Karna Parva: Chapter 14

ಕರ್ಣ ಪರ್ವ

೧೪

ಸಂಕುಲ ಯುದ್ಧ

ಅರ್ಜುನನಿಂದ ಸಂಶಪ್ತಕ ಸೇನೆಯ ವಿನಾಶ (೧-೨೫). ಕೃಷ್ಣನು ಅರ್ಜುನನಿಗೆ ತೋರಿಸುತ್ತಾ ರಣಭೂಮಿಯನ್ನು ವರ್ಣಿಸಿದುದು (೨೬-೬೪).

08014001 ಸಂಜಯ ಉವಾಚ|

08014001a ಪ್ರತ್ಯಾಗತ್ಯ ಪುನರ್ಜಿಷ್ಣುರಹನ್ಸಂಶಪ್ತಕಾನ್ಬಹೂನ್|

08014001c ವಕ್ರಾನುವಕ್ರಗಮನಾದಂಗಾರಕ ಇವ ಗ್ರಹಃ||

ಸಂಜಯನು ಹೇಳಿದನು: “ವಕ್ರಾನುಗತಿಯಲ್ಲಿರುವ ಅಂಗಾರಕ ಗ್ರಹದಂತೆ ಹಿಂದಿರುಗಿ ಬಂದು ಜಿಷ್ಣುವು ಪುನಃ ಅನೇಕ ಸಂಶಪ್ತಕರನ್ನು ಸಂಹರಿಸಿದನು.

08014002a ಪಾರ್ಥಬಾಣಹತಾ ರಾಜನ್ನರಾಶ್ವರಥಕುಂಜರಾಃ|

08014002c ವಿಚೇಲುರ್ಬಭ್ರಮುರ್ನೇದುಃ ಪೇತುರ್ಮಂಲುಶ್ಚ ಮಾರಿಷ||

ರಾಜನ್! ಮಾರಿಷ! ಪಾರ್ಥನ ಬಾಣಗಳಿಂದ ಹತರಾದ ಅಶ್ವ-ರಥ-ಕುಂಜರಗಳು ನಡುಗಿದವು. ಭ್ರಾಂತಗೊಂಡವು. ಕೆಳಕ್ಕೆ ಬಿದ್ದು ಧೂಳು ಮುಕ್ಕಿದವು ಮತ್ತು ಅಂತ್ಯದಲ್ಲಿ ಅಸುವನ್ನು ನೀಗಿದವು.

08014003a ಧುರ್ಯಂ ಧುರ್ಯತರಾನ್ಸೂತಾನ್ರಥಾಂಶ್ಚ ಪರಿಸಂಕ್ಷಿಪನ್|

08014003c ಪಾಣೀನ್ಪಾಣಿಗತಂ ಶಸ್ತ್ರಂ ಬಾಹೂನಪಿ ಶಿರಾಂಸಿ ಚ||

08014004a ಭಲ್ಲೈಃ ಕ್ಷುರೈರರ್ಧಚಂದ್ರೈರ್ವತ್ಸದಂತೈಶ್ಚ ಪಾಂಡವಃ|

08014004c ಚಿಚ್ಚೇದಾಮಿತ್ರವೀರಾಣಾಂ ಸಮರೇ ಪ್ರತಿಯುಧ್ಯತಾಂ||

ಸಮರದಲ್ಲಿ ಎದುರಾಗಿ ಯುದ್ಧಮಾಡುತ್ತಿದ್ದ ಅಮಿತ್ರವೀರರ ಕುದುರೆಗಳನ್ನು, ಕಡಿವಾಣಗಳನ್ನು ಹಿಡಿದಿದ್ದ ಸೂತರನ್ನು, ರಥ ಧ್ವಜಗಳನ್ನು, ರಥಿಕರ ಕೈಗಳನ್ನು, ಕೈಗಳಲ್ಲಿ ಹಿಡಿದಿದ್ದ ಶಸ್ತ್ರಗಳನ್ನು, ಬಾಹುಗಳನ್ನು ಮತ್ತು ಶಿರಸ್ಸುಗಳನ್ನು ಕೂಡ ಪಾಂಡವನು ಭಲ್ಲ, ಕ್ಷುರ, ಅರ್ಧಚಂದ್ರ ಮತ್ತು ವತ್ಸದಂತ ಬಾಣಗಳಿಂದ ಕತ್ತರಿಸಿದನು.

08014005a ವಾಶಿತಾರ್ಥೇ ಯುಯುತ್ಸಂತೋ ವೃಷಭಾ ವೃಷಭಂ ಯಥಾ|

08014005c ಆಪತಂತ್ಯರ್ಜುನಂ ಶೂರಾಃ ಶತಶೋಽಥ ಸಹಸ್ರಶಃ||

ಹಸುವನ್ನು ಕೂಡಲು ಬಂದ ಗೂಳಿಯನ್ನು ಇತರ ಗೂಳಿಗಳು ಆಕ್ರಮಣಿಸುವಂತೆ ನೂರಾರು ಸಹಸ್ರಾರು ಶೂರರು ಅರ್ಜುನನನ್ನು ಆಕ್ರಮಣಿಸಿದರು.

08014006a ತೇಷಾಂ ತಸ್ಯ ಚ ತದ್ಯುದ್ಧಮಭವಲ್ಲೋಮಹರ್ಷಣ|

08014006c ತ್ರೈಲೋಕ್ಯವಿಜಯೇ ಯಾದೃಗ್ದೈತ್ಯಾನಾಂ ಸಹ ವಜ್ರಿಣಾ||

ಆಗ ಅವರ ಮಧ್ಯೆ ತ್ರೈಲೋಕ್ಯವಿಜಯದ ಸಮಯದಲ್ಲಿ ದೈತ್ಯರೊಂದಿಗೆ ವಜ್ರಿಯ ಯುದ್ಧವು ನಡೆದಂತೆ ಲೋಮಹರ್ಷಣ ಯುದ್ಧವು ನಡೆಯಿತು.

08014007a ತಮವಿಧ್ಯತ್ತ್ರಿಭಿರ್ಬಾಣೈರ್ದಂದಶೂಕೈರಿವಾಹಿಭಿಃ|

08014007c ಉಗ್ರಾಯುಧಸ್ತತಸ್ತಸ್ಯ ಶಿರಃ ಕಾಯಾದಪಾಹರತ್||

ಆಗ ಉಗ್ರಾಯುಧನು ಭಯಂಕರ ಸರ್ಪಗಳಂತಿದ್ದ ಮೂರು ಬಾಣಗಳಿಂದ ಅರ್ಜುನನನ್ನು ಪ್ರಹರಿಸಲು, ಕೂಡಲೇ ಅವನು ಉಗ್ರಾಯುಧನ ಶಿರಸ್ಸನ್ನು ದೇಹದಿಂದ ಅಪಹರಿಸಿದನು.

08014008a ತೇಽರ್ಜುನಂ ಸರ್ವತಃ ಕ್ರುದ್ಧಾ ನಾನಾಶಸ್ತ್ರೈರವೀವೃಷನ್|

08014008c ಮರುದ್ಭಿಃ ಪ್ರೇಷಿತಾ ಮೇಘಾ ಹಿಮವಂತಮಿವೋಷ್ಣಗೇ||

ಅದರಿಂದ ಕ್ರುದ್ಧರಾದ ಅವನ ಸೈನಿಕರು ವರ್ಷಾಕಾಲದಲ್ಲಿ ಭಿರುಗಾಳಿಯಿಂದ ಪ್ರೇರಿತಗೊಂಡು ಮೇಘಗಳು ಹಿಮವತ್ಪರ್ವತದ ಮೇಲೆ ಸತತ ಮಳೆಗರೆಯುವಂತೆ ನಾನಾ ಶಸ್ತ್ರಾಸ್ತ್ರಗಳನ್ನು ಸುರಿಸಿ ಅರ್ಜುನನನ್ನು ಮುಚ್ಚಿದರು.

08014009a ಅಸ್ತ್ರೈರಸ್ತ್ರಾಣಿ ಸಂವಾರ್ಯ ದ್ವಿಷತಾಂ ಸರ್ವತೋಽರ್ಜುನಃ|

08014009c ಸಂಯಗಸ್ತೈಃ ಶರೈಃ ಸರ್ವಾನ್ಸಹಿತಾನಹನದ್ಬಹೂನ್||

ಶತ್ರುಗಳ ಅಸ್ತ್ರಗಳನ್ನು ಅಸ್ತ್ರಗಳಿಂದಲೇ ತಡೆದು ಅರ್ಜುನನು ಶರಗಳಿಗೆ ಅಸ್ತ್ರಗಳನ್ನು ಚೆನ್ನಾಗಿ ಹೂಡಿ ಅನೇಕರಾಗಿದ್ದ ಅವರೆಲ್ಲರನ್ನೂ ಒಟ್ಟಿಗೇ ಸಂಹರಿಸಿದನು.

08014010a ಚಿನ್ನತ್ರಿವೇಣುಜಂಘೇಷಾನ್ನಿಹತಪಾರ್ಷ್ಣಿಸಾರಥೀನ್|

08014010c ಸಂಚಿನ್ನರಶ್ಮಿಯೋಕ್ತ್ರಾಕ್ಷಾನ್ವ್ಯನುಕರ್ಷಯುಗಾನ್ರಥಾನ್|

08014010e ವಿಧ್ವಸ್ತಸರ್ವಸಂನಾಹಾನ್ಬಾಣೈಶ್ಚಕ್ರೇಽರ್ಜುನಸ್ತ್ವರನ್||

ತ್ರಿವೇಣುಸಮೂಹಗಳನ್ನು ಕತ್ತರಿಸಿದನು. ಪಾರ್ಷ್ಣಿಸಾರಥಿಗಳನ್ನು ಸಂಹರಿಸಿದನು. ಬಾಣಗಳಿಂದ ಕಡಿವಾಣಗಳನ್ನು ತುಂಡರಿಸಿ ರಥಗಳ ಗುಂಪುಗಳು ಎಳೆಯುಲ್ಪಟ್ಟು ಎಲ್ಲಕಡೆ ಹರಡಿ ಹೋಗುವಂತೆ ಮಾಡಿದನು.

08014011a ತೇ ರಥಾಸ್ತತ್ರ ವಿಧ್ವಸ್ತಾಃ ಪರಾರ್ಧ್ಯಾ ಭಾಂತ್ಯನೇಕಶಃ|

08014011c ಧನಿನಾಮಿವ ವೇಶ್ಮಾನಿ ಹತಾನ್ಯಗ್ನ್ಯನಿಲಾಂಬುಭಿಃ||

ಅಲ್ಲಿ ವಿಧ್ವಸ್ತಗೊಂಡಿದ್ದ ಆ ಅನೇಕ ಬಹು ಅಮೂಲ್ಯ ರಥಗಳು ಬೆಂಕಿ, ಭಿರುಗಾಳಿ ಮತ್ತು ಪ್ರವಾಹಕ್ಕೆ ಸಿಲುಕಿದ ಧನವಂತರ ಭವನಗಳಂತೆ ಕಾಣುತ್ತಿದ್ದವು.

08014012a ದ್ವಿಪಾಃ ಸಂಭಿನ್ನಮರ್ಮಾಣೋ ವಜ್ರಾಶನಿಸಮೈಃ ಶರೈಃ|

08014012c ಪೇತುರ್ಗಿರ್ಯಗ್ರವೇಶ್ಮಾನಿ ವಜ್ರವಾತಾಗ್ನಿಭಿರ್ಯಥಾ||

ವಜ್ರಾಯುಧಕ್ಕೆ ಸಮಾನ ಶರಗಳಿಂದ ಆನೆಗಳ ಕವಚಗಳು ಒಡೆದು ಸಿಡಿಲು-ಗಾಳಿ-ಮತ್ತು ಬೆಂಕಿಗೆ ಸಿಲುಕಿ ಪರ್ವತದ ಮೇಲಿಂದ ಬೀಳುತ್ತಿದ್ದ ಭವನಗಳಂತೆ ಕೆಳಗುರುಳಿ ಬೀಳುತ್ತಿದ್ದವು.

08014013a ಸಾರೋಹಾಸ್ತುರಗಾಃ ಪೇತುರ್ಬಹವೋಽರ್ಜುನತಾಡಿತಾಃ|

08014013c ನಿರ್ಜಿಹ್ವಾಂತ್ರಾಃ ಕ್ಷಿತೌ ಕ್ಷೀಣಾ ರುಧಿರಾರ್ದ್ರಾಃ ಸುದುರ್ದೃಶಃ||

ಅರ್ಜುನನ ಬಾಣಗಳಿಂದ ಹೊಡೆಯಲ್ಪಟ್ಟ ಅನೇಕ ಕುದುರೆಗಳು ಸವಾರರೊಂದಿಗೆ ಗಾಯಗೊಂಡು ಬಲಗುಂದಿ ರಕ್ತದಿಂದ ತೋಯ್ದು ನಾಲಿಗೆ ಕರುಳುಗಳು ಹೊರಬಂದು ಬಿದ್ದು ನೋಡಲಿಕ್ಕೂ ಸಾಧ್ಯವಾಗದಂತಿದ್ದವು.

08014014a ನರಾಶ್ವನಾಗಾ ನಾರಾಚೈಃ ಸಂಸ್ಯೂತಾಃ ಸವ್ಯಸಾಚಿನಾ|

08014014c ಬಭ್ರಮುಶ್ಚಸ್ಖಲುಃ ಪೇತುರ್ನೇದುರ್ಮಂಲುಶ್ಚ ಮಾರಿಷ||

ಮಾರಿಷ! ಸವ್ಯಸಾಚಿಯ ನಾರಾಚಗಳಿಂದ ಚುಚ್ಚಲ್ಪಟ್ಟ ನರಾಶ್ವಗಜಗಳು ರಣರಂಗದ ಸುತ್ತಲೂ ತಿರುಗುತ್ತಿದ್ದವು. ತತ್ತರಿಸುತ್ತಿದ್ದವು. ನೋವಿನಿಂದ ಕಿರುಚಿಕೊಳ್ಳುತ್ತಿದ್ದವು ಮತ್ತು ಕೆಳಗೆ ಬಿದ್ದು ಹೊರಳಾಡುತ್ತಿದ್ದವು.

08014015a ಅಣಕೈಶ್ಚ ಶಿಲಾಧೌತೈರ್ವಜ್ರಾಶನಿವಿಷೋಪಮೈಃ|

08014015c ಶರೈರ್ನಿಜಘ್ನಿವಾನ್ಪಾರ್ಥೋ ಮಹೇಂದ್ರ ಇವ ದಾನವಾನ್||

ವಜ್ರಾಯುಧದ ವಿಷಕ್ಕೆ ಸಮಾನವಾದ ಅಣಕ ಮತ್ತು ಶಿಲಾಧೌತ ಶರಗಳಿಂದ ಪಾರ್ಥನು ದಾನವರನ್ನು ಇಂದ್ರನು ಹೇಗೋ ಹಾಗೆ ಅವರನ್ನು ಸಂಹರಿಸಿದನು.

08014016a ಮಹಾರ್ಹವರ್ಮಾಭರಣಾ ನಾನಾರೂಪಾಂಬರಾಯುಧಾಃ|

08014016c ಸರಥಾಃ ಸಧ್ವಜಾ ವೀರಾ ಹತಾಃ ಪಾರ್ಥೇನ ಶೇರತೇ||

ಬೆಲೆಬಾಳುವ ಕವಚ-ಆಭರಣಗಳನ್ನೂ ನಾನಾರೂಪದ ಉಡುಪು-ಆಯುಧಗಳನ್ನೂ ಧರಿಸಿದ್ದ ವೀರರು ರಥ-ಧ್ವಜಗಳೊಂದಿಗೆ ಪಾರ್ಥನಿಂದ ಹತರಾಗಿ ಮಲಗಿದರು.

08014017a ವಿಜಿತಾಃ ಪುಣ್ಯಕರ್ಮಾಣೋ ವಿಶಿಷ್ಟಾಭಿಜನಶ್ರುತಾಃ|

08014017c ಗತಾಃ ಶರೀರೈರ್ವಸುಧಾಮೂರ್ಜಿತೈಃ ಕರ್ಮಭಿರ್ದಿವಂ||

ಪರಾಜಿತರಾಗಿ ಪ್ರಾಣಗಳನ್ನು ತೊರೆದ ಆ ಪುಣ್ಯಕರ್ಮಿ ಸತ್ಕುಲಪ್ರಸೂತ ಶಾಸ್ತ್ರಜ್ಞಾನಸಂಪನ್ನರು ತಾವು ಮಾಡಿದ ಕರ್ಮದ ಫಲದಿಂದಾಗಿ ಸ್ವರ್ಗವನ್ನೇ ಸೇರಿದರು.

08014018a ಅಥಾರ್ಜುನರಥಂ ವೀರಾಸ್ತ್ವದೀಯಾಃ ಸಮುಪಾದ್ರವನ್|

08014018c ನಾನಾಜನಪದಾಧ್ಯಕ್ಷಾಃ ಸಗಣಾ ಜಾತಮನ್ಯವಃ||

ಕೋಪಗೊಂಡ ನಿನ್ನಕಡೆಯ ನಾನಾ ಜನಪದಾಧ್ಯಕ್ಷ ವೀರರು ತಮ್ಮ ತಮ್ಮ ಗಣಗಳೊಂದಿಗೆ ಅರ್ಜುನನ ರಥಕ್ಕೆ ಮುತ್ತಿಗೆ ಹಾಕಿದರು.

08014019a ಉಹ್ಯಮಾನಾ ರಥಾಶ್ವೈಸ್ತೇ ಪತ್ತಯಶ್ಚ ಜಿಘಾಂಸವಃ|

08014019c ಸಮಭ್ಯಧಾವನ್ನಸ್ಯಂತೋ ವಿವಿಧಂ ಕ್ಷಿಪ್ರಮಾಯುಧಂ||

ರಥ ಮತ್ತು ಕುದುರೆಗಳ ಮೇಲೇರಿದವರು ಮತ್ತು ಪದಾತಿಗಳು ಅವನನ್ನು ಸಂಹರಿಸಲು ಬಯಸಿ ವಿವಿಧ ಆಯುಧಗಳನ್ನು ಪ್ರಯೋಗಿಸುತ್ತಾ ಅತಿ ಶೀಘ್ರವಾಗಿ ಅರ್ಜುನನ ಮೇಲೆ ಎರಗಿ ಬಿದ್ದರು.

08014020a ತದಾಯುಧಮಹಾವರ್ಷಂ ಕ್ಷಿಪ್ತಂ ಯೋಧಮಹಾಂಬುದೈಃ|

08014020c ವ್ಯಧಮನ್ನಿಶಿತೈರ್ಬಾಣೈಃ ಕ್ಷಿಪ್ರಮರ್ಜುನಮಾರುತಃ||

ಆಗ ಯೋಧರೆಂಬ ಮಹಾಮೋಡಗಳು ಸುರಿಸುತ್ತಿದ್ದ ಆಯುಧಗಳೆಂಬ ಮಳೆಯನ್ನು ಅರ್ಜುನನೆಂಬ ಮಾರುತವು ಕ್ಷಿಪ್ರವಾಗಿ ನಿಶಿತ ಬಾಣಗಳಿಂದ ನಾಶಗೊಳಿಸಿತು.

08014021a ಸಾಶ್ವಪತ್ತಿದ್ವಿಪರಥಂ ಮಹಾಶಸ್ತ್ರೌಘಮಪ್ಲವಂ|

08014021c ಸಹಸಾ ಸಂತಿತೀರ್ಷಂತಂ ಪಾರ್ಥಂ ಶಸ್ತ್ರಾಸ್ತ್ರಸೇತುನಾ||

08014022a ಅಥಾಬ್ರವೀದ್ವಾಸುದೇವಃ ಪಾರ್ಥಂ ಕಿಂ ಕ್ರೀಡಸೇಽನಘ|

08014022c ಸಂಶಪ್ತಕಾನ್ಪ್ರಮಥ್ಯೈತಾಂಸ್ತತಃ ಕರ್ಣವಧೇ ತ್ವರ||

ಮಹಾಶಸ್ತ್ರಗಳೆಂಬ ಅಲೆಗಳಿಂದ ಕೂಡಿದ್ದ ಕುದುರೆ-ಪದಾತಿ-ಆನೆ-ರಥಗಳ ಸೇನೆಯೆಂಬ ಆ ಮಹಾಸಾಗರವನ್ನು ಶಸ್ತ್ರಾಸ್ತ್ರಸೇತುವೆಯ ಮೂಲಕ ಬೇಗನೇ ದಾಟಲು ಬಯಸುತ್ತಿದ್ದ ಪಾರ್ಥನನ್ನು ಉದ್ದೇಶಿಸಿ ವಾಸುದೇವನು ಹೇಳಿದನು: “ಪಾರ್ಥ! ಅನಘ! ಇದೇನು ಆಟವಾದುತ್ತಿದ್ದೀಯೆ! ಸಂಶಪ್ತಕರನ್ನು ಸದೆಬಡಿದು ನಂತರ ಕರ್ಣವಧೆಗೋಸ್ಕರ ತ್ವರೆಮಾಡು!”

08014023a ತಥೇತ್ಯುಕ್ತ್ವಾರ್ಜುನಃ ಕ್ಷಿಪ್ರಂ ಶಿಷ್ಟಾನ್ಸಂಶಪ್ತಕಾಂಸ್ತದಾ|

08014023c ಆಕ್ಷಿಪ್ಯ ಶಸ್ತ್ರೇಣ ಬಲಾದ್ದೈತ್ಯಾನಿಂದ್ರ ಇವಾವಧೀತ್||

ಹಾಗೆಯೇ ಆಗಲೆಂದು ಹೇಳಿ ಅರ್ಜುನನು ಅಳಿದುಳಿದ ಸಂಶಪ್ತಕರನ್ನು ಬಲಪೂರ್ವಕವಾಗಿ ಶಸ್ತ್ರಗಳಿಂದ ಇಂದ್ರನು ದೈತ್ಯರನ್ನು ಹೇಗೋ ಹಾಗೆ ಕ್ಷಿಪ್ರವಾಗಿ ಸಂಹರಿಸಿದನು.

08014024a ಆದಧತ್ಸಂದಧನ್ನೇಷೂನ್ದೃಷ್ಟಃ ಕೈಶ್ಚಿದ್ರಣೇಽರ್ಜುನಃ|

08014024c ವಿಮುಂಚನ್ವಾ ಶರಾಂ ಶೀಘ್ರಂ ದೃಶ್ಯತೇ ಸ್ಮ ಹಿ ಕೈರಪಿ||

ಆ ಸಮಯದಲ್ಲಿ ಅರ್ಜುನನು ಬಾಣಗಳನ್ನು ತೆಗೆದುಕೊಳ್ಳುತ್ತಿದ್ದುದೂ, ಬಿಲ್ಲಿಗೆ ಹೂಡುತ್ತಿದ್ದುದೂ, ಅಥವಾ ಪ್ರಯೋಗಿಸುತ್ತಿದ್ದಿದೂ ಯಾರಿಗೂ ಕಾಣುತ್ತಿರಲಿಲ್ಲ. ಬಾಣಗಳಿಂದ ಸಾಯುತ್ತಿದ್ದವರು ಮಾತ್ರ ಕಾಣುತ್ತಿದ್ದರು.

08014025a ಆಶ್ಚರ್ಯಮಿತಿ ಗೋವಿಂದೋ ಬ್ರುವನ್ನಶ್ವಾನಚೋದಯತ್|

08014025c ಹಂಸಾಂಸಗೌರಾಸ್ತೇ ಸೇನಾಂ ಹಂಸಾಃ ಸರ ಇವಾವಿಶನ್||

ಆಶ್ಚರ್ಯವೆಂದು ಹೇಳುತ್ತಾ ಗೋವಿಂದನು ಹಂಸ-ಚಂದ್ರರಂತೆ ಬಿಳಿಯಾಗಿದ್ದ ಆ ಕುದುರೆಗಳನ್ನು ಪ್ರಚೋದಿಸುತ್ತಾ ಹಂಸಗಳು ಸರೋವರವನ್ನು ಹೇಗೋ ಹಾಗೆ ಸೇನೆಗಳನ್ನು ಪ್ರವೇಶಿಸಿದನು.

08014026a ತತಃ ಸಂಗ್ರಾಮಭೂಮಿಂ ತಾಂ ವರ್ತಮಾನೇ ಜನಕ್ಷಯೇ|

08014026c ಅವೇಕ್ಷಮಾಣೋ ಗೋವಿಂದಃ ಸವ್ಯಸಾಚಿನಮಬ್ರವೀತ್||

ಆಗ ಸಂಗ್ರಾಮಭೂಮಿಯಲ್ಲಿ ನಡೆಯುತ್ತಿರುವ ಆ ಜನಕ್ಷಯವನ್ನು ವೀಕ್ಷಿಸುತ್ತಾ ಗೋವಿಂದನು ಸವ್ಯಸಾಚಿಗೆ ಹೇಳಿದನು:

08014027a ಏಷ ಪಾರ್ಥ ಮಹಾರೌದ್ರೋ ವರ್ತತೇ ಭರತಕ್ಷಯಃ|

08014027c ಪೃಥಿವ್ಯಾಂ ಪಾರ್ಥಿವಾನಾಂ ವೈ ದುರ್ಯೋಧನಕೃತೇ ಮಹಾನ್||

“ಪಾರ್ಥ! ಇಗೋ ದುರ್ಯೋಧನನನು ಮಾಡಿದ ಪೃಥ್ವಿಯ ಪಾರ್ಥಿವರ ಈ ಮಹಾರೌದ್ರ ಮಹಾ ಭರತಕ್ಷಯವು ನಡೆಯುತ್ತಿದೆ.

08014028a ಪಶ್ಯ ಭಾರತ ಚಾಪಾನಿ ರುಕ್ಮಪೃಷ್ಠಾನಿ ಧನ್ವಿನಾಂ|

08014028c ಮಹತಾಮಪವಿದ್ಧಾನಿ ಕಲಾಪಾನಿಷುಧೀಸ್ತಥಾ||

08014029a ಜಾತರೂಪಮಯೈಃ ಪುಂಖೈಃ ಶರಾಂಶ್ಚ ನತಪರ್ವಣಃ|

08014029c ತೈಲಧೌತಾಂಶ್ಚ ನಾರಾಚಾನ್ನಿರ್ಮುಕ್ತಾನಿವ ಪನ್ನಗಾನ್||

08014030a ಹಸ್ತಿದಂತತ್ಸರೂನ್ಖಡ್ಗಾಂ ಜಾತರೂಪಪರಿಷ್ಕೃತಾನ್|

08014030c ಆಕೀರ್ಣಾಂಸ್ತೋಮರಾಂಶ್ಚಾಪಾಂಶ್ಚಿತ್ರಾನ್ ಹೇಮವಿಭೂಷಿತಾನ್||

08014031a ವರ್ಮಾಣಿ ಚಾಪವಿದ್ಧಾನಿ ರುಕ್ಮಪೃಷ್ಠಾನಿ ಭಾರತ|

08014031c ಸುವರ್ಣವಿಕೃತಾನ್ಪ್ರಾಸಾಂ ಶಕ್ತೀಃ ಕನಕಭೂಷಿತಾಃ||

08014032a ಜಾಂಬೂನದಮಯೈಃ ಪಟ್ಟೈರ್ಬದ್ಧಾಶ್ಚ ವಿಪುಲಾ ಗದಾಃ|

08014032c ಜಾತರೂಪಮಯೀಶ್ಚರ್ಷ್ಟೀಃ ಪಟ್ಟಿಶಾನ್ ಹೇಮಭೂಷಿತಾನ್||

08014033a ದಂಡೈಃ ಕನಕಚಿತ್ರೈಶ್ಚ ವಿಪ್ರವಿದ್ಧಾನ್ಪರಶ್ವಧಾನ್|

08014033c ಅಯಸ್ಕುಶಾಂತಾನ್ಪತಿತಾನ್ಮುಸಲಾನಿ ಗುರೂಣಿ ಚ||

08014034a ಶತಘ್ನೀಃ ಪಶ್ಯ ಚಿತ್ರಾಶ್ಚ ವಿಪುಲಾನ್ಪರಿಘಾಂಸ್ತಥಾ|

08014034c ಚಕ್ರಾಣಿ ಚಾಪವಿದ್ಧಾನಿ ಮುದ್ಗರಾಂಶ್ಚ ಬಹೂನ್ರಣೇ||

ಭಾರತ! ಧನ್ವಿಗಳ ಬೆಳ್ಳಿಯ ಪಟ್ಟಿಯಿರುವ ಧನುಸ್ಸುಗಳು, ಆಭರಗಳು ಮತ್ತು ಬತ್ತಳಿಕೆಗಳು, ಸುವರ್ಣಮಯ ಪುಂಖಗಳುಳ್ಳ ನತಪರ್ವಣ ಶರಗಳು, ನಾಗಗಳಂತೆ ಪ್ರಯೋಗಿಸಲ್ಪಟ್ಟ ತೈಲದಲ್ಲಿ ತೊಳೆದ ನಾರಾಚಗಳು, ಆನೆಯ ದಂತ ಮತ್ತು ಚಿನ್ನದ ಹಿಡಿಗಳುಳ್ಳ ಖಡ್ಗಗಳು, ಚದುರಿ ಬಿದ್ದಿರುವ ತೋಮರಗಳು, ಚಾ‌ಪಗಳು ಮತ್ತು ಬಣ್ಣ ಬಣ್ಣದ ಹೇಮ ವಿಭೂಷಣಗಳು, ಕವಚಗಳು, ಬಂಗಾರದ ಪೃಷ್ಠಭಾಗಗಳಿರುವ ಗುರಾಣಿಗಳು, ಸುವರ್ಣದ ಪ್ರಾಸಗಳು, ಕನಕಭೂಷಿತ ಶಕ್ತಿಗಳು, ಬಂಗಾರದ ಪಟ್ಟಿಗಳಿರುವ ದೊಡ್ಡ ದೊಡ್ಡ ಗದೆಗಳು, ಬಂಗಾರದ ಪಟ್ಟಿಗಳಿರುವ ಹೇಮಭೂಷಿತ ಋಷ್ಟಿಗಳು, ಕನಕ ಚಿತ್ರಗಳ ದಂಡಗಳುಳ್ಳ ಪರಶುಗಳು, ಉಕ್ಕಿನಿಂದ ಮಾಡಿದ ಭಾರ ಮುಸಲಗಳು, ಚಿತ್ರಚಿತ್ರದ ಶತಘ್ನಿಗಳು, ದೊಡ್ಡ ಪರಿಘಗಳು, ಚಕ್ರಗಳು, ಬಿಲ್ಲುಗಳು ಮತ್ತು ಮುದ್ಗರಗಳು ಅನೇಕ ಸಂಖ್ಯೆಗಳಲ್ಲಿ ರಣದಲ್ಲಿ ಬಿದ್ದಿರುವುದನ್ನು ನೋಡು!

08014035a ನಾನಾವಿಧಾನಿ ಶಸ್ತ್ರಾಣಿ ಪ್ರಗೃಹ್ಯ ಜಯಗೃದ್ಧಿನಃ|

08014035c ಜೀವಂತ ಇವ ಲಕ್ಷ್ಯಂತೇ ಗತಸತ್ತ್ವಾಸ್ತರಸ್ವಿನಃ||

ವಿಜಯೇಚ್ಛಿಗಳು ನಾನಾವಿಧದ ಶಸ್ತ್ರಗಳನ್ನು ಹಿಡಿದೇ ಸತ್ತುಹೋಗಿದ್ದರೂ ಆ ತರಸ್ವಿಗಳು ಜೀವಂತವಿರುವರೋ ಎನ್ನುವಂತೆ ಕಾಣುತ್ತಿದ್ದಾರೆ.

08014036a ಗದಾವಿಮಥಿತೈರ್ಗಾತ್ರೈರ್ಮುಸಲೈರ್ಭಿನ್ನಮಸ್ತಕಾನ್|

08014036c ಗಜವಾಜಿರಥಕ್ಷುಣ್ಣಾನ್ಪಶ್ಯ ಯೋಧಾನ್ಸಹಸ್ರಶಃ||

ಗದೆಗಳಿಂದ ಅಂಗಾಗಳೆಲ್ಲವೂ ಜಜ್ಜಿಹೋದ, ಮುಸಲಗಳಿಂದ ತಲೆಗಳು ಒಡೆದುಹೋದ, ಆನೆ-ಕುದುರೆ-ರಥಗಳಿಂದ ತುಳಿಯಲ್ಪಟ್ಟ ಸಹಸ್ರಾರು ಯೋಧರನ್ನು ನೋಡು!

08014037a ಮನುಷ್ಯಗಜವಾಜೀನಾಂ ಶರಶಕ್ತ್ಯೃಷ್ಟಿತೋಮರೈಃ|

08014037c ನಿಸ್ತ್ರಿಂಶೈಃ ಪಟ್ಟಿಶೈಃ ಪ್ರಾಸೈರ್ನಖರೈರ್ಲಗುಡೈರಪಿ||

08014038a ಶರೀರೈರ್ಬಹುಧಾ ಭಿನ್ನೈಃ ಶೋಣಿತೌಘಪರಿಪ್ಲುತೈಃ|

08014038c ಗತಾಸುಭಿರಮಿತ್ರಘ್ನ ಸಂವೃತಾ ರಣಭೂಮಯಃ||

ಅಮಿತ್ರಘ್ನ! ಬಾಣ, ಶಕ್ತಿ, ಋಷ್ಟಿ, ತೋಮರ, ಖಡ್ಗ, ಪಟ್ಟಿಶ, ಪ್ರಾಸ, ನಖರ, ಮತ್ತು ಲಗುಡಗಳಿಂದ ಶರೀರಗಳು ಒಡೆಯಲ್ಪಟ್ಟು ರಕ್ತದಲ್ಲಿ ಮಡುವಿನಲ್ಲಿ ಮುಳುಗಿಹೋಗಿ ಅಸುನೀಗಿರುವ ಮನುಷ್ಯ-ಗಜ-ವಾಜಿಗಳಿಂದ ಈ ರಣಭೂಮಿಯು ತುಂಬಿಹೋಗಿದೆ.

08014039a ಬಾಹುಭಿಶ್ಚಂದನಾದಿಗ್ಧೈಃ ಸಾಂಗದೈಃ ಶುಭಭೂಷಣೈಃ|

08014039c ಸತಲತ್ರೈಃ ಸಕೇಯೂರೈರ್ಭಾತಿ ಭಾರತ ಮೇದಿನೀ||

08014040a ಸಾಂಗುಲಿತ್ರೈರ್ಭುಜಾಗ್ರೈಶ್ಚ ವಿಪ್ರವಿದ್ಧೈರಲಂಕೃತೈಃ|

ಭಾರತ! ಚಂದನಾದಿಗಳಿಂದ ಲೇಪಿತಗೊಂಡ ಅಂಗದ-ಶುಭಭೂಷಣಗಳಿಂದ ಕೂಡಿರುವ, ಕೇಯೂರ, ತಲತ್ರಗಳಿಂದ ಮತ್ತು ಅಂಗುಲಿತ್ರಗಳಿಂದ ಕೂಡಿರುವ ಮತ್ತು ನಾನಾವಿಧದ ಅಲಂಕಾರಗಳಿಮ್ದ ಕೂಡಿದ ಭುಜಾಗ್ರಗಳಿರುವ ಬಾಹುಗಳಿಂದ ಈ ಮೇದಿನಿಯು ಸಂಪನ್ನವಾಗಿದೆ.

08014040c ಹಸ್ತಿಹಸ್ತೋಪಮೈಶ್ಚಿನ್ನೈರೂರುಭಿಶ್ಚ ತರಸ್ವಿನಾಂ||

08014041a ಬದ್ಧಚೂಡಾಮಣಿವರೈಃ ಶಿರೋಭಿಶ್ಚ ಸಕುಂಡಲೈಃ|

08014041c ನಿಕೃತ್ತೈರ್ವೃಷಭಾಕ್ಷಾಣಾಂ ವಿರಾಜತಿ ವಸುಂಧರಾ||

ಆನೆಗಳ ಸೊಂಡಿಲುಗಳಂತಿರುವ ಆದರೆ ಒಡೆದುಹೋದ ತರಸ್ವಿಗಳ ತೊಡೆಗಳಿಂದ, ಶ್ರೇಷ್ಠ ಚೂಡಾಮಣಿಗಳನ್ನು ಕಟ್ಟಿದ್ದ ಕುಂಡಲಯುಕ್ತವಾದ ಶಿರಗಳಿಂದ ಮತ್ತು ತುಂಡರಿಸಲ್ಪಟ್ಟ ವೃಷಭಾಕ್ಷರಿಂದ ಈ ವಸುಂಧರೆಯು ವಿರಾಜಿಸುತ್ತಿದ್ದಾಳೆ.

08014042a ಕಬಂದೈಃ ಶೋಣಿತಾದಿಗ್ಧೈಶ್ಚಿನ್ನಗಾತ್ರಶಿರೋಧರೈಃ|

08014042c ಭೂರ್ಭಾತಿ ಭರತಶ್ರೇಷ್ಠ ಶಾಂತಾರ್ಚಿರ್ಭಿರಿವಾಗ್ನಿಭಿಃ||

ಭರತಶ್ರೇಷ್ಠ! ರಕ್ತದಿಂದ ತೋಯ್ದುಹೋಗಿರುವ ಕಬಂದಗಳಿಂದ, ದೇಹವು ತುಂಡಾಗಿರುವ ಶಿರೋಧರಗಳಿಂದ ಭೂಮಿಯು ಬೆಂಕಿಯು ಸುಟ್ಟು ಶಾಂತವಾಗಿರುವಂತೆ ತೋರುತ್ತಿದೆ.

08014043a ರಥಾನ್ಬಹುವಿಧಾನ್ಭಗ್ನಾನ್ ಹೇಮಕಿಂಕಿಣಿನಃ ಶುಭಾನ್|

08014043c ಅಶ್ವಾಂಶ್ಚ ಬಹುಧಾ ಪಶ್ಯ ಶೋಣಿತೇನ ಪರಿಪ್ಲುತಾನ್||

ಬಂಗಾರದ ಗಂಟೆಗಳುಳ್ಳ ಶುಭ ರಥಗಳು ಬಹುವಿಧವಾಗಿ ಭಗ್ನವಾಗಿರುವುದನ್ನೂ ಅನೇಕ ಅಶ್ವಗಳು ರಕ್ತದಲ್ಲಿ ಮುಳುಗಿರುವುದನ್ನೂ ನೋಡು!

08014044a ಯೋಧಾನಾಂ ಚ ಮಹಾಶಂಖಾನ್ಪಾಂಡುರಾಂಶ್ಚ ಪ್ರಕೀರ್ಣಕಾನ್|

08014044c ನಿರಸ್ತಜಿಹ್ವಾನ್ಮಾತಂಗಾಂ ಶಯಾನಾನ್ಪರ್ವತೋಪಮಾನ್||

08014045a ವೈಜಯಂತೀವಿಚಿತ್ರಾಂಶ್ಚ ಹತಾಂಶ್ಚ ಗಜಯೋಧಿನಃ|

08014045c ವಾರಣಾನಾಂ ಪರಿಸ್ತೋಮಾನ್ಸುಯುಕ್ತಾಂಬರಕಂಬಲಾನ್||

08014046a ವಿಪಾಟಿತಾ ವಿಚಿತ್ರಾಶ್ಚ ರೂಪಚಿತ್ರಾಃ ಕುಥಾಸ್ತಥಾ|

08014046c ಭಿನ್ನಾಶ್ಚ ಬಹುಧಾ ಘಂಟಾಃ ಪತದ್ಭಿಶ್ಚೂರ್ಣಿತಾ ಗಜೈಃ||

08014047a ವೈಡೂರ್ಯಮಣಿದಂಡಾಂಶ್ಚ ಪತಿತಾನಂಕುಶಾನ್ಭುವಿ|

08014047c ಬದ್ಧಾಃ ಸಾದಿಧ್ವಜಾಗ್ರೇಷು ಸುವರ್ಣವಿಕೃತಾಃ ಕಶಾಃ||

08014048a ವಿಚಿತ್ರಾನ್ಮಣಿಚಿತ್ರಾಂಶ್ಚ ಜಾತರೂಪಪರಿಷ್ಕೃತಾನ್|

08014048c ಅಶ್ವಾಸ್ತರಪರಿಸ್ತೋಮಾನ್ರಾಂಕವಾನ್ಪತಿತಾನ್ಭುವಿ||

08014049a ಚೂಡಾಮಣೀನ್ನರೇಂದ್ರಾಣಾಂ ವಿಚಿತ್ರಾಃ ಕಾಂಚನಸ್ರಜಃ|

08014049c ಚತ್ರಾಣಿ ಚಾಪವಿದ್ಧಾನಿ ಚಾಮರವ್ಯಜನಾನಿ ಚ||

08014050a ಚಂದ್ರನಕ್ಷತ್ರಭಾಸೈಶ್ಚ ವದನೈಶ್ಚಾರುಕುಂಡಲೈಃ|

08014050c ಶ್ಲಕ್ಷಶ್ಮಶ್ರುಭಿರತ್ಯರ್ಥಂ ವೀರಾಣಾಂ ಸಮಲಂಕೃತೈಃ|

08014050e ವದನೈಃ ಪಶ್ಯ ಸಂಚನ್ನಾಂ ಮಹೀಂ ಶೋಣಿತಕರ್ದಮಾಂ||

ಯೋಧರ ಬಿಳಿಯ ಮಹಾಶಂಖಗಳು ಹರಡಿ ಬಿದ್ದಿರುವುದನ್ನು, ನಾಲಿಗೆಗಳನ್ನು ಹೊರಚಾಚಿ ಸತ್ತು ಮಲಗಿರುವ ಪರ್ವತೋಪಮ ಆನೆಗಳನ್ನು, ಬಣ್ಣ ಬಣ್ಣದ ವೈಜಯಂತೀ ಮಾಲೆಗಳು, ಹತರಾಗಿರುವ ಗಜಯೋಧಿಗಳು, ಆನೆಗಳ ಮೇಲೆ ಹೊದ್ದಿಸಿದ್ದ, ಹರಿದು ವಿಚಿತ್ರವಾಗಿ ಕಾಣುತ್ತಿದ್ದ ಕಂಬಳಿಗಳ ರಾಶಿಗಳು, ಕೆಳಗೆ ಬಿದ್ದು ಆನೆಗಳಿಂದ ತುಳಿದು ಒಡೆಯಲ್ಪಟ್ಟ ಅನೇಕ ಗಂಟೆಗಳು, ನೆಲದಮೇಲೆ ಬಿದ್ದ ಅಂಕುಶಗಳ ವೈಡೂರ್ಯ-ಮಣಿಗಳ ದಂಡಗಳು, ಕುದುರೆಗಳ ಸವಾರಿಯ ಮೇಲೆ ಕಟ್ಟಿದ್ದ ಸುವರ್ಣ ವಿಚಿತ್ರ ಮಣಿಚಿತ್ರಗಳಿಂದ ಕೂಡಿದ ಹಗ್ಗಗಳು, ನೆಲದ ಮೇಲೆ ಬಿದ್ದಿರುವ ಕುದುರೆಗಳಿಗೆ ಹೊದಿಸಿದ್ದ ರಂಕ ಚರ್ಮದ ಜೀನುಗಳು, ನರೇಂದ್ರರ ಕಾಂಚನಸ್ರಜ ವಿಚಿತ್ರ ಚೂಡಾಮಣಿಗಳು, ಚಂದ್ರ-ನಕ್ಷತ್ರಗಳಂತೆ ಹೊಳೆಯುತ್ತಿರುವ ಮುಖಗಳ ಚಾರುಕುಂಡಲಗಳು, ಗಡ್ಡ ಮೀಸೆಗಳಿಂದ ಕೂಡಿದ್ದ ವೀರರ ಸಮಲಂಕೃತ ಮುಖಗಳು ರಕ್ತ ಮಾಂಸಗಳ ಮಡುವಿನಲ್ಲಿ ಮುಳುಗಿಹೋಗಿರುವುದನ್ನು ನೋಡು!

08014051a ಸಜೀವಾಂಶ್ಚ ನರಾನ್ಪಶ್ಯ ಕೂಜಮಾನಾನ್ಸಮಂತತಃ|

08014051c ಉಪಾಸ್ಯಮಾನಾನ್ಬಹುಭಿರ್ನ್ಯಸ್ತಶಸ್ತ್ರೈರ್ವಿಶಾಂ ಪತೇ||

ವಿಶಾಂಪತೇ! ಶಸ್ತ್ರಗಳಿಂದ ಹೊಡೆಯಲ್ಪಟ್ಟು ಕೆಳಗುರುಳಿಸಲ್ಪಟ್ಟು ನರಳುತ್ತಿರುವ ಸಜೀವ ಮನುಷ್ಯರನ್ನು ಎಲ್ಲೆಡೆ ನೋಡು.

08014052a ಜ್ಞಾತಿಭಿಃ ಸಹಿತೈಸ್ತತ್ರ ರೋದಮಾನೈರ್ಮುಹುರ್ಮುಹುಃ|

08014052c ವ್ಯುತ್ಕ್ರಾಂತಾನಪರಾನ್ಯೋಧಾಂಶ್ಚಾದಯಿತ್ವಾ ತರಸ್ವಿನಃ|

08014052e ಪುನರ್ಯುದ್ಧಾಯ ಗಚ್ಚಂತಿ ಜಯಗೃದ್ಧಾಃ ಪ್ರಮನ್ಯವಃ||

 

08014053a ಅಪರೇ ತತ್ರ ತತ್ರೈವ ಪರಿಧಾವಂತಿ ಮಾನಿನಃ|

08014053c ಜ್ಞಾತಿಭಿಃ ಪತಿತೈಃ ಶೂರೈರ್ಯಾಚ್ಯಮಾನಾಸ್ತಥೋದಕಂ||

08014054a ಜಲಾರ್ಥಂ ಚ ಗತಾಃ ಕೇ ಚಿನ್ನಿಷ್ಪ್ರಾಣಾ ಬಹವೋಽರ್ಜುನ|

08014054c ಸಂನಿವೃತ್ತಾಶ್ಚ ತೇ ಶೂರಾಸ್ತಾನ್ದೃಷ್ಟ್ವೈವ ವಿಚೇತಸಃ||

08014055a ಜಲಂ ದೃಷ್ಟ್ವಾ ಪ್ರಧಾವಂತಿ ಕ್ರೋಶಮಾನಾಃ ಪರಸ್ಪರಂ|

08014055c ಜಲಂ ಪೀತ್ವಾ ಮೃತಾನ್ಪಶ್ಯ ಪಿಬತೋಽನ್ಯಾಂಶ್ಚ ಭಾರತ||

08014056a ಪರಿತ್ಯಜ್ಯ ಪ್ರಿಯಾನನ್ಯೇ ಬಾಂದವಾನ್ಬಾಂದವಪ್ರಿಯ|

08014056c ವ್ಯುತ್ಕ್ರಾಂತಾಃ ಸಮದೃಶ್ಯಂತ ತತ್ರ ತತ್ರ ಮಹಾರಣೇ||

08014057a ಪಶ್ಯಾಪರಾನ್ನರಶ್ರೇಷ್ಠ ಸಂದಷ್ಟೌಷ್ಠಪುಟಾನ್ಪುನಃ|

08014057c ಭ್ರುಕುಟೀಕುಟಿಲೈರ್ವಕ್ತ್ರೈಃ ಪ್ರೇಕ್ಷಮಾಣಾನ್ಸಮಂತತಃ||

 

08014058a ಏತತ್ತವೈವಾನುರೂಪಂ ಕರ್ಮಾರ್ಜುನ ಮಹಾಹವೇ|

08014058c ದಿವಿ ವಾ ದೇವರಾಜಸ್ಯ ತ್ವಯಾ ಯತ್ಕೃತಮಾಹವೇ||

ಅರ್ಜುನ! ಮಹಾಹವದಲ್ಲಿ ನೀನು ಮಾಡಿದುದು ನಿನಗೆ ಅನುರೂಪವೇ ಆಗಿದೆ. ಸ್ವರ್ಗದಲ್ಲಿರುವ ದೇವರಾಜನು ಮಾತ್ರ ಯುದ್ಧದಲ್ಲಿ ನಿನ್ನಂತಹ ಈ ಕೃತ್ಯವನ್ನು ಮಾಡಬಲ್ಲನು.”

08014059a ಏವಂ ತಾಂ ದರ್ಶಯನ್ಕೃಷ್ಣೋ ಯುದ್ಧಭೂಮಿಂ ಕಿರೀಟಿನೇ|

08014059c ಗಚ್ಚನ್ನೇವಾಶೃಣೋಚ್ಚಬ್ದಂ ದುರ್ಯೋಧನಬಲೇ ಮಹತ್||

08014060a ಶಂಖದುಂದುಭಿನಿರ್ಘೋಷಾನ್ಭೇರೀಪಣವಮಿಶ್ರಿತಾನ್|

08014060c ರಥಾಶ್ವಗಜನಾದಾಂಶ್ಚ ಶಸ್ತ್ರಶಬ್ದಾಂಶ್ಚ ದಾರುಣಾನ್||

ಈ ರೀತಿ ಕೃಷ್ಣನು ಕಿರೀಟಿಗೆ ಯುದ್ಧಭೂಮಿಯನ್ನು ತೋರಿಸುತ್ತಾ ಹೋಗುತ್ತಿರಲು ದುರ್ಯೋಧನನ ಸೇನೆಯ ಕಡೆಯಿಂದ ಒಂದು ಮಹಾಶಬ್ಧವನ್ನು  - ಭೇರೀ-ಪಣವಗಳೊಂದಿಗೆ ಮಿಶ್ರಿತ ಶಂಖದುಂದುಭಿಗಳ ನಿರ್ಘೋಷವನ್ನೂ, ರಥ-ಅಶ್ವ-ಗಜಗಳ ನಾದವನ್ನೂ, ದಾರುಣ ಶಸ್ತ್ರಗಳ ಶಬ್ಧಗಳನ್ನೂ - ಕೇಳಿದನು.

08014061a ಪ್ರವಿಶ್ಯ ತದ್ಬಲಂ ಕೃಷ್ಣಸ್ತುರಗೈರ್ವಾತವೇಗಿಭಿಃ|

08014061c ಪಾಂಡ್ಯೇನಾಭ್ಯರ್ದಿತಾಂ ಸೇನಾಂ ತ್ವದೀಯಾಂ ವೀಕ್ಷ್ಯ ಧಿಷ್ಠಿತಃ||

ಗಾಳಿಯ ವೇಗದ ಕುದುರೆಗಳೊಂದಿಗೆ ಆ ಸೇನೆಯನ್ನು ಪ್ರವೇಶಿಸಿ ಕೃಷ್ಣನು ನಿನ್ನ ಸೇನೆಯನ್ನು ಪಾಂಡ್ಯನು ಮರ್ದಿಸುತ್ತಿರುವುದನ್ನು ಕಂಡು ಅಚ್ಚರಿಗೊಂಡನು.

08014062a ಸ ಹಿ ನಾನಾವಿಧೈರ್ಬಾಣೈರಿಷ್ವಾಸಪ್ರವರೋ ಯುಧಿ|

08014062c ನ್ಯಹನದ್ದ್ವಿಷತಾಂ ವ್ರಾತಾನ್ಗತಾಸೂನಂತಕೋ ಯಥಾ||

ಆಯುಷ್ಯ ಮುಗಿದವರನ್ನು ಅಂತಕನು ಹೇಗೋ ಹಾಗೆ ಧನುರ್ಧಾರಿಪ್ರವರ ಪಾಂಡ್ಯನು ಯುದ್ಧದಲ್ಲಿ ನಾನಾವಿಧದ ಬಾಣಗಳಿಂದ ಶತ್ರುಸಮೂಹಗಳನ್ನು ಸತತವಾಗಿ ನಾಶಗೊಳಿಸುತ್ತಿದ್ದನು.

08014063a ಗಜವಾಜಿಮನುಷ್ಯಾಣಾಂ ಶರೀರಾಣಿ ಶಿತೈಃ ಶರೈಃ|

08014063c ಭಿತ್ತ್ವಾ ಪ್ರಹರತಾಂ ಶ್ರೇಷ್ಠೋ ವಿದೇಹಾಸೂಂಶ್ಚಕಾರ ಸಃ||

ಆ ಪ್ರಹರಿಗಳಲ್ಲಿ ಶ್ರೇಷ್ಠನು ನಿಶಿತ ಶರಗಳಿಂದ ಗಜ-ವಾಜಿ-ಮನುಷ್ಯರ ಶರೀರಗಳನ್ನು ಭೇದಿಸಿ ವಿದೇಹಿಗಳನ್ನಾಗಿ ಮಾಡುತ್ತಿದ್ದನು.

08014064a ಶತ್ರುಪ್ರವೀರೈರಸ್ತಾನಿ ನಾನಾಶಸ್ತ್ರಾಣಿ ಸಾಯಕೈಃ|

08014064c ಭಿತ್ತ್ವಾ ತಾನಹನತ್ಪಾಂಡ್ಯಃ ಶತ್ರೂಂ ಶಕ್ರ ಇವಾಸುರಾನ್||

ಶಕ್ರನು ಅಸುರರನ್ನು ಹೇಗೋ ಹಾಗೆ ಪಾಂಡ್ಯನು ಶತ್ರುಪ್ರವೀರರು ಪ್ರಯೋಗಿಸುತ್ತಿದ್ದ ನಾನಾ ಶಸ್ತ್ರಗಳನ್ನು ಸಾಯಕಗಳಿಂದ ತುಂಡುಮಾಡಿ ಅವರನ್ನು ಪುನಃ ಆಕ್ರಮಣಿಸುತ್ತಿದ್ದನು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಚತುರ್ದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಹದಿನಾಲ್ಕನೇ ಅಧ್ಯಾಯವು.

Comments are closed.