Ashramavasika Parva: Chapter 3

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

ಯುಧಿಷ್ಠಿರನು ಧೃತರಾಷ್ಟ್ರನನ್ನು ಪ್ರೀತಿಯಿಂದಲೇ ನೋಡಿಕೊಂಡಿದುದು; ಆದರೆ ಭೀಮನು ಧೃತರಾಷ್ಟ್ರನ ವಿಷಯದಲ್ಲಿ ಬೇರೆಯೇ ಭಾವವನ್ನಿಟ್ಟುಕೊಂಡಿದುದು (೧-೧೭).

15003001 ವೈಶಂಪಾಯನ ಉವಾಚ|

15003001a ಸ ರಾಜಾ ಸುಮಹಾತೇಜಾ ವೃದ್ಧಃ ಕುರುಕುಲೋದ್ವಹಃ|

15003001c ನಾಪಶ್ಯತ ತದಾ ಕಿಂ ಚಿದಪ್ರಿಯಂ ಪಾಂಡುನಂದನೇ||

ವೈಶಂಪಾಯನನು ಹೇಳಿದನು: “ಆ ಮಹಾತೇಜಸ್ವಿ ವೃದ್ಧ ಕುರುಕುಲೋದ್ವಹ ರಾಜಾ ಧೃತರಾಷ್ಟ್ರನು ಪಾಂಡುನಂದನ ಯುಧಿಷ್ಠಿರನಲ್ಲಿ ಅಪ್ರಿಯವಾದ ಏನೊಂದನ್ನೂ ಕಾಣಲಿಲ್ಲ.

15003002a ವರ್ತಮಾನೇಷು ಸದ್ವೃತ್ತಿಂ ಪಾಂಡವೇಷು ಮಹಾತ್ಮಸು|

15003002c ಪ್ರೀತಿಮಾನಭವದ್ರಾಜಾ ಧೃತರಾಷ್ಟ್ರೋಽಂಬಿಕಾಸುತಃ||

ಮಹಾತ್ಮ ಪಾಂಡವರೊಂದಿಗೆ ಆ ರೀತಿಯ ಸದ್ವೃತ್ತಿಯು ನಡೆಯುತ್ತಿರಲು ಅಂಬಿಕಾಸುತ ರಾಜಾ ಧೃತರಾಷ್ಟ್ರನು ಸಂತೋಷದಿಂದಿದ್ದನು.

15003003a ಸೌಬಲೇಯೀ ಚ ಗಾಂಧಾರೀ ಪುತ್ರಶೋಕಮಪಾಸ್ಯ ತಮ್|

15003003c ಸದೈವ ಪ್ರೀತಿಮತ್ಯಾಸೀತ್ತನಯೇಷು ನಿಜೇಷ್ವಿವ||

ಸೌಬಲೇಯೀ ಗಾಂಧಾರಿಯೂ ಕೂಡ ಪುತ್ರಶೋಕವನ್ನು ತೊರೆದು ಪಾಂಡವರನ್ನು ತನ್ನ ಮಕ್ಕಳಂತೆಯೇ ಸದೈವ ಪ್ರೀತಿಸುತ್ತಿದ್ದಳು. 

15003004a ಪ್ರಿಯಾಣ್ಯೇವ ತು ಕೌರವ್ಯೋ ನಾಪ್ರಿಯಾಣಿ ಕುರೂದ್ವಹ|

15003004c ವೈಚಿತ್ರವೀರ್ಯೇ ನೃಪತೌ ಸಮಾಚರತಿ ನಿತ್ಯದಾ||

ಕೌರವ ಕುರೂದ್ವಹ ಯುಧಿಷ್ಠಿರನೂ ಕೂಡ ವೈಚಿತ್ರವೀರ್ಯ ನೃಪತಿ ಧೃತರಾಷ್ಟ್ರನಿಗೆ ಅಪ್ರಿಯ ಕರ್ಮಗಳನ್ನು ಮಾಡುತ್ತಿರಲಿಲ್ಲ. ನಿತ್ಯವೂ ಅವನಿಗೆ ಸರಿಯಾಗಿಯೇ ನಡೆದುಕೊಂಡಿದ್ದನು.

15003005a ಯದ್ಯದ್ಬ್ರೂತೇ ಚ ಕಿಂ ಚಿತ್ಸ ಧೃತರಾಷ್ಟ್ರೋ ನರಾಧಿಪಃ|

15003005c ಗುರು ವಾ ಲಘು ವಾ ಕಾರ್ಯಂ ಗಾಂಧಾರೀ ಚ ಯಶಸ್ವಿನೀ||

15003006a ತತ್ಸ ರಾಜಾ ಮಹಾರಾಜ ಪಾಂಡವಾನಾಂ ಧುರಂಧರಃ|

15003006c ಪೂಜಯಿತ್ವಾ ವಚಸ್ತತ್ತದಕಾರ್ಷೀತ್ಪರವೀರಹಾ||

ನರಾಧಿಪ ಧೃತರಾಷ್ಟ್ರ ಮತ್ತು ಯಶಸ್ವಿನೀ ಗಾಂಧಾರಿಯರು ಚಿಕ್ಕ ಅಥವಾ ದೊಡ್ಡ ಯಾವ ಕಾರ್ಯವನ್ನೇ ಹೇಳಲಿ ಅವುಗಳನ್ನು ಪಾಂಡವರ ದುರಂಧರ ಪರವೀರಹ ರಾಜಾ ಮಹಾರಾಜ ಯುಧಿಷ್ಠಿರನು, ಅವರ ಮಾತನ್ನು ಗೌರವಿಸಿ, ಮಾಡಿಕೊಡುತ್ತಿದ್ದನು.

15003007a ತೇನ ತಸ್ಯಾಭವತ್ಪ್ರೀತೋ ವೃತ್ತೇನ ಸ ನರಾಧಿಪಃ|

15003007c ಅನ್ವತಪ್ಯಚ್ಚ ಸಂಸ್ಮೃತ್ಯ ಪುತ್ರಂ ಮಂದಮಚೇತಸಮ್||

ಅವನ ಆ ನಡತೆಯಿಂದ ನರಾಧಿಪ ಧೃತರಾಷ್ಟ್ರನು ಪ್ರೀತನಾಗಿದ್ದನು. ಆದರೂ ಮಂದಚೇತಸನಾಗಿದ್ದ ತನ್ನ ಮಗನನ್ನು ನೆನಪಿಸಿಕೊಂಡು ಪಶ್ಚಾತ್ತಾಪ ಪಡುತ್ತಿದ್ದನು.

15003008a ಸದಾ ಚ ಪ್ರಾತರುತ್ಥಾಯ ಕೃತಜಪ್ಯಃ ಶುಚಿರ್ನೃಪಃ|

15003008c ಆಶಾಸ್ತೇ ಪಾಂಡುಪುತ್ರಾಣಾಂ ಸಮರೇಷ್ವಪರಾಜಯಮ್||

ಸದಾ ಬೆಳಿಗ್ಗೆ ಎದ್ದು ಶುಚಿಯಾಗಿ ಜಪಾದಿಗಳನ್ನು ಮುಗಿಸಿ ನೃಪನು ಪಾಂಡುಪುತ್ರರಿಗೆ ಸಮರದಲ್ಲಿ ಅಪರಾಜಯವನ್ನು ಆಶೀರ್ವದಿಸುತ್ತಿದ್ದನು.

15003009a ಬ್ರಾಹ್ಮಣಾನ್ವಾಚಯಿತ್ವಾ ಚ ಹುತ್ವಾ ಚೈವ ಹುತಾಶನಮ್|

15003009c ಆಯುಷ್ಯಂ ಪಾಂಡುಪುತ್ರಾಣಾಮಾಶಾಸ್ತೇ ಸ ನರಾಧಿಪಃ||

ಬ್ರಾಹ್ಮಣರಿಂದ ಸ್ವಸ್ತಿವಾಚನಮಾಡಿಸಿ, ಅಗ್ನಿಯಲ್ಲಿ ಹೋಮಮಾಡಿ ನರಾಧಿಪನು ಪಾಂಡುಪುತ್ರರ ದೀರ್ಘಾಯುಸ್ಸನ್ನು ಪ್ರಾರ್ಥಿಸುತ್ತಿದ್ದನು.

15003010a ನ ತಾಂ ಪ್ರೀತಿಂ ಪರಾಮಾಪ ಪುತ್ರೇಭ್ಯಃ ಸ ಮಹೀಪತಿಃ|

15003010c ಯಾಂ ಪ್ರೀತಿಂ ಪಾಂಡುಪುತ್ರೇಭ್ಯಃ ಸಮವಾಪ ತದಾ ನೃಪಃ||

ಆಗ ಪಾಂಡುಪುತ್ರರಿಂದ ಯಾವ ಪ್ರೀತಿಯನ್ನು ನೃಪ ಮಹೀಪತಿಯು ಪಡೆದನೋ ಆ ಪ್ರೀತಿಯನ್ನು ತನ್ನ ಪುತ್ರರಿಂದಲೂ ಹಿಂದೆ ಪಡೆದಿರಲಿಲ್ಲ.

15003011a ಬ್ರಾಹ್ಮಣಾನಾಂ ಚ ವೃದ್ಧಾನಾಂ ಕ್ಷತ್ರಿಯಾಣಾಂ ಚ ಭಾರತ|

15003011c ತಥಾ ವಿಟ್ಶೂದ್ರಸಂಘಾನಾಮಭವತ್ಸುಪ್ರಿಯಸ್ತದಾ||

ಭಾರತ! ಆಗ ಯುಧಿಷ್ಠಿರನು ಬ್ರಾಹ್ಮಣರ, ವೃದ್ಧರ, ಕ್ಷತ್ರಿಯರ, ವೈಶ್ಯರ ಮತ್ತು ಶೂದ್ರ ಸಂಘಗಳ ಪ್ರೀತಿಪಾತ್ರನಾಗಿದ್ದನು.

15003012a ಯಚ್ಚ ಕಿಂ ಚಿತ್ಪುರಾ ಪಾಪಂ ಧೃತರಾಷ್ಟ್ರಸುತೈಃ ಕೃತಮ್|

15003012c ಅಕೃತ್ವಾ ಹೃದಿ ತದ್ರಾಜಾ ತಂ ನೃಪಂ ಸೋಽನ್ವವರ್ತತ||

ಹಿಂದೆ ಧೃತರಾಷ್ಟ್ರನ ಮಕ್ಕಳು ಏನೆಲ್ಲ ಪಾಪಗಳನ್ನೆಸಗಿದ್ದರೋ ಅವೆಲ್ಲವನ್ನೂ ಹೃದಯಕ್ಕೆ ಹಚ್ಚಿಕೊಳ್ಳದೇ ನೃಪ ಧೃತರಾಷ್ಟ್ರನ ಸೇವೆಗೈಯುತ್ತಿದ್ದನು.

15003013a ಯಶ್ಚ ಕಶ್ಚಿನ್ನರಃ ಕಿಂ ಚಿದಪ್ರಿಯಂ ಚಾಂಬಿಕಾಸುತೇ|

15003013c ಕುರುತೇ ದ್ವೇಷ್ಯತಾಮೇತಿ ಸ ಕೌಂತೇಯಸ್ಯ ಧೀಮತಃ||

ಅಂಬಿಕಾಸುತನ ವಿಷಯದಲ್ಲಿ ಯಾರೇ ಏನೇ ಅಪ್ರಿಯವಾದುದನ್ನು ಎಸಗಿದರೂ ಅವನು ಧೀಮತ ಕೌಂತೇಯನ ದ್ವೇಷಕ್ಕೆ ಪಾತ್ರನಾಗುತ್ತಿದ್ದನು.

15003014a ನ ರಾಜ್ಞೋ ಧೃತರಾಷ್ಟ್ರಸ್ಯ ನ ಚ ದುರ್ಯೋಧನಸ್ಯ ವೈ|

15003014c ಉವಾಚ ದುಷ್ಕೃತಂ ಕಿಂ ಚಿದ್ಯುಧಿಷ್ಠಿರಭಯಾನ್ನರಃ||

ಯುಧಿಷ್ಠಿರನ ಭಯದಿಂದಾಗಿ ಯಾರೂ ರಾಜ ಧೃತರಾಷ್ಟ್ರನ ಅಥವಾ ದುರ್ಯೋಧನನ ದುಷ್ಕೃತಗಳ ಕುರಿತು ಮಾತನಾಡುತ್ತಿರಲಿಲ್ಲ.

15003015a ಧೃತ್ಯಾ ತುಷ್ಟೋ ನರೇಂದ್ರಸ್ಯ ಗಾಂಧಾರೀ ವಿದುರಸ್ತಥಾ|

15003015c ಶೌಚೇನ ಚಾಜಾತಶತ್ರೋರ್ನ ತು ಭೀಮಸ್ಯ ಶತ್ರುಹನ್||

ಶತ್ರುಹನ್! ನರೇಂದ್ರ ಅಜಾತಶತ್ರುವಿನ ಧೃತಿ, ಶೌಚಗಳಿಂದ ಗಾಂಧಾರೀ ಮತ್ತು ವಿದುರರು ತುಷ್ಟರಾಗಿದ್ದರು. ಆದರೆ ಭೀಮನ ಕುರಿತು ಅವರಿಗೆ ತೃಪ್ತಿಯಿರಲಿಲ್ಲ.

15003016a ಅನ್ವವರ್ತತ ಭೀಮೋಽಪಿ ನಿಷ್ಟನನ್ಧರ್ಮಜಂ ನೃಪಮ್|

15003016c ಧೃತರಾಷ್ಟ್ರಂ ಚ ಸಂಪ್ರೇಕ್ಷ್ಯ ಸದಾ ಭವತಿ ದುರ್ಮನಾಃ||

ಭೀಮನೂ ಕೂಡ ಧರ್ಮಜ ನೃಪನನ್ನು ನಿಷ್ಟೆಯಿಂದ ಅನುಸರಿಸುತ್ತಿದ್ದನು. ಆದರೆ ಧೃತರಾಷ್ಟ್ರನನ್ನು ಕಂಡಾಗಲೆಲ್ಲಾ ಕೆಟ್ಟ ಭಾವವನ್ನು ತಾಳುತ್ತಿದ್ದನು.

15003017a ರಾಜಾನಮನುವರ್ತಂತಂ ಧರ್ಮಪುತ್ರಂ ಮಹಾಮತಿಮ್|

15003017c ಅನ್ವವರ್ತತ ಕೌರವ್ಯೋ ಹೃದಯೇನ ಪರಾಙ್ಮುಖಃ||

ಆ ಕೌರವ್ಯ ಭೀಮನು ಧರ್ಮಪುತ್ರ ಮಹಾಮತಿ ರಾಜನನ್ನು ಅನುಸರಿಸಿಕೊಂಡಿದ್ದರೂ, ಹೃದಯದಲ್ಲಿ ಬೇರೆಯೇ ಭಾವವನ್ನಿಟ್ಟುಕೊಂಡಿದ್ದನು.”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರಶುಶ್ರೂಷೇ ತೃತೀಯೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರಶುಶ್ರೂಷ ಎನ್ನುವ ಮೂರನೇ ಅಧ್ಯಾಯವು.

Comments are closed.