Udyoga Parva: Chapter 22

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ: ಸಂಜಯಯಾನ ಪರ್ವ

೨೨

ಸಂಜಯನನ್ನು ಪಾಂಡವರಲ್ಲಿಗೆ ಕಳುಹಿಸಿದುದು

ಧೃತರಾಷ್ಟ್ರನು ಸಂಜಯನಿಗೆ ಪಾಂಡವರ ಮತ್ತು ಅವರಲ್ಲಿ ಬಂದು ಸೇರಿದ ಯೋಧರ ಪರಾಕ್ರಮವನ್ನು ವರ್ಣಿಸುತ್ತಾ ತಾನು ಅವರ ಬಲಕ್ಕೆ ಹೆದರುವವನೆಂದೂ, ತಾನು ಪಾಂಡವರೊಂದಿಗೆ ಶಾಂತಿಯನ್ನು ಬಯಸುತ್ತಾನೆಂದೂ, ಯುದ್ಧದ ವಿಷಯವನ್ನು ಎತ್ತಬಾರದೆಂದೂ ಹೇಳಿ ಪಾಂಡವರಲ್ಲಿಗೆ ಕಳುಹಿಸಿದುದು (೧-೩೯).

05022001 ಧೃತರಾಷ್ಟ್ರ ಉವಾಚ|

05022001a ಪ್ರಾಪ್ತಾನಾಹುಃ ಸಂಜಯ ಪಾಂಡುಪುತ್ರಾನ್|

        ಉಪಪ್ಲವ್ಯೇ ತಾನ್ವಿಜಾನೀಹಿ ಗತ್ವಾ|

05022001c ಅಜಾತಶತ್ರುಂ ಚ ಸಭಾಜಯೇಥಾ|

        ದಿಷ್ಟ್ಯಾನಘ ಗ್ರಾಮಮುಪಸ್ಥಿತಸ್ತ್ವಂ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಪಾಂಡುಪುತ್ರರು ಉಪಪ್ಲವ್ಯಕ್ಕೆ ಬಂದಿದ್ದಾರೆಂದು ಹೇಳುತ್ತಾರೆ. ಹೋಗಿ ತಿಳಿದುಕೊಂಡು ಬಾ. ಅಜಾತಶತ್ರುವನ್ನು ಈ ರೀತಿ ಸಂಭೋಧಿಸು: “ಅನಘ! ನೀನು ಗ್ರಾಮಕ್ಕೆ ಬಂದಿರುವುದು ಒಳ್ಳೆಯದೇ ಆಯಿತು.”

05022002a ಸರ್ವಾನ್ವದೇಃ ಸಂಜಯ ಸ್ವಸ್ತಿಮಂತಃ|

        ಕೃಚ್ಚ್ರಂ ವಾಸಮತದರ್ಹಾ ನಿರುಷ್ಯ|

05022002c ತೇಷಾಂ ಶಾಂತಿರ್ವಿದ್ಯತೇಽಸ್ಮಾಸು ಶೀಘ್ರಂ|

        ಮಿಥ್ಯೋಪೇತಾನಾಮುಪಕಾರಿಣಾಂ ಸತಾಂ||

ಸಂಜಯ! ಎಲ್ಲರಿಗೂ ಹೇಳಬೇಕು: “ಅನರ್ಹರಾಗಿದ್ದರೂ ವನವಾಸದ ಕಷ್ಟಗಳನ್ನು ಮುಗಿಸಿದ ನೀವು ಚೆನ್ನಾಗಿದ್ದೀರಾ?” ಮೋಸಗೊಂಡಿದ್ದರೂ ಶೀಘ್ರದಲ್ಲಿಯೇ ಅವರು ನಮ್ಮ ಮೇಲೆ ಶಾಂತಿಯನ್ನು ತಾಳುತ್ತಾರೆ. ಏಕೆಂದರೆ ಅವರು ಉಪಕಾರಿಗಳು ಮತ್ತು ಒಳ್ಳೆಯವರು.

05022003a ನಾಹಂ ಕ್ವ ಚಿತ್ಸಂಜಯ ಪಾಂಡವಾನಾಂ|

        ಮಿಥ್ಯಾವೃತ್ತಿಂ ಕಾಂ ಚನ ಜಾತ್ವಪಶ್ಯಂ|

05022003c ಸರ್ವಾಂ ಶ್ರಿಯಂ ಹ್ಯಾತ್ಮವೀರ್ಯೇಣ ಲಬ್ಧ್ವಾ|

        ಪರ್ಯಾಕಾರ್ಷುಃ ಪಾಂಡವಾ ಮಹ್ಯಮೇವ||

ಸಂಜಯ! ನಾನು ಎಂದೂ ಪಾಂಡವರಲ್ಲಿ ಮಿಥ್ಯಾವೃತ್ತಿಯನ್ನು ಕಂಡವನಲ್ಲ. ಅವರು ಎಲ್ಲಾ ಸಂಪತ್ತನ್ನೂ ತಮ್ಮದೇ ವೀರ್ಯದಿಂದ ಗಳಿಸಿದ್ದರೂ ಪಾಂಡವರು ನನ್ನ ಪರಿಚಾರಕರಂತಿದ್ದರು.

05022004a ದೋಷಂ ಹ್ಯೇಷಾಂ ನಾಧಿಗಚ್ಚೇ ಪರಿಕ್ಷನ್|

        ನಿತ್ಯಂ ಕಂ ಚಿದ್ಯೇನ ಗರ್ಹೇಯ ಪಾರ್ಥಾನ್|

05022004c ಧರ್ಮಾರ್ಥಾಭ್ಯಾಂ ಕರ್ಮ ಕುರ್ವಂತಿ ನಿತ್ಯಂ|

        ಸುಖಪ್ರಿಯಾ ನಾನುರುಧ್ಯಂತಿ ಕಾಮಾನ್||

ನಿತ್ಯ ಪರೀಕ್ಷಿಸಿದರೂ ಪಾರ್ಥರಲ್ಲಿ ದೂಷಿಸುವಂಥಹ ಸ್ವಲ್ಪವೂ ದೋಷವನ್ನು ನಾನು ಕಾಣಲಿಲ್ಲ. ನಿತ್ಯವೂ ಅವರು ಧರ್ಮ ಮತ್ತು ಅರ್ಥಗಳಿಗಾಗಿ ಕಾರ್ಯಗಳನ್ನು ಮಾಡುತ್ತಾರೆ. ಸುಖಪ್ರಿಯರಾಗಿ ಕಾಮದಿಂದ ಮಾಡುವುದಿಲ್ಲ.

05022005a ಘರ್ಮಂ ಶೀತಂ ಕ್ಷುತ್ಪಿಪಾಸೇ ತಥೈವ|

        ನಿದ್ರಾಂ ತಂದ್ರೀಂ ಕ್ರೋಧಹರ್ಷೌ ಪ್ರಮಾದಂ|

05022005c ಧೃತ್ಯಾ ಚೈವ ಪ್ರಜ್ಞ್ಯಾ ಚಾಭಿಭೂಯ|

        ಧರ್ಮಾರ್ಥಯೋಗಾನ್ಪ್ರಯತಂತಿ ಪಾರ್ಥಾಃ||

ಉಷ್ಣ, ಶೀತ, ಹಸಿವು ಮತ್ತು ಬಾಯಾರಿಕೆ, ನಿದ್ರೆ, ಮೈಥುನ, ಕ್ರೋಧ, ಹರ್ಷ, ಪ್ರಮಾದಗಳನ್ನು ಸಹಿಸಿಕೊಂಡು ಪ್ರಜ್ಞೆಯಲ್ಲಿದ್ದುಕೊಂಡು ಪಾರ್ಥರು ಧರ್ಮಾರ್ಥಯೋಗಗಳಲ್ಲಿ ನಡೆಯುತ್ತಾರೆ.

05022006a ತ್ಯಜಂತಿ ಮಿತ್ರೇಷು ಧನಾನಿ ಕಾಲ|

        ನ ಸಂವಾಸಾಜ್ಜೀರ್ಯತಿ ಮೈತ್ರಮೇಷಾಂ|

05022006c ಯಥಾರ್ಹಮಾನಾರ್ಥಕರಾ ಹಿ ಪಾರ್ಥಾಃ|

        ತೇಷಾಂ ದ್ವೇಷ್ಟಾ ನಾಸ್ತ್ಯಾಜಮೀಢಸ್ಯ ಪಕ್ಷೇ||

ಕಾಲಕ್ಕೆ ಸರಿಯಾಗಿ ಅವರು ಮಿತ್ರರಲ್ಲಿ ಧನವನ್ನು ಬಿಡುತ್ತಾರೆ. ಇವರೊಂದಿಗಿನ ಮೈತ್ರವು ಸಮಯ ಹೆಚ್ಚಾದಂತೆ ಜೀರ್ಣವಾಗುವುದಿಲ್ಲ. ಏಕೆಂದರೆ ಪಾರ್ಥರು ಯಥಾರ್ಹವಾಗಿ ಗೌರವ ಸಂಪತ್ತುಗಳನ್ನು ನೀಡುತ್ತಾರೆ. ಅಜಮೀಢನ ಪಕ್ಷದಲ್ಲಿ ಅವರನ್ನು ದ್ವೇಷಿಸುವವರು ಯಾರೂ ಇಲ್ಲ.

05022007a ಅನ್ಯತ್ರ ಪಾಪಾದ್ವಿಷಮಾನ್ಮಂದಬುದ್ಧೇಃ|

        ದುರ್ಯೋಧನಾತ್ಕ್ಷುದ್ರತರಾಚ್ಚ ಕರ್ಣಾತ್|

05022007c ತೇಷಾಂ ಹೀಮೇ ಹೀನಸುಖಪ್ರಿಯಾಣಾಂ|

        ಮಹಾತ್ಮನಾಂ ಸಂಜನಯಂತಿ ತೇಜಃ||

ಈ ಪಾಪಿ, ವಿಷಮಾನ್, ಮಂದಬುದ್ಧಿ ದುರ್ಯೋಧನ ಮತ್ತು ಕ್ಷುದ್ರತರ ಕರ್ಣರಹೊರತಾಗಿ! ಇವರಿಬ್ಬರೂ ಸುಖ ಮತ್ತು ಸ್ನೇಹಿತರನ್ನು ಕಳೆದುಕೊಂಡ ಆ ಮಹಾತ್ಮರ ತೇಜಸ್ಸನ್ನು ಹೆಚ್ಚಿಸುತ್ತಾರೆ.

05022008a ಉತ್ಥಾನವೀರ್ಯಃ ಸುಖಮೇಧಮಾನೋ|

        ದುರ್ಯೋಧನಃ ಸುಕೃತಂ ಮನ್ಯತೇ ತತ್|

05022008c ತೇಷಾಂ ಭಾಗಂ ಯಚ್ಚ ಮನ್ಯೇತ ಬಾಲಃ|

        ಶಕ್ಯಂ ಹರ್ತುಂ ಜೀವತಾಂ ಪಾಂಡವಾನಾಂ||

ಹೆಚ್ಚಿನ ವೀರ್ಯವುಳ್ಳ ಮತ್ತು ಸುಖವನ್ನೇ ಅನುಭವಿಸಿದ ದುರ್ಯೋಧನನು ಉತ್ತಮ ಕಾರ್ಯಗಳನ್ನೇ ಗೌರವಿಸುತ್ತಾನೆ. ಆದರೂ ಅವರು ಜೀವಂತವಿರುವಾಗಲೇ ಪಾಂಡವರ ಪಾಲನ್ನು ಕಸಿದುಕೊಳ್ಳಬಹುದು ಎನ್ನುವುದು ಬಾಲತನ.

05022009a ಯಸ್ಯಾರ್ಜುನಃ ಪದವೀಂ ಕೇಶವಶ್ಚ|

        ವೃಕೋದರಃ ಸಾತ್ಯಕೋಽಜಾತಶತ್ರೋಃ|

05022009c ಮಾದ್ರೀಪುತ್ರೌ ಸೃಂಜಯಾಶ್ಚಾಪಿ ಸರ್ವೇ|

        ಪುರಾ ಯುದ್ಧಾತ್ಸಾಧು ತಸ್ಯ ಪ್ರದಾನಂ||

ಯಾರ ಹೆಜ್ಜೆಗಳನ್ನು ಅರ್ಜುನ-ಕೇಶವರು, ವೃಕೋದರ-ಸಾತ್ಯಕಿಯರು, ಮಾದ್ರೀ ಪುತ್ರರು ಮತ್ತು ಸೃಂಜಯರೆಲ್ಲರೂ ಅನುಸರಿಸುತ್ತಾರೋ ಆ ಅಜಾತಶತ್ರುವಿಗೆ ಯುದ್ಧಕ್ಕೆ ಮೊದಲೇ ಕೊಡುವುದು ಒಳ್ಳೆಯದು.

05022010a ಸ ಹ್ಯೇವೈಕಃ ಪೃಥಿವೀಂ ಸವ್ಯಸಾಚೀ|

        ಗಾಂಡೀವಧನ್ವಾ ಪ್ರಣುದೇದ್ರಥಸ್ಥಃ|

05022010c ತಥಾ ವಿಷ್ಣುಃ ಕೇಶವೋಽಪ್ಯಪ್ರಧೃಷ್ಯೋ|

        ಲೋಕತ್ರಯಸ್ಯಾಧಿಪತಿರ್ಮಹಾತ್ಮಾ||

ರಥದಲ್ಲಿ ಕುಳಿತ ಸವ್ಯಸಾಚೀ ಗಾಂಡೀವಧನ್ವಿಯೊಬ್ಬನೇ ಪೃಥ್ವಿಯನ್ನು ಸದೆಬಡಿಯಲು ಸಾಕು. ಹಾಗೆಯೇ ಜಯಿಸಲಸಾಧ್ಯ ವಿಷ್ಣು, ಕೇಶವ, ಲೋಕತ್ರಯಗಳ ಅಧಿಪತಿ ಮಹಾತ್ಮನೂ ಅದನ್ನೇ ಮಾಡುವವನು.

05022011a ತಿಷ್ಠೇತ ಕಸ್ತಸ್ಯ ಮರ್ತ್ಯಃ ಪುರಸ್ತಾದ್|

        ಯಃ ಸರ್ವದೇವೇಷು ವರೇಣ್ಯ ಈಡ್ಯಃ|

05022011c ಪರ್ಜನ್ಯಘೋಷಾನ್ಪ್ರವಪಂ ಶರೌಘಾನ್|

        ಪತಂಗಸಂಘಾನಿವ ಶೀಘ್ರವೇಗಾನ್||

ಸರ್ವದೇವರಲ್ಲಿ ಶ್ರೇಷ್ಠನಾದ, ಇಷ್ಟಪಾತ್ರನಾದ, ಮೋಡಗಳಂತೆ ಘೋಷಿಸುವ, ಶೀಘ್ರವಾಗಿ ಸಂಚರಿಸಬಲ್ಲ ಚಿಟ್ಟೆಗಳ ಹಿಂಡುಗಳಂಥ ಬಾಣಗಳನ್ನು ಪ್ರಯೋಗಿಸುವವನ ಎದಿರು ಯಾವ ಮಾನವನು ತಾನೇ ನಿಂತಾನು?

05022012a ದಿಶಂ ಹ್ಯುದೀಚೀಮಪಿ ಚೋತ್ತರಾನ್ ಕುರೂನ್|

        ಗಾಂಡೀವಧನ್ವೈಕರಥೋ ಜಿಗಾಯ|

05022012c ಧನಂ ಚೈಷಾಮಾಹರತ್ಸವ್ಯಸಾಚೀ|

        ಸೇನಾನುಗಾನ್ಬಲಿದಾಂಶ್ಚೈವ ಚಕ್ರೇ||

ಸವ್ಯಸಾಚಿಯು ಗಾಂಡೀವವನ್ನು ಹಿಡಿದು, ರಥದಲ್ಲಿ ಕುಳಿತು ಒಬ್ಬನೇ ಉತ್ತರದಿಕ್ಕನ್ನು ಮತ್ತು ಉತ್ತರದ ಕುರುಗಳನ್ನು ಗೆದ್ದು ಅವರ ಧನವನ್ನು ತಂದನು ಮತ್ತು ಅವರ ಸೇನೆಗಳನ್ನು ತನ್ನ ಬಲದ ಭಾಗವನ್ನಾಗಿ ಮಾಡಿದನು.

05022013a ಯಶ್ಚೈವ ದೇವಾನ್ಖಾಂಡವೇ ಸವ್ಯಸಾಚೀ|

        ಗಾಂಡೀವಧನ್ವಾ ಪ್ರಜಿಗಾಯ ಸೇಂದ್ರಾನ್|

05022013c ಉಪಾಹರತ್ಫಲ್ಗುನೋ ಜಾತವೇದಸೇ|

        ಯಶೋ ಮಾನಂ ವರ್ಧಯನ್ಪಾಂಡವಾನಾಂ||

ಗಾಂಡೀವಧನ್ವಿ ಸವ್ಯಸಾಚಿ ಫಲ್ಗುನನು ಖಾಂಡವದಲ್ಲಿ ಇಂದ್ರನನ್ನೂ ಸೇರಿ ಎಲ್ಲ ದೇವತೆಗಳನ್ನೂ ಸೋಲಿಸಿ ಜಾತವೇದಸನಿಗೆ ಉಣಿಸಿ, ಪಾಂಡವರ ಯಶಸ್ಸನ್ನೂ ಮಾನವನ್ನೂ ಹೆಚ್ಚಿಸಿದನು.

05022014a ಗದಾಭೃತಾಂ ನಾದ್ಯ ಸಮೋಽಸ್ತಿ ಭೀಮಾದ್|

        ಧಸ್ತ್ಯಾರೋಹೋ ನಾಸ್ತಿ ಸಮಶ್ಚ ತಸ್ಯ|

05022014c ರಥೇಽರ್ಜುನಾದಾಹುರಹೀನಮೇನಂ|

        ಬಾಹ್ವೋರ್ಬಲೇ ಚಾಯುತನಾಗವೀರ್ಯಂ||

ಗದೆಯನ್ನು ಹಿಡಿಯುವವರಲ್ಲಿ ಭೀಮನ ಸಮನಾದವರು ಇಂದು ಯಾರೂ ಇಲ್ಲ. ಆನೆಯನ್ನು ಏರುವವರಲ್ಲಿ ಅವನ ಸಮನಾದವರಿಲ್ಲ. ರಥದಲ್ಲಿ ಅವನು ಅರ್ಜುನನಿಗೂ ಮಣಿಯುವುದಿಲ್ಲ ಎಂದು ಹೇಳುತ್ತಾರೆ. ಬಾಹುಬಲದಲ್ಲಿ ಅವನು ಹತ್ತು ಸಾವಿರ ಆನೆಗಳಿಗೆ ಸಮ.

05022015a ಸುಶಿಕ್ಷಿತಃ ಕೃತವೈರಸ್ತರಸ್ವೀ|

        ದಹೇತ್ಕ್ರುದ್ಧಸ್ತರಸಾ ಧಾರ್ತರಾಷ್ಟ್ರಾನ್|

05022015c ಸದಾತ್ಯಮರ್ಷೀ ಬಲವಾನ್ನ ಶಕ್ಯೋ|

        ಯುದ್ಧೇ ಜೇತುಂ ವಾಸವೇನಾಪಿ ಸಾಕ್ಷಾತ್||

ಸುಶಿಕ್ಷಿತನಾದ, ವೈರತ್ವವನ್ನು ಬೆಳೆಸಿಕೊಂಡ, ಆ ತರಸ್ವಿಯು ಕೃದ್ಧನಾದರೆ ಕ್ಷಣಮಾತ್ರದಲ್ಲಿ ಧಾರ್ತರಾಷ್ಟ್ರರನ್ನು ಸುಟ್ಟುಬಿಡುತ್ತಾನೆ. ಸದಾ ಕೋಪದಲ್ಲಿರುವ ಆ ಬಲವಾನನನ್ನು ಸಾಕ್ಷಾತ್ ವಾಸವನೂ ಕೂಡ ಯುದ್ಧದಲ್ಲಿ ಜಯಿಸನು ಶಕ್ಯನಿಲ್ಲ.

05022016a ಸುಚೇತಸೌ ಬಲಿನೌ ಶೀಘ್ರಹಸ್ತೌ|

        ಸುಶಿಕ್ಷಿತೌ ಭ್ರಾತರೌ ಫಲ್ಗುನೇನ|

05022016c ಶ್ಯೇನೌ ಯಥಾ ಪಕ್ಷಿಪೂಗಾನ್ರುಜಂತೌ|

        ಮಾದ್ರೀಪುತ್ರೌ ನೇಹ ಕುರೂನ್ವಿಶೇತಾಂ||

ಸುಚೇತಸರಾದ, ಬಲಶಾಲಿಗಳಾದ, ಶೀಘ್ರ ಕೈಚಳಕವುಳ್ಳ, ಅಣ್ಣ ಫಲ್ಗುನನಿಂದ ತರಬೇತಿಪಡೆದ, ಪಕ್ಷಿಗಳ ಹಿಂಡಿನ ಮೇಲೆ ಹಾರಾಡುವ ಗಿಡುಗಗಳಂತಿರುವ ಮಾದ್ರೀಪುತ್ರರೀರ್ವರು ಕುರುಗಳ ಮೇಲೆ ಹಾರಾಡುತ್ತಿರುತ್ತಾರೆ.

05022017a ತೇಷಾಂ ಮಧ್ಯೇ ವರ್ತಮಾನಸ್ತರಸ್ವೀ|

        ಧೃಷ್ಟದ್ಯುಮ್ನಃ ಪಾಂಡವಾನಾಮಿಹೈಕಃ|

05022017c ಸಹಾಮಾತ್ಯಃ ಸೋಮಕಾನಾಂ ಪ್ರಬರ್ಹಃ|

        ಸಂತ್ಯಕ್ತಾತ್ಮಾ ಪಾಂಡವಾನಾಂ ಜಯಾಯ||

ಅವರ ಮಧ್ಯೆ ಓಡಾಡುವ ತರಸ್ವೀ ಧೃಷ್ಟದ್ಯುಮ್ನನು ಪಾಂಡವರಲ್ಲೇ ಒಬ್ಬನೆಂದು ಹೇಳುತ್ತಾರೆ. ಅವನು ಪಾಂಡವರ ಜಯಕ್ಕಾಗಿ ಅಮಾತ್ಯರೊಂದಿಗೆ ಸೋಮಕರ ಮತ್ತು ತನ್ನ ಆತ್ಮವನ್ನೂ ತ್ಯಜಿಸಲು ಸಿದ್ಧನಿದ್ದಾನೆಂದು ಕೇಳಿದ್ದೇನೆ.

05022018a ಸಹೋಷಿತಶ್ಚರಿತಾರ್ಥೋ ವಯಃಸ್ಥಃ|

        ಶಾಲ್ವೇಯಾನಾಮಧಿಪೋ ವೈ ವಿರಾಟಃ|

05022018c ಸಹ ಪುತ್ರೈಃ ಪಾಂಡವಾರ್ಥೇ ಚ ಶಶ್ವದ್|

        ಯುಧಿಷ್ಠಿರಂ ಭಕ್ತ ಇತಿ ಶ್ರುತಂ ಮೇ||

ಯಾರಬಳಿಯಲ್ಲಿ ಸ್ವಲ್ಪ ಸಮಯ ಉಳಿದುಕೊಂಡಿದ್ದರೋ ಆ ವಯಸ್ಥ, ಶಾಲ್ವೇಯಾನರ ಅಧಿಪ ವಿರಾಟನು ಪುತ್ರರೊಂದಿಗೆ ಪಾಂಡವರಿಗಾಗಿ ಇದ್ದಾನೆ ಮತ್ತು ಅವನು ಯುಧಿಷ್ಠಿರನ ಭಕ್ತ ಎಂದು ನಾನು ಕೇಳಿದ್ದೇನೆ.

05022019a ಅವರುದ್ಧಾ ಬಲಿನಃ ಕೇಕಯೇಭ್ಯೋ|

        ಮಹೇಷ್ವಾಸಾ ಭ್ರಾತರಃ ಪಂಚ ಸಂತಿ|

05022019c ಕೇಕಯೇಭ್ಯೋ ರಾಜ್ಯಮಾಕಾಂಕ್ಷಮಾಣಾ|

        ಯುದ್ಧಾರ್ಥಿನಶ್ಚಾನುವಸಂತಿ ಪಾರ್ಥಾನ್||

ಕೇಕಯ ರಾಜ್ಯದಿಂದ ಭ್ರಷ್ಟ ಬಲಶಾಲಿ ಐವರು ಮಹೇಷ್ವಾಸ ಸಹೋದರರಿದ್ದಾರೆ. ರಾಜ್ಯಾಕಾಂಕ್ಷಿಗಳಾದ ಅವರು ಯುದ್ಧಾರ್ಥಿಗಳಾಗಿ ಪಾರ್ಥರನ್ನು ಅವಲಂಬಿಸಿದ್ದಾರೆ.

05022020a ಸರ್ವೇ ಚ ವೀರಾಃ ಪೃಥಿವೀಪತೀನಾಂ|

        ಸಮಾನೀತಾಃ ಪಾಂಡವಾರ್ಥೇ ನಿವಿಷ್ಟಾಃ|

05022020c ಶೂರಾನಹಂ ಭಕ್ತಿಮತಃ ಶೃಣೋಮಿ|

        ಪ್ರೀತ್ಯಾ ಯುಕ್ತಾನ್ಸಂಶ್ರಿತಾನ್ಧರ್ಮರಾಜಂ||

ಪೃಥ್ವೀಪತಿಗಳಲ್ಲಿ ವೀರರೆಲ್ಲರೂ ಪಾಂಡವರ ವಿಷಯದಲ್ಲಿ ನಿಷ್ಠರಾಗಿ ಸೇರಿದ್ದಾರೆ. ಆ ಶೂರರು ಭಕ್ತಿಮತರಾಗಿ ಪ್ರೀತಿಯಿಂದ ಧರ್ಮರಾಜನನ್ನು ಸೇರಿದ್ದಾರೆ ಎಂದು ನಾನು ಕೇಳಿದ್ದೇನೆ.

05022021a ಗಿರ್ಯಾಶ್ರಯಾ ದುರ್ಗನಿವಾಸಿನಶ್ಚ|

        ಯೋಧಾಃ ಪೃಥಿವ್ಯಾಂ ಕುಲಜಾ ವಿಶುದ್ಧಾಃ|

05022021c ಮ್ಲೇಚ್ಚಾಶ್ಚ ನಾನಾಯುಧವೀರ್ಯವಂತಃ|

        ಸಮಾಗತಾಃ ಪಾಂಡವಾರ್ಥೇ ನಿವಿಷ್ಟಾಃ||

ಗಿರಿ ದುರ್ಗಗಳಲ್ಲಿ ವಾಸಿಸುವವರು ಮತ್ತು ಪೃಥ್ವಿಯಲ್ಲಿ ವಿಶುದ್ಧ ಕುಲದಲ್ಲಿ ಹುಟ್ಟಿದ ಯೋಧರು, ನಾನಾ ಆಯುಧವೀರ್ಯವಂತ ಮ್ಲೇಚ್ಚರು ಪಾಂಡವರಿಗಾಗಿ ನಿಷ್ಠೆಯಿಂದ ಸೇರಿದ್ದಾರೆ.

05022022a ಪಾಂಡ್ಯಶ್ಚ ರಾಜಾಮಿತ ಇಂದ್ರಕಲ್ಪೋ|

        ಯುಧಿ ಪ್ರವೀರೈರ್ಬಹುಭಿಃ ಸಮೇತಃ|

05022022c ಸಮಾಗತಃ ಪಾಂಡವಾರ್ಥೇ ಮಹಾತ್ಮಾ|

        ಲೋಕಪ್ರವೀರೋಽಪ್ರತಿವೀರ್ಯತೇಜಾಃ||

ಇಂದ್ರಸಮನಾದ ರಾಜ ಪಾಂಡ್ಯನೂ ಯುದ್ಧದಲ್ಲಿ ಬಹು ಪ್ರವೀರರರೊಂದಿಗೆ ಲೋಕಪ್ರವೀರ, ಅಪ್ರತಿಮ ವೀರ್ಯ ತೇಜಸ್ವಿಗಳಾದ ಮಹಾತ್ಮ ಪಾಂಡವರಿಗಾಗಿ ಸೇರಿದ್ದಾರೆ.

05022023a ಅಸ್ತ್ರಂ ದ್ರೋಣಾದರ್ಜುನಾದ್ವಾಸುದೇವಾತ್|

        ಕೃಪಾದ್ಭೀಷ್ಮಾದ್ಯೇನ ಕೃತಂ ಶೃಣೋಮಿ|

05022023c ಯಂ ತಂ ಕಾರ್ಷ್ಣಿಪ್ರತಿಮಂ ಪ್ರಾಹುರೇಕಂ|

        ಸ ಸಾತ್ಯಕಿಃ ಪಾಂಡವಾರ್ಥೇ ನಿವಿಷ್ಟಃ||

ದ್ರೋಣ, ಅರ್ಜುನ, ವಾಸುದೇವ, ಕೃಪ ಮತ್ತು ಭೀಷ್ಮರಿಂದ ಕಲಿತ ಕೃಷ್ಣನ ಮಗನಿಗೆ ಸರಿಸಮನಾದ ಸಾತ್ಯಕಿಯು ಪಾಂಡವರಿಗಾಗಿ ನಿಷ್ಠಾವಂತನಾಗಿದ್ದಾನೆಂದು ಹೇಳುತ್ತಾರೆ.

05022024a ಅಪಾಶ್ರಿತಾಶ್ಚೇದಿಕರೂಷಕಾಶ್ಚ|

        ಸರ್ವೋತ್ಸಾಹೈರ್ಭೂಮಿಪಾಲೈಃ ಸಮೇತಾಃ|

05022024c ತೇಷಾಂ ಮಧ್ಯೇ ಸೂರ್ಯಮಿವಾತಪಂತಂ|

        ಶ್ರಿಯಾ ವೃತಂ ಚೇದಿಪತಿಂ ಜ್ವಲಂತಂ||

05022025a ಅಸ್ತಂಭನೀಯಂ ಯುಧಿ ಮನ್ಯಮಾನಂ|

        ಜ್ಯಾಕರ್ಷತಾಂ ಶ್ರೇಷ್ಠತಮಂ ಪೃಥಿವ್ಯಾಂ|

05022025c ಸರ್ವೋತ್ಸಾಹಂ ಕ್ಷತ್ರಿಯಾಣಾಂ ನಿಹತ್ಯ|

        ಪ್ರಸಹ್ಯ ಕೃಷ್ಣಸ್ತರಸಾ ಮಮರ್ದ||

ಚೇದಿ ಮತ್ತು ಕರೂಷಗಳ ಭೂಮಿಪಾಲರು ಎಲ್ಲರೂ ಉತ್ಸಾಹದಿಂದ ಸೇರಿದ್ದಾರೆ. ಅವರ ಮಧ್ಯೆ ಸೂರ್ಯನಂತೆ ಸುಡುತ್ತಿರುವ ಶ್ರೀಯಿಂದ ಪ್ರಜ್ವಲಿಸುವ ಚೇದಿಪತಿಯನ್ನು ಸಂಹರಿಸಿದ, ಯುದ್ಧದಲ್ಲಿ ಅಜೇಯನಾದ, ಗೌರವಾನ್ವಿತ, ಬಿಲ್ಲನ್ನು ಎಳೆಯುವವರಲ್ಲೆಲ್ಲಾ ಶ್ರೇಷ್ಠನಾದ, ಕ್ಷತ್ರಿಯರ ಸರ್ವೋತ್ಸಾಹವನ್ನು ಕಸಿದುಕೊಂಡು ನಗುತ್ತಿರುವ ತರಸ್ವಿ ಕೃಷ್ಣನಿದ್ದಾನೆ.

05022026a ಯಶೋಮಾನೌ ವರ್ಧಯನ್ಯಾದವಾನಾಂ|

        ಪುರಾಭಿನಚ್ಚಿಶುಪಾಲಂ ಸಮೀಕೇ|

05022026c ಯಸ್ಯ ಸರ್ವೇ ವರ್ಧಯಂತಿ ಸ್ಮ ಮಾನಂ|

        ಕರೂಷರಾಜಪ್ರಮುಖಾ ನರೇಂದ್ರಾಃ||

ಅವನು ಹಿಂದೆ ಶಿಶುಪಾಲನನ್ನು ಸಂಹರಿಸಿ ಯಾದವರ ಯಶಸ್ಸು ಮಾನಗಳನ್ನು ವರ್ಧಿಸಿದನು. ಅದೇ ಕರೂಷರಾಜ ಪ್ರಮುಖನನ್ನು ನರೇಂದ್ರರೆಲ್ಲರೂ ಗೌರವಿಸಿ ವರ್ಧಿಸುತ್ತಿದ್ದರು.

05022027a ತಮಸಹ್ಯಂ ಕೇಶವಂ ತತ್ರ ಮತ್ವಾ|

        ಸುಗ್ರೀವಯುಕ್ತೇನ ರಥೇನ ಕೃಷ್ಣಂ|

05022027c ಸಂಪ್ರಾದ್ರವಂಶ್ಚೇದಿಪತಿಂ ವಿಹಾಯ|

        ಸಿಂಹಂ ದೃಷ್ಟ್ವಾ ಕ್ಷುದ್ರಮೃಗಾ ಇವಾನ್ಯೇ||

ಅಲ್ಲಿ ಸುಗ್ರೀವ ಮತ್ತು ಇತರ ಕುದುರೆಗಳನ್ನು ಕಟ್ಟಿದ ರಥದಲ್ಲಿದ್ದ ಕೃಷ್ಣ ಕೇಶವನು ಅಸಹ್ಯನೆಂದು ತಿಳಿದು, ಚೇದಿಪತಿಯನ್ನು ಬಿಟ್ಟು, ಸಿಂಹವನ್ನು ನೋಡಿದ ಕ್ಷುದ್ರಮೃಗಗಳಂತೆ ಇತರರು ಓಡಿಹೋದರು.

05022028a ಯಸ್ತಂ ಪ್ರತೀಪಸ್ತರಸಾ ಪ್ರತ್ಯುದೀಯಾದ್|

        ಆಶಂಸಮಾನೋ ದ್ವೈರಥೇ ವಾಸುದೇವಂ|

05022028c ಸೋಽಶೇತ ಕೃಷ್ಣೇನ ಹತಃ ಪರಾಸುಃ|

        ವಾತೇನೇವೋನ್ಮಥಿತಃ ಕರ್ಣಿಕಾರಃ||

ಸೊಕ್ಕಿನಿಂದ ತರಸ್ತನಾಗಿ ವಾಸುದೇವನನ್ನು ದ್ವಂದ್ವಯುದ್ಧದಲ್ಲಿ ಎದುರಿಸಲು ಅವನು ಕೃಷ್ಣನಿಂದ ಭಿರುಗಾಳಿಯ ಹೊಡೆತಕ್ಕೆ ಸಿಲುಕಿ ಉರುಳಿದ ಕರ್ಣಿಕಾರ ವೃಕ್ಷದಂತೆ ಹೊಡೆತತಿಂದು ಜೀವವನ್ನು ಕಳೆದುಕೊಂಡು ಬಿದ್ದನು.

05022029a ಪರಾಕ್ರಮಂ ಮೇ ಯದವೇದಯಂತ|

        ತೇಷಾಮರ್ಥೇ ಸಂಜಯ ಕೇಶವಸ್ಯ|

05022029c ಅನುಸ್ಮರಂಸ್ತಸ್ಯ ಕರ್ಮಾಣಿ ವಿಷ್ಣೋಃ|

        ಗಾವಲ್ಗಣೇ ನಾಧಿಗಚ್ಚಾಮಿ ಶಾಂತಿಂ||

ಸಂಜಯ! ಗಾವಲ್ಗಣೇ! ಅವರಿಗಾಗಿ ಕೇಶವನು ಏನೆಲ್ಲ ಮಾಡಿದ ಎಂದು ಹೇಳುವುದನ್ನು ಕೇಳಿದರೆ ಮತ್ತು ಆ ವಿಷ್ಣುವಿನ ಕರ್ಮಗಳನ್ನು ಸ್ಮರಿಸಿಕೊಂಡರೆ ನನಗೆ ಶಾಂತಿಯೆನ್ನುವುದೇ ಇಲ್ಲವಾಗಿದೆ.

05022030a ನ ಜಾತು ತಾಂ ಶತ್ರುರನ್ಯಃ ಸಹೇತ|

        ಯೇಷಾಂ ಸ ಸ್ಯಾದಗ್ರಣೀರ್ವೃಷ್ಣಿಸಿಂಹಃ|

05022030c ಪ್ರವೇಪತೇ ಮೇ ಹೃದಯಂ ಭಯೇನ|

        ಶ್ರುತ್ವಾ ಕೃಷ್ಣಾವೇಕರಥೇ ಸಮೇತೌ||

ಆ ವೃಷ್ಣಿಸಿಂಹನ ನಾಯಕತ್ವದಲ್ಲಿರುವ ಅವರನ್ನು ಯಾವ ಶತ್ರುವೂ ಎದುರಿಸಲು ಸಾಧ್ಯವಿಲ್ಲ. ಇಬ್ಬರು ಕೃಷ್ಣರೂ ಒಂದೇ ರಥದಲ್ಲಿ ಸೇರಿದ್ದಾರೆ ಎಂದು ಕೇಳಿ ನನ್ನ ಹೃದಯವು ಭಯದಿಂದ ಕಂಪಿಸುತ್ತಿದೆ.

05022031a ನೋ ಚೇದ್ಗಚ್ಚೇತ್ಸಂಗರಂ ಮಂದಬುದ್ಧಿಃ|

        ತಾಭ್ಯಾಂ ಸುತೋ ಮೇ ವಿಪರೀತಚೇತಾಃ|

05022031c ನೋ ಚೇತ್ಕುರೂನ್ಸಂಜಯ ನಿರ್ದಹೇತಾಂ|

        ಇಂದ್ರಾವಿಷ್ಣೂ ದೈತ್ಯಸೇನಾಂ ಯಥೈವ|

05022031e ಮತೋ ಹಿ ಮೇ ಶಕ್ರಸಮೋ ಧನಂಜಯಃ|

        ಸನಾತನೋ ವೃಷ್ಣಿವೀರಶ್ಚ ವಿಷ್ಣುಃ||

ನನ್ನ ಮಂದಬುದ್ಧಿ ಮಗನು ಅವರೊಂದಿಗೆ ಸಂಗರವನ್ನು ಮಾಡಲು ಉತ್ಸುಕನಾಗಿದ್ದರೆ, ಸಂಜಯ, ಅವನು ಅದನ್ನು ಮಾಡಿಯಾನು. ಇಲ್ಲದಿದ್ದರೆ ಇಂದ್ರ ಮತ್ತು ವಿಷ್ಣು ಇಬ್ಬರೂ ದೈತ್ಯಸೇನೆಯನ್ನು ಹೇಗೋ ಹಾಗೆ ಶಕ್ರಸಮನಾದ ಧನಂಜಯ ಮತ್ತು ಸನಾತನ ವಿಷ್ಣು ವೃಷ್ಣಿವೀರರು ಅವನನ್ನು ಸಂಹರಿಸುತ್ತಾರೆ ಎಂದು ನನಗನ್ನಿಸುತ್ತದೆ.

05022032a ಧರ್ಮಾರಾಮೋ ಹ್ರೀನಿಷೇಧಸ್ತರಸ್ವೀ|

        ಕುಂತೀಪುತ್ರಃ ಪಾಂಡವೋಽಜಾತಶತ್ರುಃ|

05022032c ದುರ್ಯೋಧನೇನ ನಿಕೃತೋ ಮನಸ್ವೀ|

        ನೋ ಚೇತ್ಕ್ರುದ್ಧಃ ಪ್ರದಹೇದ್ಧಾರ್ತರಾಷ್ಟ್ರಾನ್||

ಕುಂತೀಪುತ್ರ ಪಾಂಡವ ಅಜಾತಶತ್ರುವು ಧಾರ್ಮಿಕ. ಮರ್ಯಾದೆಯನ್ನು ಕಳೆದುಕೊಳ್ಳುವ ಕೆಲಸಗಳನ್ನು ಮಾಡದೇ ಇರುವವನು. ಮತ್ತು ತರಸ್ವೀ. ಆ ಮನಸ್ವಿಯು ದುರ್ಯೋಧನನಿಂದ ಮೋಸಗೊಂಡಿದ್ದಾನೆ. ಕೃದ್ಧನಾಗಿ ಅವನು ಧಾರ್ತರಾಷ್ಟ್ರರನ್ನು ಸುಟ್ಟುಬಿಡುವುದಿಲ್ಲವೇ?

05022033a ನಾಹಂ ತಥಾ ಹ್ಯರ್ಜುನಾದ್ವಾಸುದೇವಾದ್|

        ಭೀಮಾದ್ವಾಪಿ ಯಮಯೋರ್ವಾ ಬಿಭೇಮಿ|

05022033c ಯಥಾ ರಾಜ್ಞಾಃ ಕ್ರೋಧದೀಪ್ತಸ್ಯ ಸೂತ|

        ಮನ್ಯೋರಹಂ ಭೀತತರಃ ಸದೈವ||

ಸೂತ! ಕ್ರೋಧದೀಪ್ತನಾದ ರಾಜನ ಸಿಟ್ಟಿಗೆ ಸದೈವ ಹೆದರುವಷ್ಟು ನಾನು ಅರ್ಜುನ, ವಾಸುದೇವ, ಭೀಮ ಅಥವಾ ಯಮಳರಿಗೆ ಹೆದರುವುದಿಲ್ಲ.

05022034a ಅಲಂ ತಪೋಬ್ರಹ್ಮಚರ್ಯೇಣ ಯುಕ್ತಃ|

        ಸಂಕಲ್ಪೋಽಯಂ ಮಾನಸಸ್ತಸ್ಯ ಸಿಧ್ಯೇತ್|

05022034c ತಸ್ಯ ಕ್ರೋಧಂ ಸಂಜಯಾಹಂ ಸಮೀಕೇ|

        ಸ್ಥಾನೇ ಜಾನನ್ಭೃಶಮಸ್ಮ್ಯದ್ಯ ಭೀತಃ||

ತಪಸ್ಸು ಮತ್ತು ಬ್ರಹ್ಮಚರ್ಯದಿಂದ ಯುಕ್ತನಾದ ಅವನು ಮನಸ್ಸಿನಲ್ಲಿ ಸಂಕಲ್ಪಿಸಿದುದು ಸಿದ್ಧಿಯಾಗುತ್ತದೆ. ಸಂಜಯ! ಅವನ ಕ್ರೋಧವನ್ನು ಮತ್ತು ಅದು ಎಷ್ಟು ನ್ಯಾಯವಾದುದು ಎಂದು ತಿಳಿದಾಗ ನನ್ನನ್ನು ಭೀತಿಯು ಆವರಿಸುತ್ತದೆ.

05022035a ಸ ಗಚ್ಚ ಶೀಘ್ರಂ ಪ್ರಹಿತೋ ರಥೇನ|

        ಪಾಂಚಾಲರಾಜಸ್ಯ ಚಮೂಂ ಪರೇತ್ಯ|

05022035c ಅಜಾತಶತ್ರುಂ ಕುಶಲಂ ಸ್ಮ ಪೃಚ್ಚೇಃ|

        ಪುನಃ ಪುನಃ ಪ್ರೀತಿಯುಕ್ತಂ ವದೇಸ್ತ್ವಂ||

ನನ್ನಿಂದ ಕಳುಹಿಸಲ್ಪಟ್ಟ ರಥದಲ್ಲಿ ಶೀಘ್ರವಾಗಿ ಪಾಂಚಾಲರಾಜನ ಸೇನೆಯು ತಂಗಿರುವಲ್ಲಿಗೆ ಹೋಗು. ಅಜಾತಶತ್ರುವಿನ ಕುಶಲವನ್ನು ಕೇಳು. ಪುನಃ ಪುನಃ ಅವನನ್ನು ಪ್ರೀತಿಯಿಂದ ಮಾತನಾಡಿಸು.

05022036a ಜನಾರ್ದನಂ ಚಾಪಿ ಸಮೇತ್ಯ ತಾತ|

        ಮಹಾಮಾತ್ರಂ ವೀರ್ಯವತಾಮುದಾರಂ|

05022036c ಅನಾಮಯಂ ಮದ್ವಚನೇನ ಪೃಚ್ಚೇಃ|

        ಧೃತರಾಷ್ಟ್ರಃ ಪಾಂಡವೈಃ ಶಾಂತಿಮೀಪ್ಸುಃ||

ಮಗೂ! ನೀನು ಮಹಾಮಾತ್ರನೂ, ವೀರ್ಯವತನೂ, ಉದಾರನೂ, ಅನಾಮಯನೂ ಆದ ಜನಾರ್ದನನನ್ನು ಭೇಟಿಯಾಗುವೆ. ನನ್ನ ಮಾತಿನಂತೆ ಕುಶಲವನ್ನು ಕೇಳುವೆ ಮತ್ತು ಧೃತರಾಷ್ಟ್ರನು ಪಾಂಡವರೊಂದಿಗೆ ಶಾಂತಿಯನ್ನು ಬಯಸುತ್ತಾನೆ ಎಂದು ಹೇಳುವೆ.

05022037a ನ ತಸ್ಯ ಕಿಂ ಚಿದ್ವಚನಂ ನ ಕುರ್ಯಾತ್|

        ಕುಂತೀಪುತ್ರೋ ವಾಸುದೇವಸ್ಯ ಸೂತ|

05022037c ಪ್ರಿಯಶ್ಚೈಷಾಮಾತ್ಮಸಮಶ್ಚ ಕೃಷ್ಣೋ|

        ವಿದ್ವಾಂಶ್ಚೈಷಾಂ ಕರ್ಮಣಿ ನಿತ್ಯಯುಕ್ತಃ||

ಸೂತ! ಕುಂತೀಪುತ್ರನು ವಾಸುದೇವನ ಮಾತಿಲ್ಲದೇ ಏನನ್ನೂ ಮಾಡಲಾರ. ಕೃಷ್ಣನು ಅವರಿಗೆ ಆತ್ಮದಷ್ಟೇ ಪ್ರಿಯನಾದವನು. ವಿಧ್ವಾಂಸನಾದ ಅವನು ನಿತ್ಯವೂ ಅವರ ಏಳ್ಗೆಯ ಕೆಲಸವನ್ನೇ ಮಾಡುತ್ತಾನೆ.

05022038a ಸಮಾನೀಯ ಪಾಂಡವಾನ್ಸೃಂಜಯಾಂಶ್ಚ|

        ಜನಾರ್ದನಂ ಯುಯುಧಾನಂ ವಿರಾಟಂ|

05022038c ಅನಾಮಯಂ ಮದ್ವಚನೇನ ಪೃಚ್ಚೇಃ|

        ಸರ್ವಾಂಸ್ತಥಾ ದ್ರೌಪದೇಯಾಂಶ್ಚ ಪಂಚ||

ಪಾಂಡವರನ್ನು, ಸೃಂಜಯರನ್ನು, ಜನಾರ್ದನನನ್ನು, ಯುಯುಧಾನನನ್ನು, ವಿರಾಟನನ್ನು, ಮತ್ತು ಐವರು ದ್ರೌಪದೇಯರನ್ನೂ ಭೇಟಿಮಾಡಿ ನನ್ನ ಮಾತಿನಂತೆ ಕುಶಲವನ್ನು ಕೇಳು.

05022039a ಯದ್ಯತ್ತತ್ರ ಪ್ರಾಪ್ತಕಾಲಂ ಪರೇಭ್ಯಃ|

        ತ್ವಂ ಮನ್ಯೇಥಾ ಭಾರತಾನಾಂ ಹಿತಂ ಚ|

05022039c ತತ್ತದ್ಭಾಷೇಥಾಃ ಸಂಜಯ ರಾಜಮಧ್ಯೇ|

        ನ ಮೂರ್ಚಯೇದ್ಯನ್ನ ಭವೇಚ್ಚ ಯುದ್ಧಂ||

ಸಂಜಯ! ಅಲ್ಲಿ ಇನ್ನೂ ಇತರ ಕಾಲಕ್ಕೆ ತಕ್ಕಂತಹ, ಭಾರತರ ಹಿತವೆಂದೆನಿಸಿದ, ಅಸ್ವೀಕೃತಗೊಳ್ಳದ, ಯುದ್ಧವನ್ನು ಸೂಚಿಸದ ಎಲ್ಲವನ್ನೂ ರಾಜಮಧ್ಯದಲ್ಲಿ ಹೇಳು.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಧೃತರಾಷ್ಟ್ರಸಂದೇಶೇ ದ್ವಾವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಧೃತರಾಷ್ಟ್ರಸಂದೇಶದಲ್ಲಿ ಇಪ್ಪತ್ತೆರಡನೆಯ ಅಧ್ಯಾಯವು.

Image result for flowers against white background

Comments are closed.