Drona Parva: Chapter 2

ದ್ರೋಣ ಪರ್ವ: ದ್ರೋಣಾಭಿಷೇಕ ಪರ್ವ

ಕರ್ಣನ ರಣಯಾತ್ರೆ (೧-೩೭).

Image result for karna enters the battle07002001 ಸಂಜಯ ಉವಾಚ|

07002001a ಹತಂ ಭೀಷ್ಮಮಾಧಿರಥಿರ್ವಿದಿತ್ವಾ

        ಭಿನ್ನಾಂ ನಾವಮಿವಾತ್ಯಗಾಧೇ ಕುರೂಣಾಂ|

07002001c ಸೋದರ್ಯವದ್ವ್ಯಸನಾತ್ಸೂತಪುತ್ರಃ

        ಸಂತಾರಯಿಷ್ಯಂಸ್ತವ ಪುತ್ರಸ್ಯ ಸೇನಾಂ||

ಸಂಜಯನು ಹೇಳಿದನು: “ಕುರುಗಳ ಸೇನೆಯು ತುಂಡಾದ ನಾವೆಯಂತೆ ಅಗಾಧ ಸಮುದ್ರದಲ್ಲಿ ಮುಳುಗಿರಲು ಭೀಷ್ಮನು ಹತನಾದನೆಂದು ತಿಳಿದು ಆಧಿರಥಿ ಸೂತಪುತ್ರನು ಸಹೋದರನಂತಿದ್ದ ನಿನ್ನ ಪುತ್ರನ ಸೇನೆಯನ್ನು ಉಳಿಸಲು ಬಯಸಿದನು.

07002002a ಶ್ರುತ್ವಾ ತು ಕರ್ಣಃ ಪುರುಷೇಂದ್ರಮಚ್ಯುತಂ

        ನಿಪಾತಿತಂ ಶಾಂತನವಂ ಮಹಾರಥಂ|

07002002c ಅಥೋಪಾಯಾತ್ತೂರ್ಣಮಮಿತ್ರಕರ್ಶನೋ

        ಧನುರ್ಧರಾಣಾಂ ಪ್ರವರಸ್ತದಾ ವೃಷಃ||

ಆ ಪುರುಷೇಂದ್ರ ಅಚ್ಯುತ ಮಹಾರಥ ಶಾಂತನವನು ಬಿದ್ದನೆಂದು ಕೇಳಿ ತಕ್ಷಣವೇ ಧನುರ್ಧರಶ್ರೇಷ್ಠ ಅಮಿತ್ರಕರ್ಷನ ವೃಷಸೇನ ಕರ್ಣನು ಹೊರಟನು.

07002003a ಹತೇ ತು ಭೀಷ್ಮೇ ರಥಸತ್ತಮೇ ಪರೈರ್

        ನಿಮಜ್ಜತೀಂ ನಾವಮಿವಾರ್ಣವೇ ಕುರೂನ್|

07002003c ಪಿತೇವ ಪುತ್ರಾಂಸ್ತ್ವರಿತೋಽಭ್ಯಯಾತ್ತತಃ

        ಸಂತಾರಯಿಷ್ಯಂಸ್ತವ ಪುತ್ರಸ್ಯ ಸೇನಾಂ||

ಶತ್ರುಗಳಿಂದ ರಥಸತ್ತಮ ಭೀಷ್ಮನು ಹತನಾಗಿ ಕುರುಗಳ ನಾವೆಯು ಮಹಾಸಾಗರದಲ್ಲಿ ಮುಳುಗುತ್ತಿರಲು ತಂದೆಯು ಮಕ್ಕಳ ಬಳಿ ಬರುವಂತೆ ತ್ವರೆಮಾಡಿ ನಿನ್ನ ಪುತ್ರನ ಸೇನೆಯನ್ನು ಉಳಿಸಲೋಸುಗ ಕರ್ಣನು ಅಲ್ಲಿಗೆ ಧಾವಿಸಿ ಬಂದನು.

07002004 ಕರ್ಣ ಉವಾಚ|

07002004a ಯಸ್ಮಿನ್ಧೃತಿರ್ಬುದ್ಧಿಪರಾಕ್ರಮೌಜೋ

        ದಮಃ ಸತ್ಯಂ ವೀರಗುಣಾಶ್ಚ ಸರ್ವೇ|

07002004c ಅಸ್ತ್ರಾಣಿ ದಿವ್ಯಾನ್ಯಥ ಸನ್ನತಿರ್ಹ್ರೀಃ

        ಪ್ರಿಯಾ ಚ ವಾಗನಪಾಯೀನಿ ಭೀಷ್ಮೇ||

07002005a ಬ್ರಹ್ಮದ್ವಿಷಘ್ನೇ ಸತತಂ ಕೃತಜ್ಞೇ

        ಸನಾತನಂ ಚಂದ್ರಮಸೀವ ಲಕ್ಷ್ಮ|

07002005c ಸ ಚೇತ್ಪ್ರಶಾಂತಃ ಪರವೀರಹಂತಾ

        ಮನ್ಯೇ ಹತಾನೇವ ಹಿ ಸರ್ವಯೋಧಾನ್||

ಕರ್ಣನು ಹೇಳಿದನು: “ಯಾರಲ್ಲಿ ಧೃತಿ, ಬುದ್ಧಿ, ಪರಾಕ್ರಮ, ಓಜಸ್ಸು, ದಮ, ವಿನಯ, ಸಂಕೋಚ, ಸತ್ಯ, ಮತ್ತು ವೀರಗುಣಗಳೆಲ್ಲವೂ, ದಿವ್ಯ ಅಸ್ತ್ರಗಳು ಮತ್ತು ಪ್ರೀತಿಯ ಮಾತುಗಳು ಇದ್ದವೋ, ಯಾರು ಬ್ರಹ್ಮದ್ವೇಷಿಗಳನ್ನು ಸಂಹರಿಸುವವನಾಗಿದ್ದನೋ ಆ ಸತತವೂ ಕೃತಜ್ಞನಾಗಿದ್ದ, ಚಂದ್ರನಲ್ಲಿರುವ ಲಕ್ಷ್ಮಿಯಂತೆ ಸನಾತನನಾಗಿದ್ದ, ಪ್ರಶಾಂತ, ಪರವೀರಹಂತ ಭೀಷ್ಮನೇ ಹತನಾದನೆಂದರೆ ಎಲ್ಲ ಯೋಧರೂ ಹತರಾದರಂತೆಯೇ!

07002006a ನೇಹ ಧ್ರುವಂ ಕಿಂ ಚನ ಜಾತು ವಿದ್ಯತೇ

        ಅಸ್ಮಿಽಲ್ಲೋಕೇ ಕರ್ಮಣೋಽನಿತ್ಯಯೋಗಾತ್|

07002006c ಸೂರ್ಯೋದಯೇ ಕೋ ಹಿ ವಿಮುಕ್ತಸಂಶಯೋ

        ಭಾವಂ ಕುರ್ವೀತಾದ್ಯ ಮಹಾವ್ರತೇ ಹತೇ||

ಕರ್ಮಯೋಗದಿಂದ ಹುಟ್ಟಿದ ಯಾವುದೂ ಈ ಲೋಕದಲ್ಲಿ ನಿತ್ಯವೂ ಇರುವುದಿಲ್ಲವೆಂದು ತಿಳಿದುಕೊಳ್ಳಬೇಕು. ಏಕೆಂದರೆ ಇಂದು ಮಹಾವ್ರತನು ಹತನಾಗಲು ಯಾರುತಾನೇ ಸಂಶಯವಿಲ್ಲದೇ ನಾಳೆ ಸೂರ್ಯೋದಯವಾಗುತ್ತದೆಯೆಂದು ಹೇಳಬಹುದು?

07002007a ವಸುಪ್ರಭಾವೇ ವಸುವೀರ್ಯಸಂಭವೇ

        ಗತೇ ವಸೂನೇವ ವಸುಂಧರಾಧಿಪೇ|

07002007c ವಸೂನಿ ಪುತ್ರಾಂಶ್ಚ ವಸುಂಧರಾಂ ತಥಾ

        ಕುರೂಂಶ್ಚ ಶೋಚಧ್ವಮಿಮಾಂ ಚ ವಾಹಿನೀಂ||

ಆ ವಸುಪ್ರಭಾವ ವಸುವೀರ್ಯಸಂಭವನು ವಸುಂಧರೆಯಲ್ಲಿ ವಸುವಾಗಿಯೇ ಹೋಗಲು ಇಂದು ಈ ಸೇನೆಯು ಸಂಪತ್ತು, ಮಕ್ಕಳು, ಭೂಮಿ ಮತ್ತು ಕುರುಗಳ ಕುರಿತು ಶೋಕಿಸುತ್ತಿದೆ!””

07002008 ಸಂಜಯ ಉವಾಚ|

07002008a ಮಹಾಪ್ರಭಾವೇ ವರದೇ ನಿಪಾತಿತೇ

        ಲೋಕಶ್ರೇಷ್ಠೇ ಶಾಂತನವೇ ಮಹೌಜಸಿ|

07002008c ಪರಾಜಿತೇಷು ಭರತೇಷು ದುರ್ಮನಾಃ

        ಕರ್ಣೋ ಭೃಶಂ ನ್ಯಶ್ವಸದಶ್ರು ವರ್ತಯನ್||

ಸಂಜಯನು ಹೇಳಿದನು: “ಆ ಮಹಾ ಪ್ರಭಾವ ವರದ ಲೋಕಶ್ರೇಷ್ಠ ಮಹಾ ತೇಜಸ್ವಿ ಶಾಂತನವನು ಬೀಳಲು ಪರಾಜಿತರಾಗಿ ದುಃಖಿತ ಭರತರನ್ನು ಕರ್ಣನು ಜೋರಾಗಿ ಅಳುತ್ತಾ ಸಂತವಿಸತೊಡಗಿದನು.

07002009a ಇದಂ ತು ರಾಧೇಯವಚೋ ನಿಶಮ್ಯ ತೇ

        ಸುತಾಶ್ಚ ರಾಜಂಸ್ತವ ಸೈನಿಕಾಶ್ಚ ಹ|

07002009c ಪರಸ್ಪರಂ ಚುಕ್ರುಶುರಾರ್ತಿಜಂ ಭೃಶಂ

        ತದಾಶ್ರು ನೇತ್ರೈರ್ಮುಮುಚುರ್ಹಿ ಶಬ್ದವತ್||

ರಾಜನ್! ರಾಧೇಯನ ಈ ಮಾತನ್ನು ಕೇಳಿ ನಿನ್ನ ಮಕ್ಕಳು ಮತ್ತು ಸೈನಿಕರು ಪರಸ್ಪರರನ್ನು ನೋಡಿ ತುಂಬಾ ಜೋರಾಗಿ ಕೂಗಿ ಅತ್ತರು. ಕೂಗುತ್ತಾ ಪುನಃ ಪುನಃ ಕಣ್ಣೀರನ್ನು ಸುರಿಸಿದರು.

07002010a ಪ್ರವರ್ತಮಾನೇ ತು ಪುನರ್ಮಹಾಹವೇ

        ವಿಗಾಹ್ಯಮಾನಾಸು ಚಮೂಷು ಪಾರ್ಥಿವೈಃ|

07002010c ಅಥಾಬ್ರವೀದ್ಧರ್ಷಕರಂ ವಚಸ್ತದಾ

        ರಥರ್ಷಭಾನ್ಸರ್ವಮಹಾರಥರ್ಷಭಃ||

ಆದರೆ ಪುನಃ ಮಹಾಯುದ್ಧವು ಪ್ರಾರಂಭವಾಗಿ ಪಾರ್ಥಿವರು ಸೇನೆಗಳನ್ನು ಪ್ರಚೋದಿಸಲು ಸರ್ವಮಹಾರಥ ಋಷಭ ಕರ್ಣನು ರಥರ್ಷಭರಿಗೆ ಈ ಪ್ರೋತ್ಸಾಹಕರ ಮಾತುಗಳನ್ನಾಡಿದನು:

07002011 ಕರ್ಣ ಉವಾಚ|

07002011a ಜಗತ್ಯನಿತ್ಯೇ ಸತತಂ ಪ್ರಧಾವತಿ

        ಪ್ರಚಿಂತಯನ್ನಸ್ಥಿರಮದ್ಯ ಲಕ್ಷಯೇ|

07002011c ಭವತ್ಸು ತಿಷ್ಠತ್ಸ್ವಿಹ ಪಾತಿತೋ ರಣೇ

        ಗಿರಿಪ್ರಕಾಶಃ ಕುರುಪುಂಗವಃ ಕಥಂ||

ಕರ್ಣನು ಹೇಳಿದನು: “ಅನಿತ್ಯವಾದ ಈ ಜಗತ್ತು ಸತತವೂ ಓಡುತ್ತಿರುತ್ತವೆ. ಇದನ್ನು ಲಕ್ಷಿಸಿ ಎಲ್ಲವೂ ಅಸ್ಥಿರವೆಂದು ಯೋಚಿಸುತ್ತೇನೆ. ನೀವೆಲ್ಲ ಇರುವಾಗ ಹೇಗೆ ತಾನೇ ಗಿರಿಪ್ರಕಾಶ ಕುರುಪುಂಗವನು ರಣದಲ್ಲಿ ಬಿದ್ದನು?

07002012a ನಿಪಾತಿತೇ ಶಾಂತನವೇ ಮಹಾರಥೇ

        ದಿವಾಕರೇ ಭೂತಲಮಾಸ್ಥಿತೇ ಯಥಾ|

07002012c ನ ಪಾರ್ಥಿವಾಃ ಸೋಢುಮಲಂ ಧನಂಜಯಂ

        ಗಿರಿಪ್ರವೋಢಾರಮಿವಾನಿಲಂ ದ್ರುಮಾಃ||

ಆಕಾಶದಿಂದ ಬಿದ್ದ ಸೂರ್ಯನಂತೆ ಮಹಾರಥ ಶಾಂತನವನು ಭೂಮಿಯ ಮೇಲೆ ಮಲಗಿರಲು ಭಿರುಗಾಳಿಯನ್ನು ಎದುರಿಸಲಾರದ ಪರ್ವತದ ಮರಗಳಂತೆ ಧನಂಜಯನನ್ನು ಎದುರಿಸಲು ಪಾರ್ಥಿವರು ಅಶಕ್ಯರಾಗಿದ್ದಾರೆ.

07002013a ಹತಪ್ರಧಾನಂ ತ್ವಿದಮಾರ್ತರೂಪಂ

        ಪರೈರ್ಹತೋತ್ಸಾಹಮನಾಥಮದ್ಯ ವೈ|

07002013c ಮಯಾ ಕುರೂಣಾಂ ಪರಿಪಾಲ್ಯಮಾಹವೇ

        ಬಲಂ ಯಥಾ ತೇನ ಮಹಾತ್ಮನಾ ತಥಾ||

ಆ ಮಹಾತ್ಮನಂತೆ ನಾನು ಇಂದು ಪ್ರಧಾನನನ್ನು ಕಳೆದುಕೊಂಡು ಪರರಿಂದ ನಾಶಗೊಂಡು ಉತ್ಸಾಹವನ್ನು ಕಳೆದುಕೊಂಡು ಅನಾಥವಾಗಿರುವ ಈ ಕುರುಸೇನೆಯನ್ನು ಯುದ್ಧದಲ್ಲಿ ರಕ್ಷಿಸುತ್ತೇನೆ.

07002014a ಸಮಾಹಿತಂ ಚಾತ್ಮನಿ ಭಾರಮೀದೃಶಂ

        ಜಗತ್ತಥಾನಿತ್ಯಮಿದಂ ಚ ಲಕ್ಷಯೇ|

07002014c ನಿಪಾತಿತಂ ಚಾಹವಶೌಂಡಮಾಹವೇ

        ಕಥಂ ನು ಕುರ್ಯಾಮಹಮಾಹವೇ ಭಯಂ||

ಈ ಭಾರವನ್ನು ನನ್ನ ಮೇಲೆ ತೆಗೆದುಕೊಳ್ಳುತ್ತೇನೆ. ಈ ಜಗತ್ತು ಅನಿತ್ಯವೆಂದು ತಿಳಿದುಕೊಂಡು, ಯುದ್ಧನಾಯಕನೇ ಯುದ್ಧದಲ್ಲಿ ಬಿದ್ದಿರುವುದನ್ನು ಲಕ್ಷದಲ್ಲಿಟ್ಟುಕೊಂಡ ನನಗೆ ಯುದ್ಧದಲ್ಲಿ ಭಯವೇನಿದೆ?

07002015a ಅಹಂ ತು ತಾನ್ಕುರುವೃಷಭಾನಜಿಹ್ಮಗೈಃ

        ಪ್ರವೇರಯನ್ಯಮಸದನಂ ರಣೇ ಚರನ್|

07002015c ಯಶಃ ಪರಂ ಜಗತಿ ವಿಭಾವ್ಯ ವರ್ತಿತಾ

        ಪರೈರ್ಹತೋ ಯುಧಿ ಶಯಿತಾಥ ವಾ ಪುನಃ||

ಆದುದರಿಂದ ನಾನು ರಣದಲ್ಲಿ ಸಂಚರಿಸಿ ಜಿಹ್ಮಗಗಳಿಂದ ಆ ಕುರುವೃಷಭರನ್ನು ಯಮಸದನಕ್ಕೆ ಕಳುಹಿಸುತ್ತೇನೆ. ಜಗತ್ತಿನಲ್ಲಿ ಯಶಸ್ಸೇ ಹೆಚ್ಚಿನದು ಎಂದು ತಿಳಿದುಕೊಂಡು ಯುದ್ಧದಲ್ಲಿ ಶತ್ರುಗಳಿಂದ ಹತನಾಗುತ್ತೇನೆ ಅಥವಾ ಅವರಿಂದ ಹತನಾಗಿ ಮಲಗುತ್ತೇನೆ.

07002016a ಯುಧಿಷ್ಠಿರೋ ಧೃತಿಮತಿಧರ್ಮತತ್ತ್ವವಾನ್

        ವೃಕೋದರೋ ಗಜಶತತುಲ್ಯವಿಕ್ರಮಃ|

07002016c ತಥಾರ್ಜುನಸ್ತ್ರಿದಶವರಾತ್ಮಜೋ ಯತೋ

        ನ ತದ್ಬಲಂ ಸುಜಯಮಥಾಮರೈರಪಿ||

ಯುಧಿಷ್ಠಿರನಲ್ಲಿ ಧೃತಿ, ಮತಿ ಮತ್ತು ಧರ್ಮತತ್ವಗಳಿವೆ. ವೃಕೋದರನ ವಿಕ್ರಮವು ನೂರು ಆನೆಗಳಿಗೆ ಸಮನಾದುದು. ಹಾಗೆಯೇ ಅರ್ಜುನನು ಯುವಕ ಮತ್ತು ತ್ರಿದಶರಲ್ಲಿ ಶ್ರೇಷ್ಠನಾದವನ ಮಗ. ಅವರ ಸೇನೆಯನ್ನು ಅಮರರೂ ಕೂಡ ಸುಲಭವಾಗಿ ಗೆಲ್ಲಲಾರರು.

07002017a ಯಮೌ ರಣೇ ಯತ್ರ ಯಮೋಪಮೌ ಬಲೇ

        ಸಸಾತ್ಯಕಿರ್ಯತ್ರ ಚ ದೇವಕೀಸುತಃ|

07002017c ನ ತದ್ಬಲಂ ಕಾಪುರುಷೋಽಭ್ಯುಪೇಯಿವಾನ್

        ನಿವರ್ತತೇ ಮೃತ್ಯುಮುಖಾದಿವಾಸಕೃತ್||

ಯಾವ ಸೇನೆಯಲ್ಲಿ ಯಮರಂತಿರುವ ಯಮಳರಿದ್ದಾರೋ, ಸಾತ್ಯಕಿ, ದೇವಕೀ ಸುತರಿದ್ದಾರೋ ಅದು ಮೃತ್ಯುವಿನ ಬಾಯಿಯಿದ್ದಂತೆ. ಅದನ್ನು ಎದುರಿಸಿದ ಯಾವ ಕಾಪುರುಷನೂ ಜೀವಂತ ಹಿಂದಿರುಗಲಾರ.

07002018a ತಪೋಽಭ್ಯುದೀರ್ಣಂ ತಪಸೈವ ಗಮ್ಯತೇ

        ಬಲಂ ಬಲೇನಾಪಿ ತಥಾ ಮನಸ್ವಿಭಿಃ|

07002018c ಮನಶ್ಚ ಮೇ ಶತ್ರುನಿವಾರಣೇ ಧ್ರುವಂ

        ಸ್ವರಕ್ಷಣೇ ಚಾಚಲವದ್ವ್ಯವಸ್ಥಿತಂ||

ಬುದ್ಧಿವಂತರು ತಪಸ್ಸನ್ನು ತಪಸ್ಸಿನಿಂದಲೇ ಮತ್ತು ಬಲವನ್ನು ಬಲದಿಂದಲೇ ಎದುರಿಸುತ್ತಾರೆ. ನಾನೂ ಕೂಡ ಶತ್ರುನಿವಾರಣೆಯ ಮತ್ತು ಸ್ವ-ರಕ್ಷಣೆಯ ಅಚಲವಾದ ನಿಶ್ಚಯವನ್ನು ಮಾಡಿದ್ದೇನೆ.

07002019a ಏವಂ ಚೈಷಾಂ ಬುಧ್ಯಮಾನಃ ಪ್ರಭಾವಂ

        ಗತ್ವೈವಾಹಂ ತಾಂ ಜಯಾಮ್ಯದ್ಯ ಸೂತ|

07002019c ಮಿತ್ರದ್ರೋಹೋ ಮರ್ಷಣೀಯೋ ನ ಮೇಽಯಂ

        ಭಗ್ನೇ ಸೈನ್ಯೇ ಯಃ ಸಹಾಯಃ ಸ ಮಿತ್ರಂ||

ಸೂತ! ನಾನೀಗಲೇ ಯುದ್ಧಕ್ಕೆ ಹೋಗಿ ಶತ್ರುಗಳ ಪ್ರಭಾವವನ್ನು ಕುಗ್ಗಿಸುತ್ತೇನೆ. ಮಿತ್ರನಿಗೆ ದ್ರೋಹವನ್ನೆಸುವುದು ನನಗೆ ಸಹ್ಯವಾಗುವುದಿಲ್ಲ. ಸೈನ್ಯವು ಭಗ್ನವಾಗಿರುವಾಗ ಸಹಾಯ ಮಾಡುವವನೇ ಮಿತ್ರನು.

07002020a ಕರ್ತಾಸ್ಮ್ಯೇತತ್ಸತ್ಪುರುಷಾರ್ಯಕರ್ಮ

        ತ್ಯಕ್ತ್ವಾ ಪ್ರಾಣಾನನುಯಾಸ್ಯಾಮಿ ಭೀಷ್ಮಂ|

07002020c ಸರ್ವಾನ್ಸಂಖ್ಯೇ ಶತ್ರುಸಂಘಾನ್ ಹನಿಷ್ಯೇ

        ಹತಸ್ತೈರ್ವಾ ವೀರಲೋಕಂ ಗಮಿಷ್ಯೇ||

ಸತ್ಪುರುಷರಿಗೆ ಯೋಗ್ಯವಾದ ಈ ಕಾರ್ಯವನ್ನು ನಾನು ಮಾಡುತ್ತೇನೆ. ಪ್ರಾಣಗಳನ್ನು ತ್ಯಜಿಸಿ ಭೀಷ್ಮನನ್ನು ಅನುಸರಿಸಿ ಹೋಗುತ್ತೇನೆ. ಯುದ್ಧದಲ್ಲಿ ಸರ್ವ ಶತ್ರುಸಂಘಗಳನ್ನು ಸಂಹರಿಸುತ್ತೇನೆ ಅಥವಾ ಹತನಾಗಿ ವೀರಲೋಕಕ್ಕೆ ಹೋಗುತ್ತೇನೆ.

07002021a ಸಂಪ್ರಾಕ್ರುಷ್ಟೇ ರುದಿತಸ್ತ್ರೀಕುಮಾರೇ

        ಪರಾಭೂತೇ ಪೌರುಷೇ ಧಾರ್ತರಾಷ್ಟ್ರೇ|

07002021c ಮಯಾ ಕೃತ್ಯಮಿತಿ ಜಾನಾಮಿ ಸೂತ

        ತಸ್ಮಾಚ್ಚತ್ರೂನ್ಧಾರ್ತರಾಷ್ಟ್ರಸ್ಯ ಜೇಷ್ಯೇ||

ಧಾರ್ತರಾಷ್ಟ್ರನ ಪೌರುಷವು ಉಡುಗಿಹೋಗಿದೆ. ಹೆಂಗಸರು-ಮಕ್ಕಳು ಮೊರೆಯಿಟ್ಟು ರೋದಿಸುತ್ತಿದ್ದಾರೆ. ಸೂತ! ಇಂತಹ ಸಮಯದಲ್ಲಿ ನಾನು ಏನು ಮಾಡಬೇಕೆಂದು ತಿಳಿದುಕೊಂಡಿದ್ದೇನೆ. ಆದುದರಿಂದ ಧಾರ್ತರಾಷ್ಟ್ರನ ಶತ್ರುಗಳನ್ನು ಜಯಿಸುತ್ತೇನೆ.

07002022a ಕುರೂನ್ರಕ್ಷನ್ಪಾಂಡುಪುತ್ರಾಂ ಜಿಘಾಂಸಂಸ್

        ತ್ಯಕ್ತ್ವಾ ಪ್ರಾಣಾನ್ಘೋರರೂಪೇ ರಣೇಽಸ್ಮಿನ್|

07002022c ಸರ್ವಾನ್ಸಂಖ್ಯೇ ಶತ್ರುಸಂಘಾನ್ನಿಹತ್ಯ

        ದಾಸ್ಯಾಮ್ಯಹಂ ಧಾರ್ತರಾಷ್ಟ್ರಾಯ ರಾಜ್ಯಂ||

ಕುರುಗಳನ್ನು ರಕ್ಷಿಸಿ, ಪಾಂಡುಪುತ್ರರನ್ನು ಸಂಹರಿಸಿ, ಘೋರರೂಪದ ಈ ರಣದಲ್ಲಿ ಪ್ರಾಣಗಳನ್ನು ತ್ಯಜಿಸಿ, ಯುದ್ಧದಲ್ಲಿ ಎಲ್ಲ ಶತ್ರುಪಡೆಗಳನ್ನು ಸಂಹರಿಸಿ ನಾನು ರಾಜ್ಯವನ್ನು ಧಾರ್ತರಾಷ್ಟ್ರನಿಗೆ ಕೊಡುತ್ತೇನೆ.

07002023a ನಿಬಧ್ಯತಾಂ ಮೇ ಕವಚಂ ವಿಚಿತ್ರಂ

        ಹೈಮಂ ಶುಭ್ರಂ ಮಣಿರತ್ನಾವಭಾಸಿ|

07002023c ಶಿರಸ್ತ್ರಾಣಂ ಚಾರ್ಕಸಮಾನಭಾಸಂ

        ಧನುಃ ಶರಾಂಶ್ಚಾಪಿ ವಿಷಾಹಿಕಲ್ಪಾನ್||

ಮಣಿರತ್ನಗಳಿಂದ ಹೊಳೆಯುವ, ಶುಭ್ರ ವಿಚಿತ್ರ ಬಂಗಾರದ ಕವಚವನ್ನು ನನಗೆ ತೊಡಿಸು. ಸೂರ್ಯನಂತೆ ಹೊಳೆಯುತ್ತಿರುವ ಶಿರಸ್ತ್ರಾಣವನ್ನೂ, ಸರ್ಪಗಳಂತಿರುವ ಧನುಸ್ಸು-ಬಾಣಗಳನ್ನೂ ಕೊಡು.

07002024a ಉಪಾಸಂಗಾನ್ಷೋಡಶ ಯೋಜಯಂತು

        ಧನೂಂಷಿ ದಿವ್ಯಾನಿ ತಥಾಹರಂತು|

07002024c ಅಸೀಂಶ್ಚ ಶಕ್ತೀಶ್ಚ ಗದಾಶ್ಚ ಗುರ್ವೀಃ

        ಶಂಖಂ ಚ ಜಾಂಬೂನದಚಿತ್ರಭಾಸಂ||

ಹದಿನಾರು ಭತ್ತಳಿಕೆಗಳ ವ್ಯವಸ್ಥೆಯಾಗಲಿ. ದಿವ್ಯವಾದ ಧನುಸ್ಸುಗಳನ್ನೂ, ಖಡ್ಗಗಳನ್ನೂ, ಶಕ್ತಿಗಳನ್ನೂ, ಭಾರ ಗದೆಗಳನ್ನೂ, ಬಂಗಾರದ ಚಿತ್ರಗಳಿಂದ ಹೊಳೆಯುವ ಶಂಖವನ್ನೂ ತರಲಿ.

07002025a ಏತಾಂ ರೌಕ್ಮೀಂ ನಾಗಕಕ್ಷ್ಯಾಂ ಚ ಜೈತ್ರೀಂ

        ಜೈತ್ರಂ ಚ ಮೇ ಧ್ವಜಮಿಂದೀವರಾಭಂ|

07002025c ಶ್ಲಕ್ಷ್ಣೈರ್ವಸ್ತ್ರೈರ್ವಿಪ್ರಮೃಜ್ಯಾನಯಸ್ವ

        ಚಿತ್ರಾಂ ಮಾಲಾಂ ಚಾತ್ರ ಬದ್ಧ್ವಾ ಸಜಾಲಾಂ||

ಆನೆಗೆ ಕಟ್ಟುವ ಸುವರ್ಣಮಯ ವಿಚಿತ್ರ ಸರಪಣಿಯನ್ನೂ, ಜಯವನ್ನು ಗಳಿಸುವ ಕಮಲದ ಚಿಹ್ನೆಯಿರುವ ಹೊಳೆಯುವ ಧ್ವಜವನ್ನೂ, ನವಿರಾದ ಮತ್ತು ಸುಂದರ ಬಟ್ಟೆಗಳಿಂದ ಒರೆಸಲ್ಪಟ್ಟು, ಮಂಗಳಕರ ಅರಳಿನಿಂದ ಕಟ್ಟಿದ ಚಿತ್ರ-ವಿಚಿತ್ರ ಪುಷ್ಪಮಾಲಿಕೆಯನ್ನೂ ತರಲಿ.

07002026a ಅಶ್ವಾನಗ್ರ್ಯಾನ್ಪಾಂಡುರಾಭ್ರಪ್ರಕಾಶಾನ್

        ಪುಷ್ಟಾನ್ಸ್ನಾತಾನ್ಮಂತ್ರಪೂತಾಭಿರದ್ಭಿಃ|

07002026c ತಪ್ತೈರ್ಭಾಂಡೈಃ ಕಾಂಚನೈರಭ್ಯುಪೇತಾಂ

        ಶೀಘ್ರಾಂ ಶೀಘ್ರಂ ಸೂತಪುತ್ರಾನಯಸ್ವ||

ಸೂತಪುತ್ರ! ಶ್ರೀಘ್ರಗಾಮಿಗಳಾದ, ಬಿಳಿಯ ಮೋಡದಂತೆ ಪ್ರಕಾಶಮಾನವಾದ, ಪುಷ್ಟವಾದ, ಮಂತ್ರಪೂತ ನೀರಿನಿಂದ ಸ್ನಾನಮಾಡಿರುವ, ಪುಟಕ್ಕೆ ಹಾಕಿದ ಚಿನ್ನದ ಆಭರಣಗಳಿಂದ ಸಮಲಂಕೃತವಾದ ಕುದುರೆಗಳನ್ನು ಶೀಘ್ರವಾಗಿ ಕರೆತಾ.

07002027a ರಥಂ ಚಾಗ್ರ್ಯಂ ಹೇಮಜಾಲಾವನದ್ಧಂ

        ರತ್ನೈಶ್ಚಿತ್ರಂ ಚಂದ್ರಸೂರ್ಯಪ್ರಕಾಶೈಃ|

07002027c ದ್ರವ್ಯೈರ್ಯುಕ್ತಂ ಸಂಪ್ರಹಾರೋಪಪನ್ನೈರ್

        ವಾಹೈರ್ಯುಕ್ತಂ ತೂರ್ಣಮಾವರ್ತಯಸ್ವ||

ಸುವರ್ಣಮಾಲೆಗಳಿಂದ ಅಲಂಕೃತವಾದ, ಸೂರ್ಯಚಂದ್ರರ ಪ್ರಕಾಶವುಳ್ಳ, ರತ್ನಗಳಿಂದ ಚಿತ್ರಿತವಾದ, ಯುದ್ದೋಪಯೋಗೀ ಸಾಮಗ್ರಿಗಳಿಂದ ಸಂಪನ್ನವಾದ, ಉಪಪನ್ನ ಕುದುರೆಗಳನ್ನು ಕಟ್ಟಲ್ಪಟ್ಟ ರಥವನ್ನು ಶೀಘ್ರವಾಗಿ ಸಿದ್ಧಗೊಳಿಸು.

07002028a ಚಿತ್ರಾಣಿ ಚಾಪಾನಿ ಚ ವೇಗವಂತಿ

        ಜ್ಯಾಶ್ಚೋತ್ತಮಾಃ ಸಂಹನನೋಪಪನ್ನಾಃ|

07002028c ತೂಣಾಂಶ್ಚ ಪೂರ್ಣಾನ್ಮಹತಃ ಶರಾಣಾಂ

        ಆಸಜ್ಯ ಗಾತ್ರಾವರಣಾನಿ ಚೈವ||

ವೇಗಯುಕ್ತವಾದ ಮತ್ತು ಚಿತ್ರಿತವಾದ ಧನುಸ್ಸುಗಳನ್ನೂ, ಗಟ್ಟಿಯಾದ ಶಿಂಜಿನಿಗಳನ್ನೂ, ಕವಚಗಳನ್ನೂ, ಬಾಣಗಳಿಂದ ತುಂಬಿದ ಭತ್ತಳಿಕೆಗಳನ್ನೂ, ಶರೀರದ ಆವರಣಗಳನ್ನೂ ಕೂಡಲೇ ಸಜ್ಜುಗೊಳಿಸು.

07002029a ಪ್ರಾಯಾತ್ರಿಕಂ ಚಾನಯತಾಶು ಸರ್ವಂ

        ಕನ್ಯಾಃ ಪೂರ್ಣಂ ವೀರಕಾಂಸ್ಯಂ ಚ ಹೈಮಂ|

07002029c ಆನೀಯ ಮಾಲಾಮವಬಧ್ಯ ಚಾಂಗೇ

        ಪ್ರವಾದಯಂತ್ವಾಶು ಜಯಾಯ ಭೇರೀಃ||

ರಣಯಾತ್ರೆಗೆ ಅವಶ್ಯವಾದ ಎಲ್ಲ ಸಾಮಗ್ರಿಗಳನ್ನೂ ತನ್ನಿ. ಮೊಸರಿನಿಂದ ತುಂಬಿದ ಕಂಚಿನ ಮತ್ತು ಚಿನ್ನದ ಪಾತ್ರೆಗಳನ್ನು ಹಿಡಿದು ಕನ್ಯೆಯರು ಬಂದು ವಿಜಯ ಮಾಲೆಯನ್ನು ತೊಡಿಸಲಿ. ವಿಜಯಕ್ಕಾಗಿ ಭೇರಿಗಳನ್ನು ಮೊಳಗಿಸಿ.

07002030a ಪ್ರಯಾಹಿ ಸೂತಾಶು ಯತಃ ಕಿರೀಟೀ

        ವೃಕೋದರೋ ಧರ್ಮಸುತೋ ಯಮೌ ಚ|

07002030c ತಾನ್ವಾ ಹನಿಷ್ಯಾಮಿ ಸಮೇತ್ಯ ಸಂಖ್ಯೇ

        ಭೀಷ್ಮಾಯ ವೈಷ್ಯಾಮಿ ಹತೋ ದ್ವಿಷದ್ಭಿಃ||

ಸೂತ! ಅನಂತರ ಎಲ್ಲಿ ಕಿರೀಟೀ, ವೃಕೋದರ, ಧರ್ಮಸುತ ಮತ್ತು ಯಮಳರು ಇರುವರೋ ಅಲ್ಲಿಗೆ ಕರೆದುಕೊಂಡು ಹೋಗು. ಅವರನ್ನು ಒಟ್ಟಿಗೇ ಯುದ್ಧದಲ್ಲಿ ಸಂಹರಿಸುತ್ತೇನೆ ಅಥವಾ ಶತ್ರುಗಳಿಂದ ಹತನಾಗಿ ಭೀಷ್ಮನನ್ನು ಅನುಸರಿಸಿ ಹೋಗುತ್ತೇನೆ.

07002031a ಯಸ್ಮಿನ್ರಾಜಾ ಸತ್ಯಧೃತಿರ್ಯುಧಿಷ್ಠಿರಃ

        ಸಮಾಸ್ಥಿತೋ ಭೀಮಸೇನಾರ್ಜುನೌ ಚ|

07002031c ವಾಸುದೇವಃ ಸಾತ್ಯಕಿಃ ಸೃಂಜಯಾಶ್ಚ

        ಮನ್ಯೇ ಬಲಂ ತದಜಯ್ಯಂ ಮಹೀಪೈಃ||

ಯಾರ ರಾಜನು ಸತ್ಯಧೃತಿ ಯುಧಿಷ್ಠಿರನೋ, ಯಾರಲ್ಲಿ ಭೀಮಸೇನ-ಅರ್ಜುನರು, ವಾಸುದೇವ-ಸಾತ್ಯಕಿಯರು ಮತ್ತು ಸೃಂಜಯರಿದ್ದಾರೋ ಆ ಸೇನೆಯು ಮಹೀಪರಿಂದ ಅಜಯ್ಯವೆಂದು ಅನ್ನಿಸುತ್ತದೆ.

07002032a ತಂ ಚೇನ್ಮೃತ್ಯುಃ ಸರ್ವಹರೋಽಭಿರಕ್ಷೇತ್

        ಸದಾಪ್ರಮತ್ತಃ ಸಮರೇ ಕಿರೀಟಿನಂ|

07002032c ತಥಾಪಿ ಹಂತಾಸ್ಮಿ ಸಮೇತ್ಯ ಸಂಖ್ಯೇ

        ಯಾಸ್ಯಾಮಿ ವಾ ಭೀಷ್ಮಪಥಾ ಯಮಾಯ||

ಎಲ್ಲವನ್ನೂ ನಾಶಪಡಿಸುವ ಮೃತ್ಯುವೇ ಒಂದುವೇಳೆ ಅವನನ್ನು ರಕ್ಷಿಸಿದರೂ ಸದಾ ಅಪ್ರಮತ್ತನಾಗಿರುವ ಕಿರೀಟಿಯನ್ನು ಸಮರದಲ್ಲಿ ಸೇನೆಗಳೊಂದಿಗೆ ಸಂಹರಿಸುತ್ತೇನೆ ಅಥವಾ ಭೀಷ್ಮನ ದಾರಿಯಲ್ಲಿ ಯಮನಲ್ಲಿಗೆ ಹೋಗುತ್ತೇನೆ.

07002033a ನ ತ್ವೇವಾಹಂ ನ ಗಮಿಷ್ಯಾಮಿ ತೇಷಾಂ

        ಮಧ್ಯೇ ಶೂರಾಣಾಂ ತತ್ತಥಾಹಂ ಬ್ರವೀಮಿ|

07002033c ಮಿತ್ರದ್ರುಹೋ ದುರ್ಬಲಭಕ್ತಯೋ ಯೇ

        ಪಾಪಾತ್ಮಾನೋ ನ ಮಮೈತೇ ಸಹಾಯಾಃ||

ನಾನು ಈಗ ಹೇಳುತ್ತಿದ್ದೇನೆ. ಆ ಶೂರರ ಮಧ್ಯೆ ನುಗ್ಗಿ ಹೋಗುತ್ತೇನೆ. ಮಿತ್ರದ್ರೋಹಿಗಳು, ದುರ್ಬಲ ಭಕ್ತರು, ಪಾಪಾತ್ಮರು ನನ್ನ ಸಹಾಯಕ್ಕೆ ಬರುವವರಲ್ಲ.”

07002034 ಸಂಜಯ ಉವಾಚ|

07002034a ಸ ಸಿದ್ಧಿಮಂತಂ ರಥಮುತ್ತಮಂ ದೃಢಂ

        ಸಕೂಬರಂ ಹೇಮಪರಿಷ್ಕೃತಂ ಶುಭಂ|

07002034c ಪತಾಕಿನಂ ವಾತಜವೈರ್ಹಯೋತ್ತಮೈರ್

        ಯುಕ್ತಂ ಸಮಾಸ್ಥಾಯ ಯಯೌ ಜಯಾಯ||

ಸಂಜಯನು ಹೇಳಿದನು: “ಅವನು ಉತ್ತಮ ದೃಢ ನೊಗವನ್ನುಳ್ಳ, ಬಂಗಾರದಿಂದ ಸಮಲಂಕೃತವಾದ ಶುಭವಾದ ಪಾತಕಗಳನ್ನುಳ್ಳ, ಗಾಳಿಯ ವೇಗವುಳ್ಳ ಉತ್ತಮ ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಕುಳಿತು ಜಯಕ್ಕಾಗಿ ಹೊರಟನು.

07002035a ಸಂಪೂಜ್ಯಮಾನಃ ಕುರುಭಿರ್ಮಹಾತ್ಮಾ

        ರಥರ್ಷಭಃ ಪಾಂಡುರವಾಜಿಯಾತಾ|

07002035c ಯಯೌ ತದಾಯೋಧನಮುಗ್ರಧನ್ವಾ

        ಯತ್ರಾವಸಾನಂ ಭರತರ್ಷಭಸ್ಯ||

ಕುರುಗಳಿಂದ ಗೌರವಿಸಿಕೊಳ್ಳುತ್ತಾ ಆ ಮಹಾತ್ಮಾ ರಥರ್ಷಭ ಉಗ್ರಧನ್ವಿ ಯೋಧನು ಬಿಳಿಯ ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಭರತರ್ಷಭ ಭೀಷ್ಮನು ಅವಸಾನಹೊಂದಿದಲ್ಲಿಗೆ ಹೋದನು.

07002036a ವರೂಥಿನಾ ಮಹತಾ ಸಧ್ವಜೇನ

        ಸುವರ್ಣಮುಕ್ತಾಮಣಿವಜ್ರಶಾಲಿನಾ|

07002036c ಸದಶ್ವಯುಕ್ತೇನ ರಥೇನ ಕರ್ಣೋ

        ಮೇಘಸ್ವನೇನಾರ್ಕ ಇವಾಮಿತೌಜಾಃ||

ಮಹಾ ವರೂಥವನ್ನೇರಿ, ಧ್ವಜದಿಂದ ಕೂಡಿದ, ಸುವರ್ಣ-ಮುತ್ತು-ಮಣಿ-ವಜ್ರಗಳಿಂದ ಅಲಂಕೃತವಾದ, ಮೇಘದ ಧ್ವನಿಯುಳ್ಳ, ಸೂರ್ಯನ ತೇಜಸ್ಸುಳ್ಳ ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಕರ್ಣನು ಹೊರಟನು.

07002037a ಹುತಾಶನಾಭಃ ಸ ಹುತಾಶನಪ್ರಭೇ

        ಶುಭಃ ಶುಭೇ ವೈ ಸ್ವರಥೇ ಧನುರ್ಧರಃ|

07002037c ಸ್ಥಿತೋ ರರಾಜಾಧಿರಥಿರ್ಮಹಾರಥಃ

        ಸ್ವಯಂ ವಿಮಾನೇ ಸುರರಾಡಿವ ಸ್ಥಿತಃ||

ಹುತಾಶನನಂತೆ ಹೊಳೆಯುತ್ತಿದ್ದ, ಹುತಾಶನನ ಪ್ರಭೆಯಿದ್ದ, ಶುಭನಾಗಿದ್ದ ಆ ಧನುರ್ಧರ ಅಧಿರಥಿ ಮಹಾರಥಿಯು ಶುಭ ರಥದಲ್ಲಿ, ಸ್ವಯಂ ವಿಮಾನದಲ್ಲಿ ನಿಂತ ಸುರರಾಜನಂತೆ ನಿಂತು ರಾರಾಜಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಕರ್ಣನಿರ್ಯಾಣೇ ದ್ವಿತೀಯೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಕರ್ಣನಿರ್ಯಾಣ ಎನ್ನುವ ಎರಡನೇ ಅಧ್ಯಾಯವು.

Image result for indian motifs against white background

Comments are closed.