Drona Parva: Chapter 31

ದ್ರೋಣ ಪರ್ವ: ಸಂಶಪ್ತಕವಧ ಪರ್ವ

೩೧

ಹನ್ನೆರಡನೆಯ ದಿನದ ಯುದ್ಧ ಸಮಾಪ್ತಿ

07031001 ಸಂಜಯ ಉವಾಚ|

07031001a ಪ್ರತಿಘಾತಂ ತು ಸೈನ್ಯಸ್ಯ ನಾಮೃಷ್ಯತ ವೃಕೋದರಃ|

07031001c ಸೋಽಭಿನದ್ಬಾಹ್ಲಿಕಂ ಷಷ್ಟ್ಯಾ ಕರ್ಣಂ ಚ ದಶಭಿಃ ಶರೈಃ||

ಸಂಜಯನು ಹೇಳಿದನು: “ವೃಕೋದರನು ತನ್ನ ಸೈನ್ಯಕ್ಕಾದ ಪ್ರತಿಘಾತವನ್ನು ಸಹಿಸಿಕೊಳ್ಳದೇ ಬಾಹ್ಲಿಕನನ್ನು ಅರವತ್ತು ಮತ್ತು ಕರ್ಣನನ್ನು ಹತ್ತು ಶರಗಳಿಂದ ಹೊಡೆದನು.

07031002a ತಸ್ಯ ದ್ರೋಣಃ ಶಿತೈರ್ಬಾಣೈಸ್ತೀಕ್ಷ್ಣಧಾರೈರಯಸ್ಮಯೈಃ|

07031002c ಜೀವಿತಾಂತಮಭಿಪ್ರೇಪ್ಸುರ್ಮರ್ಮಣ್ಯಾಶು ಜಘಾನ ಹ||

ಆಗ ದ್ರೋಣನು ಅವನನ್ನು ಜೀವಿತವಾಗಿ ಉಳಿಸಬಾರದೆಂದು ಬಯಸಿ ನಿಶಿತವಾದ ತೀಕ್ಷ್ಣಧಾರೆಯ ಉಕ್ಕಿನ ಬಾಣಗಳಿಂದ ಅವನ ಮರ್ಮಗಳಿಗೆ ಹೊಡೆದನು.

07031003a ಕರ್ಣೋ ದ್ವಾದಶಭಿರ್ಬಾಣೈರಶ್ವತ್ಥಾಮಾ ಚ ಸಪ್ತಭಿಃ|

07031003c ಷಡ್ಭಿರ್ದುರ್ಯೋಧನೋ ರಾಜಾ ತತ ಏನಮವಾಕಿರತ್||

ಆಗ ಅವನನ್ನು ಕರ್ಣನು ಹನ್ನೆರಡು ಬಾಣಗಳಿಂದಲೂ, ಅಶ್ವತ್ಥಾಮನು ಏಳರಿಂದಲೂ, ರಾಜಾ ದುರ್ಯೋಧನನು ಆರರಿಂದಲೂ ಹೊಡೆದು ಮುಚ್ಚಿದರು.

07031004a ಭೀಮಸೇನೋಽಪಿ ತಾನ್ಸರ್ವಾನ್ಪ್ರತ್ಯವಿಧ್ಯನ್ಮಹಾಬಲಃ|

07031004c ದ್ರೋಣಂ ಪಂಚಾಶತೇಷೂಣಾಂ ಕರ್ಣಂ ಚ ದಶಭಿಃ ಶರೈಃ||

07031005a ದುರ್ಯೋಧನಂ ದ್ವಾದಶಭಿರ್ದ್ರೌಣಿಂ ಚಾಷ್ಟಾಭಿರಾಶುಗೈಃ|

07031005c ಆರಾವಂ ತುಮುಲಂ ಕುರ್ವನ್ನಭ್ಯವರ್ತತ ತಾನ್ರಣೇ||

ಮಹಾಬಲ ಭೀಮಸೇನನು ಅವರೆಲ್ಲರಿಗೂ ಪ್ರತಿಯಾಗಿ ದ್ರೋಣನನ್ನು ಐವತ್ತು ಬಾಣಗಳಿಂದಲೂ, ಕರ್ಣನನ್ನು ಹತ್ತು ಬಾಣಗಳಿಂದಲೂ, ದುರ್ಯೋಧನನನ್ನು ಹನ್ನೆರಡು ಮತ್ತು ದ್ರೌಣಿಯನ್ನು ಎಂಟು ಆಶುಗಗಳಿಂದ ಹೊಡೆದನು. ಭಯಂಕರವಾಗಿ ಗರ್ಜಿಸುತ್ತಾ ಅವನು ರಣದಲ್ಲಿ ತುಮುಲ ಯುದ್ಧಮಾಡಿದನು.

07031006a ತಸ್ಮಿನ್ಸಂತ್ಯಜತಿ ಪ್ರಾಣಾನ್ಮೃತ್ಯುಸಾಧಾರಣೀಕೃತೇ|

07031006c ಅಜಾತಶತ್ರುಸ್ತಾನ್ಯೋಧಾನ್ಭೀಮಂ ತ್ರಾತೇತ್ಯಚೋದಯತ್||

ಮೃತ್ಯುವು ಸರ್ವಸಾಧಾರಣವೆಂದು ಬಗೆದು ಪ್ರಾಣವನ್ನೂ ತೊರೆದು ಯುದ್ಧ ಮಾಡುತ್ತಿರಲು “ಭೀಮನನ್ನು ರಕ್ಷಿಸಿ!” ಎಂದು ಅಜಾತಶತ್ರುವು ತನ್ನ ಯೋಧರನ್ನು ಪ್ರಚೋದಿಸಿದನು.

07031007a ತೇ ಯಯುರ್ಭೀಮಸೇನಸ್ಯ ಸಮೀಪಮಮಿತೌಜಸಃ|

07031007c ಯುಯುಧಾನಪ್ರಭೃತಯೋ ಮಾದ್ರೀಪುತ್ರೌ ಚ ಪಾಂಡವೌ||

ಭೀಮಸೇನನ ಬಳಿಗೆ ಅಮಿತೌಜಸ ಯುಯುಧಾನನ ನೇತ್ತ್ವದಲ್ಲಿ ಪಾಂಡವ ಮಾದ್ರೀಪುತ್ರರಿಬ್ಬರೂ ಬಂದರು.

07031008a ತೇ ಸಮೇತ್ಯ ಸುಸಂರಬ್ಧಾಃ ಸಹಿತಾಃ ಪುರುಷರ್ಷಭಾಃ|

07031008c ಮಹೇಷ್ವಾಸವರೈರ್ಗುಪ್ತಂ ದ್ರೋಣಾನೀಕಂ ಬಿಭಿತ್ಸವಃ||

ಅವರೆಲ್ಲ ಪುರುಷರ್ಷಭ ಮಹೇಷ್ವಾಸ ಶ್ರೇಷ್ಠರೂ ಒಟ್ಟಾಗಿ ಸೇರಿ ದ್ರೋಣನಿಂದ ರಕ್ಷಿತವಾಗಿದ್ದ ಸೇನೆಯನ್ನು ಆಕ್ರಮಣಿಸಿದರು.

07031009a ಸಮಾಪೇತುರ್ಮಹಾವೀರ್ಯಾ ಭೀಮಪ್ರಭೃತಯೋ ರಥಾಃ|

07031009c ತಾನ್ಪ್ರತ್ಯಗೃಹ್ಣಾದವ್ಯಗ್ರೋ ದ್ರೋಣೋಽಪಿ ರಥಿನಾಂ ವರಃ||

ಆಗ ರಥಿಗಳಲ್ಲಿ ಶ್ರೇಷ್ಠ ದ್ರೋಣನಾದರೋ ಗಾಭರಿಗೊಳ್ಳದೇ ಆಕ್ರಮಣ ಮಾಡುತ್ತಿದ್ದ ಭೀಮನೇ ಮೊದಲಾದ ರಥರನ್ನು ಎದುರಿಸಿದನು.

07031010a ಮಹಾಬಲಾನತಿರಥಾನ್ವೀರಾನ್ಸಮರಶೋಭಿನಃ|

07031010c ಬಾಹ್ಯಂ ಮೃತ್ಯುಭಯಂ ಕೃತ್ವಾ ತಾವಕಾಃ ಪಾಂಡವಾನ್ಯಯುಃ||

ಪ್ರಾಣಭಯವನ್ನು ಹೊರಗಟ್ಟಿ ನಿನ್ನವರು ಆ ಮಹಾಬಲ ಅತಿರಥ ಸಮರಶೋಭೀ ವೀರ ಪಾಂಡವರೊಂದಿಗೆ ಹೋರಾಡಿದರು.

07031011a ಸಾದಿನಃ ಸಾದಿನೋಽಭ್ಯಘ್ನಂಸ್ತಥೈವ ರಥಿನೋ ರಥಾನ್|

07031011c ಆಸೀಚ್ಚಕ್ತ್ಯಸಿಸಂಪಾತೋ ಯುದ್ಧಮಾಸೀತ್ಪರಶ್ವಧೈಃ||

ಅಶ್ವಾರೋಹಿಗಳು ಅಶ್ವಾರೋಹಿಗಳನ್ನು ಮತ್ತು ಹಾಗೆಯೇ ರಥಿಗಳು ರಥರನ್ನು ಕೊಂದರು. ಶಕ್ತಿ ಮತ್ತು ಕಬ್ಬಿಣದ ಸಲಾಕೆಗಳು ಬೇಳತೊಡಗಿದವು. ಪರಶಾಯುಧಗಳ ಯುದ್ಧವು ನಡೆಯಿತು.

07031012a ನಿಕೃಷ್ಟಮಸಿಯುದ್ಧಂ ಚ ಬಭೂವ ಕಟುಕೋದಯಂ|

07031012c ಕುಂಜರಾಣಾಂ ಚ ಸಂಘಾತೈರ್ಯುದ್ಧಮಾಸೀತ್ಸುದಾರುಣಂ||

ಕಟುಕವಾದ ಖಡ್ಗಗಳ ಯುದ್ಧವು ನಡೆಯಿತು. ಆನೆಗಳ ಸಂಘಾತದಿಂದಾಗಿ ದಾರುಣ ಯುದ್ಧವು ನಡೆಯಿತು.

07031013a ಅಪತತ್ಕುಂಜರಾದನ್ಯೋ ಹಯಾದನ್ಯಸ್ತ್ವವಾಕ್ಶಿರಾಃ|

07031013c ನರೋ ಬಾಣೇನ ನಿರ್ಭಿನ್ನೋ ರಥಾದನ್ಯಶ್ಚ ಮಾರಿಷ||

ಮಾರಿಷ! ಆನೆಗಳ ಮೇಲಿಂದ ಬಿದ್ದರು. ಇನ್ನು ಕೆಲವರು ಕುದುರೆಗಳ ಮೇಲಿಂದ ತಲೆಕೆಳಗಾಗಿ ಬಿದ್ದರು. ಅನ್ಯ ಮನುಷ್ಯರು ಬಾಣಗಳಿಂದ ಭೇದಿಸಲ್ಪಟ್ಟು ರಥಗಳ ಮೇಲಿಂದ ಬಿದ್ದರು.

07031014a ತತ್ರಾನ್ಯಸ್ಯ ಚ ಸಮ್ಮರ್ದೇ ಪತಿತಸ್ಯ ವಿವರ್ಮಣಃ|

07031014c ಶಿರಃ ಪ್ರಧ್ವಂಸಯಾಮಾಸ ವಕ್ಷಸ್ಯಾಕ್ರಮ್ಯ ಕುಂಜರಃ||

ಇನ್ನು ಕೆಲವರು ಕವಚಗಳಿಲ್ಲದೇ ಬಾಣಗಳಿಂದ ಹೊಡೆಯಲ್ಪಟ್ಟು ಕೆಳಗೆ ಬೀಳಲು ಅಷ್ಟರಲ್ಲಿಯೇ ಆನೆಯು ಬಂದು ಅವರ ಎದೆ-ತಲೆಗಳನ್ನು ತುಳಿದು ದ್ವಂಸಮಾಡುತ್ತಿತ್ತು.

07031015a ಅಪರೇಽಪ್ಯಪರಾಂ ಜಘ್ನುರ್ವಾರಣಾಃ ಪತಿತಾನ್ನರಾನ್|

07031015c ವಿಷಾಣೈಶ್ಚಾವನಿಂ ಗತ್ವಾ ವ್ಯಭಿಂದನ್ರಥಿನೋ ಬಹೂನ್||

ಇನ್ನು ಕೆಲವು ಆನೆಗಳು ಕೆಳಗೆ ಬಿದ್ದಿದ್ದ ನರರನ್ನು ತುಳಿದು ಜಜ್ಜಿಹಾಕುತ್ತಿದ್ದವು. ಕೆಲವು ಹೋಗಿ ತಮ್ಮ ದಂತಗಳಿಂದ ಹಲವಾರು ರಥಗಳನ್ನು ತಿವಿದು ಬೀಳಿಸುತ್ತಿದ್ದವು.

07031016a ನರಾಂತ್ರೈಃ ಕೇ ಚಿದಪರೇ ವಿಷಾಣಾಲಗ್ನಸಂಸ್ರವೈಃ|

07031016c ಬಭ್ರಮುಃ ಶತಶೋ ನಾಗಾ ಮೃದ್ನಂತಃ ಶತಶೋ ನರಾನ್||

07031017a ಕಾಂಸ್ಯಾಯಸತನುತ್ರಾಣಾನ್ನರಾಶ್ವರಥಕುಂಜರಾನ್|

07031017c ಪತಿತಾನ್ಪೋಥಯಾಂ ಚಕ್ರುರ್ದ್ವಿಪಾಃ ಸ್ಥೂಲನಡಾನಿವ||

07031018a ಗೃಧ್ರಪತ್ರಾಧಿವಾಸಾಂಸಿ ಶಯನಾನಿ ನರಾಧಿಪಾಃ|

07031018c ಹ್ರೀಮಂತಃ ಕಾಲಸಂಪಕ್ವಾಃ ಸುದುಃಖಾನ್ಯಧಿಶೇರತೇ||

07031019a ಹಂತಿ ಸ್ಮಾತ್ರ ಪಿತಾ ಪುತ್ರಂ ರಥೇನಾಭ್ಯತಿವರ್ತತೇ|

07031019c ಪುತ್ರಶ್ಚ ಪಿತರಂ ಮೋಹಾನ್ನಿರ್ಮರ್ಯಾದಮವರ್ತತ||

07031020a ಅಕ್ಷೋ ಭಗ್ನೋ ಧ್ವಜಶ್ಚಿನ್ನಶ್ಚತ್ರಮುರ್ವ್ಯಾಂ ನಿಪಾತಿತಂ|

07031020c ಯುಗಾರ್ಧಂ ಚಿನ್ನಮಾದಾಯ ಪ್ರದುದ್ರಾವ ತಥಾ ಹಯಃ||

07031021a ಸಾಸಿರ್ಬಾಹುರ್ನಿಪತಿತಃ ಶಿರಶ್ಚಿನ್ನಂ ಸಕುಂಡಲಂ|

07031021c ಗಜೇನಾಕ್ಷಿಪ್ಯ ಬಲಿನಾ ರಥಃ ಸಂಚೂರ್ಣಿತಃ ಕ್ಷಿತೌ||

07031022a ರಥಿನಾ ತಾಡಿತೋ ನಾಗೋ ನಾರಾಚೇನಾಪತದ್ವ್ಯಸುಃ|

07031022c ಸಾರೋಹಶ್ಚಾಪತದ್ವಾಜೀ ಗಜೇನಾತಾಡಿತೋ ಭೃಶಂ||

07031023a ನಿರ್ಮರ್ಯಾದಂ ಮಹದ್ಯುದ್ಧಮವರ್ತತ ಸುದಾರುಣಂ|

07031023c ಹಾ ತಾತ ಹಾ ಪುತ್ರ ಸಖೇ ಕ್ವಾಸಿ ತಿಷ್ಠ ಕ್ವ ಧಾವಸಿ||

07031024a ಪ್ರಹರಾಹರ ಜಹ್ಯೇನಂ ಸ್ಮಿತಕ್ಷ್ವೇಡಿತಗರ್ಜಿತೈಃ|

07031024c ಇತ್ಯೇವಮುಚ್ಚರಂತ್ಯಃ ಸ್ಮ ಶ್ರೂಯಂತೇ ವಿವಿಧಾ ಗಿರಃ||

07031025a ನರಸ್ಯಾಶ್ವಸ್ಯ ನಾಗಸ್ಯ ಸಮಸಜ್ಜತ ಶೋಣಿತಂ|

07031025c ಉಪಾಶಾಮ್ಯದ್ರಜೋ ಭೌಮಂ ಭೀರೂನ್ಕಶ್ಮಲಮಾವಿಶತ್||

07031026a ಆಸೀತ್ಕೇಶಪರಾಮರ್ಶೋ ಮುಷ್ಟಿಯುದ್ಧಂ ಚ ದಾರುಣಂ|

07031026c ನಖೈರ್ದಂತೈಶ್ಚ ಶೂರಾಣಮದ್ವೀಪೇ ದ್ವೀಪಮಿಚ್ಚತಾಂ||

07031027a ತತ್ರಾಚ್ಚಿದ್ಯತ ವೀರಸ್ಯ ಸಖಡ್ಗೋ ಬಾಹುರುದ್ಯತಃ|

07031027c ಸಧನುಶ್ಚಾಪರಸ್ಯಾಪಿ ಸಶರಃ ಸಾಂಕುಶಸ್ತಥಾ||

07031028a ಪ್ರಾಕ್ರೋಶದನ್ಯಮನ್ಯೋಽತ್ರ ತಥಾನ್ಯೋ ವಿಮುಖೋಽದ್ರವತ್|

07031028c ಅನ್ಯಃ ಪ್ರಾಪ್ತಸ್ಯ ಚಾನ್ಯಸ್ಯ ಶಿರಃ ಕಾಯಾದಪಾಹರತ್||

07031029a ಶಬ್ದಮಭ್ಯದ್ರವಚ್ಚಾನ್ಯಃ ಶಬ್ದಾದನ್ಯೋಽದ್ರವದ್ಭೃಶಂ|

07031029c ಸ್ವಾನನ್ಯೋಽಥ ಪರಾನನ್ಯೋ ಜಘಾನ ನಿಶಿತೈಃ ಶರೈಃ||

07031030a ಗಿರಿಶೃಂಗೋಪಮಶ್ಚಾತ್ರ ನಾರಾಚೇನ ನಿಪಾತಿತಃ|

07031030c ಮಾತಂಗೋ ನ್ಯಪತದ್ಭೂಮೌ ನದೀರೋಧ ಇವೋಷ್ಣಗೇ||

07031031a ತಥೈವ ರಥಿನಂ ನಾಗಃ ಕ್ಷರನ್ಗಿರಿರಿವಾರುಜತ್|

07031031c ಅಧ್ಯತಿಷ್ಠತ್ಪದಾ ಭೂಮೌ ಸಹಾಶ್ವಂ ಸಹಸಾರಥಿಂ||

07031032a ಶೂರಾನ್ಪ್ರಹರತೋ ದೃಷ್ಟ್ವಾ ಕೃತಾಸ್ತ್ರಾನ್ರುಧಿರೋಕ್ಷಿತಾನ್|

07031032c ಬಹೂನಪ್ಯಾವಿಶನ್ಮೋಹೋ ಭೀರೂನ್ ಹೃದಯದುರ್ಬಲಾನ್||

07031033a ಸರ್ವಮಾವಿಗ್ನಮಭವನ್ನ ಪ್ರಾಜ್ಞಾಯತ ಕಿಂ ಚನ|

07031033c ಸೈನ್ಯೇ ಚ ರಜಸಾ ಧ್ವಸ್ತೇ ನಿರ್ಮರ್ಯಾದಮವರ್ತತ||

07031034a ತತಃ ಸೇನಾಪತಿಃ ಶೀಘ್ರಮಯಂ ಕಾಲ ಇತಿ ಬ್ರುವನ್|

07031034c ನಿತ್ಯಾಭಿತ್ವರಿತಾನೇವ ತ್ವರಯಾಮಾಸ ಪಾಂಡವಾನ್||

07031035a ಕುರ್ವಂತಃ ಶಾಸನಂ ತಸ್ಯ ಪಾಂಡವೇಯಾ ಯಶಸ್ವಿನಃ|

07031035c ಸರೋ ಹಂಸಾ ಇವಾಪೇತುರ್ಘ್ನಂತೋ ದ್ರೋಣರಥಂ ಪ್ರತಿ||

07031036a ಗೃಃಣೀತಾದ್ರವತಾನ್ಯೋನ್ಯಂ ವಿಭೀತಾ ವಿನಿಕೃಂತತ|

07031036c ಇತ್ಯಾಸೀತ್ತುಮುಲಃ ಶಬ್ದೋ ದುರ್ಧರ್ಷಸ್ಯ ರಥಂ ಪ್ರತಿ||

07031037a ತತೋ ದ್ರೋಣಃ ಕೃಪಃ ಕರ್ಣೋ ದ್ರೌಣೀ ರಾಜಾ ಜಯದ್ರಥಃ|

07031037c ವಿಂದಾನುವಿಂದಾವ್ ಅವಂತ್ಯೌ ಶಲ್ಯಶ್ಚೈನಾನವಾರಯನ್||

07031038a ತೇ ತ್ವಾರ್ಯಧರ್ಮಸಂರಬ್ಧಾ ದುರ್ನಿವಾರ್ಯಾ ದುರಾಸದಾಃ|

07031038c ಶರಾರ್ತಾ ನ ಜುಹುರ್ದ್ರೋಣಂ ಪಾಂಚಾಲಾಃ ಪಾಂಡವೈಃ ಸಹ||

07031039a ತತೋ ದ್ರೋಣೋಽಭಿಸಂಕ್ರುದ್ಧೋ ವಿಸೃಜಂ ಶತಶಃ ಶರಾನ್|

07031039c ಚೇದಿಪಾಂಚಾಲಪಾಂಡೂನಾಮಕರೋತ್ಕದನಂ ಮಹತ್||

07031040a ತಸ್ಯ ಜ್ಯಾತಲನಿರ್ಘೋಷಃ ಶುಶ್ರುವೇ ದಿಕ್ಷು ಮಾರಿಷ|

07031040c ವಜ್ರಸಂಘಾತಸಂಕಾಶಸ್ತ್ರಾಸಯನ್ಪಾಂಡವಾನ್ಬಹೂನ್||

07031041a ಏತಸ್ಮಿನ್ನಂತರೇ ಜಿಷ್ಣುರ್ಹತ್ವಾ ಸಂಶಪ್ತಕಾನ್ಬಲೀ|

07031041c ಅಬ್ಯಯಾತ್ತತ್ರ ಯತ್ರ ಸ್ಮ ದ್ರೋಣಃ ಪಾಂಡೂನ್ಪ್ರಮರ್ದತಿ||

07031042a ತಂ ಶರೌಘಮಹಾವರ್ತಂ ಶೋಣಿತೋದಂ ಮಹಾಹ್ರದಂ|

07031042c ತೀರ್ಣಃ ಸಂಶಪ್ತಕಾನ್ ಹತ್ವಾ ಪ್ರತ್ಯದೃಶ್ಯತ ಫಲ್ಗುನಃ||

07031043a ತಸ್ಯ ಕೀರ್ತಿಮತೋ ಲಕ್ಷ್ಮ ಸೂರ್ಯಪ್ರತಿಮತೇಜಸಃ|

07031043c ದೀಪ್ಯಮಾನಮಪಶ್ಯಾಮ ತೇಜಸಾ ವಾನರಧ್ವಜಂ||

07031044a ಸಂಶಪ್ತಕಸಮುದ್ರಂ ತಮುಚ್ಚೋಷ್ಯಾಸ್ತ್ರಗಭಸ್ತಿಭಿಃ|

07031044c ಸ ಪಾಂಡವಯುಗಾಂತಾರ್ಕಃ ಕುರೂನಪ್ಯಭ್ಯತೀತಪತ್||

07031045a ಪ್ರದದಾಹ ಕುರೂನ್ಸರ್ವಾನರ್ಜುನಃ ಶಸ್ತ್ರತೇಜಸಾ|

07031045c ಯುಗಾಂತೇ ಸರ್ವಭೂತಾನಿ ಧೂಮಕೇತುರಿವೋತ್ಥಿತಃ||

07031046a ತೇನ ಬಾಣಸಹಸ್ರೌಘೈರ್ಗಜಾಶ್ವರಥಯೋಧಿನಃ|

07031046c ತಾಡ್ಯಮಾನಾಃ ಕ್ಷಿತಿಂ ಜಗ್ಮುರ್ಮುಕ್ತಶಸ್ತ್ರಾಃ ಶರಾರ್ದಿತಾಃ||

07031047a ಕೇ ಚಿದಾರ್ತಸ್ವರಂ ಚಕ್ರುರ್ವಿನೇದುರಪರೇ ಪುನಃ|

07031047c ಪಾರ್ಥಬಾಣಹತಾಃ ಕೇ ಚಿನ್ನಿಪೇತುರ್ವಿಗತಾಸವಃ||

07031048a ತೇಷಾಮುತ್ಪತತಾಂ ಕಾಂಶ್ಚಿತ್ಪತಿತಾಂಶ್ಚ ಪರಾಮ್ಮುಖಾನ್|

07031048c ನ ಜಘಾನಾರ್ಜುನೋ ಯೋಧಾನ್ಯೋಧವ್ರತಮನುಸ್ಮರನ್||

07031049a ತೇ ವಿಶೀರ್ಣರಥಾಶ್ವೇಭಾಃ ಪ್ರಾಯಶಶ್ಚ ಪರಾಙ್ಮುಖಾಃ|

07031049c ಕುರವಃ ಕರ್ಣ ಕರ್ಣೇತಿ ಹಾ ಹೇತಿ ಚ ವಿಚುಕ್ರುಶುಃ||

07031050a ತಮಾಧಿರಥಿರಾಕ್ರಂದಂ ವಿಜ್ಞಾಯ ಶರಣೈಷಿಣಾಂ|

07031050c ಮಾ ಭೈಷ್ಟೇತಿ ಪ್ರತಿಶ್ರುತ್ಯ ಯಯಾವಭಿಮುಖೋಽರ್ಜುನಂ||

07031051a ಸ ಭಾರತರಥಶ್ರೇಷ್ಠಃ ಸರ್ವಭಾರತಹರ್ಷಣಃ|

07031051c ಪ್ರಾದುಶ್ಚಕ್ರೇ ತದಾಗ್ನೇಯಮಸ್ತ್ರಮಸ್ತ್ರವಿದಾಂ ವರಃ||

07031052a ತಸ್ಯ ದೀಪ್ತಶರೌಘಸ್ಯ ದೀಪ್ತಚಾಪಧರಸ್ಯ ಚ|

07031052c ಶರೌಘಾಂ ಶರಜಾಲೇನ ವಿದುಧಾವ ಧನಂಜಯಃ|

07031052e ಅಸ್ತ್ರಮಸ್ತ್ರೇಣ ಸಂವಾರ್ಯ ಪ್ರಾಣದದ್ವಿಸೃಜಂ ಶರಾನ್||

07031053a ಧೃಷ್ಟದ್ಯುಮ್ನಶ್ಚ ಭೀಮಶ್ಚ ಸಾತ್ಯಕಿಶ್ಚ ಮಹಾರಥಃ|

07031053c ವಿವ್ಯಧುಃ ಕರ್ಣಮಾಸಾದ್ಯ ತ್ರಿಭಿಸ್ತ್ರಿಭಿರಜಿಃಮಗೈಃ||

07031054a ಅರ್ಜುನಾಸ್ತ್ರಂ ತು ರಾಧೇಯಃ ಸಂವಾರ್ಯ ಶರವೃಷ್ಟಿಭಿಃ|

07031054c ತೇಷಾಂ ತ್ರಯಾಣಾಂ ಚಾಪಾನಿ ಚಿಚ್ಚೇದ ವಿಶಿಖೈಸ್ತ್ರಿಭಿಃ||

07031055a ತೇ ನಿಕೃತ್ತಾಯುಧಾಃ ಶೂರಾ ನಿರ್ವಿಷಾ ಭುಜಗಾ ಇವ|

07031055c ರಥಶಕ್ತೀಃ ಸಮುತ್ಕ್ಷಿಪ್ಯ ಭೃಶಂ ಸಿಂಹಾ ಇವಾನದನ್||

07031056a ತಾ ಭುಜಾಗ್ರೈರ್ಮಹಾವೇಗಾ ವಿಸೃಷ್ಟಾ ಭುಜಗೋಪಮಾಃ|

07031056c ದೀಪ್ಯಮಾನಾ ಮಹಾಶಕ್ತ್ಯೋ ಜಗ್ಮುರಾಧಿರಥಿಂ ಪ್ರತಿ||

07031057a ತಾ ನಿಕೃತ್ಯ ಶಿತೈರ್ಬಾಣೈಸ್ತ್ರಿಭಿಸ್ತ್ರಿಭಿರಜಿಹ್ಮಗೈಃ|

07031057c ನನಾದ ಬಲವಾನ್ಕರ್ಣಃ ಪಾರ್ಥಾಯ ವಿಸೃಜಂ ಶರಾನ್||

07031058a ಅರ್ಜುನಶ್ಚಾಪಿ ರಾಧೇಯಂ ವಿದ್ಧ್ವಾ ಸಪ್ತಭಿರಾಶುಗೈಃ|

07031058c ಕರ್ಣಾದವರಜಂ ಬಾಣೈರ್ಜಘಾನ ನಿಶಿತೈಸ್ತ್ರಿಭಿಃ||

07031059a ತತಃ ಶತ್ರುಂಜಯಂ ಹತ್ವಾ ಪಾರ್ಥಃ ಷಡ್ಭಿರಜಿಹ್ಮಗೈಃ|

07031059c ಜಹಾರ ಸದ್ಯೋ ಭಲ್ಲೇನ ವಿಪಾಟಸ್ಯ ಶಿರೋ ರಥಾತ್||

07031060a ಪಶ್ಯತಾಂ ಧಾರ್ತರಾಷ್ಟ್ರಾಣಾಂ ಏಕೇನೈವ ಕಿರೀಟಿನಾ|

07031060c ಪ್ರಮುಖೇ ಸೂತಪುತ್ರಸ್ಯ ಸೋದರ್ಯಾ ನಿಹತಾಸ್ತ್ರಯಃ||

07031061a ತತೋ ಭೀಮಃ ಸಮುತ್ಪತ್ಯ ಸ್ವರಥಾದ್ವೈನತೇಯವತ್|

07031061c ವರಾಸಿನಾ ಕರ್ಣಪಕ್ಷಾಂ ಜಘಾನ ದಶ ಪಂಚ ಚ||

07031062a ಪುನಃ ಸ್ವರಥಮಾಸ್ಥಾಯ ಧನುರಾದಾಯ ಚಾಪರಂ|

07031062c ವಿವ್ಯಾಧ ದಶಭಿಃ ಕರ್ಣಂ ಸೂತಮಶ್ವಾಂಶ್ಚ ಪಂಚಭಿಃ||

07031063a ಧೃಷ್ಟದ್ಯುಮ್ನೋಽಪ್ಯಸಿವರಂ ಚರ್ಮ ಚಾದಾಯ ಭಾಸ್ವರಂ|

07031063c ಜಘಾನ ಚಂದ್ರವರ್ಮಾಣಂ ಬೃಹತ್ಕ್ಷತ್ರಂ ಚ ಪೌರವಂ||

07031064a ತತಃ ಸ್ವರಥಮಾಸ್ಥಾಯ ಪಾಂಚಾಲ್ಯೋಽನ್ಯಚ್ಚ ಕಾರ್ಮುಕಂ|

07031064c ಆದಾಯ ಕರ್ಣಂ ವಿವ್ಯಾಧ ತ್ರಿಸಪ್ತತ್ಯಾ ನದನ್ರಣೇ||

07031065a ಶೈನೇಯೋಽಪ್ಯನ್ಯದಾದಾಯ ಧನುರಿಂದ್ರಾಯುಧದ್ಯುತಿ|

07031065c ಸೂತಪುತ್ರಂ ಚತುಃಷಷ್ಟ್ಯಾ ವಿದ್ಧ್ವಾ ಸಿಂಹ ಇವಾನದತ್||

07031066a ಭಲ್ಲಭ್ಯಾಂ ಸಾಧುಮುಕ್ತಾಭ್ಯಾಂ ಚಿತ್ತ್ವಾ ಕರ್ಣಸ್ಯ ಕಾರ್ಮುಕಂ|

07031066c ಪುನಃ ಕರ್ಣಂ ತ್ರಿಭಿರ್ಬಾಣೈರ್ಬಾಹ್ವೋರುರಸಿ ಚಾರ್ಪಯತ್||

07031067a ತತೋ ದುರ್ಯೋಧನೋ ದ್ರೋಣೋ ರಾಜಾ ಚೈವ ಜಯದ್ರಥಃ|

07031067c ನಿಮಜ್ಜಮಾನಂ ರಾಧೇಯಮುಜ್ಜಹ್ರುಃ ಸಾತ್ಯಕಾರ್ಣವಾತ್||

07031068a ಧೃಷ್ಟದ್ಯುಮ್ನಶ್ಚ ಭೀಮಶ್ಚ ಸೌಭದ್ರೋಽರ್ಜುನ ಏವ ಚ|

07031068c ನಕುಲಃ ಸಹದೇವಶ್ಚ ಸಾತ್ಯಕಿಂ ಜುಗುಪೂ ರಣೇ||

07031069a ಏವಮೇಷ ಮಹಾರೌದ್ರಃ ಕ್ಷಯಾರ್ಥಂ ಸರ್ವಧನ್ವಿನಾಂ|

07031069c ತಾವಕಾನಾಂ ಪರೇಷಾಂ ಚ ತ್ಯಕ್ತ್ವಾ ಪ್ರಾಣಾನಭೂದ್ ರಣಃ||

07031070a ಪದಾತಿರಥನಾಗಾಶ್ವೈರ್ಗಜಾಶ್ವರಥಪತ್ತಯಃ|

07031070c ರಥಿನೋ ನಾಗಪತ್ತ್ಯಶ್ವೈ ರಥಪತ್ತೀ ರಥದ್ವಿಪೈಃ||

07031071a ಅಶ್ವೈರಶ್ವಾ ಗಜೈರ್ನಾಗಾ ರಥಿನೋ ರಥಿಭಿಃ ಸಹ|

07031071c ಸಂಸಕ್ತಾಃ ಸಮದೃಶ್ಯಂತ ಪತ್ತಯಶ್ಚಾಪಿ ಪತ್ತಿಭಿಃ||

07031072a ಏವಂ ಸುಕಲಿಲಂ ಯುದ್ಧಮಾಸೀತ್ಕ್ರವ್ಯಾದಹರ್ಷಣಂ|

07031072c ಮಹದ್ಭಿಸ್ತೈರಭೀತಾನಾಂ ಯಮರಾಷ್ಟ್ರವಿವರ್ಧನಂ||

07031073a ತತೋ ಹತಾ ನರರಥವಾಜಿಕುಂಜರೈರ್

        ಅನೇಕಶೋ ದ್ವಿಪರಥವಾಜಿಪತ್ತಯಃ|

07031073c ಗಜೈರ್ಗಜಾ ರಥಿಭಿರುದಾಯುಧಾ ರಥಾ

        ಹಯೈರ್ಹಯಾಃ ಪತ್ತಿಗಣೈಶ್ಚ ಪತ್ತಯಃ||

07031074a ರಥೈರ್ದ್ವಿಪಾ ದ್ವಿರದವರೈರ್ಮಹಾಹಯಾ

        ಹಯೈರ್ನರಾ ವರರಥಿಭಿಶ್ಚ ವಾಜಿನಃ|

07031074c ನಿರಸ್ತಜಿಹ್ವಾದಶನೇಕ್ಷಣಾಃ ಕ್ಷಿತೌ

        ಕ್ಷಯಂ ಗತಾಃ ಪ್ರಮಥಿತವರ್ಮಭೂಷಣಾಃ||

 

07031075a ತಥಾ ಪರೈರ್ಬಹುಕರಣೈರ್ವರಾಯುಧೈರ್

        ಹತಾ ಗತಾಃ ಪ್ರತಿಭಯದರ್ಶನಾಃ ಕ್ಷಿತಿಂ|

07031075c ವಿಪೋಥಿತಾ ಹಯಗಜಪಾದತಾಡಿತಾ

        ಭೃಶಾಕುಲಾ ರಥಖುರನೇಮಿಭಿರ್ಹತಾಃ||

ಹಾಗೆಯೇ ನೋಡಲು ಭಯಂಕರರಾಗಿದ್ದವರು ಶತ್ರುಗಳ ಅನೇಕ ವಿಧದ ಉಪಕರಣ-ಆಯುಧಗಳಿಂದ ಹೊಡೆಯಲ್ಪಟ್ಟು ಹತರಾಗಿ ನೆಲವನ್ನು ಸೇರಿದ್ದರು. ಕೆಲವರು ಕುದುರೆ-ಆನೆಗಳ ಕಾಲಿನ ತುಳಿತಕ್ಕೆ ಸಿಲುಕಿ ಅಥವಾ ರಥದ ಗಾಲಿಗಳಿಗೆ ಸಿಲುಕಿ ಜಜ್ಜಿ ಹೋಗಿದ್ದರು.

07031076a ಪ್ರಮೋದನೇ ಶ್ವಾಪದಪಕ್ಷಿರಕ್ಷಸಾಂ

        ಜನಕ್ಷಯೇ ವರ್ತತಿ ತತ್ರ ದಾರುಣೇ|

07031076c ಮಹಾಬಲಾಸ್ತೇ ಕುಪಿತಾಃ ಪರಸ್ಪರಂ

        ನಿಷೂದಯಂತಃ ಪ್ರವಿಚೇರುರೋಜಸಾ||

ತಮ್ಮ ತೇಜಸ್ಸುಗಳನ್ನು ಬಳಸಿ ಪರಸ್ಪರರಲ್ಲಿ ಕುಪಿತರಾಗಿ ಆ ಮಹಾಬಲರು ಸಂಹರಿಸುತ್ತಿರಲು ಅಲ್ಲಿ ನಡೆಯುತ್ತಿದ್ದ ಜನಕ್ಷಯದಿಂದ ನಾಯಿ-ನರಿಗಳು ಮತ್ತು ಮಾಂಸವನ್ನು ಭಕ್ಷಿಸುವ ಪಕ್ಷಿಗಳು ತುಂಬಾ ಸಂತೋಷಗೊಂಡಿದ್ದವು.

07031077a ತತೋ ಬಲೇ ಭೃಶಲುಲಿತೇ ಪರಸ್ಪರಂ

        ನಿರೀಕ್ಷಮಾಣೇ ರುಧಿರೌಘಸಂಪ್ಲುತೇ|

07031077c ದಿವಾಕರೇಽಸ್ತಂಗಿರಿಮಾಸ್ಥಿತೇ ಶನೈರ್

        ಉಭೇ ಪ್ರಯಾತೇ ಶಿಬಿರಾಯ ಭಾರತ||

ಆಗ ಎರಡೂ ಸೇನೆಗಳೂ ಪರಸ್ಪರರಿಂದ ತುಂಬಾ ನುಗ್ಗಾಗಿ, ರಕ್ತದಲ್ಲಿ ತೋಯ್ದು ಪರಸ್ಪರರನ್ನು ನಿರೀಕ್ಷಿಸುತ್ತಿರಲು, ದಿವಾಕರನು ನಿಧಾನವಾಗಿ ಅಸ್ತಂಗಿರಿಯನ್ನೇರಿದನು. ಭಾರತ! ಆಗ ಎರಡೂ ಪಕ್ಷಗಳೂ ಶಿಬಿರಗಳಿಗೆ ತೆರಳಿದವು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ದ್ವಾದಶದಿವಸಾವಹಾರೇ ಏಕತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ದ್ವಾದಶದಿವಸಾವಹಾರ ಎನ್ನುವ ಮೂವತ್ತೊಂದನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೬/೧೮, ಉಪಪರ್ವಗಳು-೬೬/೧೦೦, ಅಧ್ಯಾಯಗಳು-೧೦೦೮/೧೯೯೫, ಶ್ಲೋಕಗಳು-೩೪೫೨೧/೭೩೭೮೪

Image result for trees against white background

Comments are closed.