Udyoga Parva: Chapter 191

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೯೧

ದ್ರುಪದನ ಸಂದಿಗ್ದತೆ

ದಾಶಾರ್ಣಕನು ಸೇನೆಯೊಂದಿಗೆ ಬರಲು ಚಿಂತಿತನಾದ ದ್ರುಪದನು ತನ್ನ ಪತ್ನಿಗೆ ಸತ್ಯವನ್ನು ಹೇಳೆಂದು ಕೇಳಿದುದು (೧-೨೦).

05191001 ಭೀಷ್ಮ ಉವಾಚ|

05191001a ಏವಮುಕ್ತಸ್ಯ ದೂತೇನ ದ್ರುಪದಸ್ಯ ತದಾ ನೃಪ|

05191001c ಚೋರಸ್ಯೇವ ಗೃಹೀತಸ್ಯ ನ ಪ್ರಾವರ್ತತ ಭಾರತೀ||

ಭೀಷ್ಮನು ಹೇಳಿದನು: “ನೃಪ! ದೂತನು ಹೀಗೆ ಹೇಳಲು ದೃಪದನು ಕಳ್ಳತನ ಮಾಡುವಾಗಲೇ ಸಿಕ್ಕಿಬಿದ್ದವನಂತೆ ಏನನ್ನೂ ಮಾತನಾಡಲಿಲ್ಲ.

05191002a ಸ ಯತ್ನಮಕರೋತ್ತೀವ್ರಂ ಸಂಬಂಧೈರನುಸಾಂತ್ವನೈಃ|

05191002c ದೂತೈರ್ಮಧುರಸಂಭಾಷೈರ್ನೈತದಸ್ತೀತಿ ಸಂದಿಶನ್||

ಅದು ಹಾಗಲ್ಲವೆಂದು ಸೂಚನೆಯನ್ನು ನೀಡಲು ತನ್ನ ಸಂಬಂಧಿಗಳ ಅನುಸಾಂತ್ವನದ ಮೂಲಕ, ಮಧುರ ಸಂಭಾಷಣೆ ಮಾಡಬಲ್ಲ ದೂತರ ಮೂಲಕ ತೀವ್ರ ಪ್ರಯತ್ನ ಮಾಡಿದನು.

05191003a ಸ ರಾಜಾ ಭೂಯ ಏವಾಥ ಕೃತ್ವಾ ತತ್ತ್ವತ ಆಗಮಂ|

05191003c ಕನ್ಯೇತಿ ಪಾಂಚಾಲಸುತಾಂ ತ್ವರಮಾಣೋಽಭಿನಿರ್ಯಯೌ||

ಆ ರಾಜನು ಇನ್ನೊಮ್ಮೆ ಆ ಪಾಂಚಾಲಸುತೆಯು ಕನ್ಯೆಯೆಂದು ಪರೀಕ್ಷಿಸಿ ಸತ್ಯವನ್ನು ತಿಳಿದುಕೊಂಡು ತ್ವರೆಮಾಡಿ ಹೊರಟನು.

05191004a ತತಃ ಸಂಪ್ರೇಷಯಾಮಾಸ ಮಿತ್ರಾಣಾಮಮಿತೌಜಸಾಂ|

05191004c ದುಹಿತುರ್ವಿಪ್ರಲಂಭಂ ತಂ ಧಾತ್ರೀಣಾಂ ವಚನಾತ್ತದಾ||

ಅವನು ತನ್ನ ಧಾತ್ರಿಗಳ ಮಾತಿನಂತೆ ಮಗಳಿಗೆ ಮೋಸವಾಗಿದೆ ಎಂದು ತನ್ನ ಎಲ್ಲ ಅಮಿತೌಜಸ ಮಿತ್ರರಿಗೆ ಹೇಳಿ ಕಳುಹಿಸಿದನು.

05191005a ತತಃ ಸಮುದಯಂ ಕೃತ್ವಾ ಬಲಾನಾಂ ರಾಜಸತ್ತಮಃ|

05191005c ಅಭಿಯಾನೇ ಮತಿಂ ಚಕ್ರೇ ದ್ರುಪದಂ ಪ್ರತಿ ಭಾರತ||

ಭಾರತ! ಆ ರಾಜಸತ್ತಮನು ಸೇನೆಗಳನ್ನು ಒಟ್ಟುಗೂಡಿಸಿ ದ್ರುಪದನ ಮೇಲೆ ಧಾಳಿಯಿಡಲು ನಿಶ್ಚಯಿಸಿದನು.

05191006a ತತಃ ಸಮ್ಮಂತ್ರಯಾಮಾಸ ಮಿತ್ರೈಃ ಸಹ ಮಹೀಪತಿಃ|

05191006c ಹಿರಣ್ಯವರ್ಮಾ ರಾಜೇಂದ್ರ ಪಾಂಚಾಲ್ಯಂ ಪಾರ್ಥಿವಂ ಪ್ರತಿ||

ರಾಜೇಂದ್ರ! ಆಗ ಮಹೀಪತಿ ಹಿರಣ್ಯವರ್ಮನು ಪಾಂಚಾಲ್ಯ ರಾಜನ ಕುರಿತು ತನ್ನ ಮಿತ್ರರೊಡನೆ ಸಮಾಲೋಚನೆ ಮಾಡಿದನು.

05191007a ತತ್ರ ವೈ ನಿಶ್ಚಿತಂ ತೇಷಾಮಭೂದ್ರಾಜ್ಞಾಂ ಮಹಾತ್ಮನಾಂ|

05191007c ತಥ್ಯಂ ಚೇದ್ಭವತಿ ಹ್ಯೇತತ್ಕನ್ಯಾ ರಾಜಂ ಶಿಖಂಡಿನೀ|

05191007e ಬದ್ಧ್ವಾ ಪಾಂಚಾಲರಾಜಾನಮಾನಯಿಷ್ಯಾಮಹೇ ಗೃಹಾನ್||

ಆ ಮಹಾತ್ಮ ರಾಜರು ನಿಶ್ಚಯಿಸಿದರು: “ಒಂದುವೇಳೆ ರಾಜನ ಶಿಖಂಡಿನಿಯು ಕನ್ಯೆಯೇ ಆಗಿದ್ದರೆ ನಾವು ಪಾಂಚಾಲರಾಜನನ್ನು ಮನೆಯಿಂದ ಬಂಧಿಸಿ ಕರೆದುಕೊಂಡು ಬರೋಣ.

05191008a ಅನ್ಯಂ ರಾಜಾನಮಾಧಾಯ ಪಾಂಚಾಲೇಷು ನರೇಶ್ವರಂ|

05191008c ಘಾತಯಿಷ್ಯಾಮ ನೃಪತಿಂ ದ್ರುಪದಂ ಸಶಿಖಂಡಿನಂ||

ಇನ್ನೊಬ್ಬನನ್ನು ಪಾಂಚಾಲ ನರೇಶ್ವರನನ್ನಾಗಿ ಮಾಡಿ ನೃಪತಿ ದ್ರುಪದನನ್ನು ಶಿಖಂಡಿಯೊಡನೆ ಸಂಹರಿಸೋಣ!”

05191009a ಸ ತದಾ ದೂತಮಾಜ್ಞಾಯ ಪುನಃ ಕ್ಷತ್ತಾರಮೀಶ್ವರಃ|

05191009c ಪ್ರಾಸ್ಥಾಪಯತ್ಪಾರ್ಷತಾಯ ಹನ್ಮೀತಿ ತ್ವಾಂ ಸ್ಥಿರೋ ಭವ||

ಆಗ ಆ ಕ್ಷತ್ತಾರರ ಈಶ್ವರನು ದೂತನನ್ನು ಪುನಃ ಪಾರ್ಷತನಿಗೆ “ನಿನ್ನನ್ನು ಕೊಲ್ಲುತ್ತೇವೆ. ನಿಲ್ಲು!” ಎಂದು ಹೇಳಿ ಕಳುಹಿಸಿದನು.

05191010a ಸ ಪ್ರಕೃತ್ಯಾ ಚ ವೈ ಭೀರುಃ ಕಿಲ್ಬಿಷೀ ಚ ನರಾಧಿಪಃ|

05191010c ಭಯಂ ತೀವ್ರಮನುಪ್ರಾಪ್ತೋ ದ್ರುಪದಃ ಪೃಥಿವೀಪತಿಃ||

ಸ್ವಭಾವದಲ್ಲಿ ನಾಚಿಕೆಯುಳ್ಳವನಾದ, ತಪ್ಪಿತಸ್ಥನಾದ ನರಾಧಿಪ ಪೃಥಿವೀಪತಿ ದ್ರುಪದನು ತೀವ್ರ ಭಯಪಟ್ಟನು.

05191011a ವಿಸೃಜ್ಯ ದೂತಂ ದಾಶಾರ್ಣಂ ದ್ರುಪದಃ ಶೋಕಕರ್ಶಿತಃ|

05191011c ಸಮೇತ್ಯ ಭಾರ್ಯಾಂ ರಹಿತೇ ವಾಕ್ಯಮಾಹ ನರಾಧಿಪಃ||

ಶೋಕಕರ್ಶಿತ ನರಾಧಿಪ ದ್ರುಪದನು ದಾಶಾರ್ಣನಿಗೆ ದೂತನನ್ನು ಕಳುಹಿಸಿ, ಏಕಾಂತದಲ್ಲಿ ಪತ್ನಿಯೊಡನೆ ಮಾತನಾಡಿದನು.

05191012a ಭಯೇನ ಮಹತಾವಿಷ್ಟೋ ಹೃದಿ ಶೋಕೇನ ಚಾಹತಃ|

05191012c ಪಾಂಚಾಲರಾಜೋ ದಯಿತಾಂ ಮಾತರಂ ವೈ ಶಿಖಂಡಿನಃ||

ಮಹಾ ಭಯದಿಂದ ಆವಿಷ್ಟನಾದ, ಶೋಕದಿಂದ ಹೃದಯವನ್ನು ಕಳೆದುಕೊಂಡ ಪಾಂಚಾಲರಾಜನು ಶಿಖಂಡಿಯ ತಾಯಿ ಪ್ರಿಯೆಗೆ ಹೇಳಿದನು:

05191013a ಅಭಿಯಾಸ್ಯತಿ ಮಾಂ ಕೋಪಾತ್ಸಂಬಂಧೀ ಸುಮಹಾಬಲಃ|

05191013c ಹಿರಣ್ಯವರ್ಮಾ ನೃಪತಿಃ ಕರ್ಷಮಾಣೋ ವರೂಥಿನೀಂ||

“ನನ್ನ ಸಂಬಂಧೀ ಸುಮಹಾಬಲ ನೃಪತಿ ಹಿರಣ್ಯವರ್ಮನು ಕೋಪದಿಂದ ದೊಡ್ಡ ಸೇನೆಯೊಂದಿಗೆ ನನ್ನನ್ನು ಆಕ್ರಮಣಿಸಲಿದ್ದಾನೆ.

05191014a ಕಿಮಿದಾನೀಂ ಕರಿಷ್ಯಾಮಿ ಮೂಢಃ ಕನ್ಯಾಮಿಮಾಂ ಪ್ರತಿ|

05191014c ಶಿಖಂಡೀ ಕಿಲ ಪುತ್ರಸ್ತೇ ಕನ್ಯೇತಿ ಪರಿಶಂಕಿತಃ||

ಮೂಢನಾದ ನಾನು ಈ ಕನ್ಯೆಯ ಕುರಿತು ಈಗ ಏನು ಮಾಡಲಿ? ನಿನ್ನ ಪುತ್ರ ಶಿಖಂಡಿಯು ಕನ್ಯೆಯೆಂದು ಶಂಕಿಸುತ್ತಿದ್ದಾರೆ.

05191015a ಇತಿ ನಿಶ್ಚಿತ್ಯ ತತ್ತ್ವೇನ ಸಮಿತ್ರಃ ಸಬಲಾನುಗಃ|

05191015c ವಂಚಿತೋಽಸ್ಮೀತಿ ಮನ್ವಾನೋ ಮಾಂ ಕಿಲೋದ್ಧರ್ತುಮಿಚ್ಚತಿ||

ಇದರಲ್ಲಿ ಸತ್ಯವೇನೆಂದು ನಿಶ್ಚಯಿಸಿ ಮಿತ್ರರು, ಅನುಯಾಯಿಗಳ ಸೇನೆಗಳೊಂದಿಗೆ ನಾನು ಅವನನ್ನು ವಂಚಿಸಿದ್ದೇನೆ ಎಂದು ತೀರ್ಮಾನಿಸಿ ನನ್ನನ್ನು ಕಿತ್ತೊಗೆಯಲು ಬಯಸಿದ್ದಾನೆ.

05191016a ಕಿಮತ್ರ ತಥ್ಯಂ ಸುಶ್ರೋಣಿ ಕಿಂ ಮಿಥ್ಯಾ ಬ್ರೂಹಿ ಶೋಭನೇ|

05191016c ಶ್ರುತ್ವಾ ತ್ವತ್ತಃ ಶುಭೇ ವಾಕ್ಯಂ ಸಂವಿಧಾಸ್ಯಾಮ್ಯಹಂ ತಥಾ||

ಸುಶ್ರೋಣಿ! ಶೋಭನೇ! ಇದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದನ್ನು ಹೇಳು. ಶುಭೇ! ನಿನ್ನಿಂದ ಸತ್ಯವಾಕ್ಯವನ್ನು ಕೇಳಿ ಏನು ಮಾಡಬೇಕೋ ಅದನ್ನು ಮಾಡುತ್ತೇನೆ.

05191017a ಅಹಂ ಹಿ ಸಂಶಯಂ ಪ್ರಾಪ್ತೋ ಬಾಲಾ ಚೇಯಂ ಶಿಖಂಡಿನೀ|

05191017c ತ್ವಂ ಚ ರಾಜ್ಞೈ ಮಹತ್ಕೃಚ್ಚ್ರಂ ಸಂಪ್ರಾಪ್ತಾ ವರವರ್ಣಿನಿ||

ವರವರ್ಣಿನಿ! ಸಂಶಯಕ್ಕೊಳಗಾಗಿರುವ ನನಗೆ, ಬಾಲಕಿ ಶಿಖಂಡಿನಿಗೆ ಮತ್ತು ರಾಣಿ! ನಿನಗೂ ಮಹಾ ಕಷ್ಟವು ಬಂದೊದಗಿದೆ.

05191018a ಸಾ ತ್ವಂ ಸರ್ವವಿಮೋಕ್ಷಾಯ ತತ್ತ್ವಮಾಖ್ಯಾಹಿ ಪೃಚ್ಚತಃ|

05191018c ತಥಾ ವಿದಧ್ಯಾಂ ಸುಶ್ರೋಣಿ ಕೃತ್ಯಸ್ಯಾಸ್ಯ ಶುಚಿಸ್ಮಿತೇ|

05191018e ಶಿಖಂಡಿನಿ ಚ ಮಾ ಭೈಸ್ತ್ವಂ ವಿಧಾಸ್ಯೇ ತತ್ರ ತತ್ತ್ವತಃ||

ನಾನು ಕೇಳುತ್ತಿದ್ದೇನೆ. ನಮ್ಮನ್ನೆಲ್ಲರನ್ನೂ ಬಿಡುಗಡೆಗೊಳಿಸಲು ಸತ್ಯವನ್ನು ಹೇಳು. ಸುಶ್ರೋಣಿ! ಶುಚಿಸ್ಮಿತೇ! ಸತ್ಯವನ್ನು ತಿಳಿದುಕೊಂಡು ಇದರ ಕುರಿತು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಶಿಖಂಡಿನಿಗೆ ನೀನು ಹೆದರಬೇಡ! ಈ ವಿಷಯದಲ್ಲಿ ಸತ್ಯವನ್ನು ತಿಳಿದುಕೊಂಡೇ ಮುಂದುವರೆಯುತ್ತೇನೆ.

05191019a ಕ್ರಿಯಯಾಹಂ ವರಾರೋಹೇ ವಂಚಿತಃ ಪುತ್ರಧರ್ಮತಃ|

05191019c ಮಯಾ ದಾಶಾರ್ಣಕೋ ರಾಜಾ ವಂಚಿತಶ್ಚ ಮಹೀಪತಿಃ|

05191019e ತದಾಚಕ್ಷ್ವ ಮಹಾಭಾಗೇ ವಿಧಾಸ್ಯೇ ತತ್ರ ಯದ್ಧಿತಂ||

ವರಾರೋಹೇ! ಪುತ್ರಧರ್ಮತನಾದ ನಾನೇ ವಂಚಿತನಾಗಿದ್ದೇನೆ. ಅಂಥಹ ನನ್ನಿಂದ ಮಹೀಪತಿ ರಾಜಾ ದಾಶಾರ್ಣಕನು ವಂಚಿತನಾಗಿದ್ದಾನೆ. ಮಹಾಭಾಗೇ! ಆದುದರಿಂದ ಇದರಲ್ಲಿ ನಿನಗೆ ತಿಳಿದಿರುವುದನ್ನು ಸತ್ಯವಾಗಿ ಹೇಳು!”

05191020a ಜಾನತಾಪಿ ನರೇಂದ್ರೇಣ ಖ್ಯಾಪನಾರ್ಥಂ ಪರಸ್ಯ ವೈ|

05191020c ಪ್ರಕಾಶಂ ಚೋದಿತಾ ದೇವೀ ಪ್ರತ್ಯುವಾಚ ಮಹೀಪತಿಂ||

ತನಗೆ ಗೊತ್ತಿದ್ದರೂ ಶತ್ರುವನ್ನು ತನಗಿದು ಗೊತ್ತಿರಲಿಲ್ಲವೆಂದು ತೋರಿಸಿಕೊಡಲು ನರೇಂದ್ರನು ಹೀಗೆ ಒತ್ತಾಯಿಸಿ ಕೇಳಲು ಆ ದೇವಿಯು ಮಹೀಪತಿಗೆ ಉತ್ತರಿಸಿದಳು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ದ್ರುಪದಪ್ರಶ್ನೇ ಏಕನವತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ದ್ರುಪದಪ್ರಶ್ನೆಯಲ್ಲಿ ನೂರಾತೊಂಭತ್ತೊಂದನೆಯ ಅಧ್ಯಾಯವು.

Image result for flowers against white background"

Comments are closed.