Shanti Parva: Chapter 131

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೩೧

ರಾಜನು ಕೋಶವನ್ನು ಸಂಗ್ರಹಿಸುವುದರ ಅವಶ್ಯಕತೆ, ದಸ್ಯು ವೃತ್ತಿಯ ನಿಂದನೆ (೧-೧೮).

12131001 ಭೀಷ್ಮ ಉವಾಚ|

12131001a ಸ್ವರಾಷ್ಟ್ರಾತ್ಪರರಾಷ್ಟ್ರಾಚ್ಚ ಕೋಶಂ ಸಂಜನಯೇನ್ನೃಪಃ|

12131001c ಕೋಶಾದ್ಧಿ ಧರ್ಮಃ ಕೌಂತೇಯ ರಾಜ್ಯಮೂಲಃ ಪ್ರವರ್ತತೇ||

ಭೀಷ್ಮನು ಹೇಳಿದನು: “ಕೌಂತೇಯ! ನೃಪನು ಸ್ವರಾಷ್ಟ್ರದಿಂದಲೂ ಪರರಾಷ್ಟ್ರದಿಂದಲೂ ಕೋಶವನ್ನು ತುಂಬಿಸಬೇಕು. ಕೋಶದಿಂದಲೇ ಧರ್ಮ ಮತ್ತು ರಾಜ್ಯಮೂಲವು ವೃದ್ಧಿಯಾಗುತ್ತದೆ.

12131002a ತಸ್ಮಾತ್ಸಂಜನಯೇತ್ಕೋಶಂ ಸಂಹೃತ್ಯ ಪರಿಪಾಲಯೇತ್|

12131002c ಪರಿಪಾಲ್ಯಾನುಗೃಹ್ಣೀಯಾದೇಷ ಧರ್ಮಃ ಸನಾತನಃ||

ಅದುದರಿಂದ ಕೋಶವನ್ನು ಸಂಗ್ರಹಿಸಬೇಕು. ಸಂಗ್ರಹಿಸಿ ಅದನ್ನು ರಕ್ಷಿಸಬೇಕು. ಕೋಶವನ್ನು ಪರಿಪಾಲಿಸುವುದಲ್ಲದೇ ಅದನ್ನು ವೃದ್ಧಿಗೊಳಿಸುತ್ತಲೂ ಇರಬೇಕು. ಇದೇ ಸನಾತನ ರಾಜಧರ್ಮ.

12131003a ನ ಕೋಶಃ ಶುದ್ಧಶೌಚೇನ ನ ನೃಶಂಸೇನ ಜಾಯತೇ|

12131003c ಪದಂ ಮಧ್ಯಮಮಾಸ್ಥಾಯ ಕೋಶಸಂಗ್ರಹಣಂ ಚರೇತ್||

ಶುದ್ಧ-ಶೌಚನಿಗೆ ಕೋಶವನ್ನು ಕೂಡಿಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ಕ್ರೂರಿಯಿಂದಲೂ ಅದು ಸಾಧ್ಯವಿಲ್ಲ. ಮಧ್ಯಮ ಪದವನ್ನು ಆಶ್ರಯಿಸಿ ಕೋಶಸಂಗ್ರಹಣೆಯನ್ನು ಮಾಡಬೇಕು.

12131004a ಅಬಲಸ್ಯ ಕುತಃ ಕೋಶೋ ಹ್ಯಕೋಶಸ್ಯ ಕುತೋ ಬಲಮ್|

12131004c ಅಬಲಸ್ಯ ಕುತೋ ರಾಜ್ಯಮರಾಜ್ಞಃ ಶ್ರೀಃ ಕುತೋ ಭವೇತ್||

ಅಬಲನಿಗೆ ಎಲ್ಲಿಯ ಕೋಶ? ಕೋಶವಿಲ್ಲದವನಿಗೆ ಎಲ್ಲಿಯ ಬಲ? ಅಬಲನಿಗೆ ಎಲ್ಲಿಯ ರಾಜ್ಯ? ಮತ್ತು ರಾಜ್ಯವಿಲ್ಲದವನಿಗೆ ಶ್ರೀಯು ಹೇಗೆ ಒಲಿದಾಳು?

12131005a ಉಚ್ಚೈರ್ವೃತ್ತೇಃ ಶ್ರಿಯೋ ಹಾನಿರ್ಯಥೈವ ಮರಣಂ ತಥಾ|

12131005c ತಸ್ಮಾತ್ಕೋಶಂ ಬಲಂ ಮಿತ್ರಾಣ್ಯಥ ರಾಜಾ ವಿವರ್ಧಯೇತ್||

ಉನ್ನತ ಸ್ಥಾನದಲ್ಲಿರುವವನ ಶ್ರೀಯು ಹಾನಿಯಾಯಿತೆಂದರೆ ಅದು ಅವನಿಗೆ ಮರಣಕ್ಕೆ ಸಮನಾಗುತ್ತದೆ. ಆದುದರಿಂದ ರಾಜನು ಕೋಶ, ಬಲ ಮತ್ತು ಮಿತ್ರರನ್ನು ವರ್ಧಿಸುತ್ತಿರಬೇಕು.

12131006a ಹೀನಕೋಶಂ ಹಿ ರಾಜಾನಮವಜಾನಂತಿ ಮಾನವಾಃ|

12131006c ನ ಚಾಸ್ಯಾಲ್ಪೇನ ತುಷ್ಯಂತಿ ಕಾರ್ಯಮಭ್ಯುತ್ಸಹಂತಿ ಚ||

ಕೋಶಹೀನನಾದ ರಾಜನನ್ನು ಜನರು ಕೀಳಾಗಿ ಕಾಣುತ್ತಾರೆ. ಅಲ್ಪದಿಂದ ಅವರು ತುಷ್ಟರಾಗುವುದಿಲ್ಲ ಮತ್ತು ರಾಜನ ಕೆಲಸ ಕಾರ್ಯಗಳನ್ನು ಮಾಡುವುದರಲ್ಲಿ ಉತ್ಸಾಹಿತರಾಗಿರುವುದಿಲ್ಲ.

12131007a ಶ್ರಿಯೋ ಹಿ ಕಾರಣಾದ್ರಾಜಾ ಸತ್ಕ್ರಿಯಾಂ ಲಭತೇ ಪರಾಮ್|

12131007c ಸಾಸ್ಯ ಗೂಹತಿ ಪಾಪಾನಿ ವಾಸೋ ಗುಹ್ಯಮಿವ ಸ್ತ್ರಿಯಾಃ||

ಶ್ರೀಯ ಕಾರಣದಿಂದಲೇ ರಾಜನು ಪರಮ ಸತ್ಕಾರಗಳನ್ನು ಪಡೆಯುತ್ತಾನೆ. ಬಟ್ಟೆಯು ಸ್ತ್ರೀಯ ಗುಪ್ತಸ್ಥಾನಗಳನ್ನು ಹೇಗೆ ಮುಚ್ಚುವುದೋ ಅದೇ ರೀತಿ ಐಶ್ವರ್ಯವು ರಾಜನ ಪಾಪಗಳನ್ನು ಅಡಗಿಸುತ್ತದೆ.

12131008a ಋದ್ಧಿಮಸ್ಯಾನುವರ್ತಂತೇ[1] ಪುರಾ ವಿಪ್ರಕೃತಾ ಜನಾಃ|

12131008c ಶಾಲಾವೃಕಾ ಇವಾಜಸ್ರಂ ಜಿಘಾಂಸೂನಿವ ವಿಂದತಿ|

12131008e ಈದೃಶಸ್ಯ ಕುತೋ ರಾಜ್ಞಃ ಸುಖಂ ಭರತಸತ್ತಮ[2]||

ಭರತಸತ್ತಮ! ಹಿಂದೆ ತಿರಸ್ಕೃತರಾದ ಜನರು, ನಾಯಿಗಳು ತಮ್ಮನ್ನು ಕೊಲ್ಲುವ ಚಾಂಡಾಲನನ್ನೇ ಹಿಂಬಾಲಿಸಿ ಹೋಗುವಂತೆ, ವೃದ್ಧಿಹೊಂದುತ್ತಿರುವವನನ್ನು ಹಿಂಬಾಲಿಸುತ್ತಾರೆ. ಈ ರೀತಿಯಿರುವಾಗ ರಾಜನಿಗೆ ಎಲ್ಲಿಯ ಸುಖ?

12131009a ಉದ್ಯಚ್ಚೇದೇವ ನ ಗ್ಲಾಯೇದುದ್ಯಮೋ ಹ್ಯೇವ ಪೌರುಷಮ್|

12131009c ಅಪ್ಯಪರ್ವಣಿ ಭಜ್ಯೇತ ನ ನಮೇತೇಹ ಕಸ್ಯ ಚಿತ್||

ಒಣಗಿದ ಕಟ್ಟಿಗೆಯು ಮುರಿದುಹೋಗಬಹುದು ಆದರೆ ಎಂದೂ ಬಗ್ಗುವುದಿಲ್ಲ. ಹಾಗೆ ರಾಜನಾದವನು ಯಾವಾಗಲೂ ಸೆಟೆದೇ ನಿಂತಿರಬೇಕು. ತಲೆಬಾಗಿಸಬಾರದು. ಉದ್ಯಮಿಯಾಗಿರುವುದೇ ಪುರುಷ ಲಕ್ಷಣವು.

12131010a ಅಪ್ಯರಣ್ಯಂ ಸಮಾಶ್ರಿತ್ಯ ಚರೇದ್ದಸ್ಯುಗಣೈಃ[3] ಸಹ|

12131010c ನ ತ್ವೇವೋದ್ಧೃತಮರ್ಯಾದೈರ್ದಸ್ಯುಭಿಃ ಸಹಿತಶ್ಚರೇತ್|

ಅರಣ್ಯವನ್ನಾಶ್ರಯಿಸಿ ಮೃಗಗಣಗಳೊಡನೆಯಾದರೂ ಸಂಚರಿಸುತ್ತಿರಬಹುದು. ಆದರೆ ಲೋಕಮರ್ಯಾದೆಯನ್ನು ಮೀರಿ ನಡೆಯುತ್ತಿರುವ ದಸ್ಯುಗಳೊಡನೆ ಎಂದೂ ಸೇರಬಾರದು.

12131010e ದಸ್ಯೂನಾಂ ಸುಲಭಾ ಸೇನಾ ರೌದ್ರಕರ್ಮಸು ಭಾರತ||

12131011a ಏಕಾಂತೇನ ಹ್ಯಮರ್ಯಾದಾತ್ಸರ್ವೋಽಪ್ಯುದ್ವಿಜತೇ ಜನಃ|

12131011c ದಸ್ಯವೋಽಪ್ಯುಪಶಂಕಂತೇ ನಿರನುಕ್ರೋಶಕಾರಿಣಃ||

ಭಾರತ! ರೌದ್ರಕರ್ಮಗಳನ್ನು ಮಾಡಲು ದಸ್ಯುಗಳಿಗೆ ಸುಲಭವಾಗಿ ಸೈನ್ಯವು ಸಿಗುತ್ತದೆ. ಮರ್ಯಾದಾಶೂನ್ಯರಾದ ದಸ್ಯುಗಳ ವಿಷಯದಲ್ಲಿ ಎಲ್ಲ ಜನರೂ ಉದ್ವಿಗ್ನರಾಗಿರುತ್ತಾರೆ. ಕ್ರೂರಕರ್ಮಗಳನ್ನೆಸಗುವ ದಸ್ಯುಗಳು ಎಲ್ಲರನೂ ಸಂಶಯಗಸ್ತರಾಗಿಯೇ ನೋಡುತ್ತಾರೆ.

12131012a ಸ್ಥಾಪಯೇದೇವ ಮರ್ಯಾದಾಂ ಜನಚಿತ್ತಪ್ರಸಾದಿನೀಮ್|

12131012c ಅಲ್ಪಾಪ್ಯಥೇಹ ಮರ್ಯಾದಾ ಲೋಕೇ ಭವತಿ ಪೂಜಿತಾ||

ಜನರ ಚಿತ್ತವನ್ನು ಪ್ರಸನ್ನಗೊಳಿಸುವ ಮರ್ಯಾದೆಯನ್ನು ರಾಜನು ಸ್ಥಾಪಿಸಬೇಕು. ಅಲ್ಪಪ್ರಯೋಜನದಲ್ಲಿಯೂ ಕಟ್ಟುಪಾಡುಗಳಿರುವುದು ಲೋಕದಲ್ಲಿ ಮಾನ್ಯವಾಗುತ್ತದೆ.

12131013a ನಾಯಂ ಲೋಕೋಽಸ್ತಿ ನ ಪರ ಇತಿ ವ್ಯವಸಿತೋ ಜನಃ|

12131013c ನಾಲಂ ಗಂತುಂ ಚ ವಿಶ್ವಾಸಂ ನಾಸ್ತಿಕೇ ಭಯಶಂಕಿನಿ||

“ಇಹವೂ ಇಲ್ಲ ಪರವೂ ಇಲ್ಲ” ಎಂದು ಅಭಿಪ್ರಾಯಪಡುವ ಜನರೂ ಇದ್ದಾರೆ. ಈ ರೀತಿಯ ನಾಸ್ತಿಕ್ಯವು ಭಯ-ಶಂಕೆಗಳಿಗೆ ಕಾರಣವಾಗುತ್ತದೆ. ಆದುದರಿಂದ ಅಂಥವರಲ್ಲಿ ವಿಶ್ವಾಸವನ್ನಿಡಬಾರದು.

12131014a ಯಥಾ ಸದ್ಭಿಃ ಪರಾದಾನಮಹಿಂಸಾ ದಸ್ಯುಭಿಸ್ತಥಾ|

12131014c ಅನುರಜ್ಯಂತಿ ಭೂತಾನಿ ಸಮರ್ಯಾದೇಷು ದಸ್ಯುಷು||

ದಸ್ಯುಗಳಲ್ಲಿಯೂ ಕೂಡ ಮರ್ಯಾದೆಯಿಂದ ನಡೆದುಕೊಳ್ಳುವರರಿದ್ದಾರೆ. ಸಾಧು ದಸ್ಯುಗಳು ಅಹಿಂಸೆಯಿಂದ ಇನ್ನೊಬ್ಬರ ಧನವನ್ನು ಅಪಹಿಸಿಕೊಳ್ಳುವರು. ಮರ್ಯಾದೆಯಿಂದಿರುವ ದಸ್ಯುಗಳ ವಿಷಯದಲ್ಲಿ ಜನರು ಅನುಕಂಪತೋರಿಸುತ್ತಾರೆ.

12131015a ಅಯುಧ್ಯಮಾನಸ್ಯ ವಧೋ ದಾರಾಮರ್ಷಃ ಕೃತಘ್ನತಾ|

12131015c ಬ್ರಹ್ಮವಿತ್ತಸ್ಯ ಚಾದಾನಂ ನಿಃಶೇಷಕರಣಂ ತಥಾ|

12131015e ಸ್ತ್ರಿಯಾ ಮೋಷಃ ಪರಿಸ್ಥಾನಂ ದಸ್ಯುಷ್ವೇತದ್ವಿಗರ್ಹಿತಮ್||

12131016a ಸ ಏಷ ಏವ ಭವತಿ ದಸ್ಯುರೇತಾನಿ ವರ್ಜಯನ್|

ಯುದ್ಧಮಾಡದೇ ಇರುವವನ್ನು ಕೊಲ್ಲುವುದು, ಸ್ತ್ರೀಯನ್ನು ಬಲಾತ್ಕರಿಸುವುದು, ಕೃತಘ್ನತೆ, ಬ್ರಾಹ್ಮಣರ ಸ್ವತ್ತನ್ನು ಅಪಹರಿಸುವುದು, ಕನ್ಯೆಯನ್ನು ಅಪಹರಿಸುವುದು, ಗ್ರಾಮವನ್ನು ಕೊಳ್ಳೆಹೊಡೆದು ತಾನೇ ಅದರ ಅಧಿಪತಿಯಾಗುವುದು – ಇವುಗಳನ್ನು ದಸ್ಯುಗಳೂ ನಿಂದಿಸುತ್ತಾರೆ. ಇವುಗಳನ್ನು ದಸ್ಯುಗಳೂ ವರ್ಜಿಸಬೇಕು.

12131016c ಅಭಿಸಂದಧತೇ ಯೇ ನ ವಿನಾಶಾಯಾಸ್ಯ ಭಾರತ|

12131016e ನಶೇಷಮೇವೋಪಾಲಭ್ಯ ನ ಕುರ್ವಂತೀತಿ ನಿಶ್ಚಯಃ||

ಭಾರತ! ಯಾರ ಸಕಲ ಸರ್ವಸ್ವವನ್ನೂ ದೋಚಿಕೊಂಡು ಹೋಗಿರುವರೋ ಅವರು ಸಮಯ ಬಂದಾಗ ಆ ದಸ್ಯುಗಳ ಸರ್ವಸ್ವವನ್ನೂ ಅಪಹರಿಸುತ್ತಾರೆ. ಇದು ನಿಜ.

12131017a ತಸ್ಮಾತ್ಸಶೇಷಂ ಕರ್ತವ್ಯಂ ಸ್ವಾಧೀನಮಪಿ ದಸ್ಯುಭಿಃ|

12131017c ನ ಬಲಸ್ಥೋಽಹಮಸ್ಮೀತಿ ನೃಶಂಸಾನಿ ಸಮಾಚರೇತ್||

ಆದುದರಿಂದ ದಸ್ಯುಗಳು ಇತರರ ಸಂಪೂರ್ಣವನ್ನೂ ಕಸಿದುಕೊಳ್ಳದೇ ಅವರ ಸ್ವಾಧೀನದಲ್ಲಿ ಸ್ವಲ್ಪವನ್ನಾದರೂ ಇರಿಸಬೇಕು. ತಾನೇ ಬಲಿಷ್ಠನೆಂದು ಕ್ರೂರಕೃತ್ಯಗಳನ್ನು ಮಾಡಬಾರದು.

12131018a ಸಶೇಷಕಾರಿಣಸ್ತಾತ ಶೇಷಂ ಪಶ್ಯಂತಿ ಸರ್ವತಃ|

12131018c ನಿಃಶೇಷಕಾರಿಣೋ ನಿತ್ಯಮಶೇಷಕರಣಾದ್ಭಯಮ್||

ಅಯ್ಯಾ! ಇತರರಿಗೆ ಉಳಿಸಿದ ದರೋಡೆಕೋರರು ತಮ್ಮಲ್ಲಿಯೂ ಸಲ್ಪ ಉಳಿಯುವನ್ನು ಕಾಣುತ್ತಾರೆ. ಇತರರ ಸ್ವತ್ತನ್ನು ನಿಃಶೇಷವಾಗಿ ಕಸಿದುಕೊಂಡವರಿಗೆ ತಮ್ಮ ಸ್ವತ್ತೂ ನಿಃಶೇಷವಾಗಿ ಕಳೆದುಹೋಗುತ್ತದೆ ಎಂಬ ನಿತ್ಯ ಭಯವಿರುತ್ತದೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಏಕತ್ರಿಂಶಾತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ನೂರಾಮೂವತ್ತೊಂದನೇ ಅಧ್ಯಾಯವು.

 

[1] ಋದ್ಧಿಮಸ್ಯಾನುತಪ್ಯಂತೇ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಸುಖಂ ಭವತಿ ಭಾರತ| ಎಂಬ ಪಾಠಾಂತವಿದೆ (ಭಾರತ ದರ್ಶನ).

[3] ಮೃಗಗಣೈಃ ಸಹ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.