Udyoga Parva: Chapter 167

ಉದ್ಯೋಗ ಪರ್ವ: ರಥಾಥಿರಥಸಂಖ್ಯ ಪರ್ವ

೧೬೭

ಪಾಂಡವರ ಸೇನೆಯಲ್ಲಿರುವ ದ್ರೌಪದೇಯರು ಮತ್ತು ಉತ್ತರರು ಮಹಾರಥರೆಂದೂ, ಅಭಿಮನ್ಯು ಸಾತ್ಯಕಿಯರು ರಥಯೂಥಪಯೂಥರೆಂದೂ, ಉತ್ತಮೌಜಸ, ವಿರಾಟ, ದ್ರುಪದರು ಮಹಾರಥಿಗಳೆಂದೂ, ಯುಧಾಮನ್ಯುವು ರಥೋದಾರನೆಂದೂ ಭೀಷ್ಮನು ದುರ್ಯೋಧನನಿಗೆ ಹೇಳಿದುದು (೧-೧೪).

05167001 ಭೀಷ್ಮ ಉವಾಚ|

05167001a ದ್ರೌಪದೇಯಾ ಮಹಾರಾಜ ಸರ್ವೇ ಪಂಚ ಮಹಾರಥಾಃ|

05167001c ವೈರಾಟಿರುತ್ತರಶ್ಚೈವ ರಥೋ ಮಮ ಮಹಾನ್ಮತಃ||

ಭೀಷ್ಮನು ಹೇಳಿದನು: “ಮಹಾರಾಜ! ದ್ರೌಪದೇಯರೆಲ್ಲರೂ ಐವರು ಮಹಾರಥರು. ವೈರಾಟೀ ಉತ್ತರನೂ ಕೂಡ ಮಹಾರಥನೆಂದು ನನ್ನ ಮತ.

05167002a ಅಭಿಮನ್ಯುರ್ಮಹಾರಾಜ ರಥಯೂಥಪಯೂಥಪಃ|

05167002c ಸಮಃ ಪಾರ್ಥೇನ ಸಮರೇ ವಾಸುದೇವೇನ ವಾ ಭವೇತ್||

ಮಹಾರಾಜ! ಅಭಿಮನ್ಯುವು ರಥಯೂಥಪಯೂಥಪನು. ಸಮರದಲ್ಲಿ ಅವನು ಪಾರ್ಥನ ಅಥವಾ ವಾಸುದೇವನ ಸಮನಾಗುತ್ತಾನೆ.

05167003a ಲಘ್ವಸ್ತ್ರಶ್ಚಿತ್ರಯೋಧೀ ಚ ಮನಸ್ವೀ ದೃಢವಿಕ್ರಮಃ|

05167003c ಸಂಸ್ಮರನ್ವೈ ಪರಿಕ್ಲೇಶಂ ಸ್ವಪಿತುರ್ವಿಕ್ರಮಿಷ್ಯತಿ||

ಅಸ್ತ್ರಗಳಲ್ಲಿ ಲಘುತ್ವವನ್ನು ಹೊಂದಿದ, ಚಿತ್ರಯೋಧೀ, ಆ ಮನಸ್ವೀ ದೃಢವಿಕ್ರಮಿಯು ತನ್ನ ತಂದೆಗುಂಟಾದ ಪರಿಕ್ಲೇಶಗಳನ್ನು ಸಂಸ್ಮರಿಸಿಕೊಂಡು ವಿಕ್ರಮವನ್ನು ತೋರಿಸುತ್ತಾನೆ.

05167004a ಸಾತ್ಯಕಿರ್ಮಾಧವಃ ಶೂರೋ ರಥಯೂಥಪಯೂಥಪಃ|

05167004c ಏಷ ವೃಷ್ಣಿಪ್ರವೀರಾಣಾಮಮರ್ಷೀ ಜಿತಸಾಧ್ವಸಃ||

ಮಾಧವ ಶೂರ ಸಾತ್ಯಕಿಯು ರಥಯೂಥಪಯೂಥಪನು. ಈ ವೃಷ್ಣಿಪ್ರವೀರನು ಭಯವಿಲ್ಲದವನು, ಜಯಿಸಲಸಾಧ್ಯನು.

05167005a ಉತ್ತಮೌಜಾಸ್ತಥಾ ರಾಜನ್ರಥೋ ಮಮ ಮಹಾನ್ಮತಃ|

05167005c ಯುಧಾಮನ್ಯುಶ್ಚ ವಿಕ್ರಾಂತೋ ರಥೋದಾರೋ ನರರ್ಷಭಃ||

ರಾಜನ್! ಉತ್ತಮೌಜಸನು ಮಹಾರಥನೆಂದು ನನ್ನ ಮತ. ನರರ್ಷಭ ವಿಕ್ರಾಂತ ಯುಧಾಮನ್ಯುವು ರಥೋದಾರ.

05167006a ಏತೇಷಾಂ ಬಹುಸಾಹಸ್ರಾ ರಥಾ ನಾಗಾ ಹಯಾಸ್ತಥಾ|

05167006c ಯೋತ್ಸ್ಯಂತೇ ತೇ ತನುಂ ತ್ಯಕ್ತ್ವಾ ಕುಂತೀಪುತ್ರಪ್ರಿಯೇಪ್ಸಯಾ||

05167007a ಪಾಂಡವೈಃ ಸಹ ರಾಜೇಂದ್ರ ತವ ಸೇನಾಸು ಭಾರತ|

05167007c ಅಗ್ನಿಮಾರುತವದ್ರಾಜನ್ನಾಹ್ವಯಂತಃ ಪರಸ್ಪರಂ||

ಅವರಲ್ಲಿ ಬಹುಸಹಸ್ರ ರಥಗಳಿವೆ, ಆನೆಗಳಿವೆ ಮತ್ತು ಕುದುರೆಗಳಿವೆ. ರಾಜೇಂದ್ರ! ಭಾರತ! ಅವರು ತನುವನ್ನು ತ್ಯಜಿಸಿ ಕುಂತೀಪುತ್ರನನ್ನು ಸಂತೋಷಗೊಳಿಸಲೋಸುಗ ಪಾಂಡವರೊಂದಿಗೆ ನಿನ್ನ ಸೇನೆಯು ವಿರುದ್ಧ ಅಗ್ನಿ-ಮಾರುತಗಳಂತೆ ಪರಸ್ಪರರನ್ನು ಕರೆಯುತ್ತಾ ಯುದ್ಧಮಾಡುವರು.

05167008a ಅಜೇಯೌ ಸಮರೇ ವೃದ್ಧೌ ವಿರಾಟದ್ರುಪದಾವುಭೌ|

05167008c ಮಹಾರಥೌ ಮಹಾವೀರ್ಯೌ ಮತೌ ಮೇ ಪುರುಷರ್ಷಭೌ||

ವೃದ್ಧರಾದ ವಿರಾಟ-ದ್ರುಪದರಿಬ್ಬರೂ ಸಮರದಲ್ಲಿ ಅಜೇಯರು. ಇಬ್ಬರು ಮಹಾವೀರ್ಯ ಪುರುಷರ್ಷಭರೂ ನನ್ನ ಪ್ರಕಾರ ಮಹಾರಥರು.

05167009a ವಯೋವೃದ್ಧಾವಪಿ ತು ತೌ ಕ್ಷತ್ರಧರ್ಮಪರಾಯಣೌ|

05167009c ಯತಿಷ್ಯೇತೇ ಪರಂ ಶಕ್ತ್ಯಾ ಸ್ಥಿತೌ ವೀರಗತೇ ಪಥಿ||

ವಯೋವೃದ್ಧರಾಗಿದ್ದರೂ ಇವರಿಬ್ಬರು ಕ್ಷತ್ರಧರ್ಮಪರಾಯಣರು ತಮ್ಮ ಪರಮ ಶಕ್ತಿಯನ್ನುಪಯೋಗಿಸಿ ವೀರರು ಹೋದ ಪಥದಲ್ಲಿ ನಿಲ್ಲುತ್ತಾರೆ.

05167010a ಸಂಬಂಧಕೇನ ರಾಜೇಂದ್ರ ತೌ ತು ವೀರ್ಯಬಲಾನ್ವಯಾತ್|

05167010c ಆರ್ಯವೃತ್ತೌ ಮಹೇಷ್ವಾಸೌ ಸ್ನೇಹಪಾಶಸಿತಾವುಭೌ||

ರಾಜೇಂದ್ರ! ಸಂಬಂಧದಿಂದ ಮತ್ತು ವೀರ್ಯಬಲಾನ್ವಯದಿಂದ ಈ ಇಬ್ಬರು ಆರ್ಯ ಮಹೇಷ್ವಾಸರು ಸ್ನೇಹಪಾಶದಿಂದ ಬಂಧಿತರಾಗಿದ್ದಾರೆ.

05167011a ಕಾರಣಂ ಪ್ರಾಪ್ಯ ತು ನರಾಃ ಸರ್ವ ಏವ ಮಹಾಭುಜಾಃ|

05167011c ಶೂರಾ ವಾ ಕಾತರಾ ವಾಪಿ ಭವಂತಿ ನರಪುಂಗವ||

ನರಪುಂಗವ! ಕಾರಣಗಳನ್ನು ಪಡೆದು ನರರೆಲ್ಲರೂ ಶೂರರು ಅಥವಾ ಹೇಡಿಗಳಾಗುತ್ತಾರೆ.

05167012a ಏಕಾಯನಗತಾವೇತೌ ಪಾರ್ಥೇನ ದೃಢಭಕ್ತಿಕೌ|

05167012c ತ್ಯಕ್ತ್ವಾ ಪ್ರಾಣಾನ್ಪರಂ ಶಕ್ತ್ಯಾ ಘಟಿತಾರೌ ನರಾಧಿಪ||

ನರಾಧಿಪ! ಒಂದೇ ಮಾರ್ಗದಲ್ಲಿರುವ, ಪಾರ್ಥನಲ್ಲಿ ದೃಢಭಕ್ತಿಯನ್ನಿಟ್ಟಿರುವ ಇವರಿಬ್ಬರೂ ಪ್ರಾಣಗಳನ್ನು ತೊರೆದು ಶಕ್ತಿಯಿಂದ ಶತ್ರುಗಳೊಂದಿಗೆ ಹೋರಾಡುತ್ತಾರೆ.

05167013a ಪೃಥಗಕ್ಷೌಹಿಣೀಭ್ಯಾಂ ತಾವುಭೌ ಸಮ್ಯತಿ ದಾರುಣೌ|

05167013c ಸಂಬಂಧಿಭಾವಂ ರಕ್ಷಂತೌ ಮಹತ್ಕರ್ಮ ಕರಿಷ್ಯತಃ||

ಒಂದೊಂದು ಅಕ್ಷೌಹಿಣಿಯನ್ನು ಹೊಂದಿರುವ, ಯುದ್ಧದಲ್ಲಿ ದಾರುಣರಾದ ಇವರಿಬ್ಬರು ಸಂಬಂಧಿಭಾವವನ್ನು ರಕ್ಷಿಸಿಕೊಳ್ಳುತ್ತಾ ಮಹಾಕಾರ್ಯಗಳನ್ನೆಸಗುತ್ತಾರೆ.

05167014a ಲೋಕವೀರೌ ಮಹೇಷ್ವಾಸೌ ತ್ಯಕ್ತಾತ್ಮಾನೌ ಚ ಭಾರತ|

05167014c ಪ್ರತ್ಯಯಂ ಪರಿರಕ್ಷಂತೌ ಮಹತ್ಕರ್ಮ ಕರಿಷ್ಯತಃ||

ಭಾರತ! ಈ ಇಬ್ಬರು ಲೋಕವೀರ ಮಹೇಷ್ವಾಸರು ಆತ್ಮಗಳನ್ನು ತ್ಯಜಿಸಿ ತಮ್ಮ ಪ್ರತ್ಯಯಗಳನ್ನು ರಕ್ಷಿಸಿಕೊಳ್ಳುತ್ತಾ ಮಹಾಕಾರ್ಯಗಳನ್ನೆಸಗುತ್ತಾರೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ಸಪ್ತಷಷ್ಟ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ನೂರಾಅರವತ್ತೇಳನೆಯ ಅಧ್ಯಾಯವು.

Image result for indian motifs

Comments are closed.