Udyoga Parva: Chapter 43

ಉದ್ಯೋಗ ಪರ್ವ: ಸನತ್ಸುಜಾತ ಪರ್ವ

೪೩

ವೇದಾಧ್ಯಯನದ ಕುರಿತಾದ ಧೃತರಾಷ್ಟ್ರನ ಸಂಶಯಗಳನ್ನು ನಿವಾರಿಸಿ (೧-೫) ಸನತ್ಸುಜಾತನು ತಪಸ್ಸಿನ ವೃದ್ಧಿ-ಕ್ಷಯಗಳ ಕುರಿತೂ (೬-೨೨), ಬ್ರಾಹ್ಮಣರೆಂದು ಯಾರನ್ನು ಕರೆಯಬೇಕೆಂದೂ (೨೩-೩೭) ತಿಳಿಸಿಕೊಡುವುದು.

05043001 ಧೃತರಾಷ್ಟ್ರ ಉವಾಚ|

05043001a ಋಚೋ ಯಜೂಂಷ್ಯಧೀತೇ ಯಃ ಸಾಮವೇದಂ ಚ ಯೋ ದ್ವಿಜಃ|

05043001c ಪಾಪಾನಿ ಕುರ್ವನ್ಪಾಪೇನ ಲಿಪ್ಯತೇ ನ ಸ ಲಿಪ್ಯತೇ||

ಧೃತರಾಷ್ಟ್ರನು ಹೇಳಿದನು: “ಯಾವ ದ್ವಿಜನು ಋಗ್-ಯಜು-ಸಾಮವೇದಗಳನ್ನು ಅಧ್ಯಯನ ಮಾಡುತ್ತಾನೋ ಅವನೇ ಪಾಪಗಳನ್ನು ಮಾಡಿದರೆ ಪಾಪವು ಅವನಿಗೆ ತಾಗುತ್ತದೆಯೋ ಅಥವಾ ತಾಗುವುದಿಲ್ಲವೋ?”

05043002 ಸನತ್ಸುಜಾತ ಉವಾಚ|

05043002a ನೈನಂ ಸಾಮಾನ್ಯೃಚೋ ವಾಪಿ ನ ಯಜೂಂಷಿ ವಿಚಕ್ಷಣ|

05043002c ತ್ರಾಯಂತೇ ಕರ್ಮಣಃ ಪಾಪಾನ್ನ ತೇ ಮಿಥ್ಯಾ ಬ್ರವೀಮ್ಯಹಂ||

ಸನತ್ಸುಜಾತನು ಹೇಳಿದನು: “ಸಾಮ-ಋಗ್-ಯಜುರ್ವೇದಗಳು ವೇದಾಧ್ಯಾಯಿಯನ್ನು ಪಾಪಕರ್ಮಗಳ ಫಲದಿಂದ ಮುಕ್ತಗೊಳಿಸುವುದಿಲ್ಲ. ನಾನು ಸುಳ್ಳು ಹೇಳುತ್ತಿಲ್ಲ.

05043003a ನ ಚಂದಾಂಸಿ ವೃಜಿನಾತ್ತಾರಯಂತಿ

        ಮಾಯಾವಿನಂ ಮಾಯಯಾ ವರ್ತಮಾನಂ|

05043003c ನೀಡಂ ಶಕುಂತಾ ಇವ ಜಾತಪಕ್ಷಾಶ್

        ಚಂದಾಂಸ್ಯೇನಂ ಪ್ರಜಹತ್ಯಂತಕಾಲೇ||

ಮಾಯಾವಿ ಮಿಥ್ಯಾಚಾರಿಯನ್ನು ವೇದಗಳು ಪಾಪದಿಂದ ರಕ್ಷಿಸುವುದಿಲ್ಲ. ರೆಕ್ಕೆಬಂದ ಪಕ್ಷಿಗಳು ಗೂಡನ್ನು ಬಿಟ್ಟು ಹೊರಟುಹೋಗುವಂತೆ ಮರಣಕಾಲದಲ್ಲಿ ವೇದಗಳು ಪಾಪಿಯನ್ನು ತೊರೆದುಬಿಡುತ್ತವೆ.”

05043004 ಧೃತರಾಷ್ಟ್ರ ಉವಾಚ|

05043004a ನ ಚೇದ್ವೇದಾ ವೇದವಿದಂ ಶಕ್ತಾಸ್ತ್ರಾತುಂ ವಿಚಕ್ಷಣ|

05043004c ಅಥ ಕಸ್ಮಾತ್ಪ್ರಲಾಪೋಽಯಂ ಬ್ರಾಹ್ಮಣಾನಾಂ ಸನಾತನಃ||

ಧೃತರಾಷ್ಟ್ರನು ಹೇಳಿದನು: “ವಿಚಕ್ಷಣ! ವೇದಗಳೇ ವೇದವಿದನನ್ನು ರಕ್ಷಿಸಲು ಅಶಕ್ತವೆಂದಾದರೆ ಏಕೆ ಬ್ರಾಹ್ಮಣರು ಈ ಸನಾತನ ಪ್ರಲಾಪವನ್ನು ಮಾಡಿಕೊಂಡು ಬಂದಿದ್ದಾರೆ?”

05043005 ಸನತ್ಸುಜಾತ ಉವಾಚ|

05043005a ಅಸ್ಮಿಽಲ್ಲೋಕೇ ತಪಸ್ತಪ್ತಂ ಫಲಮನ್ಯತ್ರ ದೃಶ್ಯತೇ|

05043005c ಬ್ರಾಹ್ಮಣಾನಾಮಿಮೇ ಲೋಕಾ ಋದ್ಧೇ ತಪಸಿ ಸಮ್ಯತಾಃ||

ಸನತ್ಸುಜಾತನು ಹೇಳಿದನು: “ಈ ಲೋಕದಲ್ಲಿ ತಪಿಸಿದ ತಪಸ್ಸಿನ ಫಲವು ಅನ್ಯತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಬ್ರಾಹ್ಮಣರ ತಪಸ್ಸು ಈ ಲೋಕದಲ್ಲಿಯೇ ವೃದ್ಧಿಯಾಗುತ್ತದೆ.”

05043006 ಧೃತರಾಷ್ಟ್ರ ಉವಾಚ|

05043006a ಕಥಂ ಸಮೃದ್ಧಮಪ್ಯೃದ್ಧಂ ತಪೋ ಭವತಿ ಕೇವಲಂ|

05043006c ಸನತ್ಸುಜಾತ ತದ್ಬ್ರೂಹಿ ಯಥಾ ವಿದ್ಯಾಮ ತದ್ವಯಂ||

ಧೃತರಾಷ್ಟ್ರನು ಹೇಳಿದನು: “ತಪಸ್ಸು ಹೇಗೆ ಸಮೃದ್ಧ ಅಥವಾ ಕೇವಲವಾಗುತ್ತದೆ? ಸನತ್ಸುಜಾತ! ಅದನ್ನು ನಮಗೆ ತಿಳಿಯುವಂತೆ ಹೇಳು.”

05043007 ಸನತ್ಸುಜಾತ ಉವಾಚ|

05043007a ಕ್ರೋಧಾದಯೋ ದ್ವಾದಶ ಯಸ್ಯ ದೋಷಾಸ್

        ತಥಾ ನೃಶಂಸಾದಿ ಷಡತ್ರ ರಾಜನ್|

05043007c ಧರ್ಮಾದಯೋ ದ್ವಾದಶ ಚಾತತಾನಾಃ

        ಶಾಸ್ತ್ರೇ ಗುಣಾ ಯೇ ವಿದಿತಾ ದ್ವಿಜಾನಾಂ||

ಸನತ್ಸುಜಾತನು ಹೇಳಿದನು: “ರಾಜನ್! ಕ್ರೋಧವೇ ಮೊದಲಾದ ಹನ್ನೆರಡು ಹಾಗೂ ಕ್ರೂರತೆ ಮೊದಲಾದ ಆರು ಅದರ ದೋಷಗಳು. ಧರ್ಮ, ದಯೆ ಮೊದಲಾದ ಹನ್ನೆರಡು ಗುಣಗಳು ದ್ವಿಜರದ್ದು ಎಂದು ಶಾಸ್ತ್ರಗಳಲ್ಲಿ ವಿದಿತವಾಗಿವೆ.

05043008a ಕ್ರೋಧಃ ಕಾಮೋ ಲೋಭಮೋಹೌ ವಿವಿತ್ಸಾ

        ಕೃಪಾಸೂಯಾ ಮಾನಶೋಕೌ ಸ್ಪೃಹಾ ಚ|

05043008c ಈರ್ಷ್ಯಾ ಜುಗುಪ್ಸಾ ಚ ಮನುಷ್ಯದೋಷಾ

        ವರ್ಜ್ಯಾಃ ಸದಾ ದ್ವಾದಶೈತೇ ನರೇಣ||

ಕ್ರೋಧ, ಕಾಮ, ಲೋಭ, ಮೋಹ, ಪ್ರಾಪಂಚಿಕ ವ್ಯವಹಾರಗಳಲ್ಲಿ ಆಸಕ್ತಿ, ನಿಷ್ಠುರತೆ, ಅಸೂಯೆ, ಜಂಭ, ಶೋಕ, ಆಸೆ, ಹೊಟ್ಟೆಕಿಚ್ಚು, ಮತ್ತು ಜುಗುಪ್ಸೆ ಈ ಹನ್ನೆರಡು ಮಾನುಷ ದೋಷಗಳನ್ನು ನರನು ಸದಾ ವರ್ಜಿಸಬೇಕು.

05043009a ಏಕೈಕಮೇತೇ ರಾಜೇಂದ್ರ ಮನುಷ್ಯಾನ್ಪರ್ಯುಪಾಸತೇ|

05043009c ಲಿಪ್ಸಮಾನೋಽಂತರಂ ತೇಷಾಂ ಮೃಗಾಣಾಮಿವ ಲುಬ್ಧಕಃ||

ರಾಜೇಂದ್ರ! ಇವುಗಳಲ್ಲಿ ಒಂದೊಂದೂ ಮನುಷ್ಯನನ್ನು ಪರ್ಯುಪಾಸಿಸಿ ಬೇಟೆಗಾರನು ಸಮಯ ಕಾದು ಎಚ್ಚರತಪ್ಪಿರುವ ಪ್ರಾಣಿಗಳನ್ನು ಬೇಟೆಯಾಡುವಂತೆ ಅಜಾಗರೂಕನಾಗಿರುವವನ ವಿನಾಶಕ್ಕೆ ಕಾರಣವಾಗುತ್ತವೆ.

05043010a ವಿಕತ್ಥನಃ ಸ್ಪೃಹಯಾಲುರ್ಮನಸ್ವೀ

        ಬಿಭ್ರತ್ಕೋಪಂ ಚಪಲೋಽರಕ್ಷಣಶ್ಚ|

05043010c ಏತೇ ಪ್ರಾಪ್ತಾಃ ಷಣ್ನರಾನ್ಪಾಪಧರ್ಮಾನ್

        ಪ್ರಕುರ್ವತೇ ನೋತ ಸಂತಃ ಸುದುರ್ಗೇ||

ಆತ್ಮಶ್ಲಾಘನೆ, ದುರಾಸೆ, ಜಂಭದಿಂದ ಇತರರನ್ನು ಅವಮಾನಿಸುವುದು, ಕಾರಣವಿಲ್ಲದೇ ಕೋಪಗೊಳ್ಳುವುದು, ಚಪಲತೆ, ಅರಕ್ಷಣೆ ಈ ಆರು ಧರ್ಮಗಳನ್ನು ಪಾಪಿಷ್ಟ ನರರು ಪಾಲಿಸುತ್ತಾರೆ. ಕಷ್ಟದ ಸಮಯದಲ್ಲಿದ್ದರೂ ಅವರು ಇವುಗಳನ್ನು ಮಾಡಲು ಹೆದರುವುದಿಲ್ಲ.

05043011a ಸಂಭೋಗಸಂವಿದ್ದ್ವಿಷಮೇಧಮಾನೋ

        ದತ್ತಾನುತಾಪೀ ಕೃಪಣೋಽಬಲೀಯಾನ್|

05043011c ವರ್ಗಪ್ರಶಂಸೀ ವನಿತಾಸು ದ್ವೇಷ್ಟಾ

        ಏತೇಽಪರೇ ಸಪ್ತ ನೃಶಂಸಧರ್ಮಾಃ|

ಸಂಭೋಗದ ಕುರಿತೇ ಯೋಚಿಸುವುದು, ಇನ್ನೊಬ್ಬರಿಗೆ ವಿಷದಂತೆ ಉಪದ್ರವವನ್ನಿತ್ತು ಸಂತೋಷಪಡುವುದು, ದಾನವನ್ನಿತ್ತು ಪಶ್ಚಾತ್ತಾಪಪಡುವುದು, ಕೃಪಣತೆ, ದುರ್ಬಲತೆ, ಇಂದ್ರಿಯಗಣಗಳನ್ನೇ ಪ್ರಶಂಸಿಸುವುದು, ವನಿತೆಯರನ್ನು ದ್ವೇಷಿಸುವುದು - ಇವೇ ಏಳು ಆ ಕ್ರೂರ ಧರ್ಮಗಳು.

05043012a ಧರ್ಮಶ್ಚ ಸತ್ಯಂ ಚ ದಮಸ್ತಪಶ್ಚ

        ಅಮಾತ್ಸರ್ಯಂ ಹ್ರೀಸ್ತಿತಿಕ್ಷಾನಸೂಯಾ|

05043012c ಯಜ್ಞಾಶ್ಚ ದಾನಂ ಚ ಧೃತಿಃ ಶ್ರುತಂ ಚ

        ಮಹಾವ್ರತಾ ದ್ವಾದಶ ಬ್ರಾಹ್ಮಣಸ್ಯ||

ಧರ್ಮ, ಸತ್ಯ, ದಮ, ತಪಸ್ಸು, ಅಮಾತ್ಸರ್ಯ, ಅಕೃತ್ಯದ ವಿಷಯದಲ್ಲಿ ನಾಚಿಕೆ ಪಡುವುದು, ಕಾರಣವಿಲ್ಲದೇ ಕೋಪಗೊಳ್ಳದಿರುವುದು, ಅಸೂಯೆಪಡದಿರುವುದು, ಯಜ್ಞ, ದಾನ, ಧೃತಿ, ಅಧ್ಯಯನ ಇವೇ ಬ್ರಾಹ್ಮಣನ ಹನ್ನೆರಡು ಮಹಾವ್ರತಗಳು.

05043013a ಯಸ್ತ್ವೇತೇಭ್ಯಃ ಪ್ರವಸೇದ್ದ್ವಾದಶೇಭ್ಯಃ

        ಸರ್ವಾಮಪೀಮಾಂ ಪೃಥಿವೀಂ ಪ್ರಶಿಷ್ಯಾತ್|

05043013c ತ್ರಿಭಿರ್ದ್ವಾಭ್ಯಾಮೇಕತೋ ವಾ ವಿಶಿಷ್ಟೋ

        ನಾಸ್ಯ ಸ್ವಮಸ್ತೀತಿ ಸ ವೇದಿತವ್ಯಃ||

ಈ ಹನ್ನೆರಡು ಗುಣಗಳಿಂದಲೂ ಸಂಪನ್ನರಾಗಿರುವವನು ಈ ಪೃಥ್ವಿಯೆಲ್ಲವನ್ನೂ ಆಳುತ್ತಾನೆ. ಮೂರು, ಅಥವಾ ಎರಡು ಅಥವಾ ಒಂದಾದರೂ ಇದ್ದರೂ ಉಳಿದ ಹನ್ನೆರಡನ್ನೂ ಅವನು ಸಾಧಿಸಿಕೊಳ್ಳಬಹುದು ಎಂದು ತಿಳಿಯಬೇಕು.

05043014a ದಮಸ್ತ್ಯಾಗೋಽಪ್ರಮಾದಶ್ಚ ಏತೇಷ್ವಮೃತಮಾಹಿತಂ|

05043014c ತಾನಿ ಸತ್ಯಮುಖಾನ್ಯಾಹುರ್ಬ್ರಾಹ್ಮಣಾ ಯೇ ಮನೀಷಿಣಃ||

ದಮ, ತ್ಯಾಗ ಮತ್ತು ಅಪ್ರಮಾದತೆ ಇವುಗಳಲ್ಲಿ ಅಮೃತತ್ವವಿದೆಯೆಂದೂ, ಇವು ಸತ್ಯವನ್ನು ಸಾಧಿಸಲು ಪ್ರಮುಖವಾದವುಗಳೆಂದೂ ತಿಳಿದವರು ಹೇಳುತ್ತಾರೆ.

05043015a ದಮೋಽಷ್ಟಾದಶದೋಷಃ ಸ್ಯಾತ್ಪ್ರತಿಕೂಲಂ ಕೃತಾಕೃತೇ|

05043015c ಅನೃತಂ ಚಾಭ್ಯಸೂಯಾ ಚ ಕಾಮಾರ್ಥೌ ಚ ತಥಾ ಸ್ಪೃಹಾ||

05043016a ಕ್ರೋಧಃ ಶೋಕಸ್ತಥಾ ತೃಷ್ಣಾ ಲೋಭಃ ಪೈಶುನ್ಯಮೇವ ಚ|

05043016c ಮತ್ಸರಶ್ಚ ವಿವಿತ್ಸಾ ಚ ಪರಿತಾಪಸ್ತಥಾ ರತಿಃ||

05043017a ಅಪಸ್ಮಾರಃ ಸಾತಿವಾದಸ್ತಥಾ ಸಂಭಾವನಾತ್ಮನಿ|

05043017c ಏತೈರ್ವಿಮುಕ್ತೋ ದೋಷೈರ್ಯಃ ಸ ದಮಃ ಸದ್ಭಿರುಚ್ಯತೇ||

ದಮಕ್ಕೆ ಇರುವ ಹದಿನೆಂಟು ದೋಷಗಳಲ್ಲಿ ಒಂದನ್ನು ಆಚರಿಸಿದರೂ ಅದಕ್ಕೆ ಪ್ರತಿಕೂಲವಾಗುತ್ತದೆ: ಅನೃತ, ಅಸೂಯೆ, ಕಾಮ, ಅರ್ಥ, ಆಸೆ, ಕ್ರೋಧ, ಶೋಕ, ತೃಷ್ಣೆ, ಲೋಭ, ಪೈಶುನ, ಮತ್ಸರ, ಅಂಟಿಕೊಂಡಿರುವುದು, ಪರಿತಾಪ, ರತಿ, ಅಪಸ್ಮಾರ, ಮತ್ತು ಅತಿವಾದ. ಈ ದೋಷಗಳಿಂದ ವಿಮುಕ್ತನಾದವನು ದಮದಿಂದ ಆತ್ಮ ನಿಯಂತ್ರಣ ಮಾಡಿಕೊಂಡಿದ್ದಾನೆ ಎಂದು ಸಾಧುಗಳು ಹೇಳುತ್ತಾರೆ.

05043018a ಶ್ರೇಯಾಂಸ್ತು ಷಡ್ವಿಧಸ್ತ್ಯಾಗಃ ಪ್ರಿಯಂ ಪ್ರಾಪ್ಯ ನ ಹೃಷ್ಯತಿ|

05043018c ಅಪ್ರಿಯೇ ತು ಸಮುತ್ಪನ್ನೇ ವ್ಯಥಾಂ ಜಾತು ನ ಚಾರ್ಚ್ಚತಿ||

05043019a ಇಷ್ಟಾನ್ದಾರಾಂಶ್ಚ ಪುತ್ರಾಂಶ್ಚ ನ ಚಾನ್ಯಂ ಯದ್ವಚೋ ಭವೇತ್|

05043019c ಅರ್ಹತೇ ಯಾಚಮಾನಾಯ ಪ್ರದೇಯಂ ತದ್ವಚೋ ಭವೇತ್||

05043019e ಅಪ್ಯವಾಚ್ಯಂ ವದತ್ಯೇವ ಸ ತೃತೀಯೋ ಗುಣಃ ಸ್ಮೃತಃ||

ಆರು ವಿಧದ ತ್ಯಾಗಗಳು ಶ್ರೇಯಸ್ಕರವಾದವು. ಪ್ರಿಯವಾದುದನ್ನು ಪಡೆದು ಹರ್ಷಗೊಳ್ಳದಿರುವುದು; ಅಪ್ರಿಯವಾದುದು ಬಂದೊದಗಿದಾಗ ವ್ಯಥೆಗೊಳ್ಳದಿರುವುದು; ಅರ್ಹನಾದವನು ಬೇರೆಯಾರನ್ನೂ ಕೇಳದೇ ಪತ್ನಿಯಾಗಲೀ, ಮಗನನ್ನಾಗಲೀ ಕೇಳಿದಾಗ, ಅವನು ಹೇಳಬಾರದುದನ್ನು ಹೇಳಿದರೂ, ಕೊಡುವುದು - ಇದನ್ನು ಮೂರನೆಯ ಶ್ರೇಷ್ಠ ತ್ಯಾಗವೆನ್ನುತ್ತಾರೆ.

05043020a ತ್ಯಕ್ತೈರ್ದ್ರವ್ಯೈರ್ಯೋ ಭವತಿ ನೋಪಯುಂಕ್ತೇ ಚ ಕಾಮತಃ|

05043020c ನ ಚ ಕರ್ಮಸು ತದ್ಧೀನಃ ಶಿಷ್ಯಬುದ್ಧಿರ್ನರೋ ಯಥಾ|

05043020e ಸರ್ವೈರೇವ ಗುಣೈರ್ಯುಕ್ತೋ ದ್ರವ್ಯವಾನಪಿ ಯೋ ಭವೇತ್||

ವಸ್ತುಗಳನ್ನು ತ್ಯಜಿಸುವುದು, ಆಸೆಯಿಂದ ಅವುಗಳನ್ನು ಬಳಸದೇ ಇರುವುದು, ಕರ್ಮಗಳಲ್ಲಿ ಆಸೆಗಳನ್ನಿಟ್ಟುಕೊಳ್ಳದಿರುವುದು, ಎಲ್ಲ ವಸ್ತುಗಳಿದ್ದೂ, ಶಿಷ್ಯನ ಬುದ್ಧಿಯಂತೆ ಗುಣಯುಕ್ತನಾಗಿರಬೇಕು.

05043021a ಅಪ್ರಮಾದೋಽಷ್ಟದೋಷಃ ಸ್ಯಾತ್ತಾನ್ದೋಷಾನ್ಪರಿವರ್ಜಯೇತ್|

05043021c ಇಂದ್ರಿಯೇಭ್ಯಶ್ಚ ಪಂಚಭ್ಯೋ ಮನಸಶ್ಚೈವ ಭಾರತ|

05043021e ಅತೀತಾನಾಗತೇಭ್ಯಶ್ಚ ಮುಕ್ತೋ ಹ್ಯೇತೈಃ ಸುಖೀ ಭವೇತ್||

ಅಪ್ರಮಾದವನ್ನು ಎಂಟು ದೋಷಗಳು ಕಾಡುತ್ತವೆ. ಆ ದೋಷಗಳನ್ನು ಪರಿತ್ಯಜಿಸಬೇಕು. ಭಾರತ! ಅವು ಐದು ಇಂದ್ರಿಯಗಳು, ಮನಸ್ಸು, ಅತೀತ ಮತ್ತು ಭವಿಷ್ಯ. ಇವುಗಳಿಂದ ಮುಕ್ತನಾದವನು ಸುಖಿಯಾಗುತ್ತಾನೆ.

05043022a ದೋಷೈರೇತೈರ್ವಿಮುಕ್ತಂ ತು ಗುಣೈರೇತೈಃ ಸಮನ್ವಿತಂ|

05043022c ಏತತ್ಸಮೃದ್ಧಮಪ್ಯೃದ್ಧಂ ತಪೋ ಭವತಿ ಕೇವಲಂ|

05043022e ಯನ್ಮಾಂ ಪೃಚ್ಚಸಿ ರಾಜೇಂದ್ರ ಕಿಂ ಭೂಯಃ ಶ್ರೋತುಮಿಚ್ಚಸಿ||

ಈ ದೋಷಗಳಿಂದ ವಿಮುಕ್ತವಾದ ಮತ್ತು ಈ ಗುಣಗಳಿಂದ ಕೂಡಿದ ತಪಸ್ಸು ಮಾತ್ರ ವೃದ್ಧಿಯಾಗುತ್ತದೆ. ರಾಜೇಂದ್ರ! ನೀನು ಕೇಳಿದ್ದುದಕ್ಕೆ ಉತ್ತರಿಸಿದ್ದೇನೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”

05043023 ಧೃತರಾಷ್ಟ್ರ ಉವಾಚ|

05043023a ಆಖ್ಯಾನಪಂಚಮೈರ್ವೇದೈರ್ಭೂಯಿಷ್ಠಂ ಕಥ್ಯತೇ ಜನಃ|

05043023c ತಥೈವಾನ್ಯೇ ಚತುರ್ವೇದಾಸ್ತ್ರಿವೇದಾಶ್ಚ ತಥಾಪರೇ||

05043024a ದ್ವಿವೇದಾಶ್ಚೈಕವೇದಾಶ್ಚ ಅನೃಚಶ್ಚ ತಥಾಪರೇ|

05043024c ತೇಷಾಂ ತು ಕತಮಃ ಸ ಸ್ಯಾದ್ಯಮಹಂ ವೇದ ಬ್ರಾಹ್ಮಣಂ||

ಧೃತರಾಷ್ಟ್ರನು ಹೇಳಿದನು: “ಕೆಲವು ಜನರು ಐದು ವೇದಗಳನ್ನೂ ಓದಿ ಪಂಚವೇದಿಗಳೆಂದು ಕರೆಯಲ್ಪಡುತ್ತಾರೆ. ಇನ್ನು ಕೆಲವರು ನಾಲ್ಕು ವೇದಗಳನ್ನು, ಮತ್ತೆ ಕೆಲವರು ಮೂರು ವೇದಗಳನ್ನು, ದ್ವಿವೇದಗಳನ್ನು, ಇನ್ನು ಇತರರು ಒಂದೇ ವೇದವನ್ನು, ಮತ್ತು ವೇದವನ್ನು ಕಲಿಯದವರೂ ಇದ್ದಾರೆ. ಇವರಲ್ಲಿ ಯಾರು ಅಧಿಕರು? ಯಾರನ್ನು ಬ್ರಾಹ್ಮಣರೆಂದು ಕರೆಯಬೇಕು?”

05043025 ಸನತ್ಸುಜಾತ ಉವಾಚ|

05043025a ಏಕಸ್ಯ ವೇದಸ್ಯಾಜ್ಞಾದ್ವೇದಾಸ್ತೇ ಬಹವೋಽಭವನ್|

05043025c ಸತ್ಯಸ್ಯೈಕಸ್ಯ ರಾಜೇಂದ್ರ ಸತ್ಯೇ ಕಶ್ಚಿದವಸ್ಥಿತಃ|

05043025e ಏವಂ ವೇದಮನುತ್ಸಾದ್ಯ ಪ್ರಜ್ಞಾಂ ಮಹತಿ ಕುರ್ವತೇ||

ಸನತ್ಸುಜಾತನು ಹೇಳಿದನು: “ರಾಜೇಂದ್ರ! ಒಂದೇ ವೇದದ ಅಜ್ಞಾನದಿಂದ ಒಂದೇ ಸತ್ಯದ ಬಹಳ ವೇದಗಳುಂಟಾದವು. ಅವುಗಳಲ್ಲಿ ಪ್ರತಿಯೊಂದೂ ಸತ್ಯವನ್ನು ಆಧರಿಸಿವೆ. ಈ ರೀತಿ ವೇದವನ್ನು ದಾಟಿ ಇರುವುದರ ಮಹತ್ತಿನ ಕುರಿತು ಪ್ರಜ್ಞೆಯನ್ನುಂಟುಮಾಡುತ್ತದೆ.

05043026a ದಾನಮಧ್ಯಯನಂ ಯಜ್ಞೋ ಲೋಭಾದೇತತ್ಪ್ರವರ್ತತೇ|

05043026c ಸತ್ಯಾತ್ಪ್ರಚ್ಯವಮಾನಾನಾಂ ಸಂಕಲ್ಪೋ ವಿತಥೋ ಭವೇತ್||

ದಾನ, ವೇದಾಧ್ಯಯನ ಮತ್ತು ಯಜ್ಞಗಳನ್ನು ಲೋಭದಿಂದ ಮಾಡಿದರೆ, ಸಂಕಲ್ಪವು ಸತ್ಯದಿಂದ ಕಳಚಿಬಿದ್ದು ಸುಳ್ಳಾಗುತ್ತದೆ.

05043027a ತತೋ ಯಜ್ಞಾಃ ಪ್ರತಾಯೇತ ಸತ್ಯಸ್ಯೈವಾವಧಾರಣಾತ್|

05043027c ಮನಸಾನ್ಯಸ್ಯ ಭವತಿ ವಾಚಾನ್ಯಸ್ಯೋತ ಕರ್ಮಣಾ|

05043027e ಸಂಕಲ್ಪಸಿದ್ಧಃ ಪುರುಷಃ ಸಂಕಲ್ಪಾನಧಿತಿಷ್ಠತಿ||

ಆದುದರಿಂದ ಸತ್ಯವನ್ನು ಅವಧರಿಸಿಯೇ ಯಜ್ಞಗಳನ್ನು ಮಾಡಬೇಕು. ಮನಸಾ, ವಾಚಾ ಮತ್ತು ಕರ್ಮಗಳಿಂದ ಸಂಕಲ್ಪಸಿದ್ಧ ಪುರುಷನ ಸಂಕಲ್ಪಗಳೂ ಪೂರೈಸುತ್ತವೆ.

05043028a ಅನೈಭೃತ್ಯೇನ ವೈ ತಸ್ಯ ದೀಕ್ಷಿತವ್ರತಮಾಚರೇತ್|

05043028c ನಾಮೈತದ್ಧಾತುನಿರ್ವೃತ್ತಂ ಸತ್ಯಮೇವ ಸತಾಂ ಪರಂ|

05043028e ಜ್ಞಾನಂ ವೈ ನಾಮ ಪ್ರತ್ಯಕ್ಷಂ ಪರೋಕ್ಷಂ ಜಾಯತೇ ತಪಃ||

ಸಂಕಲ್ಪವನ್ನು ಗೌಪ್ಯವಾಗಿಡದೇ ದೀಕ್ಷೆಯ ವ್ರತವನ್ನಾಚರಿಸಬೇಕು. ಧಾತು ‘ಸತ್ಯ’ದಿಂದಲೇ ಪರಮ ಸಂತರೆಂದು ಬಂದಿದೆ. ಜ್ಞಾನವು ಪ್ರತ್ಯಕ್ಷವಾಗಿದ್ದರೆ ತಪಸ್ಸು ಪರೋಕ್ಷವಾಗಿರುತ್ತದೆ.

05043029a ವಿದ್ಯಾದ್ಬಹು ಪಠಂತಂ ತು ಬಹುಪಾಠೀತಿ ಬ್ರಾಹ್ಮಣಂ|

05043029c ತಸ್ಮಾತ್ಕ್ಷತ್ರಿಯ ಮಾ ಮಂಸ್ಥಾ ಜಲ್ಪಿತೇನೈವ ಬ್ರಾಹ್ಮಣಂ|

05043029e ಯ ಏವ ಸತ್ಯಾನ್ನಾಪೈತಿ ಸ ಜ್ಞೇಯೋ ಬ್ರಾಹ್ಮಣಸ್ತ್ವಯಾ||

ಬಹುಪಾಠಿಗಳಂತೆ ಪಠಿಸುವ ಬ್ರಾಹ್ಮಣರನ್ನು ತಿಳಿದಿರಬೇಕು. ಕ್ಷತ್ರಿಯ! ಆದುದರಿಂದ ಕೇವಲ ಪಠಿಸುವುದರಿಂದ ಬ್ರಾಹ್ಮಣನಾಗುವುದಿಲ್ಲ. ಯಾರು ಸತ್ಯವನ್ನು ಬಿಟ್ಟು ಹೋಗುವುದಲ್ಲವೋ ಅಂಥವರನ್ನು ನೀನು ಬ್ರಾಹ್ಮಣರೆಂದು ತಿಳಿ.

05043030a ಚಂದಾಂಸಿ ನಾಮ ಕ್ಷತ್ರಿಯ ತಾನ್ಯಥರ್ವಾ

        ಜಗೌ ಪುರಸ್ತಾದೃಷಿಸರ್ಗ ಏಷಃ|

05043030c ಚಂದೋವಿದಸ್ತೇ ಯ ಉ ತಾನಧೀತ್ಯ

        ನ ವೇದ್ಯವೇದಸ್ಯ ವಿದುರ್ನ ವೇದ್ಯಂ||

ಕ್ಷತ್ರಿಯ! ಹಿಂದೆ ಅಥರ್ವನು ಋಷಿಗಳನ್ನು ಸೃಷ್ಟಿಸುವಾಗ ಹೇಳಿದುದನ್ನು ವೇದಗಳೆಂದು ಹೇಳುತ್ತಾರೆ. ಚಂದಗಳನ್ನು ಅಧ್ಯಯನಮಾಡಿಯೂ ಯಾರು ವೇದವು ಏನನ್ನು ತಿಳಿಸುತ್ತದೆಯೋ ಅದನ್ನು ಅರ್ಥಮಾಡಿಕೊಳ್ಳದವನು ವೇದವಿದುವಲ್ಲ.

05043031a ನ ವೇದಾನಾಂ ವೇದಿತಾ ಕಶ್ಚಿದಸ್ತಿ

        ಕಶ್ಚಿದ್ವೇದಾನ್ಬುಧ್ಯತೇ ವಾಪಿ ರಾಜನ್|

05043031c ಯೋ ವೇದ ವೇದಾನ್ನ ಸ ವೇದ ವೇದ್ಯಂ

        ಸತ್ಯೇ ಸ್ಥಿತೋ ಯಸ್ತು ಸ ವೇದ ವೇದ್ಯಂ||

ರಾಜನ್! ವೇದಗಳ ಅಕ್ಷರಗಳನ್ನು ತಿಳಿದವರಿದ್ದಾರೆಯೇ ಹೊರತು, ವೇದಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡವರು ಯಾರೂ ಇಲ್ಲ. ಯಾರು ವೇದವೇದ್ಯನನ್ನು ತಿಳಿದಿಲ್ಲವೋ ಅವನು ವೇದವಿದನಲ್ಲ. ಸತ್ಯದಲ್ಲಿ ನೆಲೆಸಿರುವವನು ವೇದವಿದನು.

05043032a ಅಭಿಜಾನಾಮಿ ಬ್ರಾಹ್ಮಣಮಾಖ್ಯಾತಾರಂ ವಿಚಕ್ಷಣಂ|

05043032c ಯಶ್ಚಿನ್ನವಿಚಿಕಿತ್ಸಃ ಸನ್ನಾಚಷ್ಟೇ ಸರ್ವಸಂಶಯಾನ್||

ಇದರ ವಿಚಕ್ಷಣಕ್ಕೆ ಯಾರು ವ್ಯಾಖ್ಯಾನಮಾಡಬಲ್ಲರೋ, ಯಾರು ಇತರರ ಎಲ್ಲ ಸಂಶಯಗಳನ್ನೂ ನಿವಾರಿಸಬಲ್ಲರೋ ಅವರನ್ನು ನಾನು ಬ್ರಾಹ್ಮಣರೆಂದು ತಿಳಿಯುತ್ತೇನೆ.

05043033a ತಸ್ಯ ಪರ್ಯೇಷಣಂ ಗಚ್ಚೇತ್ಪ್ರಾಚೀನಂ ನೋತ ದಕ್ಷಿಣಂ|

05043033c ನಾರ್ವಾಚೀನಂ ಕುತಸ್ತಿರ್ಯಂ ನಾದಿಶಂ ತು ಕಥಂ ಚನ||

ಅದರ ಅನ್ವೇಷಣೆಗೆ ಪೂರ್ವಕ್ಕಾಗಲೀ ದಕ್ಷಿಣಕ್ಕಾಗಲೀ, ಅಡ್ಡವಾಗಲೀ, ಉದ್ದವಾಗಲೀ, ಎಲ್ಲಿಯೂ ಹೋಗಬೇಕಾಗಿಲ್ಲ.

05043034a ತೂಷ್ಣೀಂಭೂತ ಉಪಾಸೀತ ನ ಚೇಷ್ಟೇನ್ಮನಸಾ ಅಪಿ|

05043034c ಅಭ್ಯಾವರ್ತೇತ ಬ್ರಹ್ಮಾಸ್ಯ ಅಂತರಾತ್ಮನಿ ವೈ ಶ್ರಿತಂ||

ಮನಸ್ಸನ್ನೂ ಹಂದಾಡಿಸದೇ ಸುಮ್ಮನೆ ಕುಳಿತುಕೊಂಡರೆ ಅಂತರಾತ್ಮದಲ್ಲಿ ವಾಸಿಸಿರುವ ಬ್ರಹ್ಮನು ತಾನಾಗಿಯೇ ಬರುತ್ತಾನೆ.

05043035a ಮೌನಾದ್ಧಿ ಸ ಮುನಿರ್ಭವತಿ ನಾರಣ್ಯವಸನಾನ್ಮುನಿಃ|

05043035c ಅಕ್ಷರಂ ತತ್ತು ಯೋ ವೇದ ಸ ಮುನಿಃ ಶ್ರೇಷ್ಠ ಉಚ್ಯತೇ||

ಮೌನದಿಂದ ಮುನಿಯಾಗುತ್ತಾನೆ; ಅರಣ್ಯದಲ್ಲಿ ವಾಸಿಸುವುದರಿಂದಲ್ಲ. ಯಾರು ಅಕ್ಷರವಾದುದನ್ನು ತಿಳಿದುಕೊಂಡಿರುವನೋ ಅವನನ್ನೇ ಶ್ರೇಷ್ಠ ಮುನಿಯೆಂದು ಹೇಳುತ್ತಾರೆ.

05043036a ಸರ್ವಾರ್ಥಾನಾಂ ವ್ಯಾಕರಣಾದ್ವೈಯಾಕರಣ ಉಚ್ಯತೇ|

05043036c ಪ್ರತ್ಯಕ್ಷದರ್ಶೀ ಲೋಕಾನಾಂ ಸರ್ವದರ್ಶೀ ಭವೇನ್ನರಃ||

ಎಲ್ಲ ಪದ-ಅರ್ಥಗಳನ್ನೂ ಬಿಡಿಸಿ ವಿಂಗಡಿಸಿ ತೋರಿಸುವವನು ವೈಯಾಕರಣಿಯೆನಿಸುವನು. ಲೋಕಗಳು ಪ್ರತ್ಯಕ್ಷವಾಗಿ ಕಾಣುವ ನರನು ಸರ್ವದರ್ಶಿಯಾಗುತ್ತಾನೆ.

05043037a ಸತ್ಯೇ ವೈ ಬ್ರಾಹ್ಮಣಸ್ತಿಷ್ಠನ್ಬ್ರಹ್ಮ ಪಶ್ಯತಿ ಕ್ಷತ್ರಿಯ|

05043037c ವೇದಾನಾಂ ಚಾನುಪೂರ್ವ್ಯೇಣ ಏತದ್ವಿದ್ವನ್ಬ್ರವೀಮಿ ತೇ||

ಕ್ಷತ್ರಿಯ! ಒಂದರ ನಂತರ ಇನ್ನೊಂದು ವೇದಗಳನ್ನು ತಿಳಿದು ಸತ್ಯದಲ್ಲಿ ನೆಲೆಸಿರುವ ಬ್ರಾಹ್ಮಣನು ಬ್ರಹ್ಮನನ್ನು ಕಾಣುತ್ತಾನೆ ಎಂದು ಹೇಳುತ್ತೇನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸನತ್ಸುಜಾತ ಪರ್ವಣಿ ಸನತ್ಸುಜಾತವಾಕ್ಯೇ ತ್ರಿಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸನತ್ಸುಜಾತ ಪರ್ವದಲ್ಲಿ ಸನತ್ಸುಜಾತವಾಕ್ಯದಲ್ಲಿ ನಲ್ವತ್ಮೂರನೆಯ ಅಧ್ಯಾಯವು.

Related image

Comments are closed.