Aranyaka Parva: Chapter 180

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೧೮೦

ಶ್ರೀಕೃಷ್ಣ, ಮಾರ್ಕಂಡೇಯ ಮತ್ತು ನಾರದರ ಆಗಮನ

ಕಾಮ್ಯಕ ವನಕ್ಕೆ ಪಾಂಡವರು ಹಿಂದಿರುಗಿದಾಗ ಅವರನ್ನು ಕಾಣಲು ಕೃಷ್ಣನು ಸತ್ಯಭಾಮೆಯೊಂದಿಗೆ ಆಗಮಿಸಿದುದು (೧-೧೪). ಕೃಷ್ಣ-ಯುಧಿಷ್ಠಿರರ ಸಂವಾದ (೧೫-೩೮). ಮಾರ್ಕಂಡೇಯನ ಆಗಮನ (೩೯-೪೩). ನಾರದನ ಆಗಮನ (೪೪-೪೬). ಯುಧಿಷ್ಠಿರನು ಕೇಳಿಕೊಳ್ಳಲು ಮಾರ್ಕಂಡೇಯನು ಕಥೆಗಳನ್ನು ಹೇಳಲು ಪ್ರಾರಂಭಿಸಿದುದು (೪೭-೪೯).

03180001 ವೈಶಂಪಾಯನ ಉವಾಚ|

03180001a ಕಾಮ್ಯಕಂ ಪ್ರಾಪ್ಯ ಕೌಂತೇಯಾ ಯುಧಿಷ್ಠಿರಪುರೋಗಮಾಃ|

03180001c ಕೃತಾತಿಥ್ಯಾ ಮುನಿಗಣೈರ್ನಿಷೇದುಃ ಸಹ ಕೃಷ್ಣಯಾ||

ವೈಶಂಪಾಯನನು ಹೇಳಿದನು: “ಯುಧಿಷ್ಠಿರನ ನಾಯಕತ್ವದಲ್ಲಿ ಕೌಂತೇಯರು ಕಾಮ್ಯಕವನ್ನು ತಲುಪಿದಾಗ ಮುನಿಗಣಗಳಿಂದ ಸ್ವಾಗತಿಸಲ್ಪಟ್ಟರು ಮತ್ತು ಕೃಷ್ಣೆಯೊಂದಿಗೆ ಅಲ್ಲಿ ನೆಲೆಸಿದರು.

03180002a ತತಸ್ತಾನ್ಪರಿವಿಶ್ವಸ್ತಾನ್ವಸತಃ ಪಾಂಡುನಂದನಾನ್|

03180002c ಬ್ರಾಹ್ಮಣಾ ಬಹವಸ್ತತ್ರ ಸಮಂತಾತ್ಪರ್ಯವಾರಯನ್||

ಅಲ್ಲಿ ಆ ಪಾಂಡುನಂದನರನ್ನು ಎಲ್ಲ ಕಡೆಯಿಂದಲೂ ಬಂದ ಬಹುಮಂದಿ ಬ್ರಾಹ್ಮಣರು ಸುತ್ತುವರೆದು ಸಲಹೆ-ಪ್ರೋತ್ಸಾಹಗಳನ್ನು ನೀಡುತ್ತಿದ್ದರು.

03180003a ಅಥಾಬ್ರವೀದ್ದ್ವಿಜಃ ಕಶ್ಚಿದರ್ಜುನಸ್ಯ ಪ್ರಿಯಃ ಸಖಾ|

03180003c ಏಷ್ಯತೀಹ ಮಹಾಬಾಹುರ್ವಶೀ ಶೌರಿರುದಾರಧೀಃ||

ಒಮ್ಮೆ ಒಬ್ಬ ಬ್ರಾಹ್ಮಣನು ಹೇಳಿದನು: “ಅರ್ಜುನನ ಪ್ರಿಯ ಸಖ, ಮಹಾಬಾಹು, ಶೌರಿ ಉದಾರಧಿಯು ಇಲ್ಲಿಗೆ ಬರುತ್ತಿದ್ದಾನೆ.

03180004a ವಿದಿತಾ ಹಿ ಹರೇರ್ಯೂಯಮಿಹಾಯಾತಾಃ ಕುರೂದ್ವಹಾಃ|

03180004c ಸದಾ ಹಿ ದರ್ಶನಾಕಾಂಕ್ಷೀ ಶ್ರೇಯೋಽನ್ವೇಷೀ ಚ ವೋ ಹರಿಃ||

ಕುರೂದ್ವಹ! ನೀನು ಮರಳಿ ಬಂದಿದ್ದೀಯೆ ಎಂದು ಹರಿಗೆ ತಿಳಿದಿದೆ. ನಿಮ್ಮ ಶ್ರೇಯಸ್ಸನ್ನೇ ಬಯಸುತ್ತಿರುವ ಹರಿಯು ನಿನ್ನನ್ನು ಕಾಣಲು ಸದಾ ಬಯಸುತ್ತಿದ್ದ.

03180005a ಬಹುವತ್ಸರಜೀವೀ ಚ ಮಾರ್ಕಂಡೇಯೋ ಮಹಾತಪಾಃ|

03180005c ಸ್ವಾಧ್ಯಾಯತಪಸಾ ಯುಕ್ತಃ ಕ್ಷಿಪ್ರಂ ಯುಷ್ಮಾನ್ಸಮೇಷ್ಯತಿ||

ಮತ್ತು ಬಹಳ ವರ್ಷಗಳು ಜೀವಿಸುತ್ತಿರುವ ಸ್ವಾಧ್ಯಾಯ ಮತ್ತು ತಪಸ್ಸುಗಳಲ್ಲಿ ನಿರತನಾಗಿರುವ ಮಹಾತಪಸ್ವಿ ಮಾರ್ಕಂಡೇಯನು ಶೀಘ್ರದಲ್ಲಿಯೇ ನಿಮ್ಮನ್ನು ಬಂದು ಸೇರುತ್ತಾನೆ.

03180006a ತಥೈವ ತಸ್ಯ ಬ್ರುವತಃ ಪ್ರತ್ಯದೃಷ್ಯತ ಕೇಶವಃ|

03180006c ಸೈನ್ಯಸುಗ್ರೀವಯುಕ್ತೇನ ರಥೇನ ರಥಿನಾಂ ವರಃ||

03180007a ಮಘವಾನಿವ ಪೌಲೋಮ್ಯಾ ಸಹಿತಃ ಸತ್ಯಭಾಮಯಾ|

03180007c ಉಪಾಯಾದ್ದೇವಕೀಪುತ್ರೋ ದಿದೃಕ್ಷುಃ ಕುರುಸತ್ತಮಾನ್||

ಅವನು ಹೀಗೆ ಹೇಳುತ್ತಿರುವಾಗಲೇ ಸೈನ್ಯ-ಸುಗ್ರೀವರನ್ನು ಕಟ್ಟಿದ ರಥದಲ್ಲಿ, ರಥಿಗಳಲ್ಲಿಯೇ ಶ್ರೇಷ್ಠ ಕೇಶವನು ಪೌಲೋಮಿಯ ಸಹಿತ ಇಂದ್ರನಂತೆ ಸತ್ಯಭಾಮೆಯ ಸಹಿತ ಅಲ್ಲಿ ಕಾಣಿಸಿಕೊಂಡನು. ದೇವಕೀಪುತ್ರನು ಕುರುಸತ್ತಮರನ್ನು ನೋಡಲೋಸುಗ ಬಂದನು.

03180008a ಅವತೀರ್ಯ ರಥಾತ್ಕೃಷ್ಣೋ ಧರ್ಮರಾಜಂ ಯಥಾವಿಧಿ|

03180008c ವವಂದೇ ಮುದಿತೋ ಧೀಮಾನ್ಭೀಮಂ ಚ ಬಲಿನಾಂ ವರಂ||

03180009a ಪೂಜಯಾಮಾಸ ಧೌಮ್ಯಂ ಚ ಯಮಾಭ್ಯಾಮಭಿವಾದಿತಃ|

03180009c ಪರಿಷ್ವಜ್ಯ ಗುಡಾಕೇಶಂ ದ್ರೌಪದೀಂ ಪರ್ಯಸಾಂತ್ವಯತ್||

ರಥದಿಂದ ಕೆಳಗಿಳಿದು ಕೃಷ್ಣನು ಯಥಾವಿಧಿಯಾಗಿ ಧೀಮಾನ್ ಧರ್ಮರಾಜನನ್ನು ಮತ್ತು ಬಲಿಗಳಲ್ಲಿಯೇ ಶ್ರೇಷ್ಠ ಭೀಮನನ್ನು ಸಂತೋಷದಿಂದ ನಮಸ್ಕರಿಸಿದನು. ಧೌಮ್ಯನನ್ನು ಪೂಜಿಸಿದನು. ಯಮಳರನ್ನು ಅಭಿವಂದಿಸಿದನು. ಗುಡಾಕೇಶನನ್ನು ಬಿಗಿದಪ್ಪಿದನು ಮತ್ತು ದ್ರೌಪದಿಯನ್ನು ಸಂತವಿಸಿದನು.

03180010a ಸ ದೃಷ್ಟ್ವಾ ಫಲ್ಗುನಂ ವೀರಂ ಚಿರಸ್ಯ ಪ್ರಿಯಮಾಗತಂ|

03180010c ಪರ್ಯಷ್ವಜತ ದಾಶಾರ್ಹಃ ಪುನಃ ಪುನರರಿಂದಮಂ||

ಆಗ ತಾನೆ ಬಂದಿದ್ದ ವೀರ ಪ್ರಿಯ ಫಲ್ಗುನ ಅರಿಂದಮನನ್ನು ದಾಶಾರ್ಹನು ಪುನಃ ಪುನಃ ಅಪ್ಪಿಕೊಂಡನು.

03180011a ತಥೈವ ಸತ್ಯಭಾಮಾಪಿ ದ್ರೌಪದೀಂ ಪರಿಷಸ್ವಜೇ|

03180011c ಪಾಂಡವಾನಾಂ ಪ್ರಿಯಾಂ ಭಾರ್ಯಾಂ ಕೃಷ್ಣಸ್ಯ ಮಹಿಷೀ ಪ್ರಿಯಾ||

ಹಾಗೆಯೇ ಕೃಷ್ಣನ ಪ್ರಿಯ ರಾಣಿ ಸತ್ಯಭಾಮೆಯೂ ಕೂಡ ಪಾಂಡವರ ಪ್ರಿಯ ಭಾರ್ಯೆ ದ್ರೌಪದಿಯನ್ನು ಆಲಂಗಿಸಿದಳು.

03180012a ತತಸ್ತೇ ಪಾಂಡವಾಃ ಸರ್ವೇ ಸಭಾರ್ಯಾಃ ಸಪುರೋಹಿತಾಃ|

03180012c ಆನರ್ಚುಃ ಪುಂಡರೀಕಾಕ್ಷಂ ಪರಿವವ್ರುಶ್ಚ ಸರ್ವಶಃ||

ಅನಂತರ ಎಲ್ಲ ಪಾಂಡವರೂ ಪತ್ನಿಯನ್ನೊಡಗೂಡಿ, ಪುರೋಹಿತನೊಂದಿಗೆ ಆಗಮಿಸಿದ ಪುಂಡರೀಕಾಕ್ಷನನ್ನು ಅರ್ಚಿಸಿದರು ಮತ್ತು ಎಲ್ಲರೂ ಅವನನ್ನು ಸುತ್ತುವರೆದು ಕುಳಿತುಕೊಂಡರು.

03180013a ಕೃಷ್ಣಸ್ತು ಪಾರ್ಥೇನ ಸಮೇತ್ಯ ವಿದ್ವಾನ್|

         ಧನಂಜಯೇನಾಸುರತರ್ಜನೇನ|

03180013c ಬಭೌ ಯಥಾ ಭೂತಪತಿರ್ಮಹಾತ್ಮಾ|

         ಸಮೇತ್ಯ ಸಾಕ್ಷಾದ್ಭಗವಾನ್ಗುಹೇನ||

ಭೂತಪತಿ ಮಹಾತ್ಮನು ಸಾಕ್ಷಾತ್ ಭಗವಾನ್ ಗುಹನನ್ನು ಸೇರಿದಂತೆ ವಿದ್ವಾನ್ ಕೃಷ್ಣನು ಧನಂಜಯ ಅಸುರತರ್ಜನ ಪಾರ್ಥನನ್ನು ಸೇರಿದನು.

03180014a ತತಃ ಸಮಸ್ತಾನಿ ಕಿರೀಟಮಾಲೀ|

         ವನೇಷು ವೃತ್ತಾನಿ ಗದಾಗ್ರಜಾಯ|

03180014c ಉಕ್ತ್ವಾ ಯಥಾವತ್ಪುನರನ್ವಪೃಚ್ಚತ್|

         ಕಥಂ ಸುಭದ್ರಾ ಚ ತಥಾಭಿಮನ್ಯುಃ||

ಅನಂತರ ಕಿರೀಟಮಾಲಿಯು ವನದಲ್ಲಿ ನಡೆದುದೆಲ್ಲವನ್ನೂ ಗದಾಗ್ರಜನಿಗೆ ಹೇಳಿ ಹಾಗೆಯೇ ಪುನಃ ಸುಭದ್ರೆ ಮತ್ತು ಅಭಿಮನ್ಯು ಹೇಗಿದ್ದಾರೆಂದು ಕೇಳಿದನು.

03180015a ಸ ಪೂಜಯಿತ್ವಾ ಮಧುಹಾ ಯಥಾವತ್|

         ಪಾರ್ಥಾಂಶ್ಚ ಕೃಷ್ಣಾಂ ಚ ಪುರೋಹಿತಂ ಚ|

03180015c ಉವಾಚ ರಾಜಾನಮಭಿಪ್ರಶಂಸನ್|

         ಯುಧಿಷ್ಠಿರಂ ತತ್ರ ಸಹೋಪವಿಶ್ಯ||

03180016a ಧರ್ಮಃ ಪರಃ ಪಾಂಡವ ರಾಜ್ಯಲಾಭಾತ್|

         ತಸ್ಯಾರ್ಥಮಾಹುಸ್ತಪ ಏವ ರಾಜನ್|

03180016c ಸತ್ಯಾರ್ಜವಾಭ್ಯಾಂ ಚರತಾ ಸ್ವಧರ್ಮಂ|

         ಜಿತಸ್ತವಾಯಂ ಚ ಪರಶ್ಚ ಲೋಕಃ||

ಆ ಮಧುಹನು ಯಥಾವತ್ತಾಗಿ ಪಾರ್ಥರನ್ನು, ಕೃಷ್ಣೆಯನ್ನು ಮತ್ತು ಪುರೋಹಿತನನ್ನು ಪೂಜಿಸಿ ರಾಜ ಯುಧಿಷ್ಠಿರನನ್ನು ಪ್ರಶಂಸಿಸುತ್ತಾ ಅವನ ಬಳಿ ಕುಳಿತುಕೊಂಡನು. “ಪಾಂಡವ! ರಾಜ್ಯಲಾಭಕ್ಕಿಂತ ಧರ್ಮವು ದೊಡ್ಡದು. ರಾಜನ್! ತಪಸ್ಸು ಅದನ್ನು ಪಡೆಯಲು ಸಹಾಯಮಾಡುತ್ತದೆ ಎಂದು ಹೇಳುತ್ತಾರೆ. ಸ್ವಧರ್ಮದಲ್ಲಿ ಸತ್ಯನಾಗಿ ಆರ್ಜದಿಂದ ನಡೆದುಕೊಂಡು ನೀನು ಈ ಲೋಕವನ್ನೂ ಪರಲೋಕವನ್ನೂ ಗೆದ್ದಿದ್ದೀಯೆ.

03180017a ಅಧೀತಮಗ್ರೇ ಚರತಾ ವ್ರತಾನಿ|

         ಸಮ್ಯಗ್ಧನುರ್ವೇದಮವಾಪ್ಯ ಕೃತ್ಸ್ನಂ|

03180017c ಕ್ಷಾತ್ರೇಣ ಧರ್ಮೇಣ ವಸೂನಿ ಲಬ್ಧ್ವಾ|

         ಸರ್ವೇ ಹ್ಯವಾಪ್ತಾಃ ಕ್ರತವಃ ಪುರಾಣಾಃ||

ಮೊದಲು ನೀನು ಅಗ್ರವ್ರತಗಳನ್ನು ನಡೆಸಿದೆ. ಅನಂತರ ಧನುರ್ವೇದವೆಲ್ಲವನ್ನೂ ಸಂಪೂರ್ಣವಾಗಿ ಪಡೆದೆ. ಕ್ಷಾತ್ರಧರ್ಮದಿಂದ ಸಂಪ್ತತ್ತನ್ನು ಪಡೆದು ಎಲ್ಲ ಪುರಾಣಕ್ರತುಗಳನ್ನೂ ಮಾಡಿದ್ದೀಯೆ.

03180018a ನ ಗ್ರಾಮ್ಯಧರ್ಮೇಷು ರತಿಸ್ತವಾಸ್ತಿ|

         ಕಾಮಾನ್ನ ಕಿಂ ಚಿತ್ಕುರುಷೇ ನರೇಂದ್ರ|

03180018c ನ ಚಾರ್ಥಲೋಭಾತ್ಪ್ರಜಹಾಸಿ ಧರ್ಮಂ|

         ತಸ್ಮಾತ್ಸ್ವಭಾವಾದಸಿ ಧರ್ಮರಾಜಃ||

ನೀನು ಗ್ರಾಮ್ಯಧರ್ಮದಲ್ಲಿ ಸಂತೋಷಪಡಲಿಲ್ಲ ಮತ್ತು ನರೇಂದ್ರ! ಕಾಮಗಳನ್ನೂ ಅರಸಿ ಹೋಗಲಿಲ್ಲ. ಅರ್ಥಲೋಭದಿಂದ ಧರ್ಮವನ್ನು ಬಿಡಲಿಲ್ಲ. ಆದುದರಿಂದ ನೀನು ನಿಜವಾಗಿಯೂ ಧರ್ಮರಾಜ.

03180019a ದಾನಂ ಚ ಸತ್ಯಂ ಚ ತಪಶ್ಚ ರಾಜಂ|

         ಶ್ರದ್ಧಾ ಚ ಶಾಂತಿಶ್ಚ ಧೃತಿಃ ಕ್ಷಮಾ ಚ|

03180019c ಅವಾಪ್ಯ ರಾಷ್ಟ್ರಾಣಿ ವಸೂನಿ ಭೋಗಾನ್|

         ಏಷಾ ಪರಾ ಪಾರ್ಥ ಸದಾ ರತಿಸ್ತೇ||

ರಾಜನ್! ರಾಷ್ಟ್ರ, ಸಂಪತ್ತು ಮತ್ತು ಭೋಗಗಳನ್ನು ಪಡೆಯುವುದಕ್ಕಿಂತ ಹೆಚ್ಚಿನದಾದ ದಾನ, ಸತ್ಯ, ತಪಸ್ಸು, ಶ್ರದ್ಧಾ, ಶಾಂತಿ, ಧೃತಿ, ಕ್ಷಮೆ ಇವುಗಳಲ್ಲಿ ನೀನು ಸದಾ ನಿರತನಾಗಿದ್ದೀಯೆ.

03180020a ಯದಾ ಜನೌಘಃ ಕುರುಜಾಂಗಲಾನಾಂ|

         ಕೃಷ್ಣಾಂ ಸಭಾಯಾಮವಶಾಮಪಶ್ಯತ್|

03180020c ಅಪೇತಧರ್ಮವ್ಯವಹಾರವೃತ್ತಂ|

         ಸಹೇತ ತತ್ಪಾಂಡವ ಕಸ್ತ್ವದನ್ಯಃ||

ಪಾಂಡವ! ಕುರುಜಂಗಲದವರು ಸೇರಿದ್ದಾಗ ದ್ರೌಪದಿಗೆ ಭಯವನ್ನೂ ದಾಸತ್ವವನ್ನೂ ನೀಡಿದ ಧರ್ಮವನ್ನೂ ವ್ಯವಹಾರದ ನಡತೆಯನ್ನೂ ತೊರೆದ ಆ ಪ್ರಕರಣವನ್ನು ನೀನಲ್ಲದೆ ಬೇರೆ ಯಾರು ತಾನೇ ಸಹಿಸಿಯಾರು?

03180021a ಅಸಂಶಯಂ ಸರ್ವಸಮೃದ್ಧಕಾಮಃ|

         ಕ್ಷಿಪ್ರಂ ಪ್ರಜಾಃ ಪಾಲಯಿತಾಸಿ ಸಮ್ಯಕ್|

03180021c ಇಮೇ ವಯಂ ನಿಗ್ರಹಣೇ ಕುರೂಣಾಂ|

         ಯದಿ ಪ್ರತಿಜ್ಞಾ ಭವತಃ ಸಮಾಪ್ತಾ||

ನೀನು ಸರ್ವಕಾಮಗಳನ್ನೂ ಪೂರೈಸಿ ಕ್ಷಿಪ್ರವಾಗಿ ಪ್ರಜೆಗಳನ್ನು ಪಾಲಿಸುತ್ತೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ನಿನ್ನ ಪ್ರತಿಜ್ಞೆಯು ಸಮಾಪ್ತವಾದ ನಂತರ ನಾವು ಕುರುಗಳನ್ನು ನಿಗ್ರಹಿಸುತ್ತೇವೆ.”

03180022a ಧೌಮ್ಯಂ ಚ ಕೃಷ್ಣಾಂ ಚ ಯುಧಿಷ್ಠಿರಂ ಚ|

         ಯಮೌ ಚ ಭೀಮಂ ಚ ದಶಾರ್ಹಸಿಂಹಃ|

03180022c ಉವಾಚ ದಿಷ್ಟ್ಯಾ ಭವತಾಂ ಶಿವೇನ|

         ಪ್ರಾಪ್ತಃ ಕಿರೀಟೀ ಮುದಿತಃ ಕೃತಾಸ್ತ್ರಃ||

ಅನಂತರ ಧೌಮ್ಯ, ಕೃಷ್ಣೆ, ಯುಧಿಷ್ಠಿರ, ಯಮಳರು ಮತ್ತು ಭೀಮನಿಗೆ ದಶಾರ್ಹಸಿಂಹನು “ನಿಮ್ಮ ಅದೃಷ್ಟದಿಂದ ಒಳ್ಳೆಯದಾಯಿತು! ಕಿರೀಟಿಯು ಅಸ್ತ್ರಗಳನ್ನು ಪಡೆದು ಸಂತೋಷದಿಂದ ಹಿಂದಿರುಗಿದ್ದಾನೆ” ಎಂದು ಹೇಳಿದನು.

03180023a ಪ್ರೋವಾಚ ಕೃಷ್ಣಾಮಪಿ ಯಾಜ್ಞಸೇನೀಂ|

         ದಶಾರ್ಹಭರ್ತಾ ಸಹಿತಃ ಸುಹೃದ್ಭಿಃ|

03180023c ಕೃಷ್ಣೇ ಧನುರ್ವೇದರತಿಪ್ರಧಾನಾಃ|

         ಸತ್ಯವ್ರತಾಸ್ತೇ ಶಿಶವಃ ಸುಶೀಲಾಃ||

03180023e ಸದ್ಭಿಃ ಸದೈವಾಚರಿತಂ ಸಮಾಧಿಂ|

         ಚರಂತಿ ಪುತ್ರಾಸ್ತವ ಯಾಜ್ಞಸೇನಿ||

ಅನಂತರ ದಾಶಾರ್ಹರ ದೊರೆ ತನ್ನ ಸ್ನೇಹಿತರೊಂದಿಗೆ ಯಾಜ್ಞಸೇನಿ ಕೃಷ್ಣೆಗೂ ಹೇಳಿದನು: “ಕೃಷ್ಣೇ! ನಿನ್ನ ಮಕ್ಕಳು ಸತ್ಯವ್ರತರಾಗಿ, ಸುಶೀಲರಾಗಿ ಧನುರ್ವೇದವನ್ನು ಪಡೆಯುವುದರಲ್ಲಿ ನಿರತರಾಗಿದ್ದಾರೆ. ಯಾಜ್ಞಸೇನಿ! ನಿನ್ನ ಮಕ್ಕಳು ಒಳ್ಳೆಯವರೊಡನೆ ಒಡನಾಡುತ್ತಾರೆ ಮತ್ತು ಸದಾ ಸಮಾಧಿಯನ್ನು ಆಚರಿಸುತ್ತಾರೆ.

03180024a ರಾಜ್ಯೇನ ರಾಷ್ಟ್ರೈಶ್ಚ ನಿಮಂತ್ರ್ಯಮಾಣಾಃ|

         ಪಿತ್ರಾ ಚ ಕೃಷ್ಣೇ ತವ ಸೋದರೈಶ್ಚ|

03180024c ನ ಯಜ್ಞಸೇನಸ್ಯ ನ ಮಾತುಲಾನಾಂ|

         ಗೃಹೇಷು ಬಾಲಾ ರತಿಮಾಪ್ನುವಂತಿ||

ಕೃಷ್ಣೇ! ನಿನ್ನ ತಂದೆ ಮತ್ತು ಸೋದರರು ಅವರಿಗೆ ರಾಜ್ಯ ಮತ್ತು ರಾಷ್ಟ್ರಗಳನ್ನಿತ್ತು ನೋಡಿದರು. ಆದರೆ ಆ ಬಾಲಕರು ಯಜ್ಞಸೇನನ ಮತ್ತು ಮಾವಂದಿರ ಮನೆಯಲ್ಲಿ ಸಂತೋಷವನ್ನು ಹೊಂದಲಿಲ್ಲ.

03180025a ಆನರ್ತಮೇವಾಭಿಮುಖಾಃ ಶಿವೇನ|

         ಗತ್ವಾ ಧನುರ್ವೇದರತಿಪ್ರಧಾನಾಃ|

03180025c ತವಾತ್ಮಜಾ ವೃಷ್ಣಿಪುರಂ ಪ್ರವಿಶ್ಯ|

         ನ ದೈವತೇಭ್ಯಃ ಸ್ಪೃಹಯಂತಿ ಕೃಷ್ಣೇ||

ಅವರು ಸುರಕ್ಷಿತರಾಗಿ ಧನುರ್ವೇದದಲ್ಲಿ ವಿಶೇಷವಾಗಿ ತಮ್ಮನ್ನು ತೊಡಗಿಸಿಕೊಳ್ಳುವುದಕ್ಕೋಸ್ಕರ ಆನರ್ತದ ಕಡೆ ಬಂದರು. ನಿನ್ನ ಮಕ್ಕಳು ವೃಷ್ಣಿಪುರವನ್ನು ಪ್ರವೇಶಿಸಿ ದೇವತೆಗಳಿಂದ ದೂಷಿತರಾಗುತ್ತಿಲ್ಲ ಕೃಷ್ಣೇ!

03180026a ಯಥಾ ತ್ವಮೇವಾರ್ಹಸಿ ತೇಷು ವೃತ್ತಿಂ|

         ಪ್ರಯೋಕ್ತುಮಾರ್ಯಾ ಚ ಯಥೈವ ಕುಂತೀ|

03180026c ತೇಷ್ವಪ್ರಮಾದೇನ ಸದಾ ಕರೋತಿ|

         ತಥಾ ಚ ಭೂಯಶ್ಚ ತಥಾ ಸುಭದ್ರಾ||

ಅವರ ನಡತೆಗಳ ಕುರಿತು ನೀನು ಹೇಗೆ ಅಥವಾ ಆರ್ಯೆ ಕುಂತಿಯು ಮಾರ್ಗದರ್ಶನ ನೀಡಬಲ್ಲರೋ ಹಾಗೆ ಸುಭದ್ರೆಯು ನಿತ್ಯವೂ ಅವರನ್ನು ಅಪ್ರಮಾದದದಿಂದ ದೂರವಿಡುತ್ತಿದ್ದಾಳೆ.

03180027a ಯಥಾನಿರುದ್ಧಸ್ಯ ಯಥಾಭಿಮನ್ಯೋರ್|

         ಯಥಾ ಸುನೀಥಸ್ಯ ಯಥೈವ ಭಾನೋಃ|

03180027c ತಥಾ ವಿನೇತಾ ಚ ಗತಿಶ್ಚ ಕೃಷ್ಣೇ|

         ತವಾತ್ಮಜಾನಾಮಪಿ ರೌಕ್ಮಿಣೇಯಃ||

ಕೃಷ್ಣೇ! ಅನಿರುದ್ಧನಿಗೆ ಹೇಗೋ, ಅಭಿಮನ್ಯುವಿಗೆ ಹೇಗೋ, ಸುನೀಥ ಮತ್ತು ಭಾನುಗಳಿಗೆ ಹೇಗೋ ಹಾಗೆ ನಿನ್ನ ಮಕ್ಕಳಿಗೂ ಕೂಡ ರೌಕ್ಮಿಣೇಯನು ಮಾರ್ಗದರ್ಶನ ನೀಡುತ್ತಿದ್ದಾನೆ.

03180028a ಗದಾಸಿಚರ್ಮಗ್ರಹಣೇಷು ಶೂರಾನ್|

         ಅಸ್ತ್ರೇಷು ಶಿಕ್ಷಾಸು ರಥಾಶ್ವಯಾನೇ|

03180028c ಸಮ್ಯಗ್ವಿನೇತಾ ವಿನಯತ್ಯತಂದ್ರೀಸ್|

         ತಾಂಶ್ಚಾಭಿಮನ್ಯುಃ ಸತತಂ ಕುಮಾರಃ||

ಕುಮಾರ ಅಭಿಮನ್ಯುವು ಅವರಿಗೆ ಗದಾಯುದ್ಧದಲ್ಲಿ, ಖಡ್ಗಯುದ್ಧದಲ್ಲಿ, ಗುರಾಣಿಗಳನ್ನು ಹಿಡಿಯುವುದರಲ್ಲಿ, ಅಸ್ತ್ರಗಳ ಪ್ರಯೋಗದಲ್ಲಿ, ರಥ ಮತ್ತು ಅಶ್ವಗಳನ್ನೇರುವುದರಲ್ಲಿ ಸತತವೂ ಚೆನ್ನಾಗಿ ಮಾರ್ಗದರ್ಶನವನ್ನು ನೀಡುತ್ತಿದ್ದಾನೆ.

03180029a ಸ ಚಾಪಿ ಸಮ್ಯಕ್ಪ್ರಣಿಧಾಯ ಶಿಕ್ಷಾಂ|

         ಅಸ್ತ್ರಾಣಿ ಚೈಷಾಂ ಗುರುವತ್ಪ್ರದಾಯ|

03180029c ತವಾತ್ಮಜಾನಾಂ ಚ ತಥಾಭಿಮನ್ಯೋಃ|

         ಪರಾಕ್ರಮೈಸ್ತುಷ್ಯತಿ ರೌಕ್ಮಿಣೇಯಃ||

ಅವನು ಗುರುವಿನಂತೆ ಅವರಿಗೆ ಚೆನ್ನಾಗಿ ತರಬೇತಿಯನ್ನೂ ಅಸ್ತ್ರಗಳನ್ನೂ ನೀಡಿದ್ದಾನೆ. ಈಗ ರೌಕ್ಮಿಣೇಯನು ನಿನ್ನ ಮಕ್ಕಳ ಮತ್ತು ಅಭಿಮನ್ಯುವಿನ ಪರಾಕ್ರಮಗಳಿಂದ ತೃಪ್ತನಾಗಿದ್ದಾನೆ.

03180030a ಯದಾ ವಿಹಾರಂ ಪ್ರಸಮೀಕ್ಷಮಾಣಾಃ|

         ಪ್ರಯಾಂತಿ ಪುತ್ರಾಸ್ತವ ಯಾಜ್ಞಸೇನಿ|

03180030c ಏಕೈಕಮೇಷಾಮನುಯಾಂತಿ ತತ್ರ|

         ರಥಾಶ್ಚ ಯಾನಾನಿ ಚ ದಂತಿನಶ್ಚ||

ಯಾಜ್ಞಸೇನಿ! ಆಟಗಳನ್ನು ನೋಡಲು ವಿಹಾರಕ್ಕೆಂದು ಹೋದಾಗಲೆಲ್ಲಾ ನಿನ್ನ ಪುತ್ರರೊಡನೆ ಒಬ್ಬೊಬ್ಬರೊಡನೆಯೂ ಒಂದೊಂದು ರಥ, ಪಲ್ಲಕ್ಕಿ ಮತ್ತು ಸೈನಿಕರು ಅನುಸರಿಸುತ್ತಾರೆ.”

03180031a ಅಥಾಬ್ರವೀದ್ಧರ್ಮರಾಜಂ ತು ಕೃಷ್ಣೋ|

         ದಶಾರ್ಹಯೋಧಾಃ ಕುಕುರಾಂಧಕಾಶ್ಚ|

03180031c ಏತೇ ನಿದೇಶಂ ತವ ಪಾಲಯಂತಿ|

         ತಿಷ್ಠಂತಿ ಯತ್ರೇಚ್ಚಸಿ ತತ್ರ ರಾಜನ್||

ಆಗ ಕೃಷ್ಣನು ಧರ್ಮರಾಜನಿಗೆ ಹೇಳಿದನು: “ರಾಜನ್! ದಾಶಾರ್ಹ, ಕುಕುರ ಮತ್ತು ಅಂಧಕ ಸೇನಾನಿಗಳು ನಿನ್ನ ಅಪ್ಪಣೆಯನ್ನು ಪಾಲಿಸಲು ಕಾದು ನಿಂತಿದ್ದಾರೆ.

03180032a ಆವರ್ತತಾಂ ಕಾರ್ಮುಕವೇಗವಾತಾ|

         ಹಲಾಯುಧಪ್ರಗ್ರಹಣಾ ಮಧೂನಾಂ|

03180032c ಸೇನಾ ತವಾರ್ಥೇಷು ನರೇಂದ್ರ ಯತ್ತಾ|

         ಸಸಾದಿಪತ್ತ್ಯಶ್ವರಥಾ ಸನಾಗಾ||

ನರೇಂದ್ರ! ಬಿರುಗಾಳಿಯನ್ನೇ ಚದುರಿಸಬಲ್ಲ ಬಿಲ್ಲುಗಳನ್ನು ಧರಿಸಿದ ಹಲಾಯುಧನ ನಾಯಕತ್ವದಲ್ಲಿರುವ ಮಧುಗಳ ಸೇನೆಯು ಪದಾತಿಗಳು, ಅಶ್ವಗಳು, ರಥಗಳು ಮತ್ತು ಆನೆಗಳೊಂದಿಗೆ ನಿನಗೋಸ್ಕರವಾಗಿ ಸಿದ್ಧವಾಗಿದೆ.

03180033a ಪ್ರಸ್ಥಾಪ್ಯತಾಂ ಪಾಂಡವ ಧಾರ್ತರಾಷ್ಟ್ರಃ|

         ಸುಯೋಧನಃ ಪಾಪಕೃತಾಂ ವರಿಷ್ಠಃ|

03180033c ಸ ಸಾನುಬಂಧಃ ಸಸುಹೃದ್ಗಣಶ್ಚ|

         ಸೌಭಸ್ಯ ಸೌಭಾಧಿಪತೇಶ್ಚ ಮಾರ್ಗಂ||

ಪಾಂಡವ! ಈಗ ಪಾಪಿಗಳಲ್ಲಿಯೇ ಪಾಪಿಷ್ಟನಾದ ಧಾರ್ತರಾಷ್ಟ್ರ ಸುಯೋಧನನು ಅವನ ಅನುಯಾಯಿಗಳು ಮತ್ತು ಮಿತ್ರರೊಂದಿಗೆ ಸೌಭದ ಮತ್ತು ಸೌಭಪತಿಯ ಮಾರ್ಗದಲ್ಲಿ ಹೋಗಲಿ.

03180034a ಕಾಮಂ ತಥಾ ತಿಷ್ಠ ನರೇಂದ್ರ ತಸ್ಮಿನ್|

         ಯಥಾ ಕೃತಸ್ತೇ ಸಮಯಃ ಸಭಾಯಾಂ|

03180034c ದಾಶಾರ್ಹಯೋಧೈಸ್ತು ಸಸಾದಿಯೋಧಂ|

         ಪ್ರತೀಕ್ಷತಾಂ ನಾಗಪುರಂ ಭವಂತಂ||

ನರೇಂದ್ರ! ಸಭೆಯಲ್ಲಿ ಮಾಡಿಕೊಂಡ ಒಪ್ಪಂದದಂತೆ ನೀನು ನಡೆದುಕೊಳ್ಳಬಹುದು. ಆದರೆ ನಾಗಪುರವು ದಾಶಾರ್ಹ ಯೋಧರ ಗುಂಪಿನ ಆಕ್ರಮಣಕ್ಕೆ ಸಿದ್ಧವಾಗಿರಲಿ.

03180035a ವ್ಯಪೇತಮನ್ಯುರ್ವ್ಯಪನೀತಪಾಪ್ಮಾ|

         ವಿಹೃತ್ಯ ಯತ್ರೇಚ್ಚಸಿ ತತ್ರ ಕಾಮಂ|

03180035c ತತಃ ಸಮೃದ್ಧಂ ಪ್ರಥಮಂ ವಿಶೋಕಃ|

         ಪ್ರಪತ್ಸ್ಯಸೇ ನಾಗಪುರಂ ಸರಾಷ್ಟ್ರಂ||

ನಿನ್ನ ಸಿಟ್ಟನ್ನು ಕಡಿಮೆಮಾಡಿಕೊಂಡ, ಪಾಪವನ್ನು ಕಳೆದುಕೊಂಡ ಮತ್ತು ನಿನಗಿಷ್ಟವಾದಲ್ಲೆಲ್ಲಾ ವಿಹರಿಸಿದನಂತರ ವಿಶೋಕನಾದ ನೀನು ನಿನ್ನ ಸಮೃದ್ಧ ರಾಷ್ಟ್ರದ ಪ್ರಥಮ ನಾಗಪುರಕ್ಕೆ ಹಿಂದಿರುಗುವೆ.”

03180036a ತತಸ್ತದಾಜ್ಞಾಯ ಮತಂ ಮಹಾತ್ಮಾ|

         ಯಥಾವದುಕ್ತಂ ಪುರುಷೋತ್ತಮೇನ|

03180036c ಪ್ರಶಸ್ಯ ವಿಪ್ರೇಕ್ಷ್ಯ ಚ ಧರ್ಮರಾಜಃ|

         ಕೃತಾಂಜಲಿಃ ಕೇಶವಮಿತ್ಯುವಾಚ||

ಆ ಪುರುಷೋತ್ತಮನ ಮತವನ್ನು ಹೇಳಿದಹಾಗೆಯೇ ತಿಳಿದ ಮಹಾತ್ಮ ಧರ್ಮರಾಜನು ಅದನ್ನು ಒಪ್ಪಿಕೊಂಡು ಅಂಜಲೀಬದ್ದನಾಗಿ ಕೇಶವನಿಗೆ ಹೇಳಿದನು:

03180037a ಅಸಂಶಯಂ ಕೇಶವ ಪಾಂಡವಾನಾಂ|

         ಭವಾನ್ಗತಿಸ್ತ್ವಚ್ಚರಣಾ ಹಿ ಪಾರ್ಥಾಃ|

03180037c ಕಾಲೋದಯೇ ತಚ್ಚ ತತಶ್ಚ ಭೂಯಃ|

         ಕರ್ತಾ ಭವಾನ್ಕರ್ಮ ನ ಸಂಶಯೋಽಸ್ತಿ||

“ಕೇಶವ! ನೀನು ಪಾಂಡವರ ಗತಿ ಎನ್ನುವುದರಲ್ಲಿ ಸಂಶಯವೇ ಇಲ್ಲ ಏಕೆಂದರೆ ಪಾರ್ಥರು ನಿನ್ನ ಶರಣುಬಂದಿದ್ದೇವೆ. ಕಾಲವು ಬಂದಾಗ ನೀನು ನಿನ್ನ ಕರ್ಮದಲ್ಲಿ ಯಶಸ್ವಿಯಾಗುತ್ತೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

03180038a ಯಥಾಪ್ರತಿಜ್ಞಂ ವಿಹೃತಶ್ಚ ಕಾಲಃ|

         ಸರ್ವಾಃ ಸಮಾ ದ್ವಾದಶ ನಿರ್ಜನೇಷು|

03180038c ಅಜ್ಞಾತಚರ್ಯಾಂ ವಿಧಿವತ್ಸಮಾಪ್ಯ|

         ಭವದ್ಗತಾಃ ಕೇಶವ ಪಾಂಡವೇಯಾಃ||

ಕೇಶವ! ಪ್ರತಿಜ್ಞೆಮಾಡಿದಂತೆ ಎಲ್ಲ ಹನ್ನೆರಡು ವರ್ಷಗಳನ್ನು ನಿರ್ಜನಪ್ರದೇಶದಲ್ಲಿ ಕಳೆದು ಮತ್ತು ವಿಧಿವತ್ತಾಗಿ ಅಜ್ಞಾತವನ್ನೂ ಮುಗಿಸಿ ಕಾಲಬಂದಾಗ ಪಾಂಡವರು ನಿನ್ನ ಬಳಿ ಬರುತ್ತೇವೆ.””

03180039 ವೈಶಂಪಾಯನ ಉವಾಚ|

03180039a ತಥಾ ವದತಿ ವಾರ್ಷ್ಣೇಯೇ ಧರ್ಮರಾಜೇ ಚ ಭಾರತ|

03180039c ಅಥ ಪಶ್ಚಾತ್ತಪೋವೃದ್ಧೋ ಬಹುವರ್ಷಸಹಸ್ರಧೃಕ್||

03180039e ಪ್ರತ್ಯದೃಷ್ಯತ ಧರ್ಮಾತ್ಮಾ ಮಾರ್ಕಂಡೇಯೋ ಮಹಾತಪಾಃ||

ವೈಶಂಪಾಯನನು ಹೇಳಿದನು: “ಭಾರತ! ವಾರ್ಷ್ಣೇಯನು ಧರ್ಮರಾಜನಿಗೆ ಹೀಗೆ ಹೇಳಿದ ನಂತರ ಅಲ್ಲಿ ಸಹಸ್ರಾರು ವರ್ಷಗಳನ್ನು ಧರಿಸಿದ್ದ ತಪೋವೃದ್ಧ ಧರ್ಮಾತ್ಮ, ಮಹಾತಪಸ್ವಿ ಮಾರ್ಕಂಡೇಯನು ಕಾಣಿಸಿಕೊಂಡನು.

03180040a ತಮಾಗತಮೃಷಿಂ ವೃದ್ಧಂ ಬಹುವರ್ಷಸಹಸ್ರಿಣಂ|

03180040c ಆನರ್ಚುರ್ಬ್ರಾಹ್ಮಣಾಃ ಸರ್ವೇ ಕೃಷ್ಣಶ್ಚ ಸಹ ಪಾಂಡವೈಃ||

ಎಲ್ಲ ಬ್ರಾಹ್ಮಣರೂ, ಕೃಷ್ಣನೊಂದಿಗೆ ಪಾಂಡವರೂ ಆಗಮಿಸಿದ ಅನೇಕ ಸಹಸ್ರವರ್ಷಗಳ ಆ ವೃದ್ಧ ಋಷಿಯನ್ನು ಸ್ವಾಗತಿಸಿದರು.

03180041a ತಮರ್ಚಿತಂ ಸುವಿಷ್ವಸ್ತಮಾಸೀನಮೃಷಿಸತ್ತಮಂ|

03180041c ಬ್ರಾಹ್ಮಣಾನಾಂ ಮತೇನಾಹ ಪಾಂಡವಾನಾಂ ಚ ಕೇಶವಃ||

ಆ ಮುನಿಸತ್ತಮನನ್ನು ಅರ್ಚಿಸಿ, ವಿಶ್ರಾಮವನ್ನಿತ್ತು ಕುಳಿತುಕೊಂಡಿರಲು ಕೇಶವನು ಬ್ರಾಹ್ಮಣರ ಮತ್ತು ಪಾಂಡವರ ಮತವನ್ನು ಹೇಳಿದನು:

03180042a ಶುಶ್ರೂಷವಃ ಪಾಂಡವಾಸ್ತೇ ಬ್ರಾಹ್ಮಣಾಶ್ಚ ಸಮಾಗತಾಃ|

03180042c ದ್ರೌಪದೀ ಸತ್ಯಭಾಮಾ ಚ ತಥಾಹಂ ಪರಮಂ ವಚಃ||

“ಪಾಂಡವರು ಮತ್ತು ಇಲ್ಲಿ ಸೇರಿದ ಬ್ರಾಹ್ಮಣರು, ದ್ರೌಪದೀ ಸತ್ಯಭಾಮೆಯರು ಮತ್ತು ನಾನೂ ಕೂಡ ನಿನ್ನ ಪರಮ ಮಾತುಗಳನ್ನು ಕೇಳಲು ಕಾತುರರಾಗಿದ್ದೇವೆ.

03180043a ಪುರಾವೃತ್ತಾಃ ಕಥಾಃ ಪುಣ್ಯಾಃ ಸದಾಚಾರಾಃ ಸನಾತನಾಃ|

03180043c ರಾಜ್ಞಾಂ ಸ್ತ್ರೀಣಾಮೃಷೀಣಾಂ ಚ ಮಾರ್ಕಂಡೇಯ ವಿಚಕ್ಷ್ವ ನಃ||

ಮಾರ್ಕಂಡೇಯ! ಹಿಂದೆ ನಡೆದುಹೋದ ಪುಣ್ಯಕರ, ಸದಾಚಾರ, ಸನಾತನ ರಾಜರ, ಸ್ತ್ರೀಯರ, ಋಷಿಗಳ ಕಥೆಗಳನ್ನು ಹೇಳು.”

03180044a ತೇಷು ತತ್ರೋಪವಿಷ್ಟೇಷು ದೇವರ್ಷಿರಪಿ ನಾರದ|

03180044c ಆಜಗಾಮ ವಿಶುದ್ಧಾತ್ಮಾ ಪಾಂಡವಾನವಲೋಕಕಃ||

ಅವರು ಅಲ್ಲಿ ಕುಳಿತುಕೊಂಡಿರಲು ವಿಶುದ್ಧಾತ್ಮ ದೇವರ್ಷಿ ನಾರದನೂ ಕೂಡ ಪಾಂಡವರನ್ನು ಕಾಣಲು ಅಲ್ಲಿಗೆ ಬಂದನು.

03180045a ತಮಪ್ಯಥ ಮಹಾತ್ಮಾನಂ ಸರ್ವೇ ತು ಪುರುಷರ್ಷಭಾಃ|

03180045c ಪಾದ್ಯಾರ್ಘ್ಯಾಭ್ಯಾಂ ಯಥಾನ್ಯಾಯಮುಪತಸ್ಥುರ್ಮನೀಷಿಣಂ||

ಆ ಮಹಾತ್ಮನನ್ನು ಪುರುಷರ್ಷಭರೆಲ್ಲರೂ ಪಾದ್ಯ ಅರ್ಘ್ಯಗಳಿಂದ ಯಥಾನ್ಯಾಯವಾಗಿ ಸ್ವಾಗತಿಸಿದರು.

03180046a ನಾರದಸ್ತ್ವಥ ದೇವರ್ಷಿರ್ಜ್ಞಾತ್ವಾ ತಾಂಸ್ತು ಕೃತಕ್ಷಣಾನ್|

03180046c ಮಾರ್ಕಂಡೇಯಸ್ಯ ವದತಸ್ತಾಂ ಕಥಾಮನ್ವಮೋದತ||

ಮಾರ್ಕಂಡೇಯನು ಮಾತನಾಡುವುದನ್ನು ಕೇಳಲು ಕಾದಿರುವರೆಂದು ತಿಳಿದ ದೇವರ್ಷಿ ನಾರದನು ಕಥೆಗಳನ್ನು ಅನುಮೋದಿಸಿದನು.

03180047a ಉವಾಚ ಚೈನಂ ಕಾಲಜ್ಞಃ ಸ್ಮಯನ್ನಿವ ಸ ನಾರದಃ|

03180047c ಬ್ರಹ್ಮರ್ಷೇ ಕಥ್ಯತಾಂ ಯತ್ತೇ ಪಾಂಡವೇಷು ವಿವಕ್ಷಿತಂ||

ಕಾಲಜ್ಞ ಆ ನಾರದನು ಮುಗುಳ್ನಗುತ್ತಾ ಅವನಿಗೆ ಹೇಳಿದನು: “ಬ್ರಹ್ಮರ್ಷೇ! ಅವರಿಗೆ ಹೇಳಬೇಕೆಂದು ಬಯಸಿದುದನ್ನು ಪಾಂಡವರಿಗೆ ಹೇಳು.”

03180048a ಏವಮುಕ್ತಃ ಪ್ರತ್ಯುವಾಚ ಮಾರ್ಕಂಡೇಯೋ ಮಹಾತಪಾಃ|

03180048c ಕ್ಷಣಂ ಕುರುಧ್ವಂ ವಿಪುಲಮಾಖ್ಯಾತವ್ಯಂ ಭವಿಷ್ಯತಿ||

ಹೀಗೆ ಹೇಳಲು ಮಹಾತಪಸ್ವಿ ಮಾರ್ಕಂಡೇಯನು ಉತ್ತರಿಸಿದನು: “ಸಮಯವನ್ನು ಮಾಡಿಕೋ. ಯಾಕೆಂದರೆ, ಅವರಿಗೆ ಬಹಳಷ್ಟು ಹೇಳಲಿಕ್ಕಿದೆ.”

03180049a ಏವಮುಕ್ತಾಃ ಕ್ಷಣಂ ಚಕ್ರುಃ ಪಾಂಡವಾಃ ಸಹ ತೈರ್ದ್ವಿಜೈಃ|

03180049c ಮಧ್ಯಂದಿನೇ ಯಥಾದಿತ್ಯಂ ಪ್ರೇಕ್ಷಂತಸ್ತಂ ಮಹಾಮುನಿಂ||

ಅವನು ಹೀಗೆ ಹೇಳಲು ಅಲ್ಲಿದ್ದ ದ್ವಿಜರೊಂದಿಗೆ ಪಾಂಡವರು ಮಧ್ಯಾಹ್ನದ ಸೂರ್ಯನಂತೆ ಹೊಳೆಯುತ್ತಿರುವ ಮಹಾಮುನಿಯನ್ನು ಒಂದು ಕ್ಷಣ ನೋಡಿದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಅಶೀತ್ಯಧಿಕಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ನೂರಾಎಂಭತ್ತನೆಯ ಅಧ್ಯಾಯವು.

Related image

Comments are closed.