Stri Parva: Chapter 27

||ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸ್ತ್ರೀ ಪರ್ವ: ಜಲಪ್ರದಾನಿಕ ಪರ್ವ

೨೭

11027001 ವೈಶಂಪಾಯನ ಉವಾಚ

11027001a ತೇ ಸಮಾಸಾದ್ಯ ಗಂಗಾಂ ತು ಶಿವಾಂ ಪುಣ್ಯಜನೋಚಿತಾಮ್|

11027001c ಹ್ರದಿನೀಂ ವಪ್ರಸಂಪನ್ನಾಂ ಮಹಾನೂಪಾಂ ಮಹಾವನಾಮ್||

ವೈಶಂಪಾಯನನು ಹೇಳಿದನು: “ಪುಣ್ಯಜನರಿಗೆ ಉಚಿತವಾದ, ಅನೇಕ ಮಡುಗಳಿದ್ದ, ಮಹಾರಣ್ಯಗಳಿಂದ ಕೂಡಿದ್ದ ಪ್ರಸನ್ನವೂ ವಿಶಾಲವೂ ಆದ ಮಂಗಳಕರ ಗಂಗೆಯನ್ನು ಅವರು ತಲುಪಿದರು.

11027002a ಭೂಷಣಾನ್ಯುತ್ತರೀಯಾಣಿ ವೇಷ್ಟನಾನ್ಯವಮುಚ್ಯ ಚ|

11027002c ತತಃ ಪಿತೄಣಾಂ ಪೌತ್ರಾಣಾಂ ಭ್ರಾತೄಣಾಂ ಸ್ವಜನಸ್ಯ ಚ||

11027003a ಪುತ್ರಾಣಾಮಾರ್ಯಕಾಣಾಂ ಚ ಪತೀನಾಂ ಚ ಕುರುಸ್ತ್ರಿಯಃ|

11027003c ಉದಕಂ ಚಕ್ರಿರೇ ಸರ್ವಾ ರುದಂತ್ಯೋ ಭೃಶದುಃಖಿತಾಃ||

11027003e ಸುಹೃದಾಂ ಚಾಪಿ ಧರ್ಮಜ್ಞಾಃ ಪ್ರಚಕ್ರುಃ ಸಲಿಲಕ್ರಿಯಾಃ||

ಅತ್ಯಂತ ದುಃಖಿತರಾಗಿದ್ದ ಕುರುಸ್ತ್ರೀಯರು ಎಲ್ಲರೂ ರೋದಿಸುತ್ತಲೇ ಭೂಷಣಗಳನ್ನೂ, ಉತ್ತರೀಯಗಳನ್ನೂ, ಶಿರೋವೇಷ್ಟಿಗಳನ್ನೂ ಕಳಚಿಟ್ಟು ಪಿತೃಗಳಿಗೆ, ಮಕ್ಕಳು-ಮೊಮ್ಮಕ್ಕಳಿಗೆ, ಸಹೋದರರಿಗೆ, ಬಂಧುಗಳಿಗೆ, ಮಾವಂದಿರಿಗೆ, ಮತ್ತು ಪತಿಯಂದಿರಿಗೆ ಉದಕ ಕ್ರಿಯೆಗಳನ್ನು ಮಾಡಿದರು. ಆ ದರ್ಮಜ್ಞರು ಸ್ನೇಹಿತರಿಗೂ ಜಲತರ್ಪಣಗಳನ್ನಿತ್ತರು.

11027004a ಉದಕೇ ಕ್ರಿಯಮಾಣೇ ತು ವೀರಾಣಾಂ ವೀರಪತ್ನಿಭಿಃ|

11027004c ಸೂಪತೀರ್ಥಾಭವದ್ಗಂಗಾ ಭೂಯೋ ವಿಪ್ರಸಸಾರ ಚ||

ವೀರಪತ್ನಿಯರು ವೀರರಿಗೆ ತರ್ಪಣಗಳನ್ನು ನೀಡುವಾಗ ತೀರ್ಥೆ ಗಂಗೆಯ ತೀರವು ಇನ್ನೂ ವಿಸ್ತಾರವಾಯಿತು.

11027005a ತನ್ಮಹೋದಧಿಸಂಕಾಶಂ ನಿರಾನಂದಮನುತ್ಸವಮ್|

11027005c ವೀರಪತ್ನೀಭಿರಾಕೀರ್ಣಂ ಗಂಗಾತೀರಮಶೋಭತ||

ಅಲ್ಲಿ ಸೇರಿದ್ದ ವೀರಪತ್ನಿಯರ ಗುಂಪುಗಳಲ್ಲಿ ಆನಂದವಾಗಲೀ ಉತ್ಸವವಾಗಲೀ ಇಲ್ಲದಿದ್ದರೂ ಆ ಗಂಗಾತೀರವು ಮಹಾಸಾಗರದಂತೆ ತೋರಿತು.

11027006a ತತಃ ಕುಂತೀ ಮಹಾರಾಜ ಸಹಸಾ ಶೋಕಕರ್ಶಿತಾ|

11027006c ರುದತೀ ಮಂದಯಾ ವಾಚಾ ಪುತ್ರಾನ್ವಚನಮಬ್ರವೀತ್||

ಮಹಾರಾಜ! ಆಗ ಒಡನೆಯೇ ಶೋಕಕರ್ಶಿತ ಕುಂತಿಯು ರೋದಿಸುತ್ತಾ ತನ್ನ ಪುತ್ರರಿಗೆ ಮೆಲುದನಿಯಲ್ಲಿ ಈ ಮಾತನ್ನಾಡಿದಳು:

11027007a ಯಃ ಸ ಶೂರೋ ಮಹೇಷ್ವಾಸೋ ರಥಯೂಥಪಯೂಥಪಃ|

11027007c ಅರ್ಜುನೇನ ಹತಃ ಸಂಖ್ಯೇ ವೀರಲಕ್ಷಣಲಕ್ಷಿತಃ||

11027008a ಯಂ ಸೂತಪುತ್ರಂ ಮನ್ಯಧ್ವಂ ರಾಧೇಯಮಿತಿ ಪಾಂಡವಾಃ|

11027008c ಯೋ ವ್ಯರಾಜಚ್ಚಮೂಮಧ್ಯೇ ದಿವಾಕರ ಇವ ಪ್ರಭುಃ||

11027009a ಪ್ರತ್ಯಯುಧ್ಯತ ಯಃ ಸರ್ವಾನ್ಪುರಾ ವಃ ಸಪದಾನುಗಾನ್|

11027009c ದುರ್ಯೋಧನಬಲಂ ಸರ್ವಂ ಯಃ ಪ್ರಕರ್ಷನ್ವ್ಯರೋಚತ||

11027010a ಯಸ್ಯ ನಾಸ್ತಿ ಸಮೋ ವೀರ್ಯೇ ಪೃಥಿವ್ಯಾಮಪಿ ಕಶ್ಚನ|

[1]11027010c ಸತ್ಯಸಂಧಸ್ಯ ಶೂರಸ್ಯ ಸಂಗ್ರಾಮೇಷ್ವಪಲಾಯಿನಃ||

11027011a ಕುರುಧ್ವಮುದಕಂ ತಸ್ಯ ಭ್ರಾತುರಕ್ಲಿಷ್ಟಕರ್ಮಣಃ|

11027011c ಸ ಹಿ ವಃ ಪೂರ್ವಜೋ ಭ್ರಾತಾ ಭಾಸ್ಕರಾನ್ಮಯ್ಯಜಾಯತ||

11027011e ಕುಂಡಲೀ ಕವಚೀ ಶೂರೋ ದಿವಾಕರಸಮಪ್ರಭಃ||

“ಪಾಂಡವರೇ! ರಣದಲ್ಲಿ ಅರ್ಜುನನಿಂದ ಹತನಾದ ಆ ಶೂರ ಮಹೇಷ್ವಾಸ ರಥಯೂಥಪಯೂಥಪ ವೀರಲಕ್ಷಣಗಳಿಂದ ಕೂಡಿದ್ದ, ಯಾರನ್ನು ಸೂತಪುತ್ರನೆಂದೂ ರಾಧೇಯನೆಂದು ತಿಳಿದಿದ್ದರೋ, ಯಾರು ಸೇನೆಗಳ ಮಧ್ಯೆ ಪ್ರಭು ದಿವಾಕರನಂತೆ ಪ್ರಕಾಶಿಸುತ್ತಿದ್ದನೋ, ಅನುಚರರೊಂದಿಗೆ ನಿಮ್ಮೆಲ್ಲರನ್ನೂ ಎದುರಿಸಿ ಯಾರು ಯುದ್ಧಮಾಡಿದನೋ, ದುರ್ಯೋಧನನ ಸರ್ವಸೇನೆಗಳನ್ನೂ ಸೆಳೆದು ಬೆಳಗುತ್ತಿದ್ದ, ವೀರ್ಯದಲ್ಲಿ ಯಾರ ಸಮನಾಗಿರುವವನು ಈ ಭೂಮಿಯಲ್ಲಿಯೇ ಇಲ್ಲವೋ ಆ ಸತ್ಯಸಂಧ ಶೂರ ಸಂಗ್ರಾಮದಲ್ಲಿ ಪಲಯಾನಮಾಡದಿದ್ದ ನಿಮ್ಮ ಸಹೋದರ ಅಕ್ಲಿಷ್ಟಕರ್ಮಿಗೆ ಉದಕ ಕಾರ್ಯಗಳನ್ನು ಮಾಡಿ. ಕುಂಡಲ-ಕವಚಗಳನ್ನು ಧರಿಸಿಯೇ ದಿವಾಕರಸಮ ಪ್ರಭೆಯನ್ನು ಹೊಂದಿ ಹುಟ್ಟಿದ್ದ ಅವನು ನಿಮಗಿಂತಲೂ ಮೊದಲು ಭಾಸ್ಕರನಿಂದ ನನ್ನಲ್ಲಿ ಹುಟ್ಟಿದ್ದ ನಿಮ್ಮ ಹಿರಿಯಣ್ಣ!”

11027012a ಶ್ರುತ್ವಾ ತು ಪಾಂಡವಾಃ ಸರ್ವೇ ಮಾತುರ್ವಚನಮಪ್ರಿಯಮ್|

11027012c ಕರ್ಣಮೇವಾನುಶೋಚಂತ ಭೂಯಶ್ಚಾರ್ತತರಾಭವನ್||

ತಾಯಿಯ ಆ ಅಪ್ರಿಯ ಮಾತನ್ನು ಕೇಳಿ ಪಾಂಡವರೆಲ್ಲರೂ ಕರ್ಣನ ಕುರಿತು ಶೋಕಿಸುತ್ತಾ ಇನ್ನೂ ಹೆಚ್ಚು ಆರ್ತರಾದರು.

11027013a ತತಃ ಸ ಪುರುಷವ್ಯಾಘ್ರಃ ಕುಂತೀಪುತ್ರೋ ಯುಧಿಷ್ಠಿರಃ|

11027013c ಉವಾಚ ಮಾತರಂ ವೀರೋ ನಿಃಶ್ವಸನ್ನಿವ ಪನ್ನಗಃ||

ಆಗ ಆ ಪುರುಷವ್ಯಾಘ್ರ ವೀರ ಕುಂತೀಪುತ್ರ ಯುಧಿಷ್ಠಿರನು ಹಾವಿನಂತೆ ದೀರ್ಘ ನಿಟ್ಟುಸಿರು ಬಿಡುತ್ತಾ ತಾಯಿಗೆ ಹೇಳಿದನು:

[2]11027014a ಯಸ್ಯೇಷುಪಾತಮಾಸಾದ್ಯ ನಾನ್ಯಸ್ತಿಷ್ಠೇದ್ಧನಂಜಯಾತ್|

11027014c ಕಥಂ ಪುತ್ರೋ ಭವತ್ಯಾಂ ಸ ದೇವಗರ್ಭಃ ಪುರಾಭವತ್||

“ಯಾರ ಬಾಣಗಳನ್ನು ಧನಂಜಯನಲ್ಲದೇ ಬೇರೆ ಯಾರೂ ಎದುರಿಸಬಲ್ಲವರಾಗಿದ್ದರೋ ಅಂಥಹ ದೇವಗರ್ಭನು ಹಿಂದೆ ಹೇಗೆ ನಿನ್ನ ಪುತ್ರನಾಗಿ ಜನಿಸಿದನು?

11027015a ಯಸ್ಯ ಬಾಹುಪ್ರತಾಪೇನ ತಾಪಿತಾಃ ಸರ್ವತೋ ವಯಮ್|

11027015c ತಮಗ್ನಿಮಿವ ವಸ್ತ್ರೇಣ ಕಥಂ ಚಾದಿತವತ್ಯಸಿ||

11027015e ಯಸ್ಯ ಬಾಹುಬಲಂ ಘೋರಂ ಧಾರ್ತರಾಷ್ಟ್ರೈರುಪಾಸಿತಮ್||

ಅವನ ಬಾಹುಪ್ರತಾಪದಿಂದ ನಾವು ಎಲ್ಲಕಡೆಗಳಿಂದ ಸುಟ್ಟುಹೋಗುತ್ತಿದ್ದರೂ ಹೇಗೆ ತಾನೇ ನೀನು ಅಗ್ನಿಯನ್ನು ಬಟ್ಟೆಯಲ್ಲಿ ಮುಚ್ಚಿಟ್ಟುಕೊಳ್ಳುವಂತೆ ಅದನ್ನು ಗುಟ್ಟಾಗಿಯೇ ಇಟ್ಟುಕೊಂಡಿದ್ದೆ? ಧಾರ್ತರಾಷ್ಟ್ರರು ಅವನ ಘೋರ ಬಾಹುಬಲವನ್ನು ಆಶ್ರಯಿಸಿದ್ದರು.

[3]11027016a ನಾನ್ಯಃ ಕುಂತೀಸುತಾತ್ಕರ್ಣಾದಗೃಹ್ಣಾದ್ರಥಿನಾಂ ರಥೀ|

11027016c ಸ ನಃ ಪ್ರಥಮಜೋ ಭ್ರಾತಾ ಸರ್ವಶಸ್ತ್ರಭೃತಾಂ ವರಃ||

11027016e ಅಸೂತ ತಂ ಭವತ್ಯಗ್ರೇ ಕಥಮದ್ಭುತವಿಕ್ರಮಮ್||

ರಥಿಗಳಲ್ಲಿ ಶ್ರೇಷ್ಠನಾಗಿದ್ದ ಕುಂತೀಸುತ ಕರ್ಣನಲ್ಲದೇ ಬೇರೆ ಯಾರೂ ಸೇನೆಯನ್ನು ಎದುರಿಸಿ ನಿಲ್ಲುತ್ತಿರಲಿಲ್ಲ! ಆ ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠನು ಮೊದಲು ಹುಟ್ಟಿದ್ದ ನಮ್ಮ ಅಣ್ಣ! ಅಂಥಹ ಅದ್ಭುತವಿಕ್ರಮಿಯನ್ನು ನಮ್ಮೆಲ್ಲರಿಗೆ ಮೊದಲೇ ನೀನು ಹೇಗೆ ಹೆತ್ತೆ?

11027017a ಅಹೋ ಭವತ್ಯಾ ಮಂತ್ರಸ್ಯ ಪಿಧಾನೇನ ವಯಂ ಹತಾಃ|

11027017c ನಿಧನೇನ ಹಿ ಕರ್ಣಸ್ಯ ಪೀಡಿತಾಃ ಸ್ಮ ಸಬಾಂಧವಾಃ||

ಅಯ್ಯೋ! ನೀನು ಈ ರಹಸ್ಯವನ್ನು ಮುಚ್ಚಿಟ್ಟಿದುದರಿಂದ ನಾವೆಲ್ಲರೂ ಹತರಾದಂತೆಯೇ! ಕರ್ಣನ ನಿಧನದಿಂದ ಬಾಂಧವರೊಂದಿಗೆ ನಾವೆಲ್ಲರೂ ಪೀಡಿತರಾಗಿದ್ದೇವೆ!

11027018a ಅಭಿಮನ್ಯೋರ್ವಿನಾಶೇನ ದ್ರೌಪದೇಯವಧೇನ ಚ|

11027018c ಪಾಂಚಾಲಾನಾಂ ಚ ನಾಶೇನ ಕುರೂಣಾಂ ಪತನೇನ ಚ||

11027019a ತತಃ ಶತಗುಣಂ ದುಃಖಮಿದಂ ಮಾಮಸ್ಪೃಶದ್ ಭೃಶಮ್|

11027019c ಕರ್ಣಮೇವಾನುಶೋಚನ್ ಹಿ ದಹ್ಯಾಮ್ಯಗ್ನಾವಿವಾಹಿತಃ||

ಈ ದುಃಖವು ಅಭಿಮನ್ಯುವಿನ ವಿನಾಶ, ದ್ರೌಪದೇಯರ ವಧೆ, ಪಾಂಚಾಲರ ನಾಶ ಮತ್ತು ಕುರುಗಳ ಪತನಕ್ಕಿಂತಲೂ ನೂರು ಪಟ್ಟು ಹೆಚ್ಚಾಗಿ ನನ್ನನ್ನು ಸಂಕಟಕ್ಕೀಡುಮಾಡಿದೆ. ಕರ್ಣನ ಕುರಿತೇ ದುಃಖಿಸಿ ನಾನು ಉರಿಯುತ್ತಿರುವ ಬೆಂಕಿಯನ್ನು ಪ್ರವೇಶಿಸಿದವನಂತಾಗಿದ್ದೇನೆ!

11027020a ನ ಹಿ ಸ್ಮ ಕಿಂ ಚಿದಪ್ರಾಪ್ಯಂ ಭವೇದಪಿ ದಿವಿ ಸ್ಥಿತಮ್|

11027020c ನ ಚ ಸ್ಮ ವೈಶಸಂ ಘೋರಂ ಕೌರವಾಂತಕರಂ ಭವೇತ್||

ಅವನು ನಮ್ಮ ಅಣ್ಣನೆಂದು ಮೊದಲೇ ತಿಳಿದಿದ್ದರೆ ನಮಗೆ ಪ್ರಾಪ್ತವಾಗದಿರುವುದು ಯಾವುದೂ ಇರಲಿಲ್ಲ, ಸ್ವರ್ಗದಲ್ಲಿಯೇ ಇದ್ದರೂ ಅದನ್ನು ನಾವು ಪಡೆದುಕೊಳ್ಳುತ್ತಿದ್ದೆವು. ಈ ಘೋರ ದುಃಖಕರ ಕೌರವರ ಅಂತ್ಯವೂ ನಡೆಯುತ್ತಿರಲಿಲ್ಲ!”

11027021a ಏವಂ ವಿಲಪ್ಯ ಬಹುಲಂ ಧರ್ಮರಾಜೋ ಯುಧಿಷ್ಠಿರಃ|

11027021c ವಿನದನ್ ಶನಕೈ ರಾಜಂಶ್ಚಕಾರಾಸ್ಯೋದಕಂ ಪ್ರಭುಃ||

ಹೀಗೆ ಧರ್ಮರಾಜ ಯುಧಿಷ್ಠಿರನು ಬಹಳವಾಗಿ ವಿಲಪಿಸಿದನು. ರಾಜನ್! ಮೆಲ್ಲನೇ ಅಳುತ್ತಲೇ ಆ ಪ್ರಭುವು ಕರ್ಣನಿಗೆ ಉದಕ ಕ್ರಿಯೆಗಳನ್ನು ಮಾಡಿದನು.

11027022a ತತೋ ವಿನೇದುಃ ಸಹಸಾ ಸ್ತ್ರೀಪುಂಸಾಸ್ತತ್ರ ಸರ್ವಶಃ|

11027022c ಅಭಿತೋ ಯೇ ಸ್ಥಿತಾಸ್ತತ್ರ ತಸ್ಮಿನ್ನುದಕಕರ್ಮಣಿ||

ಅವನು ಉದಕಕ್ರಿಯೆಗಳನ್ನು ಮಾಡುವಾಗ ಸುತ್ತಲೂ ನಿಂತಿದ್ದ ಸ್ತ್ರೀ-ಪುರುಷರೆಲ್ಲರೂ ಒಡನೆಯೇ ಜೋರಾಗಿ ರೋದಿಸಿದರು.

11027023a ತತ ಆನಾಯಯಾಮಾಸ ಕರ್ಣಸ್ಯ ಸಪರಿಚ್ಚದಮ್|

11027023c ಸ್ತ್ರಿಯಃ ಕುರುಪತಿರ್ಧೀಮಾನ್ಭ್ರಾತುಃ ಪ್ರೇಮ್ಣಾ ಯುಧಿಷ್ಠಿರಃ[4]||

ಅನಂತರ ಭ್ರಾತೃ ಪ್ರೇಮದಿಂದ ಕುರುಪತಿ ಯುಧಿಷ್ಠಿರನು ಕರ್ಣನ ಸ್ತ್ರೀಯರನ್ನು ಅವರ ಪರಿವಾರಸಮೇತರಾಗಿ ಕರೆಯಿಸಿಕೊಂಡನು.”

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಜಲಪ್ರದಾನಿಕಪರ್ವಣಿ ಕರ್ಣಗೂಢಜತ್ವಕಥನೇ ಸಪ್ತವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಜಲಪ್ರದಾನಿಕಪರ್ವದಲ್ಲಿ ಕರ್ಣಗೂಢಜತ್ವಕಥನ ಎನ್ನುವ ಇಪ್ಪತ್ತೇಳನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಸ್ತ್ರೀಪರ್ವಣಿ ಜಲಪ್ರದಾನಿಕಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಜಲಪ್ರದಾನಿಕಪರ್ವವು|

ಇತಿ ಶ್ರೀ ಮಹಾಭಾರತೇ ಸ್ತ್ರೀಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಸ್ತ್ರೀಪರ್ವವು||

ಇದೂವರೆಗಿನ ಒಟ್ಟು ಮಹಾಪರ್ವಗಳೂ – ೧೧/೧೮, ಉಪಪರ್ವಗಳು-೮೩/೧೦೦, ಅಧ್ಯಾಯಗಳು-೧೩೨೮/೧೯೯೫, ಶ್ಲೋಕಗಳು-೫೦೦೧೦/೭೩೭೮೪

Lotus with decorative indian ornament mandala pattern on white background"  Greeting Card by Viktoriia | Redbubble

[1] ಇದರ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಾರ್ಧವಿದೆ: ಯೋಽವೃಣೀತ ಯಶಃ ಶೂರಃ ಪ್ರಾಣೈರಪಿ ಸದಾ ಭುವಿ|

[2] ಇದರ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕವಿದೆ: ಯಃ ಶರೋರ್ಮಿರ್ಧ್ವಜಾವರ್ತೋ ಮಹಾಭುಜ ಮಹಾಗ್ರಹಃ| ತಲಶಬ್ಧಾನುನದಿತೋ ಮಹಾರಥಮಹಾಹೃದಃ||

[3] ಇದರ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕವಿದೆ: ಉಪಾಸಿತಂ ಯಥಾಸ್ಮಾಭಿರ್ಬಲಂ ಗಾಂಡೀವಧನ್ವನಃ| ಭೂಮಿಪಾನಾಂ ಚ ಸರ್ವೇಷಾಂ ಬಲಂ ಬಲವತಾಂ ವರಃ||

[4] ಇದರ ನಂತರ ನೀಲಕಂಠೀಯದಲ್ಲಿ ಈ ಮೂರು ಶ್ಲೋಕಗಳಿವೆ: ಸ ತಾಭಿಃ ಸಹ ಧರ್ಮಾತ್ಮಾ ಪ್ರೇತಕೃತ್ಯಮನಂತರಮ್| ಚಕಾರ ವಿಧಿವದ್ಧೀಮಾನ್ಧರ್ಮರಾಜೋ ಯುಧಿಷ್ಠಿರಃ|| ಪಾಪೇನಾಸೌ ಮಥಾ ಶ್ರೇಷ್ಠೋ ಭ್ರಾತಾ ಜ್ಞಾತಿರ್ನಿಪಾತಿತಃ| ಅತೊಃ ಮನಸಿ ಯದ್ಗುಹ್ಯಂ ಸ್ತ್ರೀಣಾಂ ತನ್ನ ಭವಿಷ್ಯತಿ|| ಇತ್ಯುಕ್ತ್ವಾ ಸ ತು ಗಂಗಾಯಾ ಉತ್ತತಾರಾಕುಲೇಂದ್ರಿಯಃ| ಭ್ರಾತೃಭಿಃ ಸಹಿತಃ ಸರ್ವೈರ್ಗಂಗಾತೀರಮುಪೇಯಿವಾನ್||

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|

ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||

ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|

ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ||

ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|

ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||

|| ಹರಿಃ ಓಂ ಕೃಷ್ಣಾರ್ಪಣಮಸ್ತು ||

Comments are closed.