Shanti Parva: Chapter 338

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೩೮

ವೈಜಯಂತ ಪರ್ವತದ ಮೇಲೆ ಪುರುಷನ ಕುರಿತು ಬ್ರಹ್ಮ-ರುದ್ರರ ಸಂವಾದ (1-25).

12338001 ಜನಮೇಜಯ ಉವಾಚ|

12338001a ಬಹವಃ ಪುರುಷಾ ಬ್ರಹ್ಮನ್ನುತಾಹೋ ಏಕ ಏವ ತು|

12338001c ಕೋ ಹ್ಯತ್ರ ಪುರುಷಃ ಶ್ರೇಷ್ಠಃ ಕೋ ವಾ ಯೋನಿರಿಹೋಚ್ಯತೇ||

ಜನಮೇಜಯನು ಹೇಳಿದನು: “ಬ್ರಹ್ಮನ್! ಪುರುಷರು ಅನೇಕರಿರುವರೇ? ಅಥವಾ ಒಬ್ಬನೇ ಇರುವನೇ? ಅನೇಕರಿರುವುದಾದರೆ ಎಲ್ಲರಿಗಿಂತಲೂ ಶ್ರೇಷ್ಠನಾದ ಮತ್ತು ಎಲ್ಲವಕ್ಕೂ ಉತ್ಪತ್ತಿಸ್ಥಾನನಾದ ಪುರುಷನು ಯಾರು?”

12338002 ವೈಶಂಪಾಯನ ಉವಾಚ|

12338002a ಬಹವಃ ಪುರುಷಾ ಲೋಕೇ ಸಾಂಖ್ಯಯೋಗವಿಚಾರಿಣಾಮ್|

12338002c ನೈತದಿಚ್ಚಂತಿ ಪುರುಷಮೇಕಂ ಕುರುಕುಲೋದ್ವಹ||

ವೈಶಂಪಾಯನನು ಹೇಳಿದನು: “ಕುರುಕುಲೋದ್ವಹ! ಸಾಂಖ್ಯ-ಯೋಗಗಳ ವಿಚಾರದಲ್ಲಿ ಲೋಕದಲ್ಲಿ ಅನೇಕ ಪುರುಷರಿದ್ದಾರೆ. ಅವರು ಪುರುಷನು ಒಬ್ಬನೇ ಎನ್ನುವುದನ್ನು ಮನ್ನಿಸುವುದಿಲ್ಲ.

12338003a ಬಹೂನಾಂ ಪುರುಷಾಣಾಂ ಚ ಯಥೈಕಾ ಯೋನಿರುಚ್ಯತೇ|

12338003c ತಥಾ ತಂ ಪುರುಷಂ ವಿಶ್ವಂ ವ್ಯಾಖ್ಯಾಸ್ಯಾಮಿ ಗುಣಾಧಿಕಮ್||

12338004a ನಮಸ್ಕೃತ್ವಾ ತು ಗುರವೇ ವ್ಯಾಸಾಯಾಮಿತತೇಜಸೇ|

12338004c ತಪೋಯುಕ್ತಾಯ ದಾಂತಾಯ ವಂದ್ಯಾಯ ಪರಮರ್ಷಯೇ||

ಅಮಿತತೇಜಸ್ವಿ, ತಪೋಯುಕ್ತ, ದಾಂತ, ವಂದ್ಯ, ಪರಮ ಋಷಿ ಗುರು ವ್ಯಾಸನಿಗೆ ನಮಸ್ಕರಿಸಿ ಅನೇಕ ಪುರುಷರಿಗೂ ಯಾರನ್ನು ಒಬ್ಬನೇ ಮೂಲವೆಂದು ಹೇಳುತ್ತಾರೋ ಅಂತಹ ಅಧಿಕಗುಣಗಳಿರುವ ವಿಶ್ವಾತ್ಮ ಪುರುಷನನ್ನು ವರ್ಣಿಸುತ್ತೇನೆ.

12338005a ಇದಂ ಪುರುಷಸೂಕ್ತಂ ಹಿ ಸರ್ವವೇದೇಷು ಪಾರ್ಥಿವ|

12338005c ಋತಂ ಸತ್ಯಂ ಚ ವಿಖ್ಯಾತಮೃಷಿಸಿಂಹೇನ ಚಿಂತಿತಮ್||

ಪಾರ್ಥಿವ! ಇದೇ ನಾರಾಯಣ ಋಷಿಸಿಂಹನು ಚಿಂತಿಸಿದ ಪುರುಷಸೂಕ್ತವು ಸರ್ವವೇದಗಳಲ್ಲಿ ಋತ ಮತ್ತು ಸತ್ಯವೆಂದು ವಿಖ್ಯಾತವಾಗಿದೆ.

12338006a ಉತ್ಸರ್ಗೇಣಾಪವಾದೇನ ಋಷಿಭಿಃ ಕಪಿಲಾದಿಭಿಃ|

12338006c ಅಧ್ಯಾತ್ಮಚಿಂತಾಮಾಶ್ರಿತ್ಯ ಶಾಸ್ತ್ರಾಣ್ಯುಕ್ತಾನಿ ಭಾರತ||

ಭಾರತ! ಕಪಿಲನೇ ಮೊದಲಾದ ಋಷಿಗಳು ಸಾಮಾನ್ಯ ಮತ್ತು ವಿಶೇಷ ಶಾಸ್ತ್ರಗಳ ಹಿನ್ನಲೆಯಲ್ಲಿ ಆಧ್ಯಾತ್ಮತತ್ತ್ವವನ್ನು ಚಿಂತನೆಮಾಡಿ ಅದಕ್ಕೆ ಸಂಬಂಧಿಸಿದಂತೆ ಅನೇಕ ಶಾಸ್ತ್ರಗಳನ್ನು ಹೇಳಿದ್ದಾರೆ.

12338007a ಸಮಾಸತಸ್ತು ಯದ್ವ್ಯಾಸಃ ಪುರುಷೈಕತ್ವಮುಕ್ತವಾನ್|

12338007c ತತ್ತೇಽಹಂ ಸಂಪ್ರವಕ್ಷ್ಯಾಮಿ ಪ್ರಸಾದಾದಮಿತೌಜಸಃ||

ಆದರೆ ನಾನು ನಿನಗೆ ಪುರುಷನ ಏಕತ್ವವು ಹೇಗೆ ಎಂದು ಅಮಿತೌಜಸ ಗುರುವಿನ ಪ್ರಸಾದದಿಂದ ಸಂಕ್ಷಿಪ್ತವಾಗಿ ಹೇಳುತ್ತೇನೆ.

12338008a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12338008c ಬ್ರಹ್ಮಣಾ ಸಹ ಸಂವಾದಂ ತ್ರ್ಯಂಬಕಸ್ಯ ವಿಶಾಂ ಪತೇ||

ವಿಶಾಂಪತೇ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಬ್ರಹ್ಮನೊಂದಿಗೆ ತ್ರ್ಯಂಬಕನ ಸಂವಾದವನ್ನು ಉದಾಹರಿಸುತ್ತಾರೆ.

12338009a ಕ್ಷೀರೋದಸ್ಯ ಸಮುದ್ರಸ್ಯ ಮಧ್ಯೇ ಹಾಟಕಸಪ್ರಭಃ|

12338009c ವೈಜಯಂತ ಇತಿ ಖ್ಯಾತಃ ಪರ್ವತಪ್ರವರೋ ನೃಪ||

ನೃಪ! ಕ್ಷೀರಸಮುದ್ರದ ಮಧ್ಯೆ ಸುವರ್ಣಪ್ರಭೆಯಿಂದ ಹೊಳೆಯುತ್ತಿರುವ ವೈಜಯಂತವೆಂಬ ಖ್ಯಾತ ಪರ್ವತವಿದೆ.

12338010a ತತ್ರಾಧ್ಯಾತ್ಮಗತಿಂ ದೇವ ಏಕಾಕೀ ಪ್ರವಿಚಿಂತಯನ್|

12338010c ವೈರಾಜಸದನೇ ನಿತ್ಯಂ ವೈಜಯಂತಂ ನಿಷೇವತೇ||

ಆಧ್ಯಾತ್ಮ ಗತಿಯ ಕುರಿತೇ ಚಿಂತಿಸುತ್ತಿದ್ದ ದೇವ ಬ್ರಹ್ಮನು ಏಕಾಕಿಯಾಗಿ ನಿತ್ಯವೂ ಬ್ರಹ್ಮಲೋಕದಿಂದ ವೈಜಯಂತ ಪರ್ವತಕ್ಕೆ ಬಂದು ಸೇವಿಸುತ್ತಿದ್ದನು.

12338011a ಅಥ ತತ್ರಾಸತಸ್ತಸ್ಯ ಚತುರ್ವಕ್ತ್ರಸ್ಯ ಧೀಮತಃ|

12338011c ಲಲಾಟಪ್ರಭವಃ ಪುತ್ರಃ ಶಿವ ಆಗಾದ್ಯದೃಚ್ಚಯಾ|

12338011e ಆಕಾಶೇನೈವ ಯೋಗೀಶಃ ಪುರಾ ತ್ರಿನಯನಃ ಪ್ರಭುಃ||

ಹಿಂದೆ ಒಮ್ಮೆ ಧೀಮತ ಚತುರ್ವಕ್ತ್ರನು ಅಲ್ಲಿದ್ದಾಗ ಆಕಾಶದಲ್ಲಿ ಹೋಗುತ್ತಿದ್ದ ಲಲಾಟದಿಂದ ಹುಟ್ಟಿದ ಪುತ್ರ ಯೋಗೀಶ ತ್ರಿನಯನ ಪ್ರಭುವು ಅಲ್ಲಿಗೆ ಹೋಗಲು ಬಯಸಿದನು.

12338012a ತತಃ ಖಾನ್ನಿಪಪಾತಾಶು ಧರಣೀಧರಮೂರ್ಧನಿ|

12338012c ಅಗ್ರತಶ್ಚಾಭವತ್ ಪ್ರೀತೋ ವವಂದೇ ಚಾಪಿ ಪಾದಯೋಃ||

ಆಗ ಆಕಾಶದಿಂದ ಪರ್ವತದ ಶಿಖರದ ಮೇಲೆ ಇಳಿದು ರುದ್ರನು ಎದುರಿಗಿದ್ದವನ ಪಾದಗಳಿಗೆ ಪ್ರೀತಿಯಿಂದ ವಂದಿಸಿದನು.

Brahma Rudra | Lord shiva painting, Hindu art, Rudra12338013a ತಂ ಪಾದಯೋರ್ನಿಪತಿತಂ ದೃಷ್ಟ್ವಾ ಸವ್ಯೇನ ಪಾಣಿನಾ|

12338013c ಉತ್ಥಾಪಯಾಮಾಸ ತದಾ ಪ್ರಭುರೇಕಃ ಪ್ರಜಾಪತಿಃ||

ಪಾದಗಳಿಗೆ ಬಿದ್ದ ಅವನನ್ನು ನೋಡಿ ಏಕೈಕ ಪ್ರಭು ಪ್ರಜಾಪತಿಯು ತನ್ನ ಎಡಗೈಯಿಂದ ಅವನನ್ನು ಮೇಲೆತ್ತಿದನು.

12338014a ಉವಾಚ ಚೈನಂ ಭಗವಾಂಶ್ಚಿರಸ್ಯಾಗತಮಾತ್ಮಜಮ್|

12338014c ಸ್ವಾಗತಂ ತೇ ಮಹಾಬಾಹೋ ದಿಷ್ಟ್ಯಾ ಪ್ರಾಪ್ತೋಽಸಿ ಮೇಽಂತಿಕಮ್||

ಬಹಳ ಸಮಯದ ನಂತರ ಬಂದಿದ್ದ ತನ್ನ ಪುತ್ರನಿಗೆ ಭಗವಾನನು ಹೇಳಿದನು: “ಮಹಾಬಾಹೋ! ನಿನಗೆ ಸ್ವಾಗತ! ನೀನು ನನ್ನ ಬಳಿ ಬಂದಿರುವುದು ಒಳ್ಳೆಯದೇ ಆಯಿತು.

12338015a ಕಚ್ಚಿತ್ತೇ ಕುಶಲಂ ಪುತ್ರ ಸ್ವಾಧ್ಯಾಯತಪಸೋಃ ಸದಾ|

12338015c ನಿತ್ಯಮುಗ್ರತಪಾಸ್ತ್ವಂ ಹಿ ತತಃ ಪೃಚ್ಚಾಮಿ ತೇ ಪುನಃ||

ಪುತ್ರ! ನೀನು ಕುಶಲಿಯಾಗಿದ್ದೀಯಾ? ಸ್ವಾಧ್ಯಾಯ ತಪಸ್ಸುಗಳು ಚೆನ್ನಾಗಿ ನಡೆಯುತ್ತಿವೆಯೇ? ನೀನು ನಿತ್ಯವೂ ಉಗ್ರ ತಪಸ್ಸಿನಲ್ಲಿಯೇ ತೊಡಗಿರುತ್ತೀಯೆ. ಆದುದರಿಂದ ಪುನಃ ಕೇಳುತ್ತಿದ್ದೇನೆ.”

12338016 ರುದ್ರ ಉವಾಚ|

12338016a ತ್ವತ್ಪ್ರಸಾದೇನ ಭಗವನ್ ಸ್ವಾಧ್ಯಾಯತಪಸೋರ್ಮಮ|

12338016c ಕುಶಲಂ ಚಾವ್ಯಯಂ ಚೈವ ಸರ್ವಸ್ಯ ಜಗತಸ್ತಥಾ||

ರುದ್ರನು ಹೇಳಿದನು: “ಭಗವನ್! ನಿನ್ನ ಕೃಪೆಯಿಂದ ನನ್ನ ಸ್ವಾಧ್ಯಾಯ ಮತ್ತು ತಪಸ್ಸುಗಳು ಕುಶಲವಾಗಿ ನಡೆಯುತ್ತಿವೆ. ಸರ್ವ ಜಗತ್ತೂ ಅವ್ಯಯವಾಗಿದೆ.

12338017a ಚಿರದೃಷ್ಟೋ ಹಿ ಭಗವಾನ್ ವೈರಾಜಸದನೇ ಮಯಾ|

12338017c ತತೋಽಹಂ ಪರ್ವತಂ ಪ್ರಾಪ್ತಸ್ತ್ವಿಮಂ ತ್ವತ್ಪಾದಸೇವಿತಮ್||

ಭಗವನ್! ಬ್ರಹ್ಮಸದನದಲ್ಲಿ ನಿನ್ನನ್ನು ನೋಡಿ ಬಹಳ ಸಮಯವಾಯಿತು. ಆದುದರಿಂದ ನಿನ್ನ ಪಾದಸೇವಿತವಾದ ಈ ಪರ್ವತಕ್ಕೆ ಬಂದಿದ್ದೇನೆ.

12338018a ಕೌತೂಹಲಂ ಚಾಪಿ ಹಿ ಮೇ ಏಕಾಂತಗಮನೇನ ತೇ|

12338018c ನೈತತ್ಕಾರಣಮಲ್ಪಂ ಹಿ ಭವಿಷ್ಯತಿ ಪಿತಾಮಹ||

ಪಿತಾಮಹ! ಇಲ್ಲಿ ನೀನು ಏಕಾಂತದಲ್ಲಿರುವುದನ್ನು ನೋಡಿ ನನಗೆ ಕುತೂಹಲವೂ ಉಂಟಾಗಿದೆ. ಇದಕ್ಕೆ ಕಾರಣವು ಅಲ್ಪವಾಗಿರಲಿಕ್ಕಿಲ್ಲ.

12338019a ಕಿಂ ನು ತತ್ಸದನಂ ಶ್ರೇಷ್ಠಂ ಕ್ಷುತ್ಪಿಪಾಸಾವಿವರ್ಜಿತಮ್|

12338019c ಸುರಾಸುರೈರಧ್ಯುಷಿತಮೃಷಿಭಿಶ್ಚಾಮಿತಪ್ರಭೈಃ||

12338020a ಗಂಧರ್ವೈರಪ್ಸರೋಭಿಶ್ಚ ಸತತಂ ಸಂನಿಷೇವಿತಮ್|

12338020c ಉತ್ಸೃಜ್ಯೇಮಂ ಗಿರಿವರಮೇಕಾಕೀ ಪ್ರಾಪ್ತವಾನಸಿ||

ಹಸಿವು-ಬಾಯಾರಿಕೆಗಳಿಂದ ವಿವರ್ಜಿತವಾಗಿರುವ, ಸುರಾಸುರರಿಂದ ಮತ್ತು ಅಮಿತಪ್ರಭೆಯ ಋಷಿಗಳಿಂದ ಸೇವಿತವಾಗಿರುವ, ಸತತವೂ ಗಂಧರ್ವ-ಅಪ್ಸರೆಯರಿಂದ ಸೇವಿಸಲ್ಪಡುವ ಆ ಶ್ರೇಷ್ಠ ಸದನವನ್ನು ಬಿಟ್ಟು ಈ ಗಿರಿವರಕ್ಕೆ ಏಕೆ ಏಕಾಂಗಿಯಾಗಿ ಬಂದಿರುವೆ?”

12338021 ಬ್ರಹ್ಮೋವಾಚ|

12338021a ವೈಜಯಂತೋ ಗಿರಿವರಃ ಸತತಂ ಸೇವ್ಯತೇ ಮಯಾ|

12338021c ಅತ್ರೈಕಾಗ್ರೇಣ ಮನಸಾ ಪುರುಷಶ್ಚಿಂತ್ಯತೇ ವಿರಾಟ್||

ಬ್ರಹ್ಮನು ಹೇಳಿದನು: “ನಾನು ಈ ಗಿರಿವರ ವೈಜಯಂತಕ್ಕೆ ಸತತವೂ ಬರುತ್ತಿರುತ್ತೇನೆ. ಇಲ್ಲಿ ಏಕಾಗ್ರ ಮನಸ್ಸಿನಿಂದ ವಿರಾಟ್ ಪುರುಷನನ್ನು ಧ್ಯಾನಿಸುತ್ತೇನೆ.”

12338022 ರುದ್ರ ಉವಾಚ|

12338022a ಬಹವಃ ಪುರುಷಾ ಬ್ರಹ್ಮಂಸ್ತ್ವಯಾ ಸೃಷ್ಟಾಃ ಸ್ವಯಂಭುವಾ|

12338022c ಸೃಜ್ಯಂತೇ ಚಾಪರೇ ಬ್ರಹ್ಮನ್ಸ ಚೈಕಃ ಪುರುಷೋ ವಿರಾಟ್||

12338023a ಕೋ ಹ್ಯಸೌ ಚಿಂತ್ಯತೇ ಬ್ರಹ್ಮಂಸ್ತ್ವಯಾ ವೈ ಪುರುಷೋತ್ತಮಃ|

12338023c ಏತನ್ಮೇ ಸಂಶಯಂ ಬ್ರೂಹಿ ಮಹತ್ಕೌತೂಹಲಂ ಹಿ ಮೇ||

ರುದ್ರನು ಹೇಳಿದನು: “ಬ್ರಹ್ಮನ್! ಸ್ವಯಂಭುವಾದ ನೀನು ಅನೇಕ ಪುರುಷರನ್ನು ಸೃಷ್ಟಿಸಿದ್ದೀಯೆ. ಬ್ರಹ್ಮನ್! ಇನ್ನೂ ಇತರ ಪುರುಷರನ್ನೂ ಸೃಷ್ಟಿಸುತ್ತಿರುತ್ತೀಯೆ. ಅವರಲ್ಲಿ ವಿರಾಟ್ ಪುರುಷನೂ ಒಬ್ಬನಾಗಿರಬೇಕು. ಬ್ರಹ್ಮನ್! ನೀನು ಧ್ಯಾನಿಸುತ್ತಿರುವ ಈ ಪುರುಷೋತ್ತಮನು ಯಾರು? ಇದರ ಕುರಿತು ನನ್ನಲ್ಲಿ ಸಂಶಯವೂ ಕುತೂಹಲವೂ ಉಂಟಾಗಿದೆ. ಹೇಳು.”

12338024 ಬ್ರಹ್ಮೋವಾಚ|

12338024a ಬಹವಃ ಪುರುಷಾಃ ಪುತ್ರ ಯೇ ತ್ವಯಾ ಸಮುದಾಹೃತಾಃ|

12338024c ಏವಮೇತದತಿಕ್ರಾಂತಂ ದ್ರಷ್ಟವ್ಯಂ ನೈವಮಿತ್ಯಪಿ|

ಬ್ರಹ್ಮನು ಹೇಳಿದನು: “ಪುತ್ರ! ನೀನು ಹೇಳಿದಂತೆ ನಾನು ಅನೇಕ ಪುರುಷರನ್ನು ಸೃಷ್ಟಿಸಿದ್ದೇನೆ. ಆದರೆ ಅವರನ್ನು ಹೀಗೆ ಧ್ಯಾನದ ಮೂಲಕ ನೋಡಬೇಕಾದುದೇನೂ ಇಲ್ಲ.

12338024e ಆಧಾರಂ ತು ಪ್ರವಕ್ಷ್ಯಾಮಿ ಏಕಸ್ಯ ಪುರುಷಸ್ಯ ತೇ||

12338025a ಬಹೂನಾಂ ಪುರುಷಾಣಾಂ ಸ ಯಥೈಕಾ ಯೋನಿರುಚ್ಯತೇ|

ನಾನು ನಿನಗೆ ಎಲ್ಲಕ್ಕೂ ಆಧಾರಭೂತನಾಗಿರುವ, ಅನೇಕ ಪುರುಷರಿಗೂ ಉತ್ಪತ್ತಿಸ್ಥಾನನಾಗಿರುವ ಏಕಮಾತ್ರ ಪುರುಷನ ಕುರಿತು ಹೇಳುತ್ತಿದ್ದೇನೆ.

12338025c ತಥಾ ತಂ ಪುರುಷಂ ವಿಶ್ವಂ ಪರಮಂ ಸುಮಹತ್ತಮಮ್|

12338025e ನಿರ್ಗುಣಂ ನಿರ್ಗುಣಾ ಭೂತ್ವಾ ಪ್ರವಿಶಂತಿ ಸನಾತನಮ್||

ಎಲ್ಲವೂ ನಿರ್ಗುಣವಾಗಿ ಆ ವಿಶ್ವ ಪರಮ ಮಹತ್ತತ್ತ್ವ ನಿರ್ಗುಣ ಸನಾತನ ಪುರುಷನನ್ನು ಸೇರುತ್ತವೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ದ್ವೈಪಾಯನೋತ್ಪತ್ತೌ ಅಷ್ಟತ್ರಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ದ್ವೈಪಾಯನೋತ್ಪತ್ತಿ ಎನ್ನುವ ಮುನ್ನೂರಾಮೂವತ್ತೆಂಟನೇ ಅಧ್ಯಾಯವು.

Black Color Flower Mandala Over White Background. Element For.. Royalty Free Cliparts, Vectors, And Stock Illustration. Image 64446108.

Comments are closed.