Anushasana Parva: Chapter 99

ಅನುಶಾಸನ ಪರ್ವ: ದಾನಧರ್ಮ ಪರ್ವ

೯೯[1]

ಆರಾಮಾದಿ ನಿರ್ಮಾಣ

ಸರೋವರಗಳ ನಿರ್ಮಾಣ ಮತ್ತು ಮರ-ಗಿಡಗಳನ್ನು ನೆಡುವುದರಿಂದ ದೊರೆಯುವ ಪುಣ್ಯಗಳ ವರ್ಣನೆ (೧-೩೩).

13099001 ಯುಧಿಷ್ಠಿರ ಉವಾಚ|

13099001a ಆರಾಮಾಣಾಂ[2] ತಡಾಗಾನಾಂ ಯತ್ಫಲಂ ಕುರುನಂದನ|

13099001c ತದಹಂ ಶ್ರೋತುಮಿಚ್ಚಾಮಿ ತ್ವತ್ತೋಽದ್ಯ ಭರತರ್ಷಭ||

ಯುಧಿಷ್ಠಿರನು ಹೇಳಿದನು: “ಕುರುನಂದನ! ಭರತರ್ಷಭ! ಉದ್ಯಾನವನಗಳು ಮತ್ತು ಸರೋವರಗಳನ್ನು ನಿರ್ಮಿಸುವುದರ ಫಲವೇನು? ಅದನ್ನು ಇಂದು ನಿನ್ನಿಂದ ಕೇಳಬಯಸುತ್ತೇನೆ.”

13099002 ಭೀಷ್ಮ ಉವಾಚ|

13099002a ಸುಪ್ರದರ್ಶಾ ವನವತೀ ಚಿತ್ರಧಾತುವಿಭೂಷಿತಾ|

13099002c ಉಪೇತಾ ಸರ್ವಬೀಜೈಶ್ಚ ಶ್ರೇಷ್ಠಾ ಭೂಮಿರಿಹೋಚ್ಯತೇ||

ಭೀಷ್ಮನು ಹೇಳಿದನು: “ಸರ್ವ ಬೀಜಗಳು ಬೆಳೆಯುವ ಮತ್ತು ಬಣ್ಣಬಣ್ಣದ ಖನಿಜಗಳಿಂದ ವಿಭೂಷಿತ ವನವಿರುವ ಭೂಮಿಯು ಶ್ರೇಷ್ಠವೆಂದು ಹೇಳುತ್ತಾರೆ.

13099003a ತಸ್ಯಾಃ ಕ್ಷೇತ್ರವಿಶೇಷಂ ಚ ತಡಾಗಾನಾಂ ನಿವೇಶನಮ್|

13099003c ಔದಕಾನಿ ಚ ಸರ್ವಾಣಿ ಪ್ರವಕ್ಷ್ಯಾಮ್ಯನುಪೂರ್ವಶಃ||

ಅವುಗಳಲ್ಲಿ ಸರೋವರಗಳಿರುವ ಪ್ರದೇಶಗಳು ವಿಶೇಷವಾದವುಗಳು. ನಾನು ಕ್ರಮಾನುಕ್ರಮವಾಗಿ ಸರ್ವ ಸರೋವರಗಳ ಕುರಿತು ಹೇಳುತ್ತೇನೆ.

13099004a ತಡಾಗಾನಾಂ ಚ ವಕ್ಷ್ಯಾಮಿ ಕೃತಾನಾಂ ಚಾಪಿ ಯೇ ಗುಣಾಃ|

13099004c ತ್ರಿಷು ಲೋಕೇಷು ಸರ್ವತ್ರ ಪೂಜಿತೋ ಯಸ್ತಡಾಗವಾನ್||

ಮತ್ತು ಸರೋವರಗಳನ್ನು ನಿರ್ಮಿಸುವವರಿಗೆ ದೊರೆಯುವ ಫಲಗಳ ಕುರಿತೂ ಹೇಳುತ್ತೇನೆ. ಸರೋವರಗಳನ್ನು ನಿರ್ಮಿಸಿದವರು ಮೂರು ಲೋಕಗಳಲ್ಲಿ ಎಲ್ಲಕಡೆ ಗೌರವಿಸಲ್ಪಡುತ್ತಾರೆ.

13099005a ಅಥ ವಾ ಮಿತ್ರಸದನಂ ಮೈತ್ರಂ ಮಿತ್ರವಿವರ್ಧನಮ್|

13099005c ಕೀರ್ತಿಸಂಜನನಂ ಶ್ರೇಷ್ಠಂ ತಡಾಗಾನಾಂ ನಿವೇಶನಮ್||

ಮೈತ್ರಿಯನ್ನು ಹೆಚ್ಚಿಸುವ ಮಿತ್ರಸದನಗಳಲ್ಲಿಯೂ ಸರೋವರಗಳಿರುವ ಮಿತ್ರಸದನದಲ್ಲಿರುವುದು ಶ್ರೇಷ್ಠವು. ಅದು ಅತ್ಯಂತ ಹೆಚ್ಚಿನ ಕೀರ್ತಿಯನ್ನು ನೀಡುತ್ತದೆ.

13099006a ಧರ್ಮಸ್ಯಾರ್ಥಸ್ಯ ಕಾಮಸ್ಯ ಫಲಮಾಹುರ್ಮನೀಷಿಣಃ|

13099006c ತಡಾಗಂ ಸುಕೃತಂ ದೇಶೇ ಕ್ಷೇತ್ರಮೇವ ಮಹಾಶ್ರಯಮ್||

ಚೆನ್ನಾಗಿ ನಿರ್ಮಿಸಿದ ಸರೋವರದಿಂದ ಧರ್ಮ-ಅರ್ಥ-ಕಾಮಗಳ ಫಲಗಳು ದೊರೆಯುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ. ಸರೋವರವಿರುವ ಪ್ರದೇಶವು ಮಹಾ ಆಶ್ರಯವು.

13099007a ಚತುರ್ವಿಧಾನಾಂ ಭೂತಾನಾಂ ತಡಾಗಮುಪಲಕ್ಷಯೇತ್|

13099007c ತಡಾಗಾನಿ ಚ ಸರ್ವಾಣಿ ದಿಶಂತಿ ಶ್ರಿಯಮುತ್ತಮಾಮ್||

ಸರೋವರಗಳಿರುವಲ್ಲಿ ನಾಲ್ಕು ವಿಧದ ಜೀವಿಗಳು ಕಂಡುಬರುತ್ತವೆ. ಸರೋವರಗಳು ಎಲ್ಲ ದಿಕ್ಕುಗಳಿಂದಲೂ ಶ್ರೀಯನ್ನು ತರುತ್ತವೆ.

13099008a ದೇವಾ ಮನುಷ್ಯಾ ಗಂಧರ್ವಾಃ ಪಿತರೋರಗರಾಕ್ಷಸಾಃ|

13099008c ಸ್ಥಾವರಾಣಿ ಚ ಭೂತಾನಿ ಸಂಶ್ರಯಂತಿ ಜಲಾಶಯಮ್||

ದೇವತೆಗಳು, ಮನುಷ್ಯರು, ಗಂಧರ್ವರು, ಪಿತೃಗಳು, ಉರಗ-ರಾಕ್ಷಸರು, ಮತ್ತು ಸ್ಥಾವರ ಭೂತಗಳೂ ಜಲಾಶಯವನ್ನು ಆಶ್ರಯಿಸಿರುತ್ತಾರೆ.

13099009a ತಸ್ಮಾತ್ತಾಂಸ್ತೇ ಪ್ರವಕ್ಷ್ಯಾಮಿ ತಡಾಗೇ ಯೇ ಗುಣಾಃ ಸ್ಮೃತಾಃ|

13099009c ಯಾ ಚ ತತ್ರ ಫಲಾವಾಪ್ತಿರೃಷಿಭಿಃ ಸಮುದಾಹೃತಾ||

ಆದುದರಿಂದ ಸರೋವರಗಳಿಗೆ ಸಂಬಂಧಿಸಿದ ಉತ್ತಮ ಗುಣಗಳ ಕುರಿತು ಹೇಳುತ್ತೇನೆ. ಋಷಿಗಳು ಸರೋವರನಿರ್ಮಾಣದ ಫಲಗಳ ಕುರಿತು ಚೆನ್ನಾಗಿ ಹೇಳಿದ್ದಾರೆ.

13099010a ವರ್ಷಮಾತ್ರೇ ತಡಾಗೇ ತು ಸಲಿಲಂ ಯಸ್ಯ ತಿಷ್ಠತಿ|

13099010c ಅಗ್ನಿಹೋತ್ರಫಲಂ ತಸ್ಯ ಫಲಮಾಹುರ್ಮನೀಷಿಣಃ||

ಮಳೆಯು ಕಡಿಮೆಯಾಗಿದ್ದಾಗಲೂ ಯಾರ ಸರೋವರದಲ್ಲಿ ನೀರಿರುವುದೋ ಅವನಿಗೆ ಅಗ್ನಿಹೋತ್ರಮಾಡಿದುದರ ಫಲವು ದೊರೆಯುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ.

13099011a ಶರತ್ಕಾಲೇ ತು ಸಲಿಲಂ ತಡಾಗೇ ಯಸ್ಯ ತಿಷ್ಠತಿ|

13099011c ಗೋಸಹಸ್ರಸ್ಯ ಸ ಪ್ರೇತ್ಯ ಲಭತೇ ಫಲಮುತ್ತಮಮ್||

ಶರತ್ಕಾಲದಲ್ಲಿ ಯಾರ ಸರೋವರದಲ್ಲಿ ನೀರಿರುವುದೋ ಅವನಿಗೆ ಮರಣಾನಂತರ ಸಹಸ್ರ ಗೋವುಗಳನ್ನು ದಾನಮಾಡಿದ ಉತ್ತಮ ಫಲವು ಲಭಿಸುತ್ತದೆ.

13099012a ಹೇಮಂತಕಾಲೇ ಸಲಿಲಂ ತಡಾಗೇ ಯಸ್ಯ ತಿಷ್ಠತಿ|

13099012c ಸ ವೈ ಬಹುಸುವರ್ಣಸ್ಯ ಯಜ್ಞಸ್ಯ ಲಭತೇ ಫಲಮ್||

ಹೇಮಂತ ಋತುವಿನಲ್ಲಿ ಯಾರ ಸರೋವರದಲ್ಲಿ ನೀರಿರುವುದೋ ಅವನಿಗೆ ಬಹುಸುವರ್ಣಗಳನ್ನಿತ್ತು ಮಾಡಿದ ಯಜ್ಞದ ಫಲವು ದೊರೆಯುತ್ತದೆ.

13099013a ಯಸ್ಯ ವೈ ಶೈಶಿರೇ ಕಾಲೇ ತಡಾಗೇ ಸಲಿಲಂ ಭವೇತ್|

13099013c ಅಗ್ನಿಷ್ಟೋಮಸ್ಯ ಯಜ್ಞಸ್ಯ ಫಲಮಾಹುರ್ಮನೀಷಿಣಃ||

ಶಿಶಿರ ಋತುವಿನಲ್ಲಿ ಯಾರ ಸರೋವರದಲ್ಲಿ ನೀರಿರುವುದೋ ಅವನಿಗೆ ಅಗ್ನಿಷ್ಟೋಮ ಯಜ್ಞದ ಫಲವು ದೊರೆಯುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ.

13099014a ತಡಾಗಂ ಸುಕೃತಂ ಯಸ್ಯ ವಸಂತೇ ತು ಮಹಾಶ್ರಯಮ್|

13099014c ಅತಿರಾತ್ರಸ್ಯ ಯಜ್ಞಸ್ಯ ಫಲಂ ಸ ಸಮುಪಾಶ್ನುತೇ||

ವಸಂತ ಋತುವಿನಲ್ಲಿ ಯಾರ ಸರೋವರವು ಮಹಾಶ್ರಯವಾಗಿರುವುದೋ ಅವನಿಗೆ ಅತಿರಾತ್ರ ಯಜ್ಞದ ಫಲವು ದೊರೆಯುತ್ತದೆ.

13099015a ನಿದಾಘಕಾಲೇ ಪಾನೀಯಂ ತಡಾಗೇ ಯಸ್ಯ ತಿಷ್ಠತಿ|

13099015c ವಾಜಪೇಯಸಮಂ ತಸ್ಯ ಫಲಂ ವೈ ಮುನಯೋ ವಿದುಃ||

ಬೇಸಗೆಯಲ್ಲಿ ಯಾರ ಸರೋವರದಲ್ಲಿ ಕುಡಿಯುವ ನೀರಿರುವುದೋ ಅವನಿಗೆ ವಾಜಪೇಯ ಯಜ್ಞದ ಸಮನಾದ ಫಲವು ದೊರೆಯುತ್ತದೆ ಎಂದು ಮುನಿಗಳು ಹೇಳಿದ್ದಾರೆ.

13099016a ಸ ಕುಲಂ ತಾರಯೇತ್ಸರ್ವಂ ಯಸ್ಯ ಖಾತೇ ಜಲಾಶಯೇ|

13099016c ಗಾವಃ ಪಿಬಂತಿ ಪಾನೀಯಂ ಸಾಧವಶ್ಚ ನರಾಃ ಸದಾ||

ಯಾರು ಅಗೆದ ಸರೋವರದಲ್ಲಿ ಗೋವುಗಳಿಗೆ ಕುಡಿಯಲು ನೀರು ಸದಾ ಇರುವುದೋ ಆ ಸಾಧು ನರರು ತಮ್ಮ ಕುಲದವರೆಲ್ಲರನ್ನೂ ಉದ್ಧರಿಸುತ್ತಾರೆ.

13099017a ತಡಾಗೇ ಯಸ್ಯ ಗಾವಸ್ತು ಪಿಬಂತಿ ತೃಷಿತಾ ಜಲಮ್|

13099017c ಮೃಗಪಕ್ಷಿಮನುಷ್ಯಾಶ್ಚ ಸೋಽಶ್ವಮೇಧಫಲಂ ಲಭೇತ್||

ಯಾರ ಸರೋವರದ ನೀರನ್ನು ಬಾಯಾರಿದ ಗೋವುಗಳು, ಮೃಗ-ಪಕ್ಷಿಗಳು ಮತ್ತು ಮನುಷ್ಯರು ಕುಡಿಯುತ್ತಾರೋ ಅವರಿಗೆ ಅಶ್ವಮೇಧದ ಫಲವು ದೊರೆಯುತ್ತದೆ.

13099018a ಯತ್ಪಿಬಂತಿ ಜಲಂ ತತ್ರ ಸ್ನಾಯಂತೇ ವಿಶ್ರಮಂತಿ ಚ|

13099018c ತಡಾಗದಸ್ಯ ತತ್ಸರ್ವಂ ಪ್ರೇತ್ಯಾನಂತ್ಯಾಯ ಕಲ್ಪತೇ||

ಅವನ ಆ ಸರೋವರದಲ್ಲಿ ಎಲ್ಲರೂ ನೀರನ್ನು ಕುಡಿದು, ಸ್ನಾನಮಾಡಿ ವಿಶ್ರಮಿಸುವಂತಿದ್ದರೆ ಮರಣಾನಂತರ ಅವನಿಗೆ ಅನಂತ ಪುಣ್ಯವು ದೊರೆಯುತ್ತದೆ ಎಂದು ಹೇಳಿದ್ದಾರೆ.

13099019a ದುರ್ಲಭಂ ಸಲಿಲಂ ತಾತ ವಿಶೇಷೇಣ ಪರತ್ರ ವೈ|

13099019c ಪಾನೀಯಸ್ಯ ಪ್ರದಾನೇನ ಪ್ರೀತಿರ್ಭವತಿ ಶಾಶ್ವತೀ||

ಅಯ್ಯಾ! ನೀರು, ವಿಶೇಷವಾಗಿ ಮರಣಾನಂತರ, ಅತ್ಯಂತ ದುರ್ಲಭವು. ನೀರನ್ನು ನೀಡುವುದರಿಂದ ಶಾಶ್ವತ ಸುಖವು ದೊರೆಯುತ್ತದೆ.

13099020a ತಿಲಾನ್ದದತ ಪಾನೀಯಂ ದೀಪಾನ್ದದತ ಜಾಗ್ರತ|

13099020c ಜ್ಞಾತಿಭಿಃ ಸಹ ಮೋದಧ್ವಮೇತತ್ ಪ್ರೇತೇಷು ದುರ್ಲಭಮ್||

ತನ್ನ ಬಾಂಧವರೊಡನೆ ಜಾಗ್ರತನಾಗಿ ಎಳ್ಳು, ನೀರು ಮತ್ತು ದೀಪಗಳನ್ನು ದಾನಮಾಡುವವನು ಮರಣಾನಂತರ ದುರ್ಲಭ ಸುಖವನ್ನು ಪಡೆದುಕೊಳ್ಳುತ್ತಾನೆ.

13099021a ಸರ್ವದಾನೈರ್ಗುರುತರಂ ಸರ್ವದಾನೈರ್ವಿಶಿಷ್ಯತೇ|

13099021c ಪಾನೀಯಂ ನರಶಾರ್ದೂಲ ತಸ್ಮಾದ್ದಾತವ್ಯಮೇವ ಹಿ||

ಎಲ್ಲ ದಾನಗಳಿಗಿಂತಲೂ ನೀರಿನ ದಾನವು ಗುರುತರವು. ಸರ್ವ ದಾನಗಳಿಗಿಂತಲೂ ನೀರಿನ ದಾನವು ಶ್ರೇಷ್ಠವಾದುದು. ನರಶಾರ್ದೂಲ! ಆದುದರಿಂದ ಜಲದಾನವನ್ನು ಮಾಡಬೇಕು.

13099022a ಏವಮೇತತ್ತಡಾಗೇಷು ಕೀರ್ತಿತಂ ಫಲಮುತ್ತಮಮ್|

13099022c ಅತ ಊರ್ಧ್ವಂ ಪ್ರವಕ್ಷ್ಯಾಮಿ ವೃಕ್ಷಾಣಾಮಪಿ ರೋಪಣೇ||

ಹೀಗೆ ನಾನು ಸರೋವರಗಳ ನಿರ್ಮಾಣದಿಂದ ದೊರೆಯುವ ಉತ್ತಮ ಫಲಗಳ ಕುರಿತು ಹೇಳಿದ್ದೇನೆ. ಇನ್ನು ಮರಗಳನ್ನು ನೆಡುವುದರ ಕುರಿತು ಹೇಳುತ್ತೇನೆ.

13099023a ಸ್ಥಾವರಾಣಾಂ ಚ ಭೂತಾನಾಂ ಜಾತಯಃ ಷಟ್ ಪ್ರಕೀರ್ತಿತಾಃ|

13099023c ವೃಕ್ಷಗುಲ್ಮಲತಾವಲ್ಲ್ಯಸ್ತ್ವಕ್ಸಾರಾಸ್ತೃಣಜಾತಯಃ||

ಸ್ಥಾವರ ಜೀವಿಗಳಲ್ಲಿ ಆರು ಪ್ರಕಾರಗಳೆಂದು ಹೇಳಿದ್ದಾರೆ: ಮರ, ಪೊದೆ, ಬಳ್ಳಿಗಳು, ಸಣ್ಣ ಜಾತಿಯ ಬಳ್ಳಿಗಳು, ಬಿದಿರು ಮತ್ತು ಹುಲ್ಲು.

13099024a ಏತಾ ಜಾತ್ಯಸ್ತು ವೃಕ್ಷಾಣಾಂ ತೇಷಾಂ ರೋಪೇ ಗುಣಾಸ್ತ್ವಿಮೇ|

13099024c ಕೀರ್ತಿಶ್ಚ ಮಾನುಷೇ ಲೋಕೇ ಪ್ರೇತ್ಯ ಚೈವ ಫಲಂ ಶುಭಮ್||

ಈ ಜಾತಿಗಳಲ್ಲಿ ಮರಗಳನ್ನು ನೆಡುವುದರಿಂದ ದೊರೆಯುವ ಫಲವು ಹೆಚ್ಚಿನದು. ಅದು ಮನುಷ್ಯ ಲೋಕದಲ್ಲಿ ಕೀರ್ತಿಯನ್ನೂ ಪಿತೃಲೋಕದಲ್ಲಿ ಶುಭ ಫಲವನ್ನೂ ನೀಡುತ್ತದೆ.

13099025a ಲಭತೇ ನಾಮ ಲೋಕೇ ಚ ಪಿತೃಭಿಶ್ಚ ಮಹೀಯತೇ|

13099025c ದೇವಲೋಕಗತಸ್ಯಾಪಿ ನಾಮ ತಸ್ಯ ನ ನಶ್ಯತಿ||

ಅಂಥವನು ಈ ಲೋಕದಲ್ಲಿ ಹೆಸರನ್ನು ಪಡೆಯುತ್ತಾನೆ ಮತ್ತು ಪಿತೃಲೋಕದಲ್ಲಿಯೂ ಮೆರೆಯುತ್ತಾನೆ. ದೇವಲೋಕಕ್ಕೆ ಹೋದರೂ ಅವನ ಹೆಸರು ನಾಶವಾಗುವುದಿಲ್ಲ.

13099026a ಅತೀತಾನಾಗತೇ ಚೋಭೇ ಪಿತೃವಂಶಂ ಚ ಭಾರತ|

13099026c ತಾರಯೇದ್ವೃಕ್ಷರೋಪೀ ಚ ತಸ್ಮಾದ್ವೃಕ್ಷಾನ್ಪ್ರರೋಪಯೇತ್||

ಭಾರತ! ಮರಗಳನ್ನು ನೆಡುವವನು ತನ್ನ ಪಿತೃಗಳನ್ನೂ ಮತ್ತು ಮುಂದಿನ ಸಂತಾನಗಳನ್ನೂ ಉದ್ಧರಿಸುತ್ತಾನೆ. ಆದುದರಿಂದ ಮರಗಳನ್ನು ನೆಡಬೇಕು.

13099027a ತಸ್ಯ ಪುತ್ರಾ ಭವಂತ್ಯೇತೇ ಪಾದಪಾ ನಾತ್ರ ಸಂಶಯಃ|

13099027c ಪರಲೋಕಗತಃ ಸ್ವರ್ಗಂ ಲೋಕಾಂಶ್ಚಾಪ್ನೋತಿ ಸೋಽವ್ಯಯಾನ್||

ಮರಗಳನ್ನು ನೆಟ್ಟವನಿಗೆ ಪುತ್ರರಾಗುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮರಣಾನಂತರ ಅವನು ಅವ್ಯಯ ಸ್ವರ್ಗಲೋಕಗಳನ್ನು ಪಡೆಯುತ್ತಾನೆ.

13099028a ಪುಷ್ಪೈಃ ಸುರಗಣಾನ್ ವೃಕ್ಷಾಃ ಫಲೈಶ್ಚಾಪಿ ತಥಾ ಪಿತೄನ್|

13099028c ಚಾಯಯಾ ಚಾತಿಥೀಂಸ್ತಾತ ಪೂಜಯಂತಿ ಮಹೀರುಹಾಃ||

ಸ್ವರ್ಗದಲ್ಲಿ ಸುರಗಣಗಳೂ ಹೂಬಿಟ್ಟ ಮರಗಳೂ ಇರುತ್ತವೆ. ಪಿತೃಲೋಕದಲ್ಲಿ ಹಣ್ಣುಗಳಿರುತ್ತವೆ. ಅಲ್ಲಿ ಮಹಾವೃಕ್ಷಗಳು ಅವನನ್ನು ಅತಿಥಿಯನ್ನಾಗಿ ಸತ್ಕರಿಸಿ ಅವನಿಗೆ ನೆರಳನ್ನು ನೀಡುತ್ತವೆ.

13099029a ಕಿಂನರೋರಗರಕ್ಷಾಂಸಿ ದೇವಗಂಧರ್ವಮಾನವಾಃ|

13099029c ತಥಾ ಋಷಿಗಣಾಶ್ಚೈವ ಸಂಶ್ರಯಂತಿ ಮಹೀರುಹಾನ್||

ಮಹಾ ವೃಕ್ಷಗಳನ್ನು ಕಿನ್ನರರು, ಉರಗ-ರಾಕ್ಷಸರು, ದೇವ-ಗಂಧರ್ವ-ಮಾನವರು ಮತ್ತು ಋಷಿಗಣಗಳು ಆಶ್ರಯಿಸುತ್ತವೆ.

13099030a ಪುಷ್ಪಿತಾಃ ಫಲವಂತಶ್ಚ ತರ್ಪಯಂತೀಹ ಮಾನವಾನ್|

13099030c ವೃಕ್ಷದಂ ಪುತ್ರವದ್ವೃಕ್ಷಾಸ್ತಾರಯಂತಿ ಪರತ್ರ ಚ||

ಮರಗಳು ತಮ್ಮ ಹೂ-ಹಣ್ಣುಗಳಿಂದ ಮನುಷ್ಯರನ್ನು ತೃಪ್ತಿಗೊಳಿಸುತ್ತವೆ. ಮರಗಳನ್ನು ನೆಟ್ಟವನನ್ನು ಅವು ಪುತ್ರನಂತೆ ಪರಲೋಕದಲ್ಲಿ ಕಾಪಾಡುತ್ತವೆ.

13099031a ತಸ್ಮಾತ್ತಡಾಗೇ ವೃಕ್ಷಾ ವೈ ರೋಪ್ಯಾಃ ಶ್ರೇಯೋರ್ಥಿನಾ ಸದಾ|

13099031c ಪುತ್ರವತ್ಪರಿಪಾಲ್ಯಾಶ್ಚ ಪುತ್ರಾಸ್ತೇ ಧರ್ಮತಃ ಸ್ಮೃತಾಃ||

ಆದುದರಿಂದ ಶ್ರೇಯಾರ್ಥಿಯಾದವನು ಸದಾ ಸರೋವರಗಳನ್ನು ನಿರ್ಮಿಸಬೇಕು ಮತ್ತು ಮರಗಳನ್ನು ನೆಡಬೇಕು. ಅವುಗಳು ಅವನನ್ನು ಪುತ್ರನಂತೆಯೇ ಕಾಪಾಡುತ್ತವೆ. ಇದೇ ನಿನ್ನ ಧರ್ಮವು.

13099032a ತಡಾಗಕೃದ್ವೃಕ್ಷರೋಪೀ ಇಷ್ಟಯಜ್ಞಶ್ಚ ಯೋ ದ್ವಿಜಃ|

13099032c ಏತೇ ಸ್ವರ್ಗೇ ಮಹೀಯಂತೇ ಯೇ ಚಾನ್ಯೇ ಸತ್ಯವಾದಿನಃ||

ಸರೋವರಗಳನ್ನು ನಿರ್ಮಿಸಿದನು ಮತ್ತು ಮರಗಳನ್ನು ನೆಟ್ಟವನು ಸತ್ಯವಾದಿಯಾದ ಮತ್ತು ಇಷ್ಟಯಜ್ಞಗಳನ್ನು ಮಾಡುವ ಬ್ರಾಹ್ಮಣನಂತೆ. ಅವನು ಸ್ವರ್ಗದಲ್ಲಿ ಮೆರೆಯುತ್ತಾನೆ.

13099033a ತಸ್ಮಾತ್ತಡಾಗಂ ಕುರ್ವೀತ ಆರಾಮಾಂಶ್ಚೈವ ರೋಪಯೇತ್|

13099033c ಯಜೇಚ್ಚ ವಿವಿಧೈರ್ಯಜ್ಞೈಃ ಸತ್ಯಂ ಚ ಸತತಂ ವದೇತ್||

ಆದುದರಿಂದ ಸರೋವರ-ಉದ್ಯಾನವನಗಳನ್ನು ನಿರ್ಮಿಸಬೇಕು. ಸತತವೂ ಸತ್ಯವನ್ನು ಆಡುವಂತೆ ಇದೂ ಕೂಡ ವಿವಿಧ ಯಜ್ಞಗಳಲ್ಲಿ ಒಂದು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಆರಾಮಾದಿನಿರ್ಮಾಣೋ ನಾಮ ನವನವತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಆರಾಮಾದಿನಿರ್ಮಾಣ ಎನ್ನುವ ತೊಂಭತ್ತೊಂಭತ್ತನೇ ಅಧ್ಯಾಯವು.

[1] ಭಾರತ ದರ್ಶನ ಸಂಪುಟದಲ್ಲಿ ಈ ಅಧ್ಯಾಯವಿಲ್ಲ. ಗೀತಾ ಪ್ರೆಸ್ ನ ಸಂಪುಟದಲ್ಲಿ ಈ ಅಧ್ಯಾಯವನ್ನು ದಕ್ಷಿಣಾತ್ಯ ಪಾಠದ ವಿಷಯವೆಂದು ಕೊಟ್ಟಿದ್ದಾರೆ.

[2] ಸಂಸ್ಕೃತಾನಾಂ (ಗೀತಾ ಪ್ರೆಸ್).

Comments are closed.