Bhishma Parva: Chapter 20

ಭೀಷ್ಮ ಪರ್ವ: ಭಗವದ್ಗೀತಾ ಪರ್ವ

೨೦

ಸೈನ್ಯವರ್ಣನೆ (೧-೨೦).

06020001 ಧೃತರಾಷ್ಟ್ರ ಉವಾಚ|

06020001a ಸೂರ್ಯೋದಯೇ ಸಂಜಯ ಕೇ ನು ಪೂರ್ವಂ

        ಯುಯುತ್ಸವೋ ಹೃಷ್ಯಮಾಣಾ ಇವಾಸನ್|

06020001c ಮಾಮಕಾ ವಾ ಭೀಷ್ಮನೇತ್ರಾಃ ಸಮೀಕೇ

        ಪಾಂಡವಾ ವಾ ಭೀಮನೇತ್ರಾಸ್ತದಾನೀಂ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಸೂರ್ಯೋದಯವಾದಾಗ ಯಾರು ಹರ್ಷಿತರಾಗಿ ಇನ್ನೊಬ್ಬರ ಮೇಲೆ ಆಕ್ರಮಣ ಮಾಡಿದರು? ಭೀಷ್ಮನ ನೇತ್ರತ್ವದಲ್ಲಿದ್ದ ನನ್ನವರ ಸೇನೆಯೋ ಅಥವಾ ಭೀಮನ ನೇತೃತ್ವದಲ್ಲಿದ್ದ ಪಾಂಡವರ ಸೇನೆಯೋ?

06020002a ಕೇಷಾಂ ಜಘನ್ಯೌ ಸೋಮಸೂರ್ಯೌ ಸವಾಯೂ

        ಕೇಷಾಂ ಸೇನಾಂ ಶ್ವಾಪದಾ ವ್ಯಾಭಷಂತ|

06020002c ಕೇಷಾಂ ಯೂನಾಂ ಮುಖವರ್ಣಾಃ ಪ್ರಸನ್ನಾಃ

        ಸರ್ವಂ ಹ್ಯೇತದ್ಬ್ರೂಹಿ ತತ್ತ್ವಂ ಯಥಾವತ್||

ಯಾರ ಕಡೆ ಸೂರ್ಯ, ಚಂದ್ರ ಮತ್ತು ವಾಯುವು ಹೊಡೆದರು? ಯಾವ ಸೇನೆಯಲ್ಲಿ ಶ್ವಾಪದಗಳು ಬೊಗಳಿದವು? ಯಾರ ಕಡೆಯ ಯುವಕರ ಮುಖಗಳು ಪ್ರಸನ್ನವಾಗಿದ್ದವು? ಇವೆಲ್ಲವನ್ನೂ ಯಥಾವತ್ತಾಗಿ ವಿವರಿಸಿ ಹೇಳು.”

06020003 ಸಂಜಯ ಉವಾಚ|

06020003a ಉಭೇ ಸೇನೇ ತುಲ್ಯಮಿವೋಪಯಾತೇ

        ಉಭೇ ವ್ಯೂಹೇ ಹೃಷ್ಟರೂಪೇ ನರೇಂದ್ರ|

06020003c ಉಭೇ ಚಿತ್ರೇ ವನರಾಜಿಪ್ರಕಾಶೇ

        ತಥೈವೋಭೇ ನಾಗರಥಾಶ್ವಪೂರ್ಣೇ||

ಸಂಜಯನು ಹೇಳಿದನು: “ನರೇಂದ್ರ! ಎರಡೂ ಸೇನೆಗಳ ವ್ಯೂಹಗಳೂ ಸಮನಾಗಿ ಹೃಷ್ಟರೂಪವಾಗಿದ್ದವು. ಎರಡೂ ಸೇನೆಗಳೂ ಸಮನಾಗಿ ವನರಾಜಿಯಂತೆ ಪ್ರಕಾಶಿತರಾಗಿ ಸುಂದರವಾಗಿದ್ದವು. ಅವೆರಡೂ ಆನೆ-ರಥ-ಅಶ್ವಗಳಿಂದ ಪೂರ್ಣಗೊಂಡಿದ್ದವು.

06020004a ಉಭೇ ಸೇನೇ ಬೃಹತೀ ಭೀಮರೂಪೇ

        ತಥೈವೋಭೇ ಭಾರತ ದುರ್ವಿಷಹ್ಯೇ|

06020004c ತಥೈವೋಭೇ ಸ್ವರ್ಗಜಯಾಯ ಸೃಷ್ಟೇ

        ತಥಾ ಹ್ಯುಭೇ ಸತ್ಪುರುಷಾರ್ಯಗುಪ್ತೇ||

ಭಾರತ! ಎರಡೂ ಸೇನೆಗಳೂ ದೊಡ್ಡವಾಗಿದ್ದವು ಮತ್ತು ಭೀಮರೂಪಿಗಳಾಗಿದ್ದವು. ಎರಡೂ ಒಬ್ಬರನ್ನೊಬ್ಬರು ಸಹಿಸಿಕೊಳ್ಳಲಾರದಂತಿದ್ದವು. ಎರಡೂ ಕಡೆಯವರು ಸ್ವರ್ಗವನ್ನೇ ಜಯಿಸಬಲ್ಲರೋ ಎಂದು ತೋರುತ್ತಿದ್ದವು. ಎರಡೂ ಕಡೆಯವರೂ ಸತ್ಪುರುಷರಿಂದ ರಕ್ಷಿಸಲ್ಪಟ್ಟಿದ್ದರು.

06020005a ಪಶ್ಚಾನ್ಮುಖಾಃ ಕುರವೋ ಧಾರ್ತರಾಷ್ಟ್ರಾಃ

        ಸ್ಥಿತಾಃ ಪಾರ್ಥಾಃ ಪ್ರಾಙ್ಮುಖಾ ಯೋತ್ಸ್ಯಮಾನಾಃ|

06020005c ದೈತ್ಯೇಂದ್ರಸೇನೇವ ಚ ಕೌರವಾಣಾಂ

        ದೇವೇಂದ್ರಸೇನೇವ ಚ ಪಾಂಡವಾನಾಂ||

ಧಾರ್ತರಾಷ್ಟ್ರರ ಕೌರವ ಸೇನೆಯು ಪಶ್ಚಿಮಕ್ಕೆ ಮುಖಮಾಡಿತ್ತು. ಪಾಂಡವರು ಪೂರ್ವದಿಕ್ಕಿಗೆ ಮುಖಮಾಡಿ ಯುದ್ಧಮಾಡುವವರಿದ್ದರು. ಕೌರವರದ್ದು ದೈತ್ಯೇಂದ್ರನ ಸೇನೆಯಂತಿತ್ತು. ಪಾಂಡವರದ್ದು ದೇವೇಂದ್ರಸೇನೆಯಂತಿತ್ತು.

06020006a ಶುಕ್ರೋ ವಾಯುಃ ಪೃಷ್ಠತಃ ಪಾಂಡವಾನಾಂ

        ಧಾರ್ತರಾಷ್ಟ್ರಾಂ ಶ್ವಾಪದಾ ವ್ಯಾಭಷಂತ|

06020006c ಗಜೇಂದ್ರಾಣಾಂ ಮದಗಂಧಾಂಶ್ಚ ತೀವ್ರಾನ್

        ನ ಸೇಹಿರೇ ತವ ಪುತ್ರಸ್ಯ ನಾಗಾಃ||

ಪಾಂಡವರ ಹಿಂದಿನಿಂದ ಗಾಳಿಯು ಬೀಸಿತು, ಧಾರ್ತರಾಷ್ಟ್ರರಲ್ಲಿ ಶ್ವಾಪದಗಳು ಬೊಗಳಿದವು. ನಿನ್ನ ಪುತ್ರನ ಆನೆಗಳು ಅವರ ಗಜೇಂದ್ರರ ತೀವ್ರ ಮದಗಂಧವನ್ನು ಸಹಿಸಲಾರದೇ ಹೋದವು.

06020007a ದುರ್ಯೋಧನೋ ಹಸ್ತಿನಂ ಪದ್ಮವರ್ಣಂ

        ಸುವರ್ಣಕಕ್ಷ್ಯಂ ಜಾತಿಬಲಂ ಪ್ರಭಿನ್ನಂ|

06020007c ಸಮಾಸ್ಥಿತೋ ಮಧ್ಯಗತಃ ಕುರೂಣಾಂ

        ಸಂಸ್ತೂಯಮಾನೋ ಬಂದಿಭಿರ್ಮಾಗಧೈಶ್ಚ||

ಕುರುಗಳ ಮಧ್ಯದಲ್ಲಿ ದುರ್ಯೋಧನನು ಮದವೊಡೆದ, ಬಲವಾದ ಜಾತಿಯ, ಪದ್ಮವರ್ಣದ ಆನೆಯ ಮೇಲೆ ಸುವರ್ಣದ ಕಕ್ಷೆಯಲ್ಲಿ ಕುಳಿತಿದ್ದನು. ಬಂದಿ-ಮಾಗಧರು ಅವನನ್ನು ಸಂಸ್ತುತಿಸುತ್ತಿದ್ದರು.

06020008a ಚಂದ್ರಪ್ರಭಂ ಶ್ವೇತಮಸ್ಯಾತಪತ್ರಂ

        ಸೌವರ್ಣೀ ಸ್ರಗ್ ಭ್ರಾಜತೇ ಚೋತ್ತಮಾಂಗೇ|

06020008c ತಂ ಸರ್ವತಃ ಶಕುನಿಃ ಪಾರ್ವತೀಯೈಃ

        ಸಾರ್ಧಂ ಗಾಂಧಾರೈಃ ಪಾತಿ ಗಾಂಧಾರರಾಜಃ||

ಬಂಗಾರದ ಸರಪಳಿಯಿದ್ದ ಚಂದ್ರಪ್ರಭೆಯ ಶ್ವೇತಛತ್ರವು ಅವನ ಶಿರದ ಮೇಲೆ ಹೊಳೆಯುತ್ತಿತ್ತು. ಅವನನ್ನು ಸತ್ತುವರೆದು ಗಾಂಧಾರರಾಜ ಶಕುನಿಯು ಪರ್ವತೇಯರು ಮತ್ತು ಗಾಂಧಾರರೊಂದಿಗೆ ರಕ್ಷಿಸುತ್ತಿದ್ದನು.

06020009a ಭೀಷ್ಮೋಽಗ್ರತಃ ಸರ್ವಸೈನ್ಯಸ್ಯ ವೃದ್ಧಃ

        ಶ್ವೇತಚ್ಛತ್ರಃ ಶ್ವೇತಧನುಃ ಸಶಂಖಃ|

06020009c ಶ್ವೇತೋಷ್ಣೀಷಃ ಪಾಂಡುರೇಣ ಧ್ವಜೇನ

        ಶ್ವೇತೈರಶ್ವೈಃ ಶ್ವೇತಶೈಲಪ್ರಕಾಶಃ||

ಸರ್ವಸೇನೆಗಳ ಅಗ್ರಸ್ಥಾನದಲ್ಲಿದ್ದ ವೃದ್ಧ ಭೀಷ್ಮನು ಶ್ವೇತ ಛತ್ರ, ಶ್ವೇತ ಧನುಸ್ಸು ಮತ್ತು ಶಂಖಗಳು, ಶ್ವೇತ ಕಿರೀಟ, ಶ್ವೇತ ಧ್ವಜ, ಮತ್ತು ಶ್ವೇತ ಅಶ್ವಗಳೊಂದಿಗೆ ಶ್ವೇತಶೈಲದಂತೆ ಪ್ರಕಾಶಿಸುತ್ತಿದ್ದನು.

06020010a ತಸ್ಯ ಸೈನ್ಯಂ ಧಾರ್ತರಾಷ್ಟ್ರಾಶ್ಚ ಸರ್ವೇ

        ಬಾಹ್ಲೀಕಾನಾಮೇಕದೇಶಃ ಶಲಶ್ಚ|

06020010c ಯೇ ಚಾಂಬಷ್ಠಾಃ ಕ್ಷತ್ರಿಯಾ ಯೇ ಚ ಸಿಂಧೌ

        ತಥಾ ಸೌವೀರಾಃ ಪಂಚನದಾಶ್ಚ ಶೂರಾಃ||

ಅವನ ಸೇನೆಯಲ್ಲಿ ಧೃತರಾಷ್ಟ್ರನ ಎಲ್ಲ ಮಕ್ಕಳೂ, ಬಾಹ್ಲೀಕ ದೇಶದ ನಾಯಕ ಶಲ, ಅಂಬಷ್ಠರೆಂಬ ಕ್ಷತ್ರಿಯರು, ಹಾಗೆಯೇ ಸಿಂಧು ಮತ್ತು ಪಂಚನದಿಗಳ ಶೂರ ಸೌವೀರರು ಇದ್ದರು.

06020011a ಶೋಣೈರ್ಹಯೈ ರುಕ್ಮರಥೋ ಮಹಾತ್ಮಾ

        ದ್ರೋಣೋ ಮಹಾಬಾಹುರದೀನಸತ್ತ್ವಃ|

06020011c ಆಸ್ತೇ ಗುರುಃ ಪ್ರಯಶಾಃ ಸರ್ವರಾಜ್ಞಾಂ

        ಪಶ್ಚಾಚ್ಚಮೂಮಿಂದ್ರ ಇವಾಭಿರಕ್ಷನ್||

ಸರ್ವರಾಜರ ಗುರು ಮಹಾಬಾಹು ದೀನಸತ್ವ ಮಹಾತ್ಮ ದ್ರೋಣನು ಕೆಂಪು ಕುದುರೆಗಳನ್ನು ಕಟ್ಟಿದ್ದ ಬಂಗಾರದ ರಥದಲ್ಲಿ ಇಂದ್ರನಂತೆ ಹಿಂದಿನಿಂದ ರಕ್ಷಿಸುತ್ತಿದ್ದನು.

06020012a ವಾರ್ದ್ಧಕ್ಷತ್ರಿಃ ಸರ್ವಸೈನ್ಯಸ್ಯ ಮಧ್ಯೇ

        ಭೂರಿಶ್ರವಾಃ ಪುರುಮಿತ್ರೋ ಜಯಶ್ಚ|

06020012c ಶಾಲ್ವಾ ಮತ್ಸ್ಯಾಃ ಕೇಕಯಾಶ್ಚಾಪಿ ಸರ್ವೇ

        ಗಜಾನೀಕೈರ್ಭ್ರಾತರೋ ಯೋತ್ಸ್ಯಮಾನಾಃ||

ಎಲ್ಲ ಸೇನೆಗಳ ಮಧ್ಯೆ ವಾರ್ದ್ಧಕ್ಷತ್ರಿ, ಭೂರಿಶ್ರವ, ಪುರುಮಿತ್ರ, ಜಯ, ಶಾಲ್ವ, ಮತ್ಸ್ಯರು, ಕೇಕಯ ಸಹೋದರರು ಎಲ್ಲರೂ ತಮ್ಮ ಆನೆಗಳ ಸೇನೆಗಳೊಂದಿಗೆ ಹೋರಾಡುತ್ತಿದ್ದರು.

06020013a ಶಾರದ್ವತಶ್ಚೋತ್ತರಧೂರ್ಮಹಾತ್ಮಾ

        ಮಹೇಷ್ವಾಸೋ ಗೌತಮಶ್ಚಿತ್ರಯೋಧೀ|

06020013c ಶಕೈಃ ಕಿರಾತೈರ್ಯವನೈಃ ಪಹ್ಲವೈಶ್ಚ

        ಸಾರ್ಧಂ ಚಮೂಂ ಉತ್ತರತೋಽಭಿಪಾತಿ||

ಮಹಾತ್ಮ ಶಾರದ್ವತ ಮಹೇಷ್ವಾಸ ಚಿತ್ರಯೋಧೀ ಗೌತಮನು ಶಕ-ಕಿರಾತ-ಯವನ-ಪಹ್ಲವರ ಸೇನೆಗಳೊಂದಿಗೆ ಉತ್ತರ ದಿಕ್ಕಿಗೆ ಹೋಗಿ ನೆಲೆಸಿದನು.

06020014a ಮಹಾರಥೈರಂಧಕವೃಷ್ಣಿಭೋಜೈಃ

        ಸೌರಾಷ್ಟ್ರಕೈರ್ನೈರೃತೈರಾತ್ತಶಸ್ತ್ರೈಃ|

06020014c ಬೃಹದ್ಬಲಃ ಕೃತವರ್ಮಾಭಿಗುಪ್ತೋ

        ಬಲಂ ತ್ವದೀಯಂ ದಕ್ಷಿಣತೋಽಭಿಪಾತಿ||

ಮಹಾರಥರಾದ ಅಂಧಕ-ವೃಷ್ಣಿ-ಭೋಜ-ಸೌರಾಷ್ಟ್ರರಿಂದ ಉತ್ತಮ ಆಯುಧಗಳನ್ನು ಹೊಂದಿದ್ದ ಮಹಾಬಲವು ಕೃತವರ್ಮನಿಂದ ರಕ್ಷಿತಗೊಂಡು ನಿನ್ನ ಸೇನೆಯ ದಕ್ಷಿಣ ದಿಕ್ಕಿಗೆ ಹೋಗಿ ನಿಂತಿತು.

06020015a ಸಂಶಪ್ತಕಾನಾಮಯುತಂ ರಥಾನಾಂ

        ಮೃತ್ಯುರ್ಜಯೋ ವಾರ್ಜುನಸ್ಯೇತಿ ಸೃಷ್ಟಾಃ|

06020015c ಯೇನಾರ್ಜುನಸ್ತೇನ ರಾಜನ್ಕೃತಾಸ್ತ್ರಾಃ

        ಪ್ರಯಾತಾ ವೈ ತೇ ತ್ರಿಗರ್ತಾಶ್ಚ ಶೂರಾಃ||

ಮೃತ್ಯುವಾಗಲೀ ಜಯವಾಗಲೀ ಅರ್ಜುನನಿಂದಲೇ ಎಂದು ಸೃಷ್ಟಿಸಲ್ಪಟ್ಟಿದ್ದ ಸಂಶಪ್ತಕರೆಂಬ ಹತ್ತು ಸಾವಿರ ಕೃತಾಸ್ತ್ರ ರಥಿಕರು ಅರ್ಜುನನ್ನೇ ಎದುರಿಸಿಸಲು ಶೂರರಾದ ತ್ರಿಗರ್ತರೊಂದಿಗೆ ಹೊರಟರು.

06020016a ಸಾಗ್ರಂ ಶತಸಹಸ್ರಂ ತು ನಾಗಾನಾಂ ತವ ಭಾರತ|

06020016c ನಾಗೇ ನಾಗೇ ರಥಶತಂ ಶತಂ ಚಾಶ್ವಾ ರಥೇ ರಥೇ||

ಭಾರತ! ನಿನ್ನ ಸೇನೆಯಲ್ಲಿ ನೂರು ಸಾವಿರ ಆನೆಗಳಿದ್ದವು. ಪ್ರತಿ ಆನೆಗೆ ನೂರು ರಥಿಕರನ್ನೂ, ಒಂದು ರಥಕ್ಕೆ ನೂರು ಅಶ್ವಯೋಧರನ್ನೂ ಇಡಲಾಗಿತ್ತು.

06020017a ಅಶ್ವೇಽಶ್ವೇ ದಶ ಧಾನುಷ್ಕಾ ಧಾನುಷ್ಕೇ ದಶ ಚರ್ಮಿಣಃ|

06020017c ಏವಂ ವ್ಯೂಢಾನ್ಯನೀಕಾನಿ ಭೀಷ್ಮೇಣ ತವ ಭಾರತ||

ಭಾರತ! ಪ್ರತಿ ಅಶ್ವಯೋಧನಿಗೂ ಹತ್ತು ಧಾನುಷ್ಕರಿದ್ದರು. ಪ್ರತಿ ಧಾನುಷ್ಕನಿಗೂ ಹತ್ತು ಚರ್ಮಿಗಳಿದ್ದರು. ಹೀಗೆ ನಿನ್ನ ಸೇನೆಯನ್ನು ಬೀಷ್ಮನು ವ್ಯೂಹವನ್ನಾಗಿ ರಚಿಸಿದ್ದನು.

06020018a ಅವ್ಯೂಹನ್ಮಾನುಷಂ ವ್ಯೂಹಂ ದೈವಂ ಗಾಂಧರ್ವಮಾಸುರಂ|

06020018c ದಿವಸೇ ದಿವಸೇ ಪ್ರಾಪ್ತೇ ಭೀಷ್ಮಃ ಶಾಂತನವೋಽಗ್ರಣೀಃ||

ದಿವಸ ದಿವಸವೂ ಅಗ್ರಣೀ ಶಾಂತನವ ಭೀಷ್ಮನು ಮಾನುಷ, ದೇವ, ಗಾಂಧರ್ವ, ಅಸುರ ವ್ಯೂಹಗಳನ್ನು ರಚಿಸುತ್ತಿದ್ದನು.

06020019a ಮಹಾರಥೌಘವಿಪುಲಃ ಸಮುದ್ರ ಇವ ಪರ್ವಣಿ|

06020019c ಭೀಷ್ಮೇಣ ಧಾರ್ತರಾಷ್ಟ್ರಾಣಾಂ ವ್ಯೂಹಃ ಪ್ರತ್ಯಙ್ಮುಖೋ ಯುಧಿ||

ವಿಪುಲವಾಗಿ ಮಹಾರಥರಿಂದ ಕೂಡಿದ, ಭೋರಗರೆಯುವ ಸಮುದ್ರದಂತಿರುವ ಧಾರ್ತರಾಷ್ಟ್ರರ ಸೇನೆಯು ಭೀಷ್ಮನಿಂದ ವ್ಯೂಹಗೊಂಡು ಪಶ್ಚಿಮ ಮಖವಾಗಿ ಯುದ್ಧಕ್ಕೆ ನಿಂತಿತು.

06020020a ಅನಂತರೂಪಾ ಧ್ವಜಿನೀ ತ್ವದೀಯಾ

        ನರೇಂದ್ರ ಭೀಮಾ ನ ತು ಪಾಂಡವಾನಾಂ|

06020020c ತಾಂ ತ್ವೇವ ಮನ್ಯೇ ಬೃಹತೀಂ ದುಷ್ಪ್ರಧೃಷ್ಯಾಂ

        ಯಸ್ಯಾ ನೇತಾರೌ ಕೇಶವಶ್ಚಾರ್ಜುನಶ್ಚ||

ನರೇಂದ್ರ! ನಿನ್ನ ಸೇನೆಯು ಅನಂತವಾಗಿಯೂ ಭಯಂಕರವಾಗಿಯೂ ತೋರುತ್ತಿತ್ತು. ಆದರೆ ಕೇಶವ-ಅರ್ಜುನರು ನೇತಾರರಾಗಿದ್ದ ಪಾಂಡವರ ಸೇನೆಯು ನನಗೆ ಅತ್ಯಂತ ದೊಡ್ಡದಾಗಿ, ಗೆಲ್ಲಲಸಾಧ್ಯವಾಗಿ ತೋರುತ್ತಿತ್ತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಸೈನ್ಯವರ್ಣನೇ ವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಸೈನ್ಯವರ್ಣನೆಯೆಂಬ ಇಪ್ಪತ್ತನೇ ಅಧ್ಯಾಯವು.

Image result for flowers against white background

Comments are closed.