Udyoga Parva: Chapter 133

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೩೩

ವಿದುಲೆಯು ತನ್ನ ಮಗನಿಗೆ ಮುಂದುವರಿಸಿ ಹೇಳುವುದು (೧-೩೭).

05133001 ಪುತ್ರ ಉವಾಚ|

05133001a ಕೃಷ್ಣಾಯಸಸ್ಯೇವ ಚ ತೇ ಸಂಹತ್ಯ ಹೃದಯಂ ಕೃತಂ|

05133001c ಮಮ ಮಾತಸ್ತ್ವಕರುಣೇ ವೈರಪ್ರಜ್ಞೇ ಹ್ಯಮರ್ಷಣೇ||

ಮಗನು ಹೇಳಿದನು: “ಮಾತಾ! ನನ್ನೊಡನೆ ಈ ರೀತಿ ಕರುಣೆಯಿಲ್ಲದೇ ವೈರಬುದ್ಧಿಯಿಂದ ಕ್ರೂರವಾಗಿ ಮಾತನಾಡುತ್ತಿರುವೆ ಎಂದರೆ ನಿನ್ನ ಹೃದಯವು ಕಬ್ಬಿಣದ ಗುಂಡಿನಿಂದ ಮಾಡಿದ್ದಾಗಿರಬೇಕು.

05133002a ಅಹೋ ಕ್ಷತ್ರಸಮಾಚಾರೋ ಯತ್ರ ಮಾಮಪರಂ ಯಥಾ|

05133002c ಈದೃಶಂ ವಚನಂ ಬ್ರೂಯಾದ್ಭವತೀ ಪುತ್ರಮೇಕಜಂ||

ಅಯ್ಯೋ! ನಾನೊಬ್ಬ ಬೇರೆಯವನೆಂಬಂತೆ ಈ ಕ್ಷತ್ರಸಮಾಚಾರಗಳನ್ನು, ಒಬ್ಬನೇ ಮಗನನ್ನು ಹೊಂದಿರುವ ನೀನು ಹೇಳುತ್ತಿದ್ದೀಯೆ!

05133003a ಕಿಂ ನು ತೇ ಮಾಮಪಶ್ಯಂತ್ಯಾಃ ಪೃಥಿವ್ಯಾ ಅಪಿ ಸರ್ವಯಾ|

05133003c ಕಿಮಾಭರಣಕೃತ್ಯಂ ತೇ ಕಿಂ ಭೋಗೈರ್ಜೀವಿತೇನ ವಾ||

ನಾನೇ ಕಾಣದ ನಿನಗೆ ಈ ಸರ್ವ ಪೃಥ್ವಿಯಾದರೂ ಏಕೆ? ನಿನಗೆ ಆಭರಣಗಳು ಏಕೆ? ಭೋಗಜೀವನವಾದರೂ ಏಕೆ?”

05133004 ಮಾತೋವಾಚ|

05133004a ಸರ್ವಾರಂಭಾ ಹಿ ವಿದುಷಾಂ ತಾತ ಧರ್ಮಾರ್ಥಕಾರಣಾತ್|

05133004c ತಾನೇವಾಭಿಸಮೀಕ್ಷ್ಯಾಹಂ ಸಂಜಯ ತ್ವಾಮಚೂಚುದಂ||

ಮಾತೆಯು ಹೇಳಿದಳು: “ಸಂಜಯ! ಮಗೂ! ವಿದುಷರ ಸರ್ವ ಕಾರ್ಯಗಳೂ ಧರ್ಮಾರ್ಥಕಾರಣಗಳಿಂದಾಗಿ. ಈ ಸಮಯದಲ್ಲಿ ಅದನ್ನೇ ಪರಿಶೀಲಿಸಿ ನಾನು ನಿನ್ನನ್ನು ಪ್ರಚೋದಿಸುತ್ತಿದ್ದೇನೆ.

05133005a ಸ ಸಮೀಕ್ಷ್ಯಕ್ರಮೋಪೇತೋ ಮುಖ್ಯಃ ಕಾಲೋಽಯಮಾಗತಃ|

05133005c ಅಸ್ಮಿಂಶ್ಚೇದಾಗತೇ ಕಾಲೇ ಕಾರ್ಯಂ ನ ಪ್ರತಿಪದ್ಯಸೇ|

05133005e ಅಸಂಭಾವಿತರೂಪಸ್ತ್ವಂ ಸುನೃಶಂಸಂ ಕರಿಷ್ಯಸಿ||

05133006a ತಂ ತ್ವಾಮಯಶಸಾ ಸ್ಪೃಷ್ಟಂ ನ ಬ್ರೂಯಾಂ ಯದಿ ಸಂಜಯ|

05133006c ಖರೀವಾತ್ಸಲ್ಯಮಾಹುಸ್ತನ್ನಿಹ್ಸಾಮರ್ಥ್ಯಮಹೇತುಕಂ||

ಸಮಯವು ಪ್ರಾಪ್ತವಾಗಿರುವಾಗಲೂ ನೀನು ಮುಖ್ಯವಾದ ಕೆಲಸವನ್ನು ಮಾಡದಿದ್ದರೆ, ಅಸ್ವಾಭಾವಿಕ ಬುದ್ಧಿಯನ್ನು ಹೊಂದಿ ಕುಳಿತಿರುವ ನೀನು ಶತ್ರುವಿನ ವಿಷಯದಲ್ಲಿ ಕ್ರೌರ್ಯದಿಂದ ವರ್ತಿಸದೇ ಇದ್ದರೆ ನಿನಗೆ ಸರ್ವತಃ ಅಪಯಶಸ್ಸು ಉಂಟಾಗುತ್ತದೆ. ಸಂಜಯ! ಇಂತಹ ಪರಿಸ್ಥಿತಿಯಲ್ಲಿ ನಾನೇನಾದರೂ ನಿನಗೆ ಸರಿಯಾದ ತಿಳುವಳಿಕೆಯನ್ನು ಕೊಡದಿದ್ದರೆ ನನಗೆ ನಿನ್ನಮೇಲಿರುವ ವಾತ್ಸಲ್ಯವನ್ನು ಗಾರ್ದಭಿ (ಹೆಣ್ಣುಕತ್ತೆ) ಯ ವಾತ್ಸಲ್ಯದಂತೆ ಸಾಮರ್ಥ್ಯರಹಿತವೂ ಅಕಾರಣವೂ ಎಂದೆನ್ನುತ್ತಾರೆ.

05133007a ಸದ್ಭಿರ್ವಿಗರ್ಹಿತಂ ಮಾರ್ಗಂ ತ್ಯಜ ಮೂರ್ಖನಿಷೇವಿತಂ|

05133007c ಅವಿದ್ಯಾ ವೈ ಮಹತ್ಯಸ್ತಿ ಯಾಮಿಮಾಂ ಸಂಶ್ರಿತಾಃ ಪ್ರಜಾಃ||

05133008a ತವ ಸ್ಯಾದ್ಯದಿ ಸದ್ವೃತ್ತಂ ತೇನ ಮೇ ತ್ವಂ ಪ್ರಿಯೋ ಭವೇಃ|

05133008c ಧರ್ಮಾರ್ಥಗುಣಯುಕ್ತೇನ ನೇತರೇಣ ಕಥಂ ಚನ|

05133008e ದೈವಮಾನುಷಯುಕ್ತೇನ ಸದ್ಭಿರಾಚರಿತೇನ ಚ||

ಮೂರ್ಖರಿಂದ ಸೇವಿಸಲ್ಪಡುವ ಮತ್ತು ಸತ್ಪುರುಷರಿಂದ ನಿಂದಿಸಲ್ಪಡುವ ಮಾರ್ಗವನ್ನು ಪರಿತ್ಯಜಿಸು. ಅವಿದ್ಯೆಯು ಮಹತ್ತರವಾದುದು. ಪ್ರಜೆಗಳು ಇದನ್ನೇ ಆಶ್ರಯಿಸಿರುತ್ತಾರೆ. ಸದ್ವಿದ್ಯೆವಿದೆಯೆಂದಾದರೆ, ಧರ್ಮಾರ್ಥಗುಣಗಳಿದ್ದರೆ, ದೈವ-ಮಾನುಷಯುಕ್ತನಾಗಿದ್ದರೆ, ಸತ್ಪುರುಷರ ಆಚರಣೆಯಲ್ಲಿದ್ದರೆ ಮಾತ್ರ ನೀನು ನನಗೆ ಪ್ರಿಯನಾಗುವೆ. ಅನ್ಯಥಾ ಇಲ್ಲ.

05133009a ಯೋ ಹ್ಯೇವಮವಿನೀತೇನ ರಮತೇ ಪುತ್ರನಪ್ತೃಣಾ|

05133009c ಅನುತ್ಥಾನವತಾ ಚಾಪಿ ಮೋಘಂ ತಸ್ಯ ಪ್ರಜಾಫಲಂ||

ಯಾರು ಈ ರೀತಿ ಅವಿನೀತನಾಗಿರುವ ಮಗ ಅಥವ ಮೊಮ್ಮೊಗನೊಂದಿಗೆ ರಮಿಸುತ್ತಾನೋ ಅವನಿಗೆ ಪ್ರಜಾಫಲದ ಅನುತ್ಥ ಅವನತಗಳು ವ್ಯರ್ಥವಾಗುತ್ತವೆ.

05133010a ಅಕುರ್ವಂತೋ ಹಿ ಕರ್ಮಾಣಿ ಕುರ್ವಂತೋ ನಿಂದಿತಾನಿ ಚ|

05133010c ಸುಖಂ ನೈವೇಹ ನಾಮುತ್ರ ಲಭಂತೇ ಪುರುಷಾಧಮಾಃ||

ಮಾಡಬೇಕಾದುದನ್ನು ಮಾಡದೇ ನಿಂದನೀಯವಾದವುಗಳನ್ನು ಮಾಡುವ ಪುರುಷಾಧಮರು ಇಲ್ಲಿಯೂ ಅಲ್ಲಿಯೂ ಸುಖವನ್ನು ಹೊಂದುವುದಿಲ್ಲ.

05133011a ಯುದ್ಧಾಯ ಕ್ಷತ್ರಿಯಃ ಸೃಷ್ಟಃ ಸಂಜಯೇಹ ಜಯಾಯ ಚ|

05133011c ಕ್ರೂರಾಯ ಕರ್ಮಣೇ ನಿತ್ಯಂ ಪ್ರಜಾನಾಂ ಪರಿಪಾಲನೇ|

05133011e ಜಯನ್ವಾ ವಧ್ಯಮಾನೋ ವಾ ಪ್ರಾಪ್ನೋತೀಂದ್ರಸಲೋಕತಾಂ||

ಸಂಜಯ! ಇಲ್ಲಿ ಕ್ಷತ್ರಿಯನು ಯುದ್ಧಕ್ಕಾಗಿ ಮತ್ತು ಜಯಕ್ಕಾಗಿ, ನಿತ್ಯವೂ ಕ್ರೂರ ಕರ್ಮಗಳನ್ನು ಮಾಡಿ ಪ್ರಜೆಗಳನ್ನು ಪರಿಪಾಲನೆ ಮಾಡಲೆಂದೇ ಸೃಷ್ಟಿಸಲ್ಪಟ್ಟಿದ್ದಾನೆ. ಜಯಗಳಿಸಿ ಅಥವಾ ವಧಿಸಲ್ಪಟ್ಟು ಅವನು ಇಂದ್ರಲೋಕವನ್ನು ಪಡೆಯುತ್ತಾನೆ.

05133012a ನ ಶಕ್ರಭವನೇ ಪುಣ್ಯೇ ದಿವಿ ತದ್ವಿದ್ಯತೇ ಸುಖಂ|

05133012c ಯದಮಿತ್ರಾನ್ವಶೇ ಕೃತ್ವಾ ಕ್ಷತ್ರಿಯಃ ಸುಖಮಶ್ನುತೇ||

ಆದರೆ ಅಮಿತ್ರರನ್ನು ವಶಪಡಿಸಿಕೊಂಡು ಇಲ್ಲಿ ಕ್ಷತ್ರಿಯನು ಯಾವ ಸುಖವನ್ನು ಅನುಭವಿಸುತ್ತಾನೋ ಅದು ಪುಣ್ಯ ದಿವಿಯಲ್ಲಿರುವ ಶಕ್ರಭವನದಲ್ಲಿಯೂ ದೊರೆಯುವುದಿಲ್ಲ.

05133013a ಮನ್ಯುನಾ ದಹ್ಯಮಾನೇನ ಪುರುಷೇಣ ಮನಸ್ವಿನಾ|

05133013c ನಿಕೃತೇನೇಹ ಬಹುಶಃ ಶತ್ರೂನ್ಪ್ರತಿಜಿಗೀಷಯಾ||

05133014a ಆತ್ಮಾನಂ ವಾ ಪರಿತ್ಯಜ್ಯ ಶತ್ರೂನ್ವಾ ವಿನಿಪಾತ್ಯ ವೈ|

05133014c ಅತೋಽನ್ಯೇನ ಪ್ರಕಾರೇಣ ಶಾಂತಿರಸ್ಯ ಕುತೋ ಭವೇತ್||

ಸಿಟ್ಟಿನಿಂದ ಉರಿಯುತ್ತಿರುವ ಮನಸ್ವಿ ಪುರುಷನು, ಬಹಳ ಬಾರಿ ಸೋಲಿಸಲ್ಪಟ್ಟಾಗ, ಶತ್ರುವನ್ನು ಪ್ರತಿಯಾಗಿ ಸೋಲಿಸಲು ಸಮಯ ಕಾಯಬೇಕು. ತನ್ನನ್ನೇ ಪರಿತ್ಯಜಿಸಿ ಅಥವಾ ಶತ್ರುವನ್ನು ಬೀಳಿಸದೇ ಇನ್ನು ಬೇರೆ ಯಾವ ರೀತಿಯಿಂದ ಶಾಂತಿ ದೊರೆಯಬಹುದು?

05133015a ಇಹ ಪ್ರಾಜ್ಞೋ ಹಿ ಪುರುಷಃ ಸ್ವಲ್ಪಮಪ್ರಿಯಮಿಚ್ಚತಿ|

05133015c ಯಸ್ಯ ಸ್ವಲ್ಪಂ ಪ್ರಿಯಂ ಲೋಕೇ ಧ್ರುವಂ ತಸ್ಯಾಲ್ಪಮಪ್ರಿಯಂ||

ಪ್ರಾಜ್ಞ ಪುರುಷನು ಅಲ್ಪವಾದ ಏನನ್ನೂ ಇಷ್ಟಪಡುವುದಿಲ್ಲ. ಯಾರಿಗೆ ಲೋಕದಲ್ಲಿ ಸ್ವಲ್ಪವೇ ಪ್ರಿಯವಾಗುತ್ತದೆಯೋ ಆ ಸ್ವಲ್ಪವೇ ನಿಶ್ಚಿತವಾಗಿ ಅಪ್ರಿಯವೆನಿಸಿಕೊಳ್ಳುತ್ತದೆ.

05133016a ಪ್ರಿಯಾಭಾವಾಚ್ಚ ಪುರುಷೋ ನೈವ ಪ್ರಾಪ್ನೋತಿ ಶೋಭನಂ|

05133016c ಧ್ರುವಂ ಚಾಭಾವಮಭ್ಯೇತಿ ಗತ್ವಾ ಗಂಗೇವ ಸಾಗರಂ||

ಪ್ರಿಯವಾದುದರ ಅಭಾವದಿಂದ ಪುರುಷನು ಶೋಭಿಸುವುದಿಲ್ಲ. ಅಭಾವವಾದವುಗಳು ಬೇಕೆಂದು ಅವನು ನಿಶ್ಚಿತವಾಗಿ ಸಾಗರವನ್ನು ಹೊಗುವ ಗಂಗೆಯಂತೆ ಕಳೆದುಹೋಗುತ್ತಾನೆ.”

05133017 ಪುತ್ರ ಉವಾಚ|

05133017a ನೇಯಂ ಮತಿಸ್ತ್ವಯಾ ವಾಚ್ಯಾ ಮಾತಃ ಪುತ್ರೇ ವಿಶೇಷತಃ|

05133017c ಕಾರುಣ್ಯಮೇವಾತ್ರ ಪಶ್ಯ ಭೂತ್ವೇಹ ಜಡಮೂಕವತ್||

ಮಗನು ಹೇಳಿದನು: “ಅಮ್ಮಾ! ವಿಶೇಷವಾಗಿ ನಿನ್ನ ಮಗನ ಎದಿರು ನಿನ್ನ ಮನಸ್ಸಿನಲ್ಲಿರುವ ಇದನ್ನು ಹೇಳಬಾರದು. ಜಡ ಮೂಕನಂತೆ ಇರುವವನನ್ನು ಕಾರುಣ್ಯದಿಂದ ನೋಡು.”

05133018 ಮಾತೋವಾಚ|

05133018a ಅತೋ ಮೇ ಭೂಯಸೀ ನಂದಿರ್ಯದೇವಮನುಪಶ್ಯಸಿ|

05133018c ಚೋದ್ಯಂ ಮಾಂ ಚೋದಯಸ್ಯೇತದ್ಭೃಶಂ ವೈ ಚೋದಯಾಮಿ ತೇ||

ಮಾತೆಯು ಹೇಳಿದಳು: “ಒಳ್ಳೆಯದು. ಇದನ್ನು ನೀನು ಹಾಗೆ ಕಾಣುತ್ತಿದ್ದೀಯೆ. ನನ್ನನ್ನು ಪ್ರಚೋದಿಸುತ್ತಿರುವ ನಿನ್ನನ್ನು ಇನ್ನೂ ಹೆಚ್ಚು ಪ್ರಚೋದಿಸುತ್ತೇನೆ.

05133019a ಅಥ ತ್ವಾಂ ಪೂಜಯಿಷ್ಯಾಮಿ ಹತ್ವಾ ವೈ ಸರ್ವಸೈಂಧವಾನ್|

05133019c ಅಹಂ ಪಶ್ಯಾಮಿ ವಿಜಯಂ ಕೃತ್ಸ್ನಂ ಭಾವಿನಮೇವ ತೇ||

ಸರ್ವ ಸೈಂಧವರನ್ನು ಕೊಂದು ವಿಜಯಿಯಾದುದನ್ನು ನೋಡಿದ ನಂತರವೇ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ.”

05133020 ಪುತ್ರ ಉವಾಚ|

05133020a ಅಕೋಶಸ್ಯಾಸಹಾಯಸ್ಯ ಕುತಃ ಸ್ವಿದ್ವಿಜಯೋ ಮಮ|

05133020c ಇತ್ಯವಸ್ಥಾಂ ವಿದಿತ್ವೇಮಾಮಾತ್ಮನಾತ್ಮನಿ ದಾರುಣಾಂ|

05133020e ರಾಜ್ಯಾದ್ಭಾವೋ ನಿವೃತ್ತೋ ಮೇ ತ್ರಿದಿವಾದಿವ ದುಷ್ಕೃತೇಃ||

ಮಗನು ಹೇಳಿದನು: “ಧನವಿಲ್ಲದೇ ಸಹಾಯವಿಲ್ಲದೇ ನನಗೆ ಜಯವು ಎಲ್ಲಿಂದ ಸಿಗಬೇಕು? ಕೆಟ್ಟ ಕೆಲಸವನ್ನು ಮಾಡಿದವನು ಸ್ವರ್ಗದಿಂದ ಹೇಗೆ ನಿವೃತ್ತನಾಗುತ್ತಾನೋ ಹಾಗೆ ನನ್ನ ಈ ದಾರುಣ ಅವಸ್ಥೆಯನ್ನು ನೋಡಿ ನಾನು ರಾಜ್ಯದ ಆಸೆಯಿಂದ ನಿವೃತ್ತನಾಗಿದ್ದೇನೆ.

05133021a ಈದೃಶಂ ಭವತೀ ಕಂ ಚಿದುಪಾಯಮನುಪಶ್ಯತಿ|

05133021c ತನ್ಮೇ ಪರಿಣತಪ್ರಜ್ಞೇ ಸಮ್ಯಕ್ಪ್ರಬ್ರೂಹಿ ಪೃಚ್ಚತೇ|

05133021e ಕರಿಷ್ಯಾಮಿ ಹಿ ತತ್ಸರ್ವಂ ಯಥಾವದನುಶಾಸನಂ||

ಹೀಗಿರುವಾಗ ನೀನು ಯಾವ ಉಪಾಯವನ್ನು ಕಂಡಿರುವೆ? ಪರಿಣತಪ್ರಜ್ಞೇ! ಕೇಳುವ ನನಗೆ ಅದನ್ನು ಸಂಪೂರ್ಣವಾಗಿ ಹೇಳು. ನಿನ್ನ ಅನುಶಾಸನದಂತೆ ಅದೆಲ್ಲವನ್ನೂ ಮಾಡುತ್ತೇನೆ.”

05133022 ಮಾತೋವಾಚ|

05133022a ಪುತ್ರಾತ್ಮಾ ನಾವಮಂತವ್ಯಃ ಪೂರ್ವಾಭಿರಸಮೃದ್ಧಿಭಿಃ|

05133022c ಅಭೂತ್ವಾ ಹಿ ಭವಂತ್ಯರ್ಥಾ ಭೂತ್ವಾ ನಶ್ಯಂತಿ ಚಾಪರೇ||

ಮಾತೆಯು ಹೇಳಿದಳು: “ಮಗೂ! ಸೋಲಿನ ಕುರಿತು ಮೊದಲೇ ಯೋಚಿಸಿ ನಿನ್ನನ್ನು ನೀನೇ ಅಪಮಾನಿಸಬೇಡ. ಇದರಿಂದ ಆಗಬಾರದುದು ಆಗುತ್ತದೆ. ಇದ್ದುದೂ ನಾಶವಾಗುತ್ತದೆ.

05133023a ಅಮರ್ಷೇಣೈವ ಚಾಪ್ಯರ್ಥಾ ನಾರಬ್ಧವ್ಯಾಃ ಸುಬಾಲಿಶೈಃ|

05133023c ಸರ್ವೇಷಾಂ ಕರ್ಮಣಾಂ ತಾತ ಫಲೇ ನಿತ್ಯಮನಿತ್ಯತಾ||

ಉದ್ದೇಶಗಳನ್ನು ಕೋಪದಿಂದ ಅಥವಾ ಬಾಲಿಶರಾಗಿ ಪ್ರಯತ್ನಿಸಬಾರದು. ಮಗೂ! ಎಲ್ಲ ಕೆಲಸಗಳಲ್ಲಿ ಫಲಿತಾಂಶವು ಅನಿಶ್ಚಿತವಾದುದು.

05133024a ಅನಿತ್ಯಮಿತಿ ಜಾನಂತೋ ನ ಭವಂತಿ ಭವಂತಿ ಚ|

05133024c ಅಥ ಯೇ ನೈವ ಕುರ್ವಂತಿ ನೈವ ಜಾತು ಭವಂತಿ ತೇ||

ಅನಿಶ್ಚಿತವೆಂದು ತಿಳಿದೂ ಜನರು ಕೆಲಸ ಮಾಡಿ ಕೆಲವೊಮ್ಮೆ ಯಶಸ್ವಿಯಾಗುತ್ತಾರೆ. ಕೆಲವೊಮ್ಮೆ ಯಶಸ್ವಿಯಾಗುವುದಿಲ್ಲ. ಆದರೆ ಏನೂ ಮಾಡದಿರುವವನಿಗೆ ಏನೂ ದೊರೆಯುವುದಿಲ್ಲ.

05133025a ಐಕಗುಣ್ಯಮನೀಹಾಯಾಮಭಾವಃ ಕರ್ಮಣಾಂ ಫಲಂ|

05133025c ಅಥ ದ್ವೈಗುಣ್ಯಮೀಹಾಯಾಂ ಫಲಂ ಭವತಿ ವಾ ನ ವಾ||

ಇದೇ ಅದರ ಏಕೈಕ ಪರಿಣಾಮ. ಆದರೆ ತಾನು ಮಾಡಬೇಕಾದುದನ್ನು ಉತ್ಸಾಹದಿಂದ ಮಾಡಿ ಮುಗಿಸುವವನಿಗೆ ಎರಡು ಪರಿಣಾಮಗಳಾಗಬಹುದು: ಫಲವು ದೊರೆಯಬಹುದು ಅಥವಾ ದೊರೆಯದೇ ಇರಬಹುದು.

05133026a ಯಸ್ಯ ಪ್ರಾಗೇವ ವಿದಿತಾ ಸರ್ವಾರ್ಥಾನಾಮನಿತ್ಯತಾ|

05133026c ನುದೇದ್ವೃದ್ಧಿಸಮೃದ್ಧೀ ಸ ಪ್ರತಿಕೂಲೇ ನೃಪಾತ್ಮಜ||

ನೃಪಾತ್ಮಜ! ಯಾರಿಗೆ ಮೊದಲೇ ಫಲವು ಸರ್ವಥಾ ದೊರೆಯಲಾರದೆಂದು ತಿಳಿದಿರುತ್ತದೆಯೋ ಅವನು ಪ್ರತಿಕೂಲನ ಅಸಮೃದ್ಧಿಯನ್ನುಂಟುಮಾಡಲು ಪ್ರಯತ್ನಿಸಬೇಕು.

05133027a ಉತ್ಥಾತವ್ಯಂ ಜಾಗೃತವ್ಯಂ ಯೋಕ್ತವ್ಯಂ ಭೂತಿಕರ್ಮಸು|

05133027c ಭವಿಷ್ಯತೀತ್ಯೇವ ಮನಃ ಕೃತ್ವಾ ಸತತಮವ್ಯಥೈಃ|

ನಾನು ಪ್ರಾರಂಭಿಸುವ ಕಾರ್ಯವು ಸಿದ್ಧಿಯಾಗೇ ಆಗುತ್ತದೆ ಎಂಬ ದೃಢತೆಯಿಂದ ಶಂಕೆಗಳಿಲ್ಲದೆಯೇ ಉತ್ಸಾಹದಿಂದ ಏಳಬೇಕು, ಸಜ್ಜಾಗಬೇಕು ಮತ್ತು ಕೊನೆಯವರೆಗೆ ಕಾರ್ಯನಿರತನಾಗಿರಬೇಕು.

05133027e ಮಂಗಲಾನಿ ಪುರಸ್ಕೃತ್ಯ ಬ್ರಾಹ್ಮಣೈಶ್ಚೇಶ್ವರೈಃ ಸಹ||

05133028a ಪ್ರಾಜ್ಞಾಸ್ಯ ನೃಪತೇರಾಶು ವೃದ್ಧಿರ್ಭವತಿ ಪುತ್ರಕ|

05133028c ಅಭಿವರ್ತತಿ ಲಕ್ಷ್ಮೀಸ್ತಂ ಪ್ರಾಚೀಮಿವ ದಿವಾಕರಃ||

ಪುತ್ರ! ದೇವ-ಬ್ರಾಹ್ಮಣರನ್ನು ಪೂಜಿಸಿ ಮಂಗಲಕಾರ್ಯಗಳನ್ನು ಪ್ರಾರಂಭಿಸುವ ಪ್ರಾಜ್ಞ ನೃಪತಿಗೆ ಶೀಘ್ರದಲ್ಲಿ ಉನ್ನತಿಯಾಗುತ್ತದೆ. ಪೂರ್ವದಿಕ್ಕಿನಲ್ಲಿರುವ ದಿವಾಕರನಂತೆ ಅವನ ಲಕ್ಷ್ಮಿಯು ವೃದ್ಧಿಯಾಗುತ್ತಾಳೆ.

05133029a ನಿದರ್ಶನಾನ್ಯುಪಾಯಾಂಶ್ಚ ಬಹೂನ್ಯುದ್ಧರ್ಷಣಾನಿ ಚ|

05133029c ಅನುದರ್ಶಿತರೂಪೋಽಸಿ ಪಶ್ಯಾಮಿ ಕುರು ಪೌರುಷಂ|

05133029e ಪುರುಷಾರ್ಥಮಭಿಪ್ರೇತಂ ಸಮಾಹರ್ತುಮಿಹಾರ್ಹಸಿ||

ನಿದರ್ಶನಗಳನ್ನು ನೀಡಿದ್ದೇನೆ. ಬಹಳ ಉಪಾಯಗಳನ್ನೂ ತೋರಿಸಿದ್ದೇನೆ. ಅನುದರ್ಶಿತ ರೂಪನಾಗಿರುವೆ. ಪೌರುಷವನ್ನು ಮಾಡಿ ತೋರಿಸು. ಪುರುಷಾರ್ಥವನ್ನು ಸಾಧಿಸಲು ನೀನು ಅರ್ಹನಾಗಿದ್ದೀಯೆ.

05133030a ಕ್ರುದ್ಧಾಽಲ್ಲುಬ್ಧಾನ್ಪರಿಕ್ಷೀಣಾನವಕ್ಷಿಪ್ತಾನ್ವಿಮಾನಿತಾನ್|

05133030c ಸ್ಪರ್ಧಿನಶ್ಚೈವ ಯೇ ಕೇ ಚಿತ್ತಾನ್ಯುಕ್ತ ಉಪಧಾರಯ||

ಶತ್ರುವಿನ ಕುರಿತು ಸಿಟ್ಟಾಗಿರುವ, ಅವರಿಂದಾಗಿ ಸರ್ವಸ್ವವನ್ನೂ ಕಳೆದುಕೊಂಡಿರುವ, ಗರ್ವಿತರಾಗಿರುವ, ಅವರಿಂದ ಅವಮಾನಿತರಾಗಿರುವ, ಅವರೊಂದಿಗೆ ಸ್ಪರ್ಧಿಸುತ್ತಿರುವ ಯಾರೆಲ್ಲಾ ಇದ್ದಾರೋ ಅವರೆಲ್ಲರನ್ನೂ ಯುಕ್ತಿಯಿಂದ ಒಂದುಗೂಡಿಸು.

05133031a ಏತೇನ ತ್ವಂ ಪ್ರಕಾರೇಣ ಮಹತೋ ಭೇತ್ಸ್ಯಸೇ ಗಣಾನ್|

05133031c ಮಹಾವೇಗ ಇವೋದ್ಧೂತೋ ಮಾತರಿಶ್ವಾ ಬಲಾಹಕಾನ್||

ಈ ಪ್ರಕಾರದಲ್ಲಿ ನೀನು ಮಹಾ ಸೇನೆಯನ್ನು ಒಟ್ಟುಮಾಡಿದುದೇ ಆದರೆ ಮಹಾವೇಗದ ಭಿರುಗಾಳಿಯು ಮೋಡಗಳನ್ನು ಹೇಗೋ ಹಾಗೆ ಶತ್ರುಸೇನೆಗಳನ್ನು ಭೇದಿಸಬಲ್ಲೆ.

05133032a ತೇಷಾಮಗ್ರಪ್ರದಾಯೀ ಸ್ಯಾಃ ಕಲ್ಯೋತ್ಥಾಯೀ ಪ್ರಿಯಂವದಃ|

05133032c ತೇ ತ್ವಾಂ ಪ್ರಿಯಂ ಕರಿಷ್ಯಂತಿ ಪುರೋ ಧಾಸ್ಯಂತಿ ಚ ಧ್ರುವಂ||

ಮೊದ ಮೊದಲು ನೀನು ಅವರಿಗೆ ಅಗ್ರಸ್ಥಾನವನ್ನಿತ್ತು, ಎದ್ದೊಡನೆಯೇ ಅವರೊಂದಿಗೆ ಪ್ರಿಯ ಮಾತುಗಳನ್ನಾಡು. ಆಗ ಅವರು ನಿನಗೆ ಪ್ರಿಯವಾದುದನ್ನು ಮಾಡುವವರಲ್ಲದೇ ನಿನ್ನನ್ನು ನಾಯಕನನ್ನಾಗಿಯೂ ಸ್ವೀಕರಿಸುವುದು ನಿಶ್ಚಿತ.

05133033a ಯದೈವ ಶತ್ರುರ್ಜಾನೀಯಾತ್ಸಪತ್ನಂ ತ್ಯಕ್ತಜೀವಿತಂ|

05133033c ತದೈವಾಸ್ಮಾದುದ್ವಿಜತೇ ಸರ್ಪಾದ್ವೇಶ್ಮಗತಾದಿವ||

ಯಾವಾಗ ನಿನ್ನ ಶತ್ರುವು ಪ್ರಾಣವನ್ನೂ ತೊರೆಯಲು ಸಿದ್ಧನಾಗಿ ಇವನು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾನೆ ಎಂದು ತಿಳಿದುಕೊಳ್ಳುತ್ತಾನೆಯೋ ಆಗಲೇ ಅವನು ಮನೆಯಲ್ಲಿ ಸೇರಿಕೊಂಡಿರುವ ಸರ್ಪಕ್ಕೆ ಹೆದರುವಂತೆ ಉದ್ವಿಗ್ನನಾಗುತ್ತಾನೆ.

05133034a ತಂ ವಿದಿತ್ವಾ ಪರಾಕ್ರಾಂತಂ ವಶೇ ನ ಕುರುತೇ ಯದಿ|

05133034c ನಿರ್ವಾದೈರ್ನಿರ್ವದೇದೇನಮಂತತಸ್ತದ್ಭವಿಷ್ಯತಿ||

ನಿನ್ನ ಪರಾಕ್ರಮವನ್ನು ತಿಳಿದು ಒಂದು ವೇಳೆ ನಿನ್ನನ್ನು ವಶಮಾಡಿಕೊಳ್ಳದೇ ಇದ್ದರೆ ನಿರ್ವಾದದಿಂದ ಅಥವಾ ನಿವೇದನೆಯಿಂದ ಕೊನೆಯಲ್ಲಿ ಅವನು ನಿನ್ನವನಾಗುತ್ತಾನೆ.

05133035a ನಿರ್ವಾದಾದಾಸ್ಪದಂ ಲಬ್ಧ್ವಾ ಧನವೃದ್ಧಿರ್ಭವಿಷ್ಯತಿ|

05133035c ಧನವಂತಂ ಹಿ ಮಿತ್ರಾಣಿ ಭಜಂತೇ ಚಾಶ್ರಯಂತಿ ಚ||

ಸಂಧಿಯನ್ನು ಮಾಡಿಕೊಂಡರೆ ಧನವೃದ್ಧಿಯಾಗುತ್ತದೆ. ಧನವಂತನನ್ನು ಮಿತ್ರರು ಪ್ರೀತಿಸುತ್ತಾರೆ. ಆಶ್ರಯಿಸುತ್ತಾರೆ.

05133036a ಸ್ಖಲಿತಾರ್ಥಂ ಪುನಸ್ತಾತ ಸಂತ್ಯಜಂತ್ಯಪಿ ಬಾಂಧವಾಃ|

05133036c ಅಪ್ಯಸ್ಮಿನ್ನಾಶ್ರಯಂತೇ ಚ ಜುಗುಪ್ಸಂತಿ ಚ ತಾದೃಶಂ||

ಮಗೂ! ಅರ್ಥವಿಹೀನನನ್ನು ಬಾಂಧವರು ತ್ಯಜಿಸುತ್ತಾರೆ. ಅವನನ್ನು ಯಾರೂ ಆಶ್ರಯಿಸುವುದಿಲ್ಲ. ಮತ್ತು ಅಂಥವನನ್ನು ಜುಗುಪ್ಸೆಯಿಂದ ಕಾಣುತ್ತಾರೆ.

05133037a ಶತ್ರುಂ ಕೃತ್ವಾ ಯಃ ಸಹಾಯಂ ವಿಶ್ವಾಸಮುಪಗಚ್ಚತಿ|

05133037c ಅತಃ ಸಂಭಾವ್ಯಮೇವೈತದ್ಯದ್ರಾಜ್ಯಂ ಪ್ರಾಪ್ನುಯಾದಿತಿ||

ಶತ್ರುವಿನ ಶತ್ರುವಿನೊಂದಿಗೆ ಸ್ನೇಹಬೆಳಸಿ ಅವನ ಸಹಾಯದಿಂದ ಕಳೆದುಕೊಂಡ ರಾಜ್ಯವನ್ನು ಪುನಃ ಪಡೆದುಕೊಳ್ಳಲು ಸಾಧ್ಯವಿದೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ವಿದುಲಾಪುತ್ರಾನುಶಾಸನೇ ತ್ರಯಸ್ತ್ರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ವಿದುಲಾಪುತ್ರಾನುಶಾಸನದಲ್ಲಿ ನೂರಾಮೂವತ್ಮೂರನೆಯ ಅಧ್ಯಾಯವು.

Image result for flowers against white background

Comments are closed.