Aranyaka Parva: Chapter 164

ಆರಣ್ಯಕ ಪರ್ವ: ಯಕ್ಷಯುದ್ಧ ಪರ್ವ

೧೬೪

ತನ್ನ ದೇವಲೋಕ ಪ್ರಯಾಣದ ಅರ್ಜುನನು ವರದಿ ಮಾಡಿದುದು

ಅರ್ಜುನನು ಲೋಕಪಾಲರಿಂದ ಅಸ್ತ್ರಗಳನ್ನು ಪಡೆದುದನ್ನು ವರ್ಣಿಸಿದುದು (೧-೧೮). ಇಂದ್ರನು ಅರ್ಜುನನಿಗೆ ಸ್ವರ್ಗಕ್ಕೆ ಬರಲು ಹೇಳಿ ತೆರಳಿದುದು (೧೯-೩೧). ಅರ್ಜುನನು ಸಶರೀರನಾಗಿ ಸರ್ಗಕ್ಕೆ ಮಾತಲಿಯು ನಡೆಸಿದ ಯಾನದಲ್ಲಿ ಪ್ರಯಾಣಿಸಿದುದು (೩೨-೪೦). ಅರ್ಜುನನು ಸ್ವರ್ಗದಲ್ಲಿ ತಾನು ಕಂಡಿದುದನ್ನು, ಕಲಿತಿದ್ದುದನ್ನು ವರ್ಣಿಸಿದುದು (೪೧-೫೮).

03164001 ಅರ್ಜುನ ಉವಾಚ|

03164001a ತತಸ್ತಾಮವಸಂ ಪ್ರೀತೋ ರಜನೀಂ ತತ್ರ ಭಾರತ|

03164001c ಪ್ರಸಾದಾದ್ದೇವದೇವಸ್ಯ ತ್ರ್ಯಂಬಕಸ್ಯ ಮಹಾತ್ಮನಃ||

ಅರ್ಜುನನು ಹೇಳಿದನು: “ಭಾರತ! ಮಹಾತ್ಮ ದೇವದೇವ ತ್ರ್ಯಂಬಕನ ಪ್ರಸಾದದಿಂದ ಪ್ರೀತನಾಗಿ ನಾನು ಆ ರಾತ್ರಿಯನ್ನು ಅಲ್ಲಿಯೇ ಕಳೆದೆನು.

03164002a ವ್ಯುಷಿತೋ ರಜನೀಂ ಚಾಹಂ ಕೃತ್ವಾ ಪೂರ್ವಾಃಣಿಕಕ್ರಿಯಾಂ|

03164002c ಅಪಶ್ಯಂ ತಂ ದ್ವಿಜಶ್ರೇಷ್ಠಂ ದೃಷ್ಟವಾನಸ್ಮಿ ಯಂ ಪುರಾ||

ರಾತ್ರಿಯನ್ನು ಕಳೆದು, ಪೂರ್ವಾಹ್ನಿಕಕ್ರಿಯೆಗಳನ್ನು ಮಾಡಿ ನಾನು ಹಿಂದೆ ನೋಡಿದ್ದ ದ್ವಿಜಶ್ರೇಷ್ಠನನ್ನು ನೋಡಿದೆ.

03164003a ತಸ್ಮೈ ಚಾಹಂ ಯಥಾವೃತ್ತಂ ಸರ್ವಮೇವ ನ್ಯವೇದಯಂ|

03164003c ಭಗವಂತಂ ಮಹಾದೇವಂ ಸಮೇತೋಽಸ್ಮೀತಿ ಭಾರತ||

ಭಾರತ! ನಾನು ಅವನಿಗೆ ಭಗವಂತ ಮಹಾದೇವನನ್ನು ಭೇಟಿಮಾಡಿದೆ ಎಂದೂ ಮತ್ತು ನಡೆದುದೆಲ್ಲವನ್ನೂ ಹೇಳಿದೆ.

03164004a ಸ ಮಾಮುವಾಚ ರಾಜೇಂದ್ರ ಪ್ರೀಯಮಾಣೋ ದ್ವಿಜೋತ್ತಮಃ|

03164004c ದೃಷ್ಟಸ್ತ್ವಯಾ ಮಹಾದೇವೋ ಯಥಾ ನಾನ್ಯೇನ ಕೇನ ಚಿತ್||

ರಾಜೇಂದ್ರ! ಆ ದ್ವಿಜೋತ್ತಮನು ಪ್ರೀತನಾಗಿ ನನಗೆ ಹೇಳಿದನು: “ಮಹಾದೇವನನ್ನು ನೀನು ನೋಡಿದಹಾಗೆ ಬೇರೆ ಯಾರೂ ಮಾಡಿಲ್ಲ.

03164005a ಸಮೇತ್ಯ ಲೋಕಪಾಲೈಸ್ತು ಸರ್ವೈರ್ವೈವಸ್ವತಾದಿಭಿಃ|

03164005c ದ್ರಷ್ಟಾಸ್ಯನಘ ದೇವೇಂದ್ರಂ ಸ ಚ ತೇಽಸ್ತ್ರಾಣಿ ದಾಸ್ಯತಿ||

ನೀನು ವೈವಸ್ವತರೇ ಮೊದಲಾದ ಲೋಕಪಾಲರನ್ನೂ ಭೇಟಿಮಾಡುತ್ತೀಯೆ. ಅನಂತರ ಅನಘ! ನೀನು ದೇವೇಂದ್ರನನ್ನು ನೋಡುತ್ತೀಯೆ ಮತ್ತು ಅವನೂ ಕೂಡ ನಿನಗೆ ಅಸ್ತ್ರಗಳನ್ನು ಕೊಡುತ್ತಾನೆ.”

03164006a ಏವಮುಕ್ತ್ವಾ ಸ ಮಾಂ ರಾಜನ್ನಾಶ್ಲಿಷ್ಯ ಚ ಪುನಃ ಪುನಃ|

03164006c ಅಗಚ್ಚತ್ಸ ಯಥಾಕಾಮಂ ಬ್ರಾಹ್ಮಣಃ ಸೂರ್ಯಸನ್ನಿಭಃ||

ರಾಜನ್! ಹೀಗೆ ಹೇಳಿ ಆ ಸೂರ್ಯಸನ್ನಿಭ ಬ್ರಾಹ್ಮಣನು ನನ್ನನ್ನು ಪುನಃ ಪುನಃ ಆಲಂಗಿಸಿ ಬಯಸಿದ ಕಡೆ ಹೊರಟುಹೋದನು.

03164007a ಅಥಾಪರಾಹ್ಣೇ ತಸ್ಯಾಹ್ನಃ ಪ್ರಾವಾತ್ಪುಣ್ಯಃ ಸಮೀರಣಃ|

03164007c ಪುನರ್ನವಮಿಮಂ ಲೋಕಂ ಕುರ್ವನ್ನಿವ ಸಪತ್ನಹನ್||

ಅರಿಮರ್ದನ! ಆ ದಿನದ ಮಧ್ಯಾಹ್ನದ ನಂತರ ಲೋಕವನ್ನೇ ಪುನಃ ಹೊಸತಾಗಿ ಮಾಡುತ್ತಿದೆಯೋ ಎನ್ನುವಂತಹ ಪುಣ್ಯ ಗಾಳಿಯು ಬೀಸತೊಡಗಿತು

03164008a ದಿವ್ಯಾನಿ ಚೈವ ಮಾಲ್ಯಾನಿ ಸುಗಂಧೀನಿ ನವಾನಿ ಚ|

03164008c ಶೈಶಿರಸ್ಯ ಗಿರೇಃ ಪಾದೇ ಪ್ರಾದುರಾಸನ್ಸಮೀಪತಃ||

ನನ್ನ ಹತ್ತಿರದಲ್ಲಿಯೇ ಶೈಶಿರ ಗಿರಿಯ ತಪ್ಪಲಿನಲ್ಲಿ ದಿವ್ಯ ಸುಗಂಧಯುಕ್ತ ಹೊಸ ಹೂವುಗಳ ಮಾಲೆಗಳು ಕಾಣಿಸಿಕೊಂಡವು.

03164009a ವಾದಿತ್ರಾಣಿ ಚ ದಿವ್ಯಾನಿ ಸುಘೋಷಾಣಿ ಸಮಂತತಃ|

03164009c ಸ್ತುತಯಶ್ಚೇಂದ್ರಸಂಯುಕ್ತಾ ಅಶ್ರೂಯಂತ ಮನೋಹರಾಃ||

ಎಲ್ಲಕಡೆಯಿಂದಲೂ ದಿವ್ಯ ವಾದ್ಯಗಳ ಸುಘೋಷವು, ಇಂದ್ರನ ಮನೋಹರ ಸ್ತುತಿಗಳು ಕೇಳಿಬಂದವು.

03164010a ಗಣಾಶ್ಚಾಪ್ಸರಸಾಂ ತತ್ರ ಗಂಧರ್ವಾಣಾಂ ತಥೈವ ಚ|

03164010c ಪುರಸ್ತಾದ್ದೇವದೇವಸ್ಯ ಜಗುರ್ಗೀತಾನಿ ಸರ್ವಶಃ||

ಅಲ್ಲಿ ಎಲ್ಲ ಅಪ್ಸರೆ ಮತ್ತು ಗಂಧರ್ವ ಗಣಗಳು ದೇವದೇವನ ಜಯಗೀತೆಗಳನ್ನು ಹಾಡುತ್ತಾ ಮುಂದೆ ಬರುತ್ತಿದ್ದರು.

03164011a ಮರುತಾಂ ಚ ಗಣಾಸ್ತತ್ರ ದೇವಯಾನೈರುಪಾಗಮನ್|

03164011c ಮಹೇಂದ್ರಾನುಚರಾ ಯೇ ಚ ದೇವಸದ್ಮನಿವಾಸಿನಃ||

ಮರುತರ ಗಣಗಳೂ ಮತ್ತು ಮಹೇಂದ್ರನ ಅನುಚರರೂ, ದೇವಸದನದ ನಿವಾಸಿಗಳು, ದೇವಯಾನಗಳಲ್ಲಿ ಕುಳಿತು ಬರುತ್ತಿದ್ದರು.

03164012a ತತೋ ಮರುತ್ವಾನ್ ಹರಿಭಿರ್ಯುಕ್ತೈರ್ವಾಹೈಃ ಸ್ವಲಂಕೃತೈಃ|

03164012c ಶಚೀಸಹಾಯಸ್ತತ್ರಾಯಾತ್ಸಹ ಸರ್ವೈಸ್ತದಾಮರೈಃ||

ಆಗ ಮರುತ್ವಂತನು ಹರಿಗಳನ್ನು ಕಟ್ಟಿ ಎಳೆಯಲ್ಪಡುವ ಸ್ವಲಂಕೃತ ವಾಹನದಲ್ಲಿ ಶಚೀದೇವಿಯೊಂದಿಗೆ ಸರ್ವ ಅಮರರನ್ನು ಕೂಡಿ ಆಗಮಿಸಿದನು.

03164013a ಏತಸ್ಮಿನ್ನೇವ ಕಾಲೇ ತು ಕುಬೇರೋ ನರವಾಹನಃ|

03164013c ದರ್ಶಯಾಮಾಸ ಮಾಂ ರಾಜಽಲ್ಲಕ್ಷ್ಮ್ಯಾ ಪರಮಯಾ ಯುತಃ||

ರಾಜನ್! ಅದೇ ಸಮಯದಲ್ಲಿ ನರವಾಹನ ಕುಬೇರನೂ ಕೂಡ ಪರಮ ಶ್ರೀಯೊಡನೆ ನನಗೆ ಕಾಣಿಸಿಕೊಂಡನು.

03164014a ದಕ್ಷಿಣಸ್ಯಾಂ ದಿಶಿ ಯಮಂ ಪ್ರತ್ಯಪಶ್ಯಂ ವ್ಯವಸ್ಥಿತಂ|

03164014c ವರುಣಂ ದೇವರಾಜಂ ಚ ಯಥಾಸ್ಥಾನಮವಸ್ಥಿತಂ||

03164015a ತೇ ಮಾಮೂಚುರ್ಮಹಾರಾಜ ಸಾಂತ್ವಯಿತ್ವಾ ಸುರರ್ಷಭಾಃ|

03164015c ಸವ್ಯಸಾಚಿನ್ಸಮೀಕ್ಷಸ್ವ ಲೋಕಪಾಲಾನವಸ್ಥಿತಾನ್||

ದಕ್ಷಿಣದ ದಿಕ್ಕಿನಲ್ಲಿ ಯಮನು ನಿಂತಿರುವುದು ಕಾಣಿಸಿತು. ದೇವರಾಜ ವರುಣನೂ ಯಥಾಸ್ಥಾನದಲ್ಲಿ ನಿಂತಿದ್ದನು. ಮಹಾರಾಜ! ಆ ಸುರರ್ಷಭರು ನನಗೆ ಸಂತವಿಸುತ್ತಾ ಮಾತನಾಡಿದರು. “ಸವ್ಯಸಾಚಿ! ನಿಂತಿರುವ ಲೋಕಪಾಲರನ್ನು ನೋಡು.

03164016a ಸುರಕಾರ್ಯಾರ್ಥಸಿದ್ಧ್ಯರ್ಥಂ ದೃಷ್ಟವಾನಸಿ ಶಂಕರಂ|

03164016c ಅಸ್ಮತ್ತೋಽಪಿ ಗೃಹಾಣ ತ್ವಮಸ್ತ್ರಾಣೀತಿ ಸಮಂತತಃ||

ಸುರಕಾರ್ಯಸಿದ್ಧಿಗಾಗಿ ನೀನು ಶಂಕರನನ್ನು ನೋಡಿದ್ದೀಯೆ. ನಮ್ಮಿಂದ ಕೂಡ ನೀನು ಅಸ್ತ್ರಗಳನ್ನು ಸ್ವೀಕರಿಸು.”

03164017a ತತೋಽಹಂ ಪ್ರಯತೋ ಭೂತ್ವಾ ಪ್ರಣಿಪತ್ಯ ಸುರರ್ಷಭಾನ್|

03164017c ಪ್ರತ್ಯಗೃಹ್ಣಂ ತದಾಸ್ತ್ರಾಣಿ ಮಹಾಂತಿ ವಿಧಿವತ್ಪ್ರಭೋ||

ಪ್ರಭೋ! ಆಗ ನಾನು ಶುದ್ದನಾಗಿ ಸುರರ್ಷಭರಿಗೆ ನಮಸ್ಕರಿಸಿ ಅವರ ಮಹಾ ಅಸ್ತ್ರಗಳನ್ನು ವಿಧಿವತ್ತಾಗಿ ಪ್ರತಿಗ್ರಹಿಸಿದೆನು.

03164018a ಗೃಹೀತಾಸ್ತ್ರಸ್ತತೋ ದೇವೈರನುಜ್ಞಾತೋಽಸ್ಮಿ ಭಾರತ|

03164018c ಅಥ ದೇವಾ ಯಯುಃ ಸರ್ವೇ ಯಥಾಗತಮರಿಂದಮ||

ಭಾರತ! ಅವರ ಅಸ್ತ್ರಗಳನ್ನು ಪಡೆದು ನಾನು ದೇವತೆಗಳಿಂದ ಅನುಜ್ಞೆಯನ್ನು ಪಡೆದೆನು. ಅರಿಂದಮ! ಆಗ ದೇವತೆಗಳೆಲ್ಲರೂ ಬಂದದಾರಿಯಲ್ಲಿಯೇ ತೆರಳಿದರು.

03164019a ಮಘವಾನಪಿ ದೇವೇಶೋ ರಥಮಾರುಹ್ಯ ಸುಪ್ರಭಂ|

03164019c ಉವಾಚ ಭಗವಾನ್ವಾಕ್ಯಂ ಸ್ಮಯನ್ನಿವ ಸುರಾರಿಹಾ||

ಭಗವನ್ ಸುರಾರಿಹ ದೇವೇಶ ಮಘವಾನನೂ ಕೂಡ ಸುಪ್ರಭೆಯ ರಥವನ್ನೇರಿ ನಸುನಗುತ್ತಾ ಹೇಳಿದನು:

03164020a ಪುರೈವಾಗಮನಾದಸ್ಮಾದ್ವೇದಾಹಂ ತ್ವಾಂ ಧನಂಜಯ|

03164020c ಅತಃ ಪರಂ ತ್ವಹಂ ವೈ ತ್ವಾಂ ದರ್ಶಯೇ ಭರತರ್ಷಭ||

“ಧನಂಜಯ! ನೀನು ಇಲ್ಲಿ ಬರುವುದಕ್ಕೆ ಮೊದಲೇ ನಾನು ನಿನ್ನನು ಚೆನ್ನಾಗಿ ಬಲ್ಲೆ. ಭರತರ್ಷಭ! ಇದಕ್ಕೂ ಮೊದಲೇ ನಾನು ನಿನಗೆ ಕಾಣಿಸಿಕೊಂಡಿದ್ದೆ.

03164021a ತ್ವಯಾ ಹಿ ತೀರ್ಥೇಷು ಪುರಾ ಸಮಾಪ್ಲಾವಃ ಕೃತೋಽಸಕೃತ್|

03164021c ತಪಶ್ಚೇದಂ ಪುರಾ ತಪ್ತಂ ಸ್ವರ್ಗಂ ಗಂತಾಸಿ ಪಾಂಡವ||

ಪಾಂಡವ! ನೀನು ಹಿಂದೆ ತೀರ್ಥಗಳಲ್ಲಿ ಮಿಂದಿದ್ದೀಯೆ ಮತ್ತು ತಪಸ್ಸನ್ನು ತಪಿಸಿದ್ದೀಯೆ. ಆದುದರಿಂದ ನೀನು ಸ್ವರ್ಗಕ್ಕೆ ಹೋಗುತ್ತೀಯೆ[1].

03164022a ಭೂಯಶ್ಚೈವ ತು ತಪ್ತವ್ಯಂ ತಪಃ ಪರಮದಾರುಣಂ|

03164022c ಉವಾಚ ಭಗವಾನ್ಸರ್ವಂ ತಪಸಶ್ಚೋಪಪಾದನಂ||

ನೀನು ಇನ್ನೊಮ್ಮೆ ಪರಮದಾರುಣ ತಪಸ್ಸನ್ನು ತಪಿಸುತ್ತೀಯೆ. ಆಗ ಆ ಭಗವಾನನು ತಪಸ್ಸನ್ನು ಹೇಗೆ ಮಾಡಬೇಕೆಂದು ಎಲ್ಲವನ್ನು ವಿವರಿಸಿದನು.

03164023a ಮಾತಲಿರ್ಮನ್ನಿಯೋಗಾತ್ತ್ವಾಂ ತ್ರಿದಿವಂ ಪ್ರಾಪಯಿಷ್ಯತಿ|

03164023c ವಿದಿತಸ್ತ್ವಂ ಹಿ ದೇವಾನಾಮೃಷೀಣಾಂ ಚ ಮಹಾತ್ಮನಾಂ||

“ನನ್ನ ನಿಯೋಗದಂತೆ ಮಾತಲಿಯು ನಿನ್ನನ್ನು ತ್ರಿದಿವಕ್ಕೆ ತರುತ್ತಾನೆ. ಮಹಾತ್ಮ ದೇವತೆಗಳು ಮತ್ತು ಋಷಿಗಳಿಗೆ ನಿನ್ನ ಕುರಿತು ತಿಳಿದೇ ಇದೆ.”

03164024a ತತೋಽಹಮಬ್ರುವಂ ಶಕ್ರಂ ಪ್ರಸೀದ ಭಗವನ್ಮಮ|

03164024c ಆಚಾರ್ಯಂ ವರಯೇ ತ್ವಾಹಮಸ್ತ್ರಾರ್ಥಂ ತ್ರಿದಶೇಶ್ವರ||

ಆಗ ನಾನು ಶಕ್ರನಿಗೆ ಹೇಳಿದೆನು: “ಭಗವನ್! ನನ್ನ ಮೇಲೆ ಪ್ರಸೀದನಾಗು. ತ್ರಿದಶೇಶ್ವರ! ಅಸ್ತ್ರಗಳಿಗಾಗಿ ನಾನು ನಿನ್ನನ್ನು ಆಚಾರ್ಯನಾಗಿ ಕೇಳುತ್ತೇನೆ.”

03164025 ಇಂದ್ರ ಉವಾಚ|

03164025a ಕ್ರೂರಂ ಕರ್ಮಾಸ್ತ್ರವಿತ್ತಾತ ಕರಿಷ್ಯಸಿ ಪರಂತಪ|

03164025c ಯದರ್ಥಮಸ್ತ್ರಾಣೀಪ್ಸುಸ್ತ್ವಂ ತಂ ಕಾಮಂ ಪಾಂಡವಾಪ್ನುಹಿ||

ಇಂದ್ರನು ಹೇಳಿದನು: “ಮಗು! ಅಸ್ತ್ರಗಳನ್ನು ತಿಳಿದ ನಂತರ ನೀನು ಕ್ರೂರಕರ್ಮಗಳನ್ನೆಸಗುವೆ. ಪಾಂಡವ! ಪರಂತಪ! ಅನಂತರವೇ ನೀನು ಯಾವುದಕ್ಕಾಗಿ ಅಸ್ತ್ರಗಳನ್ನು ಕೇಳುತ್ತಿದ್ದೀಯೆ ಅದನ್ನು ಮಾಡಬಹುದು.””

03164026 ಅರ್ಜುನ ಉವಾಚ|

03164026a ತತೋಽಹಮಬ್ರುವಂ ನಾಹಂ ದಿವ್ಯಾನ್ಯಸ್ತ್ರಾಣಿ ಶತ್ರುಹನ್|

03164026c ಮಾನುಷೇಷು ಪ್ರಯೋಕ್ಷ್ಯಾಮಿ ವಿನಾಸ್ತ್ರಪ್ರತಿಘಾತನಂ||

ಅರ್ಜುನನು ಹೇಳಿದನು: “ಆಗ ನಾನು ಹೇಳಿದೆ: “ಶತ್ರುಹನ್! ನಾನು ಎಂದೂ ನನ್ನ ಇತರ ಅಸ್ತ್ರಗಳು ನಿಷ್ಫಲವಾದಾಗ ಮಾತ್ರ ಬಿಟ್ಟು ಈ ದಿವ್ಯಾಸ್ತ್ರಗಳನ್ನು ಎಂದೂ ಮನುಷ್ಯರ ಮೇಲೆ ಪ್ರಯೋಗಿಸುವುದಿಲ್ಲ.

03164027a ತಾನಿ ದಿವ್ಯಾನಿ ಮೇಽಸ್ತ್ರಾಣಿ ಪ್ರಯಚ್ಚ ವಿಬುಧಾಧಿಪ|

03164027c ಲೋಕಾಂಶ್ಚಾಸ್ತ್ರಜಿತಾನ್ಪಶ್ಚಾಲ್ಲಭೇಯಂ ಸುರಪುಂಗವ||

ವಿಬುಧಾಧಿಪ! ಆ ದಿವ್ಯಾಸ್ತ್ರಗಳನ್ನು ನನಗೆ ಕರುಣಿಸು. ಸುರಪುಂಗವ! ಅನಂತರ ನಾನು ಆ ಅಸ್ತ್ರಗಳು ಗೆಲ್ಲುವ ಲೋಕಗಳನ್ನು ಪಡೆಯುತ್ತೇನೆ.”

03164028 ಇಂದ್ರ ಉವಾಚ|

03164028a ಪರೀಕ್ಷಾರ್ಥಂ ಮಯೈತತ್ತೇ ವಾಕ್ಯಮುಕ್ತಂ ಧನಂಜಯ|

03164028c ಮಮಾತ್ಮಜಸ್ಯ ವಚನಂ ಸೂಪಪನ್ನಮಿದಂ ತವ||

ಇಂದ್ರನು ಹೇಳಿದನು: “ಧನಂಜಯ! ನಿನ್ನನ್ನು ಪರೀಕ್ಷಿಸಲು ನಾನು ಈ ಮಾತುಗಳನ್ನು ಹೇಳಿದೆ. ನಿನ್ನ ಮಾತುಗಳು ನನ್ನಿಂದ ಹುಟ್ಟಿದವನಿಗೆ ಸೂಕ್ತವಾಗಿವೆ.

03164029a ಶಿಕ್ಷ ಮೇ ಭವನಂ ಗತ್ವಾ ಸರ್ವಾಣ್ಯಸ್ತ್ರಾಣಿ ಭಾರತ|

03164029c ವಾಯೋರಗ್ನೇರ್ವಸುಭ್ಯೋಽಥ ವರುಣಾತ್ಸಮರುದ್ಗಣಾತ್||

03164030a ಸಾಧ್ಯಂ ಪೈತಾಮಹಂ ಚೈವ ಗಂಧರ್ವೋರಗರಕ್ಷಸಾಂ|

03164030c ವೈಷ್ಣವಾನಿ ಚ ಸರ್ವಾಣಿ ನೈರೃತಾನಿ ತಥೈವ ಚ||

03164030e ಮದ್ಗತಾನಿ ಚ ಯಾನೀಹ ಸರ್ವಾಸ್ತ್ರಾಣಿ ಕುರೂದ್ವಹ||

ಭಾರತ! ನೀನು ನನ್ನ ಮನೆಗೆ ಬಂದಾಗ ಸರ್ವಾಸ್ತ್ರಗಳನ್ನೂ – ವಾಯು, ಅಗ್ನಿ, ವಸುಗಳು, ವರುಣ, ಮರುದ್ಗಣಗಳು, ಸಾಧ್ಯರು, ಪಿತಾಮಹ, ಗಂಧರ್ವ, ಉರಗ, ರಾಕ್ಷಸರು, ವಿಷ್ಣು, ಮತ್ತು ಎಲ್ಲ ನೈರುತ್ಯರಿಂದ, ಮತ್ತು ಕುರೂದ್ವಹ! ನನ್ನಲ್ಲಿರುವ ಎಲ್ಲ ಅಸ್ತ್ರಗಳನ್ನೂ ಕಲಿಯುತ್ತೀಯೆ.””

03164031 ಅರ್ಜುನ ಉವಾಚ|

03164031a ಏವಮುಕ್ತ್ವಾ ತು ಮಾಂ ಶಕ್ರಸ್ತತ್ರೈವಾಂತರಧೀಯತ|

03164031c ಅಥಾಪಶ್ಯಂ ಹರಿಯುಜಂ ರಥಮೈಂದ್ರಮುಪಸ್ಥಿತಂ||

03164031e ದಿವ್ಯಂ ಮಾಯಾಮಯಂ ಪುಣ್ಯಂ ಯತ್ತಂ ಮಾತಲಿನಾ ನೃಪ||

ಅರ್ಜುನನು ಹೇಳಿದನು: “ಹೀಗೆ ನನಗೆ ಹೇಳಿ ಶಕ್ರನು ಅಲ್ಲಿಯೇ ಅಂತರ್ಧಾನನಾದನು. ನೃಪ! ಆಗ ನಾನು ಕುದುರೆಗಳನ್ನು ಕಟ್ಟಿದ್ದ, ಮಾತಲಿಯು ತಂದ ಇಂದ್ರನು ಕುಳಿತುಕೊಳ್ಳುವ ದಿವ್ಯ ಮಾಯಾಮಯ ಪುಣ್ಯ ರಥವನ್ನು ನೋಡಿದೆ.

03164032a ಲೋಕಪಾಲೇಷು ಯಾತೇಷು ಮಾಮುವಾಚಾಥ ಮಾತಲಿಃ|

03164032c ದ್ರಷ್ಟುಮಿಚ್ಚತಿ ಶಕ್ರಸ್ತ್ವಾಂ ದೇವರಾಜೋ ಮಹಾದ್ಯುತೇ||

03164033a ಸಂಸಿದ್ಧಸ್ತ್ವಂ ಮಹಾಬಾಹೋ ಕುರು ಕಾರ್ಯಮನುತ್ತಮಂ|

03164033c ಪಶ್ಯ ಪುಣ್ಯಕೃತಾಂ ಲೋಕಾನ್ಸಶರೀರೋ ದಿವಂ ವ್ರಜ||

ಲೋಕಪಾಲರು ಹೊರಟುಹೋದ ನಂತರ ಮಾತಲಿಯು ನನಗೆ ಹೇಳಿದನು: “ಮಹಾದ್ಯುತೇ! ದೇವರಾಜ ಶಕ್ರನು ನಿನ್ನನ್ನು ನೋಡಲು ಬಯಸುತ್ತಾನೆ. ಮಹಾಬಾಹೋ! ಅನುತ್ತಮ ಕಾರ್ಯವನ್ನು ಮಾಡಿ ಸಿದ್ಧಿಯನ್ನು ಹೊಂದು. ಸಶರೀರನಾಗಿ ಪುಣ್ಯಕೃತರ ದೇವಲೋಕವನ್ನು ನೋಡು.”

03164034a ಇತ್ಯುಕ್ತೋಽಹಂ ಮಾತಲಿನಾ ಗಿರಿಮಾಮಂತ್ರ್ಯ ಶೈಶಿರಂ|

03164034c ಪ್ರದಕ್ಷಿಣಮುಪಾವೃತ್ಯ ಸಮಾರೋಹಂ ರಥೋತ್ತಮಂ||

ಮಾತಲಿಯು ಹೀಗೆ ಹೇಳಲು ಶೈಶಿರ ಗಿರಿಯನ್ನು ಬೀಳ್ಕೊಂಡು ಪ್ರದಕ್ಷಿಣೆ ಸಮಸ್ಕಾರ ಮಾಡಿ ಉತ್ತಮ ರಥವನ್ನು ಏರಿದೆನು.

03164035a ಚೋದಯಾಮಾಸ ಸ ಹಯಾನ್ಮನೋಮಾರುತರಂಹಸಃ|

03164035c ಮಾತಲಿರ್ಹಯಶಾಸ್ತ್ರಜ್ಞೋ ಯಥಾವದ್ಭೂರಿದಕ್ಷಿಣಃ||

ಹಯಶಾಸ್ತ್ರಜ್ಞ ಭೂರಿದಕ್ಷಿಣ ಮಾತಲಿಯು ಯಥಾವತ್ತಾಗಿ ಮನಸ್ಸು ಮತ್ತು ವಾಯುವಿನ ವೇಗದಲ್ಲಿ ಓಡುವ ಹಯಗಳನ್ನು ಹೊರಡಿಸಿದನು.

03164036a ಅವೈಕ್ಷತ ಚ ಮೇ ವಕ್ತ್ರಂ ಸ್ಥಿತಸ್ಯಾಥ ಸ ಸಾರಥಿಃ|

03164036c ತಥಾ ಭ್ರಾಂತೇ ರಥೇ ರಾಜನ್ವಿಸ್ಮಿತಶ್ಚೇದಮಬ್ರವೀತ್||

ರಾಜನ್! ಆ ನಡುಗುತ್ತಿರುವ ವಕ್ರ ರಥದಲ್ಲಿ ನಿಂತಿರುವ ನನ್ನನ್ನು ನೋಡಿದ ಸಾರಥಿಯು ವಿಸ್ಮಿತನಾಗಿ ಹೇಳಿದನು:

03164037a ಅತ್ಯದ್ಭುತಮಿದಂ ಮೇಽದ್ಯ ವಿಚಿತ್ರಂ ಪ್ರತಿಭಾತಿ ಮಾಂ|

03164037c ಯದಾಸ್ಥಿತೋ ರಥಂ ದಿವ್ಯಂ ಪದಾ ನ ಚಲಿತೋ ಭವಾನ್||

“ಅತ್ಯದ್ಭುತ! ಇಂದು ವಿಚಿತ್ರವಾಗಿ ನನಗೆ ತೋರುತ್ತಿದೆ. ಈ ದಿವ್ಯರಥದಲ್ಲಿ ಏರಿದಾಗಿನಿಂದ ನೀನು ಒಂದು ಹೆಜ್ಜೆಯೂ ಚಲಿಸಲಿಲ್ಲ.

03164038a ದೇವರಾಜೋಽಪಿ ಹಿ ಮಯಾ ನಿತ್ಯಮತ್ರೋಪಲಕ್ಷಿತಃ|

03164038c ವಿಚಲನ್ಪ್ರಥಮೋತ್ಪಾತೇ ಹಯಾನಾಂ ಭರತರ್ಷಭ||

ಭರತರ್ಷಭ! ಕುದುರೆಗೆಳ ಪ್ರಥಮ ನೆಗೆತಕ್ಕೆ ದೇವರಾಜನೂ ಕೂಡ ವಿಚಲಿತನಾಗಿದ್ದುದನ್ನು ನೋಡಿದ್ದೇನೆ.

03164039a ತ್ವಂ ಪುನಃ ಸ್ಥಿತ ಏವಾತ್ರ ರಥೇ ಭ್ರಾಂತೇ ಕುರೂದ್ವಹ|

03164039c ಅತಿಶಕ್ರಮಿದಂ ಸತ್ತ್ವಂ ತವೇತಿ ಪ್ರತಿಭಾತಿ ಮೇ||

ಕುರೂದ್ವಹ! ಆದರೆ ಅಲುಗಾಡುತ್ತಿರುವ ಈ ರಥದಲ್ಲಿ ನೀನು ನಿಂತಿರುವುದನ್ನು ನೋಡಿದರೆ ನಿನ್ನ ಸತ್ವವು ಶಕ್ರನದಕ್ಕಿಂತಲೂ ಅಧಿಕ ಎಂದು ನನಗೆ ಹೊಳೆಯುತ್ತಿದೆ.”

03164040a ಇತ್ಯುಕ್ತ್ವಾಕಾಶಮಾವಿಶ್ಯ ಮಾತಲಿರ್ವಿಬುಧಾಲಯಾನ್|

03164040c ದರ್ಶಯಾಮಾಸ ಮೇ ರಾಜನ್ವಿಮಾನಾನಿ ಚ ಭಾರತ||

ರಾಜನ್! ಭಾರತ! ಹೀಗೆ ಹೇಳಿ ಮಾತಲಿಯು ಆಕಾಶವನ್ನು ಪ್ರವೇಶಿಸಿ ನನಗೆ ವಿಬುಧಾಲಯಗಳನ್ನು ವಿಮಾನಗಳನ್ನು ತೋರಿಸಿದನು.

03164041a ನಂದನಾದೀನಿ ದೇವಾನಾಂ ವನಾನಿ ಬಹುಲಾನ್ಯುತ|

03164041c ದರ್ಶಯಾಮಾಸ ಮೇ ಪ್ರೀತ್ಯಾ ಮಾತಲಿಃ ಶಕ್ರಸಾರಥಿಃ||

03164042a ತತಃ ಶಕ್ರಸ್ಯ ಭವನಮಪಶ್ಯಮಮರಾವತೀಂ|

03164042c ದಿವ್ಯೈಃ ಕಾಮಫಲೈರ್ವೃಕ್ಷೈ ರತ್ನೈಶ್ಚ ಸಮಲಂಕೃತಾಂ||

ಶಕ್ರಸಾರಥಿ ಮಾತಲಿಯು ಪ್ರೀತಿಯಿಂದ ನನಗೆ ನಂದನವೇ ಮೊದಲಾದ ದೇವತೆಗಳ ಬಹಳ ವನಗಳನ್ನು ತೋರಿಸಿದನು. ಆಗ ಶಕ್ರನ ಭವನ, ದಿವ್ಯ ಕಾಪಫಲಗಳನ್ನು ನೀಡುವ ವೃಕ್ಷಗಳಿಂದ ಮತ್ತು ರತ್ನಗಳಿಂದ ಸಮಲಂಕೃತ ಅಮರಾವತಿಯನ್ನು ನೋಡಿದೆನು.

03164043a ನ ತಾಂ ಭಾಸಯತೇ ಸೂರ್ಯೋ ನ ಶೀತೋಷ್ಣೇ ನ ಚ ಕ್ಲಮಃ|

03164043c ರಜಃ ಪಮ್ಕೋ ನ ಚ ತಮಸ್ತತ್ರಾಸ್ತಿ ನ ಜರಾ ನೃಪ||

ಅದನ್ನು ಸೂರ್ಯನು ಬೆಳಗುವುದಿಲ್ಲ. ಅಲ್ಲಿ ಶೀತೋಷ್ಣಗಳೂ, ಆಯಾಸವೂ ಇಲ್ಲ. ಅಲ್ಲಿ ಧೂಳಿಲ್ಲ, ಕೆಸರಿಲ್ಲ, ಕತ್ತಲೆಯಿಲ್ಲ, ಮತ್ತು ನೃಪ! ಮುಪ್ಪೂ ಇಲ್ಲ.

03164044a ನ ತತ್ರ ಶೋಕೋ ದೈನ್ಯಂ ವಾ ವೈವರ್ಣ್ಯಂ ಚೋಪಲಕ್ಷ್ಯತೇ|

03164044c ದಿವೌಕಸಾಂ ಮಹಾರಾಜ ನ ಚ ಗ್ಲಾನಿರರಿಂದಮ||

ಮಹಾರಾಜ! ಅರಿಂದಮ! ಅಲ್ಲಿ ದಿವೌಕಸರಲ್ಲಿ ಶೋಕಪಡುವವರು, ದೈನ್ಯರು, ವಿವರ್ಣರಾದವರು ಮತ್ತು ಗ್ಲಾನಿಗಳು ಯಾರೂ ಕಂಡುಬರುವುದಿಲ್ಲ.

03164045a ನ ಕ್ರೋಧಲೋಭೌ ತತ್ರಾಸ್ತಾಮಶುಭಂ ಚ ವಿಶಾಂ ಪತೇ|

03164045c ನಿತ್ಯತುಷ್ಟಾಶ್ಚ ಹೃಷ್ಟಾಶ್ಚ ಪ್ರಾಣಿನಃ ಸುರವೇಶ್ಮನಿ||

ವಿಶಾಂಪತೇ! ಸುರರ ಆಲಯದಲ್ಲಿ ಕ್ರೋಧ-ಲೋಭಗಳಿಲ್ಲ. ಅಶುಭವೂ ಇಲ್ಲ. ಪ್ರಾಣಿಗಳೆಲ್ಲರೂ ನಿತ್ಯ ತುಷ್ಟರೂ ಹೃಷ್ಟರೂ ಆಗಿದ್ದಾರೆ.

03164046a ನಿತ್ಯಪುಷ್ಪಫಲಾಸ್ತತ್ರ ಪಾದಪಾ ಹರಿತಚ್ಚದಾಃ|

03164046c ಪುಷ್ಕರಿಣ್ಯಶ್ಚ ವಿವಿಧಾಃ ಪದ್ಮಸೌಗಂಧಿಕಾಯುತಾಃ||

ಮರಗಳು ಹಸಿರಿನಿಂದ ತುಂಬಿ ನಿತ್ಯವೂ ಪುಷ್ಪ-ಫಲಗಳನ್ನು ಹೊಂದಿವೆ. ಅಲ್ಲಿ ಪದ್ಮ ಮತ್ತು ಸೌಗಂಧಿಕಗಳಿಂದ ತುಂಬಿದ ವಿವಿಧ ಸರೋವರಗಳಿವೆ.

03164047a ಶೀತಸ್ತತ್ರ ವವೌ ವಾಯುಃ ಸುಗಂಧೋ ಜೀವನಃ ಶುಚಿಃ|

03164047c ಸರ್ವರತ್ನವಿಚಿತ್ರಾ ಚ ಭೂಮಿಃ ಪುಷ್ಪವಿಭೂಷಿತಾ||

ಅಲ್ಲಿ ಶೀತಲ ಸುಂಗಂಧಯುಕ್ತ, ಜೀವನವನ್ನು ನಿಡುವ, ಶುಚಿಯಾದ ಗಾಳಿಯು ಬೀಸುತ್ತದೆ. ನೆಲವು ಪುಷ್ಪವಿಭೂಷಿತವಾಗಿ ಬಣ್ಣ ಬಣ್ಣದ ಸರ್ವರತ್ನಗಳನ್ನು ಹೊಂದಿದೆ.

03164048a ಮೃಗದ್ವಿಜಾಶ್ಚ ಬಹವೋ ರುಚಿರಾ ಮಧುರಸ್ವರಾಃ|

03164048c ವಿಮಾನಯಾಯಿನಶ್ಚಾತ್ರ ದೃಶ್ಯಂತೇ ಬಹವೋಽಮರಾಃ||

ಸುಂದರ ಮಧುರ ಸ್ವರದ ಜಿಂಕೆಗಳು ಮತ್ತು ಪಕ್ಷಿಗಳು ಇವೆ. ಮತ್ತು ತಮ್ಮ ವಿಮಾನಗಳನ್ನೇರಿ ಹೋಗುವ ಬಹಳ ಅಮರರು ಕಾಣುತ್ತಾರೆ.

03164049a ತತೋಽಪಶ್ಯಂ ವಸೂನ್ರುದ್ರಾನ್ಸಾಧ್ಯಾಂಶ್ಚ ಸಮರುದ್ಗಣಾನ್|

03164049c ಆದಿತ್ಯಾನಶ್ವಿನೌ ಚೈವ ತಾನ್ಸರ್ವಾನ್ಪ್ರತ್ಯಪೂಜಯಂ||

ಆಗ ನಾನು ವಸುಗಳನ್ನು, ರುದ್ರರನ್ನು, ಸಾಧ್ಯರನ್ನು, ಮರುದ್ಗಣಗಳನ್ನು, ಆದಿತ್ಯರನ್ನು, ಅಶ್ವಿನಿಯರನ್ನು ನೋಡಿದೆನು ಮತ್ತು ಸರ್ವರನ್ನೂ ಪ್ರತಿಪೂಜಿಸಿದೆನು.

03164050a ತೇ ಮಾಂ ವೀರ್ಯೇಣ ಯಶಸಾ ತೇಜಸಾ ಚ ಬಲೇನ ಚ|

03164050c ಅಸ್ತ್ರೈಶ್ಚಾಪ್ಯನ್ವಜಾನಂತ ಸಂಗ್ರಾಮವಿಜಯೇನ ಚ||

ಅವರು ನನಗೆ ವೀರ್ಯ, ಯಶಸ್ಸು, ತೇಜಸ್ಸು, ಬಲ, ಅಸ್ತ್ರಗಳು, ಮತ್ತು ಸಂಗ್ರಾಮದಲ್ಲಿ ವಿಜಯದ ಆಶೀರ್ವಚನಗಳನ್ನು ನೀಡಿದರು.

03164051a ಪ್ರವಿಶ್ಯ ತಾಂ ಪುರೀಂ ರಮ್ಯಾಂ ದೇವಗಂಧರ್ವಸೇವಿತಾಂ|

03164051c ದೇವರಾಜಂ ಸಹಸ್ರಾಕ್ಷಮುಪಾತಿಷ್ಠಂ ಕೃತಾಂಜಲಿಃ||

ಅನಂತರ ನಾನು ರಮ್ಯ ದೇವಗಂಧರ್ವ ಸೇವಿತ ಆ ಪುರಿಯನ್ನು ಪ್ರವೇಶಿಸಿ ಅಂಜಲೀ ಬದ್ಧನಾಗಿ ದೇವರಾಜ ಸಹಸ್ರಾಕ್ಷನ ಮುಂದೆ ನಿಂತೆನು.

03164052a ದದಾವರ್ಧಾಸನಂ ಪ್ರೀತಃ ಶಕ್ರೋ ಮೇ ದದತಾಂ ವರಃ|

03164052c ಬಹುಮಾನಾಚ್ಚ ಗಾತ್ರಾಣಿ ಪಸ್ಪರ್ಶ ಮಮ ವಾಸವಃ||

ಕೊಡುವವರಲ್ಲಿ ಶ್ರೇಷ್ಠ ಶಕ್ರನು ಸಂತೋಷದಿಂದ ನನಗೆ ಅವನ ಆಸನದ ಅರ್ಧಭಾಗವನ್ನಿತ್ತನು. ಬಹುಮಾನ್ಯತೆಯನ್ನಿತ್ತು ವಾಸವನು ನನ್ನ ಅಂಗಾಂಗಗಳನ್ನು ಸ್ಪರ್ಷಿಸಿದನು.

03164053a ತತ್ರಾಹಂ ದೇವಗಂಧರ್ವೈಃ ಸಹಿತೋ ಭುರಿದಕ್ಷಿಣ|

03164053c ಅಸ್ತ್ರಾರ್ಥಮವಸಂ ಸ್ವರ್ಗೇ ಕುರ್ವಾಣೋಽಸ್ತ್ರಾಣಿ ಭಾರತ||

ಭೂರಿದಕ್ಷಿಣ! ಭಾರತ! ದೇವಗಂಧರ್ವರ ಸಹಿತ ನಾನು ಅಲ್ಲಿ ಸ್ವರ್ಗದಲ್ಲಿ ಅಸ್ತ್ರಗಳಿಗಾಗಿ ವಾಸಿಸಿದೆನು ಮತ್ತು ಆ ಅಸ್ತ್ರಗಳನ್ನು ಕಲಿತುಕೊಂಡೆನು.

03164054a ವಿಶ್ವಾವಸೋಶ್ಚ ಮೇ ಪುತ್ರಶ್ಚಿತ್ರಸೇನೋಽಭವತ್ಸಖಾ|

03164054c ಸ ಚ ಗಾಂಧರ್ವಮಖಿಲಂ ಗ್ರಾಹಯಾಮಾಸ ಮಾಂ ನೃಪ||

ವಿಶ್ವಾವಸುವಿನ ಮಗ ಚಿತ್ರಸೇನನು ನನಗೆ ಸಖನಾದನು. ನೃಪ! ಅವನು ನನಗೆ ಗಂಧರ್ವರ ವಿದ್ಯೆಯನ್ನು ಸಂಪೂರ್ಣವಾಗಿ ಕಲಿಸಿದನು.

03164055a ತತೋಽಹಮವಸಂ ರಾಜನ್ಗೃಹೀತಾಸ್ತ್ರಃ ಸುಪೂಜಿತಃ|

03164055c ಸುಖಂ ಶಕ್ರಸ್ಯ ಭವನೇ ಸರ್ವಕಾಮಸಮನ್ವಿತಃ||

03164056a ಶೃಣ್ವನ್ವೈ ಗೀತಶಬ್ಧಂ ಚ ತೂರ್ಯಶಬ್ಧಂ ಚ ಪುಷ್ಕಲಂ|

03164056c ಪಶ್ಯಂಶ್ಚಾಪ್ಸರಸಃ ಶ್ರೇಷ್ಠಾ ನೃತ್ಯಮಾನಾಃ ಪರಂತಪ||

ರಾಜನ್! ಪರಂತಪ! ಅಸ್ತ್ರಗಳನ್ನು ಪಡೆದು ನಾನು ಶಕ್ರನ ಭವನದಲ್ಲಿ ಸರ್ವಕಾಮಗಳನ್ನು ಪೂರೈಸಿಕೊಂಡು ಸುಪೂಜಿತನಾಗಿ, ಪುಷ್ಕಲವಾಗಿ ಗೀತಶಬ್ಧ ಮತ್ತು ತೂರ್ಯಶಬ್ಧಗಳನ್ನು ಕೇಳುತ್ತಾ, ಶ್ರೇಷ್ಠ ಅಪ್ಸರೆಯರು ನರ್ತಿಸುತ್ತಿರುವುದನ್ನು ನೋಡುತ್ತಾ ಸುಖದಿಂದ ಇದ್ದೆನು.

03164057a ತತ್ಸರ್ವಮನವಜ್ಞಾಯ ತಥ್ಯಂ ವಿಜ್ಞಾಯ ಭಾರತ|

03164057c ಅತ್ಯರ್ಥಂ ಪ್ರತಿಗೃಹ್ಯಾಹಮಸ್ತ್ರೇಷ್ವೇವ ವ್ಯವಸ್ಥಿತಃ||

ಭಾರತ! ಅವೆಲ್ಲವನ್ನೂ ಕಡೆಗೆಣಿಸದೇ ಮತ್ತು ಸತ್ಯವನ್ನು ತಿಳಿದುಕೊಂಡು ಎಲ್ಲ ಅಸ್ತ್ರಗಳನ್ನು ವ್ಯವಸ್ಥಿತವಾಗಿ ಕಲಿತುಕೊಂಡೆನು.

03164058a ತತೋಽತುಷ್ಯತ್ಸಹಸ್ರಾಕ್ಷಸ್ತೇನ ಕಾಮೇನ ಮೇ ವಿಭುಃ|

03164058c ಏವಂ ಮೇ ವಸತೋ ರಾಜನ್ನೇಷ ಕಾಲೋಽತ್ಯಗಾದ್ದಿವಿ||

ಆಗ ಸಹಸ್ರಾಕ್ಷನು ನನ್ನ ಆಸೆಯಂತೆ ತುಂಬಾ ಸಂತುಷ್ಟನಾದನು. ರಾಜನ್! ಹೀಗೆ ನಾನು ನನ್ನ ಕಾಲವನ್ನು ದೇವಲೋಕದಲ್ಲಿ ಕಳೆದೆ.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಅರ್ಜುನವಾಕ್ಯೇ ಚತುಃಷಷ್ಟ್ಯಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಅರ್ಜುನವಾಕ್ಯದಲ್ಲಿ ನೂರಾಅರವತ್ನಾಲ್ಕನೆಯ ಅಧ್ಯಾಯವು.

Related image

[1]ಅರ್ಜುನನು ಈ ಮೊದಲೇ ತೀರ್ಥಯಾತ್ರೆಯನ್ನು ಮುಗಿಸಿದುದು ಅವನನ್ನು ಸ್ವರ್ಗಕ್ಕೆ ಹೋಗಲು ತಯಾರಿಸಲು ವಿಧಿಯು ರಚಿಸಿದ ಘಟನೆಯೇ?

Comments are closed.