Anushasana Parva: Chapter 127

ಅನುಶಾಸನ ಪರ್ವ: ದಾನಧರ್ಮ ಪರ್ವ

೧೨೭

ಶಿವನು ಪರ್ವತದಲ್ಲಿ ತಪಸ್ಸನ್ನಾಚರಿಸುತ್ತಿದ್ದಾಗ ಒಮ್ಮೆ ಪಾರ್ವತಿಯು ಹಿಂದಿನಿಂದ ಬಂದು ಅವನ ಕಣ್ಣುಗಳೆರಡನ್ನೂ ಮುಚ್ಚಿಬಿಟ್ಟಿದುದು (೧-೨೬). ಆಗ ಲೋಕಗಳೆಲ್ಲವೂ ಕತ್ತಲೆಯಾಗಿ ಚೇತನಾಹೀನವಾಗಲು ಶಿವನ ಮೂರನೆಯ ಕಣ್ಣಿನಿಂದ ಹುಟ್ಟಿದ ಅಗ್ನಿಯು ಹಿಮಾಲಯ ಪರ್ವತವನ್ನು ಸುಟ್ಟಿದುದು (೨೭-೩೯). ಪಾರ್ವತಿಯು ಪ್ರಶ್ನಿಸಲು ಶಿವನು ಉತ್ತರಿಸಿದುದು (೪೦-೪೫). ಪಾರ್ವತಿಯ ಇತರ ಪ್ರಶ್ನೆಗಳು (೪೬-೫೧).

Image result for mahabharata13127001 ಭೀಷ್ಮ ಉವಾಚ|

13127001a ತತೋ ನಾರಾಯಣಸುಹೃನ್ನಾರದೋ ಭಗವಾನೃಷಿಃ|

13127001c ಶಂಕರಸ್ಯೋಮಯಾ ಸಾರ್ಧಂ ಸಂವಾದಂ ಪ್ರತ್ಯಭಾಷತ||

ಭೀಷ್ಮನು ಹೇಳಿದನು: “ಆಗ ನಾರಯಣನ ಸುಹೃದ ಋಷಿ ಭಗವಾನ್ ನಾರದನು ಶಂಕರ-ಉಮೆಯರ ನಡುವೆ ನಡೆದ ಸಂವಾದವನ್ನು ವರದಿಮಾಡಿದನು.

13127002a ತಪಶ್ಚಚಾರ ಧರ್ಮಾತ್ಮಾ ವೃಷಭಾಂಕಃ ಸುರೇಶ್ವರಃ|

13127002c ಪುಣ್ಯೇ ಗಿರೌ ಹಿಮವತಿ ಸಿದ್ಧಚಾರಣಸೇವಿತೇ||

13127003a ನಾನೌಷಧಿಯುತೇ ರಮ್ಯೇ ನಾನಾಪುಷ್ಪಸಮಾಕುಲೇ|

13127003c ಅಪ್ಸರೋಗಣಸಂಕೀರ್ಣೇ ಭೂತಸಂಘನಿಷೇವಿತೇ||

“ಧರ್ಮಾತ್ಮಾ ಸುರೇಶ್ವರ ವೃಷಭಾಂಕನು ಭೂತಸಂಘಗಳಿಂದ ಸೇವಿತವಾದ, ಅಪ್ಸರಗಣಗಳಿಂದ ತುಂಬಿದ್ದ, ನಾನಾಪುಷ್ಪಗಳಿಂದ ಕೂಡಿದ್ದ, ನಾನಾ ಔಷಧಿಗಳಿಂದ ರಮಿಸುತ್ತಿದ್ದ, ಸಿದ್ಧಚಾರಣಸೇವಿತ ಪುಣ್ಯ ಹಿಮವದ್ಗಿರಿಯಲ್ಲಿ ತಪಸ್ಸನ್ನು ತಪಿಸುತ್ತಿದ್ದನು.

13127004a ತತ್ರ ದೇವೋ ಮುದಾ ಯುಕ್ತೋ ಭೂತಸಂಘಶತೈರ್ವೃತಃ|

13127004c ನಾನಾರೂಪೈರ್ವಿರೂಪೈಶ್ಚ ದಿವ್ಯೈರದ್ಭುತದರ್ಶನೈಃ||

13127005a ಸಿಂಹವ್ಯಾಘ್ರಗಜಪ್ರಖ್ಯೈಃ ಸರ್ವಜಾತಿಸಮನ್ವಿತೈಃ|

13127005c ಕ್ರೋಷ್ಟುಕದ್ವೀಪಿವದನೈರ್ಋಕ್ಷರ್ಷಭಮುಖೈಸ್ತಥಾ||

13127006a ಉಲೂಕವದನೈರ್ಭೀಮೈಃ ಶ್ಯೇನಭಾಸಮುಖೈಸ್ತಥಾ|

13127006c ನಾನಾವರ್ಣಮೃಗಪ್ರಖ್ಯೈಃ ಸರ್ವಜಾತಿಸಮನ್ವಯೈಃ|

13127006e ಕಿಂನರೈರ್ದೇವಗಂಧರ್ವೈರ್ಯಕ್ಷಭೂತಗಣೈಸ್ತಥಾ||

ಅಲ್ಲಿ ದೇವನು ನಾನಾರೂಪವಿರೂಪಗಳಿದ್ದ ದಿವ್ಯವೂ ಅದ್ಭುತರಾಗಿಯೂ ಕಾಣುತ್ತಿದ್ದ, ನರಿ-ಚಿರತೆ-ಕರಡಿಗಳ ಮುಖವಿದ್ದ ಗೂಬೆಗಳ ಮುಖವಿದ್ದ, ಭಯಂಕರ ಗಿಡುಗಗಳ ಮುಖವಿದ್ದ ನೂರಾರು ಭೂತಸಂಘಗಳಿಂದ ಆವೃತನಾಗಿ, ಸಿಂಹ-ಹುಲಿ-ಆನೆಗಳೇ ಮೊದಲಾದ ಸರ್ವಜಾತಿಗಳಿಂದ ಸಮಾನ್ವಿತಾಗಿ, ನಾನಾಮೃಗಪ್ರಮುಖಗಳಿಂದ, ಸರ್ವಯೋನಿಗಳಲ್ಲಿ ಜನಿಸಿದ ಕಿನ್ನರ-ದೇವ-ಗಂಧರ್ವ-ಯಕ್ಷ-ಭೂತಗಣಗಳೊಂದಿಗೆ ಮುದದಿಂದಿದ್ದನು.

13127007a ದಿವ್ಯಪುಷ್ಪಸಮಾಕೀರ್ಣಂ ದಿವ್ಯಮಾಲಾವಿಭೂಷಿತಮ್|

13127007c ದಿವ್ಯಚಂದನಸಂಯುಕ್ತಂ ದಿವ್ಯಧೂಪೇನ ಧೂಪಿತಮ್|

13127007e ತತ್ಸದೋ ವೃಷಭಾಂಕಸ್ಯ ದಿವ್ಯವಾದಿತ್ರನಾದಿತಮ್||

ದಿವ್ಯಪುಷ್ಪಗಳನ್ನು ಹರಡಿದ್ದ, ದಿವ್ಯಮಾಲಾವಿಭೂಷಿತವಾಗಿದ್ದ, ದಿವ್ಯಚಂದನಸಂಯುಕ್ತವಾಗಿದ್ದ, ದಿವ್ಯಧೂಪದಿಂದ ಧೂಪಿತವಾಗಿದ್ದ ವೃಷಭಾಂಕನ ಆ ಸಭೆಯು ದಿವ್ಯವಾದಿತ್ರಗಳಿಂದ ಮೊಳಗುತ್ತಿತ್ತು.

13127008a ಮೃದಂಗಪಣವೋದ್ಘುಷ್ಟಂ ಶಂಖಭೇರೀನಿನಾದಿತಮ್|

13127008c ನೃತ್ಯದ್ಭಿರ್ಭೂತಸಂಘೈಶ್ಚ ಬರ್ಹಿಣೈಶ್ಚ ಸಮಂತತಃ||

13127009a ಪ್ರನೃತ್ತಾಪ್ಸರಸಂ ದಿವ್ಯಂ ದಿವ್ಯಸ್ತ್ರೀಗಣಸೇವಿತಮ್|

13127009c ದೃಷ್ಟಿಕಾಂತಮನಿರ್ದೇಶ್ಯಂ ದಿವ್ಯಮದ್ಭುತದರ್ಶನಮ್||

ಮೃದಂಗ-ಪಣವಗಳ ಘೋಷದಿಂದಲೂ, ಶಂಖ-ಭೇರಿಗಳ ನಿನಾದಗಳಿಂದಲೂ, ಸುತ್ತಲೂ ಇದ್ದ ಭೂತಸಂಘಗಳ ಮತ್ತು ನವಿಲುಗಳ ನೃತ್ಯದಿಂದ ಮತ್ತು ದಿವ್ಯ ನರ್ತನಮಾಡುತ್ತಿದ್ದ ದೇವಸ್ತ್ರೀ ಅಪ್ಸರೆಯರಿಂದ ಆ ಪರ್ವತವು ಅದ್ಭುತವೂ ದಿವ್ಯವೂ ಆಗಿ ಶೋಭಿಸುತ್ತಿತ್ತು.

13127010a ಸ ಗಿರಿಸ್ತಪಸಾ ತಸ್ಯ ಭೂತೇಶಸ್ಯ ವ್ಯರೋಚತ|

13127011a ಸ್ವಾಧ್ಯಾಯಪರಮೈರ್ವಿಪ್ರೈರ್ಬ್ರಹ್ಮಘೋಷೈರ್ವಿನಾದಿತಃ|

13127011c ಷಟ್ಪದೈರುಪಗೀತೈಶ್ಚ ಮಾಧವಾಪ್ರತಿಮೋ ಗಿರಿಃ||

ಭೂತೇಶನ ತಪಸ್ಸಿನಿಂದ ಆ ಗಿರಿಯು ವಿರಾಜಿಸುತ್ತಿತ್ತು. ಮಾಧವ! ಆ ಅಪ್ರತಿಮ ಗಿರಿಯು ಸ್ವಾಧ್ಯಾಯನಿರತರಾದ ವಿಪ್ರರ ಬ್ರಹ್ಮಘೋಷಗಳಿಂದ ಮತ್ತು ದುಂಬಿಗಳ ಝೇಂಕಾರಗಳಿಂದ ನಿನಾದಿಸುತ್ತಿತ್ತು.

13127012a ತಂ ಮಹೋತ್ಸವಸಂಕಾಶಂ ಭೀಮರೂಪಧರಂ ಪುನಃ|

13127012c ದೃಷ್ಟ್ವಾ ಮುನಿಗಣಸ್ಯಾಸೀತ್ಪರಾ ಪ್ರೀತಿರ್ಜನಾರ್ದನ||

ಜನಾರ್ದನ! ಭಯಂಕರರೂಪವನ್ನು ಧರಿಸಿದ್ದ ಆದರೂ ಮಹೋತ್ಸವದಂತಿದ್ದ ಆ ಪರ್ವತವನ್ನು ನೋಡಿ ಮುನಿಗಣಗಳು ಪ್ರೀತವಾದವು.

13127013a ಮುನಯಶ್ಚ ಮಹಾಭಾಗಾಃ ಸಿದ್ಧಾಶ್ಚೈವೋರ್ಧ್ವರೇತಸಃ|

13127013c ಮರುತೋ ವಸವಃ ಸಾಧ್ಯಾ ವಿಶ್ವೇದೇವಾಃ ಸನಾತನಾಃ||

13127014a ಯಕ್ಷಾ ನಾಗಾಃ ಪಿಶಾಚಾಶ್ಚ ಲೋಕಪಾಲಾ ಹುತಾಶನಾಃ|

13127014c ಭಾವಾಶ್ಚ ಸರ್ವೇ ನ್ಯಗ್ಭೂತಾಸ್ತತ್ರೈವಾಸನ್ಸಮಾಗತಾಃ||

ವಾಸವನೊಂದಿಗೆ ಮಹಾಭಾಗ ಮುನಿಗಳೂ, ಊರ್ಧ್ವರೇತಸ ಸಿದ್ಧರೂ, ಮರುತ್ತರೂ, ವಸುಗಳೂ, ಸಾಧ್ಯರೂ, ಸನಾತನ ವಿಶ್ವೇದೇವರೂ, ಯಕ್ಷರೂ, ನಾಗರೂ, ಪಿಶಾಚಿಗಳೂ, ಲೋಕಪಾಲಕರೂ, ಅಗ್ನಿಗಳೂ, ಸರ್ವಭಾವಗಳೂ, ಅಲ್ಲಿ ಸೇರಿದ್ದರು.

13127015a ಋತವಃ ಸರ್ವಪುಷ್ಪೈಶ್ಚ ವ್ಯಕಿರಂತ ಮಹಾದ್ಭುತೈಃ|

13127015c ಓಷಧ್ಯೋ ಜ್ವಲಮಾನಾಶ್ಚ ದ್ಯೋತಯಂತಿ ಸ್ಮ ತದ್ವನಮ್||

ಎಲ್ಲ ಋತುಗಳೂ ಮಹಾದ್ಭುತ ಪುಷ್ಪಗಳನ್ನು ಚೆಲ್ಲುತ್ತಿದ್ದವು. ಔಷಧಿಗಳು ಬೆಳಗಿ ಆ ವನಕ್ಕೆ ಬೆಳಕನ್ನು ನೀಡುತ್ತಿದ್ದವು.

13127016a ವಿಹಗಾಶ್ಚ ಮುದಾ ಯುಕ್ತಾಃ ಪ್ರಾನೃತ್ಯನ್ವ್ಯನದಂಶ್ಚ ಹ|

13127016c ಗಿರಿಪೃಷ್ಠೇಷು ರಮ್ಯೇಷು ವ್ಯಾಹರಂತೋ ಜನಪ್ರಿಯಾಃ||

ಗಿರಿಪೃಷ್ಠದ ಆ ರಮ್ಯ ವನಗಳಲ್ಲಿ ಪಕ್ಷಿಗಳು ಮುದದಿಂದ ನೃತ್ಯಮಾಡುತ್ತಾ ಜನರಿಗೆ ಪ್ರಿಯವನ್ನುಂಟುಮಾಡುತ್ತಾ ಕೂಗುತ್ತಿದ್ದವು.

13127017a ತತ್ರ ದೇವೋ ಗಿರಿತಟೇ ದಿವ್ಯಧಾತುವಿಭೂಷಿತೇ|

13127017c ಪರ್ಯಂಕ ಇವ ವಿಭ್ರಾಜನ್ನುಪವಿಷ್ಟೋ ಮಹಾಮನಾಃ||

13127018a ವ್ಯಾಘ್ರಚರ್ಮಾಂಬರಧರಃ ಸಿಂಹಚರ್ಮೋತ್ತರಚ್ಚದಃ|

13127018c ವ್ಯಾಲಯಜ್ಞೋಪವೀತೀ ಚ ಲೋಹಿತಾಂಗದಭೂಷಣಃ||

13127019a ಹರಿಶ್ಮಶ್ರುರ್ಜಟೀ ಭೀಮೋ ಭಯಕರ್ತಾ ಸುರದ್ವಿಷಾಮ್|

13127019c ಅಭಯಃ ಸರ್ವಭೂತಾನಾಂ ಭಕ್ತಾನಾಂ ವೃಷಭಧ್ವಜಃ||

ದಿವ್ಯಧಾತುಗಳಿಂದ ವಿಭೂಷಿತವಾದ ಪರ್ಯಂಕದಂತಿದ್ದ ಆ ಗಿರಿತಟದಲ್ಲಿ ವ್ಯಾಘ್ರಚರ್ಮಾಂಬರಧರ, ಸಿಂಹಚರ್ಮವನ್ನು ಉತ್ತರೀಯವನ್ನಾಗಿ ಹೊದೆದುಕೊಂಡಿದ್ದ, ಸರ್ಪವನ್ನೇ ಯಜ್ಞೋಪವೀತವನ್ನಾಗಿ ಧರಿಸಿದ್ದ, ಕೆಂಪು ಅಂಗದಗಳಿಂದ ಭೂಷಿತನಾಗಿದ್ದ, ಹೊಂಬಣ್ಣದ ಗಡ್ಡ-ಮೀಸೆಗಳಿದ್ದ, ಸುರರ ಶತ್ರುಗಳಿಗೆ ಭಯವನ್ನುಂಟುಮಾಡುವ, ಭಯಂಕರ, ಸರ್ವಭೂತ ಭಕ್ತರಿಗೆ ಅಭಯನಾದ ಮಹಾಮನಸ್ವೀ ದೇವನು ವಿರಾಜಿಸುತ್ತಿದ್ದನು.

13127020a ದೃಷ್ಟ್ವಾ ತಮೃಷಯಃ ಸರ್ವೇ ಶಿರೋಭಿರವನೀಂ ಗತಾಃ|

13127020c ವಿಮುಕ್ತಾಃ ಸರ್ವಪಾಪೇಭ್ಯಃ ಕ್ಷಾಂತಾ ವಿಗತಕಲ್ಮಷಾಃ||

ಅವನನ್ನು ನೋಡಿ ಸರ್ವ ಋಷಿಗಳೂ ತಲೆಬಾಗಿ ನಮಸ್ಕರಿಸಲು ಸರ್ವಪಾಪಗಳಿಂದ ವಿಮುಕ್ತರಾಗಿ, ಕಲ್ಮಷಗಳನ್ನು ಕಳೆದುಕೊಂಡರು.

13127021a ತಸ್ಯ ಭೂತಪತೇಃ ಸ್ಥಾನಂ ಭೀಮರೂಪಧರಂ ಬಭೌ|

13127021c ಅಪ್ರಧೃಷ್ಯತರಂ ಚೈವ ಮಹೋರಗಸಮಾಕುಲಮ್||

ಮಹಾ ಸರ್ಪಗಳಿಂದ ತುಂಬಿದ್ದ ಭೂತಪತಿಯ ಆ ಸ್ಥಾನವು ಭಯಂಕರ ರೂಪವನ್ನು ಧರಿಸಿತ್ತು ಮತ್ತು ದುರ್ಧಷ್ಯವಾಗಿತ್ತು.

13127022a ಕ್ಷಣೇನೈವಾಭವತ್ಸರ್ವಮದ್ಭುತಂ ಮಧುಸೂದನ|

13127022c ತತ್ಸದೋ ವೃಷಭಾಂಕಸ್ಯ ಭೀಮರೂಪಧರಂ ಬಭೌ||

ಮಧುಸೂದನ! ಭೀಮರೂಪವನ್ನು ಧರಿಸಿದ್ದ ವೃಷಭಾಂಕನ ಆ ಸಭೆಯು ಎಲ್ಲವೂ ಕ್ಷಣದಲ್ಲಿಯೇ ಅದ್ಭುತವಾಗಿ ಶೋಭಿಸಿತು.

13127023a ತಮಭ್ಯಯಾಚ್ಚೈಲಸುತಾ ಭೂತಸ್ತ್ರೀಗಣಸಂವೃತಾ|

13127023c ಹರತುಲ್ಯಾಂಬರಧರಾ ಸಮಾನವ್ರತಚಾರಿಣೀ||

13127024a ಬಿಭ್ರತೀ ಕಲಶಂ ರೌಕ್ಮಂ ಸರ್ವತೀರ್ಥಜಲೋದ್ಭವಮ್|

13127024c ಗಿರಿಸ್ರವಾಭಿಃ ಪುಣ್ಯಾಭಿಃ ಸರ್ವತೋಽನುಗತಾ ಶುಭಾ||

13127025a ಪುಷ್ಪವೃಷ್ಟ್ಯಾಭಿವರ್ಷಂತೀ ಗಂಧೈರ್ಬಹುವಿಧೈಸ್ತಥಾ|

13127025c ಸೇವಂತೀ ಹಿಮವತ್ಪಾರ್ಶ್ವಂ ಹರಪಾರ್ಶ್ವಮುಪಾಗಮತ್||

ಆಗ ಹಿಮವತ್ಪರ್ವತದ ಮಗ್ಗುಲಿನಿಂದ ಹರನ ಪಕ್ಕಕ್ಕೆ ಭೂತಸ್ತ್ರೀಗಣಗಳಿಂದ ಸಂವೃತಳಾದ, ಹರನಂತೆಯೇ ವಸ್ತ್ರಗಳನ್ನು ಧರಿಸಿದ್ದ, ಸಮಾನ ವ್ರತಚಾರಿಣೀ ಶೈಲಸುತೆಯು ಸರ್ವತೀರ್ಥಗಳ ಜಲದಿಂದ ತುಂಬಿದ ಹೊಳೆಯುತ್ತಿರುವ ಬಂಗಾರದ ಕಲಶವನ್ನು ಹಿಡಿದುಕೊಂಡು, ಪರ್ವತದ ಮತ್ತು ನದಿಗಳ ಶುಭ ಅಧಿದೇವತೆಗಳಿಂದ ಅನುಸರಿಸಲ್ಪಡುತ್ತಾ ಬಹುವಿಧದ ಸುಗಂಧ ಪುಷ್ಪಗಳ ಮಳೆಸುರಿಸುತ್ತಾ ಆಗಮಿಸಿದಳು.

13127026a ತತಃ ಸ್ಮಯಂತೀ ಪಾಣಿಭ್ಯಾಂ ನರ್ಮಾರ್ಥಂ ಚಾರುದರ್ಶನಾ|

13127026c ಹರನೇತ್ರೇ ಶುಭೇ ದೇವೀ ಸಹಸಾ ಸಾ ಸಮಾವೃಣೋತ್||

ಆ ಚಾರುದರ್ಶನೇ ಶುಭೇ ದೇವಿಯು ನಗುತ್ತಾ ವಿನೋದಕ್ಕಾಗಿ ತನ್ನ ಎರಡೂ ಕೈಗಳಿಂದ ಹರನ ಕಣ್ಣುಗಳನ್ನು ಮುಚ್ಚಿಬಿಟ್ಟಳು.

13127027a ಸಂವೃತಾಭ್ಯಾಂ ತು ನೇತ್ರಾಭ್ಯಾಂ ತಮೋಭೂತಮಚೇತನಮ್|

13127027c ನಿರ್ಹೋಮಂ ನಿರ್ವಷಟ್ಕಾರಂ ತತ್ಸದಃ ಸಹಸಾಭವತ್||

ಅವನ ಎರಡೂ ಕಣ್ಣುಗಳನ್ನು ಮುಚ್ಚಿದ ಕೂಡಲೇ ಕತ್ತಲೆಯು ಕವಿಯಿತು, ಚೇತನವಿಲ್ಲವಾಯಿತು. ಹೋಮಗಳು ನಿಂತವು. ವಷಟ್ಕಾರಗಳು ನಿಂತವು.

13127028a ಜನಶ್ಚ ವಿಮನಾಃ ಸರ್ವೋ ಭಯತ್ರಾಸಸಮನ್ವಿತಃ|

13127028c ನಿಮೀಲಿತೇ ಭೂತಪತೌ ನಷ್ಟಸೂರ್ಯ ಇವಾಭವತ್||

ಜನರು ವಿಮನಸ್ಕರಾದರು. ಎಲ್ಲರೂ ಭಯದಿಂದ ನಡುಗತೊಡಗಿದರು. ಭೂತಪತಿಯು ಕಣ್ಣುಮುಚ್ಚಲು ಸೂರ್ಯನೇ ಕಳೆದುಹೋದಂತಾಯಿತು.

13127029a ತತೋ ವಿತಿಮಿರೋ ಲೋಕಃ ಕ್ಷಣೇನ ಸಮಪದ್ಯತ|

13127029c ಜ್ವಾಲಾ ಚ ಮಹತೀ ದೀಪ್ತಾ ಲಲಾಟಾತ್ತಸ್ಯ ನಿಃಸೃತಾ||

ಲೋಕವು ಕತ್ತಲೆಯಾದ ಕ್ಷಣದಲ್ಲಿಯೇ ಅವನ ಹಣೆಯಿಂದ ಉರಿಯುತ್ತಿದ್ದ ಮಹಾ ಜ್ವಾಲೆಯು ಹೊರಹೊಮ್ಮಿತು.

13127030a ತೃತೀಯಂ ಚಾಸ್ಯ ಸಂಭೂತಂ ನೇತ್ರಮಾದಿತ್ಯಸಂನಿಭಮ್|

13127030c ಯುಗಾಂತಸದೃಶಂ ದೀಪ್ತಂ ಯೇನಾಸೌ ಮಥಿತೋ ಗಿರಿಃ||

ಆದಿತ್ಯನಂತಿದ್ದ ಅವನ ಮೂರನೆಯ ಕಣ್ಣಿನಿಂದ ಹುಟ್ಟಿದ ಯುಗಾಂತದ ಅಗ್ನಿಯಂತೆ ಉರಿಯುತ್ತಿದ್ದ ಅಗ್ನಿಯು ಹಿಮವದ್ಗಿರಿಯನ್ನು ಭಸ್ಮಮಾಡಿತು.

13127031a ತತೋ ಗಿರಿಸುತಾ ದೃಷ್ಟ್ವಾ ದೀಪ್ತಾಗ್ನಿಸದೃಶೇಕ್ಷಣಮ್|

13127031c ಹರಂ ಪ್ರಣಮ್ಯ ಶಿರಸಾ ದದರ್ಶಾಯತಲೋಚನಾ||

ಅಗ್ನಿಸದೃಶ ಉರಿಯುತ್ತಿದ್ದ ಅವನ ದೃಷ್ಟಿಯನ್ನು ನೋಡಿ ಆಯತಲೋಚನೆ ಗಿರಿಸುತೆಯು ಹರನಿಗೆ ತಲೆಬಾಗಿ ನಮಸ್ಕರಿಸಿ ನೋಡಿದಳು.

13127032a ದಹ್ಯಮಾನೇ ವನೇ ತಸ್ಮಿನ್ಸಶಾಲಸರಲದ್ರುಮೇ|

13127032c ಸಚಂದನವನೇ ರಮ್ಯೇ ದಿವ್ಯೌಷಧಿವಿದೀಪಿತೇ||

13127033a ಮೃಗಯೂಥೈರ್ದ್ರುತೈರ್ಭೀತೈರ್ಹರಪಾರ್ಶ್ವಮುಪಾಗತೈಃ|

13127033c ಶರಣಂ ಚಾಪ್ಯವಿಂದದ್ಭಿಸ್ತತ್ಸದಃ ಸಂಕುಲಂ ಬಭೌ||

ಉರಿಯುತ್ತಿದ್ದ ಆ ವನದಲ್ಲಿದ್ದ ಶಾಲ-ಸರಲ ವೃಕ್ಷಗಳೂ, ರಮ್ಯ ಚಂದನವನದಲ್ಲಿ ಬೆಳಗುತ್ತಿದ್ದ ದಿವ್ಯೌಷಧಿಗಳೂ, ಮೃಗಗಳ ಹಿಂಡುಗಳೂ, ಭಯಗೊಂಡು ಓಡಿಬಂದು ಹರನ ಪಾದಗಳನ್ನು ಸೇರಿದವು.

13127034a ತತೋ ನಭಃಸ್ಪೃಶಜ್ವಾಲೋ ವಿದ್ಯುಲ್ಲೋಲಾರ್ಚಿರುಜ್ಜ್ವಲಃ|

13127034c ದ್ವಾದಶಾದಿತ್ಯಸದೃಶೋ ಯುಗಾಂತಾಗ್ನಿರಿವಾಪರಃ||

ಆಗ ವಿದ್ಯುತ್ತಿನಂತೆ ಚಂಚಲವಾಗಿ ಉರಿಯುತ್ತಿದ್ದ ದ್ವಾದಶ ಆದಿತ್ಯರ ಸಮನಾಗಿದ್ದ, ಮತ್ತು ಇನ್ನೊಂದು ಯುಗಾಂತದ ಅಗ್ನಿಯೋ ಎನ್ನುವಂತಿದ್ದ ಆ ಜ್ವಾಲೆಯು ನಭವನ್ನು ಮುಟ್ಟಿತು.

13127035a ಕ್ಷಣೇನ ತೇನ ದಗ್ಧಃ ಸ ಹಿಮವಾನಭವನ್ನಗಃ|

13127035c ಸಧಾತುಶಿಖರಾಭೋಗೋ ದೀನದಗ್ಧವನೌಷಧಿಃ||

ಆ ಅಗ್ನಿಯು ಕ್ಷಣದಲ್ಲಿಯೇ ಹಿಮವತ್ಪರ್ವತವನ್ನು, ಅದರಲ್ಲಿದ್ದ ಖನಿಜ, ಶಿಖರ, ಲತೆಗಳು ಮತ್ತು ವನೌಷಧಿಗಳೊಂದಿಗೆ ಸುಟ್ಟುಹಾಕಿತು.

13127036a ತಂ ದೃಷ್ಟ್ವಾ ಮಥಿತಂ ಶೈಲಂ ಶೈಲರಾಜಸುತಾ ತತಃ|

13127036c ಭಗವಂತಂ ಪ್ರಪನ್ನಾ ಸಾ ಸಾಂಜಲಿಪ್ರಗ್ರಹಾ ಸ್ಥಿತಾ||

ಪರ್ವತವು ಸುಟ್ಟುಹೋದುದನ್ನು ನೋಡಿ ಶೈಲರಾಜಸುತೆಯು ಅಂಜಲೀ ಬದ್ಧಳಾಗಿ ನಿಂತು ಭಗವಂತನನ್ನು ಪ್ರಪನ್ನಗೊಳಿಸತೊಡಗಿದಳು.

13127037a ಉಮಾಂ ಶರ್ವಸ್ತದಾ ದೃಷ್ಟ್ವಾ ಸ್ತ್ರೀಭಾವಾಗತಮಾರ್ದವಾಮ್|

13127037c ಪಿತುರ್ದೈನ್ಯಮನಿಚ್ಚಂತೀಂ ಪ್ರೀತ್ಯಾಪಶ್ಯತ್ತತೋ ಗಿರಿಮ್||

ತಂದೆಯ ದೈನ್ಯಭಾವವನ್ನು ಬಯಸದ ಉಮೆಯು ಸ್ತ್ರೀಭಾವದಿಂದ ದೀನಳಾದುದನ್ನು ನೋಡಿದ ಶರ್ವನು ಪ್ರೀತಿಯಿಂದ ಆ ಪರ್ವತದ ಕಡೆ ನೋಡಿದನು.

13127038a ತತೋಽಭವತ್ಪುನಃ ಸರ್ವಃ ಪ್ರಕೃತಿಸ್ಥಃ ಸುದರ್ಶನಃ|

13127038c ಪ್ರಹೃಷ್ಟವಿಹಗಶ್ಚೈವ ಪ್ರಪುಷ್ಪಿತವನದ್ರುಮಃ||

ಆಗ ಆ ಪರ್ವತವೆಲ್ಲವೂ ಪುನಃ ಮೊದಲಿನಂತೆಯೇ ಸುಂದರವಾಯಿತು. ಪಕ್ಷಿಗಳು ಹರ್ಷಗೊಂಡವು. ವನವೃಕ್ಷಗಳು ಪುಷ್ಪಭರಿತವಾದವು.

13127039a ಪ್ರಕೃತಿಸ್ಥಂ ಗಿರಿಂ ದೃಷ್ಟ್ವಾ ಪ್ರೀತಾ ದೇವೀ ಮಹೇಶ್ವರಮ್|

13127039c ಉವಾಚ ಸರ್ವಭೂತಾನಾಂ ಪತಿಂ ಪತಿಮನಿಂದಿತಾ||

ಗಿರಿಯು ಮೊದಲಿನಂತೆಯೇ ಆದದ್ದನ್ನು ನೋಡಿ ಪ್ರೀತಳಾದ ಅನಿಂದಿತೆ ದೇವಿಯು ಸರ್ವಭೂತಗಳ ಪತಿ ಮಹೇಶ್ವರನಿಗೆ ಹೇಳಿದಳು:

13127040a ಭಗವನ್ಸರ್ವಭೂತೇಶ ಶೂಲಪಾಣೇ ಮಹಾವ್ರತ|

13127040c ಸಂಶಯೋ ಮೇ ಮಹಾನ್ಜಾತಸ್ತಂ ಮೇ ವ್ಯಾಖ್ಯಾತುಮರ್ಹಸಿ||

“ಭಗವನ್! ಸರ್ವಭೂತೇಶ! ಶೂಲಪಾಣೇ! ಮಹಾವ್ರತ! ನನ್ನಲ್ಲಿ ಒಂದು ಮಹಾ ಸಂಶಯವು ಹುಟ್ಟಿದೆ. ಅದರ ಕುರಿತು ನೀನು ವ್ಯಾಖ್ಯಾನಮಾಡಬೇಕು.

13127041a ಕಿಮರ್ಥಂ ತೇ ಲಲಾಟೇ ವೈ ತೃತೀಯಂ ನೇತ್ರಮುತ್ಥಿತಮ್|

13127041c ಕಿಮರ್ಥಂ ಚ ಗಿರಿರ್ದಗ್ಧಃ ಸಪಕ್ಷಿಗಣಕಾನನಃ||

ನಿನ್ನ ಹಣೆಯಿಂದ ಮೂರನೆಯ ಕಣ್ಣು ಏಕೆ ಉದ್ಭವಿಸಿತು? ಅದು ಏಕೆ ಪಕ್ಷಿಗಣ-ಕಾನನಗಳೊಡನೆ ಗಿರಿಯನ್ನು ಸುಟ್ಟುಹಾಕಿತು?

13127042a ಕಿಮರ್ಥಂ ಚ ಪುನರ್ದೇವ ಪ್ರಕೃತಿಸ್ಥಃ ಕ್ಷಣಾತ್ಕೃತಃ|

13127042c ತಥೈವ ದ್ರುಮಸಂಚನ್ನಃ ಕೃತೋಽಯಂ ತೇ ಮಹೇಶ್ವರ||

ಮತ್ತು ದೇವ! ಮಹೇಶ್ವರ!  ಕ್ಷಣದಲ್ಲಿಯೇ ಅದು ಏಕೆ ಮೊದಲಿನಂತೆಯೇ ಆಯಿತು? ಏಕೆ ಅದನ್ನು ಮರಗಳಿಂದ ಕೂಡುವಂತೆ ಮಾಡಿದೆ?”

13127043 ಮಹೇಶ್ವರ ಉವಾಚ|

13127043a ನೇತ್ರೇ ಮೇ ಸಂವೃತೇ ದೇವಿ ತ್ವಯಾ ಬಾಲ್ಯಾದನಿಂದಿತೇ|

13127043c ನಷ್ಟಾಲೋಕಸ್ತತೋ ಲೋಕಃ ಕ್ಷಣೇನ ಸಮಪದ್ಯತ||

ಮಹೇಶ್ವರನು ಹೇಳಿದನು: “ಅನಿಂದಿತೇ! ಬಾಲ್ಯತನದಿಂದ ನೀನು ನನ್ನ ಕಣ್ಣುಗಳನ್ನು ಮುಚ್ಚಿಬಿಟ್ಟೆ. ತಕ್ಷಣವೇ ಲೋಕವು ದೃಷ್ಟಿಯನ್ನು ಕಳೆದುಕೊಂಡಿತು.

13127044a ನಷ್ಟಾದಿತ್ಯೇ ತಥಾ ಲೋಕೇ ತಮೋಭೂತೇ ನಗಾತ್ಮಜೇ|

13127044c ತೃತೀಯಂ ಲೋಚನಂ ದೀಪ್ತಂ ಸೃಷ್ಟಂ ತೇ ರಕ್ಷತಾ ಪ್ರಜಾಃ||

ನಗಾತ್ಮಜೇ! ಆದಿತ್ಯನಿಲ್ಲದಾದಾಗ ಹೇಗೋ ಹಾಗೆ ಲೋಕವು ಕತ್ತಲೆಗೂಡಿತು. ಪ್ರಜೆಗಳನ್ನು ರಕ್ಷಿಸಲೋಸುಗ ಬೆಳಗುತ್ತಿದ್ದ ಮೂರನೆಯ ಕಣ್ಣಿನ ಸೃಷ್ಟಿಯಾಯಿತು.

13127045a ತಸ್ಯ ಚಾಕ್ಷ್ಣೋ ಮಹತ್ತೇಜೋ ಯೇನಾಯಂ ಮಥಿತೋ ಗಿರಿಃ|

13127045c ತ್ವತ್ಪ್ರಿಯಾರ್ಥಂ ಚ ಮೇ ದೇವಿ ಪ್ರಕೃತಿಸ್ಥಃ ಕ್ಷಣಾತ್ಕೃತಃ||

ಆ ಕಣ್ಣಿನ ಮಹಾ ತೇಜಸ್ಸಿನಿಂದ ಈ ಗಿರಿಯು ಭಸ್ಮವಾಯಿತು. ದೇವೀ! ನಿನ್ನ ಪ್ರೀತಿಗಾಗಿ ನಾನು ಕ್ಷಣದಲ್ಲಿಯೇ ಇದನ್ನು ಮೊದಲಿನ ರೂಪಕ್ಕೆ ತಂದೆ!”

13127046 ಉಮೋವಾಚ|

13127046a ಭಗವನ್ಕೇನ ತೇ ವಕ್ತ್ರಂ ಚಂದ್ರವತ್ಪ್ರಿಯದರ್ಶನಮ್|

13127046c ಪೂರ್ವಂ ತಥೈವ ಶ್ರೀಕಾಂತಮುತ್ತರಂ ಪಶ್ಚಿಮಂ ತಥಾ||

13127047a ದಕ್ಷಿಣಂ ಚ ಮುಖಂ ರೌದ್ರಂ ಕೇನೋರ್ಧ್ವಂ ಕಪಿಲಾ ಜಟಾಃ|

ಉಮೆಯು ಹೇಳಿದಳು: “ಭಗವನ್! ನಿನ್ನ ಪೂರ್ವ, ಉತ್ತರ ಮತ್ತು ಪಶ್ಚಿಮ ದಿಕ್ಕಿನ ಮುಖಗಳು ಚಂದ್ರನಂತೆ ಪ್ರಿಯದರ್ಶನವೂ, ಶ್ರೀಕಾಂತವು ಆಗಿವೆ. ಆದರೆ ನಿನ್ನ ದಕ್ಷಿಣ ಮುಖವು ಮಾತ್ರ ರೌದ್ರವಾಗಿದೆ. ಇದು ಏಕೆ? ನಿನ್ನ ಊರ್ಧ್ವಜಟೆಯು ಏಕೆ ಕಪಿಲವರ್ಣದ್ದಾಗಿದೆ?

13127047c ಕೇನ ಕಂಠಶ್ಚ ತೇ ನೀಲೋ ಬರ್ಹಿಬರ್ಹನಿಭಃ ಕೃತಃ||

13127048a ಹಸ್ತೇ ಚೈತತ್ಪಿನಾಕಂ ತೇ ಸತತಂ ಕೇನ ತಿಷ್ಠತಿ|

13127048c ಜಟಿಲೋ ಬ್ರಹ್ಮಚಾರೀ ಚ ಕಿಮರ್ಥಮಸಿ ನಿತ್ಯದಾ||

ನಿನ್ನ ಕಂಠವು ಏಕೆ ನವಿಲುಗರಿಯ ಬಣ್ಣದಂತೆ ನೀಲವರ್ಣದ್ದಾಯಿತು? ನೀನು ಏಕೆ ಸತತವೂ ಕೈಯಲ್ಲಿ ಪಿನಾಕವನ್ನು ಹಿಡಿದು ನಿಲ್ಲುತ್ತೀಯೆ? ನೀನು ಏಕೆ ನಿತ್ಯವೂ ಜಟಿಲ ಬ್ರಹ್ಮಚಾರಿಯಾಗಿರುತ್ತೀಯೆ?

13127049a ಏತಂ ಮೇ ಸಂಶಯಂ ಸರ್ವಂ ವದ ಭೂತಪತೇಽನಘ|

13127049c ಸಧರ್ಮಚಾರಿಣೀ ಚಾಹಂ ಭಕ್ತಾ ಚೇತಿ ವೃಷಧ್ವಜ||

ಭೂತಪತೇ! ಅನಘ! ವೃಷಧ್ವಜ! ಇದು ನನ್ನ ಸಂಶಯವು. ಎಲ್ಲವನ್ನೂ ಹೇಳು. ನಾನು ನಿನ್ನ ಸಹಧರ್ಮಚಾರಿಣಿಯೂ ಭಕ್ತೆಯೂ ಆಗಿದ್ದೇನೆ.”

13127050a ಏವಮುಕ್ತಃ ಸ ಭಗವಾನ್ಶೈಲಪುತ್ರ್ಯಾ ಪಿನಾಕಧೃಕ್|

13127050c ತಸ್ಯಾ ವೃತ್ತ್ಯಾ ಚ ಬುದ್ಧ್ಯಾ ಚ ಪ್ರೀತಿಮಾನಭವತ್ಪ್ರಭುಃ||

ಶೈಲಪುತ್ರಿಯು ಹೀಗೆ ಹೇಳಲು ಪಿನಾಕಧೃಕ ಪ್ರಭುವು ಅವಳ ವರ್ತನೆ ಬುದ್ಧಿಗಳಿಂದ ಪ್ರೀತನಾದನು.

13127051a ತತಸ್ತಾಮಬ್ರವೀದ್ದೇವಃ ಸುಭಗೇ ಶ್ರೂಯತಾಮಿತಿ|

13127051c ಹೇತುಭಿರ್ಯೈರ್ಮಮೈತಾನಿ ರೂಪಾಣಿ ರುಚಿರಾನನೇ||

ದೇವನು ಅವಳಿಗೆ “ಸುಭಗೇ! ರುಚಿರಾನನೇ! ನನ್ನ ಈ ರೂಪಗಳ ಕಾರಣಗಳನ್ನು ಕೇಳು!” ಎಂದು ಹೇಳಿದನು.

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಉಮಾಮಹೇಶ್ವರಸಂವಾದೋ ನಾಮ ಸಪ್ತವಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಉಮಾಮಹೇಶ್ವರಸಂವಾದ ಎನ್ನುವ ನೂರಾಇಪ್ಪತ್ತೇಳನೇ ಅಧ್ಯಾಯವು.

Related image

Comments are closed.