Udyoga Parva: Chapter 168

ಉದ್ಯೋಗ ಪರ್ವ: ರಥಾಥಿರಥಸಂಖ್ಯ ಪರ್ವ

೧೬೮

ಪಾಂಡವರ ಸೇನೆಯಲ್ಲಿರುವ ಶಿಖಂಡಿಯು ರಥಮುಖ್ಯನೆಂದೂ, ಧೃಷ್ಟದ್ಯುಮ್ನ, ಶ್ರೇಣಿಮಾನ ಮತ್ತು ವಸುದಾನರು ಅತಿರಥರೆಂದೂ, ಧೃಷ್ಟದ್ಯುಮ್ನನ ಮಗ ಕ್ಷತ್ರಧರ್ಮನು ಅರ್ಧರಥನೆಂದೂ, ಚೇದಿರಾಜ ಧೃಷ್ಟಕೇತು, ಜಯಂತ, ಸತ್ಯಜಿತು, ಅಜ, ಭೋಜ, ವಾರ್ಧಕ್ಷೇಮಿ ಇವರು ಮಹಾರಥರೆಂದೂ, ಕ್ಷತ್ರದೇವನು ರಥೋತ್ತಮನೆಂದೂ, ಐವರು ಕೇಕಯ ಸಹೋದರರು, ಕಾಶಿಕ, ಸುಕುಮಾರ, ನೀಲ, ಸೂರ್ಯದತ್ತ, ಶಂಖ, ಮದಿರಾಶ್ವ, ಚೇಕಿತಾನ ಮತ್ತು ಸತ್ಯಧೃತಿ ವ್ಯಾಘ್ರದತ್ತ ಮತ್ತು ಚಂದ್ರಸೇನ, ಇವರು ರಥೋದಾರರೆಂದೂ, ಚಿತ್ರಯುಧನು ರಥಸತ್ತಮನೆಂದೂ ಭೀಷ್ಮನು ದುರ್ಯೋಧನನಿಗೆ ಹೇಳಿದುದು (೧-೨೫).

05168001 ಭೀಷ್ಮ ಉವಾಚ|

05168001a ಪಾಂಚಾಲರಾಜಸ್ಯ ಸುತೋ ರಾಜನ್ಪರಪುರಂಜಯಃ|

05168001c ಶಿಖಂಡೀ ರಥಮುಖ್ಯೋ ಮೇ ಮತಃ ಪಾರ್ಥಸ್ಯ ಭಾರತ||

ಭೀಷ್ಮನು ಹೇಳಿದನು: “ರಾಜನ್! ಭಾರತ! ಪಾಂಚಾಲರಾಜನ ಮಗ, ಪರಪುರಂಜಯ ಶಿಖಂಡಿಯು ಪಾರ್ಥನ ರಥಮುಖ್ಯನೆಂದು ನನ್ನ ಮತ.

05168002a ಏಷ ಯೋತ್ಸ್ಯತಿ ಸಂಗ್ರಾಮೇ ನಾಶಯನ್ಪೂರ್ವಸಂಸ್ಥಿತಿಂ|

05168002c ಪರಂ ಯಶೋ ವಿಪ್ರಥಯಂಸ್ತವ ಸೇನಾಸು ಭಾರತ||

ಭಾರತ! ಇವನು ಹಿಂದಿನ ಸಂಸ್ಥಿತಿಯನ್ನು ನಾಶಪಡಿಸಿ, ನಿನ್ನ ಸೇನೆಗಳಲ್ಲಿ ತನ್ನ ಪರಮ ಯಶಸ್ಸನ್ನು ಪಸರಿಸುತ್ತಾ ಸಂಗ್ರಾಮದಲ್ಲಿ ಹೋರಾಡುತ್ತಾನೆ.

05168003a ಏತಸ್ಯ ಬಹುಲಾಃ ಸೇನಾಃ ಪಾಂಚಾಲಾಶ್ಚ ಪ್ರಭದ್ರಕಾಃ|

05168003c ತೇನಾಸೌ ರಥವಂಶೇನ ಮಹತ್ಕರ್ಮ ಕರಿಷ್ಯತಿ||

ಅವನಲ್ಲಿ ಪಾಂಚಾಲರು ಮತ್ತು ಪ್ರಭದ್ರಕರ ಅನೇಕ ಸೇನೆಗಳಿವೆ. ಅವನ ರಥಗುಂಪುಗಳೊಡನೆ ಅವನು ಮಹತ್ಕಾರ್ಯಗಳನ್ನು ಮಾಡುತ್ತಾನೆ.

05168004a ಧೃಷ್ಟದ್ಯುಮ್ನಶ್ಚ ಸೇನಾನೀಃ ಸರ್ವಸೇನಾಸು ಭಾರತ|

05168004c ಮತೋ ಮೇಽತಿರಥೋ ರಾಜನ್ದ್ರೋಣಶಿಷ್ಯೋ ಮಹಾರಥಃ||

ಭಾರತ! ರಾಜನ್! ಸರ್ವ ಸೇನೆಗಳ ಸೇನಾನೀ ದ್ರೋಣಶಿಷ್ಯ ಮಹಾರಥ ಧೃಷ್ಟದ್ಯುಮ್ನನು ಅತಿರಥನೆಂದು ನನ್ನ ಮತ.

05168005a ಏಷ ಯೋತ್ಸ್ಯತಿ ಸಂಗ್ರಾಮೇ ಸೂದಯನ್ವೈ ಪರಾನ್ರಣೇ|

05168005c ಭಗವಾನಿವ ಸಂಕ್ರುದ್ಧಃ ಪಿನಾಕೀ ಯುಗಸಂಕ್ಷಯೇ||

ಅವನು ಈ ಸಂಗ್ರಾಮದಲ್ಲಿ ರಣದಲ್ಲಿ ಶತ್ರುಗಳನ್ನು ತುಂಡರಿಸಿ ಸಂಕ್ರುದ್ಧ ಪಿನಾಕೀ ಭಗವಾನನು ಯುಗಕ್ಷಯದಲ್ಲಿ ಹೇಗೋ ಹಾಗೆ ಹೋರಾಡುತ್ತಾನೆ.

05168006a ಏತಸ್ಯ ತದ್ರಥಾನೀಕಂ ಕಥಯಂತಿ ರಣಪ್ರಿಯಾಃ|

05168006c ಬಹುತ್ವಾತ್ಸಾಗರಪ್ರಖ್ಯಂ ದೇವಾನಾಮಿವ ಸಂಯುಗೇ||

ಅವನ ರಥಗಳ ಸೇನೆಯು ಸಂಯುಗದಲ್ಲಿ ಅತಿ ದೊಡ್ಡ ಸಾಗರದಂತೆ ಮತ್ತು ದೇವತೆಗಳದ್ದಂತೆ ಇದೆ ಎಂದು ರಣಪ್ರಿಯರು ಹೇಳುತ್ತಾರೆ.

05168007a ಕ್ಷತ್ರಧರ್ಮಾ ತು ರಾಜೇಂದ್ರ ಮತೋ ಮೇಽರ್ಧರಥೋ ನೃಪ|

05168007c ಧೃಷ್ಟದ್ಯುಮ್ನಸ್ಯ ತನಯೋ ಬಾಲ್ಯಾನ್ನಾತಿಕೃತಶ್ರಮಃ||

ರಾಜೇಂದ್ರ! ನೃಪ! ಧೃಷ್ಟದ್ಯುಮ್ನನ ತನಯ ಕ್ಷತ್ರಧರ್ಮನು ಬಾಲಕನಾಗಿದ್ದರೂ ಅತ್ಯಂತ ಶ್ರಮ ಪಟ್ಟಿದುದಕ್ಕೆ ಅರ್ಧರಥನೆಂದು ನನ್ನ ಮತ.

05168008a ಶಿಶುಪಾಲಸುತೋ ವೀರಶ್ಚೇದಿರಾಜೋ ಮಹಾರಥಃ|

05168008c ಧೃಷ್ಟಕೇತುರ್ಮಹೇಷ್ವಾಸಃ ಸಂಬಂಧೀ ಪಾಂಡವಸ್ಯ ಹ||

ಶಿಶುಪಾಲನ ಮಗ ವೀರ ಚೇದಿರಾಜ ಮಹೇಷ್ವಾಸ ಧೃಷ್ಟಕೇತುವು ಪಾಂಡವರ ಸಂಬಂಧಿ ಮತ್ತು ಮಹಾರಥ.

05168009a ಏಷ ಚೇದಿಪತಿಃ ಶೂರಃ ಸಹ ಪುತ್ರೇಣ ಭಾರತ|

05168009c ಮಹಾರಥೇನಾಸುಕರಂ ಮಹತ್ಕರ್ಮ ಕರಿಷ್ಯತಿ||

ಭಾರತ! ಈ ಚೇದಿಪತಿ ಶೂರನು ಮಗನೊಂದಿಗೆ ಮಹಾರಥಿಗಳಿಗೂ ಮಾಡಲಸಾಧ್ಯ ಮಹಾ ಕರ್ಮಗಳನ್ನು ಮಾಡುತ್ತಾನೆ.

05168010a ಕ್ಷತ್ರಧರ್ಮರತೋ ಮಹ್ಯಂ ಮತಃ ಪರಪುರಂಜಯಃ|

05168010c ಕ್ಷತ್ರದೇವಸ್ತು ರಾಜೇಂದ್ರ ಪಾಂಡವೇಷು ರಥೋತ್ತಮಃ|

ರಾಜೇಂದ್ರ! ಕ್ಷತ್ರಧರ್ಮರತನಾದ, ಪರಪುರಂಜಯ ಕ್ಷತ್ರದೇವನಾದರೋ ಪಾಂಡವರ ರಥೋತ್ತಮನೆಂದು ನನ್ನ ಮತ.

05168010e ಜಯಂತಶ್ಚಾಮಿತೌಜಾಶ್ಚ ಸತ್ಯಜಿಚ್ಚ ಮಹಾರಥಃ||

05168011a ಮಹಾರಥಾ ಮಹಾತ್ಮಾನಃ ಸರ್ವೇ ಪಾಂಚಾಲಸತ್ತಮಾಃ|

05168011c ಯೋತ್ಸ್ಯಂತೇ ಸಮರೇ ತಾತ ಸಂರಬ್ಧಾ ಇವ ಕುಂಜರಾಃ||

ಜಯಂತ, ಅಮಿತೌಜಸ, ಮಹಾರಥಿ ಸತ್ಯಜಿತ್ ಇವರೆಲ್ಲ ಮಹಾತ್ಮ ಪಾಂಚಾಲಸತ್ತಮರೂ ಮಹಾರಥರೇ. ಮಗೂ! ಅವರು ಆವೇಶಗೊಂಡ ಆನೆಗಳಂತೆ ಸಮರದಲ್ಲಿ ಹೋರಾಡುತ್ತಾರೆ.

05168012a ಅಜೋ ಭೋಜಶ್ಚ ವಿಕ್ರಾಂತೌ ಪಾಂಡವೇಷು ಮಹಾರಥೌ|

05168012c ಪಾಂಡವಾನಾಂ ಸಹಾಯಾರ್ಥೇ ಪರಂ ಶಕ್ತ್ಯಾ ಯತಿಷ್ಯತಃ|

05168012e ಶೀಘ್ರಾಸ್ತ್ರೌ ಚಿತ್ರಯೋದ್ಧಾರೌ ಕೃತಿನೌ ದೃಢವಿಕ್ರಮೌ||

ವಿಕ್ರಾಂತರಾದ ಅಜ ಮತ್ತು ಭೋಜರು ಪಾಂಡವರ ಮಹಾರಥರು. ಪಾಂಡವರ ಸಹಾಯಕ್ಕಾಗಿ ಪರಮ ಶಕ್ತಿಯನ್ನುಪಯೋಗಿಸುವವರು. ಅವರಿಬ್ಬರೂ ಶೀಘ್ರಾಸ್ತ್ರರು, ಚಿತ್ರಯೋಧಿಗಳು, ಕುಶಲರು ಮತ್ತು ದೃಢವಿಕ್ರಮಿಗಳು.

05168013a ಕೇಕಯಾಃ ಪಂಚ ರಾಜೇಂದ್ರ ಭ್ರಾತರೋ ಯುದ್ಧದುರ್ಮದಾಃ|

05168013c ಸರ್ವ ಏತೇ ರಥೋದಾರಾಃ ಸರ್ವೇ ಲೋಹಿತಕಧ್ವಜಾಃ||

ರಾಜೇಂದ್ರ! ಯುದ್ಧ ದುರ್ಮದರಾದ ಐವರು ಕೇಕಯ ಸಹೋದರರೆಲ್ಲರೂ ರಥೋದಾರರು. ಎಲ್ಲರೂ ಕೆಂಪು ಧ್ವಜವುಳ್ಳವರು.

05168014a ಕಾಶಿಕಃ ಸುಕುಮಾರಶ್ಚ ನೀಲೋ ಯಶ್ಚಾಪರೋ ನೃಪಃ|

05168014c ಸೂರ್ಯದತ್ತಶ್ಚ ಶಂಖಶ್ಚ ಮದಿರಾಶ್ವಶ್ಚ ನಾಮತಃ||

05168015a ಸರ್ವ ಏತೇ ರಥೋದಾರಾಃ ಸರ್ವೇ ಚಾಹವಲಕ್ಷಣಾಃ|

05168015c ಸರ್ವಾಸ್ತ್ರವಿದುಷಃ ಸರ್ವೇ ಮಹಾತ್ಮಾನೋ ಮತಾ ಮಮ||

ಕಾಶಿಕ, ಸುಕುಮಾರ, ನೀಲ, ರಾಜ ಸೂರ್ಯದತ್ತ, ಶಂಖ ಮತ್ತು ಮದಿರಾಶ್ವ ಇವರೆಲ್ಲರೂ ರಥೋದಾರರು. ಎಲ್ಲರೂ ಯುದ್ಧ ಲಕ್ಷಣವುಳ್ಳವರು. ಎಲ್ಲರೂ ಅಸ್ತ್ರ ವಿದುಷರು. ಎಲ್ಲರೂ ಮಹಾತ್ಮರೆಂದು ನನ್ನ ಮತ.

05168016a ವಾರ್ಧಕ್ಷೇಮಿರ್ಮಹಾರಾಜ ರಥೋ ಮಮ ಮಹಾನ್ಮತಃ|

05168016c ಚಿತ್ರಾಯುಧಶ್ಚ ನೃಪತಿರ್ಮತೋ ಮೇ ರಥಸತ್ತಮಃ|

05168016e ಸ ಹಿ ಸಂಗ್ರಾಮಶೋಭೀ ಚ ಭಕ್ತಶ್ಚಾಪಿ ಕಿರೀಟಿನಃ||

ಮಹಾರಾಜ! ವಾರ್ಧಕ್ಷೇಮಿಯು ನನ್ನ ಮತದಲ್ಲಿ ಮಹಾನ್ ರಥ. ನೃಪತೇ! ಚಿತ್ರಯುಧನೂ ಕೂಡ ನನ್ನ ಪ್ರಕಾರ ರಥಸತ್ತಮ. ಇವನು ಸಂಗ್ರಾಮದಲ್ಲಿ ಶೋಭಿಸುವವನು. ಕಿರೀಟಿಯ ಭಕ್ತನೂ ಹೌದು.

05168017a ಚೇಕಿತಾನಃ ಸತ್ಯಧೃತಿಃ ಪಾಂಡವಾನಾಂ ಮಹಾರಥೌ|

05168017c ದ್ವಾವಿಮೌ ಪುರುಷವ್ಯಾಘ್ರೌ ರಥೋದಾರೌ ಮತೌ ಮಮ||

ಚೇಕಿತಾನ ಮತ್ತು ಸತ್ಯಧೃತಿ ಇಬ್ಬರೂ ಪಾಂಡವರ ಮಹಾರಥರು. ಇವರಿಬ್ಬರು ಪುರುಷವ್ಯಾಘ್ರರೂ ರಥೋದಾರರೆಂದು ನನ್ನ ಮತ.

05168018a ವ್ಯಾಘ್ರದತ್ತಶ್ಚ ರಾಜೇಂದ್ರ ಚಂದ್ರಸೇನಶ್ಚ ಭಾರತ|

05168018c ಮತೌ ಮಮ ರಥೋದಾರೌ ಪಾಂಡವಾನಾಂ ನ ಸಂಶಯಃ||

ಭಾರತ! ರಾಜೇಂದ್ರ! ವ್ಯಾಘ್ರದತ್ತ ಮತ್ತು ಚಂದ್ರಸೇನ. ಇವರಿಬ್ಬರೂ ಪಾಂಡವರ ರಥೋದರರು ಎನ್ನುವುದು ನನ್ನ ಮತ. ಅದರಲ್ಲಿ ಸಶಯವಿಲ್ಲ.

05168019a ಸೇನಾಬಿಂದುಶ್ಚ ರಾಜೇಂದ್ರ ಕ್ರೋಧಹಂತಾ ಚ ನಾಮತಃ|

05168019c ಯಃ ಸಮೋ ವಾಸುದೇವೇನ ಭೀಮಸೇನೇನ ಚಾಭಿಭೂಃ|

05168019e ಸ ಯೋತ್ಸ್ಯತೀಹ ವಿಕ್ರಮ್ಯ ಸಮರೇ ತವ ಸೈನಿಕೈಃ||

ರಾಜೇಂದ್ರ! ಕ್ರೋಧಹಂತನೆಂಬ ಹೆಸರುಳ್ಳ ಸೇನಾಬಿಂದುವು ವಾಸುದೇವ ಮತ್ತು ಭೀಮಸೇನರ ಸಮನೆಂದು ಕರೆಯುತ್ತಾರೆ. ಅವನು ವಿಕ್ರಮದಿಂದ ನಿನ್ನ ಸೈನಿಕರೊಂದಿಗೆ ಹೋರಾಡುತ್ತಾನೆ.

05168020a ಮಾಂ ದ್ರೋಣಂ ಚ ಕೃಪಂ ಚೈವ ಯಥಾ ಸಮ್ಮನ್ಯತೇ ಭವಾನ್|

05168020c ತಥಾ ಸ ಸಮರಶ್ಲಾಘೀ ಮಂತವ್ಯೋ ರಥಸತ್ತಮಃ||

ನನ್ನನ್ನು, ದ್ರೋಣನನ್ನು ಮತ್ತು ಕೃಪನನ್ನು ಹೇಗೆ ಸನ್ಮಾನಿಸುವೆಯೋ ಹಾಗೆ ಆ ಸಮರಶ್ಲಾಘೀ ರಥಸತ್ತಮನನ್ನೂ ನೀನು ಮನ್ನಿಸಬೇಕು.

05168021a ಕಾಶ್ಯಃ ಪರಮಶೀಘ್ರಾಸ್ತ್ರಃ ಶ್ಲಾಘನೀಯೋ ರಥೋತ್ತಮಃ|

05168021c ರಥ ಏಕಗುಣೋ ಮಹ್ಯಂ ಮತಃ ಪರಪುರಂಜಯಃ||

ಪರಮ ಶೀಘ್ರಾಸ್ತ್ರನಾಗಿರುವ ಶ್ಲಾಘನೀಯ ಕಾಶ್ಯನು ರಥೋತ್ತಮ. ಆ ಪರಪುರಂಜಯನು ಏಕರಥನೆಂದು ನನ್ನ ಮತ.

05168022a ಅಯಂ ಚ ಯುಧಿ ವಿಕ್ರಾಂತೋ ಮಂತವ್ಯೋಽಷ್ಟಗುಣೋ ರಥಃ|

05168022c ಸತ್ಯಜಿತ್ಸಮರಶ್ಲಾಘೀ ದ್ರುಪದಸ್ಯಾತ್ಮಜೋ ಯುವಾ||

ದ್ರುಪದನ ಮಗ ಯುವಕ ಅಮರಶ್ಲಾಘೀ ಸತ್ಯಜಿತುವು ಯುದ್ಧದಲ್ಲಿ ವಿಕ್ರಾಂತ ಮತ್ತು ನನ್ನ ಪ್ರಕಾರ ಎಂಟು ರಥರಿಗೆ ಸಮ.

05168023a ಗತಃ ಸೋಽತಿರಥತ್ವಂ ಹಿ ಧೃಷ್ಟದ್ಯುಮ್ನೇನ ಸಮ್ಮಿತಃ|

05168023c ಪಾಂಡವಾನಾಂ ಯಶಸ್ಕಾಮಃ ಪರಂ ಕರ್ಮ ಕರಿಷ್ಯತಿ||

ಧೃಷ್ಟದ್ಯುಮ್ನನ ಸರಿಸಾಟಿಯಾದ ಅವನು ಅತಿರಥತ್ವವನ್ನು ಪಡೆಯುತ್ತಾನೆ. ಪಾಂಡವರ ಯಶಸ್ಸನ್ನು ಬಯಸಿ ಪರಮ ಕರ್ಮಗಳನ್ನು ಮಾಡುತ್ತಾನೆ.

05168024a ಅನುರಕ್ತಶ್ಚ ಶೂರಶ್ಚ ರಥೋಽಯಮಪರೋ ಮಹಾನ್|

05168024c ಪಾಂಡ್ಯರಾಜೋ ಮಹಾವೀರ್ಯಃ ಪಾಂಡವಾನಾಂ ಧುರಂಧರಃ||

ಪಾಂಡವರಲ್ಲಿ ಅನುರಕ್ತನಾಗಿರುವ ರಥರಲ್ಲಿಯೂ ಅಪರನಾಗಿರುವ ಮಾಹಾನ್ ಪಾಂಡ್ಯರಾಜನು ಮಹಾವೀರ ಮತ್ತು ಶೂರ ಧುರಂಧರ.

05168025a ದೃಢಧನ್ವಾ ಮಹೇಷ್ವಾಸಃ ಪಾಂಡವಾನಾಂ ರಥೋತ್ತಮಃ|

05168025c ಶ್ರೇಣಿಮಾನ್ಕೌರವಶ್ರೇಷ್ಠ ವಸುದಾನಶ್ಚ ಪಾರ್ಥಿವಃ|

05168025e ಉಭಾವೇತಾವತಿರಥೌ ಮತೌ ಮಮ ಪರಂತಪ||

ಕೌರವಶ್ರೇಷ್ಠ! ಮಹೇಷ್ವಾಸ ದೃಢಧನ್ವಿಯು ಪಾಂಡವರ ರಥೋತ್ತಮ. ಪರಂತಪ! ಶ್ರೇಣಿಮಾನ ಮತ್ತು ಪಾರ್ಥಿವ ವಸುದಾನರಿಬ್ಬರೂ ಅತಿರಥರೆಂದು ನನ್ನ ಮತ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ಅಷ್ಟಷಷ್ಟ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ನೂರಾಅರವತ್ತೆಂಟನೆಯ ಅಧ್ಯಾಯವು.

Image result for flowers against white background"

Comments are closed.