Udyoga Parva: Chapter 46

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ: ಯಾನಸಂಧಿ ಪರ್ವ

೪೬

ಕುರುಸಭೆಗೆ ಸಂಜಯನ ಆಗಮನ ಮತ್ತು ವಿಷಯ ಪ್ರಸ್ತಾವನೆ (೧-೧೭).

05046001 ವೈಶಂಪಾಯನ ಉವಾಚ|

05046001a ಏವಂ ಸನತ್ಸುಜಾತೇನ ವಿದುರೇಣ ಚ ಧೀಮತಾ|

05046001c ಸಾರ್ಧಂ ಕಥಯತೋ ರಾಜ್ಞಾಃ ಸಾ ವ್ಯತೀಯಾಯ ಶರ್ವರೀ||

ವೈಶಂಪಾಯನನು ಹೇಳಿದನು: “ಹೀಗೆ ಸನತ್ಸುಜಾತ ಮತ್ತು ಧೀಮತ ವಿದುರನೊಂದಿಗೆ ರಾಜನು ಮಾತುಕಥೆಯನ್ನಾಡುತ್ತಿರಲು, ರಾತ್ರಿಯು ಕಳೆಯಿತು.

05046002a ತಸ್ಯಾಂ ರಜನ್ಯಾಂ ವ್ಯುಷ್ಟಾಯಾಂ ರಾಜಾನಃ ಸರ್ವ ಏವ ತೇ|

05046002c ಸಭಾಮಾವಿವಿಶುರ್ಹೃಷ್ಟಾಃ ಸೂತಸ್ಯೋಪದಿದೃಕ್ಷಯಾ||

ಆ ರಾತ್ರಿಯು ಕಳೆಯಲು ಎಲ್ಲ ರಾಜರೂ ಸೂತನನ್ನು ಕೇಳಲು ಸಂತೋಷದಿಂದ ಸಭೆಯನ್ನು ಪ್ರವೇಶಿಸಿದರು.

05046003a ಶುಶ್ರೂಷಮಾಣಾಃ ಪಾರ್ಥಾನಾಂ ವಚೋ ಧರ್ಮಾರ್ಥಸಂಹಿತಂ|

05046003c ಧೃತರಾಷ್ಟ್ರಮುಖಾಃ ಸರ್ವೇ ಯಯೂ ರಾಜಸಭಾಂ ಶುಭಾಂ||

ಪಾರ್ಥರ ಧರ್ಮಾರ್ಥಸಂಹಿತ ಮಾತುಗಳನ್ನು ಕೇಳಲು ಬಯಸಿ ಎಲ್ಲರೂ ಧೃತರಾಷ್ಟ್ರನನ್ನು ಮುಂದಿಟ್ಟುಕೊಂಡು ಶುಭ ರಾಜಸಭೆಯನ್ನು ಪ್ರವೇಶಿಸಿದರು.

05046004a ಸುಧಾವದಾತಾಂ ವಿಸ್ತೀರ್ಣಾಂ ಕನಕಾಜಿರಭೂಷಿತಾಂ|

05046004c ಚಂದ್ರಪ್ರಭಾಂ ಸುರುಚಿರಾಂ ಸಿಕ್ತಾಂ ಪರಮವಾರಿಣಾ||

05046005a ರುಚಿರೈರಾಸನೈಃ ಸ್ತೀರ್ಣಾಂ ಕಾಂಚನೈರ್ದಾರವೈರಪಿ|

05046005c ಅಶ್ಮಸಾರಮಯೈರ್ದಾಂತೈಃ ಸ್ವಾಸ್ತೀರ್ಣೈಃ ಸೋತ್ತರಚ್ಚದೈಃ||

ಆ ವಿಸ್ತೀರ್ಣ ಸಭೆಗೆ ಬಿಳಿಯ ಬಣ್ಣವನ್ನು ಬಳಿದಿದ್ದರು. ಕನಕರಾಜಿಗಳಿಂದ ಅಲಂಕರಿಸಿದ್ದರು. ಚಂದ್ರನ ಪ್ರಭೆಯಂತೆ ಸುಂದರ ಬೆಳಕುಗಳನ್ನಿಟ್ಟಿದ್ದರು. ಗಂಧದ ನೀರನ್ನು ಸಿಂಪಡಿಸಿದ್ದರು. ಬಂಗಾರದ ಮತ್ತು ಮರದ ಆಸನಗಳನ್ನಿರಿಸಿದ್ದರು. ದಂತ-ಅಶ್ಮಸಾರಗಳಿಂದ ಕೂಡಿದ ವಸ್ತ್ರಗಳನ್ನು ಹೊದೆಸಿದ್ದರು.

05046006a ಭೀಷ್ಮೋ ದ್ರೋಣಃ ಕೃಪಃ ಶಲ್ಯಃ ಕೃತವರ್ಮಾ ಜಯದ್ರಥಃ|

05046006c ಅಶ್ವತ್ಥಾಮಾ ವಿಕರ್ಣಶ್ಚ ಸೋಮದತ್ತಶ್ಚ ಬಾಹ್ಲಿಕಃ||

05046007a ವಿದುರಶ್ಚ ಮಹಾಪ್ರಾಜ್ಞೋ ಯುಯುತ್ಸುಶ್ಚ ಮಹಾರಥಃ|

05046007c ಸರ್ವೇ ಚ ಸಹಿತಾಃ ಶೂರಾಃ ಪಾರ್ಥಿವಾ ಭರತರ್ಷಭ|

05046007e ಧೃತರಾಷ್ಟ್ರಂ ಪುರಸ್ಕೃತ್ಯ ವಿವಿಶುಸ್ತಾಂ ಸಭಾಂ ಶುಭಾಂ||

ಭರತರ್ಷಭ! ಭೀಷ್ಮ, ದ್ರೋಣ, ಕೃಪ, ಶಲ್ಯ, ಕೃತವರ್ಮ, ಜಯದ್ರಥ, ಅಶ್ವತ್ಥಾಮ, ವಿಕರ್ಣ, ಸೋಮದತ್ತ, ಬಾಹ್ಲೀಕ, ಮಹಾಪ್ರಾಜ್ಞ ವಿದುರ, ಮಹಾರಥಿ ಯುಯುತ್ಸು ಮತ್ತು ಎಲ್ಲ ಶೂರ ಪಾರ್ಥಿವರೂ ಒಟ್ಟಿಗೆ ಧೃತರಾಷ್ಟ್ರನ ಹಿಂದೆ ಶುಭ ಸಭೆಯನ್ನು ಪ್ರವೇಶಿಸಿದರು.

05046008a ದುಃಶಾಸನಶ್ಚಿತ್ರಸೇನಃ ಶಕುನಿಶ್ಚಾಪಿ ಸೌಬಲಃ|

05046008c ದುರ್ಮುಖೋ ದುಃಸ್ಸಹಃ ಕರ್ಣ ಉಲೂಕೋಽಥ ವಿವಿಂಶತಿಃ||

05046009a ಕುರುರಾಜಂ ಪುರಸ್ಕೃತ್ಯ ದುರ್ಯೋಧನಮಮರ್ಷಣಂ|

05046009c ವಿವಿಶುಸ್ತಾಂ ಸಭಾಂ ರಾಜನ್ಸುರಾಃ ಶಕ್ರಸದೋ ಯಥಾ||

ರಾಜನ್! ದುಃಶಾಸನ, ಚಿತ್ರಸೇನ, ಸೌಬಲ ಶಕುನಿ, ದುರ್ಮುಖ, ದುಃಸ್ಸಹ, ಕರ್ಣ, ಉಲೂಕ, ವಿವಿಂಶತಿಯರು ಅಮರ್ಷಣ ಕುರುರಾಜ ದುರ್ಯೋಧನನನ್ನು ಮುಂದಿಟ್ಟುಕೊಂಡು ಸುರರು ಶಕ್ರಸಭೆಯನ್ನು ಹೇಗೋ ಹಾಗೆ ಸಭೆಯನ್ನು ಪ್ರವೇಶಿಸಿದರು.

05046010a ಆವಿಶದ್ಭಿಸ್ತದಾ ರಾಜನ್ ಶೂರೈಃ ಪರಿಘಬಾಹುಭಿಃ|

05046010c ಶುಶುಭೇ ಸಾ ಸಭಾ ರಾಜನ್ಸಿಂಹೈರಿವ ಗಿರೇರ್ಗುಹಾ||

ರಾಜನ್! ಪರಿಘದಂತೆ ಬಾಹುಗಳನ್ನುಳ್ಳ ಆ ಶೂರರು ಪ್ರವೇಶಿಸಲು ಸಭೆಯು ಗಿರಿಗಳಲ್ಲಿ ಸಿಂಹಗಳಿರುವ ಗುಹೆಯಂತೆ ಶೋಭಿಸಿತು.

05046011a ತೇ ಪ್ರವಿಶ್ಯ ಮಹೇಷ್ವಾಸಾಃ ಸಭಾಂ ಸಮಿತಿಶೋಭನಾಃ|

05046011c ಆಸನಾನಿ ಮಹಾರ್ಹಾಣಿ ಭೇಜಿರೇ ಸೂರ್ಯವರ್ಚಸಃ||

ಒಟ್ಟಿಗೇ ಶೋಭಿಸುತ್ತಿದ್ದ ಆ ಮಹೇಷ್ವಾಸರು ಸಭೆಯನ್ನು ಪ್ರವೇಶಿಸಿ ಬೆಲೆಬಾಳುವ ಆಸನಗಳಲ್ಲಿ ಸೂರ್ಯವರ್ಚಸರಂತೆ ಬೆಳಗಿದರು.

05046012a ಆಸನಸ್ಥೇಷು ಸರ್ವೇಷು ತೇಷು ರಾಜಸು ಭಾರತ|

05046012c ದ್ವಾಃಸ್ಥೋ ನಿವೇದಯಾಮಾಸ ಸೂತಪುತ್ರಮುಪಸ್ಥಿತಂ||

ಭಾರತ! ಆ ಸರ್ವ ರಾಜರು ಆಸನಗಳಲ್ಲಿರಲು ಸೂತಪುತ್ರನು ಬಂದಿರುವುದನ್ನು ದ್ವಾರಪಾಲಕನು ನಿವೇದಿಸಿದನು.

05046013a ಅಯಂ ಸ ರಥ ಆಯಾತಿ ಯೋಽಯಾಸೀತ್ಪಾಂಡವಾನ್ಪ್ರತಿ|

05046013c ದೂತೋ ನಸ್ತೂರ್ಣಮಾಯಾತಃ ಸೈಂಧವೈಃ ಸಾಧುವಾಹಿಭಿಃ||

“ಉತ್ತಮ ಸೈಂಧವ ಕುದುರೆಗಳನ್ನು ಕಟ್ಟಿದ ರಥದಲ್ಲಿ ಪಾಂಡವರ ಕಡೆ ಹೋಗಿದ್ದ ದೂತನು ಅವಸರದಿಂದ ಬಂದಿದ್ದಾನೆ.”

05046014a ಉಪಯಾಯ ತು ಸ ಕ್ಷಿಪ್ರಂ ರಥಾತ್ಪ್ರಸ್ಕಂದ್ಯ ಕುಂಡಲೀ|

05046014c ಪ್ರವಿವೇಶ ಸಭಾಂ ಪೂರ್ಣಾಂ ಮಹೀಪಾಲೈರ್ಮಹಾತ್ಮಭಿಃ||

ಕುಂಡಲಗಳನ್ನು ಧರಿಸಿದ ಅವನು ಬೇಗನೆ ರಥದಿಂದ ಇಳಿದು ಮಹಾತ್ಮ ಮಹೀಪಾಲರಿಂದ ತುಂಬಿದ್ದ ಸಭೆಯನ್ನು ಪ್ರವೇಶಿಸಿದನು.

05046015 ಸಂಜಯ ಉವಾಚ|

05046015a ಪ್ರಾಪ್ತೋಽಸ್ಮಿ ಪಾಂಡವಾನ್ಗತ್ವಾ ತದ್ವಿಜಾನೀತ ಕೌರವಾಃ|

05046015c ಯಥಾವಯಃ ಕುರೂನ್ಸರ್ವಾನ್ಪ್ರತಿನಂದಂತಿ ಪಾಂಡವಾಃ||

ಸಂಜಯನು ಹೇಳಿದನು: “ಕೌರವರೇ! ನಾನು ಪಾಂಡವರ ಬಳಿ ಹೋಗಿ ಬಂದಿದ್ದೇನೆಂದು ತಿಳಿಯಿರಿ. ಅವರವರ ವಯಸ್ಸಿನ ಪ್ರಕಾರ ಕುರುಗಳೆಲ್ಲರಿಗೆ ಪಾಂಡವರು ಪ್ರತಿನಂದಿಸುತ್ತಾರೆ.

05046016a ಅಭಿವಾದಯಂತಿ ವೃದ್ಧಾಂಶ್ಚ ವಯಸ್ಯಾಂಶ್ಚ ವಯಸ್ಯವತ್|

05046016c ಯೂನಶ್ಚಾಭ್ಯವದನ್ಪಾರ್ಥಾಃ ಪ್ರತಿಪೂಜ್ಯ ಯಥಾವಯಃ||

ವೃದ್ಧರನ್ನೂ, ತಮ್ಮ ವಯಸ್ಸಿನವರನ್ನೂ ವಯಸ್ಸಿಗೆ ತಕ್ಕಂತೆ ಅಭಿವಂದಿಸುತ್ತಾರೆ. ಸಣ್ಣ ವಯಸ್ಸಿನವರನ್ನು ವಯಸ್ಸಿಗೆ ತಕ್ಕಂತೆ ಪಾರ್ಥರು ಪ್ರತಿಪೂಜಿಸಿ ಅಭಿವಾದಿಸುತ್ತಾರೆ.

05046017a ಯಥಾಹಂ ಧೃತರಾಷ್ಟ್ರೇಣ ಶಿಷ್ಟಃ ಪೂರ್ವಮಿತೋ ಗತಃ|

05046017c ಅಬ್ರುವಂ ಪಾಂಡವಾನ್ಗತ್ವಾ ತನ್ನಿಬೋಧತ ಪಾರ್ಥಿವಾಃ||

ಪಾರ್ಥಿವರೇ! ಧೃತರಾಷ್ಟ್ರನ ಆಜ್ಞೆಯಂತೆ ಈ ಮೊದಲೇ ಇಲ್ಲಿಂದ ಹೋದ ನಾನು ಪಾಂಡುವರಲ್ಲಿಗೆ ಹೋಗಿಬಂದು ಏನು ಹೇಳಲಿರುವೆನೋ ಅದನ್ನು ಕೇಳಿ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯಪ್ರತ್ಯಾಗಮನೇ ಷಟ್‌ಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯಪ್ರತ್ಯಾಗಮನದಲ್ಲಿ ನಲ್ವತ್ತಾರನೆಯ ಅಧ್ಯಾಯವು.

Image result for flowers against white background

Comments are closed.