Udyoga Parva: Chapter 160

ಉದ್ಯೋಗ ಪರ್ವ: ಉಲೂಕದೂತಾಗಮನ ಪರ್ವ

೧೬೦

ಉಲೂಕನು ಹಿಂದಿರುಗಿದುದು

ಅರ್ಜುನನು ಉಲೂಕನ ಮೂಲಕ ದುರ್ಯೋಧನನಿಗೆ ಪ್ರತಿಜ್ಞೆಗಳ ರೂಪದಲ್ಲಿ ಸಂದೇಶವನ್ನು ಕಳುಹಿಸಿದುದು (೧-೨೩). ಉಲೂಕನು ಹಿಂದಿರುಗಿ ದುರ್ಯೋಧನನಿಗೆ ಪಾಂಡವರ ಸಂದೇಶವನ್ನು ಹೇಳಿದುದು (೨೪-೨೯).

05160001 ಸಂಜಯ ಉವಾಚ|

05160001a ದುರ್ಯೋಧನಸ್ಯ ತದ್ವಾಕ್ಯಂ ನಿಶಮ್ಯ ಭರತರ್ಷಭಃ|

05160001c ನೇತ್ರಾಭ್ಯಾಮತಿತಾಮ್ರಾಭ್ಯಾಂ ಕೈತವ್ಯಂ ಸಮುದೈಕ್ಷತ||

ಸಂಜಯನು ಹೇಳಿದನು: “ದುರ್ಯೋಧನನ ಆ ವಾಕ್ಯವನ್ನು ಕೇಳಿ ಭರತರ್ಷಭನು ತನ್ನ ಕೆಂಪಾದ ಕಣ್ಣುಗಳಿಂದ ಕೈತವ್ಯನನ್ನು ನೋಡಿದನು.

05160002a ಸ ಕೇಶವಮಭಿಪ್ರೇಕ್ಷ್ಯ ಗುಡಾಕೇಶೋ ಮಹಾಯಶಾಃ|

05160002c ಅಭ್ಯಭಾಷತ ಕೈತವ್ಯಂ ಪ್ರಗೃಹ್ಯ ವಿಪುಲಂ ಭುಜಂ||

ಮಹಾಯಶ ಗುಡಾಕೇಶನು ಕೇಶವನನ್ನು ನೋಡಿ, ತನ್ನ ವಿಪುಲ ಭುಜವನ್ನು ಹಿಡಿದು ಕೈತವ್ಯನಿಗೆ ಹೇಳಿದನು:

05160003a ಸ್ವವೀರ್ಯಂ ಯಃ ಸಮಾಶ್ರಿತ್ಯ ಸಮಾಹ್ವಯತಿ ವೈ ಪರಾನ್|

05160003c ಅಭೀತಃ ಪೂರಯಂ ಶಕ್ತಿಂ ಸ ವೈ ಪುರುಷ ಉಚ್ಯತೇ||

“ತನ್ನದೇ ವೀರ್ಯವನ್ನು ಸಮಾಶ್ರಯಿಸಿ ಶತ್ರುಗಳನ್ನು ಆಹ್ವಾನಿಸುವವನನ್ನು ಮತ್ತು ಭೀತನಾಗದೇ ತನ್ನ ಶಕ್ತಿಯನ್ನು ಸಂಪೂರ್ಣಗೊಳಿಸುವವನನ್ನೇ ಪುರುಷನೆಂದು ಹೇಳುತ್ತಾರೆ.

05160004a ಪರವೀರ್ಯಂ ಸಮಾಶ್ರಿತ್ಯ ಯಃ ಸಮಾಹ್ವಯತೇ ಪರಾನ್|

05160004c ಕ್ಷತ್ರಬಂಧುರಶಕ್ತತ್ವಾಲ್ಲೋಕೇ ಸ ಪುರುಷಾಧಮಃ||

ಇತರರ ವೀರ್ಯವನ್ನು ಸಮಾಶ್ರಯಿಸಿ ಶತ್ರುಗಳನ್ನು ಆಹ್ವಾನಿಸುವ, ಕ್ಷತ್ರಬಂಧುಗಳಿಗಿಂತ ಅಶಕ್ತನಾದವನೇ ಲೋಕದಲ್ಲಿ ಪುರುಷಾಧಮ.

05160005a ಸ ತ್ವಂ ಪರೇಷಾಂ ವೀರ್ಯೇಣ ಮನ್ಯಸೇ ವೀರ್ಯಮಾತ್ಮನಃ|

05160005c ಸ್ವಯಂ ಕಾಪುರುಷೋ ಮೂಢಃ ಪರಾಂಶ್ಚ ಕ್ಷೇಪ್ತುಮಿಚ್ಚಸಿ||

ಇತರರ ವೀರ್ಯದ ಆಧಾರದ ಮೇಲೆ ನೀನು ಸ್ವತಃ ವೀರನೆಂದು ತಿಳಿದುಕೊಂಡಿದ್ದೀಯೆ. ಸ್ವಯಂ ಕಾಪುರುಷನಾದ ಮೂಢನು ಪರರನ್ನು ಗೆಲ್ಲಲು ಬಯಸುತ್ತಾನೆ!

05160006a ಯಸ್ತ್ವಂ ವೃದ್ಧಂ ಸರ್ವರಾಜ್ಞಾಂ ಹಿತಬುದ್ಧಿಂ ಜಿತೇಂದ್ರಿಯಂ|

05160006c ಮರಣಾಯ ಮಹಾಬುದ್ಧಿಂ ದೀಕ್ಷಯಿತ್ವಾ ವಿಕತ್ಥಸೇ||

ನೀನು ಎಲ್ಲ ರಾಜರಲ್ಲಿ ವೃದ್ಧನಾದ, ಹಿತಬುದ್ಧಿ, ಜಿತೇಂದ್ರಿಯ, ಮಹಾಬುದ್ಧಿಯನ್ನು ಮರಣಕ್ಕೆ ದೀಕ್ಷೆಕೊಟ್ಟು ಜಂಬ ಕೊಚ್ಚಿಕೊಳ್ಳುತ್ತಿದ್ದೀಯೆ!

05160007a ಭಾವಸ್ತೇ ವಿದಿತೋಽಸ್ಮಾಭಿರ್ದುರ್ಬುದ್ಧೇ ಕುಲಪಾಂಸನ|

05160007c ನ ಹನಿಷ್ಯಂತಿ ಗಂಗೇಯಂ ಪಾಂಡವಾ ಘೃಣಯೇತಿ ಚ||

ದುರ್ಬುದ್ಧೇ! ಕುಲಪಾಂಸನ! ನಿನ್ನ ಭಾವವು ನಮಗೆ ತಿಳಿದಿದೆ! ನಿನಗನಿಸುತ್ತದೆ ಪಾಂಡವರು ಗಾಂಗೇಯನನ್ನು ಸಂಹರಿಸಲು ಹಿಂಜರಿಯುತ್ತಾರೆಂದು.

05160008a ಯಸ್ಯ ವೀರ್ಯಂ ಸಮಾಶ್ರಿತ್ಯ ಧಾರ್ತರಾಷ್ಟ್ರ ವಿಕತ್ಥಸೇ|

05160008c ಹಂತಾಸ್ಮಿ ಪ್ರಥಮಂ ಭೀಷ್ಮಂ ಮಿಷತಾಂ ಸರ್ವಧನ್ವಿನಾಂ||

ಆದರೆ ಧಾರ್ತರಾಷ್ಟ್ರ! ಯಾರ ವೀರ್ಯವನ್ನು ಸಮಾಶ್ರಯಿಸಿ ಕೊಚ್ಚಿಕೊಳ್ಳುತ್ತಿದ್ದೀಯೋ ಆ ಭೀಷ್ಮನನ್ನೇ ಮೊದಲು ಎಲ್ಲ ಧನ್ವಿಗಳೂ ಕಣ್ಣುಮುಚ್ಚಿ ತೆರೆಯುವುದರೊಳಗೆ ಕೊಲ್ಲುತ್ತೇನೆ.

05160009a ಕೈತವ್ಯ ಗತ್ವಾ ಭರತಾನ್ಸಮೇತ್ಯ

         ಸುಯೋಧನಂ ಧಾರ್ತರಾಷ್ಟ್ರಂ ಬ್ರವೀಹಿ|

05160009c ತಥೇತ್ಯಾಹ ಅರ್ಜುನಃ ಸವ್ಯಸಾಚೀ

         ನಿಶಾವ್ಯಪಾಯೇ ಭವಿತಾ ವಿಮರ್ದಃ||

ಕೈತವ್ಯ! ಭರತರಲ್ಲಿಗೆ ಹೋಗಿ ಧಾರ್ತರಾಷ್ಟ್ರ ಸುಯೋಧನನಿಗೆ ಹೇಳು! ಸವ್ಯಸಾಚೀ ಅರ್ಜುನನು ಹೇಳಿದ - ರಾತ್ರಿ ಕಳೆಯಲು ವಿಧ್ವಂಸವು ನಡೆಯಲಿದೆ!

05160010a ಯದ್ವೋಽಬ್ರವೀದ್ವಾಕ್ಯಮದೀನಸತ್ತ್ವೋ

         ಮಧ್ಯೇ ಕುರೂಣಾಂ ಹರ್ಷಯನ್ಸತ್ಯಸಂಧಃ|

05160010c ಅಹಂ ಹಂತಾ ಪಾಂಡವಾನಾಮನೀಕಂ

         ಶಾಲ್ವೇಯಕಾಂಶ್ಚೇತಿ ಮಮೈಷ ಭಾರಃ||

ಅದೀನಸತ್ವನಾಗಿ ಅವನು ಸಂತೋಷದಿಂದ ಸತ್ಯಸಂಧನಾಗಿ ಕುರುಗಳ ಮಧ್ಯದಲ್ಲಿ ನಾನು ಪಾಂಡವರ ಮತ್ತು ಶಾಲ್ವೇಯರ ಸೇನೆಯನ್ನು ಸಂಹರಿಸುತ್ತೇನೆಂದು ಹೇಳಿದೆಯಲ್ಲ, ಅದರ ಭಾರವು ನನ್ನ ಮೇಲಿದೆ.

05160011a ಹನ್ಯಾಮಹಂ ದ್ರೋಣಮೃತೇ ಹಿ ಲೋಕಂ

         ನ ತೇ ಭಯಂ ವಿದ್ಯತೇ ಪಾಂಡವೇಭ್ಯಃ|

05160011c ತತೋ ಹಿ ತೇ ಲಬ್ಧತಮಂ ಚ ರಾಜ್ಯಂ

         ಕ್ಷಯಂ ಗತಾಃ ಪಾಂಡವಾಶ್ಚೇತಿ ಭಾವಃ||

ದ್ರೋಣನನ್ನು ಬಿಟ್ಟು ಲೋಕವನ್ನೇ ಸಂಹರಿಸುತ್ತೇನೆ. ಪಾಂಡವರಿಗೆ ಭಯವೆನ್ನುವುದೇ ತಿಳಿದಿಲ್ಲ. ನಿನಗೆ ರಾಜ್ಯವು ದೊರೆತಂತೆಯೇ! ಏಕೆಂದರೆ ನೀನು ಪಾಂಡವರು ನಾಶವಾಗಿಬಿಟ್ಟಿದ್ದಾರೆ ಎಂದು ತಿಳಿದುಕೊಂಡಿದ್ದೀಯೆ.

05160012a ಸ ದರ್ಪಪೂರ್ಣೋ ನ ಸಮೀಕ್ಷಸೇ ತ್ವಂ

         ಅನರ್ಥಮಾತ್ಮನ್ಯಪಿ ವರ್ತಮಾನಂ|

05160012c ತಸ್ಮಾದಹಂ ತೇ ಪ್ರಥಮಂ ಸಮೂಹೇ

         ಹಂತಾ ಸಮಕ್ಷಂ ಕುರುವೃದ್ಧಮೇವ||

ದರ್ಪದಿಂದ ತುಂಬಿಹೋಗಿರುವ ನೀನು ನಿನ್ನಲ್ಲಿಯೇ ನಡೆಯುತ್ತಿರುವ ಅನರ್ಥವನ್ನು ಕಾಣುತ್ತಿಲ್ಲ. ಆದುದರಿಂದ ನಿಮ್ಮೆಲ್ಲರ ಸಮಕ್ಷಮದಲ್ಲಿ ಮೊದಲು ಕುರುವೃದ್ಧನನ್ನೇ ಕೊಲ್ಲುತ್ತೇನೆ.

05160013a ಸೂರ್ಯೋದಯೇ ಯುಕ್ತಸೇನಃ ಪ್ರತೀಕ್ಷ್ಯ

         ಧ್ವಜೀ ರಥೀ ರಕ್ಷ ಚ ಸತ್ಯಸಂಧಂ|

05160013c ಅಹಂ ಹಿ ವಃ ಪಶ್ಯತಾಂ ದ್ವೀಪಮೇನಂ

         ರಥಾದ್ಭೀಷ್ಮಂ ಪಾತಯಿತಾಸ್ಮಿ ಬಾಣೈಃ||

ಸೂರ್ಯೋದಯದಲ್ಲಿ ಸೇನೆಯೊಂದಿಗೆ, ಧ್ವಜ, ರಥಗಳಿಂದ ಸತ್ಯಸಂಧನನ್ನು ರಕ್ಷಿಸು. ನಿನಗೆ ದ್ವೀಪದಂತಿರುವ ಭೀಷ್ಮನನ್ನು ರಥದಿಂದ ನಾನೇ ಬೀಳಿಸಿ ತೋರಿಸುತ್ತೇನೆ.

05160014a ಶ್ವೋಭೂತೇ ಕತ್ಥನಾವಾಕ್ಯಂ ವಿಜ್ಞಾಸ್ಯತಿ ಸುಯೋಧನಃ|

05160014c ಅರ್ದಿತಂ ಶರಜಾಲೇನ ಮಯಾ ದೃಷ್ಟ್ವಾ ಪಿತಾಮಹಂ||

ನಾಳೆ ನನ್ನ ಶರಜಾಲದಿಂದ ಪಿತಾಮಹನು ಗಾಯಗೊಂಡಿದುದನ್ನು ನೋಡಿದಾಗ ಸುಯೋಧನನು ಜಂಬಕೊಚ್ಚಿಕೊಳ್ಳುವುದು ಏನೆನ್ನುವುದನ್ನು ತಿಳಿಯುತ್ತಾನೆ.

05160015a ಯದುಕ್ತಶ್ಚ ಸಭಾಮಧ್ಯೇ ಪುರುಷೋ ಹ್ರಸ್ವದರ್ಶನಃ|

05160015c ಕ್ರುದ್ಧೇನ ಭೀಮಸೇನೇನ ಭ್ರಾತಾ ದುಃಶಾಸನಸ್ತವ||

05160016a ಅಧರ್ಮಜ್ಞೋ ನಿತ್ಯವೈರೀ ಪಾಪಬುದ್ಧಿರ್ನೃಶಂಸಕೃತ್|

05160016c ಸತ್ಯಾಂ ಪ್ರತಿಜ್ಞಾಂ ನಚಿರಾದ್ರಕ್ಷ್ಯಸೇ ತಾಂ ಸುಯೋಧನ||

ಸುಯೋಧನ! ಕ್ರುದ್ಧನಾದ ಭೀಮಸೇನನು ನಿನ್ನ ಭ್ರಾತಾ ಆ ದೀರ್ಘದರ್ಶಿಯಲ್ಲದ, ಅಧರ್ಮಜ್ಞ, ನಿತ್ಯವೈರೀ, ಪಾಪಬುದ್ಧಿ, ಕ್ರೂರಕರ್ಮಿ, ದುಃಶಾಸನನಿಗೆ ಸಭಾಮಧ್ಯೆ ಹೇಳಿದ ಪ್ರತಿಜ್ಞೆಯನ್ನು ಸತ್ಯಗೊಳಿಸುವುದನ್ನು ಬೇಗನೇ ನೀನು ನೋಡುತ್ತೀಯೆ.

05160017a ಅಭಿಮಾನಸ್ಯ ದರ್ಪಸ್ಯ ಕ್ರೋಧಪಾರುಷ್ಯಯೋಸ್ತಥಾ|

05160017c ನೈಷ್ಠುರ್ಯಸ್ಯಾವಲೇಪಸ್ಯ ಆತ್ಮಸಂಭಾವನಸ್ಯ ಚ||

05160018a ನೃಶಂಸತಾಯಾಸ್ತೈಕ್ಷ್ಣ್ಯಸ್ಯ ಧರ್ಮವಿದ್ವೇಷಣಸ್ಯ ಚ|

05160018c ಅಧರ್ಮಸ್ಯಾತಿವಾದಸ್ಯ ವೃದ್ಧಾತಿಕ್ರಮಣಸ್ಯ ಚ||

05160019a ದರ್ಶನಸ್ಯ ಚ ವಕ್ರಸ್ಯ ಕೃತ್ಸ್ನಸ್ಯಾಪನಯಸ್ಯ ಚ|

05160019c ದ್ರಕ್ಷ್ಯಸಿ ತ್ವಂ ಫಲಂ ತೀವ್ರಮಚಿರೇಣ ಸುಯೋಧನ||

ಸುಯೋಧನ! ನಿನ್ನ ಅಭಿಮಾನದ, ದರ್ಪದ, ಕ್ರೋಧದ, ಪೌರುಷದ, ನಿಷ್ಠೂರದ, ಅವಲೇಪನದ, ಆತ್ಮ ಸಂಭಾವನೆಯ, ಕ್ರೂರತೆಯ, ಅಸ್ನೇಹಭಾವದ, ಧರ್ವವಿದ್ವೇಷಣೆಯ, ಅಧರ್ಮದ, ಅತಿವಾದದ, ವೃದ್ಧರನ್ನು ಅತಿಕ್ರಮಿಸಿದುದರ, ವಕ್ರದೃಷ್ಟಿಯ, ಮತ್ತು ಎಲ್ಲ ಅಪನಯಗಳ ತೀವ್ರ ಫಲವನ್ನು ಬೇಗನೇ ಪಡೆಯುತ್ತೀಯೆ.

05160020a ವಾಸುದೇವದ್ವಿತೀಯೇ ಹಿ ಮಯಿ ಕ್ರುದ್ಧೇ ನರಾಧಿಪ|

05160020c ಆಶಾ ತೇ ಜೀವಿತೇ ಮೂಢ ರಾಜ್ಯೇ ವಾ ಕೇನ ಹೇತುನಾ||

ಏಕೆಂದರೆ ನರಾಧಿಪ! ವಾಸುದೇವನ ಸಹಾಯವಿರುವ, ಕ್ರುದ್ಧನಾದ ನನ್ನಿಂದ ಜೀವದ ಅಥವ ರಾಜ್ಯದ ಆಸೆಯನ್ನು ಯಾವ ಕಾರಣದಿಂದ ಇಟ್ಟುಕೊಂಡಿದ್ದೀಯೆ?

05160021a ಶಾಂತೇ ಭೀಷ್ಮೇ ತಥಾ ದ್ರೋಣೇ ಸೂತಪುತ್ರೇ ಚ ಪಾತಿತೇ|

05160021c ನಿರಾಶೋ ಜೀವಿತೇ ರಾಜ್ಯೇ ಪುತ್ರೇಷು ಚ ಭವಿಷ್ಯಸಿ||

ಭೀಷ್ಮ-ದ್ರೋಣರನ್ನು ಶಾಂತಗೊಳಿಸಿದಾಗ, ಸೂತಪುತ್ರನನ್ನು ಕೆಳಗುರುಳಿಸಿದಾಗ ನೀನು ಜೀವನದಲ್ಲಿ, ರಾಜ್ಯದಲ್ಲಿ ಮತ್ತು ಪುತ್ರರಲ್ಲಿ ನಿರಾಶನಾಗುತ್ತೀಯೆ.

05160022a ಭ್ರಾತೄಣಾಂ ನಿಧನಂ ದೃಷ್ಟ್ವಾ ಪುತ್ರಾಣಾಂ ಚ ಸುಯೋಧನ|

05160022c ಭೀಮಸೇನೇನ ನಿಹತೋ ದುಷ್ಕೃತಾನಿ ಸ್ಮರಿಷ್ಯಸಿ||

ಸುಯೋಧನ! ಭೀಮಸೇನನಿಂದ ಹತರಾಗಿ ನಿಧನರಾದ ನಿನ್ನ ಸಹೋದರರನ್ನು ಮತ್ತು ಪುತ್ರರನ್ನು ನೋಡಿ ನೀನು ದುಷ್ಕೃತಗಳನ್ನು ನೆನಪಿಸಿಕೊಳ್ಳುತ್ತೀಯೆ.

05160023a ನ ದ್ವಿತೀಯಾಂ ಪ್ರತಿಜ್ಞಾಂ ಹಿ ಪ್ರತಿಜ್ಞಾಸ್ಯತಿ ಕೇಶವಃ|

05160023c ಸತ್ಯಂ ಬ್ರವೀಮ್ಯಹಂ ಹ್ಯೇತತ್ಸರ್ವಂ ಸತ್ಯಂ ಭವಿಷ್ಯತಿ||

ಕೇಶವನು ಎರಡು ಬಾರಿ ಪ್ರತಿಜ್ಞೆಗಳನ್ನು ಮಾಡುವುದಿಲ್ಲ. ನಾನು ಸತ್ಯವನ್ನು ಹೇಳುತ್ತಿದ್ದೇನೆ. ಪ್ರತಿಜ್ಞೆಯೆಲ್ಲವೂ ಸತ್ಯವಾಗುತ್ತವೆ.”

05160024a ಇತ್ಯುಕ್ತಃ ಕೈತವೋ ರಾಜಂಸ್ತದ್ವಾಕ್ಯಮುಪಧಾರ್ಯ ಚ|

05160024c ಅನುಜ್ಞಾತೋ ನಿವವೃತೇ ಪುನರೇವ ಯಥಾಗತಂ||

ರಾಜನ್! ಈ ರೀತಿ ಹೇಳಲ್ಪಟ್ಟ ಕೈತವನು ಆ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು ಅನುಜ್ಞೆಯನ್ನು ಪಡೆದು ಬಂದಹಾಗೆಯೇ ಪುನಃ ಹಿಂದಿರುಗಿದನು.

05160025a ಉಪಾವೃತ್ಯ ತು ಪಾಂಡುಭ್ಯಃ ಕೈತವ್ಯೋ ಧೃತರಾಷ್ಟ್ರಜಂ|

05160025c ಗತ್ವಾ ಯಥೋಕ್ತಂ ತತ್ಸರ್ವಮುವಾಚ ಕುರುಸಂಸದಿ||

ಪಾಂಡವರಿಂದ ಹಿಂದಿರುಗಿ ಕೈತವ್ಯನು ಕುರುಸಂಸದಿಗೆ ಹೋಗಿ ಹೇಳಿದುದೆಲ್ಲವನ್ನೂ ಧೃತರಾಷ್ಟ್ರಜನಿಗೆ ಹೇಳಿದನು.

05160026a ಕೇಶವಾರ್ಜುನಯೋರ್ವಾಕ್ಯಂ ನಿಶಮ್ಯ ಭರತರ್ಷಭಃ|

05160026c ದುಃಶಾಸನಂ ಚ ಕರ್ಣಂ ಚ ಶಕುನಿಂ ಚಾಭ್ಯಭಾಷತ||

ಕೇಶವಾರ್ಜುನರ ವಾಕ್ಯವನ್ನು ಕೇಳಿ ಭರತರ್ಷಭನು ದುಃಶಾಸನ, ಕರ್ಣ ಮತ್ತು ಶಕುನಿಯರೊಂದಿಗೆ ಮಾತನಾಡಿದನು.

05160027a ಆಜ್ಞಾಪಯತ ರಾಜ್ಞಾಶ್ಚ ಬಲಂ ಮಿತ್ರಬಲಂ ತಥಾ|

05160027c ಯಥಾ ಪ್ರಾಗುದಯಾತ್ಸರ್ವಾ ಯುಕ್ತಾ ತಿಷ್ಠತ್ಯನೀಕಿನೀ||

ರಾಜನ ಸೇನೆ ಮತ್ತು ಮಿತ್ರಸೇನೆಗಳು ಬೆಳಗಾಗುವುದರೊಳಗೆ ಸಿದ್ಧರಾಗಿ ನಿಲ್ಲಬೇಕೆಂದು ಆಜ್ಞಾಪಿಸಿದನು.

05160028a ತತಃ ಕರ್ಣಸಮಾದಿಷ್ಟಾ ದೂತಾಃ ಪ್ರತ್ವರಿತಾ ರಥೈಃ|

05160028c ಉಷ್ಟ್ರವಾಮೀಭಿರಪ್ಯನ್ಯೇ ಸದಶ್ವೈಶ್ಚ ಮಹಾಜವೈಃ||

05160029a ತೂರ್ಣಂ ಪರಿಯಯುಃ ಸೇನಾಂ ಕೃತ್ಸ್ನಾಂ ಕರ್ಣಸ್ಯ ಶಾಸನಾತ್|

05160029c ಆಜ್ಞಾಪಯಂತೋ ರಾಜ್ಞಾಸ್ತಾನ್ಯೋಗಃ ಪ್ರಾಗುದಯಾದಿತಿ||

ಆಗ ಕರ್ಣನ ಆಜ್ಞೆಯಂತೆ ದೂತರು ರಥದಲ್ಲಿ, ಒಂಟೆಗಳ ಮೇಲೆ, ಮತ್ತು ಮಹಾವೇಗದ ಕುದುರೆಗಳ ಮೇಲೆ ಕುಳಿತು ಬೇಗನೆ ಸಂಪೂರ್ಣ ಸೇನೆಯನ್ನು ಸುತ್ತುವರೆದು ರಾಜರಿಗೆ “ಬೆಳಗಾಗುವುದರೊಳಗೆ ಸೇನೆಗಳನ್ನು ಕೂಡಿಸಿ!” ಎಂದು ಕರ್ಣನ ಆಜ್ಞೆಗಳನ್ನಿತ್ತರು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉಲೂಕದೂತಾಗಮನ ಪರ್ವಣಿ ಉಲೂಕಾಪಯಾನೇ ಷಷ್ಟ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉಲೂಕದೂತಾಗಮನ ಪರ್ವದಲ್ಲಿ ಉಲೂಕಾಪಯಾನದಲ್ಲಿ ನೂರಾಅರವತ್ತನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉಲೂಕದೂತಾಗಮನ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉಲೂಕದೂತಾಗಮನ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೪/೧೮, ಉಪಪರ್ವಗಳು-೫೮/೧೦೦, ಅಧ್ಯಾಯಗಳು-೮೨೩/೧೯೯೫, ಶ್ಲೋಕಗಳು-೨೬೭೮೮/೭೩೭೮೪

Image result for flowers against white background"

Comments are closed.