Udyoga Parva: Chapter 176

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೭೬

ಪರಶುರಾಮ-ಅಂಬಾ ಸಂವಾದ

ಅಕೃತವ್ರಣ ಅಂಬೆಯರು ಚರ್ಚೆಮಾಡಿ ಭೀಷ್ಮನನ್ನೇ ಶಿಕ್ಷಿಸಬೇಕೆಂದು ನಿರ್ಧರಿಸಿದುದು (೧-೧೪). ಮರುದಿನ ಬೆಳಿಗ್ಗೆ ಆಗಮಿಸಿದ ಪರಶುರಾಮನಲ್ಲಿ ಅಂಬೆಯ ಕಷ್ಟಗಳನ್ನು ನಿವೇದಿಸಿದುದು (೧೫-೪೨).

05176001 ಅಕೃತವ್ರಣ ಉವಾಚ|

05176001a ದುಃಖದ್ವಯಮಿದಂ ಭದ್ರೇ ಕತರಸ್ಯ ಚಿಕೀರ್ಷಸಿ|

05176001c ಪ್ರತಿಕರ್ತವ್ಯಮಬಲೇ ತತ್ತ್ವಂ ವತ್ಸೇ ಬ್ರವೀಹಿ ಮೇ||

ಅಕೃತವ್ರಣನು ಹೇಳಿದನು: “ಭದ್ರೇ! ಇಲ್ಲಿ ಎರಡು ದುಃಖಗಳಿವೆ. ಯಾವುದನ್ನು ಹೋಗಲಾಡಿಸಲು ಬಯಸುವೆ? ಯಾವುದರ ಪ್ರತೀಕಾರವನ್ನು ಬಯಸುತ್ತೀಯೆ? ಸತ್ಯವನ್ನು ನನಗೆ ಹೇಳು ವತ್ಸೇ!

05176002a ಯದಿ ಸೌಭಪತಿರ್ಭದ್ರೇ ನಿಯೋಕ್ತವ್ಯೋ ಮತೇ ತವ|

05176002c ನಿಯೋಕ್ಷ್ಯತಿ ಮಹಾತ್ಮಾ ತಂ ರಾಮಸ್ತ್ವದ್ಧಿತಕಾಮ್ಯಯಾ||

ಭದ್ರೇ! ಒಂದುವೇಳೆ ಸೌಭಪತಿಯನ್ನು ಸೇರಬೇಕೆಂದು ನಿನ್ನ ಮನಸ್ಸಿದ್ದರೆ ಮಹಾತ್ಮ ರಾಮನು ನಿನಗೋಸ್ಕರವಾಗಿ ಅವನ ಮೇಲೆ ನಿಬಂಧನೆಯನ್ನು ಹಾಕಬಲ್ಲನು.

05176003a ಅಥಾಪಗೇಯಂ ಭೀಷ್ಮಂ ತಂ ರಾಮೇಣೇಚ್ಚಸಿ ಧೀಮತಾ|

05176003c ರಣೇ ವಿನಿರ್ಜಿತಂ ದ್ರಷ್ಟುಂ ಕುರ್ಯಾತ್ತದಪಿ ಭಾರ್ಗವಃ||

ಅಥವಾ ಆಪಗೇಯ ಭೀಷ್ಮನನ್ನು ರಣದಲ್ಲಿ ಸೋಲುವುದನ್ನು ನೋಡಬೇಕೆಂದು ಇಚ್ಛಿಸಿದರೆ ಆ ಧೀಮತ ಭಾರ್ಗವ ರಾಮನು ಅದನ್ನೂ ಮಾಡಬಲ್ಲನು.

05176004a ಸೃಂಜಯಸ್ಯ ವಚಃ ಶ್ರುತ್ವಾ ತವ ಚೈವ ಶುಚಿಸ್ಮಿತೇ|

05176004c ಯದತ್ರಾನಂತರಂ ಕಾರ್ಯಂ ತದದ್ಯೈವ ವಿಚಿಂತ್ಯತಾಂ||

ಶುಚಿಸ್ಮಿತೇ! ನಿನ್ನ ಮತ್ತು ಸೃಂಜಯನ ಮಾತನ್ನು ಕೇಳಿ ಅನಂತರ ಯಾವುದನ್ನು ಮಾಡಬೇಕೆಂದು ಯೋಚಿಸೋಣ.”

05176005 ಅಂಬೋವಾಚ|

05176005a ಅಪನೀತಾಸ್ಮಿ ಭೀಷ್ಮೇಣ ಭಗವನ್ನವಿಜಾನತಾ|

05176005c ನ ಹಿ ಜಾನಾತಿ ಮೇ ಭೀಷ್ಮೋ ಬ್ರಹ್ಮಂ ಶಾಲ್ವಗತಂ ಮನಃ||

ಅಂಬೆಯು ಹೇಳಿದಳು: “ಭಗವನ್! ಭೀಷ್ಮನು ತಿಳಿಯದೆಯೇ ನನ್ನನ್ನು ಅಪಹರಿಸಿದನು. ಏಕೆಂದರೆ ಬ್ರಹ್ಮನ್! ಭೀಷ್ಮನಿಗೆ ನನ್ನ ಮನಸ್ಸು ಶಾಲ್ವನಿಗೆ ಹೋಗಿತ್ತೆಂದು ತಿಳಿದಿರಲಿಲ್ಲ.

05176006a ಏತದ್ವಿಚಾರ್ಯ ಮನಸಾ ಭವಾನೇವ ವಿನಿಶ್ಚಯಂ|

05176006c ವಿಚಿನೋತು ಯಥಾನ್ಯಾಯಂ ವಿಧಾನಂ ಕ್ರಿಯತಾಂ ತಥಾ||

ಈ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ಯಥಾನ್ಯಾಯವಾದ ಉಪಾಯವನ್ನು ನೀವೇ ನಿಶ್ಚಯಿಸಬೇಕು ಮತ್ತು ಅದರಂತೆ ಮಾಡಬೇಕು.

05176007a ಭೀಷ್ಮೇ ವಾ ಕುರುಶಾರ್ದೂಲೇ ಶಾಲ್ವರಾಜೇಽಥ ವಾ ಪುನಃ|

05176007c ಉಭಯೋರೇವ ವಾ ಬ್ರಹ್ಮನ್ಯದ್ಯುಕ್ತಂ ತತ್ಸಮಾಚರ||

ಬ್ರಹ್ಮನ್! ಕುರುಶಾರ್ದೂಲ ಭೀಷ್ಮ ಅಥವಾ ಶಾಲ್ವರಾಜ ಇಬ್ಬರಲ್ಲಿ ಒಬ್ಬರ ಮೇಲೆ ಅಥವಾ ಇಬ್ಬರ ಮೇಲೂ, ಯಾವುದು ಸರಿಯೋ, ಅದನ್ನು ಮಾಡು.

05176008a ನಿವೇದಿತಂ ಮಯಾ ಹ್ಯೇತದ್ದುಃಖಮೂಲಂ ಯಥಾತಥಂ|

05176008c ವಿಧಾನಂ ತತ್ರ ಭಗವನ್ಕರ್ತುಮರ್ಹಸಿ ಯುಕ್ತಿತಃ||

ಭಗವನ್! ನನ್ನ ದುಃಖದ ಮೂಲವನ್ನು ಯಥಾವತ್ತಾಗಿ ಹೇಳಿದ್ದೇನೆ. ಭಗವನ್! ಅದರ ಕುರಿತು ಯಾವುದು ಸರಿಯೋ ಅದನ್ನು ಮಾಡಬೇಕು.”

05176009 ಅಕೃತವ್ರಣ ಉವಾಚ|

05176009a ಉಪಪನ್ನಮಿದಂ ಭದ್ರೇ ಯದೇವಂ ವರವರ್ಣಿನಿ|

05176009c ಧರ್ಮಂ ಪ್ರತಿ ವಚೋ ಬ್ರೂಯಾಃ ಶೃಣು ಚೇದಂ ವಚೋ ಮಮ||

ಅಕೃತವ್ರಣನು ಹೇಳಿದನು: “ಭದ್ರೇ! ವರವರ್ಣಿನಿ! ನೀನು ಹೇಳಿದುದೆಲ್ಲವೂ ಧರ್ಮದ ಪ್ರಕಾರವೇ ಇವೆ. ಇನ್ನು ನನ್ನ ಮಾತನ್ನೂ ಕೇಳು.

05176010a ಯದಿ ತ್ವಾಮಾಪಗೇಯೋ ವೈ ನ ನಯೇದ್ಗಜಸಾಹ್ವಯಂ|

05176010c ಶಾಲ್ವಸ್ತ್ವಾಂ ಶಿರಸಾ ಭೀರು ಗೃಹ್ಣೀಯಾದ್ರಾಮಚೋದಿತಃ||

ಒಂದುವೇಳೆ ಆಪಗೇಯನು ನಿನ್ನನ್ನು ಗಜಸಾಹ್ವಯಕ್ಕೆ ಕರೆದುಕೊಂಡು ಹೋಗದೇ ಇದ್ದಿದ್ದರೆ ಭೀರು! ರಾಮನ ಹೇಳಿಕೆಯನ್ನು ತಲೆಯಲ್ಲಿ ಹೊತ್ತು ಶಾಲ್ವನು ನಿನ್ನನ್ನು ಸ್ವೀಕರಿಸುತ್ತಿದ್ದನು.

05176011a ತೇನ ತ್ವಂ ನಿರ್ಜಿತಾ ಭದ್ರೇ ಯಸ್ಮಾನ್ನೀತಾಸಿ ಭಾಮಿನಿ|

05176011c ಸಂಶಯಃ ಶಾಲ್ವರಾಜಸ್ಯ ತೇನ ತ್ವಯಿ ಸುಮಧ್ಯಮೇ||

ಆದರೆ ಭದ್ರೇ! ಭಾಮಿನೀ! ಸುಮಧ್ಯಮೇ! ನಿನ್ನನ್ನು ಅವನು ಗೆದ್ದು ಅಪಹರಿಸಿಕೊಂಡು ಹೋದುದರಿಂದ ಶಾಲ್ವರಾಜನಿಗೆ ನಿನ್ನ ಮೇಲೆ ಸಂಶಯ ಬಂದಿದೆ.

05176012a ಭೀಷ್ಮಃ ಪುರುಷಮಾನೀ ಚ ಜಿತಕಾಶೀ ತಥೈವ ಚ|

05176012c ತಸ್ಮಾತ್ಪ್ರತಿಕ್ರಿಯಾ ಯುಕ್ತಾ ಭೀಷ್ಮೇ ಕಾರಯಿತುಂ ತ್ವಯಾ||

ಭೀಷ್ಮನು ಪೌರುಷದ ಸೊಕ್ಕಿನಲ್ಲಿದ್ದಾನೆ. ಗೆದ್ದ ಜಂಬದಲ್ಲಿದ್ದಾನೆ. ಆದುದರಿಂದ ನೀನು ಭೀಷ್ಮನಿಗೆ ಪ್ರತಿಕ್ರಿಯೆ ಮಾಡಿಸುವುದು ಯುಕ್ತವಾಗಿದೆ.”

05176013 ಅಂಬೋವಾಚ|

05176013a ಮಮಾಪ್ಯೇಷ ಮಹಾನ್ಬ್ರಹ್ಮನ್ ಹೃದಿ ಕಾಮೋಽಭಿವರ್ತತೇ|

05176013c ಘಾತಯೇಯಂ ಯದಿ ರಣೇ ಭೀಷ್ಮಮಿತ್ಯೇವ ನಿತ್ಯದಾ||

ಅಂಬೆಯು ಹೇಳಿದಳು: “ಬ್ರಹ್ಮನ್! ಒಂದುವೇಳೆ ನಾನು ರಣದಲ್ಲಿ ಭೀಷ್ಮನನ್ನು ಕೊಲ್ಲಬಹುದಾಗಿದ್ದರೆ ಎನ್ನುವ ಮಹಾ ಕಾಮವು ನಿತ್ಯವೂ ನನ್ನ ಹೃದಯದಲ್ಲಿ ಬೆಳೆಯುತ್ತಿದೆ.

05176014a ಭೀಷ್ಮಂ ವಾ ಶಾಲ್ವರಾಜಂ ವಾ ಯಂ ವಾ ದೋಷೇಣ ಗಚ್ಚಸಿ|

05176014c ಪ್ರಶಾಧಿ ತಂ ಮಹಾಬಾಹೋ ಯತ್ಕೃತೇಽಹಂ ಸುದುಃಖಿತಾ||

ದೋಷವು ಭೀಷ್ಮನ ಮೇಲಾದರೂ ಅಥವಾ ಶಾಲ್ವರಾಜನ ಮೇಲಾದರೂ ಹೋಗಲಿ. ಆದರೆ ಮಹಾಬಾಹೋ! ಯಾರ ಕೃತ್ಯದಿಂದ ನಾನು ತುಂಬಾ ದುಃಖಿತಳಾಗಿದ್ದೇನೋ ಅವನನ್ನು ಶಿಕ್ಷಿಸಬೇಕು.””

05176015 ಭೀಷ್ಮ ಉವಾಚ|

05176015a ಏವಂ ಕಥಯತಾಮೇವ ತೇಷಾಂ ಸ ದಿವಸೋ ಗತಃ|

05176015c ರಾತ್ರಿಶ್ಚ ಭರತಶ್ರೇಷ್ಠ ಸುಖಶೀತೋಷ್ಣಮಾರುತಾ||

ಭೀಷ್ಮನು ಹೇಳಿದನು: “ಭರತಶ್ರೇಷ್ಠ! ಈ ರೀತಿ ಅವರು ಮಾತನಾಡಿಕೊಳ್ಳುತ್ತಿರುವಾಗ ದಿನವು ಕಳೆಯಿತು. ಮತ್ತು ಸುಖ ಶೀತೋಷ್ಣ ಮಾರುತವು ಬೀಸಿ ರಾತ್ರಿಯೂ ಕಳೆಯಿತು.

05176016a ತತೋ ರಾಮಃ ಪ್ರಾದುರಾಸೀತ್ಪ್ರಜ್ವಲನ್ನಿವ ತೇಜಸಾ|

05176016c ಶಿಷ್ಯೈಃ ಪರಿವೃತೋ ರಾಜಂ ಜಟಾಚೀರಧರೋ ಮುನಿಃ||

ಆಗ ರಾಜನ್! ಶಿಷ್ಯರಿಂದ ಪರಿವೃತನಾಗಿ ಜಟಾಚೀರಧರ ಮುನಿ ರಾಮನು ಪ್ರಜ್ವಲಿಸುವ ತೇಜಸ್ಸಿನೊಂದಿಗೆ ಆಗಮಿಸಿದನು.

05176017a ಧನುಷ್ಪಾಣಿರದೀನಾತ್ಮಾ ಖಡ್ಗಂ ಬಿಭ್ರತ್ಪರಶ್ವಧೀ|

05176017c ವಿರಜಾ ರಾಜಶಾರ್ದೂಲ ಸೋಽಭ್ಯಯಾತ್ಸೃಂಜಯಂ ನೃಪಂ||

ರಾಜಶಾರ್ದೂಲ! ಕೈಯಲ್ಲಿ ಧನುಸ್ಸು, ಖಡ್ಗ ಮತ್ತು ಪರಶುಗಳನ್ನು ಹಿಡಿದು ಧೂಳಿಲ್ಲದೇ ಹೊಳೆಯುತ್ತಾ ಅವನು ಸೃಂಜಯರ ನೃಪನನ್ನು ಸಮೀಪಿಸಿದನು.

05176018a ತತಸ್ತಂ ತಾಪಸಾ ದೃಷ್ಟ್ವಾ ಸ ಚ ರಾಜಾ ಮಹಾತಪಾಃ|

05176018c ತಸ್ಥುಃ ಪ್ರಾಂಜಲಯಃ ಸರ್ವೇ ಸಾ ಚ ಕನ್ಯಾ ತಪಸ್ವಿನೀ||

ಆಗ ಆ ತಾಪಸನನ್ನು ನೋಡಿ ಆ ರಾಜ ಮಹಾತಪಸ್ವಿ, ಆ ತಪಸ್ವಿನಿ ಕನ್ಯೆ ಮತ್ತು ಎಲ್ಲರೂ ಕೈಮುಗಿದು ನಿಂತುಕೊಂಡರು.

05176019a ಪೂಜಯಾಮಾಸುರವ್ಯಗ್ರಾ ಮಧುಪರ್ಕೇಣ ಭಾರ್ಗವಂ|

05176019c ಅರ್ಚಿತಶ್ಚ ಯಥಾಯೋಗಂ ನಿಷಸಾದ ಸಹೈವ ತೈಃ||

ಭಾರ್ಗವನನ್ನು ಮಧುಪರ್ಕದಿಂದ ಪೂಜಿಸಿದರು. ಯಥಾಯೋಗವಾಗಿ ಪೂಜಿಸಲ್ಪಟ್ಟು ಅವನು ಅವರೊಂದಿಗೆ ಕುಳಿತುಕೊಂಡನು.

05176020a ತತಃ ಪೂರ್ವವ್ಯತೀತಾನಿ ಕಥಯೇತೇ ಸ್ಮ ತಾವುಭೌ|

05176020c ಸೃಂಜಯಶ್ಚ ಸ ರಾಜರ್ಷಿರ್ಜಾಮದಗ್ನ್ಯಶ್ಚ ಭಾರತ||

ಭಾರತ! ಆಗ ರಾಜರ್ಷಿ ಸೃಂಜಯ ಮತ್ತು ಜಾಮದಗ್ನಿ ಇಬ್ಬರೂ ಹಿಂದೆ ನಡೆದುದರ ಕುರಿತು ಮಾತುಕಥೆಯನ್ನಾಡಿದರು.

05176021a ತತಃ ಕಥಾಂತೇ ರಾಜರ್ಷಿರ್ಭೃಗುಶ್ರೇಷ್ಠಂ ಮಹಾಬಲಂ|

05176021c ಉವಾಚ ಮಧುರಂ ಕಾಲೇ ರಾಮಂ ವಚನಮರ್ಥವತ್||

ಆಗ ಮಾತಿನ ಕೊನೆಯಲ್ಲಿ ಮಧುರ ಕಾಲದಲ್ಲಿ ರಾಜರ್ಷಿಯು ಮಹಾಬಲ ಭೃಗುಶ್ರೇಷ್ಠ ರಾಮನಿಗೆ ಅರ್ಥವತ್ತಾದ ಈ ಮಾತುಗಳನ್ನಾಡಿದನು:

05176022a ರಾಮೇಯಂ ಮಮ ದೌಹಿತ್ರೀ ಕಾಶಿರಾಜಸುತಾ ಪ್ರಭೋ|

05176022c ಅಸ್ಯಾಃ ಶೃಣು ಯಥಾತತ್ತ್ವಂ ಕಾರ್ಯಂ ಕಾರ್ಯವಿಶಾರದ||

“ರಾಮ! ಪ್ರಭೋ! ಇವಳು ನನ್ನ ಮಗಳ ಮಗಳು, ಕಾಶಿರಾಜಸುತೆ. ಕಾರ್ಯವಿಶಾರದ! ಇವಳನ್ನು ಕೇಳಿ ಹೇಗೆ ತಿಳಿಯುತ್ತದೆಯೋ ಹಾಗೆ ಮಾಡು.”

05176023a ಪರಮಂ ಕಥ್ಯತಾಂ ಚೇತಿ ತಾಂ ರಾಮಃ ಪ್ರತ್ಯಭಾಷತ|

05176023c ತತಃ ಸಾಭ್ಯಗಮದ್ರಾಮಂ ಜ್ವಲಂತಮಿವ ಪಾವಕಂ||

“ಆಗಲಿ. ಹೇಳು!” ಎಂದು ರಾಮನು ಅವಳಿಗೆ ಹೇಳಲು ಅವಳು ಬೆಂಕಿಯಂತ ಕಣ್ಣೀರನ್ನು ಸುರಿಸುತ್ತಾ ರಾಮನಲ್ಲಿಗೆ ಬಂದಳು.

05176024a ಸಾ ಚಾಭಿವಾದ್ಯ ಚರಣೌ ರಾಮಸ್ಯ ಶಿರಸಾ ಶುಭಾ|

05176024c ಸ್ಪೃಷ್ಟ್ವಾ ಪದ್ಮದಲಾಭಾಭ್ಯಾಂ ಪಾಣಿಭ್ಯಾಮಗ್ರತಃ ಸ್ಥಿತಾ||

ಆ ಶುಭೆಯು ರಾಮನ ಚರಣಗಳಿಗೆ ಶಿರಸಾ ನಮಸ್ಕರಿಸಿ, ಪದ್ಮದಲಗಳಂತಿರುವ ಕೈಗಳಿಂದ ಮುಟ್ಟಿ, ನಿಂತುಕೊಂಡಳು.

05176025a ರುರೋದ ಸಾ ಶೋಕವತೀ ಬಾಷ್ಪವ್ಯಾಕುಲಲೋಚನಾ|

05176025c ಪ್ರಪೇದೇ ಶರಣಂ ಚೈವ ಶರಣ್ಯಂ ಭೃಗುನಂದನಂ||

ಕಣ್ಣೀರುತುಂಬಿದ ಕಣ್ಣುಗಳ ಆ ಶೋಕವತಿಯು ರೋದಿಸಿದಳು. ಶರಣ್ಯ ಭೃಗುನಂದನನ ಶರಣು ಹೊಕ್ಕಳು.

05176026 ರಾಮ ಉವಾಚ|

05176026a ಯಥಾಸಿ ಸೃಂಜಯಸ್ಯಾಸ್ಯ ತಥಾ ಮಮ ನೃಪಾತ್ಮಜೇ|

05176026c ಬ್ರೂಹಿ ಯತ್ತೇ ಮನೋದುಃಖಂ ಕರಿಷ್ಯೇ ವಚನಂ ತವ||

ರಾಮನು ಹೇಳಿದನು: “ನೃಪಾತ್ಮಜೇ! ಸೃಂಜಯನಿಗೆ ನೀನು ಹೇಗೋ ಹಾಗೆ ನನಗೂ ಕೂಡ. ನಿನ್ನ ಮನೋದುಃಖವೇನೆಂದು ಹೇಳು. ನಿನ್ನ ಮಾತನ್ನು ಮಾಡಿಕೊಡುತ್ತೇನೆ.”

05176027 ಅಂಬೋವಾಚ|

05176027a ಭಗವಂ ಶರಣಂ ತ್ವಾದ್ಯ ಪ್ರಪನ್ನಾಸ್ಮಿ ಮಹಾವ್ರತ|

05176027c ಶೋಕಪಂಕಾರ್ಣವಾದ್ಘೋರಾದುದ್ಧರಸ್ವ ಚ ಮಾಂ ವಿಭೋ||

ಅಂಬೆಯು ಹೇಳಿದಳು: “ಮಹಾವ್ರತ! ಭಗವನ್! ಇಂದು ನಿನ್ನ ಶರಣು ಹೊಕ್ಕಿದ್ದೇನೆ. ವಿಭೋ! ನನ್ನನ್ನು ಘೋರವಾದ ಈ ಶೋಕದ ಕೆಸರು-ಕೂಪದಿಂದ ಉದ್ಧರಿಸು.””

05176028 ಭೀಷ್ಮ ಉವಾಚ|

05176028a ತಸ್ಯಾಶ್ಚ ದೃಷ್ಟ್ವಾ ರೂಪಂ ಚ ವಯಶ್ಚಾಭಿನವಂ ಪುನಃ|

05176028c ಸೌಕುಮಾರ್ಯಂ ಪರಂ ಚೈವ ರಾಮಶ್ಚಿಂತಾಪರೋಽಭವತ್||

ಭೀಷ್ಮನು ಹೇಳಿದನು: “ಅವಳ ರೂಪ, ವಯಸ್ಸು, ಅಭಿನವ ಮತ್ತು ಪರಮ ಸೌಕುಮಾರ್ಯವನ್ನು ನೋಡಿ ರಾಮನು ಚಿಂತಾಪರನಾದನು.

05176029a ಕಿಮಿಯಂ ವಕ್ಷ್ಯತೀತ್ಯೇವಂ ವಿಮೃಶನ್ಭೃಗುಸತ್ತಮಃ|

05176029c ಇತಿ ದಧ್ಯೌ ಚಿರಂ ರಾಮಃ ಕೃಪಯಾಭಿಪರಿಪ್ಲುತಃ||

“ಇವಳು ಏನನ್ನು ಹೇಳಲಿದ್ದಾಳೆ?” ಎಂದು ವಿಮರ್ಶಿಸಿ ಭೃಗುಸತ್ತಮ ರಾಮನು ಒಂದು ಕ್ಷಣ ಯೋಚಿಸಿ ಕೃಪೆಯಿಂದ ಅವಳನ್ನು ನೋಡಿದನು.

05176030a ಕಥ್ಯತಾಮಿತಿ ಸಾ ಭೂಯೋ ರಾಮೇಣೋಕ್ತಾ ಶುಚಿಸ್ಮಿತಾ|

05176030c ಸರ್ವಮೇವ ಯಥಾತತ್ತ್ವಂ ಕಥಯಾಮಾಸ ಭಾರ್ಗವೇ||

“ಹೇಳು!” ಎಂದು ಪುನಃ ರಾಮನು ಹೇಳಲು ಶುಚಿಸ್ಮಿತೆಯು ಭಾರ್ಗವನಿಗೆ ನಡೆದುದೆಲ್ಲವನ್ನೂ ಹೇಳಿದಳು.

05176031a ತಚ್ಚ್ರುತ್ವಾ ಜಾಮದಗ್ನ್ಯಸ್ತು ರಾಜಪುತ್ರ್ಯಾ ವಚಸ್ತದಾ|

05176031c ಉವಾಚ ತಾಂ ವರಾರೋಹಾಂ ನಿಶ್ಚಿತ್ಯಾರ್ಥವಿನಿಶ್ಚಯಂ||

ರಾಜಪುತ್ರಿಯ ಆ ಮಾತುಗಳನ್ನು ಕೇಳಿ ಜಾಮದಗ್ನಿಯು ನಿಶ್ಚಿತಾರ್ಥವನ್ನು ಆ ವರಾರೋಹೆಗೆ ತಿಳಿಸಿದನು.

05176032a ಪ್ರೇಷಯಿಷ್ಯಾಮಿ ಭೀಷ್ಮಾಯ ಕುರುಶ್ರೇಷ್ಠಾಯ ಭಾಮಿನಿ|

05176032c ಕರಿಷ್ಯತಿ ವಚೋ ಧರ್ಮ್ಯಂ ಶ್ರುತ್ವಾ ಮೇ ಸ ನರಾಧಿಪಃ||

“ಭಾಮಿನೀ! ಕುರುಶ್ರೇಷ್ಠ ಭೀಷ್ಮನಿಗೆ ಹೇಳಿ ಕಳುಹಿಸುತ್ತೇನೆ. ಆ ನರಾಧಿಪನು ನನ್ನ ಮಾತುಗಳನ್ನು ಕೇಳಿ ಧರ್ಮಯುಕ್ತವಾದುದನ್ನು ಮಾಡುತ್ತಾನೆ.

05176033a ನ ಚೇತ್ಕರಿಷ್ಯತಿ ವಚೋ ಮಯೋಕ್ತಂ ಜಾಹ್ನವೀಸುತಃ|

05176033c ಧಕ್ಷ್ಯಾಮ್ಯೇನಂ ರಣೇ ಭದ್ರೇ ಸಾಮಾತ್ಯಂ ಶಸ್ತ್ರತೇಜಸಾ||

ಭದ್ರೇ! ನಾನು ಹೇಳಿದ ಮಾತಿನಂತೆ ನಡೆದುಕೊಳ್ಳದೇ ಇದ್ದರೆ ನಾನು ಅಸ್ತ್ರತೇಜಸ್ಸಿನಿಂದ ಅಮಾತ್ಯರೊಂದಿಗೆ ಜಾಹ್ನವೀಸುತನನ್ನು ರಣದಲ್ಲಿ ಸುಟ್ಟುಹಾಕುತ್ತೇನೆ.

05176034a ಅಥ ವಾ ತೇ ಮತಿಸ್ತತ್ರ ರಾಜಪುತ್ರಿ ನಿವರ್ತತೇ|

05176034c ತಾವಚ್ಚಾಲ್ವಪತಿಂ ವೀರಂ ಯೋಜಯಾಮ್ಯತ್ರ ಕರ್ಮಣಿ||

ಅಥವಾ ರಾಜಪುತ್ರಿ! ನಿನಗೆ ಆ ಕಡೆ ಮನಸ್ಸು ತಿರುಗಿದರೆ ಮೊದಲು ನಾನು ವೀರ ಶಾಲ್ವಪತಿಯನ್ನು ಕಾರ್ಯಗತನಾಗುವಂತೆ ಮಾಡುತ್ತೇನೆ.”

05176035 ಅಂಬೋವಾಚ|

05176035a ವಿಸರ್ಜಿತಾಸ್ಮಿ ಭೀಷ್ಮೇಣ ಶ್ರುತ್ವೈವ ಭೃಗುನಂದನ|

05176035c ಶಾಲ್ವರಾಜಗತಂ ಚೇತೋ ಮಮ ಪೂರ್ವಂ ಮನೀಷಿತಂ||

ಅಂಬೆಯು ಹೇಳಿದಳು: “ಭೃಗುನಂದನ! ಮೊದಲೇ ನನ್ನ ಮನಸ್ಸು ಶಾಲ್ವರಾಜನ ಮೇಲೆ ಹೋಗಿದೆ ಎಂದು ತಿಳಿದಕೂಡಲೇ ಭೀಷ್ಮನು ನನ್ನನ್ನು ಬಿಟ್ಟುಬಿಟ್ಟಿದ್ದಾನೆ.

05176036a ಸೌಭರಾಜಮುಪೇತ್ಯಾಹಮಬ್ರುವಂ ದುರ್ವಚಂ ವಚಃ|

05176036c ನ ಚ ಮಾಂ ಪ್ರತ್ಯಗೃಹ್ಣಾತ್ಸ ಚಾರಿತ್ರಪರಿಶಂಕಿತಃ||

ಸೌಭರಾಜನಲ್ಲಿಗೆ ಹೋಗಿ ಅವನಿಗೆ ನನ್ನ ಕಷ್ಟದ ಮಾತುಗಳನ್ನಾಡಿದೆನು. ಅವನಾದರೋ ನನ್ನ ಚಾರಿತ್ರವನ್ನು ಶಂಕಿಸಿ ನನ್ನನ್ನು ಸ್ವೀಕರಿಸಲಿಲ್ಲ.

05176037a ಏತತ್ಸರ್ವಂ ವಿನಿಶ್ಚಿತ್ಯ ಸ್ವಬುದ್ಧ್ಯಾ ಭೃಗುನಂದನ|

05176037c ಯದತ್ರೌಪಯಿಕಂ ಕಾರ್ಯಂ ತಚ್ಚಿಂತಯಿತುಮರ್ಹಸಿ||

ಭೃಗುನಂದನ! ಇವೆಲ್ಲವನ್ನೂ ಸ್ವಬುದ್ಧಿಯಿಂದ ವಿಮರ್ಶಿಸಿ ಈ ವಿಷಯದಲ್ಲಿ ಏನನ್ನು ಮಾಡಬೇಕೆನ್ನುವುದನ್ನು ಚಿಂತಿಸಬೇಕಾಗಿದೆ.

05176038a ಮಮಾತ್ರ ವ್ಯಸನಸ್ಯಾಸ್ಯ ಭೀಷ್ಮೋ ಮೂಲಂ ಮಹಾವ್ರತಃ|

05176038c ಯೇನಾಹಂ ವಶಮಾನೀತಾ ಸಮುತ್ಕ್ಷಿಪ್ಯ ಬಲಾತ್ತದಾ||

ಅಲ್ಲಿ ನನ್ನನ್ನು ವಶಮಾಡಿಕೊಂಡು ಬಲಾತ್ಕಾರವಾಗಿ ಎತ್ತಿಕೊಂಡು ಹೋದ ಮಹಾವ್ರತ ಭೀಷ್ಮನೇ ನನ್ನ ಈ ವ್ಯಸನದ ಮೂಲ.

05176039a ಭೀಷ್ಮಂ ಜಹಿ ಮಹಾಬಾಹೋ ಯತ್ಕೃತೇ ದುಃಖಮೀದೃಶಂ|

05176039c ಪ್ರಾಪ್ತಾಹಂ ಭೃಗುಶಾರ್ದೂಲ ಚರಾಮ್ಯಪ್ರಿಯಮುತ್ತಮಂ||

ಮಹಾಬಾಹೋ! ಭೃಗುಶಾರ್ದೂಲ! ಈ ರೀತಿಯ ದುಃಖವನ್ನು ನನಗೆ ತಂದೊದಗಿಸಿದ, ಯಾರಿಂದ ಈ ಮಹಾ ದುಃಖವನ್ನು  ಹೊತ್ತು ತಿರುಗುತ್ತಿದ್ದೇನೋ ಆ ಭೀಷ್ಮನನ್ನು ಕೊಲ್ಲು!

05176040a ಸ ಹಿ ಲುಬ್ಧಶ್ಚ ಮಾನೀ ಚ ಜಿತಕಾಶೀ ಚ ಭಾರ್ಗವ|

05176040c ತಸ್ಮಾತ್ಪ್ರತಿಕ್ರಿಯಾ ಕರ್ತುಂ ಯುಕ್ತಾ ತಸ್ಮೈ ತ್ವಯಾನಘ||

ಭಾರ್ಗವ! ಅವನು ಲುಬ್ಧ, ಸೊಕ್ಕಿನವ, ವಿಜಯಶಾಲಿಯೆಂದು ಜಂಬವಿದೆ. ಅನಘ! ಆದುದರಿಂದ ಅವನೊಂದಿಗೆ ಸೇಡು ತೀರಿಸಿಕೊಳ್ಳುವುದು ಯುಕ್ತವಾಗಿದೆ.

05176041a ಏಷ ಮೇ ಹ್ರಿಯಮಾಣಾಯಾ ಭಾರತೇನ ತದಾ ವಿಭೋ|

05176041c ಅಭವದ್ಧೃದಿ ಸಂಕಲ್ಪೋ ಘಾತಯೇಯಂ ಮಹಾವ್ರತಂ||

ವಿಭೋ! ಭಾರತನು ನನ್ನನ್ನು ಅಪಹರಿಸಿಕೊಂಡು ಹೋಗುತ್ತಿರುವಾಗ ಆ ಮಹಾವ್ರತನನ್ನು ಕೊಲ್ಲಬೇಕೆನ್ನುವ ಸಂಕಲ್ಪವು ನನ್ನ ಹೃದಯದಲ್ಲಿ ಬಂದಿತ್ತು.

05176042a ತಸ್ಮಾತ್ಕಾಮಂ ಮಮಾದ್ಯೇಮಂ ರಾಮ ಸಂವರ್ತಯಾನಘ|

05176042c ಜಹಿ ಭೀಷ್ಮಂ ಮಹಾಬಾಹೋ ಯಥಾ ವೃತ್ರಂ ಪುರಂದರಃ||

ರಾಮ! ಅನಘ! ಮಹಾಬಾಹೋ! ನನ್ನ ಬಯಕೆಯನ್ನು ಪೂರೈಸು. ಪುರಂದರನು ವೃತ್ರನನ್ನು ಹೇಗೋ ಹಾಗೆ ಭೀಷ್ಮನನ್ನು ಸಂಹರಿಸು!””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ರಾಮಾಂಬಾಸಂವಾದೇ ಷಡ್‌ಸಪ್ತತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ರಾಮಾಂಬಾಸಂವಾದದಲ್ಲಿ ನೂರಾಎಪ್ಪತ್ತಾರನೆಯ ಅಧ್ಯಾಯವು.

Image result for flowers against white background"

Comments are closed.