Udyoga Parva: Chapter 52

ಉದ್ಯೋಗ ಪರ್ವ: ಯಾನಸಂಧಿ ಪರ್ವ

೫೨

ಧೃತರಾಷ್ಟ್ರನು ಶಾಂತಿಯ ಕುರಿತು ಮಾತನಾಡುವುದು

“ಯುದ್ಧವನ್ನು ಮಾಡದೇ ಇರುವುದೇ ಒಳ್ಳೆಯದು! ಯುದ್ಧವಾದರೆ ಕುಲದ ಸರ್ವನಾಶವು ನಡೆಯುವುದು ಸತ್ಯ ಎಂದು ಧೃತರಾಷ್ಟ್ರನು ಯುಧಿಷ್ಠಿರನೊಂದಿಗೆ ಶಾಂತಿಗೆ ಪ್ರಯತ್ನಿಸಬೇಕೆಂದು ಹೇಳಿದುದು (೧-೧೬).

05052001 ಧೃತರಾಷ್ಟ್ರ ಉವಾಚ|

05052001a ಯಥೈವ ಪಾಂಡವಾಃ ಸರ್ವೇ ಪರಾಕ್ರಾಂತಾ ಜಿಗೀಷವಃ|

05052001c ತಥೈವಾಭಿಸರಾಸ್ತೇಷಾಂ ತ್ಯಕ್ತಾತ್ಮಾನೋ ಜಯೇ ಧೃತಾಃ||

ಧೃತರಾಷ್ಟ್ರನು ಹೇಳಿದನು: “ಹೇಗೆ ಪಾಂಡವರೆಲ್ಲರೂ ವಿಜಯದ ಭರವಸೆಯನ್ನಿಟ್ಟುಕೊಂಡಿದ್ದಾರೋ ಹಾಗೆಯೇ ಅವರಿಗಾಗಿ ಜೀವವನ್ನು ತೊರೆದಿರುವ ಅವರ ಜನರೂ ಕೂಡ ಜಯದಲ್ಲಿ ವಿಶ್ವಾಸವನ್ನಿಟ್ಟಿದ್ದಾರೆ.

05052002a ತ್ವಮೇವ ಹಿ ಪರಾಕ್ರಾಂತಾನಾಚಕ್ಷೀಥಾಃ ಪರಾನ್ಮಮ|

05052002c ಪಾಂಚಾಲಾನ್ಕೇಕಯಾನ್ಮತ್ಸ್ಯಾನ್ಮಾಗಧಾನ್ವತ್ಸಭೂಮಿಪಾನ್||

ನೀನೇ ನನಗೆ ಆ ಪರಾಕ್ರಮಿ ವೀರರ ಕುರಿತು - ಪಾಂಚಾಲರು, ಕೇಕಯರು, ಮತ್ಸ್ಯರು, ಮಾಗಧರು ಮತ್ತು ವತ್ಸರಾಜರು - ಹೇಳಿದ್ದೀಯೆ.

05052003a ಯಶ್ಚ ಸೇಂದ್ರಾನಿಮಾಽಲ್ಲೋಕಾನಿಚ್ಚನ್ಕುರ್ಯಾದ್ವಶೇ ಬಲೀ|

05052003c ಸ ಶ್ರೇಷ್ಠೋ ಜಗತಃ ಕೃಷ್ಣಃ ಪಾಂಡವಾನಾಂ ಜಯೇ ಧೃತಃ||

ಇಂದ್ರನನ್ನೂ ಸೇರಿ ಈ ಲೋಕಗಳನ್ನು ವಶಪಡಿಸಿಕೊಳ್ಳಬಲ್ಲ ಬಲಶಾಲಿ, ಜಗತ್ತಿನಲ್ಲಿಯೇ ಶ್ರೇಷ್ಠನಾಗಿರುವ ಕೃಷ್ಣನೂ ಕೂಡ ಪಾಂಡವರ ಜಯದಲ್ಲಿ ವಿಶ್ವಾಸವನ್ನಿಟ್ಟಿದ್ದಾನೆ.

05052004a ಸಮಸ್ತಾಮರ್ಜುನಾದ್ವಿದ್ಯಾಂ ಸಾತ್ಯಕಿಃ ಕ್ಷಿಪ್ರಮಾಪ್ತವಾನ್|

05052004c ಶೈನೇಯಃ ಸಮರೇ ಸ್ಥಾತಾ ಬೀಜವತ್ಪ್ರವಪಂ ಶರಾನ್||

ಅರ್ಜುನನಿಂದ ಸಮಸ್ತವಿದ್ಯೆಗಳನ್ನೂ ಬೇಗನೆ ಪಡೆದ ಸಾತ್ಯಕಿ ಶೈನಿಯು ಸಮರದಲ್ಲಿ ನೆಲೆಸಿ ಬೀಜಗಳಂತೆ ಬಾಣಗಳನ್ನು ಬಿತ್ತುತ್ತಾನೆ.

05052005a ಧೃಷ್ಟದ್ಯುಮ್ನಶ್ಚ ಪಾಂಚಾಲ್ಯಃ ಕ್ರೂರಕರ್ಮಾ ಮಹಾರಥಃ|

05052005c ಮಾಮಕೇಷು ರಣಂ ಕರ್ತಾ ಬಲೇಷು ಪರಮಾಸ್ತ್ರವಿತ್||

ಕ್ರೂರಕರ್ಮಿ, ಮಹಾರಥಿ, ಪಾಂಚಾಲ್ಯ ಧೃಷ್ಟದ್ಯುಮ್ನನು ತನ್ನ ಪರಮಾಸ್ತ್ರ ವಿದ್ಯೆಯಿಂದ ನನ್ನವರೊಡನೆ ರಣದಲ್ಲಿ ಹೋರಾಡುತ್ತಾನೆ.

05052006a ಯುಧಿಷ್ಠಿರಸ್ಯ ಚ ಕ್ರೋಧಾದರ್ಜುನಸ್ಯ ಚ ವಿಕ್ರಮಾತ್|

05052006c ಯಮಾಭ್ಯಾಂ ಭೀಮಸೇನಾಚ್ಚ ಭಯಂ ಮೇ ತಾತ ಜಾಯತೇ||

ಅಯ್ಯಾ! ಯುಧಿಷ್ಠಿರನ ಕ್ರೋಧದಿಂದ, ಅರ್ಜುನ, ಯಮಳರು ಮತ್ತು ಭೀಮಸೇನನ ವಿಕ್ರಮದಿಂದ ನನಗೆ ಭಯವಾಗುತ್ತಿದೆ.

05052007a ಅಮಾನುಷಂ ಮನುಷ್ಯೇಂದ್ರೈರ್ಜಾಲಂ ವಿತತಮಂತರಾ|

05052007c ಮಮ ಸೇನಾಂ ಹನಿಷ್ಯಂತಿ ತತಃ ಕ್ರೋಶಾಮಿ ಸಂಜಯ||

ಸಂಜಯ! ಆ ಮನುಷ್ಯೇಂದ್ರರು ನನ್ನ ಸೇನೆಯ ಮಧ್ಯೆ ಅಮಾನುಷ ಜಾಲವನ್ನು ಎಸೆದು ಸಂಹರಿಸುತ್ತಾರೆ. ಈಗಲೇ ಅದರ ಕುರಿತು ದುಃಖಿಸುತ್ತಿದ್ದೇನೆ.

05052008a ದರ್ಶನೀಯೋ ಮನಸ್ವೀ ಚ ಲಕ್ಷ್ಮೀವಾನ್ಬ್ರಹ್ಮವರ್ಚಸೀ|

05052008c ಮೇಧಾವೀ ಸುಕೃತಪ್ರಜ್ಞೋ ಧರ್ಮಾತ್ಮಾ ಪಾಂಡುನಂದನಃ||

ಪಾಂಡುನಂದನನು ನೋಡಲು ಸುಂದರನಾಗಿದ್ದಾನೆ. ಮನಸ್ವಿ. ಲಕ್ಷ್ಮೀವಂತ ಮತ್ತು ಬ್ರಹ್ಮವರ್ಚಸ್ಸುಳ್ಳವನು. ಅವನು ಮೇಧಾವೀ, ಸುಕೃತಪ್ರಜ್ಞ ಮತ್ತು ಧರ್ಮಾತ್ಮ.

05052009a ಮಿತ್ರಾಮಾತ್ಯೈಃ ಸುಸಂಪನ್ನಃ ಸಂಪನ್ನೋ ಯೋಜ್ಯಯೋಜಕೈಃ|

05052009c ಭ್ರಾತೃಭಿಃ ಶ್ವಶುರೈಃ ಪುತ್ರೈರುಪಪನ್ನೋ ಮಹಾರಥೈಃ||

ಅವನಿಗೆ ಹೇರಳ ಮಿತ್ರರಿದ್ದಾರೆ. ಅಮಾತ್ಯರಿದ್ದಾರೆ. ಕಟ್ಟಲು ಕುದುರೆಗಳು ಮತ್ತು ಕಟ್ಟುವವರೂ ಇದ್ದಾರೆ. ತಮ್ಮಂದಿರು, ಮಾವಂದಿರು, ಮತ್ತು ಮಹಾರಥಿ ಮಕ್ಕಳಿದ್ದಾರೆ.

05052010a ಧೃತ್ಯಾ ಚ ಪುರುಷವ್ಯಾಘ್ರೋ ನೈಭೃತ್ಯೇನ ಚ ಪಾಂಡವಃ|

05052010c ಅನೃಶಂಸೋ ವದಾನ್ಯಶ್ಚ ಹ್ರೀಮಾನ್ಸತ್ಯಪರಾಕ್ರಮಃ||

ಆ ಪುರುಷವ್ಯಾಘ್ರ ಪಾಂಡವನಲ್ಲಿ ಧೃತಿಯಿದೆ. ಗುಟ್ಟನ್ನು ಇಟ್ಟುಕೊಳ್ಳುತ್ತಾನೆ. ಅವನು ಮೃದು, ದಾನಿ, ಮತ್ತು ವಿನಯಿ. ಸತ್ಯಪರಾಕ್ರಮಿ.

05052011a ಬಹುಶ್ರುತಃ ಕೃತಾತ್ಮಾ ಚ ವೃದ್ಧಸೇವೀ ಜಿತೇಂದ್ರಿಯಃ|

05052011c ತಂ ಸರ್ವಗುಣಸಂಪನ್ನಂ ಸಮಿದ್ಧಮಿವ ಪಾವಕಂ||

ಅವನು ವಿದ್ಯಾವಂತ. ಕೃತಾತ್ಮ. ವೃದ್ಧಸೇವೀ ಮತ್ತು ಜಿತೇಂದ್ರಿಯ. ಚೆನ್ನಾಗಿ ಉರಿಸಿದ ಅಗ್ನಿಯಂತೆ ಅವನು ಸರ್ವಗುಣಸಂಪನ್ನ.

05052012a ತಪಂತಮಿವ ಕೋ ಮಂದಃ ಪತಿಷ್ಯತಿ ಪತಂಗವತ್|

05052012c ಪಾಂಡವಾಗ್ನಿಮನಾವಾರ್ಯಂ ಮುಮೂರ್ಷುರ್ಮೂಢಚೇತನಃ||

ಯಾವ ಮೂಢನು ತಾನೇ ಪತಂಗದಂತೆ ಬೆಂಕಿಯಂತೆ ಉರಿಯತ್ತಿರುವವನಲ್ಲಿ ಹೋಗಿ ಬೀಳುತ್ತಾನೆ? ಪಾಂಡವಾಗ್ನಿಯನ್ನು ತಪ್ಪಿಸಿಕೊಳ್ಳದ ಮೂಢನು ಸಾಯುವುದು ಖಂಡಿತ.

05052013a ತನುರುಚ್ಚಃ ಶಿಖೀ ರಾಜಾ ಶುದ್ಧಜಾಂಬೂನದಪ್ರಭಃ|

05052013c ಮಂದಾನಾಂ ಮಮ ಪುತ್ರಾಣಾಂ ಯುದ್ಧೇನಾಂತಂ ಕರಿಷ್ಯತಿ||

ಆ ರಾಜನು ಶುದ್ಧ ಬಂಗಾರದ ಪ್ರಭೆಯಿಂದ ಎತ್ತರವಾಗಿ ಉರಿಯುತ್ತಿರುವ ಶಿಖಿಯಂತೆ. ಅವನು ಯುದ್ಧದಲ್ಲಿ ನನ್ನ ಮಂದ ಮಕ್ಕಳನ್ನು ಅಂತ್ಯಗೊಳಿಸುತ್ತಾನೆ.

05052014a ತೈರಯುದ್ಧಂ ಸಾಧು ಮನ್ಯೇ ಕುರವಸ್ತನ್ನಿಬೋಧತ|

05052014c ಯುದ್ಧೇ ವಿನಾಶಃ ಕೃತ್ಸ್ನಸ್ಯ ಕುಲಸ್ಯ ಭವಿತಾ ಧ್ರುವಂ||

ಕುರುಗಳೇ! ನನ್ನನ್ನು ಕೇಳಿ! ಯುದ್ಧವನ್ನು ಮಾಡದೇ ಇರುವುದೇ ಒಳ್ಳೆಯದು! ಯುದ್ಧವಾದರೆ ಕುಲದ ಸರ್ವನಾಶವು ನಡೆಯುವುದು ಸತ್ಯ.

05052015a ಏಷಾ ಮೇ ಪರಮಾ ಶಾಂತಿರ್ಯಯಾ ಶಾಮ್ಯತಿ ಮೇ ಮನಃ|

05052015c ಯದಿ ತ್ವಯುದ್ಧಮಿಷ್ಟಂ ವೋ ವಯಂ ಶಾಂತ್ಯೈ ಯತಾಮಹೇ||

ಇಂದು ಶಾಂತಿಗಾಗಿ ನಾನು ಮಾಡುವ ಅಂತಿಮ ಯತ್ನ. ಇದು ನನ್ನ ಮನಸ್ಸನ್ನು ಶಮನಗೊಳಿಸುತ್ತದೆ. ಒಂದುವೇಳೆ ನಿಮಗೆ ಯುದ್ಧವು ಬೇಡವೆಂದಾದರೆ ಶಾಂತಿಗೆ ಪ್ರಯತ್ನಿಸೋಣ.

05052016a ನ ತು ನಃ ಶಿಕ್ಷಮಾಣಾನಾಮುಪೇಕ್ಷೇತ ಯುಧಿಷ್ಠಿರಃ|

05052016c ಜುಗುಪ್ಸತಿ ಹ್ಯಧರ್ಮೇಣ ಮಾಮೇವೋದ್ದಿಶ್ಯ ಕಾರಣಂ||

ಶಾಂತಿಗಾಗಿ ಪ್ರಯತ್ನಿಸಿದರೆ ಯುಧಿಷ್ಠಿರನು ಉಪೇಕ್ಷಿಸುವುದಿಲ್ಲ. ಏಕೆಂದರೆ ಯಾವುದಕ್ಕೆ ನಾನೇ ಕಾರಣನೆಂದು ಅವನು ತಿಳಿದುಕೊಂಡಿದ್ದಾನೋ ಆ ಅಧರ್ಮದ ಕುರಿತು ಅವನಿಗೆ ಜಿಗುಪ್ಸೆಯಿದೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಧೃತರಾಷ್ಟ್ರವಾಕ್ಯೇ ದ್ವಿಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಧೃತರಾಷ್ಟ್ರವಾಕ್ಯದಲ್ಲಿ ಐವತ್ತೆರಡನೆಯ ಅಧ್ಯಾಯವು.

Related image

Comments are closed.