ಯದಾಶ್ರೌಷದ ಅಧಿಕ ಶ್ಲೋಕಗಳು

[ಆದಿಪರ್ವದ ಅಧ್ಯಾಯ 1ರ ಶ್ಲೋಕ 104ರ ನಂತರ ಎನ್, ಕೆ1, ಕೆ3,4 ಡಿಆರ್1,3,4 ಡಿ2-4,7-12,14, ಡಿ6, ಡಿ11ಗಳಲ್ಲಿರುವ ಅಧಿಕ ಶ್ಲೋಕಗಳು]

 

ಯದಾಶ್ರೌಷಂ ಜಾತುಷಾದ್ವೇಶ್ಮನಸ್ತಾನ್ಮು-

ಕ್ತಾನ್ಪಾರ್ಥಾನ್ಪಂಚ ಕುಂತ್ಯಾ ಸಮೇತಾನ್

ಯುಕ್ತಂ ಚೈಷಾಂ ವಿದುರಂ ಸ್ವಾರ್ಥಸಿದ್ಧೌ

ತದಾ ನಾಶಂಸೇ ವಿಜಯಾಯ ಸಂಜಯ ।।

ಯದಾಶ್ರೌಷಂ ದ್ರೌಪದೀಂ ರಂಗಮಧ್ಯೇ

ಲಕ್ಷ್ಯಂ ಭಿತ್ವಾ ನಿರ್ಜಿತಾಮರ್ಜುನೇನ । ಶೂರಾನ್ಪಾಂಚಾಲಾನ್ಪಾಂಡವೇಯಾಂಶ್ಚ ಯುಕ್ತಾಂ-

ಸ್ತದಾ ನಾಶಂಸೇ ವಿಜಯಾಯ ಸಂಜಯ ।।

ಯದಾಶ್ರೌಷಂ ಮಾಗಧಾನಾಂ ವರಿಷ್ಠಂ

ಜರಾಸಂಧಂ ಕ್ಷತ್ರಮಧ್ಯೇ ಜ್ವಲಂತಮ್ ।

ದೋರ್ಭ್ಯಾಂ ಹತಂ ಭೀಮಸೇನೇನ ಗತ್ವಾ

ತದಾ ನಾಶಂಸೇ ವಿಜಯಾಯ ಸಂಜಯ ।।

ಕುಂತಿಯ ಸಹಿತ ಪಂಚಪಾರ್ಥರು ಜಾತುಗೃಹದಿಂದ ಮುಕ್ತರಾದರು ಮತ್ತು ವಿದುರನು ಅವರ ಸ್ವಾರ್ಥಸಿದ್ಧಿಯಲ್ಲಿಯೇ ನಿರತನಾಗಿದ್ದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು, ಸಂಜಯ! ರಂಗಮಧ್ಯದಲ್ಲಿ ಲಕ್ಷ್ಯವನ್ನು ಭೇದಿಸಿ ಅರ್ಜುನನು ದ್ರೌಪದಿಯನ್ನು ಗೆದ್ದನು ಮತ್ತು ಪಾಂಡವರು ಶೂರ ಪಾಂಚಾಲರೊಂದಿಗೆ ಒಂದಾದರು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! ಕ್ಷತ್ರಿಯರ ಮಧ್ಯೆ ಪ್ರಜ್ವಲಿಸುತ್ತಿದ್ದ ಮಾಗಧರ ವರಿಷ್ಠ ಜರಾಸಂಧನು ಭೀಮಸೇನನ ಎರಡೂ ಬಾಹುಗಳಿಂದ ಹತನಾದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

ಯದಾಶ್ರೌಷಂ ದಿಗ್ಜಯೇ ಪಾಂಡುಪುತ್ರೈರ್ವ-

ಶೀಕೃತಾನ್ಭೂಮಿಪಾಲಾನ್ಪ್ರಸಹ್ಯ । 

ಮಹಾಕ್ರತುಂ ರಾಜಸೂಯಂ ಕೃತಂ ಚ

ತದಾ ನಾಶಂಸೇ ವಿಜಯಾಯ ಸಂಜಯ ।। (ಡಿ5)

ಯದಾಶ್ರೌಷಂ ಸರ್ವವಿಶ್ವಸ್ಯ ಸಾರಾಂ

ಪ್ರೀತ್ಯಾ ರಾಜ್ಞೇ ನಿರ್ಮಿತಾಂ ತಾಂ ಮಯೇನ

ಗದಾಂ ಚೋಗ್ರಾಂ ಭೀಮಸೇನಾಯ ದತ್ತಾಂ

ತದಾ ನಾಶಂಸೇ ವಿಜಯಾಯ ಸಂಜಯ ।।

ದಿಗ್ವಿಜಯದಲ್ಲಿ ಪಾಂಡುಪುತ್ರರು ಭೂಮಿಪಾಲರನ್ನು ಬಲವಂತವಾಗಿ ವಶೀಕರಿಸಿ ಮಹಾಕ್ರತು ರಾಜಸೂಯವನ್ನು ಮಾಡಿದರೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ! ದಿಗ್ವಿಜಯದಲ್ಲಿ ಪಾಂಡುಪುತ್ರರು ಭೂಮಿಪಾಲರನ್ನು ಬಲವಂತವಾಗಿ ವಶೀಕರಿಸಿ ಮಹಾಕ್ರತು ರಾಜಸೂಯವನ್ನು ಮಾಡಿದರೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

 

Leave a Reply

Your email address will not be published. Required fields are marked *