Virata Parva: Chapter 37

ವಿರಾಟ ಪರ್ವ: ಗೋಹರಣ ಪರ್ವ

೩೭

ಕುರುಸೇನೆಯಲ್ಲಿ ಗೊಂದಲ

ನಪುಂಸಕ ವೇಷದಲ್ಲಿರುವವನು ಅರ್ಜುನನೇ ಇರಬೇಕೆಂದು ಮತ್ತು ಕಾಣುವ ಉತ್ಪಾತಗಳು ಯುದ್ಧದಲ್ಲಿ ತಮಗೆ ಸೋಲನ್ನು ಸೂಚಿಸುತ್ತವೆ ಎಂದು ದ್ರೋಣನು ನುಡಿದುದು (೧-೧೨). ಅವನು ಅರ್ಜುನನೇ ಆಗಿದ್ದರೆ ಗುರುತು ಸಿಕ್ಕಿದ ಪಾಂಡವರು ಮತ್ತೆ ಹನ್ನೆರಡು ವರ್ಷ ಕಾಡಿನಲ್ಲಿ ಅಲೆಯ ಬೇಕಾಗುತ್ತದೆ ಎಂದು ದುರ್ಯೋಧನನು ನುಡಿದುದು (೧೩-೧೬).

04037001 ವೈಶಂಪಾಯನ ಉವಾಚ|

04037001a ತಂ ದೃಷ್ಟ್ವಾ ಕ್ಲೀಬವೇಷೇಣ ರಥಸ್ಥಂ ನರಪುಂಗವಂ|

04037001c ಶಮೀಮಭಿಮುಖಂ ಯಾಂತಂ ರಥಮಾರೋಪ್ಯ ಚೋತ್ತರಂ||

04037002a ಭೀಷ್ಮದ್ರೋಣಮುಖಾಸ್ತತ್ರ ಕುರೂಣಾಂ ರಥಸತ್ತಮಾಃ|

04037002c ವಿತ್ರಸ್ತಮನಸಃ ಸರ್ವೇ ಧನಂಜಯಕೃತಾದ್ಭಯಾತ್||

ವೈಶಂಪಾಯನನು ಹೇಳಿದನು: “ಉತ್ತರನನ್ನು ರಥದ ಮೇಲೆ ಕುಳ್ಳಿರಿಸಿಕೊಂಡು ಬನ್ನಿ ಮರದತ್ತ ರಥದಲ್ಲಿ ಹೋಗುತ್ತಿದ್ದ ಆ ನಪುಂಸಕ ವೇಷದ ನರಶ್ರೇಷ್ಠನನ್ನು ನೋಡಿ, ಭೀಷ್ಮ-ದ್ರೋಣಮುಖ್ಯ ಕುರುಗಳ ರಥಿಕ ಶ್ರೇಷ್ಠರೆಲ್ಲ ಧನಂಜಯನಿಂದುಂಟಾದ ಭಯದಿಂದ ತಲ್ಲಣಿಸಿದರು.

04037003a ತಾನವೇಕ್ಷ್ಯ ಹತೋತ್ಸಾಹಾನುತ್ಪಾತಾನಪಿ ಚಾದ್ಭುತಾನ್|

04037003c ಗುರುಃ ಶಸ್ತ್ರಭೃತಾಂ ಶ್ರೇಷ್ಠೋ ಭಾರದ್ವಾಜೋಽಭ್ಯಭಾಷತ||

ಆ ಉತ್ಸಾಹಹೀನರನ್ನೂ ಅದ್ಭುತ ಉತ್ಪಾತಗಳನ್ನೂ ನೋಡಿ ಶಸ್ತ್ರಧರರಲ್ಲಿ ಶ್ರೇಷ್ಠ ಗುರು ದ್ರೋಣನು ನುಡಿದನು:

04037004a ಚಲಾಶ್ಚ ವಾತಾಃ ಸಂವಾಂತಿ ರೂಕ್ಷಾಃ ಪರುಷನಿಃಸ್ವನಾಃ|

04037004c ಭಸ್ಮವರ್ಣಪ್ರಕಾಶೇನ ತಮಸಾ ಸಂವೃತಂ ನಭಃ||

“ವೇಗವಾದ ಕಠೋರ ಶಬ್ಧವುಳ್ಳ ಭಯಂಕರ ಗಾಳಿಯು ಬೀಸುತ್ತಿದೆ; ಬೂದಿಯ ಬಣ್ಣದ ಪ್ರಕಾಶದ ಕತ್ತಲು ಆಗಸವನ್ನು ಆವರಿಸಿದೆ.

04037005a ರೂಕ್ಷವರ್ಣಾಶ್ಚ ಜಲದಾ ದೃಶ್ಯಂತೇಽದ್ಭುತದರ್ಶನಾಃ|

04037005c ನಿಃಸರಂತಿ ಚ ಕೋಶೇಭ್ಯಃ ಶಸ್ತ್ರಾಣಿ ವಿವಿಧಾನಿ ಚ||

ರೂಕ್ಷವರ್ಣದ ಮೋಡಗಳು ಅದ್ಭುತವಾಗಿ ತೋರುತ್ತಿವೆ; ನಮ್ಮ ವಿವಿಧ ಶಸ್ತ್ರಗಳು ತಮ್ಮ ಕೋಶಗಳಿಂದ ಹೊರಬರುತ್ತಿವೆ.

04037006a ಶಿವಾಶ್ಚ ವಿನದಂತ್ಯೇತಾ ದೀಪ್ತಾಯಾಂ ದಿಶಿ ದಾರುಣಾಃ|

04037006c ಹಯಾಶ್ಚಾಶ್ರೂಣಿ ಮುಂಚಂತಿ ಧ್ವಜಾಃ ಕಂಪಂತ್ಯಕಂಪಿತಾಃ||

ಇದೋ! ಉರಿಯುತ್ತಿರುವ ದಿಕ್ಕುಗಳಲ್ಲಿ ನರಿಗಳು ದಾರುಣವಾಗಿ ಊಳಿಡುತ್ತಿವೆ; ಕುದುರೆಗಳು ಕಣ್ಣೀರಿಡುತ್ತಿವೆ; ಅಲ್ಲಾಡಿಸದಿದ್ದರೂ ಬಾವುಟಗಳು ಅಲ್ಲಾಡುತ್ತಿವೆ.

04037007a ಯಾದೃಶಾನ್ಯತ್ರ ರೂಪಾಣಿ ಸಂದೃಶ್ಯಂತೇ ಬಹೂನ್ಯಪಿ|

04037007c ಯತ್ತಾ ಭವಂತಸ್ತಿಷ್ಠಂತು ಸ್ಯಾದ್ಯುದ್ಧಂ ಸಮುಪಸ್ಥಿತಂ||

ಇಲ್ಲಿ ಈ ಅಶುಭ ಚಿಹ್ನೆಗಳು ಬಹುವಾಗಿ ಕಂಡುಬರುತ್ತಿರುವುದರಿಂದ ನೀವು ಎಚ್ಚರಿಕೆಯಿಂದ ನಿಲ್ಲಿ! ಪ್ರಾಯಃ ಯುದ್ಧವು ಒದಗಿಬಂದಿದೆ.

04037008a ರಕ್ಷಧ್ವಮಪಿ ಚಾತ್ಮಾನಂ ವ್ಯೂಹಧ್ವಂ ವಾಹಿನೀಮಪಿ|

04037008c ವೈಶಸಂ ಚ ಪ್ರತೀಕ್ಷಧ್ವಂ ರಕ್ಷಧ್ವಂ ಚಾಪಿ ಗೋಧನಂ||

ನಿಮ್ಮನ್ನು ರಕ್ಷಿಸಿಕೊಳ್ಳಿ; ಸೈನ್ಯವನ್ನು ವ್ಯೂಹಗೊಳಿಸಿ. ನಡೆಯಲಿರುವ ಕಗ್ಗೊಲೆಯನ್ನು ನಿರೀಕ್ಷಿಸಿ. ಗೋಧನವನ್ನು ರಕ್ಷಿಸಿಕೊಳ್ಳಿ.

04037009a ಏಷ ವೀರೋ ಮಹೇಷ್ವಾಸಃ ಸರ್ವಶಸ್ತ್ರಭೃತಾಂ ವರಃ|

04037009c ಆಗತಃ ಕ್ಲೀಬವೇಷೇಣ ಪಾರ್ಥೋ ನಾಸ್ತ್ಯತ್ರ ಸಂಶಯಃ||

ಮಹಾ ಬಿಲ್ಗಾರನೂ ಸರ್ವಶಸ್ತ್ರಧರರಲ್ಲಿ ಶ್ರೇಷ್ಠನೂ ಸಪುಂಸಕವೇಷದಲ್ಲಿ ಬಂದಿರುವವನೂ ಆದ ಈ ವೀರನು ಪಾರ್ಥನೆಂಬುವುದರಲ್ಲಿ ಸಂಶಯವಿಲ್ಲ.

04037010a ಸ ಏಷ ಪಾರ್ಥೋ ವಿಕ್ರಾಂತಃ ಸವ್ಯಸಾಚೀ ಪರಂತಪಃ|

04037010c ನಾಯುದ್ಧೇನ ನಿವರ್ತೇತ ಸರ್ವೈರಪಿ ಮರುದ್ಗಣೈಃ||

ಶತ್ರುನಾಶಕನೂ ಸವ್ಯಸಾಚಿಯೂ ಆದ ಈ ವೀರ ಪಾರ್ಥನು ಸಕಲ ದೇವತಾ ಸಮೂಹದೊಡನೆ ಕೂಡ ಯುದ್ಧ ಮಾಡದೆ ಹಿಮ್ಮೆಟ್ಟುವುದಿಲ್ಲ.

04037011a ಕ್ಲೇಶಿತಶ್ಚ ವನೇ ಶೂರೋ ವಾಸವೇನ ಚ ಶಿಕ್ಷಿತಃ|

04037011c ಅಮರ್ಷವಶಮಾಪನ್ನೋ ಯೋತ್ಸ್ಯತೇ ನಾತ್ರ ಸಂಶಯಃ||

ವನದಲ್ಲಿ ಕ್ಲೇಶಪಟ್ಟವನೂ ಇಂದ್ರನಿಂದ ಶಿಕ್ಷಣಪಡೆದವನೂ ಆದ ಈ ಶೂರನು ಕೋಪವಶನಾಗಿ ಬಂದಿದ್ದಾನೆ; ಇವನು ಯುದ್ಧಮಾಡುವುದರಲ್ಲಿ ಸಂಶಯವಿಲ್ಲ.

04037012a ನೇಹಾಸ್ಯ ಪ್ರತಿಯೋದ್ಧಾರಮಹಂ ಪಶ್ಯಾಮಿ ಕೌರವಾಃ|

04037012c ಮಹಾದೇವೋಽಪಿ ಪಾರ್ಥೇನ ಶ್ರೂಯತೇ ಯುಧಿ ತೋಷಿತಃ||

ಕೌರವರೆ! ಅವನಿಗಿಲ್ಲಿ ಎದುರಾಗಿ ಕಾದುವವರು ಯಾರೂ ನನಗೆ ಕಾಣುತ್ತಿಲ್ಲ. ಪಾರ್ಥನು ಮಹಾದೇವನನ್ನೂ ಯುದ್ಧದಲ್ಲಿ ಸಂತೋಷಗೊಳಿಸಿದನೆಂದು ಕೇಳಿದ್ದೇವೆ.”

04037013 ಕರ್ಣ ಉವಾಚ|

04037013a ಸದಾ ಭವಾನ್ಫಲ್ಗುನಸ್ಯ ಗುಣೈರಸ್ಮಾನ್ವಿಕತ್ಥಸೇ|

04037013c ನ ಚಾರ್ಜುನಃ ಕಲಾ ಪೂರ್ಣಾ ಮಮ ದುರ್ಯೋಧನಸ್ಯ ವಾ||

ಕರ್ಣನು ಹೇಳಿದನು: “ನೀವು ಯಾವಾಗಲೂ ಫಲ್ಗುಣನ ಗುಣಗಳನ್ನು ಹೊಗಳುವುದರ ಮೂಲಕ ನಮ್ಮನ್ನು ನಿಂದಿಸುತ್ತೀರಿ. ಆ ಅರ್ಜುನನು ನನಗಾಗಲೀ ದುರ್ಯೋಧನನಿಗಾಗಲೀ ಹದಿನಾರನೆಯ ಒಂದು ಪೂರ್ಣಾಂಶದಷ್ಟೂ ಸಮಾನನಲ್ಲ.”

04037014 ದುರ್ಯೋಧನ ಉವಾಚ|

04037014a ಯದ್ಯೇಷ ಪಾರ್ಥೋ ರಾಧೇಯ ಕೃತಂ ಕಾರ್ಯಂ ಭವೇನ್ಮಮ|

04037014c ಜ್ಞಾತಾಃ ಪುನಶ್ಚರಿಷ್ಯಂತಿ ದ್ವಾದಶಾನ್ಯಾನ್ ಹಿ ವತ್ಸರಾನ್||

ದುರ್ಯೋಧನನು ಹೇಳಿದನು: “ಕರ್ಣ! ಇವನು ಪಾರ್ಥನಾಗಿದ್ದರೆ ನನ್ನ ಕಾರ್ಯವಾಯಿತು! ಗುರುತು ಸಿಕ್ಕಿದ ಪಾಂಡವರು ಮತ್ತೆ ಹನ್ನೆರಡು ವರ್ಷ ಕಾಡಿನಲ್ಲಿ ಅಲೆಯ ಬೇಕಾಗುತ್ತದೆ.

04037015a ಅಥೈಷ ಕಶ್ಚಿದೇವಾನ್ಯಃ ಕ್ಲೀಬವೇಷೇಣ ಮಾನವಃ|

04037015c ಶರೈರೇನಂ ಸುನಿಶಿತೈಃ ಪಾತಯಿಷ್ಯಾಮಿ ಭೂತಲೇ||

ಇವನು ನಪುಂಸಕ ವೇಷದ ಬೇರೆ ಯಾವನೋ ಮನುಷ್ಯನಾಗಿದ್ದರೆ ಇವನನ್ನು ಹರಿತವಾದ ಬಾಣಗಳಿಂದ ನೆಲಕ್ಕೆ ಕೆಡಹುತ್ತೇನೆ.””

04037016 ವೈಶಂಪಾಯನ ಉವಾಚ|

04037016a ತಸ್ಮಿನ್ಬ್ರುವತಿ ತದ್ವಾಕ್ಯಂ ಧಾರ್ತರಾಷ್ಟ್ರೇ ಪರಂತಪೇ|

04037016c ಭೀಷ್ಮೋ ದ್ರೋಣಃ ಕೃಪೋ ದ್ರೌಣಿಃ ಪೌರುಷಂ ತದಪೂಜಯನ್||

ವೈಶಂಪಾಯನನು ಹೇಳಿದನು: “ಶತ್ರುನಾಶಕ ದುರ್ಯೋಧನನು ಆ ಮಾತನ್ನಾಡಲು ಭೀಷ್ಮ-ದ್ರೋಣ-ಅಶ್ವತ್ಥಾಮರು ಅವನ ಆ ಪೌರುಷವನ್ನು ಹೊಗಳಿದರು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಅರ್ಜುನಪ್ರಶಂಸಾಯಾಂ ಸಪ್ತತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಅರ್ಜುನಪ್ರಶಂಸೆಯಲ್ಲಿ ಮೂವತ್ತೇಳನೆಯ ಅಧ್ಯಾಯವು.

Image result for flowers against white background

Comments are closed.