Anushasana Parva: Chapter 78

ಅನುಶಾಸನ ಪರ್ವ: ದಾನಧರ್ಮ ಪರ್ವ

೭೮

ತಪಸ್ಸಿನಿಂದ ಗೋವುಗಳಿಗೆ ಅಭೀಷ್ಟ ವರಪ್ರಾಪ್ತಿ ಮತ್ತು ಗೋದಾನದ ಮಹಿಮೆ; ವಿಭಿನ್ನ ಪ್ರಕಾರದ ಗೋವುಗಳ ದಾನದಿಂದ ವಿಭಿನ್ನ ಉತ್ತಮ ಲೋಕಪ್ರಾಪ್ತಿಯ ಕಥನ (1-27).

13078001 ವಸಿಷ್ಠ ಉವಾಚ|

13078001a ಶತಂ ವರ್ಷಸಹಸ್ರಾಣಾಂ ತಪಸ್ತಪ್ತಂ ಸುದುಶ್ಚರಮ್|

13078001c ಗೋಭಿಃ ಪೂರ್ವವಿಸೃಷ್ಟಾಭಿರ್ಗಚ್ಚೇಮ ಶ್ರೇಷ್ಠತಾಮಿತಿ||

13078002a ಲೋಕೇಽಸ್ಮಿನ್ದಕ್ಷಿಣಾನಾಂ ಚ ಸರ್ವಾಸಾಂ ವಯಮುತ್ತಮಾಃ|

13078002c ಭವೇಮ ನ ಚ ಲಿಪ್ಯೇಮ ದೋಷೇಣೇತಿ ಪರಂತಪ||

13078003a ಸ ಏವ ಚೇತಸಾ ತೇನ ಹತೋ ಲಿಪ್ಯೇತ ಸರ್ವದಾ|

13078003c ಶಕೃತಾ ಚ ಪವಿತ್ರಾರ್ಥಂ ಕುರ್ವೀರನ್ದೇವಮಾನುಷಾಃ||

13078004a ತಥಾ ಸರ್ವಾಣಿ ಭೂತಾನಿ ಸ್ಥಾವರಾಣಿ ಚರಾಣಿ ಚ|

13078004c ಪ್ರದಾತಾರಶ್ಚ ಗೋಲೋಕಾನ್ಗಚ್ಚೇಯುರಿತಿ ಮಾನದ||

ವಸಿಷ್ಠನು ಹೇಳಿದನು: “ಪರಂತಪ! ಮಾನದ! ಹಿಂದೆ ಗೋವುಗಳ ಸೃಷ್ಟಿಯಾದಾಗ ಗೋವುಗಳು ಒಂದು ಲಕ್ಷ ವರ್ಷಗಳ ಪರ್ಯಂತ ಅತ್ಯಂತ ಕಠೋರ ತಪಸ್ಸನ್ನಾಚರಿಸಿದ್ದವು. ಅವರ ತಪಸ್ಸಿನ ಉದ್ದೇಶವು ಈ ಪ್ರಕಾರವಾಗಿತ್ತು: “ನಾವು ಶ್ರೇಷ್ಠತೆಯನ್ನು ಪಡೆದುಕೊಳ್ಳಬೇಕು. ಜಗತ್ತಿನಲ್ಲಿ ದಕ್ಷಿಣೆಯಾಗಿ ನೀಡಲು ಯೋಗ್ಯವಾಗಿರುವ ಎಲ್ಲದರಲ್ಲಿ ನಾವು ಶ್ರೇಷ್ಠವೆಂದಾಗಬೇಕು. ಯಾವುದೇ ದೋಷವು ನಮಗೆ ತಗಲಬಾರದು. ಗೋಮಯದಿಂದ ಸ್ನಾನಮಾಡುವುದರಿಂದ ಎಲ್ಲರೂ ಪವಿತ್ರರಾಗಬೇಕು. ದೇವತೆಗಳು ಮತ್ತು ಮನುಶ್ಯರು ಪವಿತ್ರತೆಗಾಗಿ ಸದಾ ನಮ್ಮ ಗೋಮಯವನ್ನು ಉಪಯೋಗಿಸುವಂತಾಗಬೇಕು. ಸಮಸ್ತ ಚರಾಚರ ಪ್ರಾಣಿಗಳೂ ನಮ್ಮ ಗೋಮಯದಿಂದ ಪವಿತ್ರರಾಗಲಿ ಮತ್ತು ನಮ್ಮನ್ನು ದಾನವನ್ನಾಗಿ ನೀಡುವ ಮನುಷ್ಯನು ನಮ್ಮದೇ ಲೋಕಕ್ಕೆ ಹೋಗಲಿ.”

13078005a ತಾಭ್ಯೋ ವರಂ ದದೌ ಬ್ರಹ್ಮಾ ತಪಸೋಽಂತೇ ಸ್ವಯಂ ಪ್ರಭುಃ|

13078005c ಏವಂ ಭವತ್ವಿತಿ ವಿಭುರ್ಲೋಕಾಂಸ್ತಾರಯತೇತಿ ಚ||

ಅವರ ತಪಸ್ಸಿನ ಅಂತ್ಯದಲ್ಲಿ ಸಾಕ್ಷಾತ್ ಪ್ರಭು ಬ್ರಹ್ಮನು ಅವರಿಗೆ ಈ ವರವನ್ನಿತ್ತನು: “ಹೀಗೆಯೇ ಆಗುತ್ತದೆ. ನೀವು ಲೋಕಗಳನ್ನು ಉದ್ಧರಿಸುತ್ತೀರಿ.”

13078006a ಉತ್ತಸ್ಥುಃ ಸಿದ್ಧಿಕಾಮಾಸ್ತಾ ಭೂತಭವ್ಯಸ್ಯ ಮಾತರಃ|

[1]13078006c ತಪಸೋಽಂತೇ ಮಹಾರಾಜ ಗಾವೋ ಲೋಕಪರಾಯಣಾಃ||

ಹೀಗೆ ಕಾಮಸಿದ್ಧಿಯಾಗಲು ಭೂತಭವ್ಯದ ಮಾತರರಾದ ಗೋವುಗಳು ತಪಸ್ಸಿನಿಂದ ಮೇಲೆದ್ದವು. ಮಹಾರಾಜ! ತಪಸ್ಸಿನ ಅಂತ್ಯದಲ್ಲಿ ಗೋವುಗಳು ಲೋಕಪರಾಯಣವಾದವು.

13078007a ತಸ್ಮಾದ್ಗಾವೋ ಮಹಾಭಾಗಾಃ ಪವಿತ್ರಂ ಪರಮುಚ್ಯತೇ|

13078007c ತಥೈವ ಸರ್ವಭೂತಾನಾಂ ಗಾವಸ್ತಿಷ್ಠಂತಿ ಮೂರ್ಧನಿ||

ಆದುದ್ರಿಂದ ಮಹಾಭಾಗ ಗೋವುಗಳು ಪರಮ ಪವಿತ್ರವೆನಿಸಿಕೊಂಡಿವೆ. ಸರ್ವಭೂತಗಳ ಮಸ್ತಕದಲ್ಲಿ ಗೋವುಗಳು ನೆಲಸಿವೆ.

13078008a ಸಮಾನವತ್ಸಾಂ ಕಪಿಲಾಂ ಧೇನುಂ ದತ್ತ್ವಾ ಪಯಸ್ವಿನೀಮ್|

13078008c ಸುವ್ರತಾಂ ವಸ್ತ್ರಸಂವೀತಾಂ ಬ್ರಹ್ಮಲೋಕೇ ಮಹೀಯತೇ||

ಹಾಲುನೀಡುವ ಸುವ್ರತ ಕಪಿಲಾ ಧೇನುವನ್ನು ವಸ್ತ್ರಗಳಿಂದ ಅಲಂಕರಿಸಿ ಕಪಿಲ ವರ್ಣದ ಕರುವಿನೊಂದಿಗೆ ದಾನಮಾಡುವವನು ಬ್ರಹ್ಮಲೋಕದಲ್ಲಿ ಮೆರೆಯುತ್ತಾನೆ.

13078009a ರೋಹಿಣೀಂ ತುಲ್ಯವತ್ಸಾಂ ತು ಧೇನುಂ ದತ್ತ್ವಾ ಪಯಸ್ವಿನೀಮ್|

13078009c ಸುವ್ರತಾಂ ವಸ್ತ್ರಸಂವೀತಾಂ ಸೂರ್ಯಲೋಕೇ ಮಹೀಯತೇ||

ಹಾಲುನೀಡುವ ಸುವ್ರತ ಕೆಂಪುಬಣ್ಣದ ಧೇನುವನ್ನು ವಸ್ತ್ರಗಳಿಂದ ಅಲಂಕರಿಸಿ ಅದೇ ವರ್ಣದ ಕರುವಿನೊಂದಿಗೆ ದಾನಮಾಡುವವನು ಸೂರ್ಯಲೋಕದಲ್ಲಿ ಮೆರೆಯುತ್ತಾನೆ.

13078010a ಸಮಾನವತ್ಸಾಂ ಶಬಲಾಂ ಧೇನುಂ ದತ್ತ್ವಾ ಪಯಸ್ವಿನೀಮ್|

13078010c ಸುವ್ರತಾಂ ವಸ್ತ್ರಸಂವೀತಾಂ ಸೋಮಲೋಕೇ ಮಹೀಯತೇ||

ಹಾಲುನೀಡುವ ಸುವ್ರತ ನಾನಾ ವರ್ಣಗಳಿಂದ ಕೂಡಿದ ಧೇನುವನ್ನು ವಸ್ತ್ರಗಳಿಂದ ಅಲಂಕರಿಸಿ ಅದೇ ವರ್ಣದ ಕರುವಿನೊಂದಿಗೆ ದಾನಮಾಡುವವನು ಸೋಮಲೋಕದಲ್ಲಿ ಮೆರೆಯುತ್ತಾನೆ.

13078011a ಸಮಾನವತ್ಸಾಂ ಶ್ವೇತಾಂ ತು ಧೇನುಂ ದತ್ತ್ವಾ ಪಯಸ್ವಿನೀಮ್|

13078011c ಸುವ್ರತಾಂ ವಸ್ತ್ರಸಂವೀತಾಮಿಂದ್ರಲೋಕೇ ಮಹೀಯತೇ||

ಹಾಲುನೀಡುವ ಸುವ್ರತ ಬಿಳೀ ಬಣ್ಣದ ಧೇನುವನ್ನು ವಸ್ತ್ರಗಳಿಂದ ಅಲಂಕರಿಸಿ ಅದೇ ವರ್ಣದ ಕರುವಿನೊಂದಿಗೆ ದಾನಮಾಡುವವನು ಇಂದ್ರಲೋಕದಲ್ಲಿ ಮೆರೆಯುತ್ತಾನೆ.

13078012a ಸಮಾನವತ್ಸಾಂ ಕೃಷ್ಣಾಂ ತು ಧೇನುಂ ದತ್ತ್ವಾ ಪಯಸ್ವಿನೀಮ್|

13078012c ಸುವ್ರತಾಂ ವಸ್ತ್ರಸಂವೀತಾಮಗ್ನಿಲೋಕೇ ಮಹೀಯತೇ||

ಹಾಲುನೀಡುವ ಸುವ್ರತ ಕಪ್ಪು ಬಣ್ಣದ ಧೇನುವನ್ನು ವಸ್ತ್ರಗಳಿಂದ ಅಲಂಕರಿಸಿ ಅದೇ ವರ್ಣದ ಕರುವಿನೊಂದಿಗೆ ದಾನಮಾಡುವವನು ಅಗ್ನಿಲೋಕದಲ್ಲಿ ಮೆರೆಯುತ್ತಾನೆ.

13078013a ಸಮಾನವತ್ಸಾಂ ಧೂಮ್ರಾಂ ತು ಧೇನುಂ ದತ್ತ್ವಾ ಪಯಸ್ವಿನೀಮ್|

13078013c ಸುವ್ರತಾಂ ವಸ್ತ್ರಸಂವೀತಾಂ ಯಾಮ್ಯಲೋಕೇ ಮಹೀಯತೇ||

ಹಾಲುನೀಡುವ ಸುವ್ರತ ಬೂದು ಬಣ್ಣದ ಧೇನುವನ್ನು ವಸ್ತ್ರಗಳಿಂದ ಅಲಂಕರಿಸಿ ಅದೇ ವರ್ಣದ ಕರುವಿನೊಂದಿಗೆ ದಾನಮಾಡುವವನು ಯಮಲೋಕದಲ್ಲಿ ಮೆರೆಯುತ್ತಾನೆ.

13078014a ಅಪಾಂ ಫೇನಸವರ್ಣಾಂ ತು ಸವತ್ಸಾಂ ಕಾಂಸ್ಯದೋಹನಾಮ್|

13078014c ಪ್ರದಾಯ ವಸ್ತ್ರಸಂವೀತಾಂ ವಾರುಣಂ ಲೋಕಮಶ್ನುತೇ||

ನೀರಿನ ನೊರೆಯ ಬಣ್ಣದ ಧೇನುವನ್ನು ವಸ್ತ್ರಗಳಿಂದ ಅಲಂಕರಿಸಿ ಕಂಚಿನ ಹಾಲುಕರೆಯುವ ಪಾತ್ರೆ ಮತ್ತು ಕರುವಿನೊಂದಿಗೆ ದಾನಮಾಡುವವನು ವರುಣಲೋಕದಲ್ಲಿ ಮೆರೆಯುತ್ತಾನೆ.

13078015a ವಾತರೇಣುಸವರ್ಣಾಂ ತು ಸವತ್ಸಾಂ ಕಾಂಸ್ಯದೋಹನಾಮ್|

13078015c ಪ್ರದಾಯ ವಸ್ತ್ರಸಂವೀತಾಂ ವಾಯುಲೋಕೇ ಮಹೀಯತೇ||

ಗಾಳಿಯಿಂದ ಮೇಲೆದ್ದ ಧೂಳಿನ ಬಣ್ಣದ ಧೇನುವನ್ನು ವಸ್ತ್ರಗಳಿಂದ ಅಲಂಕರಿಸಿ ಕಂಚಿನ ಹಾಲುಕರೆಯುವ ಪಾತ್ರೆ ಮತ್ತು ಕರುವಿನೊಂದಿಗೆ ದಾನಮಾಡುವವನು ವಾಯುಲೋಕದಲ್ಲಿ ಮೆರೆಯುತ್ತಾನೆ.

13078016a ಹಿರಣ್ಯವರ್ಣಾಂ ಪಿಂಗಾಕ್ಷೀಂ ಸವತ್ಸಾಂ ಕಾಂಸ್ಯದೋಹನಾಮ್|

13078016c ಪ್ರದಾಯ ವಸ್ತ್ರಸಂವೀತಾಂ ಕೌಬೇರಂ ಲೋಕಮಶ್ನುತೇ||

ಹಿರಣ್ಯವರ್ಣದ ಪಿಂಗಲ ವರ್ಣದ ಕಣ್ಣುಗಳುಳ್ಳ ಧೇನುವನ್ನು ವಸ್ತ್ರಗಳಿಂದ ಅಲಂಕರಿಸಿ ಕಂಚಿನ ಹಾಲುಕರೆಯುವ ಪಾತ್ರೆ ಮತ್ತು ಕರುವಿನೊಂದಿಗೆ ದಾನಮಾಡುವವನು ಕುಬೇರಲೋಕವನ್ನು ಪಡೆಯುತ್ತಾನೆ.

13078017a ಪಲಾಲಧೂಮ್ರವರ್ಣಾಂ ತು ಸವತ್ಸಾಂ ಕಾಂಸ್ಯದೋಹನಾಮ್|

13078017c ಪ್ರದಾಯ ವಸ್ತ್ರಸಂವೀತಾಂ ಪಿತೃಲೋಕೇ ಮಹೀಯತೇ||

ಎಳ್ಳಿನ ಬಣ್ಣದ ಧೇನುವನ್ನು ವಸ್ತ್ರಗಳಿಂದ ಅಲಂಕರಿಸಿ ಕಂಚಿನ ಹಾಲುಕರೆಯುವ ಪಾತ್ರೆ ಮತ್ತು ಕರುವಿನೊಂದಿಗೆ ದಾನಮಾಡುವವನು ಪಿತೃಲೋಕದಲ್ಲಿ ಮೆರೆಯುತ್ತಾನೆ.

13078018a ಸವತ್ಸಾಂ ಪೀವರೀಂ ದತ್ತ್ವಾ ಶಿತಿಕಂಠಾಮಲಂಕೃತಾಮ್|

13078018c ವೈಶ್ವದೇವಮಸಂಬಾಧಂ ಸ್ಥಾನಂ ಶ್ರೇಷ್ಠಂ ಪ್ರಪದ್ಯತೇ||

ನವಿಲುಗರಿಗಳಿಂದ ಅಲಂಕೃತ ದಪ್ಪ ಹಸುವನ್ನು ಕರುವಿನೊಂದಿಗೆ ದಾನಮಾಡಿದವನು ಯಾವ ಬಾಧೆಗಳೂ ಇಲ್ಲದೇ ವೈಶ್ವದೇವನ ಶ್ರೇಷ್ಠ ಸ್ಥಾನವನ್ನು ಪಡೆದುಕೊಳ್ಳುತ್ತಾನೆ.

13078019a ಸಮಾನವತ್ಸಾಂ ಗೌರೀಂ ತು ಧೇನುಂ ದತ್ತ್ವಾ ಪಯಸ್ವಿನೀಮ್|

13078019c ಸುವ್ರತಾಂ ವಸ್ತ್ರಸಂವೀತಾಂ ವಸೂನಾಂ ಲೋಕಮಶ್ನುತೇ||

ಹಾಲುನೀಡುವ ಸುವ್ರತ ಗೌರ ವರ್ಣದ ಧೇನುವನ್ನು ವಸ್ತ್ರಗಳಿಂದ ಅಲಂಕರಿಸಿ ಅದೇ ವರ್ಣದ ಕರುವಿನೊಂದಿಗೆ ದಾನಮಾಡುವವನು ವಸುಲೋಕವನ್ನು ಪಡೆಯುತ್ತಾನೆ.

13078020a ಪಾಂಡುಕಂಬಲವರ್ಣಾಂ ತು ಸವತ್ಸಾಂ ಕಾಂಸ್ಯದೋಹನಾಮ್|

13078020c ಪ್ರದಾಯ ವಸ್ತ್ರಸಂವೀತಾಂ ಸಾಧ್ಯಾನಾಂ ಲೋಕಮಶ್ನುತೇ||

ಬಿಳೀಕಂಬಳಿಯ ಬಣ್ಣದ ಧೇನುವನ್ನು ವಸ್ತ್ರಗಳಿಂದ ಅಲಂಕರಿಸಿ ಕರು ಮತ್ತು ಕಂಚಿನ ಹಾಲುಕರೆಯುವ ಪಾತ್ರೆಗಳೊಂದಿಗೆ ದಾನಮಾಡುವವನು ಸಾಧ್ಯರ ಲೋಕವನ್ನು ಪಡೆಯುತ್ತಾನೆ.

13078021a ವೈರಾಟಪೃಷ್ಠಮುಕ್ಷಾಣಂ ಸರ್ವರತ್ನೈರಲಂಕೃತಮ್|

13078021c ಪ್ರದಾಯ ಮರುತಾಂ ಲೋಕಾನಜರಾನ್ ಪ್ರತಿಪದ್ಯತೇ||

ವಿಶಾಲ ಪೃಷ್ಠವಿರುವ ಹೋರಿಯನ್ನು ಸರ್ವರತ್ನಗಳಿಂದ ಅಲಂಕರಿಸಿ ದಾನಮಾಡುವವನು ಅಜರವಾದ ಮರುತ್ತರ ಲೋಕವನ್ನು ಪಡೆಯುತ್ತಾನೆ.

13078022a ವತ್ಸೋಪಪನ್ನಾಂ ನೀಲಾಂಗಾಂ[2] ಸರ್ವರತ್ನಸಮನ್ವಿತಾಮ್|

13078022c ಗಂಧರ್ವಾಪ್ಸರಸಾಂ ಲೋಕಾನ್ದತ್ತ್ವಾ ಪ್ರಾಪ್ನೋತಿ ಮಾನವಃ||

ಕರುವಿನಿಂದ ಕೂಡಿದ ನೀಲಾಂಗೀ ಧೇನುವನ್ನು ಸರ್ವರತ್ನಗಳಿಂದ ಅಲಂಕರಿಸಿ ದಾನಮಾಡಿದ ಮಾನವನು ಗಂಧರ್ವರು ಮತ್ತು ಅಪ್ಸರೆಯರ ಲೋಕವನ್ನು ಪಡೆಯುತ್ತಾನೆ.

13078023a ಶಿತಿಕಂಠಮನಡ್ವಾಹಂ ಸರ್ವರತ್ನೈರಲಂಕೃತಮ್|

13078023c ದತ್ತ್ವಾ ಪ್ರಜಾಪತೇರ್ಲೋಕಾನ್ವಿಶೋಕಃ ಪ್ರತಿಪದ್ಯತೇ||

ಭಾರವನ್ನು ಹೊರಬಲ್ಲ ಹೋರಿಯನ್ನು ನವಿಲುಗರಿ ಮತ್ತು ಸರ್ವರತ್ನಗಳಿಂದ ಅಲಂಕರಿಸಿ ದಾನವಿತ್ತವನಿಗೆ ಶೋಕರಹಿತವಾದ ಪ್ರಜಾಪತಿಯ ಲೋಕವು ದೊರೆಯುತ್ತದೆ.

13078024a ಗೋಪ್ರದಾನರತೋ ಯಾತಿ ಭಿತ್ತ್ವಾ ಜಲದಸಂಚಯಾನ್|

13078024c ವಿಮಾನೇನಾರ್ಕವರ್ಣೇನ ದಿವಿ ರಾಜನ್ವಿರಾಜತಾ||

ರಾಜನ್! ಗೋದಾನದಲ್ಲಿ ತತ್ಪರನಾದ ಪುರುಷನು ಸೂರ್ಯನಂತಹ ದೇದೀಪ್ಯಮಾನ ವಿಮಾನದಲ್ಲಿ ಕುಳಿತು ಮೇಘಮಂಡಲಗಳನ್ನು ಭೇದಿಸುತ್ತಾ ಸ್ವರ್ಗವನ್ನು ಸೇರಿ ಸುಶೋಭಿಸುತ್ತಾನೆ.

13078025a ತಂ ಚಾರುವೇಷಾಃ ಸುಶ್ರೋಣ್ಯಃ ಸಹಸ್ರಂ ವರಯೋಷಿತಃ|

13078025c ರಮಯಂತಿ ನರಶ್ರೇಷ್ಠ ಗೋಪ್ರದಾನರತಂ ನರಮ್||

ನರಶ್ರೇಷ್ಠ! ಗೋದಾನರತನಾದ ನರನನ್ನು ಸುಂದರ ವೇಷದ ಸಹಸ್ರಾರು ಸುಶ್ರೋಣೀ ಶ್ರೇಷ್ಠ ಸ್ತ್ರೀಯರು ರಮಿಸುತ್ತಾರೆ.

13078026a ವೀಣಾನಾಂ ವಲ್ಲಕೀನಾಂ ಚ ನೂಪುರಾಣಾಂ ಚ ಶಿಂಜಿತೈಃ|

13078026c ಹಾಸೈಶ್ಚ ಹರಿಣಾಕ್ಷೀಣಾಂ ಪ್ರಸುಪ್ತಃ ಪ್ರತಿಬೋಧ್ಯತೇ||

ಅಂಥವನನ್ನು ವೀಣೆ-ವಲ್ಲಕಿಗಳ ಮತ್ತು ನೂಪುರಗಳ ಗುಂಜನಗಳಿಂದ ಮತ್ತು ನಗೆಗಳಿಂದ ಹರಿಣಾಕ್ಷಿಯರು ನಿದ್ರೆಯಿಂದ ಎಚ್ಚರಿಸುತ್ತಾರೆ.

13078027a ಯಾವಂತಿ ಲೋಮಾನಿ ಭವಂತಿ ಧೇನ್ವಾಸ್

ತಾವಂತಿ ವರ್ಷಾಣಿ ಮಹೀಯತೇ ಸಃ|

13078027c ಸ್ವರ್ಗಾಚ್ಚ್ಯುತಶ್ಚಾಪಿ ತತೋ ನೃಲೋಕೇ

ಕುಲೇ ಸಮುತ್ಪತ್ಸ್ಯತಿ ಗೋಮಿನಾಂ ಸಃ||

ಗೋವಿನ ಶರೀರದಲ್ಲಿ ಎಷ್ಟು ರೋಮಗಳಿವೆಯೋ ಅಷ್ಟು ವರ್ಷಗಳ ಪರ್ಯಂತ ಅವನು ಸ್ವರ್ಗಲೋಕದಲ್ಲಿ ಸಮ್ಮಾನಿತನಾಗಿರುತ್ತಾನೆ. ನಂತರ ಪುಣ್ಯಕ್ಷೀಣವಾಗಲು ಸ್ವರ್ಗದಿಂದ ಕೆಳಗಿಳಿದು ಮನುಷ್ಯಲೋಕದಲ್ಲಿ ಪುನಃ ಬಂದು ಸಂಪನ್ನ ಕುಲದಲ್ಲಿಯೇ ಜನ್ಮವೆತ್ತುತ್ತಾನೆ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಗೋಪ್ರದಾನಿಕೇ ಅಷ್ಟಸಪ್ತತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಗೋಪ್ರದಾನಿಕ ಎನ್ನುವ ಎಪ್ಪತ್ತೆಂಟನೇ ಅಧ್ಯಾಯವು.

[1] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಪ್ರಾತರ್ನಮಸ್ಯಾಸ್ತಾ ಗಾವಸ್ತತಃ ಪುಷ್ಟಿಮವಾಪ್ನುಯಾತ್|

[2] ವಯೋಪಪನ್ನಂ ಲೀಲಾಂಗಂ (ಗೀತಾ ಪ್ರೆಸ್).

Comments are closed.