Bhishma Parva: Chapter 47

ಭೀಷ್ಮ ಪರ್ವ: ಭೀಷ್ಮವಧ ಪರ್ವ

೪೭

ಕೌರವ ಸೇನೆಯ ವ್ಯೂಹ ರಚನೆ (೧-೨೦). ಸಿಂಹನಾದ-ಶಂಖನಾದಗಳು (೨೧-೩೦).

06047001 ಸಂಜಯ ಉವಾಚ|

06047001a ಕ್ರೌಂಚಂ ತತೋ ಮಹಾವ್ಯೂಹಮಭೇದ್ಯಂ ತನಯಸ್ತವ|

06047001c ವ್ಯೂಢಂ ದೃಷ್ಟ್ವಾ ಮಹಾಘೋರಂ ಪಾರ್ಥೇನಾಮಿತತೇಜಸಾ||

06047002a ಆಚಾರ್ಯಮುಪಸಂಗಮ್ಯ ಕೃಪಂ ಶಲ್ಯಂ ಚ ಮಾರಿಷ|

06047002c ಸೌಮದತ್ತಿಂ ವಿಕರ್ಣಂ ಚ ಅಶ್ವತ್ಥಾಮಾನಮೇವ ಚ||

06047003a ದುಃಶಾಸನಾದೀನ್ ಭ್ರಾತೄಂಶ್ಚ ಸ ಸರ್ವಾನೇವ ಭಾರತ|

06047003c ಅನ್ಯಾಂಶ್ಚ ಸುಬಹೂನ್ ಶೂರಾನ್ಯುದ್ಧಾಯ ಸಮುಪಾಗತಾನ್||

06047004a ಪ್ರಾಹೇದಂ ವಚನಂ ಕಾಲೇ ಹರ್ಷಯಂಸ್ತನಯಸ್ತವ|

ಸಂಜಯನು ಹೇಳಿದನು: “ಭಾರತ! ಆಗ ಅಮಿತತೇಜಸ ಪಾರ್ಥರ ಮಹಾಘೋರ ಅಭೇದ್ಯ ಕ್ರೌಂಚವ್ಯೂಹವನ್ನು ನೋಡಿ ನಿನ್ನ ಮಗನು ಆಚಾರ್ಯ, ಕೃಪ, ಶಲ್ಯ, ಸೌಮದತ್ತಿ, ವಿಕರ್ಣ, ಅಶ್ವತ್ಥಾಮ, ದುಃಶಾಸನನೇ ಮೊದಲಾದ ಸಹೋದರರೆಲ್ಲರ ಹಾಗೂ ಯುದ್ಧಕ್ಕಾಗಿ ಸೇರಿರುವ ಬಹಳಷ್ಟು ಅನ್ಯ ಶೂರರ ಬಳಿಸಾರಿ ಅವರನ್ನು ಹರ್ಷಗೊಳಿಸುತ್ತಾ ಕಾಲಕ್ಕೆ ತಕ್ಕುದಾದ ಈ ಮಾತನ್ನು ಆಡಿದನು:

06047004c ನಾನಾಶಸ್ತ್ರಪ್ರಹರಣಾಃ ಸರ್ವೇ ಶಸ್ತ್ರಾಸ್ತ್ರವೇದಿನಃ||

06047005a ಏಕೈಕಶಃ ಸಮರ್ಥಾ ಹಿ ಯೂಯಂ ಸರ್ವೇ ಮಹಾರಥಾಃ|

06047005c ಪಾಂಡುಪುತ್ರಾನ್ರಣೇ ಹಂತುಂ ಸಸೈನ್ಯಾನ್ಕಿಮು ಸಂಹತಾಃ||

“ನೀವೆಲ್ಲರೂ ನಾನಾ ಶಸ್ತ್ರಪ್ರಹರಣಮಾಡಬಲ್ಲರಿ ಮತ್ತು ಶಸ್ತ್ರಾಸ್ತ್ರಗಳನ್ನು ತಿಳಿದಿರುವಿರಿ. ನೀವೆಲ್ಲರಲ್ಲಿ ಒಬ್ಬೊಬ್ಬರೂ ಸೈನ್ಯದೊಂದಿಗಿರುವ ಪಾಂಡುಪುತ್ರರನ್ನು ರಣದಲ್ಲಿ ಕೊಲ್ಲಲು ಸಮರ್ಥರಾಗಿದ್ದೀರಿ. ನೀವೆಲ್ಲ ಒಟ್ಟಿಗೆ ಇರುವಾಗ ಇನ್ನೇನು?

06047006a ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಂ|

06047006c ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಪಾರ್ಥಿವಸತ್ತಮಾಃ||

ಭೀಷ್ಮನಿಂದ ರಕ್ಷಿತವಾದ ನಮ್ಮ ಸೇನೆಯು ಅಪರ್ಯಾಪ್ತವಾದುದು. ಆದರೆ ಪಾರ್ಥಿವಸತ್ತಮರ ಅವರ ಬಲವು ಪರ್ಯಾಪ್ತವಾದುದು.

06047007a ಸಂಸ್ಥಾನಾಃ ಶೂರಸೇನಾಶ್ಚ ವೇಣಿಕಾಃ ಕುಕುರಾಸ್ತಥಾ|

06047007c ಆರೇವಕಾಸ್ತ್ರಿಗರ್ತಾಶ್ಚ ಮದ್ರಕಾ ಯವನಾಸ್ತಥಾ||

06047008a ಶತ್ರುಂಜಯೇನ ಸಹಿತಾಸ್ತಥಾ ದುಃಶಾಸನೇನ ಚ|

06047008c ವಿಕರ್ಣೇನ ಚ ವೀರೇಣ ತಥಾ ನಂದೋಪನಂದಕೈಃ||

06047009a ಚಿತ್ರಸೇನೇನ ಸಹಿತಾಃ ಸಹಿತಾಃ ಪಾಣಿಭದ್ರಕೈಃ|

06047009c ಭೀಷ್ಮಮೇವಾಭಿರಕ್ಷಂತು ಸಹ ಸೈನ್ಯಪುರಸ್ಕೃತಾಃ||

ಸಂಸ್ಥಾನಿಕರು, ಶೂರಸೇನರು, ವೇಣಿಕರು, ಕುಕುರರು, ಆರೇವಕರು, ತ್ರಿಗರ್ತರು, ಮದ್ರಕರು, ಯವನರು ಶತ್ರುಂಜಯನ ಸಹಿತ ಮತ್ತು ದುಃಶಾಸನ, ವೀರ ವಿಕರ್ಣ, ನಂದೋಪನಂದಕರು ಮತ್ತು ಚಿತ್ರಸೇನನ ಸಹಿತ, ಪಾಣಿಭದ್ರಕರ ಸಹಿತ ಸೈನ್ಯವನ್ನು ಮುಂದಿಟ್ಟುಕೊಂಡು ಭೀಷ್ಮನನ್ನು ರಕ್ಷಿಸಲಿ.”

06047010a ತತೋ ದ್ರೋಣಶ್ಚ ಭೀಷ್ಮಶ್ಚ ತವ ಪುತ್ರಶ್ಚ ಮಾರಿಷ|

06047010c ಅವ್ಯೂಹಂತ ಮಹಾವ್ಯೂಹಂ ಪಾಂಡೂನಾಂ ಪ್ರತಿಬಾಧನೇ||

ಆಗ ಪಾಂಡವರನ್ನು ಪ್ರತಿಬಾಧಿಸಲು ದ್ರೋಣ, ಭೀಷ್ಮ ಮತ್ತು ನಿನ್ನ ಪುತ್ರರು ಮಹಾವ್ಯೂಹವನ್ನು ರಚಿಸಿದರು.

06047011a ಭೀಷ್ಮಃ ಸೈನ್ಯೇನ ಮಹತಾ ಸಮಂತಾತ್ಪರಿವಾರಿತಃ|

06047011c ಯಯೌ ಪ್ರಕರ್ಷನ್ಮಹತೀಂ ವಾಹಿನೀಂ ಸುರರಾಡಿವ||

ಮಹಾಸೇನೆಯಿಂದ ಎಲ್ಲ ಕಡೆಗಳಿಂದಲೂ ಸುತ್ತುವರೆಯಲ್ಪಟ್ಟು ಭೀಷ್ಮನು ಸುರರಾಜನಂತೆ ಮಹಾ ಸೇನೆಯನ್ನು ಎಳೆದುಕೊಂಡು ಹೋದನು.

06047012a ತಮನ್ವಯಾನ್ಮಹೇಷ್ವಾಸೋ ಭಾರದ್ವಾಜಃ ಪ್ರತಾಪವಾನ್|

06047012c ಕುಂತಲೈಶ್ಚ ದಶಾರ್ಣೈಶ್ಚ ಮಾಗಧೈಶ್ಚ ವಿಶಾಂ ಪತೇ||

06047013a ವಿದರ್ಭೈರ್ಮೇಕಲೈಶ್ಚೈವ ಕರ್ಣಪ್ರಾವರಣೈರಪಿ|

06047013c ಸಹಿತಾಃ ಸರ್ವಸೈನ್ಯೇನ ಭೀಷ್ಮಮಾಹವಶೋಭಿನಂ||

ವಿಶಾಂಪತೇ! ಅವನನ್ನು ಹಿಂಬಾಲಿಸಿ ಪ್ರತಾಪವಾನ್ ಮಹೇಷ್ವಾಸ ಭಾರದ್ವಾಜನು ಕುಂತಲ, ದಶಾರ್ಣ, ಮಾಗಧ, ವಿದರ್ಭ, ಮೇಕಲ, ಮತ್ತು ಕರ್ಣಪ್ರಾವರರ ಸರ್ವಸೇನೆಗಳ ಸಹಿತ ಭೀಷ್ಮನ ಯುದ್ಧವನ್ನು ಶೋಭಿಸುತ್ತಾ ನಡೆದನು.

06047014a ಗಾಂಧಾರಾಃ ಸಿಂಧುಸೌವೀರಾಃ ಶಿಬಯೋಽಥ ವಸಾತಯಃ|

06047014c ಶಕುನಿಶ್ಚ ಸ್ವಸೈನ್ಯೇನ ಭಾರದ್ವಾಜಮಪಾಲಯತ್||

ಗಾಂಧಾರರು, ಸಿಂಧು-ಸೌವೀರರು, ಶಿಬಿ, ವಸಾತಯರು ಮತ್ತು ಶಕುನಿಯರು ಸ್ವಸೇನೆಗಳೊಂದಿಗೆ ಭಾರದ್ವಾಜನನ್ನು ರಕ್ಷಿಸಿದರು.

06047015a ತತೋ ದುರ್ಯೋಧನೋ ರಾಜಾ ಸಹಿತಃ ಸರ್ವಸೋದರೈಃ|

06047015c ಅಶ್ವಾತಕೈರ್ವಿಕರ್ಣೈಶ್ಚ ತಥಾ ಶರ್ಮಿಲಕೋಸಲೈಃ||

06047016a ದರದೈಶ್ಚೂಚುಪೈಶ್ಚೈವ ತಥಾ ಕ್ಷುದ್ರಕಮಾಲವೈಃ|

06047016c ಅಭ್ಯರಕ್ಷತ ಸಂಹೃಷ್ಟಃ ಸೌಬಲೇಯಸ್ಯ ವಾಹಿನೀಂ||

ಆಗ ರಾಜಾ ದುರ್ಯೋಧನನು ಸರ್ವಸೋದರರೊಂದಿಗೆ ಅಶ್ವಾತಕ-ವಿಕರ್ಣ-ಶರ್ಮಿಲ-ಕೋಸಲ-ದರದ-ಚೂಚುಪ-ಕ್ಷುದ್ರಕ-ಮಾಲವರನ್ನು ಕೂಡಿಕೊಂಡು ಸಂತೋಷದಿಂದ ಸೌಬಲನ ವಾಹಿನಿಯನ್ನು ರಕ್ಷಿಸಿದನು.

06047017a ಭೂರಿಶ್ರವಾಃ ಶಲಃ ಶಲ್ಯೋ ಭಗದತ್ತಶ್ಚ ಮಾರಿಷ|

06047017c ವಿಂದಾನುವಿಂದಾವಾವಂತ್ಯೌ ವಾಮಂ ಪಾರ್ಶ್ವಮಪಾಲಯನ್||

ಮಾರಿಷ! ಭೂರಿಶ್ರವ, ಶಲ, ಶಲ್ಯ, ಭಗದತ್ತ, ಮತ್ತು ಅವಂತಿಯ ವಿಂದಾನುವಿಂದರು ಎಡಪಾರ್ಶ್ವವನ್ನು ರಕ್ಷಿಸುತ್ತಿದ್ದರು.

06047018a ಸೌಮದತ್ತಿಃ ಸುಶರ್ಮಾ ಚ ಕಾಂಬೋಜಶ್ಚ ಸುದಕ್ಷಿಣಃ|

06047018c ಶತಾಯುಶ್ಚ ಶ್ರುತಾಯುಶ್ಚ ದಕ್ಷಿಣಂ ಪಾರ್ಶ್ವಮಾಸ್ಥಿತಾಃ||

ಸೌಮದತ್ತಿ, ಸುಶರ್ಮ, ಕಾಂಬೋಜ, ಸುದಕ್ಷಿಣ, ಶತಾಯು, ಶ್ರುತಾಯುಗಳು ಬಲಭಾಗದಲ್ಲಿದ್ದರು.

06047019a ಅಶ್ವತ್ಥಾಮಾ ಕೃಪಶ್ಚೈವ ಕೃತವರ್ಮಾ ಚ ಸಾತ್ವತಃ|

06047019c ಮಹತ್ಯಾ ಸೇನಯಾ ಸಾರ್ಧಂ ಸೇನಾಪೃಷ್ಠೇ ವ್ಯವಸ್ಥಿತಾಃ||

ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮರು ಒಟ್ಟಿಗೇ ಮಹಾಸೇನೆಗಳೊಂದಿಗೆ ಸೇನೆಯ ಪೃಷ್ಠಭಾಗದಲ್ಲಿದ್ದರು.

06047020a ಪೃಷ್ಠಗೋಪಾಸ್ತು ತಸ್ಯಾಸನ್ನಾನಾದೇಶ್ಯಾ ಜನೇಶ್ವರಾಃ|

06047020c ಕೇತುಮಾನ್ವಸುದಾನಶ್ಚ ಪುತ್ರಃ ಕಾಶ್ಯಸ್ಯ ಚಾಭಿಭೂಃ||

ಅವರನ್ನು ಹಿಂಬಾಲಿಸಿ ಹೋಗುತ್ತಿದ್ದ ನಾನಾ ದೇಶಗಳ ಜನೇಶ್ವರರು, ಕೇತುಮಾನ್, ವಸುದಾನ ಮತ್ತು ಕಾಶ್ಯನ ಮಗ ಅಭಿಭೂ ಇವರು ಹಿಂಭಾಗವನ್ನು ರಕ್ಷಿಸಿದರು.

06047021a ತತಸ್ತೇ ತಾವಕಾಃ ಸರ್ವೇ ಹೃಷ್ಟಾ ಯುದ್ಧಾಯ ಭಾರತ|

06047021c ದಧ್ಮುಃ ಶಂಖಾನ್ಮುದಾ ಯುಕ್ತಾಃ ಸಿಂಹನಾದಾಂಶ್ಚ ನಾದಯನ್||

ಭಾರತ! ಆಗ ನಿನ್ನವರೆಲ್ಲರೂ ಯುದ್ಧಕ್ಕೆ ಹರ್ಷಿತರಾಗಿ ಶಂಖಗಳನ್ನು ಊದಿದರು ಮತ್ತು ಮುದಿತರಾಗಿ ಸಿಂಹನಾದಗೈದರು.

06047022a ತೇಷಾಂ ಶ್ರುತ್ವಾ ತು ಹೃಷ್ಟಾನಾಂ ಕುರುವೃದ್ಧಃ ಪಿತಾಮಹಃ|

06047022c ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್||

ಹೃಷ್ಟರಾಗಿದ್ದ ಅವರನ್ನು ಕೇಳಿ ಕುರುವೃದ್ಧ ಪಿತಾಮಹ ಪ್ರತಾಪವಾನನು ಸಿಂಹನಾದವನ್ನು ಮಾಡಿ ಜೋರಾಗಿ ಶಂಖವನ್ನು ಊದಿದನು.

06047023a ತತಃ ಶಂಖಾಶ್ಚ ಭೇರ್ಯಶ್ಚ ಪೇಶ್ಯಶ್ಚ ವಿವಿಧಾಃ ಪರೈಃ|

06047023c ಆನಕಾಶ್ಚಾಭ್ಯಹನ್ಯಂತ ಸ ಶಬ್ದಸ್ತುಮುಲೋಽಭವತ್||

ಆಗ ಶಂಖ, ಭೇರಿ, ಪಣವ, ಢಕ್ಕೆ, ಮೃದಂಗ, ಅನಕ ಮೊದಲಾದವುಗಳು ಮೊಳಗಿದವು ಮತ್ತು ತುಮುಲಶಬ್ದವುಂಟಾಯಿತು.

06047024a ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸ್ಯಂದನೇ ಸ್ಥಿತೌ|

06047024c ಪ್ರದಧ್ಮತುಃ ಶಂಖವರೌ ಹೇಮರತ್ನಪರಿಷ್ಕೃತೌ||

ಶ್ವೇತಹಯಗಳನ್ನು ಕಟ್ಟಿದ್ದ ಮಹಾ ರಥದಲ್ಲಿ ಕುಳಿತಿದ್ದ ಕೃಷ್ಣಾರ್ಜುನರಿಬ್ಬರೂ ಹೇಮರತ್ನ ಪರಿಷ್ಕೃತವಾದ ಶ್ರೇಷ್ಠ ಶಂಖಗಳನ್ನು ಊದಿದರು.

06047025a ಪಾಂಚಜನ್ಯಂ ಹೃಷೀಕೇಶೋ ದೇವದತ್ತಂ ಧನಂಜಯಃ|

06047025c ಪೌಂಡ್ರಂ ದಧ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರಃ||

06047026a ಅನಂತವಿಜಯಂ ರಾಜಾ ಕುಂತೀಪುತ್ರೋ ಯುಧಿಷ್ಠಿರಃ|

06047026c ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ||

ಹೃಷೀಕೇಶನು ಪಾಂಚಜನ್ಯವನ್ನೂ, ಧನಂಜಯನು ದೇವದತ್ತವನ್ನೂ, ಭೀಮಕರ್ಮಿ ವೃಕೋದರನು ಮಹಾಶಂಖ ಪೌಂಡ್ರವನ್ನೂ, ರಾಜಾ ಕುಂತೀಪುತ್ರ ಯುಧಿಷ್ಠಿರನು ಅನಂತವಿಜಯವನ್ನೂ, ನಕುಲ-ಸಹದೇವರು ಸುಘೋಷ-ಮಣಿಪುಷ್ಪಕಗಳನ್ನೂ ಊದಿದರು.

06047027a ಕಾಶಿರಾಜಶ್ಚ ಶೈಬ್ಯಶ್ಚ ಶಿಖಂಡೀ ಚ ಮಹಾರಥಃ|

06047027c ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚ ಮಹಾಯಶಾಃ||

06047028a ಪಾಂಚಾಲ್ಯಶ್ಚ ಮಹೇಷ್ವಾಸೋ ದ್ರೌಪದ್ಯಾಃ ಪಂಚ ಚಾತ್ಮಜಾಃ|

06047028c ಸರ್ವೇ ದಧ್ಮುರ್ಮಹಾಶಂಖಾನ್ಸಿಂಹನಾದಾಂಶ್ಚ ನೇದಿರೇ||

ಕಾಶಿರಾಜ, ಶೈಭ್ಯ, ಮಹಾರಥ ಶಿಖಂಡೀ, ಧೃಷ್ಟದ್ಯುಮ್ನ, ವಿರಾಟ, ಮಹಾಯಶ ಸಾತ್ಯಕಿ, ಮಹೇಷ್ವಾಸ ಪಾಂಚಾಲ್ಯ, ಮತ್ತು ದ್ರೌಪದಿಯ ಐವರು ಮಕ್ಕಳೂ ಎಲ್ಲರೂ ಮಹಾಶಂಖಗಳನ್ನು ಊದಿದರು ಮತ್ತು ಸಿಂಹನಾದ ಗೈದರು.

06047029a ಸ ಘೋಷಃ ಸುಮಹಾಂಸ್ತತ್ರ ವೀರೈಸ್ತೈಃ ಸಮುದೀರಿತಃ|

06047029c ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನುನಾದಯತ್||

ಅಲ್ಲಿ ಸೇರಿದ್ದ ವೀರರ ಆ ಸುಮಹಾ ಘೋಷದ ತುಮುಲವು ಭೂಮಿ-ಆಕಾಶಗಳಲ್ಲಿ ಮೊಳಗಿತು.

06047030a ಏವಮೇತೇ ಮಹಾರಾಜ ಪ್ರಹೃಷ್ಟಾಃ ಕುರುಪಾಂಡವಾಃ|

06047030c ಪುನರ್ಯುದ್ಧಾಯ ಸಂಜಗ್ಮುಸ್ತಾಪಯಾನಾಃ ಪರಸ್ಪರಂ||

ಹೀಗೆ ಮಹಾರಾಜ! ಪ್ರಹೃಷ್ಟರಾದ ಕುರುಪಾಂಡವರು ಪರಸ್ಪರರನ್ನು ಸುಡುತ್ತಾ ಪುನಃ ಯುದ್ಧಕ್ಕೆ ತೊಡಗಿದರು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಕೌರವವ್ಯೂಹರಚನಾಯಾಂ ಸಪ್ತಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಕೌರವವ್ಯೂಹರಚನೆ ಎನ್ನುವ ನಲ್ವತ್ತೇಳನೇ ಅಧ್ಯಾಯವು.

Image result for flowers against white background

Comments are closed.