Udyoga Parva: Chapter 175

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೭೫

ಅಕೃತವ್ರಣ-ಅಂಬಾ ಸಂವಾದ

ಅದೇ ಸಮಯದಲ್ಲಿ ಅಲ್ಲಿಗೆ ಬಂದ ಪರಶುರಾಮನ ಮಿತ್ರ ಅಕೃತವ್ರಣನಿಗೆ ಹೋತ್ರವಾಹನನು ಅಂಬೆಯ ಕಷ್ಟಗಳನ್ನು ತಿಳಿಸಿ ಭೀಷ್ಮನೇ ಈ ಕಷ್ಟಗಳಿಗೆ ಮೂಲ ಕಾರಣನೆಂದು ತಿಳಿಸಲು ಪರಶುರಾಮನು ಆ ತಪೋವನಕ್ಕೆ ಬರುವವನಿದ್ದಾನೆ ಎಂದು ತಿಳಿಯುವುದು (೧-೩೦).

05175001 ಹೋತ್ರವಾಹನ ಉವಾಚ|

05175001a ರಾಮಂ ದ್ರಕ್ಷ್ಯಸಿ ವತ್ಸೇ ತ್ವಂ ಜಾಮದಗ್ನ್ಯಂ ಮಹಾವನೇ|

05175001c ಉಗ್ರೇ ತಪಸಿ ವರ್ತಂತಂ ಸತ್ಯಸಂಧಂ ಮಹಾಬಲಂ||

ಹೋತ್ರವಾಹನನು ಹೇಳಿದನು: “ವತ್ಸೇ! ಮಹಾವನದಲ್ಲಿ ಉಗ್ರತಪಸ್ಸಿನಲ್ಲಿ ನಿರತನಾಗಿರುವ ಸತ್ಯಸಂಧ ಮಹಾಬಲ ಜಾಮದಗ್ನಿಯನ್ನು ನೀನು ಕಾಣುತ್ತೀಯೆ.

05175002a ಮಹೇಂದ್ರೇ ವೈ ಗಿರಿಶ್ರೇಷ್ಠೇ ರಾಮಂ ನಿತ್ಯಮುಪಾಸತೇ|

05175002c ಋಷಯೋ ವೇದವಿದುಷೋ ಗಂಧರ್ವಾಪ್ಸರಸಸ್ತಥಾ||

ಗಿರಿಶ್ರೇಷ್ಠವಾದ ಮಹೇಂದ್ರದಲ್ಲಿ ಋಷಿಗಳು, ವೇದವಿದುಷರು, ಮತ್ತು ಗಂಧರ್ವಾಪ್ಸರೆಯರು ನಿತ್ಯವೂ ರಾಮನನ್ನು ಉಪಾಸಿಸುತ್ತಾರೆ.

05175003a ತತ್ರ ಗಚ್ಚಸ್ವ ಭದ್ರಂ ತೇ ಬ್ರೂಯಾಶ್ಚೈನಂ ವಚೋ ಮಮ|

05175003c ಅಭಿವಾದ್ಯ ಪೂರ್ವಂ ಶಿರಸಾ ತಪೋವೃದ್ಧಂ ದೃಢವ್ರತಂ||

ಅಲ್ಲಿಗೆ ಹೋಗು! ನಿನಗೆ ಮಂಗಳವಾಗಲಿ. ಮೊದಲು ಆ ತಪೋವೃದ್ಧ ದೃಢವ್ರತನಿಗೆ ಶಿರಸಾ ವಂದಿಸಿ ನಾನು ಹೇಳಿದುದನ್ನು ಅವನಿಗೆ ಹೇಳು.

05175004a ಬ್ರೂಯಾಶ್ಚೈನಂ ಪುನರ್ಭದ್ರೇ ಯತ್ತೇ ಕಾರ್ಯಂ ಮನೀಷಿತಂ|

05175004c ಮಯಿ ಸಂಕೀರ್ತಿತೇ ರಾಮಃ ಸರ್ವಂ ತತ್ತೇ ಕರಿಷ್ಯತಿ||

ಭದ್ರೇ! ಯಾವ ಕಾರ್ಯವಾಗಬೇಕೆಂದು ಬಯಸುತ್ತೀಯೋ ಅದನ್ನೂ ಹೇಳು. ನನ್ನ ಹೆಸರನ್ನು ಹೇಳು. ರಾಮನು ಎಲ್ಲವನ್ನೂ ನಿನಗೆ ಮಾಡುತ್ತಾನೆ.

05175005a ಮಮ ರಾಮಃ ಸಖಾ ವತ್ಸೇ ಪ್ರೀತಿಯುಕ್ತಃ ಸುಹೃಚ್ಚ ಮೇ|

05175005c ಜಮದಗ್ನಿಸುತೋ ವೀರಃ ಸರ್ವಶಸ್ತ್ರಭೃತಾಂ ವರಃ||

ವತ್ಸೇ! ವೀರ, ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠ, ಜಮದಗ್ನಿಸುತ ರಾಮನು ನನ್ನ ಸಖ. ಪ್ರೀತಿಯ ಸ್ನೇಹಿತ.”

05175006a ಏವಂ ಬ್ರುವತಿ ಕನ್ಯಾಂ ತು ಪಾರ್ಥಿವೇ ಹೋತ್ರವಾಹನೇ|

05175006c ಅಕೃತವ್ರಣಃ ಪ್ರಾದುರಾಸೀದ್ರಾಮಸ್ಯಾನುಚರಃ ಪ್ರಿಯಃ||

ಪಾರ್ಥಿವ ಹೋತ್ರವಾಹನನು ಕನ್ಯೆಗೆ ಹೀಗೆ ಹೇಳುತ್ತಿರಲು ಅಲ್ಲಿಗೆ ರಾಮನ ಪ್ರಿಯ ಅನುಚರ ಅಕೃತವ್ರಣನು ಆಗಮಿಸಿದನು.

05175007a ತತಸ್ತೇ ಮುನಯಃ ಸರ್ವೇ ಸಮುತ್ತಸ್ಥುಃ ಸಹಸ್ರಶಃ|

05175007c ಸ ಚ ರಾಜಾ ವಯೋವೃದ್ಧಃ ಸೃಂಜಯೋ ಹೋತ್ರವಾಹನಃ||

ಆಗ ಸಹಸ್ರಾರು ಸಂಖ್ಯೆಗಳಲ್ಲಿ ಆ ಮುನಿಗಳೆಲ್ಲರೂ ಒಟ್ಟಿಗೇ ಮೇಲೆದ್ದರು. ರಾಜಾ ವಯೋವೃದ್ಧ ಸೃಂಜಯ ಹೋತ್ರವಾಹನನೂ ಕೂಡ ಹಾಗೆಯೇ ಮಾಡಿದನು.

05175008a ತತಃ ಪೃಷ್ಟ್ವಾ ಯಥಾನ್ಯಾಯಮನ್ಯೋನ್ಯಂ ತೇ ವನೌಕಸಃ|

05175008c ಸಹಿತಾ ಭರತಶ್ರೇಷ್ಠ ನಿಷೇದುಃ ಪರಿವಾರ್ಯ ತಂ||

ಭರತಶ್ರೇಷ್ಠ! ಆಗ ಆ ವನೌಕಸರಿಬ್ಬರೂ ಯಥಾನ್ಯಾಯವಾಗಿ ಅನ್ಯೋನ್ಯರನ್ನು ಪ್ರಶ್ನಿಸಿ, ಒಟ್ಟಿಗೇ ಸುತ್ತುವರೆಯಲ್ಪಟ್ಟು ಕುಳಿತು ಕೊಂಡರು.

05175009a ತತಸ್ತೇ ಕಥಯಾಮಾಸುಃ ಕಥಾಸ್ತಾಸ್ತಾ ಮನೋರಮಾಃ|

05175009c ಕಾಂತಾ ದಿವ್ಯಾಶ್ಚ ರಾಜೇಂದ್ರ ಪ್ರೀತಿಹರ್ಷಮುದಾ ಯುತಾಃ||

ರಾಜೇಂದ್ರ! ಆಗ ಅವರಿಬ್ಬರೂ ಪ್ರೀತಿ, ಹರ್ಷ, ಮುದದಿಂದ ಕೂಡಿದ ಮನೋರಮ ದಿವ್ಯ ಕಥೆಗಳನ್ನು ಹೇಳಿ ಮಾತನಾಡಿದರು.

05175010a ತತಃ ಕಥಾಂತೇ ರಾಜರ್ಷಿರ್ಮಹಾತ್ಮಾ ಹೋತ್ರವಾಹನಃ|

05175010c ರಾಮಂ ಶ್ರೇಷ್ಠಂ ಮಹರ್ಷೀಣಾಮಪೃಚ್ಚದಕೃತವ್ರಣಂ||

ಆಗ ಮಾತಿನ ಕೊನೆಯಲ್ಲಿ ರಾಜರ್ಷಿ ಮಹಾತ್ಮ ಹೋತ್ರವಾಹನನು ಶ್ರೇಷ್ಠ ರಾಮನ ಕುರಿತು ಮಹರ್ಷಿ ಅಕೃತವ್ರಣನಲ್ಲಿ ಕೇಳಿದನು:

05175011a ಕ್ವ ಸಂಪ್ರತಿ ಮಹಾಬಾಹೋ ಜಾಮದಗ್ನ್ಯಃ ಪ್ರತಾಪವಾನ್|

05175011c ಅಕೃತವ್ರಣ ಶಕ್ಯೋ ವೈ ದ್ರಷ್ಟುಂ ವೇದವಿದಾಂ ವರಃ||

“ಮಹಾಬಾಹೋ! ಪ್ರತಾಪವಾನ್ ಜಾಮದಗ್ನಿಯು ಈಗ ಎಲ್ಲಿ ಕಾಣಲು ಸಿಗುತ್ತಾನೆ? ಅಕೃತವ್ರಣ! ವೇದವಿದರಲ್ಲಿ ಶ್ರೇಷ್ಠನಾದ ಅವನನ್ನು ನೋಡಲು ಶಕ್ಯವಿದೆಯೇ?”

05175012 ಅಕೃತವ್ರಣ ಉವಾಚ|

05175012a ಭವಂತಮೇವ ಸತತಂ ರಾಮಃ ಕೀರ್ತಯತಿ ಪ್ರಭೋ|

05175012c ಸೃಂಜಯೋ ಮೇ ಪ್ರಿಯಸಖೋ ರಾಜರ್ಷಿರಿತಿ ಪಾರ್ಥಿವ||

ಅಕೃತವ್ರಣನು ಹೇಳಿದನು: “ಪ್ರಭೋ! ಪಾರ್ಥಿವ! ರಾಮನು ರಾಜರ್ಷಿ ಸೃಂಜಯನು ನನ್ನ ಪ್ರಿಯ ಸಖನೆಂದು ಸತತವಾಗಿ ನಿನ್ನ ಕುರಿತೇ ಹೇಳುತ್ತಿರುತ್ತಾನೆ.

05175013a ಇಹ ರಾಮಃ ಪ್ರಭಾತೇ ಶ್ವೋ ಭವಿತೇತಿ ಮತಿರ್ಮಮ|

05175013c ದ್ರಷ್ಟಾಸ್ಯೇನಮಿಹಾಯಾಂತಂ ತವ ದರ್ಶನಕಾಂಕ್ಷಯಾ||

ನಾಳೆ ಪ್ರಭಾತದಲ್ಲಿ ರಾಮನು ಇಲ್ಲಿರುತ್ತಾನೆಂದು ನನಗನ್ನಿಸುತ್ತದೆ. ನಿನ್ನನ್ನು ನೋಡಲು ಬಯಸಿ ಇಲ್ಲಿಗೇ ಬರುವ ಅವನನ್ನು ನೀನು ಕಾಣುತ್ತೀಯೆ.

05175014a ಇಯಂ ಚ ಕನ್ಯಾ ರಾಜರ್ಷೇ ಕಿಮರ್ಥಂ ವನಮಾಗತಾ|

05175014c ಕಸ್ಯ ಚೇಯಂ ತವ ಚ ಕಾ ಭವತೀಚ್ಚಾಮಿ ವೇದಿತುಂ||

ರಾಜರ್ಷೇ! ಈ ಕನ್ಯೆಯಾದರೋ ಏಕೆ ವನಕ್ಕೆ ಬಂದಿದ್ದಾಳೆ? ಇವಳು ಯಾರವಳು? ಮತ್ತು ನಿನಗೇನಾಗಬೇಕು? ಇದನ್ನು ತಿಳಿಯಲು ಬಯಸುತ್ತೇನೆ.”

05175015 ಹೋತ್ರವಾಹನ ಉವಾಚ|

05175015a ದೌಹಿತ್ರೀಯಂ ಮಮ ವಿಭೋ ಕಾಶಿರಾಜಸುತಾ ಶುಭಾ|

05175015c ಜ್ಯೇಷ್ಠಾ ಸ್ವಯಂವರೇ ತಸ್ಥೌ ಭಗಿನೀಭ್ಯಾಂ ಸಹಾನಘ||

ಹೋತ್ರವಾಹನನು ಹೇಳಿದನು: “ವಿಭೋ! ಅನಘ! ಇವಳು ನನ್ನ ಮಗಳ ಮಗಳು. ಕಾಶಿರಾಜ ಸುತೆ. ಈ ಶುಭೆ ಹಿರಿಯವಳು ಸ್ವಯಂವರದಲ್ಲಿ ತನ್ನ ಇಬ್ಬರು ತಂಗಿಯರೊಂದಿಗೆ ನಿಂತಿದ್ದಳು.

05175016a ಇಯಮಂಬೇತಿ ವಿಖ್ಯಾತಾ ಜ್ಯೇಷ್ಠಾ ಕಾಶಿಪತೇಃ ಸುತಾ|

05175016c ಅಂಬಿಕಾಂಬಾಲಿಕೇ ತ್ವನ್ಯೇ ಯವೀಯಸ್ಯೌ ತಪೋಧನ||

ಇವಳು ಅಂಬೆಯೆಂದು ವಿಖ್ಯಾತಳಾದ ಕಾಶಿಪತಿಯ ಜೇಷ್ಠ ಮಗಳು. ತಪೋಧನ! ಅಂಬಿಕಾ ಮತ್ತು ಅಂಬಾಲಿಕೆಯರು ಇವಳ ಇತರ ಕಿರಿಯರು.

05175017a ಸಮೇತಂ ಪಾರ್ಥಿವಂ ಕ್ಷತ್ರಂ ಕಾಶಿಪುರ್ಯಾಂ ತತೋಽಭವತ್|

05175017c ಕನ್ಯಾನಿಮಿತ್ತಂ ಬ್ರಹ್ಮರ್ಷೇ ತತ್ರಾಸೀದುತ್ಸವೋ ಮಹಾನ್||

ಬ್ರಹ್ಮರ್ಷೇ! ಆಗ ಕಾಶಿಪುರಿಯಲ್ಲಿ ಕ್ಷತ್ರಿಯ ಪಾರ್ಥಿವರೆಲ್ಲರೂ ಕನ್ಯನಿಮಿತ್ತವಾಗಿ ಸೇರಿದ್ದರು. ಅಲ್ಲಿ ಮಹಾ ಉತ್ಸವವೇ ನಡೆದಿತ್ತು.

05175018a ತತಃ ಕಿಲ ಮಹಾವೀರ್ಯೋ ಭೀಷ್ಮಃ ಶಾಂತನವೋ ನೃಪಾನ್|

05175018c ಅವಾಕ್ಷಿಪ್ಯ ಮಹಾತೇಜಾಸ್ತಿಸ್ರಃ ಕನ್ಯಾ ಜಹಾರ ತಾಃ||

ಆಗ ಮಹಾವೀರ್ಯಶಾಲೀ ಶಾಂತನವ ಭೀಷ್ಮನು ಮಹಾತೇಜಸ್ವಿ ನೃಪರನ್ನು ಸದೆಬಡಿದು ಮೂವರು ಕನ್ಯೆಯರನ್ನೂ ಅಪಹರಿಸಿದನು.

05175019a ನಿರ್ಜಿತ್ಯ ಪೃಥಿವೀಪಾಲಾನಥ ಭೀಷ್ಮೋ ಗಜಾಹ್ವಯಂ|

05175019c ಆಜಗಾಮ ವಿಶುದ್ಧಾತ್ಮಾ ಕನ್ಯಾಭಿಃ ಸಹ ಭಾರತ||

ಪೃಥಿವೀಪಾಲರನ್ನು ಗೆದ್ದು ಆ ವಿಶುಧ್ಧಾತ್ಮ ಭಾರತ ಭೀಷ್ಮನು ಕನ್ಯೆಯರೊಡನೆ ಗಜಾಹ್ವಯಕ್ಕೆ ಹಿಂದಿರುಗಿದನು.

05175020a ಸತ್ಯವತ್ಯೈ ನಿವೇದ್ಯಾಥ ವಿವಾಹಾರ್ಥಮನಂತರಂ|

05175020c ಭ್ರಾತುರ್ವಿಚಿತ್ರವೀರ್ಯಸ್ಯ ಸಮಾಜ್ಞಾಪಯತ ಪ್ರಭುಃ||

ಅನಂತರ ಸತ್ಯವತಿಗೆ ಹೇಳಿ ಪ್ರಭುವು ತಮ್ಮ ವಿಚಿತ್ರವೀರ್ಯನ ವಿವಾಹವನ್ನು ಆಜ್ಞಾಪಿಸಿದನು.

05175021a ತತೋ ವೈವಾಹಿಕಂ ದೃಷ್ಟ್ವಾ ಕನ್ಯೇಯಂ ಸಮುಪಾರ್ಜಿತಂ|

05175021c ಅಬ್ರವೀತ್ತತ್ರ ಗಾಂಗೇಯಂ ಮಂತ್ರಿಮಧ್ಯೇ ದ್ವಿಜರ್ಷಭ||

ದ್ವಿಜರ್ಷಭ! ಆಗ ವಿವಾಹದ ಸಿದ್ಧತೆಗಳನ್ನು ನೋಡಿ ಈ ಕನ್ಯೆಯು ಮಂತ್ರಿಗಳ ಮಧ್ಯದಲ್ಲಿ ಗಾಂಗೇಯನಿಗೆ ಹೇಳಿದಳು:

05175022a ಮಯಾ ಶಾಲ್ವಪತಿರ್ವೀರ ಮನಸಾಭಿವೃತಃ ಪತಿಃ|

05175022c ನ ಮಾಮರ್ಹಸಿ ಧರ್ಮಜ್ಞಾ ಪರಚಿತ್ತಾಂ ಪ್ರದಾಪಿತುಂ||

“ವೀರ! ಶಾಲ್ವಪತಿಯನ್ನು ನಾನು ಮನಸಾರೆ ಪತಿಯನ್ನಾಗಿ ಆರಿಸಿಕೊಂಡಿದ್ದೇನೆ. ಧರ್ಮಜ್ಞ! ಇನ್ನೊಬ್ಬನ ಮೇಲೆ ಮನಸ್ಸಿಟ್ಟಿರುವ ನನ್ನನ್ನು ಕೊಡುವುದು ಸರಿಯಲ್ಲ.”

05175023a ತಚ್ಚ್ರುತ್ವಾ ವಚನಂ ಭೀಷ್ಮಃ ಸಮ್ಮಂತ್ರ್ಯ ಸಹ ಮಂತ್ರಿಭಿಃ|

05175023c ನಿಶ್ಚಿತ್ಯ ವಿಸಸರ್ಜೇಮಾಂ ಸತ್ಯವತ್ಯಾ ಮತೇ ಸ್ಥಿತಃ||

ಅವಳ ಮಾತನ್ನು ಕೇಳಿ ಭೀಷ್ಮನು ಮಂತ್ರಿಗಳೊಂದಿಗೆ ಸಮಾಲೋಚನೆ ಮಾಡಿ ಸತ್ಯವತಿಯ ಅಭಿಪ್ರಾಯದಂತೆಯೂ ಇವಳನ್ನು ವಿಸರ್ಜಿಸಲು ನಿಶ್ಚಯಿಸಿದನು.

05175024a ಅನುಜ್ಞಾತಾ ತು ಭೀಷ್ಮೇಣ ಶಾಲ್ವಂ ಸೌಭಪತಿಂ ತತಃ|

05175024c ಕನ್ಯೇಯಂ ಮುದಿತಾ ವಿಪ್ರ ಕಾಲೇ ವಚನಮಬ್ರವೀತ್||

ವಿಪ್ರ! ಭೀಷ್ಮನಿಂದ ಅನುಜ್ಞಾತಳಾಗಿ ಸಂತೋಷಗೊಂಡು ಈ ಕನ್ಯೆಯು ಸೌಭಪತಿಗೆ ಹೇಳಿದಳು:

05175025a ವಿಸರ್ಜಿತಾಸ್ಮಿ ಭೀಷ್ಮೇಣ ಧರ್ಮಂ ಮಾಂ ಪ್ರತಿಪಾದಯ|

05175025c ಮನಸಾಭಿವೃತಃ ಪೂರ್ವಂ ಮಯಾ ತ್ವಂ ಪಾರ್ಥಿವರ್ಷಭ||

“ಪಾರ್ಥಿವರ್ಷಭ! ಭೀಷ್ಮನು ನನ್ನನ್ನು ಬಿಟ್ಟಿದ್ದಾನೆ. ಧರ್ಮವನ್ನು ಪ್ರತಿಪಾದಿಸು. ಹಿಂದೆಯೇ ನಾನು ನಿನ್ನನ್ನು ಮನಸಾ ಆರಿಸಿಕೊಂಡಿದ್ದೆ.”

05175026a ಪ್ರತ್ಯಾಚಖ್ಯೌ ಚ ಶಾಲ್ವೋಽಪಿ ಚಾರಿತ್ರಸ್ಯಾಭಿಶಂಕಿತಃ|

05175026c ಸೇಯಂ ತಪೋವನಂ ಪ್ರಾಪ್ತಾ ತಾಪಸ್ಯೇಽಭಿರತಾ ಭೃಶಂ||

ಇವಳ ಚಾರಿತ್ರವನ್ನು ಶಂಕಿಸಿ ಶಾಲ್ವನೂ ಕೂಡ ಇವಳನ್ನು ತ್ಯಜಿಸಿದನು. ಆ ಇವಳು ಈ ತಪೋವನವನ್ನು ಸೇರಿ ತುಂಬಾ ತಪಸ್ಸಿನಲ್ಲಿ ನಿರತಳಾಗಿದ್ದಾಳೆ.

05175027a ಮಯಾ ಚ ಪ್ರತ್ಯಭಿಜ್ಞಾತಾ ವಂಶಸ್ಯ ಪರಿಕೀರ್ತನಾತ್|

05175027c ಅಸ್ಯ ದುಃಖಸ್ಯ ಚೋತ್ಪತ್ತಿಂ ಭೀಷ್ಮಮೇವೇಹ ಮನ್ಯತೇ||

ಅವಳ ವಂಶದ ವಿವರಗಳನ್ನು ಹೇಳಿಕೊಂಡಾಗ ನಾನು ಇವಳನ್ನು ಗುರುತಿಸಿದೆ. ಭೀಷ್ಮನೇ ಈ ದುಃಖಕ್ಕೆ ಕಾರಣನೆಂದು ಇವಳ ಅಭಿಪ್ರಾಯ.”

05175028 ಅಂಬೋವಾಚ|

05175028a ಭಗವನ್ನೇವಮೇವೈತದ್ಯಥಾಹ ಪೃಥಿವೀಪತಿಃ|

05175028c ಶರೀರಕರ್ತಾ ಮಾತುರ್ಮೇ ಸೃಂಜಯೋ ಹೋತ್ರವಾಹನಃ||

ಅಂಬೆಯು ಹೇಳಿದಳು: “ಭಗವನ್! ಪೃಥಿವೀಪತಿಯು ಹೇಳಿದಂತೆಯೇ ನಡೆದಿದೆ. ಸೃಂಜಯ ಹೋತ್ರವಾಹನನು ನನ್ನ ತಾಯಿಯ ಶರೀರಕರ್ತ.

05175029a ನ ಹ್ಯುತ್ಸಹೇ ಸ್ವನಗರಂ ಪ್ರತಿಯಾತುಂ ತಪೋಧನ|

05175029c ಅವಮಾನಭಯಾಚ್ಚೈವ ವ್ರೀಡಯಾ ಚ ಮಹಾಮುನೇ||

ತಪೋಧನ! ನನ್ನ ನಗರಕ್ಕೆ ಹಿಂದಿರುಗಲು ಉತ್ಸಾಹವಿಲ್ಲ. ಮಹಾಮುನೇ! ಅವಮಾನ ಭಯವೂ ಇದೆ. ನಾಚಿಕೆಯೂ ಆಗುತ್ತಿದೆ.

05175030a ಯತ್ತು ಮಾಂ ಭಗವಾನ್ರಾಮೋ ವಕ್ಷ್ಯತಿ ದ್ವಿಜಸತ್ತಮ|

05175030c ತನ್ಮೇ ಕಾರ್ಯತಮಂ ಕಾರ್ಯಮಿತಿ ಮೇ ಭಗವನ್ಮತಿಃ||

ದ್ವಿಜಸತ್ತಮ! ಭಗವನ್! ಭಗವಾನ್ ರಾಮನು ಏನು ಹೇಳುತ್ತಾನೋ ಅದನ್ನೇ ಮಾಡಬೇಕೆಂದು ನನಗನ್ನಿಸುತ್ತಿದೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಅಕೃತವ್ರಣಾಂಬಾಸಂವಾದೇ ಪಂಚಸಪ್ತತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಅಕೃತವ್ರಣಾಂಬಾಸಂವಾದದಲ್ಲಿ ನೂರಾಎಪ್ಪತ್ತೈದನೆಯ ಅಧ್ಯಾಯವು.

Image result for indian motifs

Comments are closed.