Shanti Parva: Chapter 323

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೨೩

ಉಪರಿಚರನ ಯಜ್ಞದಲ್ಲಿ ಭಗವಂತನ ವಿಷಯದಲ್ಲಿ ಬೃಹಸ್ಪತಿಯ ಕೋಪ (1-14); ಏಕತನೇ ಮೊದಲಾದ ಋಷಿಗಳು ಶ್ವೇತದ್ವೀಪದ ಮತ್ತು ಭಗವಂತನ ಮಹಿಮೆಯನ್ನು ಹೇಳಿ ಬೃಹಸ್ಪತಿಯನ್ನು ಸಮಾಧಾನಗೊಳಿಸಿದುದು (15-57).

12323001 ಭೀಷ್ಮ ಉವಾಚ|

12323001a ತತೋಽತೀತೇ ಮಹಾಕಲ್ಪೇ ಉತ್ಪನ್ನೇಽಂಗಿರಸಃ ಸುತೇ|

12323001c ಬಭೂವುರ್ನಿರ್ವೃತಾ ದೇವಾ ಜಾತೇ ದೇವಪುರೋಹಿತೇ||

ಭೀಷ್ಮನು ಹೇಳಿದನು: “ಹಿಂದಿನ ಮಹಾಕಲ್ಪದ ಪ್ರಾರಂಭದಲ್ಲಿ ಅಂಗಿರಸನಿಗೆ ಹುಟ್ಟಿದ ಮಗನು ದೇವಪುರೋಹಿತನಾದನು. ಅವನಿಂದ ದೇವತೆಗಳು ಪರಮಪ್ರೀತರಾದರು.

12323002a ಬೃಹದ್ಬ್ರಹ್ಮ ಮಹಚ್ಚೇತಿ ಶಬ್ದಾಃ ಪರ್ಯಾಯವಾಚಕಾಃ|

12323002c ಏಭಿಃ ಸಮನ್ವಿತೋ ರಾಜನ್ಗುಣೈರ್ವಿದ್ವಾನ್ಬೃಹಸ್ಪತಿಃ||

ರಾಜನ್! ಬೃಹತ್, ಬ್ರಹ್ಮ ಮತ್ತು ಮಹತ್ ಎಂಬ ಪರ್ಯಾಯವಾಚಕ ಶಬ್ಧಗಳ ಸಮನ್ವಿತನಾದ ಬೃಹಸ್ಪತಿಯು ಈ ಗುಣಗಳಿಂದಲೂ ಸಮನ್ವಿತನಾಗಿದ್ದನು.

12323003a ತಸ್ಯ ಶಿಷ್ಯೋ ಬಭೂವಾಗ್ರ್ಯೋ ರಾಜೋಪರಿಚರೋ ವಸುಃ|

12323003c ಅಧೀತವಾಂಸ್ತದಾ ಶಾಸ್ತ್ರಂ ಸಮ್ಯಕ್ಚಿತ್ರಶಿಖಂಡಿಜಮ್||

ರಾಜ ಉಪರಿಚರ ವಸುವ ಅವನ ಅಗ್ರ್ಯ ಶಿಷ್ಯನಾದನು. ಅವನು ಚಿತ್ರಶಿಖಂಡಿಗಳಿಂದ ಮಾಡಲ್ಪಟ್ಟಿದ್ದ ಪಂಚರಾತ್ರ ಶಾಸ್ತ್ರವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದನು.

12323004a ಸ ರಾಜಾ ಭಾವಿತಃ ಪೂರ್ವಂ ದೈವೇನ ವಿಧಿನಾ ವಸುಃ|

12323004c ಪಾಲಯಾಮಾಸ ಪೃಥಿವೀಂ ದಿವಮಾಖಂಡಲೋ ಯಥಾ||

ಹಿಂದೆ ವಿಧಿ ದೈವವೇ ಭಾವಿಸಿದ್ದಂತೆ ರಾಜಾ ವಸುವು ಇಂದ್ರನು ದಿವಿಯನ್ನು ಹೇಗೋ ಹಾಗೆ ಪೃಥ್ವಿಯನ್ನು ಪಾಲಿಸತೊಡಗಿದನು.

12323005a ತಸ್ಯ ಯಜ್ಞೋ ಮಹಾನಾಸೀದಶ್ವಮೇಧೋ ಮಹಾತ್ಮನಃ|

12323005c ಬೃಹಸ್ಪತಿರುಪಾಧ್ಯಾಯಸ್ತತ್ರ ಹೋತಾ ಬಭೂವ ಹ||

ಆ ಮಹಾತ್ಮನು ಒಂದು ಮಹಾ ಅಶ್ವಮೇಧ ಯಜ್ಞವನ್ನು ಮಾಡಿದನು. ಆ ಯಜ್ಞದಲ್ಲಿ ಉಪಾಧ್ಯಾಯ ಬೃಹಸ್ಪತಿಯು ಹೋತೃವಾಗಿದ್ದನು.

12323006a ಪ್ರಜಾಪತಿಸುತಾಶ್ಚಾತ್ರ ಸದಸ್ಯಾಸ್ತ್ವಭವಂಸ್ತ್ರಯಃ|

12323006c ಏಕತಶ್ಚ ದ್ವಿತಶ್ಚೈವ ತ್ರಿತಶ್ಚೈವ ಮಹರ್ಷಯಃ||

ಆ ಯಜ್ಞದಲ್ಲಿ ಪ್ರಜಾಪತಿಯ ಮಕ್ಕಳಾದ ಏಕತ, ದ್ವಿತ ಮತ್ತು ತ್ರಿತ ಮಹರ್ಷಿಗಳು ಸದಸ್ಯರಾಗಿದ್ದರು.

12323007a ಧನುಷಾಕ್ಷೋಽಥ ರೈಭ್ಯಶ್ಚ ಅರ್ವಾವಸುಪರಾವಸೂ|

12323007c ಋಷಿರ್ಮೇಧಾತಿಥಿಶ್ಚೈವ ತಾಂಡ್ಯಶ್ಚೈವ ಮಹಾನೃಷಿಃ||

12323008a ಋಷಿಃ ಶಕ್ತಿರ್ಮಹಾಭಾಗಸ್ತಥಾ ವೇದಶಿರಾಶ್ಚ ಯಃ|

12323008c ಕಪಿಲಶ್ಚ ಋಷಿಶ್ರೇಷ್ಠಃ ಶಾಲಿಹೋತ್ರಪಿತಾಮಹಃ||

12323009a ಆದ್ಯಃ ಕಠಸ್ತೈತ್ತಿರಿಶ್ಚ ವೈಶಂಪಾಯನಪೂರ್ವಜಃ|

12323009c ಕಣ್ವೋಽಥ ದೇವಹೋತ್ರಶ್ಚ ಏತೇ ಷೋಡಶ ಕೀರ್ತಿತಾಃ|

ಇವರನ್ನೂ ಸೇರಿ ಒಟ್ಟು ಹದಿರಾರು ಋಷಿಗಳು – ಧನುಷಾಕ್ಷ, ರೈಭ್ಯ, ಅರಾವಸು, ಪರಾವಸು, ಋಷಿ ಮೇಧಾತಿಥಿ, ಮಹಾನೃಷಿ ತಾಂಡ್ಯ, ಋಷಿ ಶಕ್ತಿ, ಮಹಾಭಾಗ ವೇದಶಿರ, ಶಾಲಿಹೋತ್ರನ ಪಿತಾಮಹ ಋಷಿಶ್ರೇಷ್ಠ ಕಪಿಲ, ಆದ್ಯಕಠ, ವೈಶಂಪಾಯನನ ಪೂರ್ವಜ ತೈತ್ತಿರಿ, ಕಣ್ವ,  ಮತ್ತು ದೇವಹೋತ್ರ – ಇವರು ಋತ್ವಿಜರಾಗಿದ್ದರು.

12323009e ಸಂಭೃತಾಃ ಸರ್ವಸಂಭಾರಾಸ್ತಸ್ಮಿನ್ರಾಜನ್ಮಹಾಕ್ರತೌ||

12323010a ನ ತತ್ರ ಪಶುಘಾತೋಽಭೂತ್ಸ ರಾಜೈವಂ ಸ್ಥಿತೋಽಭವತ್|

ಆ ಮಹಾಕ್ರತುವಿನಲ್ಲಿ ಸರ್ವ ಸಾಮಗ್ರಿಗಳನ್ನೂ ಸಂಗ್ರಹಿಸಲಾಗಿತ್ತು. ಆದರೆ ಅದರಲ್ಲಿ ಪಶುಘಾತವಿರಲಿಲ್ಲ. ರಾಜನೇ ಹಾಗೆ ಮಾಡಿಸಿದ್ದನು.

12323010c ಅಹಿಂಸ್ರಃ ಶುಚಿರಕ್ಷುದ್ರೋ ನಿರಾಶೀಃ ಕರ್ಮಸಂಸ್ತುತಃ|

12323010e ಆರಣ್ಯಕಪದೋದ್ಗೀತಾ ಭಾಗಾಸ್ತತ್ರೋಪಕಲ್ಪಿತಾಃ||

ಆ ಯಜ್ಞವು ಹಿಂಸೆಯಿಂದ ರಹಿತವಾಗಿತ್ತು. ಶುಚಿಯೂ, ಉದಾರವೂ, ಫಲಸಂಕಲ್ಪ ರಹಿತವೂ, ಕರ್ಮಸಂಸ್ತುತವೂ ಆಗಿತ್ತು. ಅರಣ್ಯದ ಕಂದ-ಮೂಲ-ಫಲಗಳೇ ದೇವತೆಗಳ ಹವಿರ್ಭಾಗಗಳಾಗಿ ಉಪಯೋಗಿಸಲ್ಪಟ್ಟಿದ್ದವು.

12323011a ಪ್ರೀತಸ್ತತೋಽಸ್ಯ ಭಗವಾನ್ದೇವದೇವಃ ಪುರಾತನಃ|

12323011c ಸಾಕ್ಷಾತ್ತಂ ದರ್ಶಯಾಮಾಸ ಸೋಽದೃಶ್ಯೋಽನ್ಯೇನ ಕೇನ ಚಿತ್||

ಇದರಿಂದ ಪ್ರೀತನಾದ ಪುರಾತನ ಭಗವಾನ್ ದೇವದೇವನು ಅವನಿಗೆ ಸಾಕ್ಷಾತ್ತಾಗಿ ಕಾಣಿಸಿಕೊಂಡನು. ಅದರೆ ಇತರರಿಗೆ ಅವನು ಅದೃಶ್ಯನಾಗಿದ್ದನು.

12323012a ಸ್ವಯಂ ಭಾಗಮುಪಾಘ್ರಾಯ ಪುರೋಡಾಶಂ ಗೃಹೀತವಾನ್|

12323012c ಅದೃಶ್ಯೇನ ಹೃತೋ ಭಾಗೋ ದೇವೇನ ಹರಿಮೇಧಸಾ||

ಹಯಗ್ರೀವಸ್ವರೂಪನಾಗಿದ್ದ ದೇವನು ಸ್ವಯಂ ಪುರೋಡಾಶವನ್ನು ಸ್ವೀಕರಿಸಿ ಆಘ್ರಾಣಿಸಿ ಹವಿರ್ಭಾಗವನ್ನು ಅಪಹರಿಸಿ ಅದೃಶ್ಯನಾದನು.

12323013a ಬೃಹಸ್ಪತಿಸ್ತತಃ ಕ್ರುದ್ಧಃ ಸ್ರುವಮುದ್ಯಮ್ಯ ವೇಗಿತಃ|

12323013c ಆಕಾಶಂ ಘ್ನನ್ಸ್ರುವಃ ಪಾತೈ ರೋಷಾದಶ್ರೂಣ್ಯವರ್ತಯತ್||

ಇದ್ದಕ್ಕಿದ್ದ ಹಾಗೆಯೇ ಪುರೋಡಾಶವು ಮಾಯವಾದುದನ್ನು ನೋಡಿ ಕೃದ್ಧನಾದ ಬೃಹಸ್ಪತಿಯು ಸ್ರುಚವನ್ನೆತ್ತಿ ಅದರಿಂದ ವೇಗವಾಗಿ ಆಕಾಶದತ್ತ ಪ್ರಹರಿಸಿದನು. ರೋಷದಿಂದ ಅವನ ಕಣ್ಣುಗಳಿಂದ ಕಾದ ಕಂಬನಿಗಳು ಸುರಿಯುತ್ತಿದ್ದವು.

12323014a ಉವಾಚ ಚೋಪರಿಚರಂ ಮಯಾ ಭಾಗೋಽಯಮುದ್ಯತಃ|

12323014c ಗ್ರಾಹ್ಯಃ ಸ್ವಯಂ ಹಿ ದೇವೇನ ಮತ್ಪ್ರತ್ಯಕ್ಷಂ ನ ಸಂಶಯಃ||

ಅವನು ಉಪರಿಚರನಿಗೆ ಹೇಳಿದನು: “ಹವಿರ್ಭಾಗವನ್ನು ನಾನು ಎತ್ತಿ ಹಿಡಿದುಕೊಂಡಿದ್ದೇನೆ. ಸ್ವಯಂ ದೇವನೇ ನನ್ನ ಸಮಕ್ಷಮದಲ್ಲಿ ಇದನ್ನು ಸ್ವೀಕರಿಸುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ!””

[1]12323015a ಉದ್ಯತಾ ಯಜ್ಞಭಾಗಾ ಹಿ ಸಾಕ್ಷಾತ್ಪ್ರಾಪ್ತಾಃ ಸುರೈರಿಹ|

12323015c ಕಿಮರ್ಥಮಿಹ ನ ಪ್ರಾಪ್ತೋ ದರ್ಶನಂ ಸ ಹರಿರ್ವಿಭುಃ||

ಯುದಿಷ್ಠಿರನು ಹೇಳಿದನು: “ಎಲ್ಲ ದೇವತೆಗಳೂ ಪ್ರತ್ಯಕ್ಷವಾಗಿಯೇ ಬಂದು ತಮ್ಮ ತಮ್ಮ ಹವಿರ್ಭಾಗಗಳನ್ನು ಸ್ವೀಕರಿಸುತ್ತಿದ್ದಾಗ ವಿಭು ಶ್ರೀಹರಿಯು ಹವಿಸ್ಸನ್ನು ಸ್ವೀಕರಿಸಲು ಅಲ್ಲಿಗೆ ಬಂದಿದ್ದರೂ ಎಲ್ಲರಿಗೂ ದರ್ಶನವನ್ನೇಕೆ ಕೊಡಲಿಲ್ಲ?”

[2]12323016a ತತಃ ಸ ತಂ ಸಮುದ್ಧೂತಂ ಭೂಮಿಪಾಲೋ ಮಹಾನ್ವಸುಃ|

12323016c ಪ್ರಸಾದಯಾಮಾಸ ಮುನಿಂ ಸದಸ್ಯಾಸ್ತೇ ಚ ಸರ್ವಶಃ||

ಭೀಷ್ಮನು ಹೇಳಿದನು: “ಹಾಗೆ ಸಿಟ್ಟಿನಿಂದ ಉರಿದೆದ್ದಿದ್ದ ಮುನಿಯನ್ನು ಭೂಮಿಪಾಲ ಮಹಾನ್ ವಸು ಮತ್ತು ಸದಸ್ಯರು ಎಲ್ಲರೀತಿಗಳಲ್ಲಿಯೂ ಸಮಾಧಾನಗೊಳಿಸತೊಡಗಿದರು.

12323017a ಊಚುಶ್ಚೈನಮಸಂಭ್ರಾಂತಾ ನ ರೋಷಂ ಕರ್ತುಮರ್ಹಸಿ|

12323017c ನೈಷ ಧರ್ಮಃ ಕೃತಯುಗೇ ಯಸ್ತ್ವಂ ರೋಷಮಚೀಕೃಥಾಃ||

ಅವರು ಅವನಿಗೆ ಹೇಳಿದರು: “ನೀನು ಹೀಗೆ ಸಂಭ್ರಾಂತಗೊಂಡು ರೋಷ ಮಾಡಬಾರದು. ನಿನ್ನ ಈ ರೋಷವು ಕೃತಯುಗದ ಧರ್ಮವಲ್ಲ.

12323018a ಅರೋಷಣೋ ಹ್ಯಸೌ ದೇವೋ ಯಸ್ಯ ಭಾಗೋಽಯಮುದ್ಯತಃ|

12323018c ನ ಸ ಶಕ್ಯಸ್ತ್ವಯಾ ದ್ರಷ್ಟುಮಸ್ಮಾಭಿರ್ವಾ ಬೃಹಸ್ಪತೇ|

12323018e ಯಸ್ಯ ಪ್ರಸಾದಂ ಕುರುತೇ ಸ ವೈ ತಂ ದ್ರಷ್ಟುಮರ್ಹತಿ||

ನೀನು ಎತ್ತಿ ಹಿಡಿದಿರುವ ಈ ಹವಿರ್ಭಾಗವು ಯಾವ ದೇವನಿಗಾಗಿದೆಯೋ ಅವನಲ್ಲಿ ರೋಷವೆನ್ನುವುದಿಲ್ಲ. ಬೃಹಸ್ಪತೇ! ಅವನನ್ನು ನೋಡಲು ನಿನಗಾಗಲೀ ನಮಗಾಗಲೀ ಶಕ್ಯವಿಲ್ಲ. ಯಾರು ಅವನನ್ನು ಪ್ರಸನ್ನಗೊಳಿಸುತ್ತಾನೋ ಅವನೇ ಅವನನ್ನು ನೋಡಲು ಸಾಧ್ಯ.”

12323019 ಏಕತದ್ವಿತತ್ರಿತಾ ಊಚುಃ|

12323019a ವಯಂ ಹಿ ಬ್ರಹ್ಮಣಃ ಪುತ್ರಾ ಮಾನಸಾಃ ಪರಿಕೀರ್ತಿತಾಃ|

12323019c ಗತಾ ನಿಃಶ್ರೇಯಸಾರ್ಥಂ ಹಿ ಕದಾ ಚಿದ್ದಿಶಮುತ್ತರಾಮ್||

ಏಕತ-ದ್ವಿತ-ತ್ರಿತರು ಹೇಳಿದರು: “ಬ್ರಹ್ಮನ ಮಾನಸ ಪುತ್ರರೆಂದು ವಿಖ್ಯಾತರಾದ ನಾವು ಒಮ್ಮೆ ನಮ್ಮ ಶ್ರೇಯಃಪ್ರಾಪ್ತಿಗಾಗಿ ಉತ್ತರ ದಿಕ್ಕಿಗೆ ಹೋದೆವು.

12323020a ತಪ್ತ್ವಾ ವರ್ಷಸಹಸ್ರಾಣಿ ಚತ್ವಾರಿ ತಪ ಉತ್ತಮಮ್|

12323020c ಏಕಪಾದಸ್ಥಿತಾಃ ಸಮ್ಯಕ್ಕಾಷ್ಠಭೂತಾಃ ಸಮಾಹಿತಾಃ||

12323021a ಮೇರೋರುತ್ತರಭಾಗೇ ತು ಕ್ಷೀರೋದಸ್ಯಾನುಕೂಲತಃ|

12323021c ಸ ದೇಶೋ ಯತ್ರ ನಸ್ತಪ್ತಂ ತಪಃ ಪರಮದಾರುಣಮ್|

12323021e ಕಥಂ ಪಶ್ಯೇಮಹಿ ವಯಂ ದೇವಂ ನಾರಾಯಣಂ ತ್ವಿತಿ||

ನಾವು ದೇವ ನಾರಾಯಣನನ್ನು ಹೇಗೆ ನೋಡಬಲ್ಲೆವು? ಎಂದು ಮೇರುವಿನ ಉತ್ತರ ಭಾಗದಲ್ಲಿದ್ದ ಕ್ಷೀರಸಾಗರದ ತೀರ ಪ್ರದೇಶದಲ್ಲಿ ನಾಲ್ಕು ಸಾವಿರ ವರ್ಷಗಳ ಪರ್ಯಂತ ಸಮಾಹಿತರಾಗಿ, ಕಾಷ್ಠರಾಗಿ ಒಂದೇ ಪಾದರಾಗಿ ನಿಂತುಕೊಂಡು ಪರಮ ದಾರುಣವಾದ ಉತ್ತಮ ತಪವನ್ನು ತಪಿಸಿದೆವು.

12323022a ತತೋ ವ್ರತಸ್ಯಾವಭೃಥೇ ವಾಗುವಾಚಾಶರೀರಿಣೀ|

12323022c ಸುತಪ್ತಂ ವಸ್ತಪೋ ವಿಪ್ರಾಃ ಪ್ರಸನ್ನೇನಾಂತರಾತ್ಮನಾ||

ವ್ರತದ ಅವಭೃಥಸಮಯದಲ್ಲಿ ಅಶರೀರವಾಣಿಯೊಂದು ನುಡಿಯಿತು: “ವಿಪ್ರರೇ! ಅಂತರಾತ್ಮದಲ್ಲಿ ಪ್ರಸನ್ನರಾಗಿದ್ದುಕೊಂಡು ಉತ್ತಮ ತಪವನ್ನೇ ಪತಿಸಿದ್ದೀರಿ!

12323023a ಯೂಯಂ ಜಿಜ್ಞಾಸವೋ ಭಕ್ತಾಃ ಕಥಂ ದ್ರಕ್ಷ್ಯಥ ತಂ ಪ್ರಭುಮ್|

12323023c ಕ್ಷೀರೋದಧೇರುತ್ತರತಃ ಶ್ವೇತದ್ವೀಪೋ ಮಹಾಪ್ರಭಃ||

ಭಕ್ತರಾದ ನೀವು ಅವನನ್ನು ತಿಳಿದುಕೊಳ್ಳುವ ಬಯಕೆಯನ್ನಿಟ್ಟುಕೊಂಡಿರುವಿರಿ. ಅವನನ್ನು ನೀವು ಹೇಗೆ ಕಾಣಬಹುದು ಎನ್ನುವುದನ್ನು ಹೇಳುತ್ತೇನೆ. ಕ್ಷೀರಸಾಗರದ ಉತ್ತರದಲ್ಲಿ ಮಹಾಪ್ರಭೆಯ ಶ್ವೇತದ್ವೀಪವಿದೆ.

12323024a ತತ್ರ ನಾರಾಯಣಪರಾ ಮಾನವಾಶ್ಚಂದ್ರವರ್ಚಸಃ|

12323024c ಏಕಾಂತಭಾವೋಪಗತಾಸ್ತೇ ಭಕ್ತಾಃ ಪುರುಷೋತ್ತಮಮ್||

12323025a ತೇ ಸಹಸ್ರಾರ್ಚಿಷಂ ದೇವಂ ಪ್ರವಿಶಂತಿ ಸನಾತನಮ್|

ಅಲ್ಲಿ ನಾರಾಯಣನನ್ನು ಕಾಣುವ ಚಂದ್ರವರ್ಚಸ ಮಾನವರು ಇದ್ದಾರೆ. ನಾರಾಯಣನಲ್ಲಿಯೇ ಅನನ್ಯ ಭಕ್ತಿಯನ್ನಿಟ್ಟಿರುವ ಪರಮಭಕ್ತರಾದ ಅವರು ಸನಾತನ ದೇವ ಸಹಸ್ರಾರ್ಚಿಯನ್ನು ಪ್ರವೇಶಿಸುತ್ತಾರೆ.

12323025c ಅತೀಂದ್ರಿಯಾ ನಿರಾಹಾರಾ ಅನಿಷ್ಪಂದಾಃ ಸುಗಂಧಿನಃ||

12323026a ಏಕಾಂತಿನಸ್ತೇ ಪುರುಷಾಃ ಶ್ವೇತದ್ವೀಪನಿವಾಸಿನಃ|

12323026c ಗಚ್ಚಧ್ವಂ ತತ್ರ ಮುನಯಸ್ತತ್ರಾತ್ಮಾ ಮೇ ಪ್ರಕಾಶಿತಃ||

ಅತೀಂದ್ರಿಯರೂ, ನಿರಾಹಾರರೂ, ನಿಶ್ಚೇಷ್ಟರೂ ಸುಗಂಧಿತರೂ ಆದ ಶ್ವೇತದ್ವೀಪವಾಸಿ ಪುರುಷರು ನನ್ನಲ್ಲಿಯೇ ಅನನ್ಯ ಭಕ್ತಿಯನ್ನಿಟ್ಟುರುವರು. ಅವರ ಬಳಿ ಹೋಗಿ. ಅಲ್ಲಿ ನನ್ನ ಆತ್ಮವು ಪ್ರಕಾಶಿತಗೊಂಡಿದೆ.”

12323027a ಅಥ ಶ್ರುತ್ವಾ ವಯಂ ಸರ್ವೇ ವಾಚಂ ತಾಮಶರೀರಿಣೀಮ್|

12323027c ಯಥಾಖ್ಯಾತೇನ ಮಾರ್ಗೇಣ ತಂ ದೇಶಂ ಪ್ರತಿಪೇದಿರೇ||

ಆ ಅಶರೀರ ವಾಣಿಯನ್ನು ಕೇಳಿ ನಾವೆಲ್ಲರೂ ಅದು ಹೇಳಿದ ಮಾರ್ಗದಲ್ಲಿ ಆ ಪ್ರದೇಶವನ್ನು ತಲುಪಿದೆವು.

12323028a ಪ್ರಾಪ್ಯ ಶ್ವೇತಂ ಮಹಾದ್ವೀಪಂ ತಚ್ಚಿತ್ತಾಸ್ತದ್ದಿದೃಕ್ಷವಃ|

12323028c ತತೋ ನೋ ದೃಷ್ಟಿವಿಷಯಸ್ತದಾ ಪ್ರತಿಹತೋಽಭವತ್||

12323029a ನ ಚ ಪಶ್ಯಾಮ ಪುರುಷಂ ತತ್ತೇಜೋಹೃತದರ್ಶನಾಃ|

ಅವನನ್ನು ಕಾಣುವುದನ್ನೇ ಉದ್ದೇಶವನ್ನಾಗಿಟ್ಟುಕೊಂಡು ನಾವು ಆ ಶ್ವೇತಮಹಾದ್ವೀಪವನ್ನು ತಲುಪಿದಾಗ ಆ ಪ್ರದೇಶದಲ್ಲಿದ್ದ ಪ್ರಭೆಯಿಂದ ನಮ್ಮ ದೃಷ್ಟಿಯು ಕುರುಡಾಯಿತು. ಆ ತೇಜಸ್ಸಿನಿಂದ ಕುರುಡರಾದ ನಾವು ಆ ಪುರುಷನನ್ನು ನೋಡಲಾರರಾದೆವು.

12323029c ತತೋ ನಃ ಪ್ರಾದುರಭವದ್ವಿಜ್ಞಾನಂ ದೇವಯೋಗಜಮ್||

12323030a ನ ಕಿಲಾತಪ್ತತಪಸಾ ಶಕ್ಯತೇ ದ್ರಷ್ಟುಮಂಜಸಾ|

ಆಗ ನಮಗೆ ನಮ್ಮ ಕಣ್ಣುಗಳಿಂದ ಇವನನ್ನು ನೋಡಲು ತಪಸ್ಸನ್ನು ತಪಿಸಿದವರಿಗೆ ಮಾತ್ರ ಶಕ್ಯವೆಲ್ಲವೇ ಎಂಬ ದೇವಯೋಗದಿಂದುಂಟಾದ ವಿಜ್ಞಾನವು ನನ್ನಲ್ಲಿ ಹುಟ್ಟಿಕೊಂಡಿತು.

12323030c ತತಃ ಪುನರ್ವರ್ಷಶತಂ ತಪ್ತ್ವಾ ತಾತ್ಕಾಲಿಕಂ ಮಹತ್||

12323031a ವ್ರತಾವಸಾನೇ ಸುಶುಭಾನ್ನರಾನ್ದದೃಶಿರೇ ವಯಮ್|

ಅಲ್ಲಿಯೇ ಪುನಃ ನೂರು ವರ್ಷಗಳು ತಪಸ್ಸನ್ನು ತಪಿಸಿ ಆ ವ್ರತಾವಸಾನದಲ್ಲಿ ನಾವು ಆ ಸುಶುಭ ನರರನ್ನು ಕಂಡೆವು.

12323031c ಶ್ವೇತಾಂಶ್ಚಂದ್ರಪ್ರತೀಕಾಶಾನ್ಸರ್ವಲಕ್ಷಣಲಕ್ಷಿತಾನ್||

12323032a ನಿತ್ಯಾಂಜಲಿಕೃತಾನ್ಬ್ರಹ್ಮ ಜಪತಃ ಪ್ರಾಗುದಙ್ಮುಖಾನ್|

12323032c ಮಾನಸೋ ನಾಮ ಸ ಜಪೋ ಜಪ್ಯತೇ ತೈರ್ಮಹಾತ್ಮಭಿಃ|

ಶ್ವೇತವರ್ಣದರೂ ಚಂದ್ರಸದೃಶರೂ, ಸರ್ವಲಕ್ಷಣಗಳಿಂದಲೂ ತುಂಬಿದ್ದ ಅವರು ನಿತ್ಯವೂ ಅಂಜಲೀಕೃತರಾಗಿ ಈಶಾನ್ಯದಿಕ್ಕಿಗೆ ಮುಖಮಾಡಿ ಬ್ರಹ್ಮಜಪವನ್ನು ಮಾಡುತ್ತಿದ್ದರು. ಆ ಮಹಾತ್ಮರು ಮಾನಸ ಎಂಬ ಹೆಸರಿನ ಜಪವನ್ನು ಜಪಿಸುತ್ತಿದ್ದರು.

12323032e ತೇನೈಕಾಗ್ರಮನಸ್ತ್ವೇನ ಪ್ರೀತೋ ಭವತಿ ವೈ ಹರಿಃ||

12323033a ಯಾ ಭವೇನ್ಮುನಿಶಾರ್ದೂಲ ಭಾಃ ಸೂರ್ಯಸ್ಯ ಯುಗಕ್ಷಯೇ|

12323033c ಏಕೈಕಸ್ಯ ಪ್ರಭಾ ತಾದೃಕ್ಸಾಭವನ್ಮಾನವಸ್ಯ ಹ||

ಅವರ ಏಕಾಗ್ರಮನಸ್ಸಿನಿಂದ ಹರಿಯು ಪ್ರೀತನಾಗುತ್ತಿದ್ದನು. ಮುನಿಶಾರ್ದೂಲ! ಶ್ವೇತದ್ವೀಪದಲ್ಲಿದ್ದ ಪ್ರತಿಯೊಬ್ಬ ಮಾನವನಲ್ಲಿಯೂ ಯುಕ್ಷಯದ ಸೂರ್ಯನ ಪ್ರಭೆಯಿತ್ತು.

12323034a ತೇಜೋನಿವಾಸಃ ಸ ದ್ವೀಪ ಇತಿ ವೈ ಮೇನಿರೇ ವಯಮ್|

12323034c ನ ತತ್ರಾಭ್ಯಧಿಕಃ ಕಶ್ಚಿತ್ಸರ್ವೇ ತೇ ಸಮತೇಜಸಃ||

ಆ ದ್ವೀಪವು ತೇಜಸ್ಸಿನ ನಿವಾಸ ಎಂದೇ ನಾವು ತಿಳಿದುಕೊಂಡೆವು. ಅಲ್ಲಿ ಯಾರಿಗೂ ಹೆಚ್ಚು ಅಥವಾ ಕಡಿಮೆ ಪ್ರಭೆಯಿರಲಿಲ್ಲ. ಎಲ್ಲರೂ ಸವತೇಜಸರಾಗಿದ್ದರು.

12323035a ಅಥ ಸೂರ್ಯಸಹಸ್ರಸ್ಯ ಪ್ರಭಾಂ ಯುಗಪದುತ್ಥಿತಾಮ್|

12323035c ಸಹಸಾ ದೃಷ್ಟವಂತಃ ಸ್ಮ ಪುನರೇವ ಬೃಹಸ್ಪತೇ||

ಬೃಹಸ್ಪತೇ! ಆಗ ಪುನಃ ನಾವು ಸಹಸ್ರಸೂರ್ಯರೂ ಒಂದೇ ಸಮನೆ ಉದಯಿಸುತ್ತಿದ್ದಂತಹ ಪ್ರಭೆಯನ್ನು ನೋಡಿದೆವು.

12323036a ಸಹಿತಾಶ್ಚಾಭ್ಯಧಾವಂತ ತತಸ್ತೇ ಮಾನವಾ ದ್ರುತಮ್|

12323036c ಕೃತಾಂಜಲಿಪುಟಾ ಹೃಷ್ಟಾ ನಮ ಇತ್ಯೇವ ವಾದಿನಃ||

ಶ್ವೇತದ್ವೀಪವಾಸೀ ಮಾನವರು ಒಂದಾಗಿ ಕೃತಾಂಜಲಿಪುಟರಾಗಿ, ಸಂತೋಷದಿಂದ ನಮ ಇತಿ ಎಂದು ಹೇಳುತ್ತಾ ಆ ಪ್ರಭೆಯೆಡೆಗೆ ಓಡಿ ಹೋಗುತ್ತಿದ್ದರು.

12323037a ತತೋಽಭಿವದತಾಂ ತೇಷಾಮಶ್ರೌಷ್ಮ ವಿಪುಲಂ ಧ್ವನಿಮ್|

12323037c ಬಲಿಃ ಕಿಲೋಪಹ್ರಿಯತೇ ತಸ್ಯ ದೇವಸ್ಯ ತೈರ್ನರೈಃ||

ನಮಸ್ಕರಿಸುವಾಗ ಅವರ ವಿಪುಲ ಧ್ವನಿಯನ್ನು ಕೇಳಿದೆವು. ಅ ನರರು ಆ ದೇವನಿಗೆ ಬಲಿಗಳನ್ನು ನೀಡುತ್ತಿದ್ದರು.

12323038a ವಯಂ ತು ತೇಜಸಾ ತಸ್ಯ ಸಹಸಾ ಹೃತಚೇತಸಃ|

12323038c ನ ಕಿಂ ಚಿದಪಿ ಪಶ್ಯಾಮೋ ಹೃತದೃಷ್ಟಿಬಲೇಂದ್ರಿಯಾಃ||

ಒಡನೆಯೇ ಅವನ ತೇಜಸ್ಸಿನಿಂದ ನಮ್ಮ ಚೇತನವು ಅಪಹೃತಗೊಳ್ಳಲು ದೃಷ್ಟಿ, ಬಲ ಮತ್ತು ಇಂದ್ರಿಯಗಳಿಂದ ಹೀನರಾಗಿದ್ದ ನಾವು ಏನನ್ನೂ ನೋಡಲಿಕ್ಕಾಗಲಿಲ್ಲ.

12323039a ಏಕಸ್ತು ಶಬ್ದೋಽವಿರತಃ ಶ್ರುತೋಽಸ್ಮಾಭಿರುದೀರಿತಃ|

12323039c ಜಿತಂ ತೇ ಪುಂಡರೀಕಾಕ್ಷ ನಮಸ್ತೇ ವಿಶ್ವಭಾವನ||

12323040a ನಮಸ್ತೇಽಸ್ತು ಹೃಷೀಕೇಶ ಮಹಾಪುರುಷಪೂರ್ವಜ|

ಅವರು ಕೂಗಿ ಹೇಳುತ್ತಿದ್ದ ಒಂದೇ ಒಂದು ಶಬ್ದವು ಅವಿರತವಾಗಿ ಕೇಳಿಬರುತ್ತಿತ್ತು: “ಪುಂಡರೀಕಾಕ್ಷ! ನಿನಗೆ ಜಯವಾಗಲಿ! ವಿಶ್ವಭಾವನ! ನಿನಗೆ ನಮಸ್ಕಾರ! ಹೃಷೀಕೇಶ! ಮಹಾಪುರುಷನ ಪೂರ್ವಜ! ನಿನಗೆ ನಮಸ್ಕಾರ!”

12323040c ಇತಿ ಶಬ್ದಃ ಶ್ರುತೋಽಸ್ಮಾಭಿಃ ಶಿಕ್ಷಾಕ್ಷರಸಮೀರಿತಃ||

12323041a ಏತಸ್ಮಿನ್ನಂತರೇ ವಾಯುಃ ಸರ್ವಗಂಧವಹಃ ಶುಚಿಃ|

12323041c ದಿವ್ಯಾನ್ಯುವಾಹ ಪುಷ್ಪಾಣಿ ಕರ್ಮಣ್ಯಾಶ್ಚೌಷಧೀಸ್ತಥಾ||

ಶಿಕ್ಷಾಕ್ಷರಸಮಾಯುಕ್ತವಾಗಿದ್ದ ಈ ಶಬ್ದವನ್ನು ನಾವು ಕೇಳಿದೆವು. ಇ ಮಧ್ಯದಲ್ಲಿ ಸರ್ವಗಂಧಗಳನ್ನೂ ಹೊತ್ತುತರುವ ಶುಚಿ ವಾಯುವು ದಿವ್ಯ ಪುಷ್ಪಗಳನ್ನೂ, ಕರ್ಮಣಿಗಳನ್ನೂ, ಔಷಧಿಗಳನ್ನೂ ಹೊತ್ತು ತಂದನು.

12323042a ತೈರಿಷ್ಟಃ ಪಂಚಕಾಲಜ್ಞೈರ್ಹರಿರೇಕಾಂತಿಭಿರ್ನರೈಃ|

12323042c ನೂನಂ ತತ್ರಾಗತೋ ದೇವೋ ಯಥಾ ತೈರ್ವಾಗುದೀರಿತಾ|

12323042e ವಯಂ ತ್ವೇನಂ ನ ಪಶ್ಯಾಮೋ ಮೋಹಿತಾಸ್ತಸ್ಯ ಮಾಯಯಾ||

ಪಂಚಕಾಲಜ್ಞರಾದ ಹರಿಯಲ್ಲಿ ಅನನ್ಯ ಭಕ್ತಿಯುಳ್ಳವರಾಗಿದ್ದ ಆ ನರರು ಅವುಗಳಿಂದ ದೇವನನ್ನು ಜೋರಾಗಿ ಸ್ತುತಿಸುತ್ತಾ ಪೂಜಿಸಿದರು. ಆದರೆ ಅವನ ಮಾಯೆಯಿಂದಾಗಿ ನಾವು ಅವನನ್ನು ನೋಡಲಿಕ್ಕಾಗಲಿಲ್ಲ.

12323043a ಮಾರುತೇ ಸಂನಿವೃತ್ತೇ ಚ ಬಲೌ ಚ ಪ್ರತಿಪಾದಿತೇ|

12323043c ಚಿಂತಾವ್ಯಾಕುಲಿತಾತ್ಮಾನೋ ಜಾತಾಃ ಸ್ಮೋಽಂಗಿರಸಾಂ ವರ||

ಆಂಗಿರಸರಲ್ಲಿ ಶ್ರೇಷ್ಠನೇ! ವಾಯುವು ನಿಲ್ಲಲು ಮತ್ತು ಬಲಿಗಳನ್ನು ಸಮರ್ಪಿಸಲು ನಾವು ಚಿಂತಾವ್ಯಾಕುಲರಾದೆವು.

12323044a ಮಾನವಾನಾಂ ಸಹಸ್ರೇಷು ತೇಷು ವೈ ಶುದ್ಧಯೋನಿಷು|

12323044c ಅಸ್ಮಾನ್ನ ಕಶ್ಚಿನ್ಮನಸಾ ಚಕ್ಷುಷಾ ವಾಪ್ಯಪೂಜಯತ್||

ಅಲ್ಲಿದ್ದ ಸಹಾಸ್ರಾರು ಶುದ್ಧ ಯೋನಿ ಮಾನವರಲ್ಲಿ ಯಾರೂ ಕೂಡ ನಮ್ಮನ್ನು ಮನಸ್ಸಿನಿಂದಲೂ ಸ್ಮರಿಸಲಿಲ್ಲ ಮತ್ತು ಕಣ್ಣೆತ್ತಿಯೂ ನೋಡಲಿಲ್ಲ.

12323045a ತೇಽಪಿ ಸ್ವಸ್ಥಾ ಮುನಿಗಣಾ ಏಕಭಾವಮನುವ್ರತಾಃ|

12323045c ನಾಸ್ಮಾಸು ದಧಿರೇ ಭಾವಂ ಬ್ರಹ್ಮಭಾವಮನುಷ್ಠಿತಾಃ||

ಅನನ್ಯಭಾವದಿಂದ ಅನುವ್ರತರಾಗಿ ಬ್ರಹ್ಮಭಾವದಲ್ಲಿ ಅನುಷ್ಠಿತರಾಗಿ ಸ್ವಸ್ಥರಾಗಿದ್ದ ಆ ಮುನಿಗಣವು ನಮ್ಮನ್ನು ಗಮನಿಸಲೇ ಇಲ್ಲ.

12323046a ತತೋಽಸ್ಮಾನ್ಸುಪರಿಶ್ರಾಂತಾಂಸ್ತಪಸಾ ಚಾಪಿ ಕರ್ಶಿತಾನ್|

12323046c ಉವಾಚ ಖಸ್ಥಂ ಕಿಮಪಿ ಭೂತಂ ತತ್ರಾಶರೀರಕಮ್||

ಆಗ ತಪಸ್ಸಿನಿಂದ ಪರಿಶ್ರಾಂತರಾಗಿದ್ದ ಮತ್ತು ಕೃಶರಾಗಿದ್ದ ನಮಗೆ ಆಕಾಶದಲ್ಲಿ ನಿಂತಿದ್ದ ಯಾವುದೋ ಒಂದು ಅಶರೀರಕ ಭೂತವು ಹೇಳಿತು:

12323047a ದೃಷ್ಟಾ ವಃ ಪುರುಷಾಃ ಶ್ವೇತಾಃ ಸರ್ವೇಂದ್ರಿಯವಿವರ್ಜಿತಾಃ|

12323047c ದೃಷ್ಟೋ ಭವತಿ ದೇವೇಶ ಏಭಿರ್ದೃಷ್ಟೈರ್ದ್ವಿಜೋತ್ತಮಾಃ||

“ದ್ವಿಜೋತ್ತಮರೇ! ನೀವು ಸರ್ವೇಂದ್ರಿಯವರ್ಜಿತರಾದ ಶ್ವೇತದ್ವೀಪದ ಪುರುಷರನ್ನು ನೋಡಿದಿರಿ. ಇವರನ್ನು ನೋಡಿದುದರಿಂದ ನೀವು ದೇವೇಶನನ್ನು ನೋಡಿದಂತೆಯೇ ಆಯಿತು.

12323048a ಗಚ್ಚಧ್ವಂ ಮುನಯಃ ಸರ್ವೇ ಯಥಾಗತಮಿತೋಽಚಿರಾತ್|

12323048c ನ ಸ ಶಕ್ಯೋ ಅಭಕ್ತೇನ ದ್ರಷ್ಟುಂ ದೇವಃ ಕಥಂ ಚನ||

ನೀವು ಎಲ್ಲ ಮುನಿಗಳೂ ಕೂಡಲೇ ಎಲ್ಲಿಂದ ಬಂದಿದ್ದಿರೋ ಅಲ್ಲಿಗೆ ಹೋಗಿ. ಭಕ್ತನಲ್ಲದವನು ದೇವನನ್ನು ನೋಡಲು ಎಂದೂ ಶಕ್ಯನಾಗುವುದಿಲ್ಲ.

12323049a ಕಾಮಂ ಕಾಲೇನ ಮಹತಾ ಏಕಾಂತಿತ್ವಂ ಸಮಾಗತೈಃ|

12323049c ಶಕ್ಯೋ ದ್ರಷ್ಟುಂ ಸ ಭಗವಾನ್ಪ್ರಭಾಮಂಡಲದುರ್ದೃಶಃ||

ಮಹಾ ಕಾಲದವರೆಗೂ ಅನನ್ಯ ಭಕ್ತಿಯಿಂದ ನಾರಾಯಣನ ಉಪಾಸನೆಯನ್ನು ಮಾಡಿ ಏಕಾಂತಿತ್ವವನ್ನು ಹೊಂದಿದವರು ಮಾತ್ರ ಪ್ರಭಾಮಂಡಲಯುಕ್ತನಾಗಿ ನೋಡಲು ಅಸಾಧ್ಯನಾಗಿರುವ ಭಗವಂತನನ್ನು ನೋಡಲು ಶಕ್ಯರಾಗುತ್ತಾರೆ.

12323050a ಮಹತ್ಕಾರ್ಯಂ ತು ಕರ್ತವ್ಯಂ ಯುಷ್ಮಾಭಿರ್ದ್ವಿಜಸತ್ತಮಾಃ|

12323050c ಇತಃ ಕೃತಯುಗೇಽತೀತೇ ವಿಪರ್ಯಾಸಂ ಗತೇಽಪಿ ಚ||

ದ್ವಿಜಸತ್ತಮರೇ! ನೀವು ಒಂದು ಮಹತ್ಕಾರವನ್ನು ಮಾಡಬೇಕು. ಈ ಕೃತಯುಗವು ಕಳೆಯಲು ಧರ್ಮದಲ್ಲಿ ವಿಪರ್ಯಾಸವುಂಟಾಗುತ್ತದೆ.

12323051a ವೈವಸ್ವತೇಽಂತರೇ ವಿಪ್ರಾಃ ಪ್ರಾಪ್ತೇ ತ್ರೇತಾಯುಗೇ ತತಃ|

12323051c ಸುರಾಣಾಂ ಕಾರ್ಯಸಿದ್ಧ್ಯರ್ಥಂ ಸಹಾಯಾ ವೈ ಭವಿಷ್ಯಥ||

ವಿಪ್ರರೇ! ವೈವಸ್ವತ ಮನ್ವಂತರದಲ್ಲಿ ತ್ರೇತಾಯುಗವು ಪ್ರಾಪ್ತವಾದಾಗ ಸುರರ ಕಾರ್ಯಸಿದ್ಧಿಗಾಗಿ ನೀವು ಸಹಾಯಕರಾಗುತ್ತೀರಿ.”

12323052a ತತಸ್ತದದ್ಭುತಂ ವಾಕ್ಯಂ ನಿಶಮ್ಯೈವಂ ಸ್ಮ ಸೋಮಪ|

12323052c ತಸ್ಯ ಪ್ರಸಾದಾತ್ಪ್ರಾಪ್ತಾಃ ಸ್ಮೋ ದೇಶಮೀಪ್ಸಿತಮಂಜಸಾ||

ಅಮೃತೋಪಮವಾದ ಆ ಅದ್ಭುತ ವಾಕ್ಯವನ್ನು ಕೇಳಿದೊಡನೆಯೇ ಅವನ ಪ್ರಸಾದದಿಂದ ಆಯಾಸ ಕಳೆದುಕೊಂಡವರಾಗಿ ನಮಗೆ ಅಭೀಷ್ತವಾದ ಸ್ಥಳವನ್ನು ಸೇರಿದೆವು.

12323053a ಏವಂ ಸುತಪಸಾ ಚೈವ ಹವ್ಯಕವ್ಯೈಸ್ತಥೈವ ಚ|

12323053c ದೇವೋಽಸ್ಮಾಭಿರ್ನ ದೃಷ್ಟಃ ಸ ಕಥಂ ತ್ವಂ ದ್ರಷ್ಟುಮರ್ಹಸಿ|

12323053e ನಾರಾಯಣೋ ಮಹದ್ಭೂತಂ ವಿಶ್ವಸೃಗ್ಘವ್ಯಕವ್ಯಭುಕ್||

ಹೀಗೆ ಮಹಾತಪಸ್ಸಿನಿಂದಲೂ ಮತ್ತು ಹವ್ಯಕವ್ಯಗಳಿಂದಲೂ ನಾವು ಆ ದೇವನನ್ನು ನೋಡಲಿಕ್ಕಾಗಲಿಲ್ಲ. ನೀನು ಹೇಗೆ ಅವನನ್ನು ನೋಡಬಲ್ಲೆ? ನಾರಾಯಣನು ಮಹಾಪುರುಷನು. ವಿಶ್ವವನ್ನೇ ಸೃಷ್ಟಿಸಿರುವವನು.””

12323054 ಭೀಷ್ಮ ಉವಾಚ|

12323054a ಏವಮೇಕತವಾಕ್ಯೇನ ದ್ವಿತತ್ರಿತಮತೇನ ಚ|

12323054c ಅನುನೀತಃ ಸದಸ್ಯೈಶ್ಚ ಬೃಹಸ್ಪತಿರುದಾರಧೀಃ|

12323054e ಸಮಾನೀಯ ತತೋ ಯಜ್ಞಂ ದೈವತಂ ಸಮಪೂಜಯತ್||

ಭೀಷ್ಮನು ಹೇಳಿದನು: “ಈ ರೀತಿ ಏಕತ, ದ್ವಿತ ಮತ್ತು ತ್ರಿತರು ಒಂದೇ ಮತದಿಂದ ಹೇಳಿದ ಸದಸ್ಯರ ವಾಕ್ಯದಿಂದ ಸಂತೈಸಲ್ಪಟ್ಟ ಉದಾರಬುದ್ಧಿ ಬೃಹಸ್ಪತಿಯು ಯಜ್ಞವನ್ನು ಸಮಾಪ್ತಿಗೊಳಿಸಿ ದೇವನನ್ನು ಪೂಜಿಸಿದನು.

12323055a ಸಮಾಪ್ತಯಜ್ಞೋ ರಾಜಾಪಿ ಪ್ರಜಾಃ ಪಾಲಿತವಾನ್ವಸುಃ|

12323055c ಬ್ರಹ್ಮಶಾಪಾದ್ದಿವೋ ಭ್ರಷ್ಟಃ ಪ್ರವಿವೇಶ ಮಹೀಂ ತತಃ||

ಯಜ್ಞವನ್ನು ಸಮಾಪ್ತಿಗೊಳಿಸಿದ ರಾಜಾ ವಸುವಾದರೋ ಪ್ರಜೆಗಳನ್ನು ಪಾಲಿಸಿದನು. ಅನಂತರ ಬ್ರಹ್ಮಶಾಪದಿಂದಾಗಿ ಅವನು ದಿವದಿಂದ ಭ್ರಷ್ಟನಾಗಿ ಮಹಿಯನ್ನು ಪ್ರವೇಶಿಸಿದನು.

12323056a ಅಂತರ್ಭೂಮಿಗತಶ್ಚೈವ ಸತತಂ ಧರ್ಮವತ್ಸಲಃ|

12323056c ನಾರಾಯಣಪರೋ ಭೂತ್ವಾ ನಾರಾಯಣಪದಂ ಜಗೌ||

ಅಂತರ್ಭೂಮಿಯನ್ನು ಸೇರಿ ಅಲ್ಲಿಯೂ ಸತತವ್ವಾಗಿ ನಾರಾಯಣಪರನಾಗಿ ಆ ಧರ್ಮವತ್ಸಲನು ನಾರಾಯಣಪದವನ್ನು ಸೇರಿದನು.

12323057a ತಸ್ಯೈವ ಚ ಪ್ರಸಾದೇನ ಪುನರೇವೋತ್ಥಿತಸ್ತು ಸಃ|

12323057c ಮಹೀತಲಾದ್ಗತಃ ಸ್ಥಾನಂ ಬ್ರಹ್ಮಣಃ ಸಮನಂತರಮ್|

12323057e ಪರಾಂ ಗತಿಮನುಪ್ರಾಪ್ತ ಇತಿ ನೈಷ್ಠಿಕಮಂಜಸಾ||

ಅವನ ಪ್ರಸಾದದಿಂದಲೇ ಅವನು ಪುನಃ ಮಹೀತಲದಿಂದ ಮೇಲೆದ್ದು  ಬ್ರಹ್ಮಸ್ಥಾನವನ್ನು ಪಡೆದು ಅನಂತರ ನಿಷ್ಠಾವಂತರಿಗೆ ದೊರೆಯುವ ಪರಮ ಗತಿಯನ್ನು ಹೊಂದಿದನು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ತ್ರ್ಯವಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಇಪ್ಪತ್ಮೂರನೇ ಅಧ್ಯಾಯವು.

Blue Spring Flowers, Watercolor Painting On White Background Stock ...

[1] ಕೆಲವು ಸಂಪುಟಗಳಲ್ಲಿ ಇದಕ್ಕೆ ಮೊದಲು ಯುಧಿಷ್ಠಿರ ಉವಾಚ ಎಂದಿದೆ.

[2] ಕೆಲವು ಸಂಪುಟಗಳಲ್ಲಿ ಇದಕ್ಕೆ ಮೊದಲು ಭೀಷ್ಮ ಉವಾಚ ಎಂದಿದೆ.

Comments are closed.