Shanti Parva: Chapter 342

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೪೨

12342001 ಬ್ರಾಹ್ಮಣ ಉವಾಚ|

12342001a ಸಮುತ್ಪನ್ನಾಭಿಧಾನೋಽಸ್ಮಿ ವಾಙ್ಮಾಧುರ್ಯೇಣ ತೇಽನಘ|

12342001c ಮಿತ್ರತಾಮಭಿಪನ್ನಸ್ತ್ವಾಂ ಕಿಂ ಚಿದ್ವಕ್ಷ್ಯಾಮಿ ತಚ್ಚೃಣು||

ಬ್ರಾಹ್ಮಣನು ಹೇಳಿದನು: “ಅನಘ! ನಿನ್ನ ಮಧುರ ಮಾತುಗಳನ್ನು ಕೇಳಿ ಇನ್ನೂ ಕೆಲವು ವಿಷಯಗಳನ್ನು ಹೇಳಬೇಕೆಂಬ ಮನಸ್ಸಾಗಿದೆ. ನೀನು ಮಿತ್ರತ್ವವನ್ನು ಹೊಂದಿರುವೆ. ನಿನ್ನೊಡನೆ ಕೆಲವು ವಿಷಯಗಳನ್ನು ಹೇಳುತ್ತೇನೆ. ಕೇಳು.

12342002a ಗೃಹಸ್ಥಧರ್ಮಂ ವಿಪ್ರೇಂದ್ರ ಕೃತ್ವಾ ಪುತ್ರಗತಂ ತ್ವಹಮ್|

12342002c ಧರ್ಮಂ ಪರಮಕಂ ಕುರ್ಯಾಂ ಕೋ ಹಿ ಮಾರ್ಗೋ ಭವೇದ್ದ್ವಿಜ||

“ವಿಪ್ರೇಂದ್ರ! ದ್ವಿಜ! ಗೃಹಸ್ಥಧರ್ಮವನ್ನು ಮಕ್ಕಳಿಗೆ ವಹಿಸಿಕೊಟ್ಟು ನಾನು ಪರಮ ಧರ್ಮವನ್ನು ಆಚರಿಸಬೇಕೆಂದಿದ್ದೇನೆ. ಅದಕ್ಕೆ ಯಾವುದಾದರೂ ಮಾರ್ಗವಿದೆಯೇ?

12342003a ಅಹಮಾತ್ಮಾನಮಾತ್ಮಸ್ಥಮೇಕ ಏವಾತ್ಮನಿ ಸ್ಥಿತಃ|

12342003c ಕರ್ತುಂ ಕಾಂಕ್ಷಾಮಿ ನೇಚ್ಚಾಮಿ ಬದ್ಧಃ ಸಾಧಾರಣೈರ್ಗುಣೈಃ||

ಏಕಾಂಗಿಯಾಗಿದ್ದು ಆತ್ಮನಲ್ಲಿಯೇ ಯಾವಾಗಲೂ ಇರುವಿಕೆಯನ್ನು ಕಲ್ಪಿಸಿಕೊಳ್ಳಬೇಕೆಂದು ಬಯಸುತ್ತಿದ್ದೇನೆ. ಆದರೆ ಸಾಧಾರಣ ಗುಣಗಳಿಂದ ಬದ್ಧನಾಗಿರುವ ನಾನು ಒಡನೆಯೇ ಇವುಗಳೆಲ್ಲವನ್ನೂ ಬಿಟ್ಟುಬಿಡಲೂ ಇಚ್ಛೆಪಡುತ್ತಿಲ್ಲ.

12342004a ಯಾವದೇವಾನತೀತಂ ಮೇ ವಯಃ ಪುತ್ರಫಲಾಶ್ರಿತಮ್|

12342004c ತಾವದಿಚ್ಚಾಮಿ ಪಾಥೇಯಮಾದಾತುಂ ಪಾರಲೌಕಿಕಮ್||

ಪುತ್ರಫಲವನ್ನೇ ಆಶ್ರಯಿಸಿದ್ದ ಇದೂವರೆಗಿನ ನನ್ನ ಆಯುಷ್ಯವೆಲ್ಲವೂ ಕಳೆದೇ ಹೋಯಿತು. ಇನ್ನಾದರೂ ಪರಲೌಕಿಕ ಮಾರ್ಗವನ್ನು ಅನುಸರಿಸಲು ಬಯಸುತ್ತೇನೆ.

12342005a ಅಸ್ಮಿನ್ ಹಿ ಲೋಕಸಂತಾನೇ ಪರಂ ಪಾರಮಭೀಪ್ಸತಃ|

12342005c ಉತ್ಪನ್ನಾ ಮೇ ಮತಿರಿಯಂ ಕುತೋ ಧರ್ಮಮಯಃ ಪ್ಲವಃ||

ಈ ಲೋಕಸಂತಾನಗಳ ಮಧ್ಯದಲ್ಲಿರುವ ಮತ್ತು ಈ ಸಂಸಾರಸಾಗರವನ್ನು ದಾಟಬೇಕೆಂದು ಇಚ್ಛಿಸಿರುವ ನನಗೆ ಧರ್ಮಮಯ ದೋಣಿಯು ಎಲ್ಲಿ ದೊರಕಬಹುದು ಎಂಬ ಜಿಜ್ಞಾಸೆಯುಂಟಾಗಿದೆ.

12342006a ಸಮುಹ್ಯಮಾನಾನಿ ನಿಶಮ್ಯ ಲೋಕೇ

ನಿರ್ಯಾತ್ಯಮಾನಾನಿ ಚ ಸಾತ್ತ್ವಿಕಾನಿ|

12342006c ದೃಷ್ಟ್ವಾ ಚ ಧರ್ಮಧ್ವಜಕೇತುಮಾಲಾಂ

ಪ್ರಕೀರ್ಯಮಾಣಾಮುಪರಿ ಪ್ರಜಾನಾಮ್||

ಈ ಲೋಕದಲ್ಲಿ ಸಾತ್ವಿಕರೂ ಕೂಡ ವಿಧ-ವಿಧದ ಯಾತನೆಗಳಿಂದ ಪೀಡಿತರಾಗುವುದನ್ನು ನೋಡುತ್ತಿದ್ದೇನೆ. ಜನರ ಮೇಲೆ ಧರ್ಮಧ್ವಜಗಳ ಮಾಲೆಗಳು ಹಾರಾಡುತ್ತಿರುವುದನ್ನೂ ನೋಡುತ್ತಿದ್ದೇನೆ.

12342007a ನ ಮೇ ಮನೋ ರಜ್ಯತಿ ಭೋಗಕಾಲೇ

ದೃಷ್ಟ್ವಾ ಯತೀನ್ ಪ್ರಾರ್ಥಯತಃ ಪರತ್ರ|

12342007c ತೇನಾತಿಥೇ ಬುದ್ಧಿಬಲಾಶ್ರಯೇಣ

ಧರ್ಮಾರ್ಥತತ್ತ್ವೇ ವಿನಿಯುಂಕ್ಷ್ವ ಮಾಂ ತ್ವಮ್||

ಭೋಗಕಾಲದಲ್ಲಿ ನನ್ನ ಮನಸ್ಸು ರಮಿಸುವುದಿಲ್ಲ. ಪರರನ್ನು ಪ್ರಾರ್ಥಿಸುವ ಯತಿಗಳನ್ನು ನೋಡಿ ವಿರಕ್ತ ಸಂನ್ಯಾಸಧರ್ಮದಲ್ಲಿಯೂ ಆಸಕ್ತಿಯಿಲ್ಲ. ಅತಿಥೇ! ಆದುದರಿಂದ ನೀನು ನಿನ್ನ ಧರ್ಮಾರ್ಥತತ್ತ್ವಯುಕ್ತ ಬುದ್ಧಿಬಲದ ಆಶ್ರಯದಿಂದ ನನ್ನನ್ನು ಧರ್ಮಮಾರ್ಗದಲ್ಲಿ ತೊಡಗಿಸು.””

12342008 ಭೀಷ್ಮ ಉವಾಚ|

12342008a ಸೋಽತಿಥಿರ್ವಚನಂ ತಸ್ಯ ಶ್ರುತ್ವಾ ಧರ್ಮಾಭಿಲಾಷಿಣಃ|

12342008c ಪ್ರೋವಾಚ ವಚನಂ ಶ್ಲಕ್ಷ್ಣಂ ಪ್ರಾಜ್ಞೋ ಮಧುರಯಾ ಗಿರಾ||

ಭೀಷ್ಮನು ಹೇಳಿದನು: “ಧರ್ಮವನ್ನು ಅಭಿಲಾಶಿಸಿ ಮಾತನಾಡಿದ ಅವನನ್ನು ಕೇಳಿ ಅತಿಥಿಯು ಮೃದು ವಚನವನ್ನು ಮಧುರವಾಣಿಯಲ್ಲಿ ಉತ್ತರಿಸಿದನು:

12342009a ಅಹಮಪ್ಯತ್ರ ಮುಹ್ಯಾಮಿ ಮಮಾಪ್ಯೇಷ ಮನೋರಥಃ|

12342009c ನ ಚ ಸಂನಿಶ್ಚಯಂ ಯಾಮಿ ಬಹುದ್ವಾರೇ ತ್ರಿವಿಷ್ಟಪೇ||

“ತ್ರಿವಿಷ್ಟಪಕ್ಕೆ ಅನೇಕ ದ್ವಾರಗಳಿರುವಾಗ ಇದೇ ಮನೋರಥವುಳ್ಳ ನಾನೂ ಕೂಡ ಈ ವಿಷಯದಲ್ಲಿ ಗೊಂದಲಕ್ಕೀಡಾಗಿದ್ದೇನೆ. ಯಾವುದೆಂದು ನಿರ್ಣಯಕ್ಕೆ ಬರಲಾರದವನಾಗಿದ್ದೇನೆ.

12342010a ಕೇ ಚಿನ್ಮೋಕ್ಷಂ ಪ್ರಶಂಸಂತಿ ಕೇ ಚಿದ್ಯಜ್ಞಫಲಂ ದ್ವಿಜಾಃ|

12342010c ವಾನಪ್ರಸ್ಥಾಶ್ರಮಂ ಕೇ ಚಿದ್ಗಾರ್ಹಸ್ಥ್ಯಂ ಕೇ ಚಿದಾಶ್ರಿತಾಃ||

ಕೆಲವರು ಮೋಕ್ಷವನ್ನು ಪ್ರಶಂಸಿಸುತ್ತಾರೆ. ಕೆಲವು ದ್ವಿಜರು ಯಜ್ಞಫಲವನ್ನು ಪ್ರಶಂಸಿಸುತ್ತಾರೆ. ಕೆಲವರು ವಾನಪ್ರಸ್ಥಾಶ್ರಮವನ್ನು ಆಶ್ರಯಿಸಿದರೆ ಇನ್ನು ಕೆಲವರು ಗೃಹಸ್ಥಾಶ್ರಮವನ್ನು ಆಶ್ರಯಿಸುತ್ತಾರೆ.

12342011a ರಾಜಧರ್ಮಾಶ್ರಯಂ ಕೇ ಚಿತ್ಕೇ ಚಿದಾತ್ಮಫಲಾಶ್ರಯಮ್|

12342011c ಗುರುಚರ್ಯಾಶ್ರಯಂ ಕೇ ಚಿತ್ಕೇ ಚಿದ್ವಾಕ್ಯಂ ಯಮಾಶ್ರಯಮ್||

ಕೆಲವರು ರಾಜಧರ್ಮವನ್ನು ಆಶ್ರಯಿಸುತ್ತಾರೆ. ಕೆಲವರು ಆತ್ಮಫಲವನ್ನು ಆಶ್ರಯಿಸುತ್ತಾರೆ. ಕೆಲವರು ಗುರುಸೇವೆಯನ್ನು ಆಶ್ರಯಿಸಿದರೆ ಇನ್ನು ಕೆಲವರು ಮೌನವ್ರತವನ್ನು ಆಶ್ರಯಿಸುತ್ತಾರೆ.

12342012a ಮಾತರಂ ಪಿತರಂ ಕೇ ಚಿಚ್ಚುಶ್ರೂಷಂತೋ ದಿವಂ ಗತಾಃ|

12342012c ಅಹಿಂಸಯಾ ಪರೇ ಸ್ವರ್ಗಂ ಸತ್ಯೇನ ಚ ತಥಾ ಪರೇ||

ಮಾತಾ-ಪಿತೃಗಳ ಸೇವೆಯನ್ನು ಮಾಡಿ ಕೆಲವರು ಸ್ವರ್ಗಕ್ಕೆ ಹೋಗಿರುತ್ತಾರೆ. ಇತರರು ಅಹಿಂಸಾಧರ್ಮವನ್ನು ಆಶ್ರಯಿಸಿ ಮತ್ತು ಇನ್ನು ಕೆಲವರು ಸತ್ಯದಿಂದ ಸ್ವರ್ಗಕ್ಕೆ ಹೋಗಿರುತ್ತಾರೆ.

12342013a ಆಹವೇಽಭಿಮುಖಾಃ ಕೇ ಚಿನ್ನಿಹತಾಃ ಸ್ವಿದ್ದಿವಂ ಗತಾಃ|

12342013c ಕೇ ಚಿದುಂಚವ್ರತೈಃ ಸಿದ್ಧಾಃ ಸ್ವರ್ಗಮಾರ್ಗಸಮಾಶ್ರಿತಾಃ||

ಕೆಲವರು ಶತ್ರುಗಳಿಗೆ ಅಭಿಮುಖವಾಗಿ ನಿಂತು ಯುದ್ಧದಲ್ಲಿ ಹತರಾಗಿ ದಿವಕ್ಕೆ ಹೋಗಿದ್ದಾರೆ. ಕೆಲವರು ಉಂಛವೃತ್ತಿಯನ್ನು ಆಶ್ರಯಿಸಿ ಸಿದ್ಧಿಯನ್ನು ಪಡೆದು ಸ್ವರ್ಗಕ್ಕೆ ಹೋಗಿದ್ದಾರೆ.

12342014a ಕೇ ಚಿದಧ್ಯಯನೇ ಯುಕ್ತಾ ವೇದವ್ರತಪರಾಃ ಶುಭಾಃ|

12342014c ಬುದ್ಧಿಮಂತೋ ಗತಾಃ ಸ್ವರ್ಗಂ ತುಷ್ಟಾತ್ಮಾನೋ ಜಿತೇಂದ್ರಿಯಾಃ||

ಕೆಲವು ಬುದ್ಧಿವಂತರು ವೇದಾಧ್ಯಯದಲ್ಲಿಯೇ ಯುಕ್ತರಾಗಿ, ವೇದವ್ರತಪರಾಯಣರಾಗಿ, ಶುಭ ತೃಪ್ತಾತ್ಮರೂ ಜಿತೇಂದ್ರಿಯರೂ ಆಗಿ ಸ್ವರ್ಗಕ್ಕೆ ಹೋಗಿದ್ದಾರೆ.

12342015a ಆರ್ಜವೇನಾಪರೇ ಯುಕ್ತಾ ನಿಹತಾನಾರ್ಜವೈರ್ಜನೈಃ|

12342015c ಋಜವೋ ನಾಕಪೃಷ್ಠೇ ವೈ ಶುದ್ಧಾತ್ಮಾನಃ ಪ್ರತಿಷ್ಠಿತಾಃ||

ಕೆಲವು ಶುದ್ಧಾತ್ಮ ಸರಳಜೀವಿಗಳು ಋಜುಮಾರ್ಗದಲ್ಲಿಯೇ ಇರುತ್ತಿದ್ದು ರುಜುಮಾರ್ಗವಿಲ್ಲದ ವಂಚಕರಿಂದ ಕೊಲ್ಲಲ್ಪಟ್ಟು ಸ್ವರ್ಗದಲ್ಲಿ ಪ್ರತಿಷ್ಠಿತರಾಗಿದ್ದಾರೆ.

12342016a ಏವಂ ಬಹುವಿಧೈರ್ಲೋಕೇ ಧರ್ಮದ್ವಾರೈರನಾವೃತೈಃ|

12342016c ಮಮಾಪಿ ಮತಿರಾವಿಗ್ನಾ ಮೇಘಲೇಖೇವ ವಾಯುನಾ||

ಹೀಗೆ ಲೋಕದಲ್ಲಿ ಬಹುವಿಧದ ಧರ್ಮದ್ವಾರಗಳು ತೆರೆದಿರುವಾಗ ಯಾವುದನ್ನು ಅನುಸರಿಸಬೇಕು ಎಂದು ನಾನೂ ಕೂಡ – ಗಾಳಿಯಿಂದ ಚದುರಿಸಲ್ಪಟ್ಟ ಮೋಡಗಳ ಸಾಲಿನಂತೆ – ಉದ್ವಿಗ್ನನಾಗಿದ್ದೇನೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ದ್ವಾಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ತೆರಡನೇ ಅಧ್ಯಾಯವು.

Orange Nasturtium flowers against white background by Kristin Duvall -  Flower, Nasturtium - Stocksy United

Comments are closed.