ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ಚತುರ್ದಶಃ ಖಂಡಃ

 

ಯಥಾ ಸೋಮ್ಯ ಪುರುಷಂ ಗಂಧಾರೇಭ್ಯೋಽಭಿನದ್ಧಾಕ್ಷಮಾನೀಯ ತಂ ತತೋಽತಿಜನೇ ವಿಸೃಜೇತ್ಸ ಯಥಾ ತತ್ರ ಪ್ರಾಂಗ್ವೋದಂಗ್ವಾಽಧರಾಂಗ್ವಾ ಪ್ರತ್ಯಂಗ್ವಾ ಪ್ರಧ್ಮಾಯಿತಾಭಿನದ್ಧಾಕ್ಷ ಆನೀತೋಽಭಿನದ್ಧಾಕ್ಷೋ ವಿಸೃಷ್ಟಃ ।। 1 ।। ತಸ್ಯ ಯಥಾಭಿನಹನಂ ಪ್ರಮುಚ್ಯ ಪ್ರಬ್ರೂಯಾದೇತಾಂ ದಿಶಂ ಗಂಧಾರಾ ಏತಾಂ ದಿಶಂ ವ್ರಜೇತಿ ಸ ಗ್ರಾಮಾದ್ಗ್ರಾಮಂ ಪೃಚ್ಛನ್ಪಂಡಿತೋ ಮೇಧಾವೀ ಗಂಧಾರಾನೇವೋಪಸಮ್ಪದ್ಯೇತೈವಮೇವೇಹಾಚಾರ್ಯವಾನ್ಪುರುಷೋ ವೇದ ತಸ್ಯ ತಾವದೇವ ಚಿರಂ ಯಾವನ್ನ ವಿಮೋಕ್ಷ್ಯೇಽಥ ಸಮ್ಪತ್ಸ್ಯ ಇತಿ ।। 2 ।। ಸ ಯ ಏಷೋಽಣಿಮೈತದಾತ್ಮ್ಯಮಿದ ಸರ್ವಂ ತತ್ಸತ್ಯ ಸ ಆತ್ಮಾ ತತ್ತ್ವಮಸಿ ಶ್ವೇತಕೇತೋ ಇತಿ ಭೂಯ ಏವ ಮಾ ಭಗವಾನ್ವಿಜ್ಞಾಪಯತ್ವಿತಿ ತಥಾ ಸೋಮ್ಯೇತಿ ಹೋವಾಚ ।। 3 ।।

“ಮಗನೇ! ಒಬ್ಬ ಪುರುಷನ ಕಣ್ಣುಕಟ್ಟಿ ಅವನನ್ನು ಗಂಧಾರದೇಶದಿಂದ ತಂದು ನಿರ್ಜನ ಅರಣ್ಯದಲ್ಲಿ ಬಿಟ್ಟರೆ ಅವನು ಪೂರ್ವ-ಪಶ್ಚಿಮ-ದಕ್ಷಿಣ-ಉತ್ತರ ದಿಕ್ಕುಗಳ ಕಡೆ ಮುಖ ತಿರುಗಿಸಿ “ನನ್ನನ್ನು ಕಣ್ಣು ಕಟ್ಟಿ ತಂದಿದ್ದಾರೆ. ನನ್ನನ್ನು ಕಣ್ಣುಕಟ್ಟಿ ಬಿಟ್ಟಿದ್ದಾರೆ. ನನ್ನನ್ನು ಕಟ್ಟಿ ಬಿಟ್ಟಿದ್ದಾರೆ” ಎಂದು ಕೂಗುತ್ತಾನೆ. ಅವನನ್ನು ಕೇಳಿದವರರ್ಯಾರಾದರೂ ಅವನ ಕಣ್ಣುಕಟ್ಟನ್ನು ಬಿಚ್ಚಿ “ಈ ದಿಕ್ಕಿನಲ್ಲಿ ಗಾಂಧಾರದೇಶವಿದೆ. ಈ ದಿಕ್ಕಿನಲ್ಲಿ ಹೋಗು” ಎಂದು ಹೇಳಿದರೆ, ಆ ಪಂಡಿತ ಬುದ್ಧಿವಂತನು ಕೇಳುತ್ತ ಕೇಳುತ್ತಾ ಗ್ರಾಮದಿಂದ ಗ್ರಾಮಕ್ಕೆ ಸಾಗಿ ಗಾಂಧಾರದೇಶವನ್ನು ಮುಟ್ಟುತ್ತಾನೆ. ಅದರಂತೆಯೇ ಆಚಾರ್ಯನು (ಗುರುವು) ಭೆಟ್ಟಿಯಾದ ಪುರುಷನು ಸತ್ಯವನ್ನು ಅರಿಯುತ್ತಾನೆ. ಅವನು ಮುಕ್ತಿಯನ್ನು ಪಡೆಯುವುದೊಂದೇ ತಡವು – ಸತ್ತಿನಲ್ಲಿ ಒಂದಾಗುತ್ತಾನೆ. ಅದು ಅತ್ಯಂತ ಸೂಕ್ಷ್ಮವು. ಇವೆಲ್ಲವೂ ಆತ್ಮಮಯವು. ಅದು ಸತ್ಯವು. ಶ್ವೇತಕೇತೋ! ನೀನೂ ಅದೇ ಆಗಿರುವೆ!” ಇದನ್ನು ಕೇಳಿ ಮಗನು “ನನಗೆ ಇನ್ನೂ ಜ್ಞಾನವನ್ನು ನೀಡಬೇಕು” ಎಂದು ಕೇಳಲು “ಆಯಿತು, ಮಗನೇ!” ಎಂದು ತಂದೆಯು ಒಪ್ಪಿಕೊಂಡನು.

ಇತಿ  ಚತುರ್ದಶಃ ಖಂಡಃ ।।

Leave a Reply

Your email address will not be published. Required fields are marked *