Anushasana Parva: Chapter 32

ಅನುಶಾಸನ ಪರ್ವ: ದಾನಧರ್ಮ ಪರ್ವ

೩೨

ಪೂಜ್ಯಪುರುಷವರ್ಣನ

ಮಾನವರಲ್ಲಿ ಯಾರು ಪೂಜ್ಯರು ಮತ್ತು ನಮಸ್ಕಾರಕ್ಕೆ ಅರ್ಹರು ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಕೃಷ್ಣ-ನಾರದರ ಸಂಭಾಷಣೆಯನ್ನು ಉದಾಹರಿಸುವುದು (೧-೩೩).

13032001 ಯುಧಿಷ್ಠಿರ ಉವಾಚ|

13032001a ಕೇ ಪೂಜ್ಯಾಃ ಕೇ ನಮಸ್ಕಾರ್ಯಾ ಮಾನವೈರ್ಭರತರ್ಷಭ|

13032001c ವಿಸ್ತರೇಣ ತದಾಚಕ್ಷ್ವ ನ ಹಿ ತೃಪ್ಯಾಮಿ ಕಥ್ಯತಾಮ್||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಮಾನವರಲ್ಲಿ ಯಾರು ಪೂಜ್ಯರು ಮತ್ತು ಯಾರು ನಮಸ್ಕಾರಕ್ಕರ್ಹರು? ಅದನ್ನು ವಿಸ್ತಾರವಾಗಿ ಹೇಳು. ಏಕೆಂದರೆ ಕೇಳುವುದರಲ್ಲಿ ನಾನು ಇನ್ನೂ ತೃಪ್ತನಾಗಿಲ್ಲ.”

13032002 ಭೀಷ್ಮ ಉವಾಚ|

13032002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13032002c ನಾರದಸ್ಯ ಚ ಸಂವಾದಂ ವಾಸುದೇವಸ್ಯ ಚೋಭಯೋಃ||

ಭೀಷ್ಮನು ಹೇಳಿದನು: “ಇದಕ್ಕೆ ಪುರಾತನ ಇತಿಹಾಸವಾದ ವಾಸುದೇವ ಮತ್ತು ನಾರದರಿಬ್ಬರ ನಡುವಿನ ಸಂವಾದವನ್ನು ಉದಾಹರಿಸುತ್ತಾರೆ.

13032003a ನಾರದಂ ಪ್ರಾಂಜಲಿಂ ದೃಷ್ಟ್ವಾ ಪೂಜಯಾನಂ ದ್ವಿಜರ್ಷಭಾನ್|

13032003c ಕೇಶವಃ ಪರಿಪಪ್ರಚ್ಚ ಭಗವನ್ಕಾನ್ನಮಸ್ಯಸಿ||

ನಾರದನು ಅಂಜಲೀ ಬದ್ಧನಾಗಿದ್ದುದನ್ನು ನೋಡಿ ದ್ವಿಜರ್ಷಭರನ್ನು ಪೂಜಿಸುತ್ತಿದ್ದ ಕೇಶವನು ಕೇಳಿದನು: “ಭಗವನ್! ಏಕೆ ನಮಸ್ಕರಿಸುತ್ತಿದ್ದೀರಿ?

13032004a ಬಹುಮಾನಃ ಪರಃ ಕೇಷು ಭವತೋ ಯಾನ್ನಮಸ್ಯಸಿ|

13032004c ಶಕ್ಯಂ ಚೇಚ್ಚ್ರೋತುಮಿಚ್ಚಾಮಿ ಬ್ರೂಹ್ಯೇತದ್ಧರ್ಮವಿತ್ತಮ||

ನೀವು ಯಾರನ್ನು ಪರಮ ಗೌರವಿಸುತ್ತೀರಿ? ನೀವು ಯಾರನ್ನು ನಮಸ್ಕರಿಸುತ್ತೀರಿ? ಧರ್ಮವಿತ್ತಮ! ಶಕ್ಯನಾದರೆ ಕೇಳಬಯಸುತ್ತೇನೆ. ಹೇಳಿ!”

13032005 ನಾರದ ಉವಾಚ|

13032005a ಶೃಣು ಗೋವಿಂದ ಯಾನೇತಾನ್ಪೂಜಯಾಮ್ಯರಿಮರ್ದನ|

13032005c ತ್ವತ್ತೋಽನ್ಯಃ ಕಃ ಪುಮಾಽಲ್ಲೋಕೇ ಶ್ರೋತುಮೇತದಿಹಾರ್ಹತಿ||

ನಾರದನು ಹೇಳಿದನು: “ಗೋವಿಂದ! ಅರಿಮರ್ದನ! ನಾನು ಯಾರನ್ನು ಪೂಜಿಸುತ್ತೇನೆನ್ನುವುದನ್ನು ಕೇಳು. ಇದನ್ನು ಕೇಳಲು ಲೋಕದಲ್ಲಿ ನೀನಲ್ಲದೇ ಬೇರೆ ಯಾರು ಅರ್ಹರಾಗಿದ್ದಾರೆ?

13032006a ವರುಣಂ ವಾಯುಮಾದಿತ್ಯಂ ಪರ್ಜನ್ಯಂ ಜಾತವೇದಸಮ್|

13032006c ಸ್ಥಾಣುಂ ಸ್ಕಂದಂ ತಥಾ ಲಕ್ಷ್ಮೀಂ ವಿಷ್ಣುಂ ಬ್ರಹ್ಮಾಣಮೇವ ಚ||

13032007a ವಾಚಸ್ಪತಿಂ ಚಂದ್ರಮಸಮಪಃ ಪೃಥ್ವೀಂ ಸರಸ್ವತೀಮ್|

13032007c ಸತತಂ ಯೇ ನಮಸ್ಯಂತಿ ತಾನ್ನಮಸ್ಯಾಮ್ಯಹಂ ವಿಭೋ||

ವಿಭೋ! ಯಾರು ವರುಣ, ವಾಯು, ಆದಿತ್ಯ, ಪರ್ಜನ್ಯ, ಜಾತವೇದಸ, ಸ್ಥಾಣು, ಸ್ಕಂದ, ಲಕ್ಷ್ಮೀ, ವಿಷ್ಣು, ಬ್ರಹ್ಮ, ವಾಸಸ್ಪತಿ, ಚಂದ್ರಮಸ, ನೀರು, ಪೃಥ್ವಿ ಮತ್ತು ಸರಸ್ವತಿ – ಇವರನ್ನು ಸತತವೂ ನಮಸ್ಕರಿಸುವರೋ ಅವರನ್ನು ನಾನು ನಮಸ್ಕರಿಸುತ್ತೇನೆ.

13032008a ತಪೋಧನಾನ್ವೇದವಿದೋ ನಿತ್ಯಂ ವೇದಪರಾಯಣಾನ್|

13032008c ಮಹಾರ್ಹಾನ್ವೃಷ್ಣಿಶಾರ್ದೂಲ ಸದಾ ಸಂಪೂಜಯಾಮ್ಯಹಮ್||

ವೃಷ್ಣಿಶಾರ್ದೂಲ! ತಪೋಧನರನ್ನು, ವೇದವಿದುಗಳನ್ನು, ನಿತ್ಯ ವೇದಪರಾಯಣರನ್ನು – ಈ ಅತ್ಯಂತ ದುರ್ಲಭರನ್ನು ಸದಾ ಸಂಪೂಜಿಸುತ್ತೇನೆ.  

13032009a ಅಭುಕ್ತ್ವಾ ದೇವಕಾರ್ಯಾಣಿ ಕುರ್ವತೇ ಯೇಽವಿಕತ್ಥನಾಃ|

13032009c ಸಂತುಷ್ಟಾಶ್ಚ ಕ್ಷಮಾಯುಕ್ತಾಸ್ತಾನ್ನಮಸ್ಯಾಮ್ಯಹಂ ವಿಭೋ||

ವಿಭೋ! ಆಹಾರಸೇವಿಸದೇ ದೇವಕಾರ್ಯವನ್ನು ಮಾಡುವವರನ್ನು, ತಮ್ಮನ್ನು ತಾವೇ ಹೊಗಳಿಕೊಳ್ಳದಿರುವವರನ್ನು, ಸಂತುಷ್ಟರನ್ನು ಮತ್ತು ಕ್ಷಮಾವಂತರನ್ನು ನಾನು ನಮಸ್ಕರಿಸುತ್ತೇನೆ.

13032010a ಸಮ್ಯಗ್ದದತಿ ಯೇ ಚೇಷ್ಟಾನ್ಕ್ಷಾಂತಾ ದಾಂತಾ ಜಿತೇಂದ್ರಿಯಾಃ|

13032010c ಸಸ್ಯಂ ಧನಂ ಕ್ಷಿತಿಂ ಗಾಶ್ಚ ತಾನ್ನಮಸ್ಯಾಮಿ ಯಾದವ||

ಯಾದವ! ಚೆನ್ನಾಗಿ ಇಷ್ಟಿ-ದಾನಗಳನ್ನು ಮಾಡಿರುವವನು, ದಾಂತನು. ಜಿತೇಂದ್ರಿಯನು, ಸಸ್ಯ-ಧನ-ಭೂಮಿ ಮತ್ತು ಗೋವುಗಳನ್ನು ರಕ್ಷಿಸುವವನನ್ನು ನಾನು ನಮಸ್ಕರಿಸುತ್ತೇನೆ.

13032011a ಯೇ ತೇ ತಪಸಿ ವರ್ತಂತೇ ವನೇ ಮೂಲಫಲಾಶನಾಃ|

13032011c ಅಸಂಚಯಾಃ ಕ್ರಿಯಾವಂತಸ್ತಾನ್ನಮಸ್ಯಾಮಿ ಯಾದವ||

ಯಾದವ! ವನದಲ್ಲಿ ಮೂಲ-ಫಲಗಳನ್ನು ತಿನ್ನುತ್ತಾ ತಪಸ್ಸಿನಲ್ಲಿ ನಿರತರಾದವರು, ಸಂಗ್ರಹಿಸದೇ ಇರುವ ಕ್ರಿಯಾವಂತರನ್ನು ನಾನು ನಮಸ್ಕರಿಸುತ್ತೇನೆ.

13032012a ಯೇ ಭೃತ್ಯಭರಣೇ ಸಕ್ತಾಃ ಸತತಂ ಚಾತಿಥಿಪ್ರಿಯಾಃ|

13032012c ಭುಂಜಂತೇ ದೇವಶೇಷಾಣಿ ತಾನ್ನಮಸ್ಯಾಮಿ ಯಾದವ||

ಯಾದವ! ಕುಟುಂಬ ಮತ್ತು ಸೇವಕರ ಭರಣ-ಪೋಷಣೆಗಳನ್ನು ಮಾಡುವ, ಸತತವೂ ಅತಿಥಿಪ್ರಿಯರಾಗಿರುವ, ದೇವರಿಗೆ ಕೊಟ್ಟು ಉಳಿದುದನ್ನು ಭುಂಜಿಸುವವನನ್ನು ನಾನು ನಮಸ್ಕರಿಸುತ್ತೇನೆ.

13032013a ಯೇ ವೇದಂ ಪ್ರಾಪ್ಯ ದುರ್ಧರ್ಷಾ ವಾಗ್ಮಿನೋ ಬ್ರಹ್ಮವಾದಿನಃ|

13032013c ಯಾಜನಾಧ್ಯಾಪನೇ ಯುಕ್ತಾ ನಿತ್ಯಂ ತಾನ್ಪೂಜಯಾಮ್ಯಹಮ್||

ವೇದವನ್ನು ಪಡೆದು ದುರ್ಧರ್ಷರೂ ವಾಗ್ಮಿಗಳೂ ಬ್ರಹ್ಮವಾದಿಗಳೂ ಆದ, ಮತ್ತು ಯಾಜನ-ಅಧ್ಯಾಪನಗಳಲ್ಲಿ ನಿತ್ಯವೂ ಯುಕ್ತರಾಗಿರುವವರನ್ನು ನಾನು ಪೂಜಿಸುತ್ತೇನೆ.

13032014a ಪ್ರಸನ್ನಹೃದಯಾಶ್ಚೈವ ಸರ್ವಸತ್ತ್ವೇಷು ನಿತ್ಯಶಃ|

13032014c ಆ ಪೃಷ್ಠತಾಪಾತ್ಸ್ವಾಧ್ಯಾಯೇ ಯುಕ್ತಾಸ್ತಾನ್ಪೂಜಯಾಮ್ಯಹಮ್||

ಸರ್ವಸತ್ವಗಳ ಕುರಿತು ಪ್ರಸನ್ನಹೃದಯಿಗಳಾಗಿರುವ, ನಿತ್ಯವೂ ಮಧ್ಯಾಹ್ನದ ವರೆಗೆ ಸ್ವಾಧ್ಯಾಯದಲ್ಲಿ ಯುಕ್ತರಾಗಿರುವವರನ್ನು ನಾನು ಪೂಜಿಸುತ್ತೇನೆ.

13032015a ಗುರುಪ್ರಸಾದೇ ಸ್ವಾಧ್ಯಾಯೇ ಯತಂತೇ ಯೇ ಸ್ಥಿರವ್ರತಾಃ|

13032015c ಶುಶ್ರೂಷವೋಽನಸೂಯಂತಸ್ತಾನ್ನಮಸ್ಯಾಮಿ ಯಾದವ||

ಯಾದವ! ಗುರುವನ್ನು ಪ್ರಸನ್ನಗೊಳಿಸುವುದರಲ್ಲಿ ಮತ್ತು ಸ್ವಾಧ್ಯಾಯದಲ್ಲಿ ಪ್ರಯತ್ನಪಡುತ್ತಿರುವ ಸ್ಥಿರವ್ರತರು ಮತ್ತು ಅನಸೂಯೆಯಿಲ್ಲದೇ ಶುಶ್ರೂಷೆಮಾಡುವವರನ್ನು ನಾನು ನಮಸ್ಕರಿಸುತ್ತೇನೆ.

13032016a ಸುವ್ರತಾ ಮುನಯೋ ಯೇ ಚ ಬ್ರಹ್ಮಣ್ಯಾಃ ಸತ್ಯಸಂಗರಾಃ|

13032016c ವೋಢಾರೋ ಹವ್ಯಕವ್ಯಾನಾಂ ತಾನ್ನಮಸ್ಯಾಮಿ ಯಾದವ||

ಯಾದವ! ಸುವ್ರತ ಮುನಿಗಳು, ಸತ್ಯಸಂಗರ ಬ್ರಹ್ಮಣ್ಯರು ಮತ್ತು ಹವ್ಯ-ಕವ್ಯಗಳನ್ನು ನಿರ್ವಹಿಸುವವರನ್ನು ನಾನು ನಮಸ್ಕರಿಸುತ್ತೇನೆ.

13032017a ಭೈಕ್ಷ್ಯಚರ್ಯಾಸು ನಿರತಾಃ ಕೃಶಾ ಗುರುಕುಲಾಶ್ರಯಾಃ|

13032017c ನಿಃಸುಖಾ ನಿರ್ಧನಾ ಯೇ ಚ ತಾನ್ನಮಸ್ಯಾಮಿ ಯಾದವ||

ಯಾದವ! ಭೈಕ್ಷ್ಯಚರ್ಯದಲ್ಲಿ ನಿರತರಾಗಿರುವವರು, ಗುರುಕುಲಾಶ್ರಯದಲ್ಲಿ ಕೃಶರಾದವರು, ಸುಖವಿಲ್ಲದವರು, ನಿರ್ಧನರು – ಇವರನ್ನು ನಾನು ನಮಸ್ಕರಿಸುತ್ತೇನೆ.

13032018a ನಿರ್ಮಮಾ ನಿಷ್ಪ್ರತಿದ್ವಂದ್ವಾ ನಿರ್ಹ್ರೀಕಾ ನಿಷ್ಪ್ರಯೋಜನಾಃ|

13032018c ಅಹಿಂಸಾನಿರತಾ ಯೇ ಚ ಯೇ ಚ ಸತ್ಯವ್ರತಾ ನರಾಃ|

13032018e ದಾಂತಾಃ ಶಮಪರಾಶ್ಚೈವ ತಾನ್ನಮಸ್ಯಾಮಿ ಕೇಶವ||

ಕೇಶವ! ಮಮಕಾರವಿಲ್ಲದವರೂ, ದ್ವಂದ್ವರಹಿತರಾದವರೂ, ನಾಚಿಕೆಯಿಲ್ಲದವರೂ, ನಿಷ್ಪ್ರಯೋಜನರೂ, ಅಹಿಂಸಾನಿರತರೂ, ಸತ್ಯವ್ರತ ನರರೂ, ದಾಂತರೂ, ಶಮಪರರೂ ಆದವರನ್ನು ನಾನು ನಮಸ್ಕರಿಸುತ್ತೇನೆ.

13032019a ದೇವತಾತಿಥಿಪೂಜಾಯಾಂ ಪ್ರಸಕ್ತಾ ಗೃಹಮೇಧಿನಃ|

13032019c ಕಪೋತವೃತ್ತಯೋ ನಿತ್ಯಂ ತಾನ್ನಮಸ್ಯಾಮಿ ಯಾದವ||

ಯಾದವ! ದೇವ-ಅತಿಥಿಪೂಜನೆಗಳಲ್ಲಿ ಪ್ರಸಕ್ತರಾಗಿರುವ, ನಿತ್ಯವೂ ಕಪೋತವೃತ್ತಿಯಲ್ಲಿರುವ ಗೃಹಸ್ಥರನ್ನು ನಾನು ನಮಸ್ಕರಿಸುತ್ತೇನೆ.

13032020a ಯೇಷಾಂ ತ್ರಿವರ್ಗಃ ಕೃತ್ಯೇಷು ವರ್ತತೇ ನೋಪಹೀಯತೇ|

13032020c ಶಿಷ್ಟಾಚಾರಪ್ರವೃತ್ತಾಶ್ಚ ತಾನ್ನಮಸ್ಯಾಮ್ಯಹಂ ಸದಾ||

ಯಾರ ಕೃತ್ಯಗಳಲ್ಲಿ ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಗಳೂ ಅಡಕವಾಗಿರುವವೋ, ಯಾವುದಕ್ಕೂ ಹಾನಿಯುಂಟಾಗದಂತೆ ಯಾರು ನಡೆದುಕೊಳ್ಳುತ್ತಾರೋ, ಯಾರು ಶಿಷ್ಟಾಚಾರಪ್ರವೃತ್ತರೋ ಅವರನ್ನು ಸದಾ ನಾನು ನಮಸ್ಕರಿಸುತ್ತೇನೆ.

13032021a ಬ್ರಾಹ್ಮಣಾಸ್ತ್ರಿಷು ಲೋಕೇಷು ಯೇ ತ್ರಿವರ್ಗಮನುಷ್ಠಿತಾಃ|

13032021c ಅಲೋಲುಪಾಃ ಪುಣ್ಯಶೀಲಾಸ್ತಾನ್ನಮಸ್ಯಾಮಿ ಕೇಶವ||

ಕೇಶವ! ಮೂರು ಲೋಕಗಳಲ್ಲಿಯೂ ತ್ರಿವರ್ಗವನ್ನು ಸಾಧಿಸುವ, ಯಾವುದಕ್ಕೂ ಲೋಪವುಂಟಾಗದೇ ಇರುವ ಪುಣ್ಯಶೀಲ ಬ್ರಾಹ್ಮಣರನ್ನು ನಾನು ನಮಸ್ಕರಿಸುತ್ತೇನೆ.

13032022a ಅಬ್ಭಕ್ಷಾ ವಾಯುಭಕ್ಷಾಶ್ಚ ಸುಧಾಭಕ್ಷಾಶ್ಚ ಯೇ ಸದಾ|

13032022c ವ್ರತೈಶ್ಚ ವಿವಿಧೈರ್ಯುಕ್ತಾಸ್ತಾನ್ನಮಸ್ಯಾಮಿ ಮಾಧವ||

ಮಾಧವ! ನೀರನ್ನು ಸೇವಿಸುತ್ತಾ, ವಾಯುವನ್ನು ಸೇವಿಸುತ್ತಾ ಮತ್ತು ಸದಾ ಯಜ್ಞೋಶಿಷ್ಟವನ್ನು ಸೇವಿಸುತ್ತಾ ವಿವಿಧ ವ್ರತಗಳಲ್ಲಿ ಯುಕ್ತರಾದವರನ್ನು ನಾನು ನಮಸ್ಕರಿಸುತ್ತೇನೆ.

13032023a ಅಯೋನೀನಗ್ನಿಯೋನೀಂಶ್ಚ ಬ್ರಹ್ಮಯೋನೀಂಸ್ತಥೈವ ಚ|

13032023c ಸರ್ವಭೂತಾತ್ಮಯೋನೀಂಶ್ಚ ತಾನ್ನಮಸ್ಯಾಮ್ಯಹಂ ದ್ವಿಜಾನ್||

ಅಯೋನಿಗಳು, ಅಗ್ನಿಯೋನಿಗಳು, ಬ್ರಹ್ಮಯೋನಿಗಳು, ಮತ್ತು ಸರ್ವಭೂತಾತ್ಮಯೋನಿ ದ್ವಿಜರನ್ನು ನಾನು ನಮಸ್ಕರಿಸುತ್ತೇನೆ.

13032024a ನಿತ್ಯಮೇತಾನ್ನಮಸ್ಯಾಮಿ ಕೃಷ್ಣ ಲೋಕಕರಾನೃಷೀನ್|

13032024c ಲೋಕಜ್ಯೇಷ್ಠಾನ್ ಜ್ಞಾನನಿಷ್ಠಾಂಸ್ತಮೋಘ್ನಾಽಲ್ಲೋಕಭಾಸ್ಕರಾನ್||

ಕೃಷ್ಣ! ಲೋಕಜ್ಯೇಷ್ಠರನ್ನೂ, ಅಜ್ಞಾನವೆಂಬ ತಮವನ್ನು ಕಳೆಯುವ ಲೋಕ ಭಾಸ್ಕರರಂತಿರುವ ಜ್ಞಾನನಿಷ್ಠರನ್ನೂ, ಲೋಕಕರ ಋಷಿಗಳನ್ನೂ ನಾನು ನಿತ್ಯವೂ ನಮಸ್ಕರಿಸುತ್ತೇನೆ.

13032025a ತಸ್ಮಾತ್ತ್ವಮಪಿ ವಾರ್ಷ್ಣೇಯ ದ್ವಿಜಾನ್ಪೂಜಯ ನಿತ್ಯದಾ|

13032025c ಪೂಜಿತಾಃ ಪೂಜನಾರ್ಹಾ ಹಿ ಸುಖಂ ದಾಸ್ಯಂತಿ ತೇಽನಘ||

ಅನಘ! ವಾರ್ಷ್ಣೇಯ! ಆದುದರಿಂದ ನೀನೂ ಕೂಡ ನಿತ್ಯವೂ ದ್ವಿಜರನ್ನು ಪೂಜಿಸು. ಪೂಜಿಸಿದ ಪೂಜನಾರ್ಹರು ಸುಖವನ್ನು ಕರುಣಿಸುತ್ತಾರೆ.

13032026a ಅಸ್ಮಿಽಲ್ಲೋಕೇ ಸದಾ ಹ್ಯೇತೇ ಪರತ್ರ ಚ ಸುಖಪ್ರದಾಃ|

13032026c ತ ಏತೇ ಮಾನ್ಯಮಾನಾ ವೈ ಪ್ರದಾಸ್ಯಂತಿ ಸುಖಂ ತವ||

ಇವರು ಲೋಕದಲ್ಲಿ ಸದಾ ಇತರರಿಗೆ ಸುಖವನ್ನು ನೀಡುತ್ತಾರೆ. ಗೌರವಿಸಿದ ನಿನಗೂ ಕೂಡ ಇವರು ಸುಖವನ್ನು ನೀಡುತ್ತಾರೆ.

13032027a ಯೇ ಸರ್ವಾತಿಥಯೋ ನಿತ್ಯಂ ಗೋಷು ಚ ಬ್ರಾಹ್ಮಣೇಷು ಚ|

13032027c ನಿತ್ಯಂ ಸತ್ಯೇ ಚ ನಿರತಾ ದುರ್ಗಾಣ್ಯತಿತರಂತಿ ತೇ||

ಎಲ್ಲ ಅತಿಥಿಗಳು, ಗೋವುಗಳು ಮತ್ತು ಬ್ರಾಹ್ಮಣರಲ್ಲಿ ನಿತ್ಯವೂ ನಿರತರಾಗಿರುವವರು ಮತ್ತು ನಿತ್ಯವೂ ಸತ್ಯದಲ್ಲಿ ನಿರತರಾಗಿರುವವರು ಕಷ್ಟಗಳನ್ನು ದಾಟುತ್ತಾರೆ.

13032028a ನಿತ್ಯಂ ಶಮಪರಾ ಯೇ ಚ ತಥಾ ಯೇ ಚಾನಸೂಯಕಾಃ|

13032028c ನಿತ್ಯಂ ಸ್ವಾಧ್ಯಾಯಿನೋ ಯೇ ಚ ದುರ್ಗಾಣ್ಯತಿತರಂತಿ ತೇ||

ನಿತ್ಯವೂ ಶಮಪರರಾಗಿರುವ ಮತ್ತು ಅನಸೂಯಕರಾಗಿರುವ ಇವರು ನಿತ್ಯವೂ ಸ್ವಾಧ್ಯಾಯಪರರಾಗಿದ್ದು ಕಷ್ಟಗಳನ್ನು ದಾಟುತ್ತಾರೆ.

13032029a ಸರ್ವಾನ್ದೇವಾನ್ನಮಸ್ಯಂತಿ ಯೇ ಚೈಕಂ ದೇವಮಾಶ್ರಿತಾಃ|

13032029c ಶ್ರದ್ದಧಾನಾಶ್ಚ ದಾಂತಾಶ್ಚ ದುರ್ಗಾಣ್ಯತಿತರಂತಿ ತೇ||

ಸರ್ವ ದೇವರನ್ನೂ ನಮಸ್ಕರಿಸುವ, ಒಬ್ಬನೇ ದೇವನನ್ನು ಆಶ್ರಯಿಸಿರುವ, ಶ್ರದ್ಧಧಾನ ದಾಂತರು ಕಷ್ಟಗಳನ್ನು ದಾಟುತ್ತಾರೆ.

13032030a ತಥೈವ ವಿಪ್ರಪ್ರವರಾನ್ನಮಸ್ಕೃತ್ಯ ಯತವ್ರತಾನ್|

13032030c ಭವಂತಿ ಯೇ ದಾನರತಾ ದುರ್ಗಾಣ್ಯತಿತರಂತಿ ತೇ||

ಹಾಗೆಯೇ ವಿಪ್ರಪ್ರವರರನ್ನು ಯತವ್ರತರನ್ನು ನಮಸ್ಕರಿಸಿ ದಾನರತರಾಗಿ ಇರುವವರು ಕಷ್ಟಗಳನ್ನು ದಾಟುತ್ತಾರೆ.

13032031a ಅಗ್ನೀನಾಧಾಯ ವಿಧಿವತ್ಪ್ರಯತಾ ಧಾರಯಂತಿ ಯೇ|

13032031c ಪ್ರಾಪ್ತಾಃ ಸೋಮಾಹುತಿಂ ಚೈವ ದುರ್ಗಾಣ್ಯತಿತರಂತಿ ತೇ||

ಅಗ್ನಿಯನ್ನು ಆಧಾನದಿಂದ ಉತ್ಪತ್ತಿಮಾಡಿ, ಸದಾ ರಕ್ಷಿಸಿಕೊಂಡು ಸೋಮಾಹುತಿಯನ್ನು ನೀಡುವವರು ಕಷ್ಟಗಳನ್ನು ದಾಟುತ್ತಾರೆ.

13032032a ಮಾತಾಪಿತ್ರೋರ್ಗುರುಷು ಚ ಸಮ್ಯಗ್ವರ್ತಂತಿ ಯೇ ಸದಾ|

13032032c ಯಥಾ ತ್ವಂ ವೃಷ್ಣಿಶಾರ್ದೂಲೇತ್ಯುಕ್ತ್ವೈವಂ ವಿರರಾಮ ಸಃ||

ವೃಷ್ಣಿಶಾರ್ದೂಲ! ನಿನ್ನಂತೆ ಮಾತಾಪಿತ್ರುಗಳು ಮತ್ತು ಗುರುಗಳ ಕುರಿತಾಗಿ ಸದಾ ಉತ್ತಮವಾಗಿ ನಡೆದುಕೊಳ್ಳುವವರೂ ಕಷ್ಟಗಳನ್ನು ದಾಟುತ್ತಾರೆ.” ಹೀಗೆ ಹೇಳಿ ನಾರದನು ಸುಮ್ಮನಾದನು.

13032033a ತಸ್ಮಾತ್ತ್ವಮಪಿ ಕೌಂತೇಯ ಪಿತೃದೇವದ್ವಿಜಾತಿಥೀನ್|

13032033c ಸಮ್ಯಕ್ಪೂಜಯ ಯೇನ ತ್ವಂ ಗತಿಮಿಷ್ಟಾಮವಾಪ್ಸ್ಯಸಿ||

ಕೌಂತೇಯ! ನೀನೂ ಕೂಡ ಪಿತೃ-ದೇವ-ದ್ವಿಜ-ಅತಿಥಿಗಳನ್ನು ಚೆನ್ನಾಗಿ ಪೂಜಿಸುವುದರಿಂದ ಇಷ್ಟಗತಿಯನ್ನು ಪಡೆಯುತ್ತೀಯೆ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಕೃಷ್ಣನಾರದಸಂವಾದೇ ದ್ವಾತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಕೃಷ್ಣನಾರದಸಂವಾದ ಎನ್ನುವ ಮೂವತ್ತೆರಡನೇ ಅಧ್ಯಾಯವು.

Related image

Comments are closed.