂಡವೇನ ಮಹಾತ್ಮನಾ||

06078002a ಕ್ಷುಭ್ಯಮಾಣೇ ಬಲೇ ತೂರ್ಣಂ ಸಾಗರಪ್ರತಿಮೇ ತವ|

06078002c ಪ್ರತ್ಯುದ್ಯಾತೇ ಚ ಗಾಂಗೇಯೇ ತ್ವರಿತಂ ವಿಜಯಂ ಪ್ರತಿ||

06078003a ದೃಷ್ಟ್ವಾ ದುರ್ಯೋಧನೋ ರಾಜನ್ರಣೇ ಪಾರ್ಥಸ್ಯ ವಿಕ್ರಮಂ|

06078003c ತ್ವರಮಾಣಃ ಸಮಭ್ಯೇತ್ಯ ಸರ್ವಾಂಸ್ತಾನಬ್ರವೀನ್ನೃಪಾನ್||

06078004a ತೇಷಾಂ ಚ ಪ್ರಮುಖೇ ಶೂರಂ ಸುಶರ್ಮಾಣಂ ಮಹಾಬಲಂ|

06078004c ಮಧ್ಯೇ ಸರ್ವಸ್ಯ ಸೈನ್ಯಸ್ಯ ಭೃಶಂ ಸಂಹರ್ಷಯನ್ವಚಃ||

ಸಂಜಯನು ಹೇಳಿದನು: “ಹಾಗೆ ನಡೆಯುತ್ತಿರುವ ಸಂಗ್ರಾಮದಿಂದ ಸುಶರ್ಮನು ನಿವೃತ್ತನಾಗಲು, ಮಹಾತ್ಮ ಪಾಂಡವನಿಂದ ವೀರರು ಪ್ರಭಗ್ನರಾಗಲು, ಸಾಗರದಂತಿದ್ದ ನಿನ್ನ ಸೇನೆಯು ಬೇಗನೇ ಕ್ಷೋಭೆಗೊಳ್ಳಲು, ಗಾಂಗೇಯನು ತ್ವರೆಮಾಡಿ ವಿಜಯನ ಬಳಿ ಧಾವಿಸಿ ಬರಲು, ರಣದಲ್ಲಿ ಪಾರ್ಥನ ವಿಕ್ರಮವನ್ನು ನೋಡಿ ತ್ವರೆಮಾಡಿ ದುರ್ಯೋಧನನು ಅಲ್ಲಿ ಸೈನ್ಯದ ಮಧ್ಯದಲ್ಲಿ ಸೇರಿದ್ದ ನೃಪರೆಲ್ಲರಿಗೆ, ಎಲ್ಲರಿಗೂ ಹರ್ಷವಾಗುವಂತೆ ಹೇಳಿದನು:

06078005a ಏಷ ಭೀಷ್ಮಃ ಶಾಂತನವೋ ಯೋದ್ಧುಕಾಮೋ ಧನಂಜಯಂ|

06078005c ಸರ್ವಾತ್ಮನಾ ಕುರುಶ್ರೇಷ್ಠಸ್ತ್ಯಕ್ತ್ವಾ ಜೀವಿತಮಾತ್ಮನಃ||

“ಈ ಕುರುಶ್ರೇಷ್ಠ ಭೀಷ್ಮ ಶಾಂತನವನು ಸಂಪೂರ್ಣ ಮನಸ್ಸಿನಿಂದ ತನ್ನ ಜೀವವನ್ನೇ ತೊರೆದು ಧನಂಜಯನೊಡನೆ ಯುದ್ಧಮಾಡಲು ಬಯಸಿದ್ದಾನೆ.

06078006a ತಂ ಪ್ರಯಾಂತಂ ಪರಾನೀಕಂ ಸರ್ವಸೈನ್ಯೇನ ಭಾರತಂ|

06078006c ಸಮ್ಯತ್ತಾಃ ಸಮರೇ ಸರ್ವೇ ಪಾಲಯಧ್ವಂ ಪಿತಾಮಹಂ||

ಸಮರದಲ್ಲಿ ಶತ್ರುಸೇನೆಯನ್ನು ನುಗ್ಗುತ್ತಿರುವ ಭಾರತ ಪಿತಾಮಹನನ್ನು ಎಲ್ಲ ಸೈನ್ಯಗಳಿಂದ ಸುತ್ತುವರೆದು ಎಲ್ಲರೂ ಪಾಲಿಸಿರಿ.”

06078007a ಬಾಢಮಿತ್ಯೇವಮುಕ್ತ್ವಾ ತು ತಾನ್ಯನೀಕಾನಿ ಸರ್ವಶಃ|

06078007c ನರೇಂದ್ರಾಣಾಂ ಮಹಾರಾಜ ಸಮಾಜಗ್ಮುಃ ಪಿತಾಮಹಂ||

ಆಗಲೆಂದು ಹೇಳಿ ಆ ಸೇನೆಯಲ್ಲಿದ್ದ ಸರ್ವ ನರೇಂದ್ರರೂ ಪಿತಾಮಹನನ್ನು ಹಿಂಬಾಲಿಸಿ ಹೋದರು.

06078008a ತತಃ ಪ್ರಯಾತಃ ಸಹಸಾ ಭೀಷ್ಮಃ ಶಾಂತನವೋಽರ್ಜುನಂ|

06078008c ರಣೇ ಭಾರತಮಾಯಾಂತಮಾಸಸಾದ ಮಹಾಬಲಂ||

06078009a ಮಹಾಶ್ವೇತಾಶ್ವಯುಕ್ತೇನ ಭೀಮವಾನರಕೇತುನಾ|

06078009c ಮಹತಾ ಮೇಘನಾದೇನ ರಥೇನಾತಿ ವಿರಾಜತ||

ಆಗ ವೇಗದಲ್ಲಿ ಹೊರಟು ಭೀಷ್ಮ ಶಾಂತನವನು ಮಹಾಶ್ವೇತಾಶ್ವಗಳನ್ನು ಕಟ್ಟಿದ್ದ, ಭೀಮವಾನರಧ್ವಜವನ್ನು ಹೊಂದಿದ್ದ, ಮೇಘನಾದದಂತೆ ಗುಡುಗುತ್ತಿದ್ದ ಮಹಾ ರಥದಲ್ಲಿ ವಿರಾಜಿಸಿ ತನ್ನ ಕಡೆಗೇ ಬರತ್ತಿದ್ದ ಮಹಾಬಲ ಭಾರತ ಅರ್ಜುನನನ್ನು ಎದುರಿಸಿದನು.

06078010a ಸಮರೇ ಸರ್ವಸೈನ್ಯಾನಾನುಪಯಾತಂ ಧನಂಜಯಂ|

06078010c ಅಭವತ್ತುಮುಲೋ ನಾದೋ ಭಯಾದ್ದೃಷ್ಟ್ವಾ ಕಿರೀಟಿನಂ||

ಸಮರದಲ್ಲಿ ಬರುತ್ತಿದ್ದ ಕಿರೀಟೀ ಧನಂಜಯನನ್ನು ನೋಡಿ ಭಯದಿಂದ ಸರ್ವಸೈನ್ಯಗಳಲ್ಲಿ ತುಮುಲ ಹಾಹಾಕಾರವುಂಟಾಗುತ್ತಿತ್ತು.

06078011a ಅಭೀಶುಹಸ್ತಂ ಕೃಷ್ಣಂ ಚ ದೃಷ್ಟ್ವಾದಿತ್ಯಮಿವಾಪರಂ|

06078011c ಮಧ್ಯಂದಿನಗತಂ ಸಂಖ್ಯೇ ನ ಶೇಕುಃ ಪ್ರತಿವೀಕ್ಷಿತುಂ||

ಕಡಿವಾಣಗಳನ್ನು ಕೈಯಲ್ಲಿ ಹಿಡಿದು ಮಧ್ನಾಹ್ನದ ಇನ್ನೊಬ್ಬ ಸೂರ್ಯನಂತಿರುವ ಕೃಷ್ಣನನ್ನು ನೋಡಲು ಅವರು ಅಶಕ್ಯರಾದರು.

06078012a ತಥಾ ಶಾಂತನವಂ ಭೀಷ್ಮಂ ಶ್ವೇತಾಶ್ವಂ ಶ್ವೇತಕಾರ್ಮುಕಂ|

06078012c ನ ಶೇಕುಃ ಪಾಂಡವಾ ದ್ರಷ್ಟುಂ ಶ್ವೇತಗ್ರಹಮಿವೋದಿತಂ||

ಹಾಗೆಯೇ ಬಿಳಿಯ ಕುದುರೆಗಳ ಮತ್ತು ಬಿಳಿಯ ಬಿಲ್ಲಿನ ಉದಯಿಸುತ್ತಿರುವ ಶ್ವೇತಗ್ರಹದಂತಿರುವ ಭೀಷ್ಮ ಶಾಂತನವನನ್ನು ಪಾಂಡವರು ನೋಡಲು ಅಶಕ್ಯರಾದರು.

06078013a ಸ ಸರ್ವತಃ ಪರಿವೃತಸ್ತ್ರಿಗರ್ತೈಃ ಸುಮಹಾತ್ಮಭಿಃ|

06078013c ಭ್ರಾತೃಭಿಸ್ತವ ಪುತ್ರೈಶ್ಚ ತಥಾನ್ಯೈಶ್ಚ ಮಹಾರಥೈಃ||

ಅವನು ಎಲ್ಲಕಡೆಗಳಿಂದ ಮಹಾತ್ಮ ತ್ರಿಗರ್ತರಿಂದ ಮತ್ತು ಹಾಗೆಯೇ ಮಹಾರಥರಾದ ನಿನ್ನ ಸಹೋದರರು ಮತ್ತು ಮಕ್ಕಳಿಂದ ಸುತ್ತುವರೆಯಲ್ಪಟ್ಟಿದ್ದನು.

06078014a ಭಾರದ್ವಾಜಸ್ತು ಸಮರೇ ಮತ್ಸ್ಯಂ ವಿವ್ಯಾಧ ಪತ್ರಿಣಾ|

06078014c ಧ್ವಜಂ ಚಾಸ್ಯ ಶರೇಣಾಜೌ ಧನುಶ್ಚೈಕೇನ ಚಿಚ್ಛಿದೇ||

ಸಮರದಲ್ಲಿ ಭಾರದ್ವಾಜನಾದರೋ ಪತ್ರಿಗಳಿಂದ ಮತ್ಸ್ಯನನ್ನು ಹೊಡೆದನು ಮತ್ತು ಶರಗಳಿಂದ ಅವನ ಧ್ವಜವನ್ನೂ, ಒಂದರಿಂದ ಧನುಸ್ಸನ್ನೂ ಕತ್ತರಿಸಿದನು.

06078015a ತದಪಾಸ್ಯ ಧನುಶ್ಚಿನ್ನಂ ವಿರಾಟೋ ವಾಹಿನೀಪತಿಃ|

06078015c ಅನ್ಯದಾದತ್ತ ವೇಗೇನ ಧನುರ್ಭಾರಸಹಂ ದೃಢಂ|

06078015e ಶರಾಂಶ್ಚಾಶೀವಿಷಾಕಾರಾಂ ಜ್ವಲಿತಾನ್ಪನ್ನಗಾನಿವ||

ಆಗ ವಾಹಿನೀಪತಿ ವಿರಾಟನು ತುಂಡಾದ ಬಿಲ್ಲನ್ನು ಬದಿಗಿಟ್ಟು ವೇಗದಿಂದ ಇನ್ನೊಂದು ದೃಢವಾದ ಭಾರವನ್ನು ಹೊರಬಲ್ಲ ಧನುಸ್ಸನ್ನು ಮತ್ತು ಸರ್ಪಗಳಂತೆ ಪ್ರಜ್ವಲಿಸುತ್ತಿರುವ, ವಿಷವನ್ನು ಕಾರುತ್ತಿರುವ ಬಾಣಗಳನ್ನು ತೆಗೆದುಕೊಂಡನು.

06078016a ದ್ರೋಣಂ ತ್ರಿಭಿಃ ಪ್ರವಿವ್ಯಾಧ ಚತುರ್ಭಿಶ್ಚಾಸ್ಯ ವಾಜಿನಃ|

06078016c ಧ್ವಜಮೇಕೇನ ವಿವ್ಯಾಧ ಸಾರಥಿಂ ಚಾಸ್ಯ ಪಂಚಭಿಃ|

06078016e ಧನುರೇಕೇಷುಣಾವಿಧ್ಯತ್ತತ್ರಾಕ್ರುಧ್ಯದ್ದ್ವಿಜರ್ಷಭಃ||

ಅವನು ದ್ರೋಣನನ್ನು ಮೂರರಿಂದ ತಿರುಗಿ ಹೊಡೆದನು, ನಾಲ್ಕರಿಂದ ಅವನ ಕುದುರೆಗಳನ್ನು, ಒಂದರಿಂದ ಧ್ವಜವನ್ನು ಮತ್ತು ಐದರಿಂದ ಸಾರಥಿಯನ್ನು ಹೊಡೆದನು. ಒಂದರಿಂದ ಧನುಸ್ಸನ್ನು ಚೆನ್ನಾಗಿ ಹೊಡೆದಿದ್ದುದರಿಂದ ದ್ವಿಜರ್ಷಭನು ತುಂಬಾ ಕುಪಿತನಾದನು.

06078017a ತಸ್ಯ ದ್ರೋಣೋಽವಧೀದಶ್ವಾಂ ಶರೈಃ ಸನ್ನತಪರ್ವಭಿಃ|

06078017c ಅಷ್ಟಾಭಿರ್ಭರತಶ್ರೇಷ್ಠ ಸೂತಮೇಕೇನ ಪತ್ರಿಣಾ||

ಭರತಶ್ರೇಷ್ಠ! ದ್ರೋಣನು ಅವನ ಕುದುರೆಗಳನ್ನು ಎಂಟು ಸನ್ನತಪರ್ವ ಶರಗಳಿಂದ ಮತ್ತು ಸಾರಥಿಯನ್ನು ಒಂದು ಪತ್ರಿಯಿಂದ ವಧಿಸಿದನು.

06078018a ಸ ಹತಾಶ್ವಾದವಪ್ಲುತ್ಯ ಸ್ಯಂದನಾದ್ಧತಸಾರಥಿಃ|

06078018c ಆರುರೋಹ ರಥಂ ತೂರ್ಣಂ ಶಂಖಸ್ಯ ರಥಿನಾಂ ವರಃ||

ಕುದುರೆಗಳು-ಸಾರಥಿಯು ಹತರಾಗಲು ಆ ರಥಿಗಳಲ್ಲಿ ಶ್ರೇಷ್ಠನು ತಕ್ಷಣವೇ ತನ್ನ ರಥದಿಂದ ಹಾರಿ ಶಂಖನ ರಥವನ್ನೇರಿದನು.

06078019a ತತಸ್ತು ತೌ ಪಿತಾಪುತ್ರೌ ಭಾರದ್ವಾಜಂ ರಥೇ ಸ್ಥಿತೌ|

06078019c ಮಹತಾ ಶರವರ್ಷೇಣ ವಾರಯಾಮಾಸತುರ್ಬಲಾತ್||

ಆಗ ಆ ತಂದೆ-ಮಗ ಇಬ್ಬರೂ ರಥದಲ್ಲಿ ನಿಂತು ಭಾರದ್ವಾಜನನ್ನು ಮಹಾ ಶರವರ್ಷದಿಂದ ಬಲವಂತವಾಗಿ ನಿಲ್ಲಿಸಿದರು.

06078020a ಭಾರದ್ವಾಜಸ್ತತಃ ಕ್ರುದ್ಧಃ ಶರಮಾಶೀವಿಷೋಪಮಂ|

06078020c ಚಿಕ್ಷೇಪ ಸಮರೇ ತೂರ್ಣಂ ಶಂಖಂ ಪ್ರತಿ ಜನೇಶ್ವರ||

ಜನೇಶ್ವರ! ಆಗ ಸಮರದಲ್ಲಿ ತಕ್ಷಣವೇ ಭಾರದ್ವಾಜನು ಕ್ರುದ್ಧನಾಗಿ ಸರ್ಪದ ವಿಷದಂತಿರುವ ಶರವನ್ನು ಶಂಖನ ಮೇಲೆ ಪ್ರಯೋಗಿಸಿದನು.

06078021a ಸ ತಸ್ಯ ಹೃದಯಂ ಭಿತ್ತ್ವಾ ಪೀತ್ವಾ ಶೋಣಿತಮಾಹವೇ|

06078021c ಜಗಾಮ ಧರಣಿಂ ಬಾಣೋ ಲೋಹಿತಾರ್ದ್ರೀಕೃತಚ್ಛವಿಃ||

ಆಹವದಲ್ಲಿ ಆ ಬಾಣವು ಅವನ ಹೃದಯವನ್ನು ಸೀಳಿ ರಕ್ತವನ್ನು ಕುಡಿದು ರಕ್ತ ಮತ್ತು ಮಾಂಸಗಳಿಂದ ಲೇಪನಗೊಂಡು ಭೂಮಿಯ ಮೇಲೆ ಬಿದ್ದಿತು.

06078022a ಸ ಪಪಾತ ರಥಾತ್ತೂರ್ಣಂ ಭಾರದ್ವಾಜಶರಾಹತಃ|

06078022c ಧನುಸ್ತ್ಯಕ್ತ್ವಾ ಶರಾಂಶ್ಚೈವ ಪಿತುರೇವ ಸಮೀಪತಃ||

ಭರದ್ವಾಜನ ಶರನಿಂದ ಹತನಾದ ಅವನು ತಕ್ಷಣವೇ ಧನುಸ್ಸು-ಶರಗಳನ್ನು ಬಿಟ್ಟು ತನ್ನ ತಂದೆಯ ಸಮೀಪದಲ್ಲಿರುವಾಗಲೇ ರಥದಿಂದ ಬಿದ್ದನು.

06078023a ಹತಂ ಸ್ವಮಾತ್ಮಜಂ ದೃಷ್ಟ್ವಾ ವಿರಾಟಃ ಪ್ರಾದ್ರವದ್ಭಯಾತ್|

06078023c ಉತ್ಸೃಜ್ಯ ಸಮರೇ ದ್ರೋಣಂ ವ್ಯಾತ್ತಾನನಮಿವಾಂತಕಂ||

ತನ್ನ ಮಗನು ಹತನಾದುದನ್ನು ನೋಡಿ ವಿರಾಟನು ಬಾಯಿಕಳೆದ ಅಂತಕನಂತಿರುವ ದ್ರೋಣನನ್ನು ಬಿಟ್ಟು ಸಮರದಿಂದ ಪಲಾಯನ ಮಾಡಿದನು.

06078024a ಭಾರದ್ವಾಜಸ್ತತಸ್ತೂರ್ಣಂ ಪಾಂಡವಾನಾಂ ಮಹಾಚಮೂಂ|

06078024c ದಾರಯಾಮಾಸ ಸಮರೇ ಶತಶೋಽಥ ಸಹಸ್ರಶಃ||

ಆಗ ಭಾರದ್ವಾಜನು ಸಮರದಲ್ಲಿ ಪಾಂಡವರ ಮಹಾಸೇನೆಯನ್ನು ತಕ್ಷಣವೇ ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಸದೆಬಡಿಯತೊಡಗಿದನು.

06078025a ಶಿಖಂಡ್ಯಪಿ ಮಹಾರಾಜ ದ್ರೌಣಿಮಾಸಾದ್ಯ ಸಂಯುಗೇ|

06078025c ಆಜಘಾನ ಭ್ರುವೋರ್ಮಧ್ಯೇ ನಾರಾಚೈಸ್ತ್ರಿಭಿರಾಶುಗೈಃ||

ಮಹಾರಾಜ! ಶಿಖಂಡಿಯು ಸಂಯುಗದಲ್ಲಿ ದ್ರೌಣಿಯನ್ನು ಎದುರಿಸಿ ಅವನ ಹುಬ್ಬುಗಳ ಮಧ್ಯೆ ಮೂರು ಆಶುಗ ನಾರಾಚಗಳಿಂದ ಹೊಡೆದನು.

06078026a ಸ ಬಭೌ ನರಶಾರ್ದೂಲೋ ಲಲಾಟೇ ಸಂಸ್ಥಿತೈಸ್ತ್ರಿಭಿಃ|

06078026c ಶಿಖರೈಃ ಕಾಂಚನಮಯೈರ್ಮೇರುಸ್ತ್ರಿಭಿರಿವೋಚ್ಛ್ರಿತೈಃ||

ಹಣೆಯಲ್ಲಿ ಚುಚ್ಚಿಕೊಂಡಿದ್ದ ಆ ಮೂರು ಬಾಣಗಳಿಂದ ಆ ನರಶಾರ್ದೂಲನು ಕಾಂಚನಮಯ ಮೂರು ಶಿಖರಗಳಿಂದ ಕೂಡಿದ ಮೇರು ಪರ್ವತದಂತೆ ಪ್ರಕಾಶಿಸಿದನು.

06078027a ಅಶ್ವತ್ಥಾಮಾ ತತಃ ಕ್ರುದ್ಧೋ ನಿಮೇಷಾರ್ಧಾಚ್ಚಿಖಂಡಿನಃ|

06078027c ಸೂತಂ ಧ್ವಜಮಥೋ ರಾಜಂಸ್ತುರಗಾನಾಯುಧಂ ತಥಾ|

06078027e ಶರೈರ್ಬಹುಭಿರುದ್ದಿಶ್ಯ ಪಾತಯಾಮಾಸ ಸಂಯುಗೇ||

ರಾಜನ್! ಆಗ ಸಂಯುಗದಲ್ಲಿ ಕ್ರುದ್ಧನಾಗಿ ಅಶ್ವತ್ಥಾಮನು ನಿಮಿಷಾರ್ಧದಲ್ಲಿ ಅನೇಕ ಶರಗಳನ್ನು ಪ್ರಯೋಗಿಸಿ ಶಿಖಂಡಿಯ ಸೂತನನ್ನೂ, ಧ್ವಜವನ್ನೂ, ಕುದುರೆಗಳನ್ನೂ, ಆಯುಧಗಳನ್ನೂ ಬೀಳಿಸಿದನು.

06078028a ಸ ಹತಾಶ್ವಾದವಪ್ಲುತ್ಯ ರಥಾದ್ವೈ ರಥಿನಾಂ ವರಃ|

06078028c ಖಡ್ಗಮಾದಾಯ ನಿಶಿತಂ ವಿಮಲಂ ಚ ಶರಾವರಂ|

06078028e ಶ್ಯೇನವದ್ವ್ಯಚರತ್ಕ್ರುದ್ಧಃ ಶಿಖಂಡೀ ಶತ್ರುತಾಪನಃ||

ಕುದುರೆಗಳು ಹತವಾಗಲು ಆ ರಥಿಗಳಲ್ಲಿ ಶ್ರೇಷ್ಠ ಶತ್ರುತಾಪನ ಶಿಖಂಡಿಯು ರಥದಿಂದ ಹಾರಿ ನಿಶಿತ ವಿಮಲ ಖಡ್ಗ-ಗುರಾಣಿಗಳನ್ನು ಎತ್ತಿಕೊಂಡು ಕ್ರುದ್ಧನಾಗಿ ಗಿಡುಗನಂತೆ ಸಂಚರಿಸತೊಡಗಿದನು.

06078029a ಸಖಡ್ಗಸ್ಯ ಮಹಾರಾಜ ಚರತಸ್ತಸ್ಯ ಸಂಯುಗೇ|

06078029c ನಾಂತರಂ ದದೃಶೇ ದ್ರೌಣಿಸ್ತದದ್ಭುತಮಿವಾಭವತ್||

ಮಹಾರಾಜ! ಖಡ್ಗವನ್ನು ತಿರುಗಿಸುತ್ತಾ ಸಂಯುಗದಲ್ಲಿ ಸಂಚರಿಸಿಸುತ್ತಿದ್ದ ಅವನನ್ನು ಕೊಲ್ಲಲು ದ್ರೌಣಿಗೆ ಅವಕಾಶವೇ ಕಾಣಲಿಲ್ಲ. ಆಗ ಅದ್ಭುತವಾಯಿತು.

06078030a ತತಃ ಶರಸಹಸ್ರಾಣಿ ಬಹೂನಿ ಭರತರ್ಷಭ|

06078030c ಪ್ರೇಷಯಾಮಾಸ ಸಮರೇ ದ್ರೌಣಿಃ ಪರಮಕೋಪನಃ||

ಭರತರ್ಷಭ! ಆಗ ಸಮರದಲ್ಲಿ ಪರಮಕುಪಿತನಾದ ದ್ರೌಣಿಯು ಅನೇಕ ಸಹಸ್ರ ಬಾಣಗಳನ್ನು ಪ್ರಯೋಗಿಸಿದನು.

06078031a ತಾಮಾಪತಂತೀಂ ಸಮರೇ ಶರವೃಷ್ಟಿಂ ಸುದಾರುಣಾಂ|

06078031c ಅಸಿನಾ ತೀಕ್ಷ್ಣಧಾರೇಣ ಚಿಚ್ಛೇದ ಬಲಿನಾಂ ವರಃ||

ಬಲಿಷ್ಟರಲ್ಲಿ ಶ್ರೇಷ್ಠನಾದ ಅವನು ಸಮರದಲ್ಲಿ ಸುದಾರುಣವಾಗಿ ಬೀಳುತ್ತಿದ್ದ ಆ ಶರವೃಷ್ಟಿಯನ್ನು ತೀಕ್ಷ್ಣ ಖಡ್ಗದಿಂದ ತುಂಡರಿಸಿದನು.

06078032a ತತೋಽಸ್ಯ ವಿಮಲಂ ದ್ರೌಣಿಃ ಶತಚಂದ್ರಂ ಮನೋರಮಂ|

06078032c ಚರ್ಮಾಚ್ಛಿನದಸಿಂ ಚಾಸ್ಯ ಖಂಡಯಾಮಾಸ ಸಂಯುಗೇ|

06078032e ಶಿತೈಃ ಸುಬಹುಶೋ ರಾಜಂಸ್ತಂ ಚ ವಿವ್ಯಾಧ ಪತ್ರಿಭಿಃ||

ರಾಜನ್! ಆಗ ದ್ರೌಣಿಯು ನೂರುಚಂದ್ರಗಳಿದ್ದ ಅವನ ಮನೋರಮ ಖಡ್ಗ ಗುರಾಣಿಗಳನ್ನು ಸಂಯುಗದಲ್ಲಿ ಕತ್ತರಿಸಿ ಅನೇಕ ನಿಶಿತ ಪತ್ರಿಗಳಿಂದ ಅವನನ್ನು ಹೊಡೆದನು.

06078033a ಶಿಖಂಡೀ ತು ತತಃ ಖಡ್ಗಂ ಖಂಡಿತಂ ತೇನ ಸಾಯಕೈಃ|

06078033c ಆವಿಧ್ಯ ವ್ಯಸೃಜತ್ತೂರ್ಣಂ ಜ್ವಲಂತಮಿವ ಪನ್ನಗಂ||

ಆಗ ಕೂಡಲೇ ಸಾಯಕಗಳಿಂದ ತುಂಡಾದ ಖಡ್ಗವನ್ನೇ ಪ್ರಜ್ವಲಿಸುತ್ತಿರುವ ಸರ್ಪದಂತೆ ಶಿಖಂಡಿಯು ಅವನ ಮೇಲೆ ಎಸೆದನು.

06078034a ತಮಾಪತಂತಂ ಸಹಸಾ ಕಾಲಾನಲಸಮಪ್ರಭಂ|

06078034c ಚಿಚ್ಛೇದ ಸಮರೇ ದ್ರೌಣಿರ್ದರ್ಶಯನ್ಪಾಣಿಲಾಘವಂ|

06078034e ಶಿಖಂಡಿನಂ ಚ ವಿವ್ಯಾಧ ಶರೈರ್ಬಹುಭಿರಾಯಸೈಃ||

ಕೂಡಲೇ ತನ್ನ ಮೇಲೆ ಬೀಳುತ್ತಿದ್ದ ಕಾಲಾನಲಸಮಪ್ರಭೆಯ ಅದನ್ನು ಸಮರದಲ್ಲಿ ಕತ್ತರಿಸಿ ದ್ರೌಣಿಯು ತನ್ನ ಹಸ್ತಲಾಘವವನ್ನು ಪ್ರದರ್ಶಿಸಿದನು. ಮತ್ತು ಶಿಖಂಡಿಯನ್ನು ಅನೇಕ ಆಯಸ ಶರಗಳಿಂದ ಗಾಯಗೊಳಿಸಿದನು.

06078035a ಶಿಖಂಡೀ ತು ಭೃಶಂ ರಾಜಂಸ್ತಾಡ್ಯಮಾನಃ ಶಿತೈಃ ಶರೈಃ|

06078035c ಆರುರೋಹ ರಥಂ ತೂರ್ಣಂ ಮಾಧವಸ್ಯ ಮಹಾತ್ಮನಃ||

ರಾಜನ್! ನಿಶಿತ ಶರಗಳಿಂದ ಜೋರಾಗಿ ಹೊಡೆಯಲ್ಪಟ್ಟ ಶಿಖಂಡಿಯಾದರೋ ತಕ್ಷಣವೇ ಮಹಾತ್ಮ ಮಾಧವನ (ಸಾತ್ಯಕಿಯ) ರಥವನ್ನೇರಿದನು.

06078036a ಸಾತ್ಯಕಿಸ್ತು ತತಃ ಕ್ರುದ್ಧೋ ರಾಕ್ಷಸಂ ಕ್ರೂರಮಾಹವೇ|

06078036c ಅಲಂಬುಸಂ ಶರೈರ್ಘೋರೈರ್ವಿವ್ಯಾಧ ಬಲಿನಂ ಬಲೀ||

ಆಗ ಬಲಿಗಳಲ್ಲಿ ಶ್ರೇಷ್ಠ ಸಾತ್ಯಕಿಯಾದರೋ ಆಹವದಲ್ಲಿ ಕ್ರುದ್ಧನಾಗಿ ಕ್ರೂರ ರಾಕ್ಷಸ ಅಲಂಬುಸನನ್ನು ಘೋರ ಶರಗಳಿಂದ ಹೊಡೆದನು.

06078037a ರಾಕ್ಷಸೇಂದ್ರಸ್ತತಸ್ತಸ್ಯ ಧನುಶ್ಚಿಚ್ಛೇದ ಭಾರತ|

06078037c ಅರ್ಧಚಂದ್ರೇಣ ಸಮರೇ ತಂ ಚ ವಿವ್ಯಾಧ ಸಾಯಕೈಃ|

06078037e ಮಾಯಾಂ ಚ ರಾಕ್ಷಸೀಂ ಕೃತ್ವಾ ಶರವರ್ಷೈರವಾಕಿರತ್||

ಭಾರತ! ಆಗ ರಾಕ್ಷಸೇಂದ್ರನು ಅರ್ಧಚಂದ್ರದಿಂದ ಅವನ ಧನುಸ್ಸನ್ನು ಕತ್ತರಿಸಿದನು ಮತ್ತು ಸಮರದಲ್ಲಿ ಅವನನ್ನು ಸಾಯಕಗಳಿಂದ ಹೊಡೆದನು. ರಾಕ್ಷಸೀ ಮಾಯೆಯನ್ನು ಮಾಡಿ ಅವನನ್ನು ಶರವರ್ಷಗಳಿಂದ ಮುಚ್ಚಿದನು.

06078038a ತತ್ರಾದ್ಭುತಮಪಶ್ಯಾಮ ಶೈನೇಯಸ್ಯ ಪರಾಕ್ರಮಂ|

06078038c ನಾಸಂಭ್ರಮದ್ಯತ್ಸಮರೇ ವಧ್ಯಮಾನಃ ಶಿತೈಃ ಶರೈಃ||

ಆಗ ಸ್ವಲ್ಪವೂ ಗಾಭರಿಗೊಳ್ಳದೇ ಸಮರದಲ್ಲಿ ನಿಶಿತ ಬಾಣಗಳಿಂದ ಹೋರಾಡುವ ಶೈನೇಯನ ಪರಾಕ್ರಮವನ್ನು ನಾವು ನೋಡಿದೆವು.

06078039a ಐಂದ್ರಮಸ್ತ್ರಂ ಚ ವಾರ್ಷ್ಣೇಯೋ ಯೋಜಯಾಮಾಸ ಭಾರತ|

06078039c ವಿಜಯಾದ್ಯದನುಪ್ರಾಪ್ತಂ ಮಾಧವೇನ ಯಶಸ್ವಿನಾ||

ಭಾರತ! ವಾರ್ಷ್ಣೇಯನು ಐಂದ್ರಾಸ್ತ್ರವನ್ನು ಹೂಡಿದನು. ಆ ಮಾಧವ ಯಶಸ್ವಿಯು ಅದನ್ನು ವಿಜಯನಿಂದ ಪಡೆದುಕೊಂಡಿದ್ದನು.

06078040a ತದಸ್ತ್ರಂ ಭಸ್ಮಸಾತ್ಕೃತ್ವಾ ಮಾಯಾಂ ತಾಂ ರಾಕ್ಷಸೀಂ ತದಾ|

06078040c ಅಲಂಬುಸಂ ಶರೈರ್ಘೋರೈರಭ್ಯಾಕಿರತ ಸರ್ವಶಃ|

06078040e ಪರ್ವತಂ ವಾರಿಧಾರಾಭಿಃ ಪ್ರಾವೃಷೀವ ಬಲಾಹಕಃ||

ಆ ಅಸ್ತ್ರವು ರಾಕ್ಷಸೀ ಮಾಯೆಯನ್ನು ಭಸ್ಮವಾಗಿಸಿ, ಮಹಾಮೇಘವು ಮಳೆಸುರಿಸಿ ಪರ್ವತವನ್ನು ಮುಚ್ಚಿಬಿಡುವಂತೆ ಅಲಂಬುಸನನ್ನು ಎಲ್ಲ ಕಡೆಗಳಿಂದ ಘೋರ ಶರಗಳಿಂದ ಮುಚ್ಚಿಬಿಟ್ಟಿತು.

06078041a ತತ್ತಥಾ ಪೀಡಿತಂ ತೇನ ಮಾಧವೇನ ಮಹಾತ್ಮನಾ|

06078041c ಪ್ರದುದ್ರಾವ ಭಯಾದ್ರಕ್ಷೋ ಹಿತ್ವಾ ಸಾತ್ಯಕಿಮಾಹವೇ||

ಆಗ ಮಹಾತ್ಮ ಮಾಧವನಿಂದ ಪೀಡಿತನಾಗಿ ಭಯದಿಂದ ಆ ರಾಕ್ಷಸನು ಆಹವದಲ್ಲಿ ಸಾತ್ಯಕಿಯನ್ನು ಬಿಟ್ಟು ಪಲಾಯನ ಮಾಡಿದನು.

06078042a ತಮಜೇಯಂ ರಾಕ್ಷಸೇಂದ್ರಂ ಸಂಖ್ಯೇ ಮಘವತಾ ಅಪಿ|

06078042c ಶೈನೇಯಃ ಪ್ರಾಣದಜ್ಜಿತ್ವಾ ಯೋಧಾನಾಂ ತವ ಪಶ್ಯತಾಂ||

ನಿನ್ನ ಯೋಧರು ನೋಡುತ್ತಿದ್ದಂತೆಯೇ ಯುದ್ಧದಲ್ಲಿ ಮಘವತನಿಗೂ ಅಜೇಯನಾಗಿದ್ದ ಆ ರಾಕ್ಷಸೇಂದ್ರನನ್ನು ಶೈನೇಯನು ಪ್ರಾಣದಿಂದ ಗೆದ್ದನು.

06078043a ನ್ಯಹನತ್ತಾವಕಾಂಶ್ಚಾಪಿ ಸಾತ್ಯಕಿಃ ಸತ್ಯವಿಕ್ರಮಃ|

06078043c ನಿಶಿತೈರ್ಬಹುಭಿರ್ಬಾಣೈಸ್ತೇಽದ್ರವಂತ ಭಯಾರ್ದಿತಾಃ||

ಸತ್ಯವಿಕ್ರಮಿ ಸಾತ್ಯಕಿಯು ಜೋರಾಗಿ ಸಿಂಹನಾದಗೈದನು ಮತ್ತು ಅನೇಕ ನಿಶಿತ ಬಾಣಗಳಿಂದ ಭಯಾರ್ದಿತರಾದವರನ್ನು ಓಡಿಸಿದನು.

06078044a ಏತಸ್ಮಿನ್ನೇವ ಕಾಲೇ ತು ದ್ರುಪದಸ್ಯಾತ್ಮಜೋ ಬಲೀ|

06078044c ಧೃಷ್ಟದ್ಯುಮ್ನೋ ಮಹಾರಾಜ ತವ ಪುತ್ರಂ ಜನೇಶ್ವರಂ|

06078044e ಚಾದಯಾಮಾಸ ಸಮರೇ ಶರೈಃ ಸನ್ನತಪರ್ವಭಿಃ||

ಮಹಾರಾಜ! ಜನೇಶ್ವರ! ಇದೇ ಸಮಯದಲ್ಲಿ ದ್ರುಪದಾತ್ಮಜ ಬಲಿ ಧೃಷ್ಟದ್ಯುಮ್ನನು ನಿನ್ನ ಮಗನನ್ನು ಸಮರದಲ್ಲಿ ಸನ್ನತಪರ್ವ ಶರಗಳಿಂದ ಹೊಡೆಯತೊಡಗಿದನು.

06078045a ಸಂಚಾದ್ಯಮಾನೋ ವಿಶಿಖೈರ್ಧೃಷ್ಟದ್ಯುಮ್ನೇನ ಭಾರತ|

06078045c ವಿವ್ಯಥೇ ನ ಚ ರಾಜೇಂದ್ರ ತವ ಪುತ್ರೋ ಜನೇಶ್ವರಃ||

ಭಾರತ! ರಾಜೇಂದ್ರ! ಧೃಷ್ಟದ್ಯುಮ್ನನ ವಿಶಿಖಗಳಿಂದ ಗಾಯಗೊಂಡ ನಿನ್ನ ಪುತ್ರ ಜನೇಶ್ವರನು ಸ್ವಲ್ಪವೂ ವ್ಯಥಿತನಾಗಲಿಲ್ಲ.

06078046a ಧೃಷ್ಟದ್ಯುಮ್ನಂ ಚ ಸಮರೇ ತೂರ್ಣಂ ವಿವ್ಯಾಧ ಸಾಯಕೈಃ|

06078046c ಷಷ್ಟ್ಯಾ ಚ ತ್ರಿಂಶತಾ ಚೈವ ತದದ್ಭುತಮಿವಾಭವತ್||

ಅವನು ಸಮರದಲ್ಲಿ ತಕ್ಷಣವೇ ಧೃಷ್ಟದ್ಯುಮ್ನನನ್ನು ತೊಂಭತ್ತು ಸಾಯಕಗಳಿಂದ ಹೊಡೆದನು. ಅದೊಂದು ಅದ್ಭುತವಾಗಿತ್ತು.

06078047a ತಸ್ಯ ಸೇನಾಪತಿಃ ಕ್ರುದ್ಧೋ ಧನುಶ್ಚಿಚ್ಛೇದ ಮಾರಿಷ|

06078047c ಹಯಾಂಶ್ಚ ಚತುರಃ ಶೀಘ್ರಂ ನಿಜಘಾನ ಮಹಾರಥಃ|

06078047e ಶರೈಶ್ಚೈನಂ ಸುನಿಶಿತೈಃ ಕ್ಷಿಪ್ರಂ ವಿವ್ಯಾಧ ಸಪ್ತಭಿಃ||

ಮಾರಿಷ! ಆ ಮಹಾರಥ ಸೇನಾಪತಿಯು ಕ್ರುದ್ಧನಾಗಿ ಅವನ ಬಿಲ್ಲನ್ನು ಕತ್ತರಿಸಿದನು, ಶೀಘ್ರವಾಗಿ ನಾಲ್ಕೂ ಕುದುರೆಗಳನ್ನು ಸಂಹರಿಸಿದನು ಮತ್ತು ಕ್ಷಿಪ್ರವಾಗಿ ಏಳು ನಿಶಿತ ಬಾಣಗಳಿಂದ ಅವನನ್ನು ಹೊಡೆದನು.

06078048a ಸ ಹತಾಶ್ವಾನ್ಮಹಾಬಾಹುರವಪ್ಲುತ್ಯ ರಥಾದ್ಬಲೀ|

06078048c ಪದಾತಿರಸಿಮುದ್ಯಮ್ಯ ಪ್ರಾದ್ರವತ್ಪಾರ್ಷತಂ ಪ್ರತಿ||

ಅಶ್ವಗಳು ಹತರಾಗಲು ಮಹಾಬಾಹು ಬಲಿಯು ರಥದಿಂದ ಕೆಳಗೆ ಧುಮುಕಿ ಖಡ್ಗವನ್ನು ಎತ್ತಿ ಹಿಡಿದು ಕಾಲ್ನಡುಗೆಯಲ್ಲಿಯೇ ಪಾರ್ಷತನ ಕಡೆ ಓಡಿ ಬಂದನು.

06078049a ಶಕುನಿಸ್ತಂ ಸಮಭ್ಯೇತ್ಯ ರಾಜಗೃದ್ಧೀ ಮಹಾಬಲಃ|

06078049c ರಾಜಾನಂ ಸರ್ವಲೋಕಸ್ಯ ರಥಮಾರೋಪಯತ್ಸ್ವಕಂ||

ಆಗ ರಾಜನನ್ನು ಬಹುವಾಗಿ ಪ್ರೀತಿಸುತ್ತಿದ್ದ ಮಹಾಬಲ ಶಕುನಿಯು ಬಂದು ಆ ಸರ್ವಲೋಕದ ರಾಜನನ್ನು ತನ್ನ ರಥದ ಮೇಲೇರಿಸಿಕೊಂಡನು.

06078050a ತತೋ ನೃಪಂ ಪರಾಜಿತ್ಯ ಪಾರ್ಷತಃ ಪರವೀರಹಾ|

06078050c ನ್ಯಹನತ್ತಾವಕಂ ಸೈನ್ಯಂ ವಜ್ರಪಾಣಿರಿವಾಸುರಂ||

ಆಗ ನೃಪನನ್ನು ಪರಾಜಯಗೊಳಿಸಿ ಪರವೀರಹ ಪಾರ್ಷತನು ವಜ್ರಪಾಣಿಯು ಅಸುರರನ್ನು ಹೇಗೋ ಹಾಗೆ ನಿನ್ನವರ ಸೇನೆಯನ್ನು ಸಂಹರಿಸಿದನು.

06078051a ಕೃತವರ್ಮಾ ರಣೇ ಭೀಮಂ ಶರೈರಾರ್ಚನ್ಮಹಾರಥಂ|

06078051c ಪ್ರಚ್ಛಾದಯಾಮಾಸ ಚ ತಂ ಮಹಾಮೇಘೋ ರವಿಂ ಯಥಾ||

ರಣದಲ್ಲಿ ಕೃತವರ್ಮನು ಮಹಾರಥ ಭೀಮನನ್ನು ಮಹಾಮೇಘವು ರವಿಯನ್ನು ಹೇಗೋ ಹಾಗೆ ಶರಗಳನ್ನು ಸುರಿಸಿ ಮುಚ್ಚಿಬಿಟ್ಟನು.

06078052a ತತಃ ಪ್ರಹಸ್ಯ ಸಮರೇ ಭೀಮಸೇನಃ ಪರಂತಪಃ|

06078052c ಪ್ರೇಷಯಾಮಾಸ ಸಂಕ್ರುದ್ಧಃ ಸಾಯಕಾನ್ಕೃತವರ್ಮಣೇ||

ಆಗ ಸಮರದಲ್ಲಿ ಪರಂತಪ ಭೀಮಸೇನನು ನಕ್ಕು ಸಂಕ್ರುದ್ಧನಾಗಿ ಕೃತವರ್ಮನ ಮೇಲೆ ಸಾಯಕಗಳನ್ನು ಪ್ರಯೋಗಿಸಿದನು.

06078053a ತೈರರ್ದ್ಯಮಾನೋಽತಿರಥಃ ಸಾತ್ವತಃ ಶಸ್ತ್ರಕೋವಿದಃ|

06078053c ನಾಕಂಪತ ಮಹಾರಾಜ ಭೀಮಂ ಚಾರ್ಚಚ್ಚಿತೈಃ ಶರೈಃ||

ಮಹಾರಾಜ! ಅತಿರಥ, ಶಸ್ತ್ರಕೋವಿದ ಸಾತ್ವತನು ಅವುಗಳಿಗೆ ನಡುಗದೇ ಭೀಮನನ್ನು ನಿಶಿತ ಶರಗಳಿಂದ ಗಾಯಗೊಳಿಸಿದನು.

06078054a ತಸ್ಯಾಶ್ವಾಂಶ್ಚತುರೋ ಹತ್ವಾ ಭೀಮಸೇನೋ ಮಹಾಬಲಃ|

06078054c ಸಾರಥಿಂ ಪಾತಯಾಮಾಸ ಧ್ವಜಂ ಚ ಸುಪರಿಷ್ಕೃತಂ||

ಭೀಮಸೇನ ಮಹಾಬಲನು ಅವನ ನಾಲ್ಕೂ ಕುದುರೆಗಳನ್ನು ಕೊಂದು ಸುಪರಿಷ್ಕೃತವಾಗಿದ್ದ ಧ್ವಜವನ್ನೂ ಸಾರಥಿಯನ್ನೂ ಕೆಳಗುರುಳಿಸಿದನು.

06078055a ಶರೈರ್ಬಹುವಿಧೈಶ್ಚೈನಮಾಚಿನೋತ್ಪರವೀರಹಾ|

06078055c ಶಕಲೀಕೃತಸರ್ವಾಂಗಃ ಶ್ವಾವಿದ್ವತ್ಸಮದೃಶ್ಯತ||

ಆಗ ಪರವೀರಹನು ಅನೇಕ ವಿಧದ ಶರಗಳಿಂದ ಅವನನ್ನು ಹೊಡೆದನು. ಅವನ ಎಲ್ಲ ಅಂಗಾಂಗಗಳೂ ಕ್ಷತ-ವಿಕ್ಷತವಾಗಿದ್ದುದು ಕಂಡುಬಂದಿತು.

06078056a ಹತಾಶ್ವಾತ್ತು ರಥಾತ್ತೂರ್ಣಂ ವೃಷಕಸ್ಯ ರಥಂ ಯಯೌ|

06078056c ಸ್ಯಾಲಸ್ಯ ತೇ ಮಹಾರಾಜ ತವ ಪುತ್ರಸ್ಯ ಪಶ್ಯತಃ||

ಮಹಾರಾಜ! ಕುದುರೆಗಳನ್ನು ಕಳೆದುಕೊಂಡ ಅವನು ಕೂಡಲೇ ನಿನ್ನ ಮಗನು ನೋಡುತ್ತಿದ್ದಂತೆ ನಿನ್ನ ಬಾವ ವೃಷಕನ ರಥವನ್ನು ಹತ್ತಿದನು.

06078057a ಭೀಮಸೇನೋಽಪಿ ಸಂಕ್ರುದ್ಧಸ್ತವ ಸೈನ್ಯಮುಪಾದ್ರವತ್|

06078057c ನಿಜಘಾನ ಚ ಸಂಕ್ರುದ್ಧೋ ದಂಡಪಾಣಿರಿವಾಂತಕಃ||

ಭೀಮಸೇನನೂ ಕೂಡ ಮಹಾಕೋಪದಿಂದ ನಿನ್ನ ಸೈನ್ಯವನ್ನು ದಂಡಪಾಣಿ ಅಂತಕನಂತೆ ಸಂಕ್ರುದ್ಧನಾಗಿ ಸಂಹರಿಸಿದನು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ದ್ವೈರಥೇ ಅಷ್ಠಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ದ್ವೈರಥ ಎನ್ನುವ ಎಪ್ಪತ್ತೆಂಟನೇ ಅಧ್ಯಾಯವು.

Image result for horses against white background

Comments are closed.