Bhishma Parva: Chapter 11

ಭೀಷ್ಮ ಪರ್ವ: ಜಂಬೂಖಂಡವಿನಿರ್ಮಾಣ ಪರ್ವ

೧೧

ಯುಗವರ್ಣನೆ (೧-೧೪)

06011001 ಧೃತರಾಷ್ಟ್ರ ಉವಾಚ|

06011001a ಭಾರತಸ್ಯಾಸ್ಯ ವರ್ಷಸ್ಯ ತಥಾ ಹೈಮವತಸ್ಯ ಚ|

06011001c ಪ್ರಮಾಣಮಾಯುಷಃ ಸೂತ ಫಲಂ ಚಾಪಿ ಶುಭಾಶುಭಂ||

06011002a ಅನಾಗತಮತಿಕ್ರಾಂತಂ ವರ್ತಮಾನಂ ಚ ಸಂಜಯ|

06011002c ಆಚಕ್ಷ್ವ ಮೇ ವಿಸ್ತರೇಣ ಹರಿವರ್ಷಂ ತಥೈವ ಚ||

ಧೃತರಾಷ್ಟ್ರನು ಹೇಳಿದನು: “ಸೂತ! ಸಂಜಯ! ಈ ಭಾರತ ವರ್ಷದ, ಹೈಮವತದ ಮತ್ತು ಹಾಗೆಯೇ ಹರಿವರ್ಷದ ಆಯುಷ್ಯ ಪ್ರಮಾಣಗಳನ್ನೂ, ವರ್ತಮಾನದ, ಕಳೆದುಹೋದ, ಮತ್ತು ಮುಂದೆ ಆಗಲಿರುವ ಶುಭಾಶುಭ ಫಲಗಳನ್ನೂ ವಿಸ್ತಾರವಾಗಿ ನನಗೆ ಹೇಳು.”

06011003 ಸಂಜಯ ಉವಾಚ|

06011003a ಚತ್ವಾರಿ ಭಾರತೇ ವರ್ಷೇ ಯುಗಾನಿ ಭರತರ್ಷಭ|

06011003c ಕೃತಂ ತ್ರೇತಾ ದ್ವಾಪರಂ ಚ ಪುಷ್ಯಂ ಚ ಕುರುವರ್ಧನ||

ಸಂಜಯನು ಹೇಳಿದನು: “ಭರತರ್ಷಭ! ಕುರುವರ್ಧನ! ಭಾರತ ವರ್ಷದಲ್ಲಿ ನಾಲ್ಕು ಯುಗಗಳಿವೆ - ಕೃತ, ತ್ರೇತಾ, ದ್ವಾಪರ ಮತ್ತು ಪುಷ್ಯ.

06011004a ಪೂರ್ವಂ ಕೃತಯುಗಂ ನಾಮ ತತಸ್ತ್ರೇತಾಯುಗಂ ವಿಭೋ|

06011004c ಸಂಕ್ಷೇಪಾದ್ದ್ವಾಪರಸ್ಯಾಥ ತತಃ ಪುಷ್ಯಂ ಪ್ರವರ್ತತೇ||

ವಿಭೋ! ಮೊದಲನೆಯದರ ಹೆಸರು ಕೃತಯುಗ, ಅನಂತರದ್ದು ತ್ರೇತಾಯುಗ. ಅದು ಕಳೆದ ನಂತರ ದ್ವಾಪರ. ಮತ್ತೆ ಪುಷ್ಯಯುಗವು ಬರುತ್ತದೆ.

06011005a ಚತ್ವಾರಿ ಚ ಸಹಸ್ರಾಣಿ ವರ್ಷಾಣಾಂ ಕುರುಸತ್ತಮ|

06011005c ಆಯುಃಸಂಖ್ಯಾ ಕೃತಯುಗೇ ಸಂಖ್ಯಾತಾ ರಾಜಸತ್ತಮ||

ಕುರುಸತ್ತಮ! ರಾಜಸತ್ತಮ! ಕೃತಯುಗದಲ್ಲಿ ಆಯಸ್ಸಿನ ಪ್ರಮಾಣ ನಾಲ್ಕು ಸಾವಿರ ವರ್ಷಗಳು.

06011006a ತಥಾ ತ್ರೀಣಿ ಸಹಸ್ರಾಣಿ ತ್ರೇತಾಯಾಂ ಮನುಜಾಧಿಪ|

06011006c ದ್ವಿಸಹಸ್ರಂ ದ್ವಾಪರೇ ತು ಶತೇ ತಿಷ್ಠತಿ ಸಂಪ್ರತಿ||

ಹಾಗೆಯೇ ಮನುಜಾಧಿಪ! ತ್ರೇತದಲ್ಲಿ ಮೂರು ಸಾವಿರ. ಈಗ ದ್ವಾಪರದಲ್ಲಿ ಸದ್ಯ ಎರಡು ಸಾವಿರ ವರ್ಷಗಳು.

06011007a ನ ಪ್ರಮಾಣಸ್ಥಿತಿರ್ಹ್ಯಸ್ತಿ ಪುಷ್ಯೇಽಸ್ಮಿನ್ಭರತರ್ಷಭ|

06011007c ಗರ್ಭಸ್ಥಾಶ್ಚ ಮ್ರಿಯಂತೇಽತ್ರ ತಥಾ ಜಾತಾ ಮ್ರಿಯಂತಿ ಚ||

ಭರತರ್ಷಭ! ಪುಷ್ಯದಲ್ಲಿ ಇಂತಿಷ್ಟೇ ಪ್ರಮಾಣವೆಂದಿರುವುದಿಲ್ಲ. ಆಗ ಗರ್ಭಾವಸ್ಥೆಯಲ್ಲಿಯೂ ಸಾಯಬಹುದು ಅಥವಾ ಹುಟ್ಟಿದ ಕೂಡಲೇ ಸಾಯಬಹುದು.

06011008a ಮಹಾಬಲಾ ಮಹಾಸತ್ತ್ವಾಃ ಪ್ರಜಾಗುಣಸಮನ್ವಿತಾಃ|

06011008c ಅಜಾಯಂತ ಕೃತೇ ರಾಜನ್ಮುನಯಃ ಸುತಪೋಧನಾಃ||

ರಾಜನ್! ಕೃತಯುಗದಲ್ಲಿ ಮಹಾಬಲರೂ, ಮಹಾಸತ್ವರೂ, ಪ್ರಜಾಗುಣಸಮನ್ವಿತರೂ ಆದ ಮುನಿಗಳು, ಉತ್ತಮ ತಪೋಧನರು ಹುಟ್ಟುತ್ತಾರೆ.

06011009a ಮಹೋತ್ಸಾಹಾ ಮಹಾತ್ಮಾನೋ ಧಾರ್ಮಿಕಾಃ ಸತ್ಯವಾದಿನಃ|

06011009c ಜಾತಾಃ ಕೃತಯುಗೇ ರಾಜನ್ಧನಿನಃ ಪ್ರಿಯದರ್ಶನಾಃ||

ರಾಜನ್! ಕೃತಯುಗದಲ್ಲಿ ಮಹೋತ್ಸಾಹಿಗಳು, ಮಹಾತ್ಮರು, ಧಾರ್ಮಿಕರು, ಸತ್ಯವಾದಿಗಳು, ಧನಿಕರು ಮತ್ತು ಅತೀವ ಸುಂದರರು ಜನಿಸುತ್ತಾರೆ.

06011010a ಆಯುಷ್ಮಂತೋ ಮಹಾವೀರಾ ಧನುರ್ಧರವರಾ ಯುಧಿ|

06011010c ಜಾಯಂತೇ ಕ್ಷತ್ರಿಯಾಃ ಶೂರಾಸ್ತ್ರೇತಾಯಾಂ ಚಕ್ರವರ್ತಿನಃ||

ತ್ರೇತದಲ್ಲಿ ಆಯುಷ್ಮಂತರೂ, ಮಹಾವೀರರೂ, ಯುದ್ಧದಲ್ಲಿ ಶ್ರೇಷ್ಠ ಧನುರ್ಧರರೂ ಆದ ಶೂರ ಕ್ಷತ್ರಿಯ ಚಕ್ರವರ್ತಿಗಳು ಜನಿಸುತ್ತಾರೆ.

06011011a ಸರ್ವವರ್ಣಾ ಮಹಾರಾಜ ಜಾಯಂತೇ ದ್ವಾಪರೇ ಸತಿ|

06011011c ಮಹೋತ್ಸಾಹಾ ಮಹಾವೀರ್ಯಾಃ ಪರಸ್ಪರವಧೈಷಿಣಃ||

ಮಹಾರಾಜ! ದ್ವಾಪರದಲ್ಲಿ ಎಲ್ಲ ವರ್ಣದವರೂ ಮಹೋತ್ಸಾಹಿಗಳಾಗಿಯೂ, ಮಹಾವೀರ್ಯವಂತರಾಗಿಯೂ, ಪರಸ್ಪರರನ್ನು ಸಂಹರಿಸಲು ಇಚ್ಛೆಯುಳ್ಳವರೂ ಆಗಿ ಹುಟ್ಟುತ್ತಾರೆ.

06011012a ತೇಜಸಾಲ್ಪೇನ ಸಂಯುಕ್ತಾಃ ಕ್ರೋಧನಾಃ ಪುರುಷಾ ನೃಪ|

06011012c ಲುಬ್ಧಾಶ್ಚಾನೃತಕಾಶ್ಚೈವ ಪುಷ್ಯೇ ಜಾಯಂತಿ ಭಾರತ||

ಭಾರತ! ಪುಷ್ಯದಲ್ಲಿ ಅಲ್ಪ ತೇಜಸ್ಸುಳ್ಳವರಾಗಿ ಕ್ರೋಧ, ಸೊಕ್ಕು, ದುರಾಸೆ, ಸುಳ್ಳುಗಳಿಂದೊಡಗೂಡಿದವರು ಹುಟ್ಟುತ್ತಾರೆ.

06011013a ಈರ್ಷ್ಯಾ ಮಾನಸ್ತಥಾ ಕ್ರೋಧೋ ಮಾಯಾಸೂಯಾ ತಥೈವ ಚ|

06011013c ಪುಷ್ಯೇ ಭವಂತಿ ಮರ್ತ್ಯಾನಾಂ ರಾಗೋ ಲೋಭಶ್ಚ ಭಾರತ||

ಭಾರತ! ಪುಷ್ಯದಲ್ಲಿ ಮನುಷ್ಯರು ಈರ್ಷೆ, ಮಾನ, ಕ್ರೋಧ, ಮಾಯೆ, ಅಸೂಯೆ, ರಾಗ, ಲೋಭಗಳಿಗೊಳಗಾಗುತ್ತಾರೆ.

06011014a ಸಂಕ್ಷೇಪೋ ವರ್ತತೇ ರಾಜನ್ದ್ವಾಪರೇಽಸ್ಮಿನ್ನರಾಧಿಪ|

06011014c ಗುಣೋತ್ತರಂ ಹೈಮವತಂ ಹರಿವರ್ಷಂ ತತಃ ಪರಂ||

ರಾಜನ್! ನರಾಧಿಪ! ವರ್ತಮಾನದ ದ್ವಾಪರವು ಸ್ವಲ್ಪವೇ ಉಳಿದಿದೆ. ಭಾರತವರ್ಷಕ್ಕಿಂತ ಹೈಮವತ ವರ್ಷದ ಗುಣವು ಹೆಚ್ಚಿನದು. ಹರಿ ವರ್ಷದ ಗುಣವು ಅದಕ್ಕಿಂತಲೂ ಹೆಚ್ಚಿನದು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಭಾರತವರ್ಷೇಕೃತಾದ್ಯನಿರೋಧೇನಾಯುರ್ನಿರೂಪಣೇ ಏಕಾದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಭಾರತವರ್ಷದಲ್ಲಿ ಕೃತಾದಿ ಅನುರೋಧೇನ ಆಯುರ್ನಿರೂಪಣ ಎಂಬ ಹನ್ನೊಂದನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೫/೧೮, ಉಪಪರ್ವಗಳು-೬೧/೧೦೦, ಅಧ್ಯಾಯಗಳು-೮೭೧/೧೯೯೫, ಶ್ಲೋಕಗಳು-೨೮೧೫೨/೭೩೭೮೪

Image result for indian motifs earth"

Comments are closed.