Udyoga Parva: Chapter 14

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

೧೪

ಉಪಶ್ರುತಿಯ ಸಹಾಯದಿಂದ ಶಚಿಯು ಸರೋವರವೊಂದರ ಪದ್ಮದ ನಾಲದ ತಂತುವಿನಲ್ಲಿ ಸೂಕ್ಷ್ಮನಾಗಿ ಅಡಗಿಕೊಂಡಿದ್ದ ಇಂದ್ರನನ್ನು ನೋಡಿ ಸ್ತುತಿಸಿದುದು (೧-೧೧). ನಹುಷನನ್ನು ಗೆಲ್ಲಲು ಇಂದ್ರನನ್ನು ಪ್ರಚೋದಿಸಿದುದು (೧೨-೧೫).

05014001 ಶಲ್ಯ ಉವಾಚ|

05014001a ಅಥೈನಾಂ ರುಪಿಣೀಂ ಸಾಧ್ವೀಮುಪಾತಿಷ್ಠದುಪಶ್ರುತಿಃ|

05014001c ತಾಂ ವಯೋರೂಪಸಂಪನ್ನಾಂ ದೃಷ್ಟ್ವಾ ದೇವೀಮುಪಸ್ಥಿತಾಂ||

05014002a ಇಂದ್ರಾಣೀ ಸಂಪ್ರಹೃಷ್ಟಾ ಸಾ ಸಂಪೂಜ್ಯೈನಾಮಪೃಚ್ಚತ|

05014002c ಇಚ್ಚಾಮಿ ತ್ವಾಮಹಂ ಜ್ಞಾತುಂ ಕಾ ತ್ವಂ ಬ್ರೂಹಿ ವರಾನನೇ||

ಶಲ್ಯನು ಹೇಳಿದನು: “ಆಗ ದೇವೀ ಉಪಶ್ರುತಿಯು ಸಾಧ್ವೀ ರೂಪಿಣಿ ವಯೋರೂಪಸಂಪನ್ನೆಯನ್ನು ನೋಡಿ ಅವಳ ಉಪಸ್ಥಿತಿಯಲ್ಲಿ ಬಂದಳು. ಸಂತೋಷಗೊಂಡ ಇಂದ್ರಾಣಿಯು ಅವಳನ್ನು ಪೂಜಿಸಿ ಹೇಳಿದಳು: “ವರಾನನೇ! ನೀನು ಯಾರೆಂದು ತಿಳಿಯಲು ಇಚ್ಛಿಸುತ್ತೇನೆ. ಹೇಳು.”

05014003 ಉಪಶ್ರುತಿರುವಾಚ|

05014003a ಉಪಶ್ರುತಿರಹಂ ದೇವಿ ತವಾಂತಿಕಮುಪಾಗತಾ|

05014003c ದರ್ಶನಂ ಚೈವ ಸಂಪ್ರಾಪ್ತಾ ತವ ಸತ್ಯೇನ ತೋಷಿತಾ||

ಉಪಶ್ರುತಿಯು ಹೇಳಿದಳು: “ದೇವಿ! ನಿನ್ನ ಬಳಿ ಬಂದಿರುವ ನಾನು ಉಪಶ್ರುತಿ. ಸತ್ಯನಿರತಳಾದ ನಿನಗೆ ದರ್ಶನವನ್ನಿತ್ತಿದ್ದೇನೆ.

05014004a ಪತಿವ್ರತಾಸಿ ಯುಕ್ತಾ ಚ ಯಮೇನ ನಿಯಮೇನ ಚ|

05014004c ದರ್ಶಯಿಷ್ಯಾಮಿ ತೇ ಶಕ್ರಂ ದೇವಂ ವೃತ್ರನಿಷೂದನಂ|

05014004e ಕ್ಷಿಪ್ರಮನ್ವೇಹಿ ಭದ್ರಂ ತೇ ದ್ರಕ್ಷ್ಯಸೇ ಸುರಸತ್ತಮಂ||

ಯಮ-ನಿಯಮಗಳಿಂದ ಯುಕ್ತಳಾಗಿ ಪತಿವ್ರತೆಯಾಗಿದ್ದೀಯೆ. ನಿನಗೆ ವೃತ್ರನಿಷೂದನ ದೇವ ಶಕ್ರನನ್ನು ತೋರಿಸುತ್ತೇನೆ. ನಿನಗೆ ಮಂಗಳವಾಗಲಿ! ಬೇಗನೆ ನನ್ನನ್ನು ಹಿಂಬಾಲಿಸಿ ಬಾ. ಸುರಸತ್ತಮನನ್ನು ನೋಡುವಿಯಂತೆ.””

05014005 ಶಲ್ಯ ಉವಾಚ|

05014005a ತತಸ್ತಾಂ ಪ್ರಸ್ಥಿತಾಂ ದೇವೀಮಿಂದ್ರಾಣೀ ಸಾ ಸಮನ್ವಗಾತ್|

05014005c ದೇವಾರಣ್ಯಾನ್ಯತಿಕ್ರಮ್ಯ ಪರ್ವತಾಂಶ್ಚ ಬಹೂಂಸ್ತತಃ|

05014005e ಹಿಮವಂತಮತಿಕ್ರಮ್ಯ ಉತ್ತರಂ ಪಾರ್ಶ್ವಮಾಗಮತ್||

ಶಲ್ಯನು ಹೇಳಿದನು: “ಆಗ ಅವಳು ಹೊರಡಲು, ದೇವೀ ಇಂದ್ರಾಣಿಯು ಅವಳನ್ನು ಅನುಸರಿಸಿದಳು. ಅವಳು ದೇವಾರಣ್ಯವನ್ನೂ ಬಹಳಷ್ಟು ಪರ್ವತಗಳನ್ನೂ ದಾಟಿ ಹಿಮವಂತವನ್ನು ಅತಿಕ್ರಮಿಸಿ ಉತ್ತರದ ಕಡೆ ಬಂದಳು.

05014006a ಸಮುದ್ರಂ ಚ ಸಮಾಸಾದ್ಯ ಬಹುಯೋಜನವಿಸ್ತೃತಂ|

05014006c ಆಸಸಾದ ಮಹಾದ್ವೀಪಂ ನಾನಾದ್ರುಮಲತಾವೃತಂ||

ಸಮುದ್ರವನ್ನೂ ತಲುಪಿ ಅಲ್ಲಿ ಬಹುಯೋಜನ ವಿಸ್ತಾರವಾದ ನಾನಾ ದ್ರುಮಲತೆಗಳಿಂದ ತುಂಬಿದ್ದ ಮಹಾದ್ವೀಪವನ್ನು ತಲುಪಿದರು.

05014007a ತತ್ರಾಪಶ್ಯತ್ಸರೋ ದಿವ್ಯಂ ನಾನಾಶಕುನಿಭಿರ್ವೃತಂ|

05014007c ಶತಯೋಜನವಿಸ್ತೀರ್ಣಂ ತಾವದೇವಾಯತಂ ಶುಭಂ||

ಅಲ್ಲಿ ನಾನಾ ಪಕ್ಷಿಗಳಿಂದ ತುಂಬಿದ್ದ ಶತಯೋಜನ ವಿಸ್ತೀರ್ಣದ ಅಷ್ಟೇ ಅಗಲವಾಗಿದ್ದ ದಿವ್ಯ ಶುಭ ಸರೋವರವನ್ನು ಕಂಡರು.

05014008a ತತ್ರ ದಿವ್ಯಾನಿ ಪದ್ಮಾನಿ ಪಂಚವರ್ಣಾನಿ ಭಾರತ|

05014008c ಷಟ್ಪದೈರುಪಗೀತಾನಿ ಪ್ರಫುಲ್ಲಾನಿ ಸಹಸ್ರಶಃ||

ಭಾರತ! ಅಲ್ಲಿ ಐದು ಬಣ್ಣಗಳ, ಅರಳಿದ, ಸಾವಿರಾರು ದಿವ್ಯ ಪದ್ಮಗಳು, ದುಂಬಿಗಳ ಗೀತೆಗಳೊಂದಿಗೆ ಇದ್ದವು.

05014009a ಪದ್ಮಸ್ಯ ಭಿತ್ತ್ವಾ ನಾಲಂ ಚ ವಿವೇಶ ಸಹಿತಾ ತಯಾ|

05014009c ಬಿಸತಂತುಪ್ರವಿಷ್ಟಂ ಚ ತತ್ರಾಪಶ್ಯಚ್ಚತಕ್ರತುಂ||

ಪದ್ಮದ ನಾಲವನ್ನು ಸೀಳಿ ಅವಳೊಂದಿಗೆ ಪ್ರವೇಶಿಸಿದಳು ಮತ್ತು ಅಲ್ಲಿ ತಂತುವಿನಲ್ಲಿ ಅಡಗಿದ್ದ ಶತಕ್ರತುವನ್ನು ನೋಡಿದಳು.

05014010a ತಂ ದೃಷ್ಟ್ವಾ ಚ ಸುಸೂಕ್ಷ್ಮೇಣ ರೂಪೇಣಾವಸ್ಥಿತಂ ಪ್ರಭುಂ|

05014010c ಸೂಕ್ಷ್ಮರೂಪಧರಾ ದೇವೀ ಬಭೂವೋಪಶ್ರುತಿಶ್ಚ ಸಾ||

ಅತಿ ಸೂಕ್ಷ್ಮ ರೂಪಾವಸ್ಥೆಯಲ್ಲಿದ್ದ ಪ್ರಭುವನ್ನು ನೋಡಿ ದೇವಿ ಮತ್ತು ಉಪಶ್ರುತಿಯರು ಸೂಕ್ಷ್ಮರೂಪಗಳನ್ನು ಧರಿಸಿದರು.

05014011a ಇಂದ್ರಂ ತುಷ್ಟಾವ ಚೇಂದ್ರಾಣೀ ವಿಶ್ರುತೈಃ ಪೂರ್ವಕರ್ಮಭಿಃ|

05014011c ಸ್ತೂಯಮಾನಸ್ತತೋ ದೇವಃ ಶಚೀಮಾಹ ಪುರಂದರಃ||

ಆಗ ಇಂದ್ರಾಣಿಯು ಅವನ ವಿಶೃತ ಪೂರ್ವಕರ್ಮಗಳಿಂದ ಅವನನ್ನು ಸ್ತುತಿಸಿದಳು. ಈ ರೀತಿ ಸ್ತುತಿಸಲ್ಪಡಲು ದೇವ ಪುರಂದರನು ಶಚಿಗೆ ಹೇಳಿದನು.

05014012a ಕಿಮರ್ಥಮಸಿ ಸಂಪ್ರಾಪ್ತಾ ವಿಜ್ಞಾತಶ್ಚ ಕಥಂ ತ್ವಹಂ|

05014012c ತತಃ ಸಾ ಕಥಯಾಮಾಸ ನಹುಷಸ್ಯ ವಿಚೇಷ್ಟಿತಂ||

“ಇಲ್ಲಿಗೆ ಏಕೆ ಬಂದಿರುವೆ? ನನ್ನನ್ನು ಹೇಗೆ ಹುಡುಕಿದೆ?” ಆಗ ಅವಳು ನಹುಷನು ಮಾಡಿದುದರ ಕುರಿತು ಹೇಳಿದಳು.

05014013a ಇಂದ್ರತ್ವಂ ತ್ರಿಷು ಲೋಕೇಷು ಪ್ರಾಪ್ಯ ವೀರ್ಯಮದಾನ್ವಿತಃ|

05014013c ದರ್ಪಾವಿಷ್ಟಶ್ಚ ದುಷ್ಟಾತ್ಮಾ ಮಾಮುವಾಚ ಶತಕ್ರತೋ|

05014013e ಉಪತಿಷ್ಠ ಮಾಮಿತಿ ಕ್ರೂರಃ ಕಾಲಂ ಚ ಕೃತವಾನ್ಮಮ||

“ಶತಕ್ರತೋ! ಮೂರು ಲೋಕಗಳ ಇಂದ್ರತ್ವವನ್ನು ಪಡೆದು ವೀರ್ಯಮದಾನ್ವಿತನೂ ದರ್ಪಭರಿತನೂ ಆಗಿ ಆ ದುಷ್ಟಾತ್ಮನು ನನ್ನನ್ನು ಕೂಡು ಎಂದು ಕ್ರೂರವಾಗಿ ಆಡಿದನು ಮತ್ತು ನನಗೆ ಸಮಯವನ್ನೂ ನಿರ್ದಿಷ್ಟಪಡಿಸಿದ್ದಾನೆ.

05014014a ಯದಿ ನ ತ್ರಾಸ್ಯಸಿ ವಿಭೋ ಕರಿಷ್ಯತಿ ಸ ಮಾಂ ವಶೇ|

05014014c ಏತೇನ ಚಾಹಂ ಸಂತಪ್ತಾ ಪ್ರಾಪ್ತಾ ಶಕ್ರ ತವಾಂತಿಕಂ|

05014014e ಜಹಿ ರೌದ್ರಂ ಮಹಾಬಾಹೋ ನಹುಷಂ ಪಾಪನಿಶ್ಚಯಂ||

ವಿಭೋ! ನನ್ನನ್ನು ರಕ್ಷಿಸದೇ ಇದ್ದರೆ ಅವನು ನನ್ನನ್ನು ವಶಪಡಿಸಿಕೊಳ್ಳುತ್ತಾನೆ. ಶಕ್ರ! ಈ ಕಾರಣದಿಂದಲೇ ನಾನು ನಿನ್ನ ಬಳಿ ಬಂದಿದ್ದೇನೆ. ಮಹಾಬಾಹೋ! ರೌದ್ರನಾದ ಪಾಪನಿಶ್ಚಯ ನಹುಷನನ್ನು ಗೆಲ್ಲು.

05014015a ಪ್ರಕಾಶಯಸ್ವ ಚಾತ್ಮಾನಂ ದೈತ್ಯದಾನವಸೂದನ|

05014015c ತೇಜಃ ಸಮಾಪ್ನುಹಿ ವಿಭೋ ದೇವರಾಜ್ಯಂ ಪ್ರಶಾಧಿ ಚ||

ದೈತ್ಯದಾನವಸೂದನ! ನಿನ್ನನ್ನು ತೋರಿಸಿಕೋ! ವಿಭೋ! ತೇಜಸ್ಸನ್ನು ತಳೆದು ದೇವರಾಜ್ಯವನ್ನಾಳು!””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಇಂದ್ರಾಣೀಂದ್ರಸ್ತವೇ ಚತುರ್ದಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಇಂದ್ರಾಣೀಂದ್ರಸ್ತವದಲ್ಲಿ ಹದಿನಾಲ್ಕನೆಯ ಅಧ್ಯಾಯವು|

Related image

Comments are closed.