Udyoga Parva: Chapter 13

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

೧೩

ಶಚಿಯು ನಹುಷನಿಂದ ಸ್ವಲ್ಪಸಮಯವನ್ನು ಕೇಳಿಕೊಂಡು (೧-೬), ಇಂದ್ರನನ್ನು ಬ್ರಹ್ಮಹತ್ಯ ದೋಷದಿಂದ ಮುಕ್ತಗೊಳಿಸಲು ದೇವತೆಗಳು ವಿಷ್ಣುವಿನ ಸಲಹೆಯಂತೆ ಮಹಾ ಅಶ್ವಮೇಧಯಾಗಗಳನ್ನು ನಡೆಸಲು ಇಂದ್ರನು ಆತ್ಮವಂತನಾದುದು (೭-೧೮). ಆದರೆ ನಹುಷನನ್ನು ನೋಡಿ ತನ್ನ ತೇಜಸ್ಸನ್ನು ಕಳೆದುಕೊಂಡು ಇಂದ್ರನು ಪುನಃ ನಶಿಸಿಹೋಗಿ, ಸರ್ವಭೂತಗಳಿಗೂ ಅದೃಶ್ಯನಾಗಲು ಶಚಿಯು ದೇವಿ ರಾತ್ರಿಯನ್ನು ಉಪಾಸಿಸಿ ಅವಳಿಂದ ಇಂದ್ರನ ಕುರುಹನ್ನು ಕಾಣುವುದು (೧೯-೨೫).

05013001 ಶಲ್ಯ ಉವಾಚ|

05013001a ಅಥ ತಾಮಬ್ರವೀದ್ದೃಷ್ಟ್ವಾ ನಹುಷೋ ದೇವರಾಟ್ತದಾ|

05013001c ತ್ರಯಾಣಾಮಪಿ ಲೋಕಾನಾಮಹಮಿಂದ್ರಃ ಶುಚಿಸ್ಮಿತೇ|

05013001e ಭಜಸ್ವ ಮಾಂ ವರಾರೋಹೇ ಪತಿತ್ವೇ ವರವರ್ಣಿನಿ||

ಶಲ್ಯನು ಹೇಳಿದನು: “ಅವಳನ್ನು ನೋಡಿ ದೇವರಾಜ ನಹುಷನು ಹೇಳಿದನು: “ಶುಚಿಸ್ಮಿತೇ! ನಾನು ಮೂರೂ ಲೋಕಗಳ ಇಂದ್ರ. ವರವರ್ಣಿನೀ! ವರಾರೋಹೇ! ನನ್ನನ್ನು ನಿನ್ನ ಪತಿಯಾಗಿ ಪ್ರೀತಿಸು!”

05013002a ಏವಮುಕ್ತಾ ತು ಸಾ ದೇವೀ ನಹುಷೇಣ ಪತಿವ್ರತಾ|

05013002c ಪ್ರಾವೇಪತ ಭಯೋದ್ವಿಗ್ನಾ ಪ್ರವಾತೇ ಕದಲೀ ಯಥಾ||

ನಹುಷನು ಹೀಗೆ ಹೇಳಲು ಆ ಪತಿವ್ರತೆ ದೇವಿಯು ಭಯೋದ್ವಿಗ್ನಳಾಗಿ ಭಿರುಗಾಳಿಗೆ ಸಿಲುಕಿದ ಬಾಳೆಯ ಮರದಂತೆ ತತ್ತರಿಸಿದಳು.

05013003a ನಮಸ್ಯ ಸಾ ತು ಬ್ರಹ್ಮಾಣಂ ಕೃತ್ವಾ ಶಿರಸಿ ಚಾಂಜಲಿಂ|

05013003c ದೇವರಾಜಮಥೋವಾಚ ನಹುಷಂ ಘೋರದರ್ಶನಂ||

ಅವಳಾದರೋ ಬ್ರಹ್ಮನಿಗೆ ಕೈಮುಗಿದು ತಲೆಬಾಗಿ ನಮಸ್ಕರಿಸಿ ಘೋರದರ್ಶನ ದೇವರಾಜ ನಹುಷನಿಗೆ ಹೇಳಿದಳು:

05013004a ಕಾಲಮಿಚ್ಚಾಮ್ಯಹಂ ಲಬ್ಧುಂ ಕಿಂ ಚಿತ್ತ್ವತ್ತಃ ಸುರೇಶ್ವರ|

05013004c ನ ಹಿ ವಿಜ್ಞಾಯತೇ ಶಕ್ರಃ ಪ್ರಾಪ್ತಃ ಕಿಂ ವಾ ಕ್ವ ವಾ ಗತಃ||

“ಸುರೇಶ್ವರ! ಸ್ವಲ್ಪ ಸಮಯವನ್ನು ಬಯಸುತ್ತೇನೆ. ಶಕ್ರನಿಗೆ ಏನಾಯಿತೆಂದೂ ಎಲ್ಲಿ ಹೋಗಿದ್ದಾನೆಂದೂ ತಿಳಿಯದಾಗಿದೆ.

05013005a ತತ್ತ್ವಮೇತತ್ತು ವಿಜ್ಞಾಯ ಯದಿ ನ ಜ್ಞಾಯತೇ ಪ್ರಭೋ|

05013005c ತತೋಽಹಂ ತ್ವಾಮುಪಸ್ಥಾಸ್ಯೇ ಸತ್ಯಮೇತದ್ಬ್ರವೀಮಿ ತೇ|

05013005e ಏವಮುಕ್ತಃ ಸ ಇಂದ್ರಾಣ್ಯಾ ನಹುಷಃ ಪ್ರೀತಿಮಾನಭೂತ್||

ಪ್ರಭೋ! ಸತ್ಯವೇನೆಂದು ತಿಳಿಯಲು ಪ್ರಯತ್ನಿಸುತ್ತೇನೆ. ಅವನ ಕುರಿತಾದ ವಿಷಯವು ತಿಳಿಯದೇ ಹೋದಲ್ಲಿ ನಾನು ನಿನ್ನ ಉಪಸ್ಥಿತಿಯಲ್ಲಿ ಬರುತ್ತೇನೆ. ಸತ್ಯವನ್ನು ನಿನಗೆ ಹೇಳುತ್ತೇನೆ.” ಇಂದ್ರಾಣಿಯು ಹೀಗೆ ಹೇಳಲು ನಹುಷನು ಸಂತೋಷಗೊಂಡನು.

05013006 ನಹುಷ ಉವಾಚ|

05013006a ಏವಂ ಭವತು ಸುಶ್ರೋಣಿ ಯಥಾ ಮಾಮಭಿಭಾಷಸೇ|

05013006c ಜ್ಞಾತ್ವಾ ಚಾಗಮನಂ ಕಾರ್ಯಂ ಸತ್ಯಮೇತದನುಸ್ಮರೇಃ||

ನಹುಷನು ಹೇಳಿದನು: “ಸುಶ್ರೋಣೀ! ನೀನು ನನಗೆ ಹೇಳಿದಂತೆಯೇ ಆಗಲಿ. ವಿಷಯವನ್ನು ತಿಳಿದುಕೊಂಡು ಬರುತ್ತೀಯೆ. ನೀನು ನುಡಿದ ಸತ್ಯವು ನಿನಗೆ ನೆನಪಿರಲಿ.””

05013007 ಶಲ್ಯ ಉವಾಚ|

05013007a ನಹುಷೇಣ ವಿಸೃಷ್ಟಾ ಚ ನಿಶ್ಚಕ್ರಾಮ ತತಃ ಶುಭಾ|

05013007c ಬೃಹಸ್ಪತಿನಿಕೇತಂ ಸಾ ಜಗಾಮ ಚ ತಪಸ್ವಿನೀ||

ಶಲ್ಯನು ಹೇಳಿದನು: “ನಹುಷನಿಂದ ಕಳುಹಿಸಲ್ಪಟ್ಟ ಆ ತಪಸ್ವಿನೀ ಶುಭೆಯು ಹೊರಬಂದು ಬೃಹಸ್ಪತಿಯ ಮನೆಗೆ ಹೋದಳು.

05013008a ತಸ್ಯಾಃ ಸಂಶ್ರುತ್ಯ ಚ ವಚೋ ದೇವಾಃ ಸಾಗ್ನಿಪುರೋಗಮಾಃ|

05013008c ಮಂತ್ರಯಾಮಾಸುರೇಕಾಗ್ರಾಃ ಶಕ್ರಾರ್ಥಂ ರಾಜಸತ್ತಮ||

ರಾಜಸತ್ತಮ! ಅವಳ ಮಾತನ್ನು ಕೇಳಿ, ಅಗ್ನಿಯ ನೇತೃತ್ವದಲ್ಲಿ ದೇವತೆಗಳು ಶಕ್ರನ ಒಳಿತನ್ನೇ ಉದ್ದೇಶವನ್ನಾಗಿಟ್ಟುಕೊಂಡು ಮಂತ್ರಾಲೋಚನೆಗೈದರು.

05013009a ದೇವದೇವೇನ ಸಂಗಮ್ಯ ವಿಷ್ಣುನಾ ಪ್ರಭವಿಷ್ಣುನಾ|

05013009c ಊಚುಶ್ಚೈನಂ ಸಮುದ್ವಿಗ್ನಾ ವಾಕ್ಯಂ ವಾಕ್ಯವಿಶಾರದಾಃ||

ಪ್ರಭವಿಷ್ಣು ದೇವದೇವ ವಿಷ್ಣುವಿನ ಬಳಿಸಾರಿ, ಆ ವಾಕ್ಯವಿಶಾರದರು ಅವನಿಗೆ ಉದ್ವಿಗ್ನರಾಗಿ ಈ ಮಾತನ್ನಾಡಿದರು:

05013010a ಬ್ರಹ್ಮಹತ್ಯಾಭಿಭೂತೋ ವೈ ಶಕ್ರಃ ಸುರಗಣೇಶ್ವರಃ|

05013010c ಗತಿಶ್ಚ ನಸ್ತ್ವಂ ದೇವೇಶ ಪೂರ್ವಜೋ ಜಗತಃ ಪ್ರಭುಃ|

05013010e ರಕ್ಷಾರ್ಥಂ ಸರ್ವಭೂತಾನಾಂ ವಿಷ್ಣುತ್ವಮುಪಜಗ್ಮಿವಾನ್||

“ಸುರಗಣೇಶ್ವರ ಶಕ್ರನು ಬ್ರಹ್ಮಹತ್ಯೆಯಿಂದ ಅಭಿಭೂತನಾಗಿದ್ದಾನೆ. ದೇವೇಶ! ಪೂರ್ವಜ! ಜಗತ್ಪ್ರಭು! ನೀನೇ ನಮ್ಮ ಗತಿ. ಸರ್ವಭೂತರ ರಕ್ಷಣಾರ್ಥವಾಗಿಯೇ ನೀನು ವಿಷ್ಣುತ್ವವನ್ನು ಧರಿಸಿದ್ದೀಯೆ.

05013011a ತ್ವದ್ವೀರ್ಯಾನ್ನಿಹತೇ ವೃತ್ರೇ ವಾಸವೋ ಬ್ರಹ್ಮಹತ್ಯಯಾ|

05013011c ವೃತಃ ಸುರಗಣಶ್ರೇಷ್ಠ ಮೋಕ್ಷಂ ತಸ್ಯ ವಿನಿರ್ದಿಶ||

ನಿನ್ನ ವೀರ್ಯದಿಂದ ವೃತ್ರನು ನಿಹತನಾಗಲು ವಾಸವನು ಬ್ರಹ್ಮಹತ್ಯೆಯಿಂದ ಆವೃತನಾಗಿದ್ದಾನೆ. ಸುರಗಣಶ್ರೇಷ್ಠ! ಅವನಿಗೆ ಮೋಕ್ಷವೇನೆಂದು ನಿರ್ದೇಶಿಸು.”

05013012a ತೇಷಾಂ ತದ್ವಚನಂ ಶ್ರುತ್ವಾ ದೇವಾನಾಂ ವಿಷ್ಣುರಬ್ರವೀತ್|

05013012c ಮಾಮೇವ ಯಜತಾಂ ಶಕ್ರಃ ಪಾವಯಿಷ್ಯಾಮಿ ವಜ್ರಿಣಂ||

ದೇವತೆಗಳ ಆ ಮಾತನ್ನು ಕೇಳಿ ವಿಷ್ಣುವು ಹೇಳಿದನು: “ಶಕ್ರನು ನನ್ನನ್ನೇ ಯಾಜಿಸಲಿ. ನಾನು ವಜ್ರಿಣಿಯನ್ನು ಪಾವನಗೊಳಿಸುತ್ತೇನೆ.

05013013a ಪುಣ್ಯೇನ ಹಯಮೇಧೇನ ಮಾಮಿಷ್ಟ್ವಾ ಪಾಕಶಾಸನಃ|

05013013c ಪುನರೇಷ್ಯತಿ ದೇವಾನಾಮಿಂದ್ರತ್ವಮಕುತೋಭಯಃ||

ಪುಣ್ಯ ಹಯಮೇಧದಿಂದ ನನ್ನನ್ನು ಇಷ್ಟಗೊಳಿಸಿ, ಪಾಕಶಾಸನನು, ಭಯವನ್ನು ಕಳೆದುಕೊಂಡು, ಪುನಃ ದೇವತೆಗಳ ಇಂದ್ರತ್ವವನ್ನು ಪಡೆಯುತ್ತಾನೆ.

05013014a ಸ್ವಕರ್ಮಭಿಶ್ಚ ನಹುಷೋ ನಾಶಂ ಯಾಸ್ಯತಿ ದುರ್ಮತಿಃ|

05013014c ಕಂ ಚಿತ್ಕಾಲಮಿಮಂ ದೇವಾ ಮರ್ಷಯಧ್ವಮತಂದ್ರಿತಾಃ||

ತನ್ನದೇ ಕರ್ಮದಿಂದ ದುರ್ಮತಿ ನಹುಷನು ನಾಶಹೊಂದುತ್ತಾನೆ. ದೇವತೆಗಳೇ! ಕೆಲವು ಕಾಲ ನೀವು ತಾಳ್ಮೆಯಿಂದಿರಬೇಕು. ಜಾಗರೂಕರಾಗಿಯೂ ಇರಬೇಕು.”

05013015a ಶ್ರುತ್ವಾ ವಿಷ್ಣೋಃ ಶುಭಾಂ ಸತ್ಯಾಂ ತಾಂ ವಾಣೀಮಮೃತೋಪಮಾಂ|

05013015c ತತಃ ಸರ್ವೇ ಸುರಗಣಾಃ ಸೋಪಾಧ್ಯಾಯಾಃ ಸಹರ್ಷಿಭಿಃ|

05013015e ಯತ್ರ ಶಕ್ರೋ ಭಯೋದ್ವಿಗ್ನಸ್ತಂ ದೇಶಮುಪಚಕ್ರಮುಃ||

ವಿಷ್ಣುವಿನ ಆ ಶುಭ ಸತ್ಯ ಅಮೃತೋಪಮ ಮಾತನ್ನು ಕೇಳಿ ಸುರಗಣಗಳೆಲ್ಲವೂ ಆಚಾರ್ಯ ಮತ್ತು ಋಷಿಗಳ ಜೊತೆಗೂಡಿ ಭಯೋದ್ವಿಗ್ನ ಶಕ್ರನಿದ್ದಲ್ಲಿಗೆ ಹೊರಟವು.

05013016a ತತ್ರಾಶ್ವಮೇಧಃ ಸುಮಹಾನ್ಮಹೇಂದ್ರಸ್ಯ ಮಹಾತ್ಮನಃ|

05013016c ವವೃತೇ ಪಾವನಾರ್ಥಂ ವೈ ಬ್ರಹ್ಮಹತ್ಯಾಪಹೋ ನೃಪ||

05013017a ವಿಭಜ್ಯ ಬ್ರಹ್ಮಹತ್ಯಾಂ ತು ವೃಕ್ಷೇಷು ಚ ನದೀಷು ಚ|

05013017c ಪರ್ವತೇಷು ಪೃಥಿವ್ಯಾಂ ಚ ಸ್ತ್ರೀಷು ಚೈವ ಯುಧಿಷ್ಠಿರ||

ನೃಪ! ಯುಧಿಷ್ಠಿರ! ಅಲ್ಲಿ ಮಹಾತ್ಮ ಮಹೇಂದ್ರನ ಬ್ರಹ್ಮಹತ್ಯಾದೋಷವನ್ನು ಕಳೆದು ಪಾವನಗೊಳಿಸಲು ಸುಮಹಾ ಅಶ್ವಮೇಧವನ್ನು ನೆರವೇರಿದರು. ಬ್ರಹ್ಮಹತ್ಯಾದೋಷವನ್ನು ಮರಗಳಲ್ಲಿ, ನದಿಗಳಲ್ಲಿ, ಪರ್ವತಗಳಲ್ಲಿ, ಭೂಮಿ ಮತ್ತು ಸ್ತ್ರೀಯರಲ್ಲಿ ವಿಭಜಿಸಿದರು.

05013018a ಸಂವಿಭಜ್ಯ ಚ ಭೂತೇಷು ವಿಸೃಜ್ಯ ಚ ಸುರೇಶ್ವರಃ|

05013018c ವಿಜ್ವರಃ ಪೂತಪಾಪ್ಮಾ ಚ ವಾಸವೋಽಭವದಾತ್ಮವಾನ್||

ಆ ಭೂತಗಳಲ್ಲಿ ಅದನ್ನು ಭಾಗಮಾಡಿ ವಿಸರ್ಜಿಸಿದ ನಂತರ ಸುರೇಶ್ವರ ವಾಸವನು ಜ್ವರವನ್ನು ಹೋಗಲಾಡಿಸಿಕೊಂಡು ಪಾಪದಿಂದ ಪಾವನನಾಗಿ, ಆತ್ಮವಂತನಾದನು.

05013019a ಅಕಂಪ್ಯಂ ನಹುಷಂ ಸ್ಥಾನಾದ್ದೃಷ್ಟ್ವಾ ಚ ಬಲಸೂದನಃ|

05013019c ತೇಜೋಘ್ನಂ ಸರ್ವಭೂತಾನಾಂ ವರದಾನಾಚ್ಚ ದುಃಸಹಂ||

ತನ್ನ ಸ್ಥಾನದಲ್ಲಿದ್ದು ಸರ್ವಭೂತಗಳಿಗೆ ವರದನಾಗಿದ್ದ ಆ ದುಃಸಹ ನಹುಷನನ್ನು ನೋಡಿ ಬಲಸೂದನನು ನಡುಗಿ ತೇಜಸ್ಸನ್ನು ಕಳೆದುಕೊಂಡನು.

05013020a ತತಃ ಶಚೀಪತಿರ್ವೀರಃ ಪುನರೇವ ವ್ಯನಶ್ಯತ|

05013020c ಅದೃಶ್ಯಃ ಸರ್ವಭೂತಾನಾಂ ಕಾಲಾಕಾಂಕ್ಷೀ ಚಚಾರ ಹ||

ಆಗ ವೀರ ಶಚೀಪತಿಯು ಪುನಃ ನಶಿಸಿಹೋಗಿ, ಸರ್ವಭೂತಗಳಿಗೂ ಅದೃಶ್ಯನಾಗಿ, ಸಮಯವನ್ನು ಕಾಯುತ್ತಾ ಸಂಚರಿಸತೊಡಗಿದನು.

05013021a ಪ್ರನಷ್ಟೇ ತು ತತಃ ಶಕ್ರೇ ಶಚೀ ಶೋಕಸಮನ್ವಿತಾ|

05013021c ಹಾ ಶಕ್ರೇತಿ ತದಾ ದೇವೀ ವಿಲಲಾಪ ಸುದುಃಖಿತಾ||

05013022a ಯದಿ ದತ್ತಂ ಯದಿ ಹುತಂ ಗುರವಸ್ತೋಷಿತಾ ಯದಿ|

05013022c ಏಕಭರ್ತೃತ್ವಮೇವಾಸ್ತು ಸತ್ಯಂ ಯದ್ಯಸ್ತಿ ವಾ ಮಯಿ||

ಶಕ್ರನು ನಷ್ಟನಾಗಲು ಶೋಕಸಮನ್ವಿತಳಾದ, ತುಂಬಾ ದುಃಖಿತಳಾದ ಶಚೀದೇವಿಯು ವಿಲಪಿಸಿದಳು. “ಹಾ ಶಕ್ರ! ನಾನು ದಾನವನ್ನು ಮಾಡಿದ್ದರೆ, ಆಹುತಿಯನ್ನು ನೀಡಿದ್ದರೆ, ಗುರುಗಳನ್ನು ಸ್ತುತಿಸಿದ್ದರೆ, ಮತ್ತು ಸತ್ಯವು ಇದ್ದರೆ ನನಗೆ ಒಬ್ಬನೇ ಪತಿಯೆಂದಾಗಲಿ!

05013023a ಪುಣ್ಯಾಂ ಚೇಮಾಮಹಂ ದಿವ್ಯಾಂ ಪ್ರವೃತ್ತಾಮುತ್ತರಾಯಣೇ|

05013023c ದೇವೀಂ ರಾತ್ರಿಂ ನಮಸ್ಯಾಮಿ ಸಿಧ್ಯತಾಂ ಮೇ ಮನೋರಥಃ||

ನನ್ನ ಮನೋರಥವು ಸಿದ್ಧಿಯಾಗಲೆಂದು ನಾನು ಪುಣ್ಯೆ, ದಿವ್ಯೆ, ಉತ್ತರಾಯಣಕ್ಕೆ ಹೋಗುತ್ತಿರುವ ದೇವಿ ರಾತ್ರಿಯನ್ನು ನಮಸ್ಕರಿಸುತ್ತೇನೆ.”

05013024a ಪ್ರಯತಾ ಚ ನಿಶಾಂ ದೇವೀಮುಪಾತಿಷ್ಠತ ತತ್ರ ಸಾ|

05013024c ಪತಿವ್ರತಾತ್ವಾತ್ಸತ್ಯೇನ ಸೋಪಶ್ರುತಿಮಥಾಕರೋತ್||

ಹೀಗೆ ಹೇಳಿ ಅವಳು ಅಲ್ಲಿ ದೇವಿ ನಿಶೆಯ ಉಪಾಸನೆಯನ್ನು ಮಾಡಿದಳು. ಪಾತಿವ್ರತ್ಯ ಮತ್ತು ಸತ್ಯದಿಂದ ಅವಳು ಉಪಶ್ರುತಿಯನ್ನು ನಡೆಸಿದಳು.

05013025a ಯತ್ರಾಸ್ತೇ ದೇವರಾಜೋಽಸೌ ತಂ ದೇಶಂ ದರ್ಶಯಸ್ವ ಮೇ|

05013025c ಇತ್ಯಾಹೋಪಶ್ರುತಿಂ ದೇವೀ ಸತ್ಯಂ ಸತ್ಯೇನ ದೃಶ್ಯತಾಂ||

“ದೇವರಾಜನು ಎಲ್ಲಿದ್ದಾನೋ ಆ ಪ್ರದೇಶವನ್ನು ನನಗೆ ತೋರಿಸು!” ಎಂದು ಉಪಶ್ರುತಿಗೆ ಹೇಳಲು ಆ ದೇವಿಯು ಸತ್ಯವನ್ನು ಸತ್ಯವಾಗಿಯೇ ಕಾಣಿಸಿದಳು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಉಪಶ್ರುತಿಯಾಚನೇ ತ್ರಯೋದಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಉಪಶ್ರುತಿಯಾಚನೆಯಲ್ಲಿ ಹದಿಮೂರನೆಯ ಅಧ್ಯಾಯವು|

Related image

Comments are closed.