Udyoga Parva: Chapter 122

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೨೨

ತನಗೆ ಅಧಿಕಾರವಿಲ್ಲವೆಂದು ನಾರದನಿಗೆ ಹೇಳಿ ಧೃತರಾಷ್ಟ್ರನು ದುರ್ಯೋಧನನ್ನು ಬದಲಾಯಿಸಲು ಪ್ರಯತ್ನಿಸೆಂದು ಕೃಷ್ಣನಲ್ಲಿ ಕೇಳಿಕೊಳ್ಳುವುದು (೧-೪). ಆಗ ಕೃಷ್ಣನು ದುರ್ಯೋಧನನಿಗೆ “ತಂದೆಯ ನಿಬಂಧನೆಗಳನ್ನು ಪಾಲಿಸುವುದು ಶ್ರೇಯವಾದುದು...ಹುಟ್ಟಿದಾಗಿನಿಂದ ನಿತ್ಯವೂ ನೀನು ಕೌಂತೇಯರನ್ನು ಕಾಡಿಸುತ್ತಿದ್ದೀಯೆ. ಧರ್ಮಾತ್ಮರಾಗಿರುವುದರಿಂದ ಪಾಂಡವರು ನಿನ್ನ ಮೇಲೆ ಕೋಪಗೊಂಡಿಲ್ಲ. ಆದರೆ ಕುಪಿತರಾದ ಭೀಮಾರ್ಜುನರನ್ನು ಯಾರೂ ಎದುರಿಸಿ ಉಳಿಯಲಾರರು...ನಿನ್ನನ್ನು ಕುಲಘ್ನ ಮತ್ತು ಕೀರ್ತಿನಾಶಕನೆಂದು ಕರೆಯದಿರಲಿ...ಪಾಂಡವರೊಂದಿಗೆ ಶಾಂತಿಯನ್ನು ಮಾಡಿಕೊಂಡು ಸುಹೃದಯರ ಮಾತಿನಂತೆ ಮಾಡು” ಎಂದು ಹೇಳುವುದು (೫-೬೧).

05122001 ಧೃತರಾಷ್ಟ್ರ ಉವಾಚ|

05122001a ಭಗವನ್ನೇವಮೇವೈತದ್ಯಥಾ ವದಸಿ ನಾರದ|

05122001c ಇಚ್ಚಾಮಿ ಚಾಹಮಪ್ಯೇವಂ ನ ತ್ವೀಶೋ ಭಗವನ್ನಹಂ||

ಧೃತರಾಷ್ಟ್ರನು ಹೇಳಿದನು: “ಭಗವನ್! ನಾರದ! ನೀನು ಹೇಳಿದುದು ಸರಿ. ನಾನೂ ಕೂಡ ಅದನ್ನೇ ಬಯಸುತ್ತೇನೆ. ಆದರೆ ಭಗವನ್! ನನಗೆ ಅಧಿಕಾರವಿಲ್ಲ!””

05122002 ವೈಶಂಪಾಯನ ಉವಾಚ|

05122002a ಏವಮುಕ್ತ್ವಾ ತತಃ ಕೃಷ್ಣಮಭ್ಯಭಾಷತ ಭಾರತ|

05122002c ಸ್ವರ್ಗ್ಯಂ ಲೋಕ್ಯಂ ಚ ಮಾಮಾತ್ಥ ಧರ್ಮ್ಯಂ ನ್ಯಾಯ್ಯಂ ಚ ಕೇಶವ||

ವೈಶಂಪಾಯನನು ಹೇಳಿದನು: “ಭಾರತ! ಹೀಗೆ ಹೇಳಿ ಧೃತರಾಷ್ಟ್ರನು ಕೃಷ್ಣನನ್ನುದ್ದೇಶಿಸಿ ಹೇಳಿದನು: “ಕೇಶವ! ನೀನು ಹೇಳಿದುದು ಸ್ವರ್ಗವನ್ನು ನೀಡುವಂತಹುದು, ಲೋಕಕ್ಕೆ ಹಿತವಾದುದು, ಧರ್ಮ ಮತ್ತು ನ್ಯಾಯಗಳಿಗೆ ಸಮ್ಮತವಾಗಿದೆ.

05122003a ನ ತ್ವಹಂ ಸ್ವವಶಸ್ತಾತ ಕ್ರಿಯಮಾಣಂ ನ ಮೇ ಪ್ರಿಯಂ|

05122003c ಅಂಗ ದುರ್ಯೋಧನಂ ಕೃಷ್ಣ ಮಂದಂ ಶಾಸ್ತ್ರಾತಿಗಂ ಮಮ||

05122004a ಅನುನೇತುಂ ಮಹಾಬಾಹೋ ಯತಸ್ವ ಪುರುಷೋತ್ತಮ|

05122004c ಸುಹೃತ್ಕಾರ್ಯಂ ತು ಸುಮಹತ್ಕೃತಂ ತೇ ಸ್ಯಾಜ್ಜನಾರ್ದನ||

ಆದರೆ ಅಯ್ಯಾ! ನಾನು ಸ್ವವಶನಾಗಿಲ್ಲ. ನನಗೆ ಇಷ್ಟವಾದುದನ್ನು ಇವನು ಮಾಡುವುದಿಲ್ಲ. ಕೃಷ್ಣ! ಮಹಾಬಾಹೋ! ಪುರುಷೋತ್ತಮ! ನನ್ನ ಆಜ್ಞೆಗಳನ್ನು ಅನುಸರಿಸದೇ ಇರುವ ಈ ಮಂದ ದುರ್ಯೋಧನನನ್ನು ಗೆಲ್ಲಲು ನೀನೇ ಪ್ರಯತ್ನಿಸು. ಜನಾರ್ದನ! ಇದರಿಂದ ನಿನ್ನ ಸ್ನೇಹಿತರಿಗೆ ಒಂದು ಮಹತ್ಕಾರ್ಯವನ್ನು ಮಾಡುವೆ!”

05122005a ತತೋಽಭ್ಯಾವೃತ್ಯ ವಾರ್ಷ್ಣೇಯೋ ದುರ್ಯೋಧನಮಮರ್ಷಣಂ|

05122005c ಅಬ್ರವೀನ್ಮಧುರಾಂ ವಾಚಂ ಸರ್ವಧರ್ಮಾರ್ಥತತ್ತ್ವವಿತ್||

ಆಗ ವಾರ್ಷ್ಣೇಯನು ಅಮರ್ಷಣ ದುರ್ಯೋಧನನ ಕಡೆ ತಿರುಗಿ ಈ ಸರ್ವ ಧರ್ಮಾರ್ಥ ತತ್ವಗಳುಳ್ಳ ಮಧುರ ಮಾತನ್ನು ಹೇಳಿದನು.

05122006a ದುರ್ಯೋಧನ ನಿಬೋಧೇದಂ ಮದ್ವಾಕ್ಯಂ ಕುರುಸತ್ತಮ|

05122006c ಸಮರ್ಥಂ ತೇ ವಿಶೇಷೇಣ ಸಾನುಬಂಧಸ್ಯ ಭಾರತ||

“ದುರ್ಯೋಧನ! ಕುರುಸತ್ತಮ! ಭಾರತ! ನಿನ್ನ ಮತ್ತು ನಿನ್ನ ಅನುಯಾಯಿಗಳ ಆಸಕ್ತಿಯನ್ನಿಟ್ಟುಕೊಂಡು ನಾನು ಹೇಳುವ ಮಾತುಗಳನ್ನು ಕೇಳು.

05122007a ಮಹಾಪ್ರಾಜ್ಞಾ ಕುಲೇ ಜಾತಃ ಸಾಧ್ವೇತತ್ಕರ್ತುಮರ್ಹಸಿ|

05122007c ಶ್ರುತವೃತ್ತೋಪಸಂಪನ್ನಃ ಸರ್ವೈಃ ಸಮುದಿತೋ ಗುಣೈಃ||

ಮಹಾಪ್ರಾಜ್ಞನಾದ ನೀನು ಉಚ್ಚ ಕುಲದಲ್ಲಿ ಜನಿಸಿದ್ದೀಯೆ. ಆದುದರಿಂದ ನೀನು ಒಳ್ಳೆಯವನಂತೆ ನಡೆದುಕೊಳ್ಳಬೇಕು. ನೀನು ವಿದ್ಯಾವಂತ, ಉತ್ತಮ ನಡತೆಯುಳ್ಳವನು ಮತ್ತು ಎಲ್ಲ ಗುಣಗಳಿಂದಲೂ ಕೂಡಿದ್ದೀಯೆ.

05122008a ದೌಷ್ಕುಲೇಯಾ ದುರಾತ್ಮಾನೋ ನೃಶಂಸಾ ನಿರಪತ್ರಪಾಃ|

05122008c ತ ಏತದೀದೃಶಂ ಕುರ್ಯುರ್ಯಥಾ ತ್ವಂ ತಾತ ಮನ್ಯಸೇ||

ಅಯ್ಯಾ! ನೀನು ಯೋಚಿಸಿರುವಂತಹ ಕೆಲಸವನ್ನು ದುಷ್ಕುಲದಲ್ಲಿ ಹುಟ್ಟಿದವರು, ದುರಾತ್ಮರು, ಕ್ರೂರಿಗಳು ಮತ್ತು ನಾಚಿಕೆಯಿಲ್ಲದವರು ಮಾಡುತ್ತಾರೆ.

05122009a ಧರ್ಮಾರ್ಥಯುಕ್ತಾ ಲೋಕೇಽಸ್ಮಿನ್ಪ್ರವೃತ್ತಿರ್ಲಕ್ಷ್ಯತೇ ಸತಾಂ|

05122009c ಅಸತಾಂ ವಿಪರೀತಾ ತು ಲಕ್ಷ್ಯತೇ ಭರತರ್ಷಭ||

ಭರತರ್ಷಭ! ಈ ಲೋಕದಲ್ಲಿ ಸಂತರ ಪ್ರವೃತ್ತಿಯನ್ನು ಧರ್ಮಾರ್ಥಯುಕ್ತವೆಂದು ಕಾಣುತ್ತಾರೆ. ಸಂತರದಲ್ಲದ ಪ್ರವೃತ್ತಿಯನ್ನು ವಿಪರೀತವೆಂದು ಕಾಣುತ್ತಾರೆ.

05122010a ವಿಪರೀತಾ ತ್ವಿಯಂ ವೃತ್ತಿರಸಕೃಲ್ಲಕ್ಷ್ಯತೇ ತ್ವಯಿ|

05122010c ಅಧರ್ಮಶ್ಚಾನುಬಂಧೋಽತ್ರ ಘೋರಃ ಪ್ರಾಣಹರೋ ಮಹಾನ್||

ಈ ವಿಷಯದಲ್ಲಿ ನೀನು ನಡೆದುಕೊಳ್ಳುತ್ತಿರುವ ರೀತಿಯು ವಿಪರೀತವೆಂದು ತೋರುತ್ತಿದೆ - ನಿನ್ನ ಈ ಅಧರ್ಮ ಹಠವು ಘೋರ, ಮತ್ತು ಮಹಾ ಪ್ರಾಣಹರಣ ಮಾಡುವಂತಹುದು.

05122011a ಅನೇಕಶಸ್ತ್ವನ್ನಿಮಿತ್ತಮಯಶಸ್ಯಂ ಚ ಭಾರತ|

05122011c ತಮನರ್ಥಂ ಪರಿಹರನ್ನಾತ್ಮಶ್ರೇಯಃ ಕರಿಷ್ಯಸಿ||

ಭಾರತ! ಈಗಾಗಲೇ ನೀನು ಅನೇಕ ಅಯಶಸ್ಕರವಾದವುಗಳನ್ನು ಮಾಡಿರುವೆ. ಆದರೆ ಈಗ ಆ ಅನರ್ಥವನ್ನು ಬಿಟ್ಟರೆ ನಿನಗೇ ಶ್ರೇಯಸ್ಕರವಾದುದನ್ನು ಮಾಡಿದಂತಾಗುತ್ತದೆ.

05122012a ಭ್ರಾತೄಣಾಮಥ ಭೃತ್ಯಾನಾಂ ಮಿತ್ರಾಣಾಂ ಚ ಪರಂತಪ|

05122012c ಅಧರ್ಮ್ಯಾದಯಶಸ್ಯಾಚ್ಚ ಕರ್ಮಣಸ್ತ್ವಂ ಪ್ರಮೋಕ್ಷ್ಯಸೇ||

ಪರಂತಪ! ನೀನು ನಿನ್ನ ಭ್ರಾತೃಗಳನ್ನೂ, ಭೃತ್ಯರನ್ನೂ ಅಧರ್ಮ ಮತ್ತು ಅಯಶಸ್ಕರ ಕರ್ಮಗಳಿಂದ ಬಿಡುಗಡೆ ಮಾಡಬಲ್ಲೆ.

05122013a ಪ್ರಾಜ್ಞೈಃ ಶೂರೈರ್ಮಹೋತ್ಸಾಹೈರಾತ್ಮವದ್ಭಿರ್ಬಹುಶ್ರುತೈಃ|

05122013c ಸಂಧತ್ಸ್ವ ಪುರುಷವ್ಯಾಘ್ರ ಪಾಂಡವೈರ್ಭರತರ್ಷಭ||

ಪುರುಷವ್ಯಾಘ್ರ! ಭರತರ್ಷಭ! ಪ್ರಾಜ್ಞರೂ, ಶೂರರೂ, ಮಹೋತ್ಸಾಹರೂ, ಆತ್ಮವಂತರೂ, ಬಹುಶ್ರುತರೂ ಆದ ಪಾಂಡವರೊಂದಿಗೆ ಸಂಧಿ ಮಾಡಿಕೋ.

05122014a ತದ್ಧಿತಂ ಚ ಪ್ರಿಯಂ ಚೈವ ಧೃತರಾಷ್ಟ್ರಸ್ಯ ಧೀಮತಃ|

05122014c ಪಿತಾಮಹಸ್ಯ ದ್ರೋಣಸ್ಯ ವಿದುರಸ್ಯ ಮಹಾಮತೇಃ||

05122015a ಕೃಪಸ್ಯ ಸೋಮದತ್ತಸ್ಯ ಬಾಹ್ಲೀಕಸ್ಯ ಚ ಧೀಮತಃ|

05122015c ಅಶ್ವತ್ಥಾಮ್ನೋ ವಿಕರ್ಣಸ್ಯ ಸಂಜಯಸ್ಯ ವಿಶಾಂ ಪತೇ||

05122016a ಜ್ಞಾತೀನಾಂ ಚೈವ ಭೂಯಿಷ್ಠಂ ಮಿತ್ರಾಣಾಂ ಚ ಪರಂತಪ|

ಇದು ಹಿತವಾದುದು. ಪರಂತಪ! ವಿಶಾಂಪತೇ! ಇದು ಧೀಮತ ಧೃತರಾಷ್ಟ್ರನಿಗೂ, ಪಿತಾಮಹನಿಗೂ, ದ್ರೋಣನಿಗೂ, ಮಹಾಮತಿ ವಿದುರನಿಗೂ, ಕೃಪನಿಗೂ, ಸೋಮದತ್ತನಿಗೂ, ಧೀಮತ ಬಾಹ್ಲೀಕನಿಗೂ, ಅಶ್ವತ್ಥಾಮ-ವಿಕರ್ಣರಿಗೂ, ಸಂಜಯನಿಗೂ, ಬಾಂಧವರಿಗೂ, ಮಿತ್ರರಿಗೂ ಇಷ್ಟವಾದುದು ಮತ್ತು ಒಳ್ಳೆಯದಾದುದು.

05122016c ಶಮೇ ಶರ್ಮ ಭವೇತ್ತಾತ ಸರ್ವಸ್ಯ ಜಗತಸ್ತಥಾ||

05122017a ಹ್ರೀಮಾನಸಿ ಕುಲೇ ಜಾತಃ ಶ್ರುತವಾನನೃಶಂಸವಾನ್|

05122017c ತಿಷ್ಠ ತಾತ ಪಿತುಃ ಶಾಸ್ತ್ರೇ ಮಾತುಶ್ಚ ಭರತರ್ಷಭ||

ಅಯ್ಯಾ! ಶಾಂತಿಯಲ್ಲಿ ಸರ್ವ ಜಗತ್ತೂ ಆಸರೆಯನ್ನು ಪಡೆಯುತ್ತದೆ. ನಿನ್ನಲ್ಲಿ ಮಾನವಿದೆ. ಉಚ್ಚ ಕುಲದಲ್ಲಿ ಜನಿಸಿದ್ದೀಯೆ. ವಿದ್ಯಾವಂತನಾಗಿದ್ದೀಯೆ. ಕ್ರೂರನಾಗಿಲ್ಲ. ಅಯ್ಯಾ! ಭರತರ್ಷಭ! ನಿನ್ನ ತಂದೆ-ತಾಯಿಯರ ಶಾಸನದಂತೆ ನಡೆದುಕೋ!

05122018a ಏತಚ್ಚ್ರೇಯೋ ಹಿ ಮನ್ಯಂತೇ ಪಿತಾ ಯಚ್ಚಾಸ್ತಿ ಭಾರತ|

05122018c ಉತ್ತಮಾಪದ್ಗತಃ ಸರ್ವಃ ಪಿತುಃ ಸ್ಮರತಿ ಶಾಸನಂ||

ಭಾರತ! ತಂದೆಯ ನಿಬಂಧನೆಗಳನ್ನು ಪಾಲಿಸುವುದು ಶ್ರೇಯವಾದುದು. ಏಕೆಂದರೆ ಆಪತ್ತಿನಲ್ಲಿ ಎಲ್ಲರೂ ತಂದೆಯು ಹೇಳಿದುದನ್ನು ಉತ್ತಮವಾದುದೆಂದು ಸ್ಮರಿಸಿಕೊಳ್ಳುತ್ತಾರೆ.

05122019a ರೋಚತೇ ತೇ ಪಿತುಸ್ತಾತ ಪಾಂಡವೈಃ ಸಹ ಸಂಗಮಃ|

05122019c ಸಾಮಾತ್ಯಸ್ಯ ಕುರುಶ್ರೇಷ್ಠ ತತ್ತುಭ್ಯಂ ತಾತ ರೋಚತಾಂ||

ಅಯ್ಯಾ! ಪಾಂಡವರೊಂದಿಗೆ ನೀನು ಒಂದಾಗು ಎಂದೇ ನಿನ್ನ ತಂದೆಯು ಬಯಸುತ್ತಾನೆ. ಕುರುಶ್ರೇಷ್ಠ! ಅಯ್ಯಾ! ಅಮಾತ್ಯರೊಂದಿಗೆ ನೀನೂ ಕೂಡ ಅದನ್ನೇ ಬಯಸಬೇಕು.

05122020a ಶ್ರುತ್ವಾ ಯಃ ಸುಹೃದಾಂ ಶಾಸ್ತ್ರಂ ಮರ್ತ್ಯೋ ನ ಪ್ರತಿಪದ್ಯತೇ|

05122020c ವಿಪಾಕಾಂತೇ ದಹತ್ಯೇನಂ ಕಿಂಪಾಕಮಿವ ಭಕ್ಷಿತಂ||

ಸುಹೃದಯರ ಮಾತನ್ನು ಕೇಳಿ ಅದರಂತೆ ನಡೆದುಕೊಳ್ಳದೇ ಇದ್ದರೆ ಅದು ನಂತರ ಅವನನ್ನು ಕಿಂಪಾಕವನ್ನು ತಿಂದಿದ್ದಾನೋ ಎನ್ನುವಂತೆ ಸುಡುತ್ತದೆ.

05122021a ಯಸ್ತು ನಿಃಶ್ರೇಯಸಂ ವಾಕ್ಯಂ ಮೋಹಾನ್ನ ಪ್ರತಿಪದ್ಯತೇ|

05122021c ಸ ದೀರ್ಘಸೂತ್ರೋ ಹೀನಾರ್ಥಃ ಪಶ್ಚಾತ್ತಾಪೇನ ಯುಜ್ಯತೇ||

ಶ್ರೇಯಸ್ಕರವಾದ ಮಾತನ್ನು ಮೋಹದಿಂದ ಅನುಸರಿಸದೇ ಇರುವ ದೀರ್ಘಸೂತ್ರನು ಅವನ ಉದ್ದೇಶವನ್ನು ಕಳೆದುಕೊಂಡು ಪಶ್ಚಾತ್ತಾಪದಿಂದ ಬಳಲುತ್ತಾನೆ.

05122022a ಯಸ್ತು ನಿಃಶ್ರೇಯಸಂ ಶ್ರುತ್ವಾ ಪ್ರಾಪ್ತಮೇವಾಭಿಪದ್ಯತೇ|

05122022c ಆತ್ಮನೋ ಮತಮುತ್ಸೃಜ್ಯ ಸ ಲೋಕೇ ಸುಖಮೇಧತೇ||

ಆದರೆ ಯಾರು ತನ್ನ ಅಭಿಪ್ರಾಯಗಳನ್ನು ಬದಿಗೊತ್ತಿ ಶ್ರೇಯಸ್ಕರವಾದುದನ್ನು ಕೇಳಿ ಅದರಂತೆ ನಡೆದುಕೊಳ್ಳುತ್ತಾನೋ ಅವನು ಲೋಕದಲ್ಲಿ ಸುಖವನ್ನು ಪಡೆಯುತ್ತಾನೆ.

05122023a ಯೋಽರ್ಥಕಾಮಸ್ಯ ವಚನಂ ಪ್ರಾತಿಕೂಲ್ಯಾನ್ನ ಮೃಷ್ಯತೇ|

05122023c ಶೃಣೋತಿ ಪ್ರತಿಕೂಲಾನಿ ದ್ವಿಷತಾಂ ವಶಮೇತಿ ಸಃ||

ಯಾರು ಅವನಿಗೆ ಉತ್ತಮವನ್ನು ಬಯಸುವವರ ಮಾತನ್ನು ತನಗೆ ಪ್ರತಿಕೂಲವೆಂದು ಸ್ವೀಕರಿಸುವುದಿಲ್ಲವೋ ಮತ್ತು ಅವನಿಗೆ ಪ್ರತಿಕೂಲರಾದವನ್ನು ಕೇಳುತ್ತಾನೋ ಅವನು ಶತ್ರುಗಳ ವಶವಾಗುತ್ತಾನೆ.

05122024a ಸತಾಂ ಮತಮತಿಕ್ರಮ್ಯ ಯೋಽಸತಾಂ ವರ್ತತೇ ಮತೇ|

05122024c ಶೋಚಂತೇ ವ್ಯಸನೇ ತಸ್ಯ ಸುಹೃದೋ ನಚಿರಾದಿವ||

ಒಳ್ಳೆಯವರ ಮತವನ್ನು ಉಲ್ಲಂಘಿಸಿ ಒಳ್ಳೆಯವರಲ್ಲದವರ ಮತದಂತೆ ನಡೆದುಕೊಳ್ಳುವವನ ಸುಹೃದಯಿಗಳು ಸ್ವಲ್ಪವೇ ಸಮಯದಲ್ಲಿ ಅವನ ಕುರಿತು ಚಿಂತಿಸಿ ಶೋಕಿಸುತ್ತಾರೆ.

05122025a ಮುಖ್ಯಾನಮಾತ್ಯಾನುತ್ಸೃಜ್ಯ ಯೋ ನಿಹೀನಾನ್ನಿಷೇವತೇ|

05122025c ಸ ಘೋರಾಮಾಪದಂ ಪ್ರಾಪ್ಯ ನೋತ್ತಾರಮಧಿಗಚ್ಚತಿ||

ಯಾರು ಮುಖ್ಯ ಅಮಾತ್ಯರನ್ನು ದೂರವಿಟ್ಟು ಕೀಳುಜನರನ್ನು ಕೇಳುತ್ತಾನೋ ಅವನು ಘೋರ ಆಪತ್ತನ್ನು ಹೊಂದಿ ಏಳಿಗೆಯ ಭರವಸೆಯನ್ನೇ ಕಳೆದುಕೊಳ್ಳುತ್ತಾನೆ.

05122026a ಯೋಽಸತ್ಸೇವೀ ವೃಥಾಚಾರೋ ನ ಶ್ರೋತಾ ಸುಹೃದಾಂ ಸದಾ|

05122026c ಪರಾನ್ವೃಣೀತೇ ಸ್ವಾನ್ದ್ವೇಷ್ಟಿ ತಂ ಗೌಃ ಶಪತಿ ಭಾರತ||

ಭಾರತ! ಯಾರು ದುಷ್ಟರನ್ನು ಕೇಳುತ್ತಾರೋ, ಸುಹೃದರನ್ನು ಸದಾ ಕೇಳುವುದಿಲ್ಲವೋ, ಮತ್ತು ತನ್ನವರನ್ನು ದ್ವೇಷಿಸಿ ಪರರನ್ನು ಆರಿಸಿಕೊಳ್ಳುತ್ತಾರೋ ಅವರನ್ನು ಭೂಮಿಯು ಶಪಿಸುತ್ತಾಳೆ.

05122027a ಸ ತ್ವಂ ವಿರುಧ್ಯ ತೈರ್ವೀರೈರನ್ಯೇಭ್ಯಸ್ತ್ರಾಣಮಿಚ್ಚಸಿ|

05122027c ಅಶಿಷ್ಟೇಭ್ಯೋಽಸಮರ್ಥೇಭ್ಯೋ ಮೂಢೇಭ್ಯೋ ಭರತರ್ಷಭ||

ಭರತರ್ಷಭ! ನೀನು ಆ ವೀರರನ್ನು ವಿರೋಧಿಸಿ ಅನ್ಯರ - ಅಶಿಷ್ಟ, ಅಸಭ್ಯ ಮತ್ತು ಮೂಢರ - ಸಹಾಯವನ್ನು ಪಡೆಯಲು ಬಯಸುತ್ತಿದ್ದೀಯೆ!

05122028a ಕೋ ಹಿ ಶಕ್ರಸಮಾಂ ಜ್ಞಾತೀನತಿಕ್ರಮ್ಯ ಮಹಾರಥಾನ್|

05122028c ಅನ್ಯೇಭ್ಯಸ್ತ್ರಾಣಮಾಶಂಸೇತ್ತ್ವದನ್ಯೋ ಭುವಿ ಮಾನವಃ||

ನಿನ್ನನ್ನು ಬಿಟ್ಟು ಬೇರೆ ಯಾವ ಮಾನವನು ತಾನೇ ಈ ಭೂಮಿಯಲ್ಲಿ ಶಕ್ರಸಮರಾದ ಮಹಾರಥಿ ದಯಾದಿಗಳನ್ನು ಅತಿಕ್ರಮಿಸಿ ಅನ್ಯರ ಸಹಾಯ ಮತ್ತು ನೆರಳನ್ನು ಬಯಸುತ್ತಾನೆ?

05122029a ಜನ್ಮಪ್ರಭೃತಿ ಕೌಂತೇಯಾ ನಿತ್ಯಂ ವಿನಿಕೃತಾಸ್ತ್ವಯಾ|

05122029c ನ ಚ ತೇ ಜಾತು ಕುಪ್ಯಂತಿ ಧರ್ಮಾತ್ಮಾನೋ ಹಿ ಪಾಂಡವಾಃ||

ಹುಟ್ಟಿದಾಗಿನಿಂದ ನಿತ್ಯವೂ ನೀನು ಕೌಂತೇಯರನ್ನು ಕಾಡಿಸುತ್ತಿದ್ದೀಯೆ. ಧರ್ಮಾತ್ಮರಾಗಿರುವುದರಿಂದ ಪಾಂಡವರು ನಿನ್ನ ಮೇಲೆ ಕೋಪಗೊಂಡಿಲ್ಲ.

05122030a ಮಿಥ್ಯಾಪ್ರಚರಿತಾಸ್ತಾತ ಜನ್ಮಪ್ರಭೃತಿ ಪಾಂಡವಾಃ|

05122030c ತ್ವಯಿ ಸಂಯಂ ಮಹಾಬಾಹೋ ಪ್ರತಿಪನ್ನಾ ಯಶಸ್ವಿನಃ||

ಅಯ್ಯಾ ಮಹಾಬಾಹೋ! ಹುಟ್ಟಿದಾಗಿನಿಂದ ಪಾಂಡವರೊಂದಿಗೆ ನೀನು ಮೋಸದಿಂದ ನಡೆದುಕೊಂಡಿದ್ದರೂ ಆ ಯಶಸ್ವಿಗಳು ನಿನ್ನೊಡನೆ ಸಂಯಮದಿಂದ ನಡೆದುಕೊಂಡಿದ್ದಾರೆ.

05122031a ತ್ವಯಾಪಿ ಪ್ರತಿಪತ್ತವ್ಯಂ ತಥೈವ ಭರತರ್ಷಭ|

05122031c ಸ್ವೇಷು ಬಂಧುಷು ಮುಖ್ಯೇಷು ಮಾ ಮನ್ಯುವಶಮನ್ವಗಾಃ||

ಭರತರ್ಷಭ! ನೀನೂ ಕೂಡ ಆ ನಿನ್ನ ಮುಖ್ಯ ಬಂಧುಗಳೊಡನೆ ಹಾಗೆಯೇ ವ್ಯವಹರಿಸಬೇಕು. ಸಿಟ್ಟಿನ ವಶದಲ್ಲಿ ಬರಬೇಡ!

05122032a ತ್ರಿವರ್ಗಯುಕ್ತಾ ಪ್ರಾಜ್ಞಾನಾಮಾರಂಭಾ ಭರತರ್ಷಭ|

05122032c ಧರ್ಮಾರ್ಥಾವನುರುಧ್ಯಂತೇ ತ್ರಿವರ್ಗಾಸಂಭವೇ ನರಾಃ||

ಭರತರ್ಷಭ! ಪ್ರಾಜ್ಞರ ಕೆಲಸಗಳು ತ್ರಿವರ್ಗಯುಕ್ತವಾಗಿರುತ್ತವೆ - ಧರ್ಮ, ಅರ್ಥ ಮತ್ತು ಕಾಮ. ಈ ಮೂರೂ ಅಸಂಭವವಾಗಿದ್ದರೆ ನರರು ಧರ್ಮ-ಅರ್ಥಗಳನ್ನಾದರೂ ಅನುಸರಿಸುತ್ತಾರೆ.

05122033a ಪೃಥಕ್ತು ವಿನಿವಿಷ್ಟಾನಾಂ ಧರ್ಮಂ ಧೀರೋಽನುರುಧ್ಯತೇ|

05122033c ಮಧ್ಯಮೋಽರ್ಥಂ ಕಲಿಂ ಬಾಲಃ ಕಾಮಮೇವಾನುರುಧ್ಯತೇ||

ಈ ಮೂರನ್ನೂ ಬೇರೆ ಬೇರೆಯಾಗಿ ಸಾಧಿಸುವವರನ್ನು ನೋಡಿದರೆ ಧೀರರು ಧರ್ಮವನ್ನು ಅನುಸರಿಸುತ್ತಾರೆ, ಮಧ್ಯಮರು ಅರ್ಥವನ್ನು, ಮತ್ತು ಕೀಳು ಜನರು ಬಾಲಕರಂತೆ ಕಾಮವನ್ನೇ ಅನುಸರಿಸುತ್ತಾರೆ.

05122034a ಇಂದ್ರಿಯೈಃ ಪ್ರಸೃತೋ ಲೋಭಾದ್ಧರ್ಮಂ ವಿಪ್ರಜಹಾತಿ ಯಃ|

05122034c ಕಾಮಾರ್ಥಾವನುಪಾಯೇನ ಲಿಪ್ಸಮಾನೋ ವಿನಶ್ಯತಿ||

ಲೋಭದಿಂದ ಧರ್ಮವನ್ನು ತೊರೆದು ಕಾಮ-ಅರ್ಥಗಳ ಹಿಂದೆ ಮಾತ್ರ ಹೋಗುವವನನ್ನು ಇಂದ್ರಿಯಗಳು ನಾಶಪಡಿಸುತ್ತವೆ.

05122035a ಕಾಮಾರ್ಥೌ ಲಿಪ್ಸಮಾನಸ್ತು ಧರ್ಮಮೇವಾದಿತಶ್ಚರೇತ್|

05122035c ನ ಹಿ ಧರ್ಮಾದಪೈತ್ಯರ್ಥಃ ಕಾಮೋ ವಾಪಿ ಕದಾ ಚನ||

ಕಾಮಾರ್ಥಗಳ ಬಗ್ಗೆ ಮಾತನಾಡುವವನೂ ಧರ್ಮವನ್ನೇ ಆಚರಿಸಬೇಕು. ಏಕೆಂದರೆ ಅರ್ಥವಾಗಲೀ ಕಾಮವಾಗಲೀ ಎಂದೂ ಧರ್ಮದಿಂದ ಬೇರೆಯಾಗಿರುವುದಿಲ್ಲ.

05122036a ಉಪಾಯಂ ಧರ್ಮಮೇವಾಹುಸ್ತ್ರಿವರ್ಗಸ್ಯ ವಿಶಾಂ ಪತೇ|

05122036c ಲಿಪ್ಸಮಾನೋ ಹಿ ತೇನಾಶು ಕಕ್ಷೇಽಗ್ನಿರಿವ ವರ್ಧತೇ||

ವಿಶಾಂಪತೇ! ಧರ್ಮವೇ ತ್ರಿವರ್ಗದ ಉಪಾಯವೆಂದು ಹೇಳುತ್ತಾರೆ. ಏಕೆಂದರೆ ಅದಕ್ಕೆ ತಗಲಿದವನು ಒಣ ಹುಲ್ಲಿಗೆ ತಗಲಿದ ಬೆಂಕಿಯಂತೆ ವೃದ್ಧಿಯಾಗುತ್ತಾನೆ.

05122037a ಸ ತ್ವಂ ತಾತಾನುಪಾಯೇನ ಲಿಪ್ಸಸೇ ಭರತರ್ಷಭ|

05122037c ಆಧಿರಾಜ್ಯಂ ಮಹದ್ದೀಪ್ತಂ ಪ್ರಥಿತಂ ಸರ್ವರಾಜಸು||

ಅಯ್ಯಾ ಭರತರ್ಷಭ! ಸರ್ವರಾಜರಲ್ಲಿ ಪ್ರಥಿತವಾಗಿರುವ, ಹೆಚ್ಚಾಗಿ ಬೆಳಗುತ್ತಿರುವ ಈ ಅಧಿರಾಜ್ಯವನ್ನು ಅನುಪಾಯದಿಂದ ಆಸೆ ಪಡುತ್ತಿರುವೆ.

05122038a ಆತ್ಮಾನಂ ತಕ್ಷತಿ ಹ್ಯೇಷ ವನಂ ಪರಶುನಾ ಯಥಾ|

05122038c ಯಃ ಸಮ್ಯಗ್ವರ್ತಮಾನೇಷು ಮಿಥ್ಯಾ ರಾಜನ್ಪ್ರವರ್ತತೇ||

ರಾಜನ್! ಯಾರು ಉತ್ತಮವಾಗಿ ನಡೆದುಕೊಳ್ಳುವವರೊಡನೆ ಮೋಸದಿಂದ ವ್ಯವಹರಿಸುತ್ತಾರೋ ಅವರು ವನವನ್ನು ಕೊಡಲಿಯಿಂದ ಹೇಗೋ ಹಾಗೆ ತಮ್ಮನ್ನು ತಾವೇ ಕಡಿದುಕೊಳ್ಳುತ್ತಾರೆ.

05122039a ನ ತಸ್ಯ ಹಿ ಮತಿಂ ಚಿಂದ್ಯಾದ್ಯಸ್ಯ ನೇಚ್ಚೇತ್ಪರಾಭವಂ|

05122039c ಅವಿಚ್ಚಿನ್ನಸ್ಯ ಧೀರಸ್ಯ ಕಲ್ಯಾಣೇ ಧೀಯತೇ ಮತಿಃ||

ಸೋಲನ್ನು ಬಯಸದಿರುವವನು ಅವನ ಬುದ್ಧಿಯಲ್ಲಿ ಒಡಕನ್ನು ತಂದುಕೊಳ್ಳಬಾರದು. ಏಕೆಂದರೆ ಅವಿಚ್ಛಿನ್ನ ಬುದ್ಧಿಯುಳ್ಳವನಿಗೆ ಕಲ್ಯಾಣವಾಗುತ್ತದೆ ಎಂದು ತಿಳಿದವರ ಅಭಿಪ್ರಾಯ.

05122040a ತ್ಯಕ್ತಾತ್ಮಾನಂ ನ ಬಾಧೇತ ತ್ರಿಷು ಲೋಕೇಷು ಭಾರತ|

05122040c ಅಪ್ಯನ್ಯಂ ಪ್ರಾಕೃತಂ ಕಿಂ ಚಿತ್ಕಿಮು ತಾನ್ಪಾಂಡವರ್ಷಭಾನ್||

ಭಾರತ! ತಮ್ಮ ಆತ್ಮವನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವವರು ಮೂರು ಲೋಕಗಳಲ್ಲಿ ಯಾವುದನ್ನೂ ಅತಿ ಕೀಳೆನಿಸಿದುದನ್ನೂ ತಿರಸ್ಕರಿಸುವುದಿಲ್ಲ. ಇನ್ನು ಆ ಭರತರ್ಷಭರನ್ನೇನು?

05122041a ಅಮರ್ಷವಶಮಾಪನ್ನೋ ನ ಕಿಂ ಚಿದ್ಬುಧ್ಯತೇ ನರಃ|

05122041c ಚಿದ್ಯತೇ ಹ್ಯಾತತಂ ಸರ್ವಂ ಪ್ರಮಾಣಂ ಪಶ್ಯ ಭಾರತ||

ಕೋಪಕ್ಕೆ ವಶನಾಗುವವನು ಸರಿಯಾವುದು ಕೆಟ್ಟದ್ದ್ಯಾವುದು ಎನ್ನುವ ಬುದ್ಧಿಯನ್ನು ಕಳೆದುಕೊಳ್ಳುತ್ತಾನೆ. ಭಾರತ! ಇವೆಲ್ಲವನ್ನೂ ಕಿತ್ತು ಹಾಕಬೇಕು. ಇದಕ್ಕೆ ಪ್ರಮಾಣವನ್ನು ನೋಡು.

05122042a ಶ್ರೇಯಸ್ತೇ ದುರ್ಜನಾತ್ತಾತ ಪಾಂಡವೈಃ ಸಹ ಸಂಗಮಃ|

05122042c ತೈರ್ಹಿ ಸಂಪ್ರೀಯಮಾಣಸ್ತ್ವಂ ಸರ್ವಾನ್ಕಾಮಾನವಾಪ್ಸ್ಯಸಿ||

ಈಗ ಅಯ್ಯಾ! ದುರ್ಜನರೊಂದಿಗಿಂತ ಪಾಂಡವರೊಡನೆ ಸೇರಿಕೊಳ್ಳುವುದು ನಿನ್ನ ಶ್ರೇಯಸ್ಸಿನಲ್ಲಿದೆ. ಅವರೊಂದಿಗೆ ಪ್ರೀತಿಯಿಂದಿದ್ದರೆ ನಿನ್ನ ಎಲ್ಲ ಕಾಮನೆಗಳನ್ನೂ ಪೂರೈಸಿಕೊಳ್ಳುವೆ.

05122043a ಪಾಂಡವೈರ್ನಿರ್ಜಿತಾಂ ಭೂಮಿಂ ಭುಂಜಾನೋ ರಾಜಸತ್ತಮ|

05122043c ಪಾಂಡವಾನ್ಪೃಷ್ಠತಃ ಕೃತ್ವಾ ತ್ರಾಣಮಾಶಂಸಸೇಽನ್ಯತಃ||

ರಾಜಸತ್ತಮ! ಪಾಂಡವರು ಗೆದ್ದಿರುವ ಈ ಭೂಮಿಯನ್ನು ಭೋಗಿಸುವಾಗ ನೀನು ಪಾಂಡವರನ್ನು ಹಿಂದೆ ಹಾಕಿ ಅನ್ಯರ ಬೆಂಬಲವನ್ನು ಕೇಳುತ್ತಿರುವೆಯಲ್ಲ!

05122044a ದುಃಶಾಸನೇ ದುರ್ವಿಷಹೇ ಕರ್ಣೇ ಚಾಪಿ ಸಸೌಬಲೇ|

05122044c ಏತೇಷ್ವೈಶ್ವರ್ಯಮಾಧಾಯ ಭೂತಿಮಿಚ್ಚಸಿ ಭಾರತ||

ಭಾರತ! ದುಃಶಾಸನ, ದುರ್ವಿಷಹ, ಕರ್ಣ-ಸೌಬಲರಿಗೆ ಈ ಐಶ್ವರ್ಯವನ್ನು ಕೊಟ್ಟು ಇನ್ನೂ ಬೆಳೆಯಲು ಇಚ್ಛಿಸುತ್ತಿರುವೆ!

05122045a ನ ಚೈತೇ ತವ ಪರ್ಯಾಪ್ತಾ ಜ್ಞಾನೇ ಧರ್ಮಾರ್ಥಯೋಸ್ತಥಾ|

05122045c ವಿಕ್ರಮೇ ಚಾಪ್ಯಪರ್ಯಾಪ್ತಾಃ ಪಾಂಡವಾನ್ಪ್ರತಿ ಭಾರತ||

ಭಾರತ! ನಿನಗೂ ಪರ್ಯಾಪ್ತರಾಗಿಲ್ಲದೇ ಇರುವ ಇವರು ಜ್ಞಾನದಲ್ಲಿ, ಧರ್ಮ-ಅರ್ಥಗಳಲ್ಲಿ, ವಿಕ್ರಮದಲ್ಲಿ ಪಾಂಡವರಿಗಿಂತಲೂ ಅಪರ್ಯಾಪ್ತರು.

05122046a ನ ಹೀಮೇ ಸರ್ವರಾಜಾನಃ ಪರ್ಯಾಪ್ತಾಃ ಸಹಿತಾಸ್ತ್ವಯಾ|

05122046c ಕ್ರುದ್ಧಸ್ಯ ಭೀಮಸೇನಸ್ಯ ಪ್ರೇಕ್ಷಿತುಂ ಮುಖಮಾಹವೇ||

ನಿನ್ನನ್ನೂ ಸೇರಿ ಈ ಎಲ್ಲ ರಾಜರೂ ಯುದ್ಧದಲ್ಲಿ ಕ್ರುದ್ಧನಾಗಿರುವ ಭೀಮಸೇನನ ಮುಖವನ್ನು ನೋಡಲೂ ಸಮರ್ಥರಿಲ್ಲ.

05122047a ಇದಂ ಸಮ್ನಿಹಿತಂ ತಾತ ಸಮಗ್ರಂ ಪಾರ್ಥಿವಂ ಬಲಂ|

05122047c ಅಯಂ ಭೀಷ್ಮಸ್ತಥಾ ದ್ರೋಣಃ ಕರ್ಣಶ್ಚಾಯಂ ತಥಾ ಕೃಪಃ||

05122048a ಭೂರಿಶ್ರವಾಃ ಸೌಮದತ್ತಿರಶ್ವತ್ಥಾಮಾ ಜಯದ್ರಥಃ|

05122048c ಅಶಕ್ತಾಃ ಸರ್ವ ಏವೈತೇ ಪ್ರತಿಯೋದ್ಧುಂ ಧನಂಜಯಂ||

ಅಯ್ಯಾ! ಈ ಸಮಗ್ರ ಪಾರ್ಥಿವ ಬಲವೂ ನಿನ್ನಲ್ಲಿದೆ. ಇಲ್ಲಿ ಭೀಷ್ಮನಿದ್ದಾನೆ. ದ್ರೋಣನಿದ್ದಾನೆ. ಹಾಗೆಯೇ ಕರ್ಣನೂ ಇದ್ದಾನೆ. ಸೌಮದತ್ತಿ ಭೂರಿಶ್ರವ, ಅಶ್ವತ್ಥಾಮಾ ಮತ್ತು ಜಯದ್ರಥರಿದ್ದಾರೆ. ಆದರೆ ಇವರೆಲ್ಲರೂ ಧನಂಜಯನ ವಿರುದ್ಧ ಹೋರಾಡಲು ಅಶಕ್ತರು.

05122049a ಅಜೇಯೋ ಹ್ಯರ್ಜುನಃ ಕ್ರುದ್ಧಃ ಸರ್ವೈರಪಿ ಸುರಾಸುರೈಃ|

05122049c ಮಾನುಷೈರಪಿ ಗಂಧರ್ವೈರ್ಮಾ ಯುದ್ಧೇ ಚೇತ ಆಧಿಥಾಃ||

ಏಕೆಂದರೆ ಕೃದ್ಧನಾದ ಅರ್ಜುನನು ಎಲ್ಲರಿಗೂ ಅಜೇಯ. ಸುರಾಸುರರಿಗೂ, ಮನುಷ್ಯರಿಗೂ, ಗಂಧರ್ವರಿಗೂ ಅವನನ್ನು ಮೀರಿಸಲು ಸಾಧ್ಯವಿಲ್ಲ. ಯುದ್ಧದಲ್ಲಿರುವ ಮನಸ್ಸನ್ನು ತೆಗೆದುಹಾಕು.

05122050a ದೃಶ್ಯತಾಂ ವಾ ಪುಮಾನ್ಕಶ್ಚಿತ್ಸಮಗ್ರೇ ಪಾರ್ಥಿವೇ ಬಲೇ|

05122050c ಯೋಽರ್ಜುನಂ ಸಮರೇ ಪ್ರಾಪ್ಯ ಸ್ವಸ್ತಿಮಾನಾವ್ರಜೇದ್ಗೃಹಾನ್||

ಸಮರದಲ್ಲಿ ಅರ್ಜುನನನ್ನು ಎದುರಿಸಿ ಒಳ್ಳೆಯದಾಗಿ ಮನೆಗೆ ಹಿಂದಿರುಗಿರುವ ಯಾರಾದರೂ ಬಲಶಾಲೀ ಪುರುಷ ಪಾರ್ಥಿವನನ್ನು ನೋಡಿದ್ದೇವೆಯೇ?

05122051a ಕಿಂ ತೇ ಜನಕ್ಷಯೇಣೇಹ ಕೃತೇನ ಭರತರ್ಷಭ|

05122051c ಯಸ್ಮಿಂ ಜಿತೇ ಜಿತಂ ತೇ ಸ್ಯಾತ್ಪುಮಾನೇಕಃ ಸ ದೃಶ್ಯತಾಂ||

ಭರತರ್ಷಭ! ಜನಕ್ಷಯದಲ್ಲಿ ಪ್ರಯೋಜನವೇನಿದೆ? ಅವನನ್ನು ಗೆದ್ದು ನಿನಗೆ ಗೆಲುವನ್ನು ತರುವ ಯಾರಾದರೂ ಒಬ್ಬ ಪುರುಷನು ನಿನಗೆ ತೋರಿದರೆ ಹೇಳು.

05122052a ಯಃ ಸ ದೇವಾನ್ಸಗಂಧರ್ವಾನ್ಸಯಕ್ಷಾಸುರಪನ್ನಗಾನ್|

05122052c ಅಜಯತ್ಖಾಂಡವಪ್ರಸ್ಥೇ ಕಸ್ತಂ ಯುಧ್ಯೇತ ಮಾನವಃ||

ಖಾಂಡವಪ್ರಸ್ಥದಲ್ಲಿ ಗಂಧರ್ವರೊಂದಿಗೆ, ಯಕ್ಷ-ಅಸುರ-ಪನ್ನಗರೊಂದಿಗೆ ಬಂದಿದ್ದ ದೇವತೆಗಳನ್ನು ಸೋಲಿಸಿದ ಅವನೊಡನೆ ಯಾವ ಮಾನವನು ತಾನೇ ಯುದ್ಧಮಾಡುತ್ತಾನೆ?

05122053a ತಥಾ ವಿರಾಟನಗರೇ ಶ್ರೂಯತೇ ಮಹದದ್ಭುತಂ|

05122053c ಏಕಸ್ಯ ಚ ಬಹೂನಾಂ ಚ ಪರ್ಯಾಪ್ತಂ ತನ್ನಿದರ್ಶನಂ||

ವಿರಾಟನಗರದಲ್ಲಿ ನಡೆದ ಮಹದದ್ಭುತವನ್ನು ಕೇಳಿದ್ದೇವಲ್ಲ! ಒಬ್ಬನೇ ಬಹುಸೇನೆಗೆ ಪರ್ಯಾಪ್ತನಾದನು. ಅದೇ ನಿದರ್ಶನ.

05122054a ತಮಜೇಯಮನಾಧೃಷ್ಯಂ ವಿಜೇತುಂ ಜಿಷ್ಣುಮಚ್ಯುತಂ|

05122054c ಆಶಂಸಸೀಹ ಸಮರೇ ವೀರಮರ್ಜುನಮೂರ್ಜಿತಂ||

ನೀನು ಅಜೇಯನೂ, ಅನಾಧೃಷ್ಯನೂ ಆದ ಜಿಷ್ಣು ಅಚ್ಯುತ ವೀರ ಅರ್ಜುನನನ್ನು ಸಮರದಲ್ಲಿ ಗೆಲ್ಲುವ ಭರವಸೆಯನ್ನಿಟ್ಟುಕೊಂಡಿರುವೆಯಲ್ಲ!

05122055a ಮದ್ದ್ವಿತೀಯಂ ಪುನಃ ಪಾರ್ಥಂ ಕಃ ಪ್ರಾರ್ಥಯಿತುಮರ್ಹತಿ|

05122055c ಯುದ್ಧೇ ಪ್ರತೀಪಮಾಯಾಂತಮಪಿ ಸಾಕ್ಷಾತ್ಪುರಂದರಃ||

ಪುನಃ ನನ್ನ ಸಹಾಯದಿಂದ ಬರುವ ಪಾರ್ಥನನ್ನು ಯಾರು ಎದುರಿಸಲು ಅರ್ಹರಾಗಿದ್ದಾರೆ? ಸಾಕ್ಷಾತ್ ಪುರಂದರನು ಯುದ್ಧದಲ್ಲಿ ಎದುರಿಸಬಲ್ಲನೇ?

05122056a ಬಾಹುಭ್ಯಾಮುದ್ಧರೇದ್ಭೂಮಿಂ ದಹೇತ್ಕ್ರುದ್ಧ ಇಮಾಃ ಪ್ರಜಾಃ|

05122056c ಪಾತಯೇತ್ತ್ರಿದಿವಾದ್ದೇವಾನ್ಯೋಽರ್ಜುನಂ ಸಮರೇ ಜಯೇತ್||

ಅರ್ಜುನನನ್ನು ಸಮರದಲ್ಲಿ ಜಯಿಸುವವನು ತನ್ನ ಬಾಹುಗಳಿಂದ ಭೂಮಿಯನ್ನು ಎತ್ತಿ ಹಿಡಿಯಬಲ್ಲನು, ಕ್ರೋಧದಿಂದ ಈ ಪ್ರಜೆಗಳನ್ನು ಸುಟ್ಟುಹಾಕಬಲ್ಲನು ಮತ್ತು ದಿವದಿಂದ ದೇವತೆಗಳನ್ನು ಬೀಳಿಸಬಲ್ಲನು.

05122057a ಪಶ್ಯ ಪುತ್ರಾಂಸ್ತಥಾ ಭ್ರಾತೄನ್ ಜ್ಞಾತೀನ್ಸಂಬಂಧಿನಸ್ತಥಾ|

05122057c ತ್ವತ್ಕೃತೇ ನ ವಿನಶ್ಯೇಯುರೇತೇ ಭರತಸತ್ತಮ||

ಭರತಸತ್ತಮ! ನಿನ್ನಿಂದಾಗಿ ನಿನ್ನ ಈ ಪುತ್ರರು, ಸಹೋದರರು, ಕುಲಬಾಂಧವರು, ಸಂಬಂಧಿಗಳೂ ವಿನಾಶಹೊಂದದಂತೆ ನೋಡಿಕೋ!

05122058a ಅಸ್ತು ಶೇಷಂ ಕೌರವಾಣಾಂ ಮಾ ಪರಾಭೂದಿದಂ ಕುಲಂ|

05122058c ಕುಲಘ್ನ ಇತಿ ನೋಚ್ಯೇಥಾ ನಷ್ಟಕೀರ್ತಿರ್ನರಾಧಿಪ||

ನರಾಧಿಪ! ಕೌರವರ ಈ ಕುಲವು ನಿರ್ವಿಶೇಷವಾಗದಿರಲಿ ಅಥವಾ ಕ್ಷೀಣಿಸದಿರಲಿ! ನಿನ್ನನ್ನು ಕುಲಘ್ನ ಮತ್ತು ಕೀರ್ತಿನಾಶಕನೆಂದು ಕರೆಯದಿರಲಿ.

05122059a ತ್ವಾಮೇವ ಸ್ಥಾಪಯಿಷ್ಯಂತಿ ಯೌವರಾಜ್ಯೇ ಮಹಾರಥಾಃ|

05122059c ಮಹಾರಾಜ್ಯೇ ಚ ಪಿತರಂ ಧೃತರಾಷ್ಟ್ರಂ ಜನೇಶ್ವರಂ||

ಆ ಮಹಾರಥಿಗಳು ನಿನ್ನನ್ನೇ ಯುವರಾಜನನ್ನಾಗಿ ಸ್ಥಾಪಿಸುತ್ತಾರೆ. ಮತ್ತು ನಿನ್ನ ತಂದೆ ಧೃತರಾಷ್ಟ್ರನು ಈ ಮಹಾರಾಜ್ಯದ ಜನೇಶ್ವರನಾಗಿರುತ್ತಾನೆ.

05122060a ಮಾ ತಾತ ಶ್ರಿಯಮಾಯಾಂತೀಮವಮಂಸ್ಥಾಃ ಸಮುದ್ಯತಾಂ|

05122060c ಅರ್ಧಂ ಪ್ರದಾಯ ಪಾರ್ಥೇಭ್ಯೋ ಮಹತೀಂ ಶ್ರಿಯಮಾಪ್ಸ್ಯಸಿ||

ಅಯ್ಯಾ! ನಿನಗಾಗಿ ಕಾದುಕೊಂಡಿರುವ, ಖಂಡಿತವಾಗಿಯೂ ಬರಲಿರುವ ಶ್ರೀಯನ್ನು ಅವಮಾನಿಸಬೇಡ! ಪಾರ್ಥರಿಗೆ ಅರ್ಧವನ್ನು ಕೊಟ್ಟು ಮಹಾ ಶ್ರೀಯನ್ನು ಪಡೆಯುತ್ತೀಯೆ.

05122061a ಪಾಂಡವೈಃ ಸಂಶಮಂ ಕೃತ್ವಾ ಕೃತ್ವಾ ಚ ಸುಹೃದಾಂ ವಚಃ|

05122061c ಸಂಪ್ರೀಯಮಾಣೋ ಮಿತ್ರೈಶ್ಚ ಚಿರಂ ಭದ್ರಾಣ್ಯವಾಪ್ಸ್ಯಸಿ||

ಪಾಂಡವರೊಂದಿಗೆ ಶಾಂತಿಯನ್ನು ಮಾಡಿಕೊಂಡು ಸುಹೃದಯರ ಮಾತಿನಂತೆ ಮಾಡಿ, ಮಿತ್ರರಿಗೂ ಸಂತೋಷ ತರುತ್ತೀಯೆ ಮತ್ತು ಚಿರವಾದ ರಕ್ಷಣೆಯನ್ನು ಪಡೆಯುತ್ತೀಯೆ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಭಗವದ್ವಾಕ್ಯೇ ದ್ವಿವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಭಗವದ್ವಾಕ್ಯದಲ್ಲಿ ನೂರಾಇಪ್ಪತ್ತೆರಡನೆಯ ಅಧ್ಯಾಯವು.

Image result for indian motifs

Comments are closed.