Udyoga Parva: Chapter 195

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೯೫

ಅರ್ಜುನವಾಕ್ಯ

“ಎಷ್ಟು ಸಮಯದಲ್ಲಿ ನೀನು ಯುದ್ಧದಲ್ಲಿ ಶತ್ರುಗಳನ್ನು ಇಲ್ಲವಾಗಿಸುವೆ?” ಎಂದು ಯುಧಿಷ್ಠಿರನು ಕೇಳಲು ಅರ್ಜುನನು “ವಾಸುದೇವನ ಸಹಾಯದಿಂದ ನಾನು ಒಂದೇ ರಥದಲ್ಲಿ ನಿಮಿಷದಲ್ಲಿಯೇ ಅಮರರನ್ನೂ ಸೇರಿಸಿ ಮೂರು ಲೋಕಗಳನ್ನು, ಅದರಲ್ಲಿರುವ ಸ್ಥಾವರ ಜಂಗಮಗಳೊಂದಿಗೆ, ಹಿಂದೆ ಇದ್ದ, ಈಗ ಇರುವ ಮತ್ತು ಮುಂದೆ ಇರಬಹುದಾದವುಗಳನ್ನೂ ಸಂಹರಿಸಬಲ್ಲೆ ಎಂದು ನನಗನ್ನಿಸುತ್ತದೆ” ಎಂದು ಹೇಳಿದುದು (೧-೨೦).

05195001 ವೈಶಂಪಾಯನ ಉವಾಚ|

05195001a ಏತಚ್ಚ್ರುತ್ವಾ ತು ಕೌಂತೇಯಃ ಸರ್ವಾನ್ ಭ್ರಾತೄನುಪಹ್ವರೇ|

05195001c ಆಹೂಯ ಭರತಶ್ರೇಷ್ಠ ಇದಂ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ಭರತಶ್ರೇಷ್ಠ! ಇದನ್ನು ಕೇಳಿದ ಕೌಂತೇಯನು ಎಲ್ಲ ತಮ್ಮಂದಿರನ್ನೂ ಕರೆಯಿಸಿ ಏಕಾಂತದಲ್ಲಿ ಈ ಮಾತನ್ನಾಡಿದನು.

05195002a ಧಾರ್ತರಾಷ್ಟ್ರಸ್ಯ ಸೈನ್ಯೇಷು ಯೇ ಚಾರಪುರುಷಾ ಮಮ|

05195002c ತೇ ಪ್ರವೃತ್ತಿಂ ಪ್ರಯಚ್ಚಂತಿ ಮಮೇಮಾಂ ವ್ಯುಷಿತಾಂ ನಿಶಾಂ||

“ಧಾರ್ತರಾಷ್ಟ್ರನ ಸೇನೆಯಲ್ಲಿರುವ ನನ್ನ ಚಾರಕರು ಅವರ ಪ್ರವೃತ್ತಿಗಳನ್ನು ಬೆಳಿಗ್ಗೆ ಬಂದು ಹೇಳಿದರು.

05195003a ದುರ್ಯೋಧನಃ ಕಿಲಾಪೃಚ್ಚದಾಪಗೇಯಂ ಮಹಾವ್ರತಂ|

05195003c ಕೇನ ಕಾಲೇನ ಪಾಂಡೂನಾಂ ಹನ್ಯಾಃ ಸೈನ್ಯಮಿತಿ ಪ್ರಭೋ||

ದುರ್ಯೋಧನನು ಆಪಗೇಯ ಮಹಾವ್ರತನಿಗೆ ಕೇಳಿದನಂತೆ - “ಪ್ರಭೋ! ಪಾಂಡವರ ಸೇನೆಯನ್ನು ನಾಶಪಡಿಸಲು ಎಷ್ಟು ಸಮಯವು ಬೇಕಾಗುತ್ತದೆ?”

05195004a ಮಾಸೇನೇತಿ ಚ ತೇನೋಕ್ತೋ ಧಾರ್ತರಾಷ್ಟ್ರಃ ಸುದುರ್ಮತಿಃ|

05195004c ತಾವತಾ ಚಾಪಿ ಕಾಲೇನ ದ್ರೋಣೋಽಪಿ ಪ್ರತ್ಯಜಾನತ||

ಸುದುರ್ಮತಿ ಧಾರ್ತರಾಷ್ಟ್ರನಿಗೆ ಅವನು ಒಂದು ತಿಂಗಳು ಎಂದು ಹೇಳಿದನಂತೆ. ದ್ರೋಣನೂ ಕೂಡ ಅಷ್ಟೇ ಸಮಯ ಸಾಕೆಂದು ಹೇಳಿದನೆಂದು ತಿಳಿದಿದ್ದೇವೆ.

05195005a ಗೌತಮೋ ದ್ವಿಗುಣಂ ಕಾಲಮುಕ್ತವಾನಿತಿ ನಃ ಶ್ರುತಂ|

05195005c ದ್ರೌಣಿಸ್ತು ದಶರಾತ್ರೇಣ ಪ್ರತಿಜಜ್ಞೇ ಮಹಾಸ್ತ್ರವಿತ್||

ಗೌತಮನು ಅದಕ್ಕೂ ಎರಡು ಪಟ್ಟು ಸಮಯ ಬೇಕೆಂದನಂತೆ. ಮಹಾಸ್ತ್ರವಿದು ದ್ರೌಣಿಯು ಹತ್ತು ರಾತ್ರಿಗಳಲ್ಲಿ ಎಂದು ಪ್ರತಿಜ್ಞೆ ಮಾಡಿದನೆಂದು ಕೇಳಿದ್ದೇವೆ.

05195006a ತಥಾ ದಿವ್ಯಾಸ್ತ್ರವಿತ್ಕರ್ಣಃ ಸಂಪೃಷ್ಟಃ ಕುರುಸಂಸದಿ|

05195006c ಪಂಚಭಿರ್ದಿವಸೈರ್ಹಂತುಂ ಸ ಸೈನ್ಯಂ ಪ್ರತಿಜಜ್ಞೈವಾನ್||

ಹಾಗೆಯೇ ದಿವ್ಯಾಸ್ತ್ರವಿದು ಕರ್ಣನು ಕುರುಸಂಸದಿಯಲ್ಲಿ ಐದೇ ದಿವಸಗಳಲ್ಲಿ ಸೈನ್ಯವನ್ನು ಸಂಹರಿಸುವುದಾಗಿ ಪ್ರತಿಜ್ಞೆಮಾಡಿದ್ದಾನೆ.

05195007a ತಸ್ಮಾದಹಮಪೀಚ್ಚಾಮಿ ಶ್ರೋತುಮರ್ಜುನ ತೇ ವಚಃ|

05195007c ಕಾಲೇನ ಕಿಯತಾ ಶತ್ರೂನ್ ಕ್ಷಪಯೇರಿತಿ ಸಂಯುಗೇ||

ಆದುದರಿಂದ ನಾನೂ ಕೂಡ ಅರ್ಜುನ! ನಿನ್ನ ಮಾತನ್ನು ಕೇಳ ಬಯಸುತ್ತೇನೆ. ಎಷ್ಟು ಸಮಯದಲ್ಲಿ ನೀನು ಯುದ್ಧದಲ್ಲಿ ಶತ್ರುಗಳನ್ನು ಇಲ್ಲವಾಗಿಸುವೆ?”

05195008a ಏವಮುಕ್ತೋ ಗುಡಾಕೇಶಃ ಪಾರ್ಥಿವೇನ ಧನಂಜಯಃ|

05195008c ವಾಸುದೇವಮವೇಕ್ಷ್ಯೇದಂ ವಚನಂ ಪ್ರತ್ಯಭಾಷತ||

ಪಾರ್ಥಿವನಿಂದ ಇದನ್ನು ಕೇಳಿದ ಗುಡಾಕೇಶ ಧನಂಜಯನು ವಾಸುದೇವನನ್ನು ನೋಡಿ ಈ ಮಾತುಗಳಲ್ಲಿ ಉತ್ತರಿಸಿದನು.

05195009a ಸರ್ವ ಏತೇ ಮಹಾತ್ಮಾನಃ ಕೃತಾಸ್ತ್ರಾಶ್ಚಿತ್ರಯೋಧಿನಃ|

05195009c ಅಸಂಶಯಂ ಮಹಾರಾಜ ಹನ್ಯುರೇವ ಬಲಂ ತವ||

“ಇವರೆಲ್ಲರೂ ಮಹಾತ್ಮರು, ಕೃತಾಸ್ತ್ರರು ಮತ್ತು ಚಿತ್ರಯೋಧಿಗಳು. ಮಹಾರಾಜ! ಇವರು ನಿನ್ನ ಸೇನೆಯನ್ನು ಸಂಹರಿಸುವರು ಎನ್ನುವುದರಲ್ಲಿ ಸಂಶಯವಿಲ್ಲ.

05195010a ಅಪೈತು ತೇ ಮನಸ್ತಾಪೋ ಯಥಾಸತ್ಯಂ ಬ್ರವೀಮ್ಯಹಂ|

05195010c ಹನ್ಯಾಮೇಕರಥೇನಾಹಂ ವಾಸುದೇವಸಹಾಯವಾನ್||

05195011a ಸಾಮರಾನಪಿ ಲೋಕಾಂಸ್ತ್ರೀನ್ಸಹಸ್ಥಾವರಜಂಗಮಾನ್|

05195011c ಭೂತಂ ಭವ್ಯಂ ಭವಿಷ್ಯಚ್ಚ ನಿಮೇಷಾದಿತಿ ಮೇ ಮತಿಃ||

ನಿನ್ನ ಮನಸ್ಸಿನಲ್ಲಿ ಜ್ವರವಿಲ್ಲದಿರಲಿ. ಸತ್ಯವನ್ನೇ ಹೇಳುತ್ತಿದ್ದೇನೆ. ವಾಸುದೇವನ ಸಹಾಯದಿಂದ ನಾನು ಒಂದೇ ರಥದಲ್ಲಿ ನಿಮಿಷದಲ್ಲಿಯೇ ಅಮರರನ್ನೂ ಸೇರಿಸಿ ಮೂರು ಲೋಕಗಳನ್ನು, ಅದರಲ್ಲಿರುವ ಸ್ಥಾವರ ಜಂಗಮಗಳೊಂದಿಗೆ, ಹಿಂದೆ ಇದ್ದ, ಈಗ ಇರುವ ಮತ್ತು ಮುಂದೆ ಇರಬಹುದಾದವುಗಳನ್ನೂ ಸಂಹರಿಸಬಲ್ಲೆ ಎಂದು ನನಗನ್ನಿಸುತ್ತದೆ.

05195012a ಯತ್ತದ್ಘೋರಂ ಪಶುಪತಿಃ ಪ್ರಾದಾದಸ್ತ್ರಂ ಮಹನ್ಮಮ|

05195012c ಕೈರಾತೇ ದ್ವಂದ್ವಯುದ್ಧೇ ವೈ ತದಿದಂ ಮಯಿ ವರ್ತತೇ||

ಕೈರಾತನೊಂದಿಗೆ ದ್ವಂದ್ವಯುದ್ಧದಲ್ಲಿ ಪಶುಪತಿಯು ನನಗೆ ಕರುಣಿಸಿದ್ದ ಆ ಘೋರ ಅಸ್ತ್ರವು ನನ್ನಲ್ಲಿದೆ.

05195013a ಯದ್ಯುಗಾಂತೇ ಪಶುಪತಿಃ ಸರ್ವಭೂತಾನಿ ಸಂಹರನ್|

05195013c ಪ್ರಯುಂಕ್ತೇ ಪುರುಷವ್ಯಾಘ್ರ ತದಿದಂ ಮಯಿ ವರ್ತತೇ||

ಪುರುಷವ್ಯಾಘ್ರ! ಯಾವುದನ್ನು ಪ್ರಯೋಗಿಸಿ ಯುಗಾಂತ್ಯದಲ್ಲಿ ಪಶುಪತಿಯು ಸರ್ವಭೂತಗಳನ್ನು ಸಂಹರಿಸುವನೋ ಅದು ನನ್ನಲ್ಲಿದೆ.

05195014a ತನ್ನ ಜಾನಾತಿ ಗಾಂಗೇಯೋ ನ ದ್ರೋಣೋ ನ ಚ ಗೌತಮಃ|

05195014c ನ ಚ ದ್ರೋಣಸುತೋ ರಾಜನ್ಕುತ ಏವ ತು ಸೂತಜಃ||

ರಾಜನ್! ಅದು ಗಾಂಗೇಯನಿಗೆ ತಿಳಿದಿಲ್ಲ, ದ್ರೋಣನಿಗೂ ಇಲ್ಲ, ಗೌತಮನಿಗೂ ಇಲ್ಲ, ದ್ರೋಣಸುತನಿಗೂ ಇಲ್ಲ. ಇನ್ನು ಸೂತಜನಿಗೇನು?

05195015a ನ ತು ಯುಕ್ತಂ ರಣೇ ಹಂತುಂ ದಿವ್ಯೈರಸ್ತ್ರೈಃ ಪೃಥಗ್ಜನಂ|

05195015c ಆರ್ಜವೇನೈವ ಯುದ್ಧೇನ ವಿಜೇಷ್ಯಾಮೋ ವಯಂ ಪರಾನ್||

ಆದರೆ ರಣದಲ್ಲಿ ದಿವ್ಯಾಸ್ತ್ರಗಳನ್ನು ಬಳಸಿ ಸಾಮಾನ್ಯಜನರನ್ನು ಸಂಹರಿಸುವುದು ಸರಿಯಲ್ಲ. ನಾವು ಶತ್ರುಗಳೊಂದಿಗೆ ಆರ್ಜವದಿಂದಲೇ ಯುದ್ಧಮಾಡಿ ವಿಜಯಿಗಳಾಗುತ್ತೇವೆ.

05195016a ತಥೇಮೇ ಪುರುಷವ್ಯಾಘ್ರಾಃ ಸಹಾಯಾಸ್ತವ ಪಾರ್ಥಿವ|

05195016c ಸರ್ವೇ ದಿವ್ಯಾಸ್ತ್ರವಿದುಷಃ ಸರ್ವೇ ಯುದ್ಧಾಭಿನಂದಿನಃ||

ಈ ಎಲ್ಲ ಪುರುಷವ್ಯಾಘ್ರರೂ ನಿನ್ನ ಸಹಾಯಕರು ಪಾರ್ಥಿವ! ಎಲ್ಲರೂ ದಿವ್ಯಾಸ್ತ್ರವಿದುಷರು. ಎಲ್ಲರೂ ಯುದ್ಧವನ್ನು ಇಷ್ಟಪಡುವವರು.

05195017a ವೇದಾಂತಾವಭೃಥಸ್ನಾತಾಃ ಸರ್ವ ಏತೇಽಪರಾಜಿತಾಃ|

05195017c ನಿಹನ್ಯುಃ ಸಮರೇ ಸೇನಾಂ ದೇವಾನಾಮಪಿ ಪಾಂಡವ||

ಇವರೆಲ್ಲರೂ ವೇದಾಂತ ಅವಭೃತಸ್ನಾನಗಳನ್ನು ಮಾಡಿದವರು. ಅಪರಾಜಿತರು. ಪಾಂಡವ! ಸಮರದಲ್ಲಿ ದೇವತೆಗಳ ಸೇನೆಯನ್ನೂ ಸಂಹರಿಸಬಲ್ಲರು.

05195018a ಶಿಖಂಡೀ ಯುಯುಧಾನಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ|

05195018c ಭೀಮಸೇನೋ ಯಮೌ ಚೋಭೌ ಯುಧಾಮನ್ಯೂತ್ತಮೌಜಸೌ||

05195019a ವಿರಾಟದ್ರುಪದೌ ಚೋಭೌ ಭೀಷ್ಮದ್ರೋಣಸಮೌ ಯುಧಿ|

05195019c ಸ್ವಯಂ ಚಾಪಿ ಸಮರ್ಥೋಽಸಿ ತ್ರೈಲೋಕ್ಯೋತ್ಸಾದನೇ ಅಪಿ||

ಶಿಖಂಡೀ, ಯುಯುಧಾನ, ಪಾರ್ಷತ ಧೃಷ್ಟದ್ಯುಮ್ನ, ಭೀಮಸೇನ, ಯಮಳರು, ಯುಧಾಮನ್ಯು, ಉತ್ತಮೌಜ, ಯುದ್ಧದಲ್ಲಿ ಭೀಷ್ಮ-ದ್ರೋಣರ ಸಮನಾದ ವಿರಾಟ-ದ್ರುಪದರು, ನೀನೂ ಕೂಡ, ತ್ರೈಲೋಕ್ಯಗಳನ್ನು ಕಿತ್ತೊಗೆಯಲು ಸಮರ್ಥನಾಗಿದ್ದೀಯೆ.

05195020a ಕ್ರೋಧಾದ್ಯಂ ಪುರುಷಂ ಪಶ್ಯೇಸ್ತ್ವಂ ವಾಸವಸಮದ್ಯುತೇ|

05195020c ಕ್ಷಿಪ್ರಂ ನ ಸ ಭವೇದ್ವ್ಯಕ್ತಮಿತಿ ತ್ವಾಂ ವೇದ್ಮಿ ಕೌರವ||

ಕೌರವ! ವಾಸವಸಮದ್ಯುತೇ! ನೀನು ಯಾವ ಪುರುಷನನ್ನು ಕ್ರೋಧದಿಂದ ನೋಡುತ್ತೀಯೋ ಅವನ ನಾಶವು ಕ್ಷಿಪ್ರವಾಗಿ ಆಗುತ್ತದೆ[1] ಎನ್ನುವುದನ್ನು ನಾನು ತಿಳಿದುಕೊಂಡಿದ್ದೇನೆ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಅರ್ಜುನವಾಕ್ಯೇ ಪಂಚನವತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಅರ್ಜುನವಾಕ್ಯದಲ್ಲಿ ನೂರಾತೊಂಭತ್ತೈದನೆಯ ಅಧ್ಯಾಯವು.

Image result for flowers against white background"

[1] ಇದನ್ನು ತೋರಿಸುವ ಪ್ರಕರಣವು ಇದೂವರೆಗೂ ಬಂದಿಲ್ಲವಲ್ಲ!

Comments are closed.