Udyoga Parva: Chapter 162

ಉದ್ಯೋಗ ಪರ್ವ: ರಥಾಥಿರಥಸಂಖ್ಯ ಪರ್ವ

೧೬೨

ಕೌರವ ಸೇನೆಯಲ್ಲಿರುವ ರಥಾತಿರಥರ ವರ್ಣನೆ

ಭೀಷ್ಮನು ದುರ್ಯೋಧನನ ಸೇನಾಪತ್ಯವನ್ನು ಸ್ವೀಕರಿಸಿ ಆಶ್ವಾಸನೆ ನೀಡುವುದು (೧-೧೧). ಶತ್ರುಗಳಲ್ಲಿರುವ ಮತ್ತು ತಮ್ಮಲ್ಲಿರುವ ರಥಾತಿರಥರ ಕುರಿತು ದುರ್ಯೋಧನನು ಭೀಷ್ಮನಲ್ಲಿ ಕೇಳುವುದು (೧೨-೧೬).

05162001 ಧೃತರಾಷ್ಟ್ರ ಉವಾಚ|

05162001a ಪ್ರತಿಜ್ಞಾತೇ ಫಲ್ಗುನೇನ ವಧೇ ಭೀಷ್ಮಸ್ಯ ಸಂಜಯ|

05162001c ಕಿಮಕುರ್ವಂತ ಮೇ ಮಂದಾಃ ಪುತ್ರಾ ದುರ್ಯೋಧನಾದಯಃ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಫಲ್ಗುನನು ಭೀಷ್ಮನ ವಧೆಯ ಪ್ರತಿಜ್ಞೆಯನ್ನು ಮಾಡಲು ನನ್ನ ಪುತ್ರರಾದ ದುರ್ಯೋಧನಾದಿಗಳು ಏನು ಮಾಡಿದರು?

05162002a ಹತಮೇವ ಹಿ ಪಶ್ಯಾಮಿ ಗಾಂಗೇಯಂ ಪಿತರಂ ರಣೇ|

05162002c ವಾಸುದೇವಸಹಾಯೇನ ಪಾರ್ಥೇನ ದೃಢಧನ್ವನಾ||

ವಾಸುದೇವನ ಸಹಾಯದಿಂದ ದೃಢಧನ್ವಿ ಪಾರ್ಥನು ರಣದಲ್ಲಿ ಅಜ್ಜ ಗಾಂಗೇಯನನ್ನು ಕೊಂದಾಯಿತೆಂದೇ ತೋರುತ್ತಿದೆ.

05162003a ಸ ಚಾಪರಿಮಿತಪ್ರಜ್ಞಾಸ್ತಚ್ಚ್ರುತ್ವಾ ಪಾರ್ಥಭಾಷಿತಂ|

05162003c ಕಿಮುಕ್ತವಾನ್ಮಹೇಷ್ವಾಸೋ ಭೀಷ್ಮಃ ಪ್ರಹರತಾಂ ವರಃ||

ಪಾರ್ಥನು ಹೇಳಿದುದನ್ನು ಕೇಳಿ ಆ ಅಮಿತಪ್ರಾಜ್ಞ, ಮಹೇಷ್ವಾಸ, ಪ್ರಹರಿಗಳಲ್ಲಿ ಶ್ರೇಷ್ಠ ಭೀಷ್ಮನು ಏನು ಹೇಳಿದನು?

05162004a ಸೇನಾಪತ್ಯಂ ಚ ಸಂಪ್ರಾಪ್ಯ ಕೌರವಾಣಾಂ ಧುರಂಧರಃ|

05162004c ಕಿಮಚೇಷ್ಟತ ಗಾಂಗೇಯೋ ಮಹಾಬುದ್ಧಿಪರಾಕ್ರಮಃ||

ಕೌರವರ ಸೇನಾಪತ್ಯವನ್ನು ಪಡೆದು ಆ ಧುರಂಧರ, ಮಹಾಬುದ್ಧಿ ಪರಾಕ್ರಮಿ ಗಾಂಗೇಯನು ಏನು ಮಾಡಿದನು?””

05162005 ವೈಶಂಪಾಯನ ಉವಾಚ|

05162005a ತತಸ್ತತ್ಸಂಜಯಸ್ತಸ್ಮೈ ಸರ್ವಮೇವ ನ್ಯವೇದಯತ್|

05162005c ಯಥೋಕ್ತಂ ಕುರುವೃದ್ಧೇನ ಭೀಷ್ಮೇಣಾಮಿತತೇಜಸಾ||

ವೈಶಂಪಾಯನನು ಹೇಳಿದನು: “ಆಗ ಸಂಜಯನು ಅವನಿಗೆ ಕುರುವೃದ್ಧ, ಅಮಿತ ತೇಜಸ್ವಿ ಭೀಷ್ಮನು ಹೇಳಿದುದೆಲ್ಲವನ್ನೂ ನಿವೇದಿಸಿದನು.

05162006 ಸಂಜಯ ಉವಾಚ|

05162006a ಸೇನಾಪತ್ಯಮನುಪ್ರಾಪ್ಯ ಭೀಷ್ಮಃ ಶಾಂತನವೋ ನೃಪ|

05162006c ದುರ್ಯೋಧನಮುವಾಚೇದಂ ವಚನಂ ಹರ್ಷಯನ್ನಿವ||

ಸಂಜಯನು ಹೇಳಿದನು: “ನೃಪ! ಸೇನಾಪತ್ಯವನ್ನು ಪಡೆದು ಶಾಂತನವ ಭೀಷ್ಮನು ಸಂತೋಷದಿಂದ ದುರ್ಯೋಧನನಿಗೆ ಈ ಮಾತುಗಳನ್ನಾಡಿದನು:

05162007a ನಮಸ್ಕೃತ್ವಾ ಕುಮಾರಾಯ ಸೇನಾನ್ಯೇ ಶಕ್ತಿಪಾಣಯೇ|

05162007c ಅಹಂ ಸೇನಾಪತಿಸ್ತೇಽದ್ಯ ಭವಿಷ್ಯಾಮಿ ನ ಸಂಶಯಃ||

“ಸೇನಾನಿ ಶಕ್ತಿಪಾಣಿ ಕುಮಾರನನ್ನು ನಮಸ್ಕರಿಸಿ ನಾನು ಇಂದು ಸೇನಾಪತಿಯಾಗುತ್ತೇನೆನ್ನುವುದರಲ್ಲಿ ಸಂಶಯವಿಲ್ಲ.

05162008a ಸೇನಾಕರ್ಮಣ್ಯಭಿಜ್ಞೋಽಸ್ಮಿ ವ್ಯೂಹೇಷು ವಿವಿಧೇಷು ಚ|

05162008c ಕರ್ಮ ಕಾರಯಿತುಂ ಚೈವ ಭೃತಾನಪ್ಯಭೃತಾಂಸ್ತಥಾ||

ಸೇನಾಕರ್ಮಗಳನ್ನೂ ವಿವಿಧ ವ್ಯೂಹಗಳನ್ನೂ, ಭೃತ್ಯರ ಮತ್ತು ಭೃತ್ಯರಲ್ಲದವರಿಂದ ಮಾಡಿಸಬೇಕಾದ ಕೆಲಸಗಳನ್ನೂ ಕೂಡ ನಾನು ತಿಳಿದುಕೊಂಡಿದ್ದೇನೆ.

05162009a ಯಾತ್ರಾಯಾನೇಷು ಯುದ್ಧೇಷು ಲಬ್ಧಪ್ರಶಮನೇಷು ಚ|

05162009c ಭೃಶಂ ವೇದ ಮಹಾರಾಜ ಯಥಾ ವೇದ ಬೃಹಸ್ಪತಿಃ||

ಮಹಾರಾಜ! ಯಾತ್ರಾಯಾನಗಳಲ್ಲಿ, ಯುದ್ಧಗಳಲ್ಲಿ, ಲಬ್ಧಪ್ರಶಮನಗಳಲ್ಲಿ ಬೃಹಸ್ಪತಿಯು ತಿಳಿದಂತೆ ಚೆನ್ನಾಗಿ ತಿಳಿದುಕೊಂಡಿದ್ದೇನೆ.

05162010a ವ್ಯೂಹಾನಪಿ ಮಹಾರಂಭಾನ್ದೈವಗಾಂಧರ್ವಮಾನುಷಾನ್|

05162010c ತೈರಹಂ ಮೋಹಯಿಷ್ಯಾಮಿ ಪಾಂಡವಾನ್ವ್ಯೇತು ತೇ ಜ್ವರಃ||

ದೇವಗಂಧರ್ವಮಾನುಷರ ಮಹಾರಂಭಗೊಳ್ಳುವ ವ್ಯೂಹಗಳನ್ನೂ ನಾನು ಭೇದಿಸಬಲ್ಲೆ. ಪಾಂಡವರ ಮೇಲಿರುವ ನಿನ್ನ ಉದ್ವೇಗವನ್ನು ನಾನು ಬಿಡಿಸುತ್ತೇನೆ.

05162011a ಸೋಽಹಂ ಯೋತ್ಸ್ಯಾಮಿ ತತ್ತ್ವೇನ ಪಾಲಯಂಸ್ತವ ವಾಹಿನೀಂ|

05162011c ಯಥಾವಚ್ಚಾಸ್ತ್ರತೋ ರಾಜನ್ವ್ಯೇತು ತೇ ಮಾನಸೋ ಜ್ವರಃ||

ಶಾಸ್ತ್ರಗಳಲ್ಲಿ ಹೇಳಿರುವಂತೆ ನಾನು ತತ್ವದಿಂದ ಹೋರಾಡುತ್ತೇನೆ. ನಿನ್ನ ವಾಹಿನಿಯನ್ನು ಪಾಲಿಸುತ್ತೇನೆ. ರಾಜನ್! ನಿನ್ನ ಮನಸ್ಸಿನ ಜ್ವರವನ್ನು ತೆಗೆದು ಹಾಕು.”

05162012 ದುರ್ಯೋಧನ ಉವಾಚ|

05162012a ನ ವಿದ್ಯತೇ ಮೇ ಗಾಂಗೇಯ ಭಯಂ ದೇವಾಸುರೇಷ್ವಪಿ|

05162012c ಸಮಸ್ತೇಷು ಮಹಾಬಾಹೋ ಸತ್ಯಮೇತದ್ಬ್ರವೀಮಿ ತೇ||

ದುರ್ಯೋಧನನು ಹೇಳಿದನು: “ಗಾಂಗೇಯ! ಮಹಾಬಾಹೋ! ನನಗೆ ದೇವಾಸುರರೇ ಇರಲಿ ಸಮಸ್ತರಲ್ಲಿ ಭಯವೆನ್ನುವುದಿಲ್ಲ. ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ.

05162013a ಕಿಂ ಪುನಸ್ತ್ವಯಿ ದುರ್ಧರ್ಷೇ ಸೇನಾಪತ್ಯೇ ವ್ಯವಸ್ಥಿತೇ|

05162013c ದ್ರೋಣೇ ಚ ಪುರುಷವ್ಯಾಘ್ರೇ ಸ್ಥಿತೇ ಯುದ್ಧಾಭಿನಂದಿನಿ||

ದುರ್ಧರ್ಷನಾದ ನೀನು ಸೇನಾಪತ್ಯವನ್ನು ವಹಿಸಿರಲು ಮತ್ತು ಪುರುಷವ್ಯಾಘ್ರ ದ್ರೋಣನು ಇಷ್ಟಪಟ್ಟು ಯುದ್ಧಕ್ಕೆ ನಿಂತಿರಲು ಇನ್ನೇನು?

05162014a ಭವದ್ಭ್ಯಾಂ ಪುರುಷಾಗ್ರ್ಯಾಭ್ಯಾಂ ಸ್ಥಿತಾಭ್ಯಾಂ ವಿಜಯೋ ಮಮ|

05162014c ನ ದುರ್ಲಭಂ ಕುರುಶ್ರೇಷ್ಠ ದೇವರಾಜ್ಯಮಪಿ ಧ್ರುವಂ||

ಕುರುಶ್ರೇಷ್ಠ! ನೀವಿಬ್ಬರೂ ಪುರುಷಾಗ್ರರು ನಿಂತಿರುವಾಗ ನನಗೆ ವಿಜಯವು ದುರ್ಲಭವೇ ಅಲ್ಲ. ದೇವರಾಜ್ಯವೂ ಕೂಡ ನಿಶ್ಚಯಿಸಿದ್ದೇ.

05162015a ರಥಸಂಖ್ಯಾಂ ತು ಕಾರ್ತ್ಸ್ನ್ಯೆನ ಪರೇಷಾಮಾತ್ಮನಸ್ತಥಾ|

05162015c ತಥೈವಾತಿರಥಾನಾಂ ಚ ವೇತ್ತುಮಿಚ್ಚಾಮಿ ಕೌರವ||

ಕೌರವ! ಶತ್ರುಗಳಲ್ಲಿರುವ ಮತ್ತು ನಮ್ಮಲ್ಲಿ ಒಟ್ಟು ಎಷ್ಟು ಮಂದಿ ರಥರು ಮತ್ತು ಅತಿರಥರಿದ್ದಾರೆ ಎನ್ನುವುದನ್ನು ತಿಳಿಯಲು ಬಯಸುತ್ತೇನೆ.

05162016a ಪಿತಾಮಹೋ ಹಿ ಕುಶಲಃ ಪರೇಷಾಮಾತ್ಮನಸ್ತಥಾ|

05162016c ಶ್ರೋತುಮಿಚ್ಚಾಮ್ಯಹಂ ಸರ್ವೈಃ ಸಹೈಭಿರ್ವಸುಧಾಧಿಪೈಃ||

ಏಕೆಂದರ ಪಿತಾಮಹನು ಶತ್ರುಗಳ ಮತ್ತು ನಮ್ಮ ಕುರಿತು ಚೆನ್ನಾಗಿ ತಿಳಿದುಕೊಂಡಿದ್ದಾನೆ. ಈ ಎಲ್ಲ ವಸುಧಾಧಿಪರೊಂದಿಗೆ ಅದನ್ನು ಕೇಳಲು ಬಯಸುತ್ತೇನೆ.”

05162017 ಭೀಷ್ಮ ಉವಾಚ|

05162017a ಗಾಂಧಾರೇ ಶೃಣು ರಾಜೇಂದ್ರ ರಥಸಂಖ್ಯಾಂ ಸ್ವಕೇ ಬಲೇ|

05162017c ಯೇ ರಥಾಃ ಪೃಥಿವೀಪಾಲ ತಥೈವಾತಿರಥಾಶ್ಚ ಯೇ||

ಭೀಷ್ಮನು ಹೇಳಿದನು: “ಗಾಂಧಾರೇ! ರಾಜೇಂದ್ರ! ಪೃಥಿವೀಪಾಲ! ನಿನ್ನ ಬಲದಲ್ಲಿರುವ ರಥರ ಸಂಖ್ಯೆಯನ್ನು, ಯಾರು ರಥರು ಮತ್ತು ಯಾರು ಅತಿರಥರು ಎನ್ನುವುದನ್ನು ಕೇಳು.

05162018a ಬಹೂನೀಹ ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ|

05162018c ರಥಾನಾಂ ತವ ಸೇನಾಯಾಂ ಯಥಾಮುಖ್ಯಂ ತು ಮೇ ಶೃಣು||

ನಿನ್ನ ಸೇನೆಯಲ್ಲಿ ಸಹಸ್ರ, ಹತ್ತುಸಾವಿರ, ಹತ್ತು ಲಕ್ಷಗಟ್ಟಲೆ ರಥರಿದ್ದಾರೆ. ಅವರಲ್ಲಿ ಮುಖ್ಯರಾದವರನ್ನು ಕೇಳು.

05162019a ಭವಾನಗ್ರೇ ರಥೋದಾರಃ ಸಹ ಸರ್ವೈಃ ಸಹೋದರೈಃ|

05162019c ದುಃಶಾಸನಪ್ರಭೃತಿಭಿರ್ಭ್ರಾತೃಭಿಃ ಶತಸಮ್ಮಿತೈಃ||

ನಿನ್ನ ಎಲ್ಲ ಸಹೋದರರೊಂದಿಗೆ ನೀನು ರಥೋದಾರರಲ್ಲಿ ಅಗ್ರನಾಗಿದ್ದೀಯೆ. ದುಃಶಾಸನನೇ ಮೊದಲಾಗಿ ಒಟ್ಟು ನೂರು ಸಹೋದರರು.

05162020a ಸರ್ವೇ ಕೃತಪ್ರಹರಣಾಶ್ಚೇದ್ಯಭೇದ್ಯವಿಶಾರದಾಃ|

05162020c ರಥೋಪಸ್ಥೇ ಗಜಸ್ಕಂಧೇ ಗದಾಯುದ್ಧೇಽಸಿಚರ್ಮಣಿ||

05162021a ಸಮ್ಯಂತಾರಃ ಪ್ರಹರ್ತಾರಃ ಕೃತಾಸ್ತ್ರಾ ಭಾರಸಾಧನಾಃ|

05162021c ಇಷ್ವಸ್ತ್ರೇ ದ್ರೋಣಶಿಷ್ಯಾಶ್ಚ ಕೃಪಸ್ಯ ಚ ಶರದ್ವತಃ||

ಎಲ್ಲರೂ ಪ್ರಹರಣದಲ್ಲಿ ಕುಶಲರು, ಭೇದಿಸುವುದರಲ್ಲಿ ವಿಶಾರದರು. ರಥದಲ್ಲಿ ನಿಂತು, ಆನೆಯ ಮೇಲೆ ನಿಂತು, ಗದಾಯುದ್ಧ ಅಥವಾ ಖಡ್ಗಯುದ್ಧವನ್ನು ಮಾಡಬಲ್ಲರು. ಸಮ್ಯಂತಾರರು, ಪ್ರಹರ್ತಾರರು, ಭಾರಸಾಧನಗಳಲ್ಲಿ ಕೃತಾಸ್ತ್ರರು. ಎಲ್ಲರೂ ಅಸ್ತ್ರಗಳಲ್ಲಿ ದ್ರೋಣನ ಮತ್ತು ಶರದ್ವತ ಕೃಪನ ಶಿಷ್ಯರು.

05162022a ಏತೇ ಹನಿಷ್ಯಂತಿ ರಣೇ ಪಾಂಚಾಲಾನ್ಯುದ್ಧದುರ್ಮದಾನ್|

05162022c ಕೃತಕಿಲ್ಬಿಷಾಃ ಪಾಂಡವೇಯೈರ್ಧಾರ್ತರಾಷ್ಟ್ರಾ ಮನಸ್ವಿನಃ||

ಪಾಂಡವರಿಂದ ತಪ್ಪಿತಸ್ಥರೆಂದು ಮಾಡಲ್ಪಟ್ಟ ಈ ಮನಸ್ವೀ ಧಾರ್ತರಾಷ್ಟ್ರರು ಯುದ್ಧದುರ್ಮದರಾದ ಪಾಂಚಾಲರನ್ನು ರಣದಲ್ಲಿ ಸಂಹರಿಸುತ್ತಾರೆ.

05162023a ತತೋಽಹಂ ಭರತಶ್ರೇಷ್ಠ ಸರ್ವಸೇನಾಪತಿಸ್ತವ|

05162023c ಶತ್ರೂನ್ವಿಧ್ವಂಸಯಿಷ್ಯಾಮಿ ಕದರ್ಥೀಕೃತ್ಯ ಪಾಂಡವಾನ್|

05162023e ನ ತ್ವಾತ್ಮನೋ ಗುಣಾನ್ವಕ್ತುಮರ್ಹಾಮಿ ವಿದಿತೋಽಸ್ಮಿ ತೇ||

ಭರತಶ್ರೇಷ್ಠ! ನಂತರ ನಿನ್ನ ಸೇನಾಪತಿಯಾದ ನಾನಿದ್ದೇನೆ. ನಾನು ಪಾಂಡವರನ್ನು ಪುಡಿಮಾಡಿ ಶತ್ರುಗಳನ್ನು ವಿಧ್ವಂಸ ಮಾಡುತ್ತೇನೆ. ನನ್ನದೇ ಗುಣಗಳನ್ನು ಹೊಗಳಿಕೊಳ್ಳುವುದು ಸರಿಯಲ್ಲ. ನಾನು ನಿನಗೆ ಗೊತ್ತು.

05162024a ಕೃತವರ್ಮಾ ತ್ವತಿರಥೋ ಭೋಜಃ ಪ್ರಹರತಾಂ ವರಃ|

05162024c ಅರ್ಥಸಿದ್ಧಿಂ ತವ ರಣೇ ಕರಿಷ್ಯತಿ ನ ಸಂಶಯಃ||

ಪ್ರಹಾರ ಮಾಡುವವರಲ್ಲಿ ಶ್ರೇಷ್ಠನಾದ ಭೋಜ ಕೃತವರ್ಮನು ಅತಿರಥ. ರಣದಲ್ಲಿ ನಿನ್ನ ಉದ್ದೇಶವನ್ನು ಸಿದ್ಧಿಗೊಳಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

05162025a ಅಸ್ತ್ರವಿದ್ಭಿರನಾಧೃಷ್ಯೋ ದೂರಪಾತೀ ದೃಢಾಯುಧಃ|

05162025c ಹನಿಷ್ಯತಿ ರಿಪೂಂಸ್ತುಭ್ಯಂ ಮಹೇಂದ್ರೋ ದಾನವಾನಿವ||

ಅಸ್ತ್ರವಿದರಿಂದ ಅನಾಧೃಷನಾದ, ಅತಿ ದೂರದವರೆಗೆ ಆಯುಧಗಳನ್ನು ಎಸೆಯಬಲ್ಲ, ದೃಢಾಯುಧನಾದ ಅವನು ಮಹೇಂದ್ರನು ದಾನವರನ್ನು ಹೇಗೋ ಹಾಗೆ ನಿನ್ನ ರಿಪುಗಳನ್ನು ಸಂಹರಿಸುತ್ತಾನೆ.

05162026a ಮದ್ರರಾಜೋ ಮಹೇಷ್ವಾಸಃ ಶಲ್ಯೋ ಮೇಽತಿರಥೋ ಮತಃ|

05162026c ಸ್ಪರ್ಧತೇ ವಾಸುದೇವೇನ ಯೋ ವೈ ನಿತ್ಯಂ ರಣೇ ರಣೇ||

ಮಹೇಷ್ವಾಸ ಮದ್ರರಾಜ ಶಲ್ಯನು ನನ್ನ ಅಭಿಪ್ರಾಯದಲ್ಲಿ ಅತಿರಥ. ಪ್ರತಿಯೊಂದು ರಣದಲ್ಲಿಯೂ ನಿತ್ಯವೂ ವಾಸುದೇವನೊಂದಿಗೆ ಸ್ಪರ್ಧಿಸುತ್ತಾನೆ.

05162027a ಭಾಗಿನೇಯಾನ್ನಿಜಾಂಸ್ತ್ಯಕ್ತ್ವಾ ಶಲ್ಯಸ್ತೇ ರಥಸತ್ತಮಃ|

05162027c ಏಷ ಯೋತ್ಸ್ಯತಿ ಸಂಗ್ರಾಮೇ ಕೃಷ್ಣಂ ಚಕ್ರಗದಾಧರಂ||

05162028a ಸಾಗರೋರ್ಮಿಸಮೈರ್ವೇಗೈಃ ಪ್ಲಾವಯನ್ನಿವ ಶಾತ್ರವಾನ್|

ತಂಗಿಯ ಮಕ್ಕಳನ್ನು ತೊರೆದು ರಥಸತ್ತಮ ಶಲ್ಯನು ನಿನ್ನವನಾಗಿದ್ದಾನೆ. ಇವನು ಸಂಗ್ರಾಮದಲ್ಲಿ ಚಕ್ರ-ಗದಾಧರ ಕೃಷ್ಣನನ್ನು ಎದುರಿಸುತ್ತಾನೆ. ಅವನು ಸಾಗರದ ಅಲೆಗಳಂತೆ ವೇಗವಾಗಿ ಬಾಣಗಳನ್ನು ಪ್ರಯೋಗಿಸಿ ಶತ್ರುಗಳನ್ನು ಹೂಳುತ್ತಾನೆ.

05162028c ಭೂರಿಶ್ರವಾಃ ಕೃತಾಸ್ತ್ರಶ್ಚ ತವ ಚಾಪಿ ಹಿತಃ ಸುಹೃತ್||

05162029a ಸೌಮದತ್ತಿರ್ಮಹೇಷ್ವಾಸೋ ರಥಯೂಥಪಯೂಥಪಃ|

05162029c ಬಲಕ್ಷಯಮಮಿತ್ರಾಣಾಂ ಸುಮಹಾಂತಂ ಕರಿಷ್ಯತಿ||

ಕೃತಾಸ್ತ್ರರಾದ ಭೂರಿಶ್ರವನೂ ನಿನ್ನ ಹಿತದಲ್ಲಿರುವ ಸುಹೃದಯಿಯು. ಮಹೇಷ್ವಾಸ ಸೌಮದತ್ತಿಯು ರಥಯೂಥಪರಲ್ಲಿ ಯೂಥಪನು. ಅಮಿತ್ರರ ಮಹಾ ಬಲಕ್ಷಯವನ್ನು ಮಾಡುತ್ತಾನೆ.

05162030a ಸಿಂಧುರಾಜೋ ಮಹಾರಾಜ ಮತೋ ಮೇ ದ್ವಿಗುಣೋ ರಥಃ|

05162030c ಯೋತ್ಸ್ಯತೇ ಸಮರೇ ರಾಜನ್ವಿಕ್ರಾಂತೋ ರಥಸತ್ತಮಃ||

ಮಹಾರಾಜ! ನನ್ನ ಪ್ರಕಾರ ಸಿಂಧುರಾಜನು ದ್ವಿಗುಣ ರಥ. ರಾಜನ್! ಆ ರಥಸತ್ತಮನು ಸಮರದಲ್ಲಿ ವಿಕ್ರಾಂತನಾಗಿ ಹೋರಾಡುತ್ತಾನೆ.

05162031a ದ್ರೌಪದೀಹರಣೇ ಪೂರ್ವಂ ಪರಿಕ್ಲಿಷ್ಟಃ ಸ ಪಾಂಡವೈಃ|

05162031c ಸಂಸ್ಮರಂಸ್ತಂ ಪರಿಕ್ಲೇಶಂ ಯೋತ್ಸ್ಯತೇ ಪರವೀರಹಾ||

ಹಿಂದೆ ದ್ರೌಪದೀಹರಣದಲ್ಲಿ ಪಾಂಡವರಿಂದ ಕಷ್ಟಕ್ಕೊಳಗಾಗಿದ್ದನು. ಆ ಪರಿಕ್ಲೇಶವನ್ನು ನೆನಪಿಸಿಕೊಂಡು ಆ ಪರವೀರಹನು ಯುದ್ಧ ಮಾಡುತ್ತಾನೆ.

05162032a ಏತೇನ ಹಿ ತದಾ ರಾಜಂಸ್ತಪ ಆಸ್ಥಾಯ ದಾರುಣಂ|

05162032c ಸುದುರ್ಲಭೋ ವರೋ ಲಬ್ಧಃ ಪಾಂಡವಾನ್ಯೋದ್ಧುಮಾಹವೇ||

ರಾಜನ್! ಆಗ ಇವನೇ ದಾರುಣ ತಪಸ್ಸನ್ನು ಆಚರಿಸಿ ಯುದ್ಧದಲ್ಲಿ ಪಾಂಡವರನ್ನು ಎದುರಿಸುವ ದುರ್ಲಭ ವರವನ್ನು ಪಡೆದಿದ್ದಾನೆ.

05162033a ಸ ಏಷ ರಥಶಾರ್ದೂಲಸ್ತದ್ವೈರಂ ಸಂಸ್ಮರನ್ರಣೇ|

05162033c ಯೋತ್ಸ್ಯತೇ ಪಾಂಡವಾಂಸ್ತಾತ ಪ್ರಾಣಾಂಸ್ತ್ಯಕ್ತ್ವಾ ಸುದುಸ್ತ್ಯಜಾನ್||

ಅಯ್ಯಾ! ಈ ರಥಶಾರ್ದೂಲನು ಆ ವೈರವನ್ನು ನೆನಪಿಸಿಕೊಂಡು ತ್ಯಜಿಸಲು ಕಷ್ಟವಾದ ಪ್ರಾಣವನ್ನು ತೊರೆದು ರಣದಲ್ಲಿ ಪಾಂಡವರೊಂದಿಗೆ ಹೋರಾಡುತ್ತಾನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ದ್ವಿಷಷ್ಟ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ನೂರಾಅರವತ್ತೆರಡನೆಯ ಅಧ್ಯಾಯವು.

Image result for flowers against white background"

Comments are closed.